IPL 2026: ಕನ್ನಡಿಗನ ಪಾಲಾದ ‘ಬೆಸ್ಟ್ ಕ್ಯಾಚ್’ ಪ್ರಶಸ್ತಿ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಕನ್ನಡಿಗ ಮನೀಶ್ ಪಾಂಡೆ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್​ನ 57ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು.

ಆರ್​ಸಿಬಿ ಇನಿಂಗ್ಸ್​ನ 18ನೇ ಓವರ್‌ನಲ್ಲಿ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಎಸೆತವನ್ನು ಟಿಮ್ ಡೇವಿಡ್ ಆಫ್-ಸ್ಟಂಪ್‌ನಿಂದ ಹೊರಗೆ ಬಲವಾಗಿ ಕಟ್ ಮಾಡಿದರು. ಬ್ಯಾಟ್‌ನಿಂದ ಸಿಡಿದ ಚೆಂಡು ಅತಿ ವೇಗವಾಗಿ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ರಾಕೆಟ್‌ನಂತೆ ನುಗ್ಗಿತು.

ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ 36 ವರ್ಷದ ಮನೀಶ್ ಪಾಂಡೆ, ಕೇವಲ ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ಪ್ರತಿಕ್ರಿಯಿಸಿದರು. ತಮ್ಮ ಎಡಭಾಗಕ್ಕೆ ಸಂಪೂರ್ಣವಾಗಿ ಗಾಳಿಯಲ್ಲಿ ಜಿಗಿದು ಒಂದು ಕೈಯಿಂದ ಚೆಂಡನ್ನು ಮೈದಾನಕ್ಕೆ ತಾಗುವ ಕೆಲವೇ ಇಂಚುಗಳ ಮುನ್ನ ಅದ್ಭುತವಾಗಿ ಹಿಡಿದರು.

ಪಾಂಡೆ ಅವರ ಈ ಅಸಾಧ್ಯವಾದ ಕ್ಷೇತ್ರರಕ್ಷಣೆಯನ್ನು ಕಂಡು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಮತ್ತು ಆಟಗಾರರು ದಿಗ್ಭ್ರಮೆಗೊಂಡರು. ಅಷ್ಟೇ ಅಲ್ಲದೆ ಕ್ಯಾಚ್ ಔಟ್ ಆಗಿ ಟಿಮ್ ಡೇವಿಡ್ ಹೊರ ನಡೆಯುತ್ತಿದ್ದಂತೆ ಮನೀಶ್ ಪಾಂಡೆ ಬಳಿ ತೆರಳಿದ ವಿರಾಟ್ ಕೊಹ್ಲಿ ಈ ಅದ್ಭುತ ಫೀಲ್ಡಿಂಗ್​ ಅನ್ನು ಶ್ಲಾಘಿಸಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಇದೇ ಕ್ಯಾಚ್​ಗೆ 2026ರ ಬೆಸ್ಟ್ ಕ್ಯಾಚ್ ಪ್ರಶಸ್ತಿ ಲಭಿಸಿದೆ.

Source link

Leave a Reply

Your email address will not be published. Required fields are marked *