Category Archives: Blog

Your blog category

ಅಜಿತ್ ಪವಾರ್ ಇದ್ದ ವಿಮಾನ ಪತನಗೊಳ್ಳುವ ಮುನ್ನ ನಡೆದಿದ್ದೇನು? – Kannada News | Investigating the Baramati Crash: What Caused Ajit Pawar’s Chartered Plane to Go Down

ಮುಂಬೈ, ಜನವರಿ 28: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಇದ್ದ ವಿಮಾನ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದೆ. ಈ ಪರಿಣಾಮ ಅಜಿತ್ ಸೇರಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನವು ರನ್​ವೇನಲ್ಲಿ ಇಳಿಯುವಾಗ ಈ ದುರಂತ ಸಂಭವಿಸಿದೆ. ಈ ಘಟನೆ ರಾಜ್ಯಾದ್ಯಂತ ಆಘಾತದ ಅಲೆಯನ್ನು ಸೃಷ್ಟಿಸಿದೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ದೀರ್ಘಾವಧಿಯ ಉಪಮುಖ್ಯಮಂತ್ರಿಯಾಗಿದ್ದರು. ಅವರು ವಿವಿಧ ಸರ್ಕಾರಗಳಲ್ಲಿ ಆರು ಅವಧಿಗೆ ಈ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. ಅವರು ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್ , ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರ ಸಂಪುಟಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.

ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8.45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮಾಹಿತಿಯ ಪ್ರಕಾರ, ಮುಂಬೈನಿಂದ ಬಾರಾಮತಿಗೆ ಹಾರುತ್ತಿದ್ದ ಖಾಸಗಿ ಚಾರ್ಟರ್ ವಿಮಾನವು ಇಳಿಯುವ ಕೆಲವೇ ಕ್ಷಣಗಳ ಮೊದಲು ಕೆಳಗೆ ಅಪ್ಪಳಿಸಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದರಿಂದ ವಿಮಾನವನ್ನು ಕ್ರ್ಯಾಶ್​ ಲ್ಯಾಂಡಿಂಗ್ ಮಾಡಿದ ಕಾರಣ ಕೂಡಲೇ ಬೆಂಕಿ ಹೊತ್ತಿಕೊಂಡಿತ್ತು ಎಂದು ವರದಿಯಾಗಿದೆ.

ಅಪಘಾತದ ನಂತರ ದಟ್ಟ ಹೊಗೆ ಆ ಪ್ರದೇಶವನ್ನು ಆವರಿಸಿದ್ದರಿಂದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಘಟಕಗಳು ಸ್ಥಳಕ್ಕೆ ಧಾವಿಸಿದ್ದವು. ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅಪಘಾತದ ನಂತರ ದಟ್ಟ ಹೊಗೆ ಆ ಪ್ರದೇಶವನ್ನು ಆವರಿಸಿದ್ದರಿಂದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದವು. ವಿಮಾನ ನಿಲ್ದಾಣವನ್ನು ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಮತ್ತು ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ರನ್‌ವೇಯನ್ನು ಸುತ್ತುವರೆದಿದ್ದಾರೆ ಮತ್ತು ರಕ್ಷಣಾ ಮತ್ತು ಚೇತರಿಕೆ ಪ್ರಯತ್ನಗಳಲ್ಲಿ ಸಹಾಯ ಮಾಡಲು ತುರ್ತು ವೈದ್ಯಕೀಯ ತಂಡಗಳು ಕೂಡ ಆಗಮಿಸಿವೆ.

ಮತ್ತಷ್ಟು ಓದಿ: Ajit Pawar Profile: ಮಹಾರಾಷ್ಟ್ರ ರಾಜಕೀಯದ ಚಾಣಕ್ಯ ಶರದ್ ಪವಾರ್​ಗೆ ಸೆಡ್ಡು ಹೊಡೆದು ಗೆದ್ದಿದ್ದ ಅಜಿತ್ ಪವಾರ್ ಇನ್ನು ನೆನಪು ಮಾತ್ರ

ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸಲು ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಅವರು ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಪವಾರ್ ಮಂಗಳವಾರ ಮುಂಬೈನಲ್ಲಿದ್ದರು, ಅಲ್ಲಿ ಅವರು ಸಿಎಂ ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ನಡೆದ ಮಹಾರಾಷ್ಟ್ರ ಮೂಲಸೌಕರ್ಯ ಸಚಿವ ಸಂಪುಟ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು. ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ ಮತ್ತು ಇತರ ಅಧಿಕಾರಿಗಳು ಸಹ ಹಾಜರಿದ್ದರು.

ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಧಿಕಾರಿಗಳು ತಾಂತ್ರಿಕ ದಾಖಲೆಗಳು, ಸಂವಹನ ದಾಖಲೆಗಳು ಮತ್ತು ಪೈಲಟ್ ಇನ್‌ಪುಟ್‌ಗಳನ್ನು ಪರಿಶೀಲಿಸುತ್ತಾರೆ.

ಈ ಹಿಂದೆ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾರಾಮತಿ ವಿಮಾನ ನಿಲ್ದಾಣವನ್ನು ಇತ್ತೀಚೆಗೆ ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ಕಂಪನಿಗೆ ಹಸ್ತಾಂತರಿಸಲಾಗಿದೆ. ಅಜಿತ್ ಪವಾರ್ 1982 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಯಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 1991 ರಲ್ಲಿ, ಅವರು ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿದ್ದರು..

ಅವರು ಮೊದಲು 1991 ರಲ್ಲಿ ಬಾರಾಮತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು ಆದರೆ ನಂತರ ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರಿಗೆ ಆ ಸ್ಥಾನವನ್ನು ಬಿಟ್ಟುಕೊಟ್ಟರು. ಪವಾರ್ ಅವರು ಬಾರಾಮತಿಯಿಂದ ಏಳು ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. 1991 ರ ಉಪಚುನಾವಣೆಯಲ್ಲಿ ಮತ್ತು ನಂತರ 1995, 1999, 2004, 2009 ಮತ್ತು 2014 ರಲ್ಲಿ ಗೆದ್ದಿದ್ದರು. ನವೆಂಬರ್ 2019 ರಲ್ಲಿ, ಅವರು NCPಯನ್ನು ಒಡೆದು ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿದ್ದರು ಮತ್ತು ಉಪಮುಖ್ಯಮಂತ್ರಿಯಾಗಿದ್ದರು. ಫೆಬ್ರವರಿ 2024 ರಲ್ಲಿ, ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:24 pm, Wed, 28 January 26

Source link

25 ವರ್ಷ ಹಳೆ ದಾಖಲೆ ಮುರಿದ ‘ಧುರಂಧರ್’: ಏನದು ದಾಖಲೆ? – Kannada News | Dhurandhar movie breaks 25 year old eighth week collection record

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಈಗಾಗಲೇ ಕೆಲವು ದೊಡ್ಡ ಸಿನಿಮಾಗಳ ಗಳಿಕೆಯ ದಾಖಲೆಗಳನ್ನು ಮುರಿದು ಹಾಕಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಕೆಜಿಎಫ್ 2’, ‘ಆರ್​​ಆರ್​​ಆರ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಹಿಂದಿಕ್ಕಿದ್ದು, ‘ಪುಷ್ಪ 2’ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಹಾಕುತ್ತಿದೆ. ‘ಧುರಂಧರ್’ ಸಿನಿಮಾ ಹೊಸ ಸಿನಿಮಾಗಳ ದಾಖಲೆಗಳನ್ನು ಮಾತ್ರವಲ್ಲ, ಹಳೆ ಸಿನಿಮಾಗಳ ದಾಖಲೆಗಳನ್ನೂ ಸಹ ಮುರಿಯುತ್ತಿದೆ. ಇದೀಗ 25 ವರ್ಷ ಹಳೆಯ ದಾಖಲೆಯೊಂದನ್ನು ‘ಧುರಧಂರ್’ ಸಿನಿಮಾ ಮುರಿದಿದೆ.

‘ಧುರಂಧರ್’ ಹಲವು ಹಿಂದಿ ಸಿನಿಮಾಗಳ ಬಾಕ್ಸ್ ಆಫೀಸ್​ ದಾಖಲೆಗಳನ್ನು ಮುರಿದಿದೆ. ಅದರಲ್ಲೂ ಮೊದಲ ವಾರದ ಹೊರತಾಗಿ ಎರಡರಿಂದ ಎಂಟನೇ ವಾರದ ವರೆಗೆ ಪ್ರತಿ ವಾರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ ‘ಧುರಂಧರ್’. ಮೊದಲ ವಾರದ ಅತಿ ಹೆಚ್ಚು ಕಲೆಕ್ಷನ್ ದಾಖಲೆ ಶಾರುಖ್ ಖಾನ್​ರ ‘ಜವಾನ್’ ಮತ್ತು ‘ಪುಷ್ಪ 2’ (ಹಿಂದಿ ಆವೃತ್ತಿ) ಬಳಿಯೇ ಇದೆ. ಇನ್ನು ಹಿಂದಿ ಸಿನಿಮಾವೊಂದು ಎಂಟನೇ ವಾರದಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿದ ದಾಖಲೆ 25 ವರ್ಷದ ಹಿಂದಿನ ಸಿನಿಮಾದ ಹೆಸರಿನಲ್ಲಿತ್ತು. ಆ ದಾಖಲೆಯನ್ನು ಮುರಿದಿದೆ ‘ಧುರಂಧರ್’.

ಸನ್ನಿ ಡಿಯೋನ್ ನಟನೆಯ ‘ಗದರ್: ಏಕ್ ಪ್ರೇಮ್ ಕಥ’ ಸಿನಿಮಾ ಎಂಟನೇ ವಾರ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಹಿಂದಿ ಸಿನಿಮಾ ಎನಿಸಿಕೊಂಡಿತ್ತು. 25 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಗದರ್’ ಸಿನಿಮಾ ಎಂಟನೇ ವಾರದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ‘ಗದರ್’ ಬಳಿಕ ಹಿಂದಿಯ ಇನ್ಯಾವುದೇ ಸಿನಿಮಾ ಎಂಟನೇ ವಾರದಲ್ಲಿ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನ ಗಳಿಕೆ ಮಾಡಿದ್ದೇ ಇರಲಿಲ್ಲ. ಇದೀಗ ‘ಧುರಂಧರ್’ ಸಿನಿಮಾ ಎಂಟನೇ ವಾರದಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಆ ಮೂಲಕ ಎಂಟನೇ ವಾರದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ.

ಇದನ್ನೂ ಓದಿ:ದೈವಕ್ಕೆ ಅವಮಾನ: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು

‘ಧುರಂಧರ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈ ವರೆಗೆ 1340 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆ ಮೂಲಕ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎನಿಸಿಕೊಂಡಿದೆ ‘ಧುರಂಧರ್’. ಮೊದಲ ಸ್ಥಾನದಲ್ಲಿ ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ಇದೆ. ಆ ಸಿನಿಮಾ ಸುಮಾರು 2000 ಕೋಟಿ ಗಳಿಕೆ ಮಾಡಿತ್ತು. ಬಳಿಕ ‘ಬಾಹುಬಲಿ 2’ ಸಿನಿಮಾ ಇದೆ. ಆ ಸಿನಿಮಾ 1800 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಮೂರನೇ ಸ್ಥಾನದಲ್ಲಿ ‘ಪುಷ್ಪ 2’ ಸಿನಿಮಾ ಇದ್ದು ಆ ಸಿನಿಮಾ 1700 ಕೋಟಿ ಗಳಿಕೆ ಮಾಡಿದೆ.

‘ಧುರಂಧರ್’ ಸಿನಿಮಾ ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಆತ ಮಾಡುವ ಸಾಹಸಗಳ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನ, ಸಂಜಯ್ ದತ್, ಆರ್ ಮಾಧವನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ರೂ. ಶಾಕ್! ಮಾಜಿ ಉದ್ಯೋಗಿಯಿಂದ ಸೋರ್ಸ್ ಕೋಡ್ ಕಳವು – Kannada News | Bengaluru Ex IT Employee Steals Rs.87 Cr Data: Source Code Theft FIR Filed

ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ರೂ. ಶಾಕ್!

ಬೆಂಗಳೂರು, ಜನವರಿ 28: ನಗರದ ಐಟಿ ಕಂಪನಿಯೊಂದರ (Bengaluru) ಉದ್ಯೋಗಿಯೊಬ್ಬರು ಸುಮಾರು 87 ಕೋಟಿ ರೂ. ಮೌಲ್ಯದ ಕಂಪನಿಯ ಡಾಟಾವನ್ನು ಕಳವು  ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಕಂಪನಿಯ ಸಾಫ್ಟ್‌ವೇರ್ ಸೋರ್ಸ್ ಕೋಡ್ ಅನ್ನು ಅಕ್ರಮವಾಗಿ ಕದ್ದ ಆರೋಪದಡಿ ಉದ್ಯೋಗಿ ವಿರುದ್ಧ ಮಂಗಳವಾರ FIR ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಯಕ್ತಿಕ ಇಮೇಲ್ ಮೂಲಕ ಸೋರ್ಸ್ ಕೋಡ್ ಲೀಕ್

ಆಶುತೋಷ್ ನಿಗಮ್ 2020 ಫೆಬ್ರವರಿ 1ರಿಂದ ಅಮಾಡಿಯಸ್ ಸಾಫ್ಟ್‌ವೇರ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸೀನಿಯರ್ ಮ್ಯಾನೇಜರ್ ರಿಸರ್ಚ್ ಸೈಂಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಎಫ್‌ಐಆರ್ ಪ್ರಕಾರ, 2025ರ ಅಕ್ಟೋಬರ್ 11ರಂದು ಕಂಪನಿಯ ಅನುಮತಿ ಇಲ್ಲದೆ, ತಮ್ಮ ವೈಯಕ್ತಿಕ ಇಮೇಲ್ ಖಾತೆಯ ಮೂಲಕ ಕಂಪನಿಗೆ ಸೇರಿದ ಸಾಫ್ಟ್‌ವೇರ್ ಸೋರ್ಸ್ ಕೋಡ್ ಹಾಗೂ ಇತರೆ ಅತ್ಯಂತ ಗೌಪ್ಯ ಮಾಹಿತಿಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎನ್ನಲಾಗಿದೆ.

ಕಂಪನಿಯ ಆಂತರಿಕ ತನಿಖೆ ವೇಳೆ ಸಂಗ್ರಹಿಸಿದ ದಾಖಲೆಗಳು ಮತ್ತು ವರದಿಗಳ ಆಧಾರದ ಮೇಲೆ ಆರೋಪಿಯನ್ನು ವಿಚಾರಣೆ ನಡೆಸಿದಾಗ, ನಿಗಮ್ ಸೋರ್ಸ್ ಕೋಡ್ ಎಕ್ಸ್‌ಫಿಲ್ಟ್ರೇಷನ್ ಮಾಡಿದುದನ್ನು ಒಪ್ಪಿಕೊಂಡಿದ್ದು, ಅದರ ವಿಡಿಯೋ ದಾಖಲೆ ಕಂಪನಿಯ ಬಳಿ ಇದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯ ನಂತರ ಕಳೆದ ಡಿಸೆಂಬರ್ 3ರಂದು ಉದ್ಯೋಗಿಯನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಸಾಫ್ಟ್‌ವೇರ್ ಹಾಗೂ ಅದರ ಸೋರ್ಸ್ ಕೋಡ್‌ನ ಒಟ್ಟು ಮೌಲ್ಯವು ಸುಮಾರು 8 ಮಿಲಿಯನ್ ಯೂರೋಗಳಾಗಿದೆ (87,98,48,000 ರೂ.). ಈ ಅಕ್ರಮ ಕೃತ್ಯದಿಂದ ಕಂಪನಿಯ ವ್ಯಾಪಾರದಲ್ಲಿ ಭಾರೀ ನಷ್ಟವಾಗಿದ್ದು, ಬೌದ್ಧಿಕ ಸ್ವತ್ತು ಹಕ್ಕುಗಳಿಗೆ ಗಂಭೀರ ಹಾನಿ ಉಂಟಾಗಿದೆ ಎಂದು ಕಂಪನಿಯು ಆರೋಪಿಸಿದೆ. ಸಂಸ್ಥೆಯ ಪ್ರತಿನಿಧಿಯ ದೂರು ಆಧರಿಸಿ ಜನವರಿ 23ರಂದು ವೈಟ್‌ಫೀಲ್ಡ್ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಐಪಿಎಲ್ RAPP ಲಿಸ್ಟ್ ಪ್ರಕಟ: 1,307 ಆಟಗಾರರಿಗೆ ಸ್ಥಾನ – Kannada News | BCCI Announced The RAPP sheet For IPL 2026

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)​ ಮಿನಿ ಹರಾಜಿಗಾಗಿ ಬರೋಬ್ಬರಿ 1390 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದರು. ಈ 1390 ಆಟಗಾರರಲ್ಲಿ ಹರಾಜಿಗೆ ಆಯ್ಕೆಯಾಗಿದ್ದು ಕೇವಲ 359 ಆಟಗಾರರು ಮಾತ್ರ. ಇವರಲ್ಲಿ 77 ಆಟಗಾರರನ್ನು ಮಾತ್ರ ಖರೀದಿಸಲಾಗಿತ್ತು. ಅಂದರೆ ಬರೋಬ್ಬರಿ 1313 ಆಟಗಾರರು ಅವಕಾಶ ವಂಚಿತರಾಗಿದ್ದರು. ಇದೀಗ ಅವಕಾಶ ವಂಚಿತರಾದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಅದು ಕೂಡ RAPP ಲಿಸ್ಟ್​ನಲ್ಲಿ ಎಂಬುದು ವಿಶೇಷ.

ಏನಿದು RAPP ಲಿಸ್ಟ್​?

RAPP ಲಿಸ್ಟ್ ಎಂದರೆ ರಿಜಿಸ್ಟರ್ ಅವೇಲೇಬಲ್ ಪ್ಲೇಯರ್ ಪೂಲ್ (RAPP). ಐಪಿಎಲ್​ಗಾಗಿ ನೋಂದಾಯಿತ ಲಭ್ಯವಿರುವ ಆಟಗಾರರ ಪಟ್ಟಿ. ಬದಲಿ ಆಟಗಾರರ ಆಯ್ಕೆಗಾಗಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಂದರೆ ಯಾವುದಾದರೂ ಆಟಗಾರರು ಐಪಿಎಲ್​ನಿಂದ ಹೊರಗುಳಿದರೆ, RAPP ಲಿಸ್ಟ್​ನಲ್ಲಿರುವ ಆಟಗಾರರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಅವರು ಹರಾಜಿಗಾಗಿ ನೊಂದಾಯಿಸಿದ್ದ ಮೂಲ ಬೆಲೆಗಿಂತ ಕಡಿಮೆ ಪಾವತಿಸುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.

ಅದರಂತೆ ಇದೀಗ 1307 ಆಟಗಾರರ ಹೆಸರನ್ನು ಹೊಂದಿರುವ RAPP ಲಿಸ್ಟ್ ಅನ್ನು ಬಿಸಿಸಿಐ ಸಿದ್ಧಪಡಿಸಿದೆ. ಹೀಗಾಗಿ ಈ ಪಟ್ಟಿಯಲ್ಲಿರುವ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

RAPP ಲಿಸ್ಟ್​ ನಿಯಮಗಳು:

  • ಫ್ರಾಂಚೈಸಿಗಳು ಈ ನಿರ್ದಿಷ್ಟ ಪೂಲ್‌ನಿಂದ ಬದಲಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಉದಾಹರಣೆಗೆ, ಗಾಯಗೊಂಡ ತಂಡದ ಸದಸ್ಯರಿಗೆ ಬದಲಿಗೆ RAPP ಲಿಸ್ಟ್​ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡಬೇಕು.
  • ಒಬ್ಬ ಆಟಗಾರನನ್ನು ಅವರ ಮೂಲ ಹರಾಜಿನ ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಸಹಿ ಮಾಡುವಂತಿಲ್ಲ. ಉದಾಹರಣೆಗೆ, ಸ್ಟೀವ್ ಸ್ಮಿತ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಅವರನ್ನು ಅದಕ್ಕಿಂತ ಕಡಿಮೆ ಮೊತ್ತಕ್ಕೆ ಬದಲಿ ಆಟಗಾರನಾಗಿ ಆಯ್ಕೆ ಮಾಡುವಂತಿಲ್ಲ.
  •  RAPP ಲಿಸ್ಟ್​ನಲ್ಲಿರುವ ಆಟಗಾರರನ್ನು ನೆಟ್ ಬೌಲರ್‌ಗಳಾಗಿ ನೇಮಿಸಿಕೊಳ್ಳಬಹುದು. ಆದರೆ ಬೇರೆ ಯಾವುದಾದರೂ ಫ್ರಾಂಚೈಸಿ ಆ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಲು ಬಯಸಿದರೆ ತಕ್ಷಣವೇ ಬಿಡುಗಡೆ ಮಾಡಬೇಕಾಗುತ್ತದೆ.

RAPP ಲಿಸ್ಟ್​ನಲ್ಲಿ ಸ್ಥಾನ ಪಡೆದಿರುವ ಪ್ರಮುಖ ಆಟಗಾರರು:

  • 2 ಕೋಟಿ ರೂ. ಮೂಲ ಬೆಲೆ: ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ರೀಸ್ ಟೋಪ್ಲಿ (ಇಂಗ್ಲೆಂಡ್), ಮತ್ತು ಜೇಮೀ ಸ್ಮಿತ್ (ಇಂಗ್ಲೆಂಡ್).
  • 1.5 ಕೋಟಿ ರೂ. ಮೂಲ ಬೆಲೆ: ರಹಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಮತ್ತು ಟಿಮ್ ಸೈಫರ್ಟ್ (ನ್ಯೂಝಿಲೆಂಡ್).
  • 1 ಕೋಟಿ ರೂ. ಮೂಲ ಬೆಲೆ: ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಫಝಲ್​ಹಕ್ ಫಾರೂಕಿ (ಅಫ್ಘಾನಿಸ್ತಾನ್).

ಇದನ್ನೂ ಓದಿ: 6,6,6,6,6,6,6,6,6: ಶರವೇಗದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್

RAPP ಲಿಸ್ಟ್​ನಲ್ಲಿರುವ ಭಾರತದ ಪ್ರಮುಖ ಆಟಗಾರರು:

  • ಉಮೇಶ್ ಯಾದವ್ , ನವದೀಪ್ ಸೈನಿ , ಚೇತನ್ ಸಕರಿಯಾ, ಸಂದೀಪ್ ವಾರಿಯರ್, ಮಾಯಾಂಕ್ ಅಗರ್ವಾಲ್ , ದೀಪಕ್ ಹೂಡಾ , ಕೆ.ಎಸ್. ಭರತ್, ಯಶ್ ಧುಲ್, ಅಭಿನವ್ ಮನೋಹರ್, ಅಥರ್ವ ಟೈಡೆ,  ಮನನ್ ವೋಹ್ರಾ, ಮಹಿಪಾಲ್ ಲೋಮ್ರೋರ್ , ಕಮಲೇಶ್ ನಾಗರಕೋಟಿ ಮತ್ತು ರಾಜವರ್ಧನ್ ಹಂಗರ್ಗೇಕರ್.

Source link

ಜಗ್ಗೇಶ್ ಹೇಳಿದ್ದನ್ನು ಸಾಬೀತು ಮಾಡಿ, ಅವರಿಂದಲೇ ಸನ್ಮಾನ ಮಾಡಿಸಿಕೊಂಡ ಗಿಲ್ಲಿ ನಟ – Kannada News | Jaggesh’s Prophecy Fulfilled: Gilli Actor Felicitated After Bigg Boss Win and Success

ಆ ಭವಿಷ್ಯ ನಿಜವಾಗಿದೆ. ಗಿಲ್ಲಿ ಹೋದಲ್ಲಿ ಬಂದಲ್ಲಿ, ಬೌನ್ಸರ್​​ಗಳು, ಪೊಲೀಸರು ಸುತ್ತುವರಿಯುತ್ತಿದ್ದಾರೆ. ಗಿಲ್ಲಿಗೆ ಇಷ್ಟು ಜನಪ್ರಿಯತೆ ಸಿಗುತ್ತದೆ ಎಂದು ಅಂದೇ ಜಗ್ಗೇಶ್ ಊಹಿಸಿದ್ದರು. ಆ ಮಾತು ನಿಜವಾಗಿದೆ. ಈ ವಿಷಯದಲ್ಲಿ ಜಗ್ಗೇಶ್​​ಗೂ ಖುಷಿಯಾಗಿದೆ. ಜಗ್ಗೇಶ್ ಒಬ್ಬರನ್ನು ಎಷ್ಟು ಆಳವಾಗಿ ಅಧ್ಯಯನ ಮಾಡುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

Source link

ಜೆಮಿಮಾ ರೊಡ್ರಿಗಸ್​ಗೆ 12 ಲಕ್ಷ ರೂ. ದಂಡ

Source link

ಉಡುಪಿ ಡಿಸಿ, ಉಸ್ತುವಾರಿ ಸಚಿವರಿಂದಲೇ ಜಿಲ್ಲಾಡಳಿತದ ಸೂಚನೆ ಉಲ್ಲಂಘನೆ? ಆಗಿದ್ದೇನು? – Kannada News | Udupi DC and District In Charge Minister Travel in Boat Without Wearing Life Jackets; Video Goes Viral

ಲೈಫ್​​ ಜಾಕೆಟ್​​ ಧರಿಸದೆ ಪ್ರಯಾಣ

ಉಡುಪಿ, ಜನವರಿ 28: ಜಿಲ್ಲಾಡಳಿತದ ಸೂಚನೆಯನ್ನು ಸ್ವತಃ ಉಡುಪಿ ಡಿಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೇ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ಕೋಡಿಬೆಂಗ್ರೆ ಬೋಟ್​​ ದುರಂತ ಪ್ರಕರಣದ ಬಳಿಕ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶಿಸಿದ್ದಾರೆ. ಆದರೆ ದುರ್ಘಟನೆ ನಡೆದ ಗಣರಾಜ್ಯೋತ್ಸವದ ದಿನವೇ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಲು ಬೋಟ್​​ನಲ್ಲಿ ತೆರಳಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿಸಿ ಸೇರಿ ಇತರ ಅಧಿಕಾರಿಗಳು ಲೈಫ್ ಜಾಕೆಟ್ ಧರಿಸದಿರುವ ವಿಡಿಯೋವೀಗ ವೈರಲ್​​ ಆಗಿದೆ.

ವೈರಲ್​​ ಆದ ವಿಡಿಯೋದಲ್ಲೇನಿದೆ?

ದುರ್ಘಟನೆ ಬಳಿಕ ಲೈಫ್​​ ಜಾಕೆಟ್​​ ಕಡ್ಡಾಯಗೊಳಿಸಿ ಡಿಸಿ ಆದೇಶಿಸಿದ್ದರೂ ಈ ಬಗ್ಗೆ ಹಿಂದಿನಿಂದಲೂ ಜಿಲ್ಲಾಡಳಿತದ ಸೂಚನೆ ಇದೆ. ಆದರೆ ಅದನ್ನು ಉಲ್ಲಂಘಿಸಿ ಜಾಕೆಟ್ ಧರಿಸದೆ ಬೋಟ್​​ನಲ್ಲಿ ನಿಂತು ಸಚಿವರು, ಅಧಿಕಾರಿಗಳು ಕೈಬೀಸಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಜನರಿಗೆ ಹೇಳಬೇಕಿರುವ ಇವರೇ ಹೀಗೆ ನಡೆದುಕೊಂಡರೆ ಹೇಗೆ ಎಂಬ ಮಾತುಗಳೀಗ ಕೇಳಿ ಬಂದಿವೆ.

ಇದನ್ನೂ ಓದಿ: ಉಡುಪಿಯಲ್ಲಿ ಪ್ರವಾಸಿ ಬೋಟ್ ದುರಂತ ಸಂಬಂಧ ಮತ್ತೋರ್ವ ಯುವತಿ ಸಾವು; ಮೃತರ ಸಂಖ್ಯೆ ಮೂರಕ್ಕೇರಿಕೆ

ಉಡುಪಿಯ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಮಗುಚಿ ಬಿದ್ದ ಪರಿಣಾಮ ಒಟ್ಟು ಮೂವರು ಮೃತಪಟ್ಟಿದ್ದರು. ಮೈಸೂರಿನ ಸರಸ್ವತಿಪುರಂನಿಂದ ಪ್ರವಾಸಕ್ಕೆ ಆಗಮಿಸಿದ್ದ ಬಿಪಿಒ ಕಾಲ್ ಸೆಂಟರ್ ಉದ್ಯೋಗಿಗಳ 28 ಮಂದಿಯ ತಂಡವು ಎರಡು ಪ್ರವಾಸಿ ಬೋಟ್‌ಗಳಲ್ಲಿ ವಿಹಾರಕ್ಕೆ ತೆರಳಿತ್ತು. ಒಂದೊಂದು ಬೋಟ್‌ನಲ್ಲಿ 14 ಮಂದಿ ಇದ್ದು, ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ಸಮುದ್ರದ ಭಾರೀ ಅಲೆಗಳಿಗೆ ಸಿಲುಕಿದ ಒಂದು ಬೋಟ್ ಅಚಾನಕ್ಕಾಗಿ ಮಗುಚಿ ಬಿದ್ದ ಪರಿಣಾಮ ಅವಘಡ ನಡೆದಿತ್ತು. ಆ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದ ಉಡುಪಿ ಡಿಸಿ, ಪ್ರವಾಸಿ ಬೊಟುಗಳಲ್ಲಿ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ. ಲೈಫ್ ಜಾಕೆಟ್ ಬಳಕೆ ಬಗ್ಗೆ ಕರಪತ್ರ ಪ್ರಕಟಿಸಬೇಕು ಎಂದು ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Ajit Pawar Death: ಅಜಿತ್ ಪವಾರ್ ನಿಧನಕ್ಕೆ ರಾಜಕೀಯ ಗಣ್ಯರು ತೀವ್ರ ಸಂತಾಪ – Kannada News | Maharashtra Mourns Ajit Pawar: Leaders Pay Tributes to Late Deputy CM

ಬಾರಾಮತಿ, ಜ.28: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅನಿರೀಕ್ಷಿತ ನಿಧನಕ್ಕೆ ದೇಶದಾದ್ಯಂತ ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ. ಇಂದು (ಜನವರಿ 28) ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಪಕ್ಷಾತೀತವಾಗಿ ನಾಯಕರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ ಅವರು ಅಜಿತ್ ಪವಾರ್ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದು, “ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ನಾಯಕ. ಅವರ ನಿಧನವು ನನಗೆ ವೈಯಕ್ತಿಕವಾಗಿ ಮತ್ತು ದೇಶದ ರಾಜಕೀಯಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. ಅಜಿತ್ ಪವಾರ್ ಅವರ ಚಿಕ್ಕಪ್ಪ ಹಾಗೂ ಎನ್‌ಸಿಪಿ (NCP) ಸ್ಥಾಪಕ ಶರದ್ ಪವಾರ್ ಅವರು ಈ ಸುದ್ದಿಯಿಂದ ದಿಗ್ಭ್ರಮೆಗೊಂಡಿದ್ದಾರೆ. “ಈ ದುರಂತವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಜಿತ್ ಯಾವಾಗಲೂ ಉತ್ಸಾಹಿ ಮತ್ತು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯಾಗಿದ್ದರು. ನನ್ನ ಮಗನನ್ನೇ ಕಳೆದುಕೊಂಡಷ್ಟು ನೋವಾಗುತ್ತಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರವು ಇಂದು ಒಬ್ಬ ದಕ್ಷ ಆಡಳಿತಗಾರನನ್ನು ಕಳೆದುಕೊಂಡಿದೆ. ನಮ್ಮ ಸರ್ಕಾರದ ಪ್ರಬಲ ಶಕ್ತಿಯಾಗಿದ್ದ ‘ದಾದಾ’ (ಅಜಿತ್ ಪವಾರ್) ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ದೊಡ್ಡ ಆಘಾತ ತಂದಿದೆ ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಅಜಿತ್ ಪವಾರ್ ಅವರ ಕೆಲಸದ ವೈಖರಿ ಮತ್ತು ನಿರ್ಧಾರ ತೆಗೆದುಕೊಳ್ಳುವ ವೇಗ ಎಲ್ಲರಿಗೂ ಮಾದರಿಯಾಗಿತ್ತು. ನಾವು ಒಬ್ಬ ಉತ್ತಮ ಸ್ನೇಹಿತ ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯದ ಚಾಣಕ್ಯ ಶರದ್ ಪವಾರ್​ಗೆ ಸೆಡ್ಡು ಹೊಡೆದು ಗೆದ್ದಿದ್ದ ಅಜಿತ್ ಪವಾರ್ ಇನ್ನು ನೆನಪು ಮಾತ್ರ

ಪ್ರಧಾನಿ ನರೇಂದ್ರ ಮೋದಿ ಸಂತಾಪ:

ಕರ್ನಾಟಕದ ನಾಯಕರ ಸಂತಾಪ:

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅನಿರೀಕ್ಷಿತ ನಿಧನಕ್ಕೆ ಕರ್ನಾಟಕದ ರಾಜಕೀಯ ನಾಯಕರು ತೀವ್ರ ದಿಗ್ಭ್ರಮೆ ಮತ್ತು ಶೋಕ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಈ ಕುರಿತು ತಮ್ಮ ಸಂತಾಪದ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಅಕಾಲಿಕ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅವರ ನಿಧನವು ಮಹಾರಾಷ್ಟ್ರದ ರಾಜಕೀಯ ಮತ್ತು ಸಾರ್ವಜನಿಕ ಜೀವನಕ್ಕೆ ದೊಡ್ಡ ನಷ್ಟ. ಅವರು ಅಪಾರ ಅನುಭವ ಮತ್ತು ದೃಢ ಸಂಕಲ್ಪ ಹೊಂದಿದ್ದ ನಾಯಕರಾಗಿದ್ದರು. ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಡಿಕೆ ಶಿವಕುಮಾರ್​ ಸಂತಾಪ ಸೂಚಿಸಿದ್ದಾರೆ. ಅಜಿತ್ ಪವಾರ್ ಅವರ ಸಾವಿನ ಸುದ್ದಿ ಅತ್ಯಂತ ಆಘಾತಕಾರಿ ಮತ್ತು ಬೇಸರ ತಂದಿದೆ. ಅವರು ದೇಶದ ರಾಜಕೀಯದಲ್ಲಿ ಅತ್ಯಂತ ಕ್ರಿಯಾಶೀಲ ನಾಯಕರಾಗಿದ್ದರು ಎಂದು ಹೇಳಿದ್ದಾರೆ.

ಹೆಚ್​​​ ಡಿ ಕುಮಾರಸ್ವಾಮಿ:

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅಜಿತ್ ಪವಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ನೆರೆಯ ರಾಜ್ಯದ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿರುವುದು ಇಡೀ ದೇಶಕ್ಕೆ ನಷ್ಟ ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:24 am, Wed, 28 January 26

Source link

Maharashtra Plane Crash: ಡಿಸಿಎಂ ಅಜಿತ್ ಪವಾರ್ ಸಾವು: ವಿಮಾನ ಪತನವಾದ ಸ್ಥಳ ಹೇಗಿದೆ ನೋಡಿ – Kannada News | Ajit Pawar Dies in Horrific Baramati Plane Crash, Maharashtra: NDRF Recovers Bodies

ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ (ಜನವರಿ 28) ಸಂಭವಿಸಿದ ಭೀಕರ ವಿಮಾನ ಅಪಘಾತದ ಸ್ಥಳವು ಅತ್ಯಂತ ಭೀಕರವಾಗಿದೆ. ನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ವಿಮಾನದಲ್ಲಿ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದ್ದರಿಂದ, ವಿಮಾನದ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಕೇವಲ ವಿಮಾನದ ಬಾಲದ ಭಾಗ ಮತ್ತು ರೆಕ್ಕೆಗಳ ಕೆಲವು ಅವಶೇಷಗಳು ಮಾತ್ರ ಗುರುತಿಸಲು ಸಾಧ್ಯವಾಗುವಂತೆ ಉಳಿದಿವೆ. ವಿಮಾನ ಪತನವಾದ ರಭಸಕ್ಕೆ ಅದರ ಬಿಡಿಭಾಗಗಳು ರನ್‌ವೇ ಸುತ್ತಮುತ್ತ ನೂರಾರು ಮೀಟರ್‌ಗಳವರೆಗೆ ಚದುರಿಹೋಗಿವೆ. ಇಡೀ ಪ್ರದೇಶವು ಕಪ್ಪು ಹೊಗೆಯಿಂದ ಆವೃತವಾಗಿತ್ತು. ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಿವೆ. ಪ್ರಸ್ತುತ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ವಿಮಾನದ ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹೊರತೆಗೆಯುವ ಕೆಲಸದಲ್ಲಿ ತೊಡಗಿವೆ. ಈ ದುರಂತದಲ್ಲಿ ಅಜಿತ್ ಪವಾರ್ ಮತ್ತು ಇತರ ಐವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋದಲ್ಲಿ ಸ್ಟಂಟ್ ಮಾಡಿದ ವರುಣ್ ಧವನ್​​ಗೆ ದಂಡ – Kannada News | Varun Dhawan Fined for Mumbai Metro Stunt: Viral Video Sparks Safety Debate

‘ಬಾರ್ಡರ್ 2’ ಚಿತ್ರ (Border 2 Movie) ಯಶಸ್ಸು ಕಂಡಿದೆ. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಹೀಗಿರುವಾಗಲೇ ವರುಣ್ ಧವನ್ ಅವರು ಬೇರೆಯದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಶನಿವಾರ, ವರುಣ್ ಧವನ್ ಮುಂಬೈನಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವಿಡಿಯೋ ವೈರಲ್ ಆಗಿದೆ. ಮೆಟ್ರೋದಲ್ಲಿ ಮಾಡಿದ ಸ್ಟಂಟ್‌ನಿಂದಾಗಿ ವರುಣ್ ತೊಂದರೆಗೆ ಸಿಲುಕಿದ್ದಾರೆ. ಅವರಿಗೆ ದಂಡ ಕೂಡ ವಿಧಿಸಲಾಗಿದೆ.

ಮುಂಬೈ ಮೆಟ್ರೋದಲ್ಲಿನ ಹ್ಯಾಂಡಲ್‌ಗಳಲ್ಲಿ ನೇತಾಡುವ ಮೂಲಕ ವರುಣ್ ಧವನ್ ಪುಲ್-ಅಪ್ ಮಾಡಲು ಪ್ರಯತ್ನಿಸಿದರು. ಆ ವಿಡಿಯೋ ವೈರಲ್ ಆಗಿದೆ. ಇದರಿಂದ ಅವರು ವಿವಾದಕ್ಕೆ ಸಿಲುಕಿದರು. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ದೊಡ್ಡ ವಿವಾದಕ್ಕೆ ಸಿಲುಕಿದರು. ಅವರಿಗೆ ದಂಡವನ್ನೂ ವಿಧಿಸಲಾಯಿತು.

ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಅದೇ ವೀಡಿಯೊವನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿ ವರುಣ್ ಧವನ​್​ಗೆ ಕಿವಿಮಾತು ಹೇಳಿದೆ. ವರುಣ್ ಧವನ್ ಅವರನ್ನು ಟ್ಯಾಗ್ ಮಾಡುವ ಮೂಲಕ ಸುರಕ್ಷತಾ ಸಂದೇಶವನ್ನು ಸಹ ನೀಡಿದೆ.

‘ವರುಣ್ ಧವನ್, ದಯವಿಟ್ಟು ಮುಂಬೈ ಮೆಟ್ರೋದಲ್ಲಿ ಈ ಸ್ಟಂಟ್ ಮಾಡಬೇಡಿ. ಸ್ನೇಹಿತರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸುವುದು ಖುಷಿ ನೀಡುತ್ತದೆ ಎಂದು ನಮಗೆ ತಿಳಿದಿದೆ. ಆದರೆ ಈ ಹ್ಯಾಂಡಲ್‌ಗಳನ್ನು ಹಿಡಿದು ನೇತಾಡುವುದು ಸರಿ ಅಲ್ಲ. ಮೆಟ್ರೋದಲ್ಲಿನ ಹ್ಯಾಂಡಲ್‌ಗಳು ಇರೋದು ಪ್ರಯಾಣಿಕರ ಸುರಕ್ಷತೆಗಾಗಿ. ಇಂತಹ ಕೃತ್ಯಗಳು ಅಪಾಯಕಾರಿ ಮಾತ್ರವಲ್ಲ, ಇತರ ಪ್ರಯಾಣಿಕರಿಗೂ ಕಿರಿಕಿರಿ ಉಂಟುಮಾಡಬಹುದು’ ಎಂದು ಮುಂಬೈ ಮೆಟ್ರೋ ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ. ಇದು ಎಲ್ಲೆಡೆ ಚರ್ಚೆಗೆ ನಾಂದಿ ಹಾಡಿತು ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ವರುಣ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಏರಿಕೆ ಕಂಡ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; 2 ದಿನಕ್ಕೆ ಎಷ್ಟು ಕೋಟಿ?

ಈ ಮಧ್ಯೆ, ಮೆಟ್ರೋದಲ್ಲಿ ಪ್ರಯಾಣಿಸುವಾಗ ಮೆಟ್ರೋ ರೈಲಿನ ಹ್ಯಾಂಡಲ್‌ಗೆ ನೇತಾಡಿದ್ದಕ್ಕಾಗಿ ನಟ ವರುಣ್ ಧವನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಕೊನೆಗೂ ವರುಣ್ ಧವನ್‌ಗೆ 500 ರೂ. ದಂಡ ವಿಧಿಸಿದ್ದು, ರೈಲಿನ ಹ್ಯಾಂಡಲ್‌ಗೆ ನೇತಾಡುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link