Category Archives: Blog

Your blog category

ಯೂರೋಪಿಯನ್ ಒಕ್ಕೂಟದೊಂದಿಗಿನ ಒಪ್ಪಂದದಿಂದ ಭಾರತಕ್ಕೆ ಹೆಚ್ಚು ಲಾಭ: ಜೇಮಿಸನ್ – Kannada News | India comes out on top in deal with European Union, says US trade representative Jamieson Greer

ನವದೆಹಲಿ, ಜನವರಿ 28: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕದವರು ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಒಳ್ಳೆಯ ಒಪ್ಪಂದ ದಕ್ಕಿತು ಎಂದು ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ ಆದ ಜೇಮೀಸನ್ ಗ್ರೀರ್ (Jamieson Greer) ಅಭಿಪ್ರಾಯಪಟ್ಟಿದ್ದಾರೆ. ‘ಈ ಒಪ್ಪಂದದಲ್ಲಿ ಭಾರತ ಹೆಚ್ಚು ಅನುಕೂಲ ಪಡೆದಿದೆ. ಹೆಚ್ಚು ಮಾರುಕಟ್ಟೆ ಪ್ರವೇಶ ಮತ್ತು ವಲಸೆಗೆ ಅವಕಾಶ ಪಡೆದಿದೆ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಗ್ರೀರ್ ಪ್ರತಿಕ್ರಿಯಿಸಿದ್ದಾರೆ.

ಭಾರತ ಹಾಗೂ ಐರೋಪ್ಯ ಒಕ್ಕೂಟದ ಒಪ್ಪಂದವು ಅಮೆರಿಕದ ಟ್ಯಾರಿಫ್ ಕ್ರಮದ ಪರಿಣಾಮ ಎಂದು ಜೇಮಿಸನ್ ಗ್ರೀರ್ ಬಣ್ಣಿಸಿದ್ದಾರೆ. ಅಮೆರಿಕವು ದೇಶೀಯ ಉತ್ಪಾದನೆಗೆ ಒತ್ತುಕೊಡುತ್ತಿದೆ. ಬೇರೆ ದೇಶಗಳು ತಮ್ಮ ಹೆಚ್ಚುವರಿ ಉತ್ಪಾದನೆ ಸಾಗಿಸಲು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿವೆ ಎಂದೂ ಅಮೆರಿಕದ ವ್ಯಾಪಾರ ಪ್ರತಿನಿಧಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದದಿಂದ ಹೊರಗುಳಿದಿವೆ ಈ ಮೂರು ಸೆಕ್ಟರ್​ಗಳು; ಇಲ್ಲಿದೆ ಡೀಲ್​ನ ಹೈಲೈಟ್ಸ್

ಭಾರತದ ಮೇಲೆ ಟ್ಯಾರಿಫ್ ಇಳಿಕೆ ಇಲ್ಲ?

ರಷ್ಯನ್ ತೈಲ ಖರೀದಿ ಮಾಡಲಾಗುತ್ತಿರುವ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25 ಟ್ಯಾರಿಫ್ ಅನ್ನು ಅಮೆರಿಕ ಹಾಕುತ್ತಿದೆ. ಒಟ್ಟು ಶೇ. 50 ಟ್ಯಾರಿಫ್ ಇದೆ. ಈಗ ಭಾರತೀಯ ತೈಲ ಕಂಪನಿಗಳು ರಷ್ಯನ್ ತೈಲ ಖರೀದಿ ಕಡಿಮೆ ಮಾಡಿವೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿಯಾದ ಸ್ಕಾಟ್ ಬೆಸೆಂಟ್ ಅವರು ಭಾರತದ ಮೇಲೆ ಟ್ಯಾರಿಫ್ ಅನ್ನು ಇಳಿಸಬಹುದು ಎಂದು ಸುಳಿವು ನೀಡಿದ್ದರು. ಆದರೆ, ಜೇಮಿಸನ್ ಗ್ರೀರ್ ಅವರು ಬೇರೆಯೇ ಹೇಳಿಕೆ ನೀಡಿದ್ದಾರೆ.

ಭಾರತವು ರಷ್ಯದಿಂದ ತೈಲ ಆಮದನ್ನು ಕಡಿಮೆ ಮಾಡಿರುವುದು ಹೌದು. ಆದರೂ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಯಾದ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಯೂರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದಕ್ಕೆ ಸಹಿ; ಹೊಸ ಇತಿಹಾಸ

‘ರಷ್ಯನ್ ತೈಲ ವಿಚಾರದಲ್ಲಿ ಭಾರತದ ಕ್ರಮಗಳ ಮೇಲೆ ಅಮೆರಿಕ ನಿಕಟವಾಗಿ ಕಣ್ಣಿಟ್ಟಿದೆ. ಭಾರತದ ವಾಣಿಜ್ಯ ಸಚಿವರ ಜೊತೆ ಸಂಪರ್ದಲ್ಲಿದ್ದೇವೆ’ ಎಂದೂ ಜೇಮಿಸನ್ ಗ್ರೀರ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅರಿಜಿತ್ ಸಿಂಗ್ ಹಾಡು ನಿಲ್ಲಿಸಿದ್ದು ಏಕೆ? ಕೊಟ್ಟ ಕಾರಣ ಏನು? – Kannada News | Why really Arijit Singh quit singing here is the reason

ಅರಿಜಿತ್ ಸಿಂಗ್ (Arijit Singh), ಭಾರತದ ಮಾತ್ರವಲ್ಲ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಹಾಡುಗಾರರಲ್ಲಿ ಒಬ್ಬರು. ವಿಶ್ವದ ಅತ್ಯಂತ ಜನಪ್ರಿಯ, ದುಬಾರಿ ಗಾಯಕಿ ಟೇಲರ್ವ ಸ್ವಿಫ್ಟ್​ಗಿಂತಲೂ ಅತಿ ಹೆಚ್ಚು ಅಭಿಮಾನಿಗಳನ್ನು ಅವರು ಸ್ಪಾಟಿಫೈ ಹಾಗೂ ಇತರೆ ವೇದಿಕೆಗಳಲ್ಲಿ ಹೊಂದಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಕೇಳಲಾಗುವ ಹಾಡುಗಳು ಸಹ ಅರಿಜಿತ್ ಸಿಂಗ್ ಅವರದ್ದೇ ಆಗಿರುತ್ತವೆ. ಅರಿಜಿತ್ ಸಿಂಗ್ ಪ್ರಸ್ತುತ ಭಾರತ ಅತ್ಯಂತ ಬೇಡಿಕೆಯ ಗಾಯಕರು. ವೃತ್ತಿ ಜೀವನದ ಪರಮೋಚ್ಛ ಸ್ಥಿತಿಯಲ್ಲಿ ಅರಿಜಿತ್ ಸಿಂಗ್ ಇದ್ದರು, ಇಂಥಹಾ ಸಮಯದಲ್ಲಿ ಅವರು ಗಾಯಕನದಿಂದ ಹಠಾತ್ ನಿವೃತ್ತಿ ಘೋಷಣೆ ಮಾಡಿದ್ದಾರೆ.

ನಿನ್ನೆ ರಾತ್ರಿ ಹಠಾತ್ತನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅರಿಜಿತ್ ಸಿಂಗ್, ತಾವು ಗಾಯನ ನಿಲ್ಲಿಸುತ್ತಿರುವುದಾಗಿಯೂ, ಮುಂದೆ ಯಾವುದೇ ಹೊಸ ಪ್ರಾಜೆಕ್ಟ್​​ಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಘೋಷಿಸಿದ್ದಾರೆ. ಇದು ಸಂಗೀತ ಪ್ರೇಮಿಗಳಿಗೆ ತೀವ್ರ ಆಘಾತ ತಂದಿದೆ. ಅರಿಜಿತ್ ಅವರ ಈ ನಿರ್ಣಯವನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೆ ಅರಿಜಿತ್ ಅವರು ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​ನಲ್ಲಿ ತಮ್ಮ ಈ ನಿರ್ಣಯಕ್ಕೆ ಸ್ಪಷ್ಟ ಕಾರಣ ನೀಡಿಲ್ಲ ಆದರೆ ಟ್ವಿಟ್ಟರ್​​ನಲ್ಲಿ ಈ ಬಗ್ಗೆ ತುಸು ವಿವರವಾಗಿ ಬರೆದುಕೊಂಡಿದ್ದಾರೆ.

ಖಾಸಗಿತನ ಇಷ್ಟಪಡುವ ಅರಿಜಿತ್ ಸಿಂಗ್, ತಮ್ಮ ಟ್ವಿಟ್ಟರ್ ಖಾತೆಯನ್ನು ಪಬ್ಲಿಕ್ ಮಾಡಿಲ್ಲ, ಅವರು ಅನುಮತಿ ನೀಡುವ ಫಾಲೋವರ್​​ಗಳಿಗೆ ಮಾತ್ರವೇ ಅವರ ಪೋಸ್ಟ್ ಕಾಣುತ್ತದೆ. ಅರಿಜಿತ್ ಸಿಂಗ್ ಅವರ ನಿವೃತ್ತಿ ಘೋಷಣೆಯನ್ನು ಅವರ ಕೆಲವು ಫಾಲೋವರ್​​ಗಳು ವಿರೋಧಿಸಿದ್ದು, ಫಾಲೋವರ್​​ಗಳಿಗೆ ಅರಿಜಿತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಣಯಕ್ಕೆ ಕಾರಣವನ್ನು ಅವರು ತಮ್ಮ ಪೋಸ್ಟ್ ಒಂದಲ್ಲಿ ತಿಳಿಸಿದ್ದು, ಪೋಸ್ಟ್​ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ಸಿನಿಮಾ ಹಾಡು ಹೇಳಲು ಹಣ ಕೇಳಲ್ಲ ಅರಿಜಿತ್ ಸಿಂಗ್; ವಿವರಿಸಿದ ಗಾಯಕ

‘ನನ್ನ ಈ ನಿರ್ಣಯಕ್ಕೆ ಒಂದು ಕಾರಣ ಎಂದು ಇಲ್ಲ, ಬದಲಿಗೆ ಹಲವು ಕಾರಣಗಳಿವೆ. ಈ ನಿರ್ಧಾರವನ್ನು ಬಹಳ ಹಿಂದಿನಿಂದ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ ಆದರೆ ಈಗ ಸರಿಯಾದ ಧೈರ್ಯವನ್ನು ಒಗ್ಗೂಡಿಸಿಕೊಂಡು ನಿರ್ಣಯ ಪ್ರಕಟಿಸಿದ್ದೇನೆ. ನನ್ನ ಈ ನಿರ್ಣಯಕ್ಕೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಒಂದೆಂದರೆ ನನಗೆ ಯಾವುದೇ ವಿಷಯ ಬಹಳ ಬೇಗ ಬೋರ್ ಎನಿಸುತ್ತದೆ. ಇದೇ ಕಾರಣಕ್ಕೆ ನಾನು ಲೈವ್ ಶೋ ಮಾಡುವಾಗಲೂ ಸಹ ಪದೇ ಪದೇ ಸಂಗೀತ, ರಾಗಗಳನ್ನು ಬದಲಾಯಿಸುತ್ತಾ ಇರುತ್ತೇನೆ. ಈಗ ನನಗೆ ಬೋರ್ ಆಗಿದೆ, ಹಾಡುಗಾರಿಕೆ ಏಕತಾನತೆ ಎನಿಸಿದೆ, ಈಗ ನಾನು ಜೀವನ ಸಾಗಿಸಲು ಬೇರೆ ಸಂಗೀತ ಮಾಡಬೇಕು ಎಂದಿದ್ದಾರೆ. ಮತ್ತೊಂದು ಟ್ವೀಟ್​​ನಲ್ಲಿ, ‘ಹೊಸ ಗಾಯಕರ ಕೆಲಸಗಳನ್ನು ನೋಡಲು ನಾನು ಉತ್ಸುಕನಾಗಿದ್ದೇನೆ, ಯಾರಾದರೂ ಹೊಸ ಗಾಯಕರು, ನಿಜಕ್ಕೂ ನನಗೆ ಹಾಡಿನ ಮೂಲಕ ಸ್ಪೂರ್ತಿ ತುಂಬಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ ಅರಿಜಿತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate Today: 16,500 ರೂ ಗಡಿದಾಟಿದ ಅಪರಂಜಿ ಚಿನ್ನದ ಬೆಲೆ – Kannada News | Gold Price Today on 28th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯದ್ವಾತದ್ವಾ ಏರುತ್ತಿವೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 295ರೂನಿಂದ 305 ರೂವರೆಗೆ ಏರಿದೆ. ಬೆಳ್ಳಿ ಬೆಲೆಯಂತೂ ಕಿಲೋಗೆ ನಾಲ್ಕು ಲಕ್ಷ ರೂ ಬೆಲೆ ಮುಟ್ಟಿದೆ. ಆಭರಣ ಚಿನ್ನದ ಬೆಲೆ 15,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆ 16,500 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,51,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,65,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 38,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,51,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 38,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 40,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 28ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,517 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,140 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,146 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 380 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,517 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,140 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 380 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 15,140 ರೂ
  • ಚೆನ್ನೈ: 15,330 ರೂ
  • ಮುಂಬೈ: 15,140 ರೂ
  • ದೆಹಲಿ: 15,155 ರೂ
  • ಕೋಲ್ಕತಾ: 15,140 ರೂ
  • ಕೇರಳ: 15,140 ರೂ
  • ಅಹ್ಮದಾಬಾದ್: 15,145 ರೂ
  • ಜೈಪುರ್: 15,155 ರೂ
  • ಲಕ್ನೋ: 15,155 ರೂ
  • ಭುವನೇಶ್ವರ್: 15,140 ರೂ

ಇದನ್ನೂ ಓದಿ: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್​ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 637 ರಿಂಗಿಟ್ (14,890 ರುಪಾಯಿ)
  • ದುಬೈ: 566.25 ಡಿರಾಮ್ (14,125 ರುಪಾಯಿ)
  • ಅಮೆರಿಕ: 158.50 ಡಾಲರ್ (14,521 ರುಪಾಯಿ)
  • ಸಿಂಗಾಪುರ: 204.90 ಸಿಂಗಾಪುರ್ ಡಾಲರ್ (14,887 ರುಪಾಯಿ)
  • ಕತಾರ್: 563.50 ಕತಾರಿ ರಿಯಾಲ್ (14,164 ರೂ)
  • ಸೌದಿ ಅರೇಬಿಯಾ: 575 ಸೌದಿ ರಿಯಾಲ್ (14,048 ರುಪಾಯಿ)
  • ಓಮನ್: 60.10 ಒಮಾನಿ ರಿಯಾಲ್ (14,301 ರುಪಾಯಿ)
  • ಕುವೇತ್: 46.19 ಕುವೇತಿ ದಿನಾರ್ (13,872 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 380 ರೂ
  • ಚೆನ್ನೈ: 400 ರೂ
  • ಮುಂಬೈ: 380 ರೂ
  • ದೆಹಲಿ: 380 ರೂ
  • ಕೋಲ್ಕತಾ: 380 ರೂ
  • ಕೇರಳ: 400 ರೂ
  • ಅಹ್ಮದಾಬಾದ್: 380 ರೂ
  • ಜೈಪುರ್: 380 ರೂ
  • ಲಕ್ನೋ: 380 ರೂ
  • ಭುವನೇಶ್ವರ್: 400 ರೂ
  • ಪುಣೆ: 380

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಅಜಿತ್ ಪವಾರ್ ಇದ್ದ ವಿಮಾನ ಪತನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | DGCA Investigates Ajit Pawar Plane Crash: Baramati CCTV Footage Key to Unraveling Mystery

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಅಥವಾ ಫೋಟೋಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಾರಾಮತಿ ವಿಮಾನ ನಿಲ್ದಾಣದ ಸಮೀಪವಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ವಿಮಾನವು ರನ್‌ವೇ ಹತ್ತಿರ ಬರುತ್ತಿದ್ದಂತೆ ದಿಢೀರ್ ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಳ್ಳುವುದನ್ನಿ ಈ ವಿಡಿಯೋದಲ್ಲಿ ನೋಡಬಹುದು. ವಿಮಾನವು ಎರಡನೇ ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ (Second Approach) ಈ ಘಟನೆ ಸಂಭವಿಸಿದೆ. ಸಿಸಿಟಿವಿ ದೃಶ್ಯದಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡು ವೇಗವಾಗಿ ಭೂಮಿಗೆ ಅಪ್ಪಳಿಸುವುದು ಮತ್ತು ನಂತರದ ಕ್ಷಣದಲ್ಲೇ ಭಾರಿ ಸ್ಫೋಟದೊಂದಿಗೆ ದಟ್ಟವಾದ ಹೊಗೆ ಏರುವುದು ದಾಖಲಾಗಿದೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಈಗ ಡಿಜಿಸಿಎ (DGCA) ಮತ್ತು ತನಿಖಾ ಸಂಸ್ಥೆಗಳು ವಿಮಾನ ಪತನದ ನಿಖರ ಕಾರಣವನ್ನು ಪತ್ತೆಹಚ್ಚಲು ಬಳಸಿಕೊಳ್ಳುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu for Office Bag: ಆಫೀಸ್ ಬ್ಯಾಗ್​​ನಲ್ಲಿ ಈ ವಸ್ತು ಇಡಲೇಬೇಡಿ; ವೃತ್ತಿಜೀವನದ ಅಡೆತಡೆಗೆ ಇದೇ ಮುಖ್ಯ ಕಾರಣ! – Kannada News | Vastu for Office Bag: Keep These to Boost Career and Success | Avoid Negative Energy

ಪ್ರತಿದಿನ ಮನೆಯಿಂದ ಕಚೇರಿಗೆ ಹೋಗುವಾಗ ತೆಗೆದುಕೊಂಡು ಹೋಗುವ ಬ್ಯಾಗ್​ ಕೇವಲ ವಸ್ತುಗಳನ್ನು ಸಾಗಿಸುವ ಸಾಧನವಲ್ಲ, ಅದು ನಿಮ್ಮ ವೃತ್ತಿಪರ ಶಕ್ತಿ, ಮನೋಭಾವ ಮತ್ತು ಕಾರ್ಯಶೈಲಿಯ ಪ್ರತಿಬಿಂಬವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಿಕ್ಕುಗಳು ಎಷ್ಟು ಮುಖ್ಯವೋ, ಅಷ್ಟೇ ಮಹತ್ವವು ನಾವು ದಿನನಿತ್ಯ ಬಳಸುವ ವಸ್ತುಗಳ ಸ್ಥಿತಿಗೂ ಇದೆ. ವಿಶೇಷವಾಗಿ ಕಚೇರಿಗೆ ತೆಗೆದುಕೊಂಡು ಹೋಗುವ ಬ್ಯಾಗ್​ನಲ್ಲಿ ಇಡುವ ವಸ್ತುಗಳು ನಮ್ಮ ಕೆಲಸದ ಮೇಲೆ ನೇರ ಪರಿಣಾಮ ಬೀರುತ್ತವೆ. ಅನೇಕ ಬಾರಿ ಅದರಲ್ಲಿ ತಿಳಿಯದೆ ಇಡುವ ಕೆಲವು ವಸ್ತುಗಳು ನಮ್ಮ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಿ, ಕೆಲಸದಲ್ಲಿ ಅಡೆತಡೆಗಳಿಗೆ ಕಾರಣವಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಅನೇಕ ಜನರು ಶಾಪಿಂಗ್ ಬಿಲ್‌, ಹಳೆಯ ರಶೀದಿ ಅಥವಾ ಬಳಕೆಯಿಲ್ಲದ ಕಾಗದಗಳನ್ನು ತಮ್ಮ ಬ್ಯಾಗ್​ನಲ್ಲೇ ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ವಾಸ್ತು ಪ್ರಕಾರ, ಹಳೆಯ ಬಿಲ್‌ಗಳು ಮತ್ತು ರಶೀದಿಗಳು ನಕಾರಾತ್ಮಕ ಶಕ್ತಿಯನ್ನು ಹೊತ್ತುಕೊಂಡಿರುತ್ತವೆ. ಅವು ಮನಸ್ಸಿನಲ್ಲಿ ಅನಗತ್ಯ ಚಿಂತೆ ಮತ್ತು ಗೊಂದಲವನ್ನು ಉಂಟುಮಾಡುತ್ತವೆ. ಇದರಿಂದ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ ಮತ್ತು ಕ್ರಮೇಣ ಮಾನಸಿಕ ಒತ್ತಡವೂ ಹೆಚ್ಚಾಗಬಹುದು.

ಇದೇ ರೀತಿ, ಕತ್ತರಿ, ಬ್ಲೇಡ್‌ಗಳು ಅಥವಾ ಇತರ ಚೂಪಾದ ವಸ್ತುಗಳನ್ನು ನೇರವಾಗಿ ಕಚೇರಿ ಬ್ಯಾಗ್​​ನಲ್ಲಿ ಇಡುವುದು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗುತ್ತವೆ ಎಂಬ ನಂಬಿಕೆ ಇದೆ. ಅವುಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾದ ಸಂದರ್ಭಗಳಲ್ಲಿ, ಪ್ರತ್ಯೇಕ ಕವರ್ ಅಥವಾ ಪೌಚ್‌ನಲ್ಲಿ ಸುರಕ್ಷಿತವಾಗಿ ಇಡುವುದು ಉತ್ತಮ.

ಮುರಿದ ಪೆನ್ನುಗಳು, ಕೆಲಸ ಮಾಡದ ಚಾರ್ಜರ್‌ಗಳು ಅಥವಾ ಹಾನಿಗೊಂಡ ಹೆಡ್‌ಫೋನ್‌ಗಳು ಅನಾವಶ್ಯಕವಾಗಿ ಉಳಿಯುವುದು ಸಾಮಾನ್ಯ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಹಾನಿಗೊಂಡ ವಸ್ತುಗಳು ಶಕ್ತಿಯ ಹರಿವನ್ನು ತಡೆಹಿಡಿಯುತ್ತವೆ. ಮುರಿದ ಪೆನ್ನುಗಳು ನಿಲ್ಲಿಸಿದ ಕೆಲಸಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಚೀಲದಲ್ಲಿ ಇಟ್ಟುಕೊಳ್ಳುವುದರಿಂದ ಕೆಲಸಗಳು ವಿಳಂಬವಾಗುವ ಅಥವಾ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ವೈಯಕ್ತಿಕ ನೈರ್ಮಲ್ಯ ವಸ್ತುಗಳ ವಿಷಯದಲ್ಲೂ ಜಾಗ್ರತೆ ಅಗತ್ಯ. ಬಾಚಣಿಗೆ, ಸುಗಂಧ ದ್ರವ್ಯಗಳು ಅಥವಾ ಇತರ ವೈಯಕ್ತಿಕ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿ ಚೀಲದೊಳಗೆ ಎಸೆಯುವುದು ಸರಿಯಲ್ಲ. ಅವುಗಳನ್ನು ಪ್ರತ್ಯೇಕ ಚೀಲದಲ್ಲಿ ವ್ಯವಸ್ಥಿತವಾಗಿ ಇಡುವುದು ಉತ್ತಮ. ಸಾಧ್ಯವಾದರೆ, ಇಂತಹ ವಸ್ತುಗಳನ್ನು ಕಚೇರಿಯ ಡ್ರಾಯರ್‌ನಲ್ಲಿ ಇಡುವುದು ಇನ್ನೂ ಸೂಕ್ತವಾಗಿದೆ.

ವಾರಕ್ಕೊಮ್ಮೆ ನಿಮ್ಮ ಆಪೀಸ್​ ಬ್ಯಾಗ್​​ನನ್ನು ಸಂಪೂರ್ಣವಾಗಿ ಖಾಲಿ ಮಾಡಿ, ಅನಗತ್ಯ ಕಾಗದಗಳು, ಕಸ ಮತ್ತು ಬಳಕೆಯಿಲ್ಲದ ವಸ್ತುಗಳನ್ನು ತೆಗೆದುಹಾಕುವುದು ಒಳ್ಳೆಯ ಅಭ್ಯಾಸ. ನೀವು ಬ್ಯಾಗನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವ ಮತ್ತು ಕೆಲಸದ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಈ ಸಣ್ಣ ಬದಲಾವಣೆಗಳನ್ನು ಅನುಸರಿಸುವುದರಿಂದ ನಿಮ್ಮ ಕೆಲಸದ ವಾತಾವರಣದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ವೃತ್ತಿಜೀವನವು ವೇಗವಾಗಿ ಮುಂದುವರಿಯಲು ಸಹಾಯ ಮಾಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:16 pm, Wed, 28 January 26

Source link

ಬೆಂಗಳೂರಲ್ಲಿದ್ದ ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕಳ್ಳತನ: ರಾಯಭಾರ ಕಚೇರಿಯಿಂದಲೇ ಬಂತು ದೂರು! – Kannada News | US Couple’s Bangalore Home Robbed: Police Act on Embassy Complaint

ಬೆಂಗಳೂರು, ಜನವರಿ 28: ಅಪರೂಪದ ಪ್ರಸಂಗವೊಂದಕ್ಕೆ ಸಿಲಿಕಾನ್​​ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ನಗರದಲ್ಲಿ ನಡೆದ ಕಳ್ಳತನ ಪ್ರಕರಣ ಸಮಬಂಧ ಅಮೆರಿಕಾ ರಾಯಭಾರ ಕಚೇರಿ ಮಧ್ಯಪ್ರವೇಶ ಮಾಡಿದ್ದು, ಎಂಬಸಿಯಿಂದಲೇ ನೇರವಾಗಿ ಡಿಜಿ, ಐಜಿಪಿಗೆ ದೂರು ಹೋಗಿದೆ. ಅಮೆರಿಕಾ ಮೂಲದ ದಂಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಕೆಲಸಗಾರನೋರ್ವ ಮನೆಯಲ್ಲಿ ಕಳ್ಳತನ ನಡೆಸಿದ್ದು,ಈ ಬಗ್ಗೆ ರಾಯಭಾರ ಕಚೇರಿಗೆ ಅವರು ದೂರು ನೀಡಿದ್ದರು ಎನ್ನಲಾಗಿದೆ.

ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದ ಪತ್ನಿ ಮೆರಿಯಲ್ ಮೊರೆನೋ, ಪತಿ ಟೊಮ್ಮೋ ಕನ್ಕನಿಯನ್ ಅಮೆರಿಕಾದ ಟೆಕ್ಸಸ್ ಮೂಲದವರು. ಪತಿ ಅಮೆರಿಕಾಗೆ ಹೋದ್ರೆ, ಪತ್ನಿ ಕೆಲಸಕ್ಕೆ ತೆರಳಿದ್ದರು. ಕಳೆದ ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂಬಾತ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಸೇರಿ 600 ಅಮೆರಿಕನ್ ಡಾಲರ್ ಕದ್ದಿದ್ದ. ಜ.21ರಂದು ಘಟನೆ ನಡೆದಿದ್ದು, ಮಹಿಳೆ ಮನೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿತ್ತು. ವಿಷಯವನ್ನು ಪತ್ನಿ ಮೆರಿಯಲ್ ಮೊರೆನೋ ಪತಿಯ ಗಮನಕ್ಕೆ ತಂದಿದ್ದು, ಅಮೆರಿಕಾದಲ್ಲಿದ್ದ ಪತಿ ರಾಯಭಾರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ವಸ್ತುಗಳನ್ನು ಆತನಿಂದ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:  ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ವಂಚನೆ! ಮಾಜಿ ಉದ್ಯೋಗಿಯಿಂದ ಸೋರ್ಸ್ ಕೋಡ್ ಕಳವು

ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳರು

ಕೆ.ಆರ್.ಪುರದ ದೇವಸಂದ್ರ ಬಳಿ ಜನರ ಗಮನ ಬೇರೆಡೆ ಸೆಳೆದು ಚಿನ್ನಭಾರಣ ಕಳ್ಳತನ ಮಾಡುತ್ತಿದ್ದ ದಂಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗಾಯತ್ರಿಮತ್ತು ಶ್ರೀಕಾಂತ್ ಬಂಧಿತರಾಗಿದ್ದು, ಆರೋಪಿಗಳಿಂದ 60 ಲಕ್ಷ ಮೌಲ್ಯದ 398 ಗ್ರಾಂ ಚಿನ್ನಭಾರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಪತ್ಮಿ ಬೊಂಬೆ ವ್ಯಾಪಾರ ಮಾಡ್ತಿದ್ರೆ, ಪತಿ ಜಾತ್ರೆಗೆ ಬರುವ ಮಹಿಳೆಯರ ಚಿನ್ನಭಾರಣ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:52 pm, Wed, 28 January 26

Source link

ಅಜಿತ್ ಪವಾರ್ ಆಸ್ತಿಮೌಲ್ಯ 120 ಕೋಟಿಗೂ ಅಧಿಕ; ಮನೆ, ಕಾರು, ಬಾಂಡ್, ಠೇವಣಿ, ಇನ್ಷೂರೆನ್ಸ್ ಇತ್ಯಾದಿ ಅವರ ಆಸ್ತಿ ವಿವರ – Kannada News | Ajit Pawar net worth of over Rs 120 crore, a look at his movable and immovable properties

ಪುಣೆ, ಜನವರಿ 28: ಮಹಾರಾಷ್ಟ್ರದ ಬಾರಾಮತಿ ಏರ್ಪೋರ್ಟ್ ಬಳಿ ವಿಮಾನಾಪಘಾತದಲ್ಲಿ ದುರ್ಮರಣ ಅಪ್ಪಿದ ಉಪಮುಖ್ಯಮಂತ್ರಿ ಹಾಗೂ ಎನ್​ಸಿಪಿ ಮುಖ್ಯಸ್ಥ ಅಜಿತ್ ಪವಾರ್ (Ajit Pawar) ಅವರು ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ರಾಜಕಾರಣಿಗಳ ಪೈಕಿ ಒಬ್ಬರೆಂದು ಗುರುತಾದವರು. ಮೂರು ದಶಕಗಳ ಕಾಲ ನಿರಂತರವಾಗಿ ಶಾಸಕರಾಗಿರುವ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ವರ್ಷ ಉಪಮುಖ್ಯಮಂತ್ರಿಯಾದ ದಾಖಲೆ ಹೊಂದಿರುವ ಅಜಿತ್ ಪವಾರ್ ಬಹಳ ಅನುಭವಿ ರಾಜಕಾರಣಿ ಎನಿಸಿದ್ದರು. ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು ಎಂದೂ ಹೇಳಲಾಗುತ್ತದೆ.

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharashtra Assembly Elections 2024) ವೇಳೆ ಅವರು ಎಲೆಕ್ಷನ್ ಕಮಿಷನ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ 124 ಕೋಟಿ ರೂ ಮೌಲ್ಯದ ಆಸ್ತಿಪಾಸ್ತಿ ಘೋಷಿಸಿಕೊಂಡಿದ್ದಾರೆ. ಇದು ಅವರ ಹಾಗೂ ಅವರ ಪತ್ನಿ ಸುನೇತ್ರಾ ಪವಾರ್ ಅವರಿಬ್ಬರದ್ದೂ ಸೇರಿ ಇರುವ ಆಸ್ತಿ.

ಅಜಿತ್ ಪವಾರ್ ಅವರ ಘೋಷಿತ ಆಸ್ತಿ ಹಾಗು ಮೌಲ್ಯ

  • ಚರಾಸ್ತಿ: 8.22 ಕೋಟಿ ರೂ
  • ಸ್ಥಿರಾಸ್ತಿ: 37.15 ಕೋಟಿ ರೂ

ಸುನೇತ್ರಾ ಪವಾರ್ ಅವರ ಘೋಷಿತ ಆಸ್ತಿಗಳು

  • ಚರಾಸ್ತಿ: 14.57 ಕೋಟಿ ರೂ
  • ಸ್ಥಿರಾಸ್ತಿ: 58.39 ಕೋಟಿ ರೂ

ಇದನ್ನೂ ಓದಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ, ಡಿಸಿಎಂ ಅಜಿತ್ ಪವಾರ್ ಸಾವು

ಅಜಿತ್ ಪವಾರ್ ಅವರ ಚರಾಸ್ತಿಗಳು: 1 ಟೊಯೊಟಾ ಕ್ಯಾಮ್ರಿ ಕಾರು, 1 ಹೊಂಡಾ ಸಿಆರ್​ವಿ ಕಾರು, 1 ಟ್ರಾಕ್ಟರ್, ಬೆಳ್ಳಿ ವಸ್ತುಗಳು, ಎಫ್​ಡಿ, ಷೇರು, ಬಾಂಡು ಇತ್ಯಾದಿ ಇವೆ.

14.12 ಲಕ್ಷ ರೂ ಕ್ಯಾಷ್, ವಿವಿಧ ಬ್ಯಾಂಕ್ ಅಕೌಂಟ್​ಗಳಲ್ಲಿ 6.81 ಕೋಟಿ ರೂ ಹಣ. ಬಾಂಡ್, ಡಿಬಂಚರ್, ಷೇರು ಇತ್ಯಾದಿಗಳಲ್ಲಿ 55 ಲಕ್ಷ ರೂಗೂ ಅಧಿಕದಷ್ಟು ಹೂಡಿಕೆ. ಒಂದು ಕೋಟಿ ರೂಗೂ ಅಧಿಕ ಮೌಲ್ಯದ ಎಲ್​ಐಸಿ ಪಾಲಿಸಿ ಮಾಡಿಸಿದ್ದರು.

ಅಜಿತ್ ಪವಾರ್ ಪತ್ನಿ ಹಾಗೂ ರಾಜ್ಯ ಸಭಾ ಸದಸ್ಯೆಯಾದ ಸುನೇತ್ರಾ ಪವಾರ್ ಅವರು 44 ಲಕ್ಷ ರೂಗೂ ಅಧಿಕ ಮೌಲ್ಯದ ಎಲ್​​ಐಸಿ ಪಾಲಿಸಿಗಳನ್ನು ಹೊಂದಿದ್ದಾರೆ. ಸುನೇತ್ರಾ ಹೆಸರಿನಲ್ಲಿ ಸ್ಥಿರಾಸ್ತಿಗಳಿವೆ. ಈ ಇಬ್ಬರ ಹೆಸರಲ್ಲಿ ಇರುವ ಘೋಷಿತ ಆಸ್ತಿಪಾಸ್ತಿಗಳ ಒಟ್ಟು ಮೌಲ್ಯ 124 ಕೋಟಿ ರೂಗೂ ಅಧಿಕ ಎನ್ನಲಾಗಿದೆ.

ಅಜಿತ್ ಪವಾರ್ ಅಪಘಾತದಿಂದ ದುರ್ಮರಣ

ಅಜಿತ್ ಪವಾರ್ ಅವರು ಮಹಾರಾಷ್ಟ್ರದ ರಾಜಕೀಯ ಭೀಷ್ಮ ಎಂದು ಕರೆಯಲಾಗುವ ಶರದ್ ಪವಾರ್ ಅವರ ಅಣ್ಣ ಮಗ. 1982ರಲ್ಲಿ ಸಕ್ಕರೆ ಸಹಕಾರ ರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. 1991ರಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾಗುತ್ತಾರೆ. ಆ ಬಳಿಕ ಸತತವಾಗಿ ಅದೇ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದರು. ವಿಧಿಯಾಟವೆಂದರೆ, ತಮ್ಮ ಸ್ವಕ್ಷೇತ್ರದಲ್ಲೇ ಅವರು ಸ್ವರ್ಗಸ್ಥರಾಗಿದ್ದಾರೆ.

ಇದನ್ನೂ ಓದಿ: ಲಿಯರ್ ಜೆಟ್ 45 ತುಂಬಾ ಸುರಕ್ಷಿತ ವಿಮಾನ, ಪತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಜ್ಞರು

ಮುಂಬೈನಿಂದ ಬಾರಾಮತಿಗೆ ಚಾರ್ಟರ್ಡ್ ಫ್ಲೈಟ್​ನಲ್ಲಿ ಆಗಮಿಸಿದ್ದರು. ತಾಂತ್ರಿಕ ದೋಷದಿಂದ ಬಾರಾಮತಿ ಏರ್​ಪೋರ್ಟ್​ನಲ್ಲಿ ವಿಮಾನ ಅಪಘಾತಗೊಂಡಿದೆ. ಅಜಿತ್ ಪವಾರ್, ಪೈಲಟ್ ಸೇರಿ ಅದರಲ್ಲಿದ್ದ ಎಲ್ಲಾ ಐವರೂ ನಿಧನರಾಗಿದ್ದಾರೆ. ಅಜಿತ್ ಪವಾರ್ ತಮ್ಮ ಪತ್ನಿ ಸುನೇತ್ರಾ ಹಾಗೂ ಇಬ್ಬರು ಮಕ್ಕಳಾದ ಪಾರ್ಥ್ ಮತ್ತು ಜಯ್ ಪವಾರ್ ಅವರನ್ನು ಅಗಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಂಜನೇಯನ ದೇವಸ್ಥಾನದಲ್ಲಿ ಭಕ್ತರಿಗೆ ವಿಶೇಷ ದರ್ಶನ ಕೊಟ್ಟ ವಾನರ!

ಬಾಗಲಕೋಟೆ, ಜನವರಿ 28: ಜಿಲ್ಲೆಯ ಬಾದಾಮಿ ಪಟ್ಟಣದ ಬತ್ತೆರೇಶ್ ಆಂಜನೇಯ ದೇವಸ್ಥಾನದಲ್ಲಿ ಮಧ್ವನವಮಿ ಆಚರಣೆ ವೇಳೆ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಇನಾಂದಾರ ಕುಟುಂಬದವರಿಂದ ಮಧ್ವಾಚಾರ್ಯ ಜಯಂತಿ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಗವೊಂದು ದೇವಸ್ಥಾನಕ್ಕೆ ಆಗಮಿಸಿ ಭಕ್ತರ ನಡುವೆ ನಿರ್ಭಯವಾಗಿ ಓಡಾಡಿ ಎಲ್ಲರ ಗಮನ ಸೆಳೆದಿದೆ. ಪೂಜೆಯಲ್ಲಿ ನಿರತರಾಗಿದ್ದ ಭಕ್ತರ ಬಳಿ ಹೋಗಿ ತೊಡೆಯ ಮೇಲೆ ಕುಳಿತು ಅಚ್ಚರಿ ಮೂಡಿಸಿದೆ. ಯಾರಿಗೂ ಭಯಪಡದೆ ಪ್ರೀತಿಯಿಂದ ವರ್ತಿಸಿದ ಮಂಗ ಭಕ್ತರ ಮನ ಗೆದ್ದಿತು. ಈ ವೇಳೆ ಭಕ್ತರು ಮಂಗನಿಗೆ ಹಣ್ಣುಗಳನ್ನು ಪ್ರಸಾದವಾಗಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಲಿಯರ್ ಜೆಟ್ 45 ತುಂಬಾ ಸುರಕ್ಷಿತ ವಿಮಾನ, ಪತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಜ್ಞರು – Kannada News | Maharashtra Air Crash: Deputy CM Ajit Pawar Among 5 Fatalities, Black Box Recovers Clues

ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ (ಜನವರಿ 28, 2026) ಸಂಭವಿಸಿದ ಈ ಭೀಕರ ವಿಮಾನ ಅಪಘಾತದ ತಾಂತ್ರಿಕ ವಿವರಗಳು ಈಗ ಲಭ್ಯವಾಗುತ್ತಿವೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ವಾಯುಯಾನ ತಜ್ಞರ ಪ್ರಾಥಮಿಕ ವರದಿಯಂತೆ ಅಪಘಾತಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ನೀಡಲಾಿದೆ. ವಿಮಾನವು ಮೊದಲ ಬಾರಿಗೆ ಬಾರಾಮತಿ ರನ್‌ವೇ ಮೇಲೆ ಇಳಿಯಲು ಪ್ರಯತ್ನಿಸಿದಾಗ ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಪೈಲಟ್ ತಕ್ಷಣವೇ ‘ಗೋ-ಅರೌಂಡ್’ (Go-around) ಮಾಡಲು ನಿರ್ಧರಿಸಿದರು, ಅಂದರೆ ವಿಮಾನವನ್ನು ಮತ್ತೆ ಮೇಲೆ ಹಾರಿಸಿ ಎರಡನೇ ಬಾರಿ ಇಳಿಯಲು ಪ್ರಯತ್ನಿಸಿದರು. ಈ ಎರಡನೇ ಪ್ರಯತ್ನದ ವೇಳೆ ವಿಮಾನವು ಹಠಾತ್ತಾಗಿ ನಿಯಂತ್ರಣ ಕಳೆದುಕೊಂಡು ರನ್‌ವೇಯ ಪ್ರಾರಂಭದ ಹಂತದಲ್ಲಿ (Runway Threshold) ವೇಗವಾಗಿ ಅಪ್ಪಳಿಸಿದೆ.

ವಿಮಾನವು ರನ್‌ವೇಗೆ ಅಪ್ಪಳಿಸಿದ ತಕ್ಷಣ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು. ಇದರಿಂದಾಗಿ ವಿಮಾನವು ತುಂಡು ತುಂಡಾಗಿ ಚದುರಿಹೋಗಿದೆ. ಈ ಭೀಕರ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಐವರು (5) ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದರಲ್ಲಿ ಇಬ್ಬರು ಪೈಲಟ್‌ಗಳು (ಸುಮಿತ್ ಕಪೂರ್ ಮತ್ತು ಸಂಭವಿ ಪಾಠಕ್), ಒಬ್ಬ ಪಿಎಸ್‌ಒ ಮತ್ತು ಒಬ್ಬ ಅಟೆಂಡೆಂಟ್ ಸೇರಿದ್ದಾರೆ. ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಬಾರಾಮತಿ ವೈದ್ಯಕೀಯ ಕಾಲೇಜಿಗೆ ತರಲಾಗಿದ್ದು, ಪೋಸ್ಟ್‌ಮಾರ್ಟಮ್ ನಂತರ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಾಥಮಿಕ ವರದಿಯ ಪ್ರಕಾರ ಆ ಸಮಯದಲ್ಲಿ ಹವಾಮಾನವು ಸಾಧಾರಣವಾಗಿತ್ತು, ಆದ್ದರಿಂದ ತಾಂತ್ರಿಕ ದೋಷವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಬ್ಲಾಕ್ ಬಾಕ್ಸ್ (Black Box):

ಅಪಘಾತದ ಸ್ಥಳದಿಂದ ವಿಮಾನದ ‘ಬ್ಲಾಕ್ ಬಾಕ್ಸ್’ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ವಿಶ್ಲೇಷಣೆಯಿಂದ ಪೈಲಟ್ ಮತ್ತು ಎಟಿಸಿ (ATC) ನಡುವೆ ನಡೆದ ಕೊನೆಯ ಸಂಭಾಷಣೆ ಹಾಗೂ ವಿಮಾನದ ತಾಂತ್ರಿಕ ಸ್ಥಿತಿಯ ನಿಖರ ಮಾಹಿತಿ ದೊರೆಯಲಿದೆ. ಕೇಂದ್ರ ವಾಯುಯಾನ ಸಚಿವಾಲಯವು AAIB (Aircraft Accident Investigation Bureau) ಮೂಲಕ ಸಮಗ್ರ ತನಿಖೆಗೆ ಆದೇಶಿಸಿದೆ. ವಾಯುಯಾನದ ಅಂಕಿಅಂಶಗಳ ಪ್ರಕಾರ, ಸುಮಾರು 60% ರಿಂದ 80% ರಷ್ಟು ಅಪಘಾತಗಳು ವಿಮಾನವು ಇಳಿಯುವ (Landing) ಅಥವಾ ಟೇಕಾಫ್ ಆಗುವ ಸಮಯದಲ್ಲಿ ಸಂಭವಿಸುತ್ತವೆ. ಅಜಿತ್ ಪವಾರ್ ಅವರ ವಿಮಾನವು ಎರಡನೇ ಬಾರಿ ಇಳಿಯಲು ಪ್ರಯತ್ನಿಸುತ್ತಿದ್ದಾಗ (2nd Approach) ಈ ಘಟನೆ ನಡೆದಿದೆ. ತಜ್ಞರ ಪ್ರಕಾರ, ಒಂದು ಬಾರಿ ಲ್ಯಾಂಡಿಂಗ್ ವಿಫಲವಾದಾಗ ಪೈಲಟ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ, ಇದು ಸಣ್ಣ ತಾಂತ್ರಿಕ ದೋಷವನ್ನೂ ದೊಡ್ಡ ಅವಘಡವನ್ನಾಗಿ ಪರಿವರ್ತಿಸಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ: ವಾಯು ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಾಜಕಾರಣಿಗಳು ಯಾರ್ಯಾರು?

ಲಿಯರ್ ಜೆಟ್ 45 ಸುರಕ್ಷಿತ:

ತಜ್ಞರು ಹೇಳಿರುವ ಪ್ರಕಾರ, ಈ ವಿಮಾನವು ವಿಶ್ವದಾದ್ಯಂತ ಸುರಕ್ಷಿತವೆಂದು ಹೆಸರುವಾಸಿಯಾಗಿದ್ದರೂ, ಈ ಹಿಂದೆ ಕೆಲವು ಬಾರಿ ‘ರನ್‌ವೇ ಎಕ್ಸ್‌ಕರ್ಷನ್’ (ರನ್‌ವೇಯಿಂದ ಹೊರಬರುವುದು) ಘಟನೆಗಳು ವರದಿಯಾಗಿವೆ. ವಿಮಾನದ ಮಾಲೀಕತ್ವ ಹೊಂದಿದ್ದ VSR ಏವಿಯೇಷನ್ ಪ್ರಕಾರ, ವಿಮಾನವು 100% ಸುಸ್ಥಿತಿಯಲ್ಲಿತ್ತು ಮತ್ತು ಪೈಲಟ್‌ಗಳು ಅನುಭವಿಗಳಾಗಿದ್ದರು. ಆದರೂ ತಾಂತ್ರಿಕ ದೋಷ ಅಥವಾ ಇಂಜಿನ್ ವಿಫಲತೆಯ ಸಾಧ್ಯತೆಯನ್ನು ತಜ್ಞರು ತಳ್ಳಿಹಾಕಿಲ್ಲ. ಅಪಘಾತದ ನಿಖರ ಕಾರಣ ತಿಳಿಯಲು CVR (Cockpit Voice Recorder) ಮತ್ತು FDR (Flight Data Recorder) ಅತಿ ಮುಖ್ಯ. ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ATC) ನಡುವಿನ ಕೊನೆಯ ಸಂಭಾಷಣೆಯು ವಿಮಾನದ ಒಳಗೆ ಯಾವುದಾದರೂ ತುರ್ತು ಪರಿಸ್ಥಿತಿ ಇತ್ತೇ ಎಂಬುದನ್ನು ಸ್ಪಷ್ಟಪಡಿಸಲಿದೆ ಎಂದು ವಾಯುಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಪವಾರ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ – Kannada News | Karnataka Assembly Mourns Ajit Pawar After Tragic Plane Crash

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. 2026ರ ಜನವರಿ 28ರಂದು ಬಾರಾಮತಿಯಲ್ಲಿ ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾಗ ವಿಮಾನ ಅಪಘಾತದಲ್ಲಿ ಅವರು ಹಾಗೂ ಇತರ ಐದು ಸಹ ಪ್ರಯಾಣಿಕರು ಮೃತಪಟ್ಟರು. ಅಜಿತ್ ಪವಾರ್ ಅವರು 1959ರ ಜುಲೈ 22ರಂದು ಅಹ್ಮದ್ ನಗರದ ದಿಯೋಲಾಲಿಯಲ್ಲಿ ಜನಿಸಿದರು. 1982ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಪುಣೆ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ 16 ವರ್ಷ ಸೇವೆ ಸಲ್ಲಿಸಿದರು. 1991ರಲ್ಲಿ ಬಾರಾಮತಿಯಿಂದ ಲೋಕಸಭೆಗೆ ಆಯ್ಕೆಯಾದ ಅವರು, ನಂತರ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. ಅವರು ಕೃಷಿ, ವಿದ್ಯುತ್, ನೀರಾವರಿ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳ ರಾಜ್ಯ ಸಚಿವರಾಗಿ, ಸಂಪುಟ ದರ್ಜೆ ಸಚಿವರಾಗಿ ಹಾಗೂ ಮಹಾರಾಷ್ಟ್ರದ 6 ಅವಧಿಗೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಡವರ ಮತ್ತು ರೈತರ ಧ್ವನಿಯಾಗಿ, ಅಜಿತ್ ದಾದಾ ಎಂದೇ ಖ್ಯಾತರಾಗಿದ್ದ ಅಜಿತ್ ಪವಾರ್, ನೇರ, ನಿಷ್ಠುರ ಮತ್ತು ದಿಟ್ಟ ರಾಜಕಾರಣಿಯಾಗಿದ್ದರು. ಅವರ ಅಗಲುವಿಕೆಯು ಮಹಾರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link