Category Archives: Blog

Your blog category

IPL 2026 Final: ಆರ್​ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್; ಮುಖಾಮುಖಿ ದಾಖಲೆ ಹೇಗಿದೆ?

2026 ರ ಐಪಿಎಲ್ (IPL 2026) ಫೈನಲ್​ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಹೈವೋಲ್ಟೇಜ್ ಕದನ ಭಾನುವಾರ ಸಂಜೆ 7:30 ಕ್ಕೆ ಆರಂಭವಾಗಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನ ನೀಡಿದ್ದು, ಯಾವ ತಂಡಕ್ಕೆ ಟ್ರೋಫಿ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಒಂದೆಡೆ ಆರ್​ಸಿಬಿ ಇದೇ ಗುಜರಾತ್ ತಂಡವನ್ನು ಕ್ವಾಲಿಫೈಯರ್ 1 ರಲ್ಲಿ ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದಿದ್ದರೆ, ಇತ್ತ ಆರ್​ಸಿಬಿ ವಿರುದ್ಧ ಸೋತಿದ್ದ ಗುಜರಾತ್, ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್​ಗೇರಿದೆ. ಹೀಗಾಗಿ ಗುಜರಾತ್​ಗೆ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದ್ದರೆ, ಇತ್ತ ಆರ್​ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ. ಆದ್ದರಿಂದ ಐಪಿಎಲ್‌ನಲ್ಲಿ ಎರಡು ತಂಡಗಳು ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ..

ಮುಖಾಮುಖಿ ದಾಖಲೆ

ಐಪಿಎಲ್ ಇತಿಹಾಸದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಒಟ್ಟು ಒಂಬತ್ತು ಪಂದ್ಯಗಳು ನಡೆದಿವೆ. ಈ 9 ಪಂದ್ಯಗಳಲ್ಲಿ ಆರ್​ಸಿಬಿ ಐದು ಪಂದ್ಯಗಳನ್ನು ಗೆದ್ದಿದ್ದರೆ, ಗುಜರಾತ್ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಇದರರ್ಥ ಉಭಯ ತಂಡಗಳ ಮುಖಾಮುಖಿಯಲ್ಲಿ ನಿಕಟ ಸ್ಪರ್ಧೆ ನಡೆದಿರುವುದನ್ನು ನಾವು ಕಾಣಬಹುದು. ಹೀಗಾಗಿ ಫೈನಲ್ ಪಂದ್ಯದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಆದಾಗ್ಯೂ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ವಿರುದ್ಧ ಗೆದ್ದಿರುವುದು ಆರ್​ಸಿಬಿಯ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆದರೆ ಫೈನಲ್ ಪಂದ್ಯ ಗುಜರಾತ್ ಟೈಟಾನ್ಸ್ ತಂಡದ ತವರು ನೆಲವಾದ ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಗುಜರಾತ್​ಗೆ ತವರಿನ ಲಾಭ ಸಿಗುವ ಆತಂಕ ಆರ್​ಸಿಬಿಗಿದೆ.

ಅಹಮದಾಬಾದ್‌ನಲ್ಲಿ ದಾಖಲೆ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸಮಬಲದ ಹೋರಾಟ ನೀಡಿವೆ. ಈ ಮೈದಾನದಲ್ಲಿ ಎರಡೂ ತಂಡಗಳು ಮೇಲುಗೈ ಸಾಧಿಸಲು ಸಾಧ್ಯವಾಗಿಲ್ಲ. ಈ ಮೈದಾನದಲ್ಲಿ ಎರಡೂ ತಂಡಗಳ ನಡುವೆ ಕೇವಲ ಎರಡು ಐಪಿಎಲ್ ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳಲ್ಲಿ, ಚೇಸಿಂಗ್ ತಂಡವು ಏಕಪಕ್ಷೀಯವಾಗಿ ಗೆದ್ದಿದೆ.

RCB vs GT: ಐಪಿಎಲ್ ಪ್ಲೇಆಫ್‌ನಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಂ ದಾರ್.

ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್ , ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ , ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

17 ವರ್ಷಗಳ ಬಳಿಕ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ

ಬೆಂಗಳೂರು, ಮೇ 30: ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸತತ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರೀಗ ಪಟ್ಟ ತ್ಯಾಗ ಮಾಡಿದ್ದಾರೆ. ಅವರ ನಂತರ ಹೊಸ ನಾಯಕರಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಮುಂಚಿತವಾಗಿ, ಶಾಸಕರು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಯಾರ ಹೆಸರನ್ನು ಸೂಚಿಸುತ್ತದೋ ಅದಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳುವ ಮೂಲಕ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟರು. ಇದರಿಂದಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮನವೊಲಿಸುವ ಸವಾಲು ಎದುರಾಯಿತು. ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸಿದ್ದರಾಮಯ್ಯ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಮಧ್ಯಸ್ಥಿಕೆಯ ನಂತರ, ಶಾಸಕರು ಕೂಡ ಒಪ್ಪಿಗೆ ನೀಡಿದ್ದರಿಂದ ಡಿಕೆ ಶಿವಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಎಲ್​​​ಪಿ ಸಭೆಗೂ ಮುನ್ನವೇ ವಿಧಾನಸೌಧದಲ್ಲಿ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

ಬೆಂಗಳೂರು, ಮೇ 30): ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಇಂದು (ಮೇ 30) ತೀವ್ರ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆಗೂ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು… ರಾಜಕೀಯದ ಪ್ರಮುಖ ನಿರ್ಧಾರಗಳು ಹೊರಬೀಳುವ ಮುನ್ನ ಡಿ.ಕೆ. ಶಿವಕುಮಾರ್ ಅವರು ನೊಣವಿನಕೆರೆ ಅಜ್ಜಯ್ಯ ನೀಡಿದ ಸಲಹೆ ಸೂಚನೆಗಳನ್ನ ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. ಹೌದು… ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿದ್ದ ಆಪ್ತರು, ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಹೊರಗೆ ಕಳುಹಿಸಿ, ಸಂಪೂರ್ಣವಾಗಿ ಏಕಾಂಗಿಯಾಗಿ ಈ ಪೂಜೆಯನ್ನು ನೆರವೇರಿಸಿದರು. ಯಾವುದೇ ಗದ್ದಲವಿಲ್ಲದೆ, ಏಕಾಗ್ರತೆಯಿಂದ ದೇವತಾ ಆರಾಧನೆಯಲ್ಲಿ ತೊಡಗಿಸಿಕೊಳ್ಳಲು ಅವರು ಬಯಸಿದ್ದರಿಂದ ಕೊಠಡಿಯ ಬಾಗಿಲು ಮುಚ್ಚಿ ರಹಸ್ಯವಾಗಿ ಪ್ರಾರ್ಥನೆ ಸಲ್ಲಿಸಿದರು.

Source link

ಟಿಕೆಟ್ ದರ ಹೆಚ್ಚಳ: ತೆಲಂಗಾಣ ಸರ್ಕಾರಕ್ಕೆ ಹಾಕಿದ್ದ ಅರ್ಜಿ ಹಿಂಪಡೆದ ‘ಪೆದ್ದಿ’, ಕಾರಣವೇನು?

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಅದ್ಧೂರಿಯಾಗಿ ಮಾಡುತ್ತಿದೆ. ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್, ಜಾನ್ಹವಿ ಸಹ ನಟಿಸಿರುವ ಈ ಸಿನಿಮಾಕ್ಕೆ ಭಾರಿ ಬಜೆಟ್ ಅನ್ನು ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಹೂಡಿದೆ. ಇದೀಗ ಸಿನಿಮಾ ಬಿಡುಗಡೆ ದಿನ ಆದಷ್ಟು ಹೆಚ್ಚು ಗಳಿಕೆ ಮಾಡಲೆಂದು ಸಿನಿಮಾದ ಪ್ರೀಮಿಯರ್ ಶೋ, ಫ್ಯಾನ್ಸ್ ಶೋಗಳನ್ನು ಆಯೋಜಿಸಲಾಗಿದ್ದು, ಸಿನಿಮಾದ ಟಿಕೆಟ್ ದರವನ್ನು ಸಹ ದೊಡ್ಡ ಮಟ್ಟದಲ್ಲಿ ಹೆಚ್ಚಿಸಲಾಗುತ್ತಿದೆ.

ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗಿರುವ ಆಂಧ್ರ ಪ್ರದೇಶದಲ್ಲಿ ಸುಲಭವಾಗಿ ಸರ್ಕಾರದ ಅನುಮತಿ ಪಡೆದುಕೊಂಡು ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚು ಮಾಡಲಾಗಿದೆ. ಅಂತೆಯೇ ತೆಲಂಗಾಣ ಸರ್ಕಾರಕ್ಕೂ ಸಹ ಸಿನಿಮಾ ಟಿಕೆಟ್ ದರ ಹೆಚ್ಚಿಸುವಂತೆ ‘ಪೆದ್ದಿ’ ಚಿತ್ರತಂಡ ಅರ್ಜಿ ಹಾಕಿಕೊಂಡಿತ್ತು. ಆದರೆ ಇದೀಗ ಖುದ್ದು ಚಿತ್ರತಂಡವೇ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದೆ.

ಸಿನಿಮಾ ಟಿಕೆಟ್ ಹೆಚ್ಚಳದ ಬಗ್ಗೆ ತೆಲಂಗಾಣ ಹೈಕೋರ್ಟ್ ಈ ಹಿಂದೆ ಕೆಲವು ಬಾರಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್ ದರ ಹೆಚ್ಚಿಸಲು ಅನುಮತಿ ಕೊಡಬಾರದು ಎಂದಿತ್ತು. ಇದೀಗ ‘ಪೆದ್ದಿ’ ಸಿನಿಮಾ ತಂಡವು ಸರ್ಕಾರಕ್ಕೆ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕಾಗಿ ಮನವಿ ಸಲ್ಲಿಸುವ ಜೊತೆಗೆ ನ್ಯಾಯಾಲಯಕ್ಕೂ ಸಹ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಈಗಾಗಲೇ ಕೆಲವಾರು ಸಿನಿಮಾಗಳು ಇದೇ ವಿಷಯವಾಗಿ ಅರ್ಜಿ ಸಲ್ಲಿಸಿ, ಅವುಗಳ ಅರ್ಜಿಗಳು ಇತ್ಯರ್ಥ ಆಗದೇ ಇರುವ ಕಾರಣ ಹಾಗೂ ಕೆಲ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಸಿಗದ ಕಾರಣ. ಕೋರ್ಟ್​​ನಲ್ಲಿ ವೃಥಾ ಸಮಯ ವ್ಯರ್ಥ ಮಾಡುವುದು ಬೇಡವೆಂದು ನಿರ್ಧರಿಸಿ ಅರ್ಜಿಯನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

ತೆಲಂಗಾಣ ರಾಜ್ಯದಲ್ಲಿ ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಸಾಕಷ್ಟು ವಿರೋಧ ಮೊದಲಿನಿಂದಲೂ ಇದೆ. ಖುದ್ದು ಸಿಎಂ ರೇವಂತ್ ರೆಡ್ಡಿ ಅವರೇ ಟಿಕೆಟ್ ದರ ಹೆಚ್ಚಳವನ್ನು ಪರೋಕ್ಷವಾಗಿ ವಿರೋಧಿಸಿದ್ದರು. ಜೊತೆಗೆ ರಾಜ್ಯ ಹೈಕೋರ್ಟ್ ಸಹ ಟಿಕೆಟ್ ದರ ಹೆಚ್ಚಳದ ಬಗ್ಗೆ ಅಸಮಾಧಾನ ಹೊರಹಾಕಿತ್ತು. ಇನ್ನು ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಬಾರದು ಎಂದು ತೆಲಂಗಾಣ ರಾಜ್ಯ ಪ್ರದರ್ಶಕರ ಸಂಘವು ಸರ್ಕಾರಕ್ಕೆ ಪತ್ರವನ್ನೂ ಸಹ ಬರೆದು ಒತ್ತಾಯ ಮಾಡಿತ್ತು. ಇದೆಲ್ಲದರ ನಡುವೆ ಇದೀಗ ಖುದ್ದು ‘ಪೆದ್ದಿ’ ಚಿತ್ರತಂಡವೇ ಅರ್ಜಿಯನ್ನು ಹಿಂಪಡೆದು ಟಿಕೆಟ್ ದರ ಹೆಚ್ಚಳದ ಆಸೆಯನ್ನು ಕೈಬಿಟ್ಟಿದೆ.

‘ಪೆದ್ದಿ’ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದು, ಸಿನಿಮಾನಲ್ಲಿ ರಾಮ್ ಚರಣ್, ಕ್ರಿಕೆಟ್ ಆಟಗಾರನಾಗಿ, ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್, ಕುಸ್ತಿ ಹೇಳಿಕೊಡುವ ಗುರುವಾಗಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ಸಿನಿಮಾದ ನಾಯಕಿ. ಶ್ರುತಿ ಹಾಸನ್ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತವಿದೆ. ಸಿನಿಮಾದ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಘೋರ ದುರಂತ: ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿ

ಧಾರವಾಡ, ಮೇ 30: ಬಿಸಿಲಿನ ಬೇಗೆಯಿಂದ ಬಸವಳಿದು ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು (Boys) ಮುಳುಗಿ ದುರ್ಮರಣ (death) ಹೊಂದಿರುವಂತಹ ದಾರುಣ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ. ಮೃತರನ್ನು ಸಿಂಗನಹಳ್ಳಿ ಗ್ರಾಮದ ನಿವಾಸಿಗಳಾದ ಅಬ್ಬಾಸ್ ವಟ್ನಾಳ್ (12), ಅಸ್ಲಂ ವಟ್ನಾಳ್ (10) ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸುಭಾನಿ ಬಾಗೋಜಿಕೊಪ್ಪ (10) ಎಂದು ಗುರುತಿಸಲಾಗಿದೆ. ಗದಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರ ದುರ್ಮರಣ
  • ಮುಗಿಲು‌ ಮುಟ್ಟಿದ ಕುಟುಂಬಸ್ಥರ ಆಕ್ರಂದನ
  • ಗದಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ನಡೆದಿದ್ದೇನು?

ಬೇಸಿಗೆಯ ಕಡು ಬಿಸಿಲಿನ ತಾಪ ತಾಳಲಾರದೆ ಮೂವರು ಅಪ್ರಾಪ್ತ ಬಾಲಕರು ಧಾರವಾಡ ತಾಲೂಕಿನ ಸಿಂಗನಹಳ್ಳಿ ಬಳಿಯ ಕೆರೆಯಲ್ಲಿ ಈಜಲು ಹೋಗಿದ್ದಾರೆ. ಆದರೆ ಈ ವೇಳೆ ಕೆರೆಯಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. ಮೃತರಲ್ಲಿ ಅಬ್ಬಾಸ್ ಮತ್ತು ಅಸ್ಲಂ ಸಹೋದರರು. ಸದ್ಯ ಮೂವರು ಬಾಲಕರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಹೊರತೆಗೆದಿದ್ದಾರೆ.

ಇದನ್ನೂ ಓದಿ: ಭಟ್ಕಳ ದುರಂತ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ

ಇನ್ನು ಘಟನಾ ಸ್ಥಳಕ್ಕೆ ಧಾರವಾಡ ಎಸ್​​ಪಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲಿಸಿದರು. ಮೃತ ಬಾಲಕರ ದೇಹಗಳನ್ನು ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಸಿಂಗನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ನಿಯಂತ್ರಣ ತಪ್ಪಿ ಡಿಕ್ಕೆ ಹೊಡೆದ ಟಾಟಾ ಏಸ್​: ಇಬ್ಬರು ಪಾದಚಾರಿಗಳು ಸಾವು

ನಿಯಂತ್ರಣ ತಪ್ಪಿದ ಟಾಟಾ ಏಸ್​​ ವಾಹನಕ್ಕೆ ಇಬ್ಬರು ಪಾದಚಾರಿಗಳು ಬಲಿಯಾಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಬಸ್ ನಿಲ್ದಾಣದ ಬಳಿ ತಡರಾತ್ರಿ ನಡೆದಿದೆ. ನವೀನ್ (18) ಮತ್ತು ನಕುಲ್ (17)ಮೃತ ದುರ್ದೈವಿಗಳು. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೀಬರ್ಡ್ ಬಸ್ ಪಲ್ಟಿ: ಓರ್ವ ಸಾವು, 21 ಪ್ರಯಾಣಿಕರಿಗೆ ಗಾಯ

ಗೌರಿಬಿದನೂರಿಂದ ಮಧುಗಿರಿಯತ್ತ ತೆರಳುತಿದ್ದ ಟಾಟಾ ಏಸ್​​ ವಾಹನ ನಿಯಂತ್ರಣ ತಪ್ಪಿ ಇಬ್ಬರು ಪ್ರಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪಾದಚಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಪಕ್ಕದಲ್ಲೇ ಇದ್ದ ಹೋಟೆಲ್​​​ಗೂ ಟಾಟಾ ಏಸ್ ವಾಹನ ನುಗ್ಗಿದ್ದು, ಹೋಟೆಲ್ ಒಳಗಿದ್ದ ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ ದಾಖಲೆ ಸರಿಗಟ್ಟಿದ ಸಾಯಿ ಸುದರ್ಶನ್

Source link

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ರಿಸಲ್ಟ್​​ ಪ್ರಕಟ: ಶೇ. 62 ಫಲಿತಾಂಶ

ಬೆಂಗಳೂರು, ಮೇ 30: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 49,351 ವಿದ್ಯಾರ್ಥಿಗಳ ಪೈಕಿ 31,080 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.62 ಫಲಿತಾಂಶ ದಾಖಲಾಗಿದೆ. ಮೇ 18ರಿಂದ 25ರ ವರೆಗೆ 358 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ-2ನ್ನು ನಡೆಸಲಾಗಿತ್ತು. ವಿಶೇಷ ಅಂದರೆ ಪರೀಕ್ಷೆ-2ರಲ್ಲಿ ಬರೋಬ್ಬರಿ 8,385 ಶಾಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಯಶಸ್ವಿಯಾಗಿ ಉತ್ತಮಪಡಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ
  • ಮೇ 18ರಿಂದ 25ರ ವರೆಗೆ ನಡೆದಿದ್ದ ಪರೀಕ್ಷೆ
  • 49,351 ವಿದ್ಯಾರ್ಥಿಗಳ ಪೈಕಿ 31,080 ಮಂದಿ ಪಾಸ್​

2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್ 23ರಂದು ಪ್ರಕಟವಾಗಿದ್ದು, ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಕ್ಕಳು ಪಾಸ್​​ ಆಗಿದ್ದರು. ಶೇ 96.18ರಷ್ಟು ಬಾಲಕಿಯರು, ಶೇ 91.94ರಷ್ಟು ಬಾಲಕರು ಉತ್ತೀರ್ಣರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿತ್ತು. ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನ, ಉತ್ತರ ಕನ್ನಡ 3ನೇ ಸ್ಥಾನ (ಶೇ 98.09) ಮತ್ತು ಹಾಸನ 4ನೇ ಸ್ಥಾನ (ಶೇ 97.51) ಗಳಿಸಿದ್ದವು.

ಇದನ್ನೂ ಓದಿ: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ; ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ

ಈ ಬಾರಿ ಇಲ್ಲ ಮೂರನೇ ಪರೀಕ್ಷೆ

ಈ ಬಾರಿ ಎಸ್ಎಸ್​ಎಲ್​​ಸಿ ಮೂರನೇ ಪರೀಕ್ಷೆ ಇರುವುದಿಲ್ಲ. ಈ ಬಗ್ಗೆ ಏಪ್ರಿಲ್ 23ರಂದು ನಡೆದ ಸುದ್ದಿಗೋಷ್ಠಿಯಲ್ಲಿಯೇ ಅಂದಿನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದರು. SSLC ಪರೀಕ್ಷೆ ಒಂದರಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹರಿದ ಬಟ್ಟೆಯ ಗುಡಿಸಲೇ ಇವರ ಅರಮನೆ; ಕತ್ತಲ ಕೂಪದಲ್ಲಿ ಹಕ್ಕಿಪಿಕ್ಕಿ ಸಮುದಾಯ

ಹಕ್ಕಿಪಿಕ್ಕಿ ಸಮುದಾಯ
Image Credit source: tv9 kannada

ಬೀದರ್​, ಮೇ 30: ದಶಕಗಳಿಂದ ಮನೆಯಿಲ್ಲದೆ ಗುಡಿಸಲಿನಲ್ಲಿಯೇ ಹಕ್ಕಿಪಿಕ್ಕಿ (Hakki-Pikki) ಜನಾಂಗ ವಾಸಮಾಡುತ್ತಿದೆ. ಚಳಿಗಾಲ, ಮಳೆಗಾಲ, ಬೆಸಿಗೆ ಕಾಲದಲಿಯೂ ಗುಡಿಸಿಲೇ ಇವರಿಗೆ ಆಸರೆ. ರಾಜಕಾರಣಿಗಳು ವೋಟ್ ಹಾಕಿಸಿಕೊಳ್ಳುವುದಕ್ಕೆ ಮಾತ್ರ ಇವರನ್ನ ಸೀಮಿತಗೊಳಿಸಿದ್ದಾರೆ. ತಲೆಗೊಂದು ಸೂರಿಲ್ಲದೇ, ವಿದ್ಯುತ್ ಬೆಳಕನ್ನೇ ಕಾಣದೆ ಪ್ರಾಣಿಗಳಿಗಿಂತ ಕಡೆಯಾಗಿ ಜೀವಿಸುತ್ತಿರುವ ಹಕ್ಕಿಪಿಕ್ಕಿ ಜನಾಂಗ ಕರುಣಾಜನಕ ಸ್ಥಿತಿ ಇದು.

ಮುಖ್ಯಾಂಶಗಳು

  • ಅರ್ಧ ಶತಮಾನದ ಬದುಕಿಗೆ ಸಿಕ್ಕಿಲ್ಲ ಒಂದು ಸೂರು!
  • ಕತ್ತಲಲ್ಲೇ ಕಣ್ಣೀರಿಡುತ್ತಿದೆ ಹಕ್ಕಿಪಿಕ್ಕಿ ಜನಾಂಗ
  • 50 ವರ್ಷಗಳಿಂದ 200ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲಲ್ಲೇ ವಾಸ

ಇನ್ನೂರಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳು ದಶಕಗಳಿಂದ ಸೂರಿಲ್ಲದೆ ಹಾದಿಬದಿಯ ಗುಡಿಸಲುಗಳಲ್ಲೇ ಕಣ್ಣೀರಿನ ಬದುಕು ಸಾಗಿಸುತ್ತಿವೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಇಂತಹದ್ದೊಂದು ದುಸ್ಥಿತಿ ಇರುವುದು ಬೇರೆ ಎಲ್ಲೋ ಅಲ್ಲ, ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ.

ಇದನ್ನೂ ಓದಿ: ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?: ಸ್ಕ್ಯಾನಿಂಗ್​​ ವರದಿ ಕಂಡು ರೋಗಿಗೆ ಶಾಕ್​​!

ಬೀದರ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಹರಿದುಹೋದ ಹಳೇ ಬಟ್ಟೆಗಳನ್ನೇ ಹೊದಿಸಿ ಸಣ್ಣ ಸಣ್ಣ ಗುಡಿಸಲುಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ಇವರು ವಾಸಿಸುತ್ತಿದ್ದಾರೆ. ಪ್ರತಿ ರಾತ್ರಿಯನ್ನೂ ಕತ್ತಲಲ್ಲೇ ಕಳೆಯಬೇಕಾದ ಅನಿವಾರ್ಯತೆ ಇದೆ. ಪೌಷ್ಟಿಕಾಂಶದ ಕೊರತೆಯಿಂದಾಗಿ ಇಲ್ಲಿನ ಅದೆಷ್ಟೋ ಮಕ್ಕಳು ರೋಗಗ್ರಸ್ತರಾಗುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲೆಯ ಯಾವೊಬ್ಬ ರಾಜಕಾರಣಿಯೂ ಇವರ ಕಡೆ ಮುಖ ಮಾಡಿಲ್ಲ.

ದೇವಿ ಮೂರ್ತಿ ಹೊತ್ತು ಭಿಕ್ಷೆ ಬೇಡುವುದೇ ಕಾಯಕ

ತಲೆಯ ಮೇಲೆ ಮರಗೆಮ್ಮ ದೇವಿಯ ಮೂರ್ತಿಯನ್ನು ಹೊತ್ತು ಭಿಕ್ಷೆ ಬೇಡುವುದೇ ಈ ಸಮುದಾಯದ ದಿನನಿತ್ಯದ ಕಾಯಕವಾಗಿದೆ. ಬಡತನ ಬೆನ್ನಿಗಟ್ಟಿದ್ದರಿಂದ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿರಾಗಿದ್ದಾರೆ. ಈ ಸಮುದಾಯದಲ್ಲಿ ಯಾರೊಬ್ಬರು ಕೂಡ ಕಲಿತ ಉದಾಹರಣೆಯಿಲ್ಲ. ಹೀಗಾಗಿ ಸರಕಾರದ ಸೌಲತ್ತುಗಳು ಇವರಿಗೆ ಮರಿಚಿಕೆಯಾಗಿವೆ. ವೋಟ್​ ಹಾಕಿಸಿಕೊಳ್ಳುವ ಉದ್ದೇಶದಿಂದ ಇವರಿಗೆ ಜನ ಪ್ರತಿನಿಧಿಗಳು ವೋಟರ್​ ಐಡಿಯನ್ನ ಮಾಡಿಕೊಟ್ಟಿದ್ದಾರೆ. ಆದರೆ ಇಲ್ಲಿಯವರೆಗೂ ಅವರಿಗೆ ಮನೆಗಳನ್ನ ಕಟ್ಟಿಸಿಕೊಟ್ಟಿಲ್ಲ. ಹೀಗಾಗಿ ನಾವು ಗುಡಿಸಲಿನಲ್ಲಿಯೇ ವಾಸ ಮಾಡುವಂತಾಗಿದೆ ಎಂದು ಪಿಂಟಮ್ಮ ಎಂಬುವವರು ಅಳಲುತೋಡಿಕೊಂಡರು.

ಈ ಜನರ ದುಸ್ಥಿತಿ ಇಂದು ನಿನ್ನೆಯದಲ್ಲ, ಬರೋಬ್ಬರಿ 50 ವರ್ಷಗಳಿಂದ ಇವರು ಇದೇ ನರಕಸದೃಶ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮನುಷ್ಯರು ಇರಲಿ, ಪ್ರಾಣಿಗಳೂ ಬದುಕಲಾರದಂತಹ ಜಾಗದಲ್ಲಿ ಇವರು ವಾಸಿಸುತ್ತಿದ್ದಾರೆ. ಕುಡಿಯಲು ಶುದ್ಧ ನೀರಿಲ್ಲ, ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆಯೂ ಇಲ್ಲ. ನಿತ್ಯವೂ ಪಕ್ಕದಲ್ಲೇ ಹರಿಯುವ ಚರಂಡಿಯ ದುರ್ವಾಸನೆ ಸಹಿಸಿಕೊಂಡೇ ಬದುಕಬೇಕಿದೆ. ದುರ್ವಾಸನೆ ಹಾಗೂ ಕಲುಷಿತ ವಾತಾವರಣದಿಂದಾಗಿ ಇಲ್ಲಿನ ಜನ ನಿರಂತರವಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಸೂರು ಕಲ್ಪಿಸದ ಜನಪ್ರತಿನಿಧಿಗಳು

ಇಲ್ಲಿನ ಬಹುತೇಕ ಕುಟುಂಬಗಳ ಹೆಸರು ಪಡಿತರ ಚೀಟಿ ಹಾಗೂ ಮತದಾರರ ಪಟ್ಟಿಯಲ್ಲಿದೆ. ಪ್ರತಿಯೊಂದು ಚುನಾವಣೆಯಲ್ಲೂ ಇವರು ತಪ್ಪದೇ ಮತ ಚಲಾಯಿಸುತ್ತಾ ಬಂದಿದ್ದಾರೆ. ಆದರೆ ಈವರೆಗೂ ಇವರಿಗೆ ಒಂದು ಸೂರು ಕಲ್ಪಿಸಲು ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಮುಂದಾಗಿಲ್ಲ. ಈ ವರ್ಷ ಮನೆ ಸಿಗಬಹುದು, ಮುಂದಿನ ವರ್ಷ ಸಿಗಬಹುದು ಎಂದು ಕಾಯುತ್ತಲೇ 50 ವರ್ಷಗಳು ಕಳೆದುಹೋಗಿವೆ. ಕೆಲವರಂತೂ ಇದೇ ಗುಡಿಸಲಿನಲ್ಲಿ ಹುಟ್ಟಿ, ಬೆಳೆದು, ಇಹಲೋಕ ತ್ಯಜಿಸಿದ್ದಾರೆ. ಈಗ ಅವರ ಮುಂದಿನ ಪೀಳಿಗೆಯೂ ಅದೇ ಆಸೆಯ ಕಣ್ಣುಗಳಿಂದ ಸೂರು ಸಿಗಬಹುದೆಂಬ ನಿರೀಕ್ಷೆಯಲ್ಲಿದೆ. ಇನ್ನು ಸ್ವಂತ ನಿವೇಶನ ಹಾಗೂ ವಸತಿಗಾಗಿ ಪುರಸಭೆಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇವರ ಹೋರಾಟಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದು ಇವರ ಪರವಾಗಿ ಧ್ವನಿ ಎತ್ತಿದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ತೈಲ ಬೆಲೆ ಏರಿಕೆ ಬಿಸಿ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರಳಿದ ರೈತರು; ಟ್ರ್ಯಾಕ್ಟರ್ ಬದಲಾಗಿ ಎತ್ತುಗಳಿಂದ ಉಳುಮೆ

ಸರ್ಕಾರ ಅದೆಷ್ಟೇ ಯೋಜನೆಗಳನ್ನ ತಂದರು ಅದು ಉಳ್ಳವರ ಪಾಲಾಗುತ್ತಿದ್ದು, ಅತೀ ಹಿಂದೂಳಿದ ಜನಾಂಗಕ್ಕೆ ಮಾತ್ರ ಅದರ ಪ್ರಯೋಜನವಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಒಂದೇ ಸ್ಥಳದಲ್ಲಿ ಹತ್ತಾರು ವರ್ಷಗಳಿಂದ ಬದುಕುತ್ತಿರುವ ಈ ಜನಾಂಗಕ್ಕೆ ಇವರೆಗೂ ಸರ್ಕಾರ ಯಾವ ಸೌಲಭ್ಯಗಳು ಕೊಡದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಂದಿನ 48 ಗಂಟೆಗಳ ಕಾಲ ಈ ಜಿಲ್ಲೆಗಳ ಜನರೇ ಎಚ್ಚರ!: ಹವಾಮಾನ ಇಲಾಖೆಯಿಂದ ಹಠಾತ್ ‘ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು, ಮೇ.30: ರಾಜ್ಯದ ಹವಾಮಾನದಲ್ಲಿ ಏಕಾಏಕಿ ಪ್ರಮುಖ ಬದಲಾವಣೆಯಾಗಿದ್ದು, ಇಂದಿನಿಂದ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮೇ 30 ಮತ್ತು ಮೇ 31 ರಂದು ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.

ಹವಾಮಾನ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಿಡಿಲು ಮತ್ತು ಬಿರುಗಾಳಿ ಸಹಿತ 64.5 ಮಿಲಿಮೀಟರ್‌ನಿಂದ 115.5 ಮಿಲಿಮೀಟರ್‌ ವರೆಗೆ ಭಾರೀ ಪ್ರಮಾಣದ ಮಳೆಯಾಗುವ ದಟ್ಟ ಸಾಧ್ಯತೆಗಳಿವೆ. ಹಠಾತ್ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗುವ ಆತಂಕ ಎದುರಾಗಿದೆ.

ಧಾರಾಕಾರ ಮಳೆಯ ಮುನ್ಸೂಚನೆ ಇರುವ ಕಾರಣ ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಮಳೆ ಮತ್ತು ಗಾಳಿ ಇರುವ ಸಮಯದಲ್ಲಿ ಮರಗಳ ಕೆಳಗೆ ಹಾಗೂ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಹವಾಮಾನದ ಏರುಪೇರಿನ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜಾಗಿರಲು ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಅವರಿಗೆ ಅಧಿಕಾರದ ಚಿಂತೆ ನಮಗೆ ಮಳೆಗೆ ಬೆಂಗಳೂರು ರಸ್ತೆಯ ಚಿಂತೆ; ಮಂತ್ರಿಗಿರಿಗಾಗಿ ಲಾಬಿ ಮತ್ತೆ ಮಾಡಿ ಮೊದಲು ನಮ್ಮ ಕಷ್ಟ ನೋಡಿ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹಗಲಿಡೀ ಭಾಗಶಃ ಮೋಡ ಕವಿದ ವಾತಾವರಣ ಇದೆ. ರಾತ್ರಿಯ ವೇಳೆಗೆ ಆಕಾಶವು ಸಂಪೂರ್ಣವಾಗಿ ಕಪ್ಪು ಮೋಡಗಳಿಂದ ಆವೃತವಾಗಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ವೀಕೆಂಡ್ ಆರಂಭದ ಹೊತ್ತಿನಲ್ಲೇ ವರುಣನ ಆರ್ಭಟ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ನಗರದ ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆಗೆ ಅತ್ಯಂತ ಅಪಾಯಕಾರಿ ಎನ್ನಬಹುದಾದ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸುವ ಬಲವಾದ ಗಾಳಿ ಅಪ್ಪಳಿಸಲಿದೆ. ಬಿರುಗಾಳಿಯ ತೀವ್ರತೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳುವ ಆತಂಕ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ. ಸಂಜೆ ಕಚೇರಿ ಮುಗಿಸಿ ಮನೆಗೆ ಮರಳುವ ವಾಹನ ಸವಾರರು ಜಾಗರೂಕರಾಗಿರಬೇಕು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:17 pm, Sat, 30 May 26

Source link

CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 30: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸೌಧದ ಬಾಗಿಲಿಗೆ ನಮಸ್ಕರಿಸಿ ಒಳಗೆ ತೆರಳಿದ್ದಾರೆ. ಅವರ ಆಗಮನದ ವೇಳೆ ವಿಧಾನಸೌಧದ ಆವರಣದಲ್ಲಿ ಭಾರೀ ಜನಸಂದಣಿ ಇತ್ತು. ಜನರನ್ನು ಉದ್ದೇಶಿಸಿಯೂ ಡಿಕೆಶಿ ಕೈಮುಗಿದ ದೃಶ್ಯ ಕಂಡುಬಂತು. ಖಾಸಗಿ ಕಾರಿನಲ್ಲಿಯೇ ಬಂದ ಡಿಕೆಶಿ ಅವರನ್ನು ನಾಯಕರು ಬರಮಾಡಿಕೊಂಡರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link