Category Archives: Blog

Your blog category

ಗಿಲ್ಲಿ ಫ್ಯಾನ್ಸ್ ಹೊಡೆದು ಸಾಯಿಸ್ತೀನಿ ಅಂತ ಬೆದರಿಕೆ ಹಾಕ್ತಿದ್ದಾರೆ ಎಂದ ಸತೀಶ್ – Kannada News | Gilli Fans Giving Me a Death Threat Says Dog Satish

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳಾದ ಗಿಲ್ಲಿ ನಟ ಹಾಗೂ ಸತೀಶ್ ಮಧ್ಯೆ ಕಿರಿಕ್​​ಗಳು ಆಗಿವೆ. ಬಿಗ್ ಬಾಸ್ ಮುಗಿದರೂ ಕಿರಿಕ್​​ಗಳು ಮುಂದುವರಿದಿವೆ. ಸತೀಶ್ ಅವರು ಒಂದು ಗಂಭೀರ ಆರೋಪ ಮಾಡಿದ್ದಾರೆ. ‘ನನ್ನ ಸಾಯಿಸೋದಾಗಿ ಗಿಲ್ಲಿ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್​ ಆರಂಭಕ್ಕೂ 3 ದಿನ ಮೊದಲು ಭಾರತಕ್ಕೆ ಸೌತ್ ಆಫ್ರಿಕಾ ಎದುರಾಳಿ – Kannada News | India To Face South Africa In T20 World Cup 2026 Warm Up Match

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 7 ರಿಂದ ಶುರುವಾಗಲಿರುವ ಚುಟುಕು ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಯುಎಸ್​ಎ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಏಕೈಕ ಅಭ್ಯಾಸ ಪಂದ್ಯವಾಡಲಿದೆ. ಈ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಎದುರಾಳಿ ಸೌತ್ ಆಫ್ರಿಕಾ.

ಫೆಬ್ರವರಿ 4 ರಂದು ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಅಭ್ಯಾಸ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದ ಮೂಲಕ ಭಾರತ ತಂಡವು ಟಿ20 ವಿಶ್ವಕಪ್​ಗಾಗಿ ಸಕಲ ರೀತಿಯಲ್ಲೂ ಸಜ್ಜಾಗಲಿದೆ.

ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ಬಳಿಕ ಟೀಮ್ ಇಂಡಿಯಾ ಫೆಬ್ರವರಿ 7 ರಂದು ಯುಎಸ್​ಎ ತಂಡದ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಭಾರತ ತಂಡ ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಫೆಬ್ರವರಿ 15 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.

ಹಾಗೆಯೇ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್​ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ನಾಲ್ಕು ಪಂದ್ಯಗಳ ಬಳಿಕ ಸೂಪರ್-8 ಸುತ್ತಿನ ಪಂದ್ಯಗಳು ಶುರುವಾಗಲಿದೆ.

ಟಿ20 ವಿಶ್ವಕಪ್ 2026 ಭಾರತದ ವೇಳಾಪಟ್ಟಿ:

  1. ಫೆಬ್ರವರಿ 7: ಭಾರತ vs ಯುಎಸ್​​ಎ-  (ಮುಂಬೈ)
  2. ಫೆಬ್ರವರಿ 12: ಭಾರತ vs  ನಮೀಬಿಯಾ- (ದೆಹಲಿ)
  3. ಫೆಬ್ರವರಿ 15: ಭಾರತ vs ಪಾಕಿಸ್ತಾನ್-  (ಕೊಲಂಬೊ)
  4. ಫೆಬ್ರವರಿ 18: ಭಾರತ vs ನೆದರ್​ಲೆಂಡ್ಸ್-​​ (ಅಹಮದಾಬಾದ್)

ಈ ನಾಲ್ಕು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ 4 ಗ್ರೂಪ್​ಗಳ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಳಿಕ ಸೂಪರ್-8 ಹಂತದ ಮುಖಾಮುಖಿ ಶುರುವಾಗಲಿದೆ. ಸೂಪರ್-8 ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್​​ಗೆ ಅರ್ಹತೆ ಪಡೆಯಲಿದೆ.

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇದನ್ನೂ ಓದಿ: ಸೋಲಿನ ನಡುವೆಯೂ RCB ತಂಡದ ಭರ್ಜರಿ ದಾಖಲೆ

ಟಿ20 ವಿಶ್ವಕಪ್​ನ ತಂಡಗಳ 4 ಗ್ರೂಪ್​ಗಳು:

  • ಗ್ರೂಪ್- 1
  • ಭಾರತ
  • ಪಾಕಿಸ್ತಾನ್
  • ಯುಎಸ್​ಎ
  • ನಮೀಬಿಯಾ
  • ನೆದರ್​ಲೆಂಡ್ಸ್

___________________

  • ಗ್ರೂಪ್-2
  • ಆಸ್ಟ್ರೇಲಿಯಾ
  • ಶ್ರೀಲಂಕಾ
  • ಝಿಂಬಾಬ್ವೆ
  • ಐರ್ಲೆಂಡ್
  • ಒಮಾನ್

___________________

  • ಗ್ರೂಪ್-3
  • ಇಂಗ್ಲೆಂಡ್
  • ವೆಸ್ಟ್ ಇಂಡೀಸ್
  • ಇಟಲಿ
  • ಸ್ಕಾಟ್ಲೆಂಡ್
  • ನೇಪಾಳ

___________________

  • ಗ್ರೂಪ್-4
  • ಸೌತ್ ಆಫ್ರಿಕಾ
  • ನ್ಯೂಝಿಲೆಂಡ್
  • ಅಫ್ಘಾನಿಸ್ತಾನ್
  • ಯುಎಇ
  • ಕೆನಡಾ

___________________

Source link

ಮುಂದಿನ ಶೈಕ್ಷಣಿಕ ವರ್ಷಕ್ಕೆ 10ಕ್ಕೂ ಹೆಚ್ಚು ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ – Kannada News | Karnataka Govt to Recruit 10,800 Teachers, Boost Smart Schools says Madhu bangarappa

ಮುಂದಿನ ಶೈಕ್ಷಣಿಕ ವರ್ಷಕ್ಕೆ 10ಕ್ಕೂ ಹೆಚ್ಚು ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ಜನವರಿ 27:  ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುನ್ನ ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 10,800 ಶಿಕ್ಷಕರ (Teacher recruitment) ನೇಮಕಾತಿ ಮಾಡುವ ಚಿಂತನೆ ನಡೆಸಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸೋಮವಾರ ತಿಳಿಸಿದ್ದಾರೆ.

ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಬಲಪಡಿಸಲು ಸ್ಮಾರ್ಟ್​ ಕ್ಲಾಸ್

ಶಿಕ್ಷಕರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸರ್ಕಾರವು ಈಗಾಗಲೇ 14,499 ಪೂರ್ಣಾವಧಿ ಶಿಕ್ಷಕರನ್ನು ನೇಮಕ ಮಾಡಿದ್ದು, ಮೊದಲ ಬಾರಿಗೆ 51,000 ಅತಿಥಿ ಶಿಕ್ಷಕರನ್ನು ಸಹ ನೇಮಕ ಮಾಡಿದೆ ಎಂದು ಅವರು ಹೇಳಿದರು. ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮಧು ಬಂಗಾರಪ್ಪ,  ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ 5,000 ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳು ಹಾಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು. ಈ ಯೋಜನೆಗಳಿಗೆ ಸರ್ಕಾರವು 160 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ ಎಂದು ಅವರು ಮಾಹಿತಿ ನೀಡಿದರು.

‘ಒನ್ ಡಿಸ್ಟ್ರಿಕ್ಟ್, ಒನ್ ಡೆಸ್ಟಿನೇಷನ್’ ಮಧು ಬಂಗಾರಪ್ಪ

ಇದೇ ವೇಳೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಗೂಡವಿ ಪಕ್ಷಿಧಾಮವನ್ನು ‘ಒನ್ ಡಿಸ್ಟ್ರಿಕ್ಟ್, ಒನ್ ಡೆಸ್ಟಿನೇಷನ್’ ಯೋಜನೆಯಡಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದರು. ಜೊತೆಗೆ, ಶ್ರೀ ಚಂದ್ರಗುಟ್ಟಿ ರೇಣುಕಾಂಬಾದೇವಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಅನುಮೋದನೆ ನೀಡಿದ್ದು , ಯಾತ್ರಾಕೇಂದ್ರದ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಟ್ಟಿಗೆ ಎರಡೆರಡು ದುಬಾರಿ ಕಾರು ಖರೀದಿಸಿದ ಗೌತಮಿ ಜಾಧವ್

Source link

ಸೋಲಿನ ನಡುವೆಯೂ RCB ತಂಡ ಭರ್ಜರಿ ದಾಖಲೆ – Kannada News | RCB W is the first team to go past 150 despite losing their 5 wickets for under 50

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

Source link

ಕೋಗಿಲು ನಿವಾಸಿಗಳು ನಿರಾಶ್ರಿತರಲ್ಲ, ಲಕ್ಷಾಧಿಪತಿಗಳು! ಆರೋಪಿಗಳ ಖಾತೆಯಲ್ಲಿ ನಡೆದಿತ್ತು ಕೋಟಿ-ಕೋಟಿ ವ್ಯವಹಾರ – Kannada News | Kogilu Layout Eviction Takes Dramatic Turn: Residents Not Homeless but Millionaires, Crores Found in Accused Accounts

ಬೆಂಗಳೂರು, ಜನವರಿ 27: ಕೋಗಿಲು ಲೇಔಟ್​ನಲ್ಲಿರುವ (Kogilu Layout) ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಕೇರಳದ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರವನ್ನು ‘ಬುಲ್ಡೋಜರ್ ರಾಜ್’ ಎಂದು ಟೀಕೆ ಮಾಡಿದ್ದರು. ಅಷ್ಟೇ ಯಾಕೆ, ಶತ್ರು ರಾಷ್ಟ್ರ ಪಾಕಿಸ್ತಾನ ಕೂಡಾ ಕೋಗಿಲು ಲೇಔಟ್ ಒತ್ತುವರಿ ಬಗ್ಗೆ ಟೀಕೆ ಮಾಡಿತ್ತು. ಆದರೆ ಈಗ, ಕೋಗಿಲು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರಿಗೆ ರೋಚಕ‌ ಸಂಗತಿಗಳು ಗೊತ್ತಾಗಿವೆ. ಕೋಗಿಲು ಲೇಔಟ್​ನ ಫಕೀರ್ ಕಾಲೋನಿ ಹಾಗೂ ವಸೀಂ ಲೇಔಟ್​ನಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದವರಿಂದ ಲಕ್ಷ ಲಕ್ಷ ಹಣ ಪಡೆಯಲಾಗಿತ್ತು. ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಹಣದ ವ್ಯವಹಾರ ನಡೆದಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೋಗಿಲು ಲೇಔಟ್​​ನ ಫಕೀರ್ ಲೇಔಟ್ ಹಾಗೂ ವಸೀಂ ಲೇಔಟ್​​ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಆರೋಪಿಗಳಾದ ವಸೀಂ ಹಾಗೂ ವಿಜಯ್ ಮತ್ತು ರಾಬಿನ್ ಎಂಬುವವರು ಲಕ್ಷ ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಮೂವರ ಬ್ಯಾಂಕ್ ಖಾತೆಗಳ ಜಾಲಾಡಿದಾಗ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಪೊಲೀಸರ ತನಿಖೆಯಲ್ಲಿ ಈ ಸತ್ಯ ಬಯಲಾಗುತ್ತಿದ್ದಂತೆಯೇ, ಒತ್ತುವರಿದಾರರಿಗೆ ಪುನರ್ವಸತಿ ನೀಡದೇ ಇರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಕೋಗಿಲು ನಿವಾಸಿಗಳು ಹೇಳಿದ್ದೇನು?

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೋಗಿಲು ನಿವಾಸಿಗಳು, ಎಲ್ಲರೂ ಮನೆ ಕಟ್ಟಿಕೊಂಡರು. ನಾವು ಕೂಡ ಮನೆ ಕಟ್ಟಿಕೊಂಡಿದ್ದೇವೆ. ಎರಡ್ಮೂರು ವರ್ಷದ ಹಿಂದೆ ಇಲ್ಲಿ ನಾವು ಮನೆ ನಿರ್ಮಾಣ ಮಾಡಿದ್ದೇವೆ ಎಂದಿದ್ದಾರೆ.

ಲಕ್ಷಾಂತರ ರೂಪಾಯಿ ಕೊಟ್ಟು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಯಾಕೆ ಪುನರ್ವಸತಿ ನೀಡಬೇಕೆಂಬ ಚರ್ಚೆ ಶುರುವಾಗಿದೆ. ಆರಂಭದಲ್ಲಿ ಅಲ್ಲಿದವರು ಬಡವರು ಎಂಬ ಮಾನವೀಯತೆ ಇತ್ತು. ಆದರೆ ಕೋಟ್ಯಂತರ ರೂಪಾಯಿ ವ್ಯವಹಾರದ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಇದೀಗ 26 ಜನರಿಗೆ ಪುನರ್ವಸತಿ ನೀಡಬೇಕು ಎಂದಿಕೊಂಡಿದ್ದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಒತ್ತುವರಿದಾರರಿಗೆ ಪುನರ್ವಸತಿ ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​ : ಮೊದಲ ಹಂತದಲ್ಲಿ 80 ಅರ್ಜಿಗಳು ತಿರಸ್ಕೃತ

ಒಟ್ಟಿನಲ್ಲಿ ಕೋಗಿಲು ಲೇಔಟ್ ಅಕ್ರಮ ಒತ್ತುವರಿ ತೆರವು ಮಾಡಿ ಇಂದಿಗೆ 38 ದಿನಗಳಾಗಿವೆ. ಆದರೆ ಇಲ್ಲಿನ ನಿವಾಸಿಗಳಿಗೆ ಮನೆ ಕೊಡುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಸರ್ಕಾರವೂ ಮಾಹಿತಿ ನೀಡುತ್ತಿಲ್ಲ. ಇದರಿಂದ ಕೋಗಿಲು ನಿವಾಸಿಗಳು ಗೊಂದಲಕ್ಕೊಳಗಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಚಾ ಘೋಷ್ ಸಿಡಿಲಬ್ಬರಕ್ಕೆ ದಾಖಲೆ ಧೂಳೀಪಟ – Kannada News | Richa Ghosh Creates New Record in WPL

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ (Richa Ghosh) ಭರ್ಜರಿ ದಾಖಲೆ ಬರೆದಿದ್ದಾರೆ. ಅದು ಕೂಡ ಸಿಡಿಲಬ್ಬರದ 90 ರನ್​ ಸಿಡಿಸುವ ಮೂಲಕ ಎಂಬುದು ವಿಶೇಷ. 

Source link

Bengaluru Air Quality: ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಭಾರಿ ಸುಧಾರಣೆ! – Kannada News | Bangalore Air Pollution Crisis: Bengaluru Air quality is better today

ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಭಾರಿ ಸುಧಾರಣೆ!

ಬೆಂಗಳೂರು, ಜನವರಿ 27: ಕಳೆದ ವರ್ಷದಿಂದಲೂ ಬೆಂಗಳೂರಿನ ವಾಯು ಗುಣಮಟ್ಟ (Bengaluru Air Quality) ಅಪಯಕಾರಿ ಹಂತದಲ್ಲೇ ಇತ್ತು. ರಾಜ್ಯದೆಲ್ಲೆಡೆ ಏರ್ ಕ್ವಾಲಿಟಿ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.ಕೆಲ ತಿಂಗಳ ಹಿಂದೆಯೂ ಒಮ್ಮೆ ಬೆಂಗಳೂರಿನ ವಾಯ ಗುಣಮಟ್ಟ 200ಕ್ಕೇರಿತ್ತು. ನಂತರ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು. ಆದರೆ ಇಂದು ಕಳೆದ 2-3 ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಸುಧಾರಣೆ ಬಂದಿದೆ.

ಬೆಂಗಳೂರಿನ ಏರ್ ಕ್ವಾಲಿಟಿ 129 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ವಾಯು ಗುಣಮಟ್ಟ ಚೇತರಿಸಿಕೊಂಡಿದೆ. ಆದರೂ ಇಂದಿಗೂ ಗಾಳಿಯು ಕಲುಷಿತವಾಗಿಯೇ ಇದ್ದು, ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –129
  • ಮಂಗಳೂರು-158
  • ಮೈಸೂರು –98
  • ಬೆಳಗಾವಿ – 118
  • ಕಲಬುರ್ಗಿ-141
  • ಶಿವಮೊಗ್ಗ – 130
  • ಬಳ್ಳಾರಿ – 153
  • ಹುಬ್ಬಳ್ಳಿ- 114
  • ಉಡುಪಿ –162
  • ವಿಜಯಪುರ –88

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಮಲ್-ರಜನಿ ಚಿತ್ರದಿಂದ ಲೋಕೇಶ್ ಹೊರ ಹೋಗಿದ್ದೇಕೆ? – Kannada News | Lokesh Kanagaraj Reveals Why He Left Kamal Haasan and Rajinikanth Film Project

ಕಮಲ್ ಹಾಸನ್ ಹಾಗೂ ರಜನಿಕಾಂತ್ ಚಿತ್ರಕ್ಕೆ ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನ ಮಾಡಬೇಕಿತ್ತು. ಆದರೆ, ಅವರು ಹೊರ ನಡೆದರು. ನಂತರ ಸುಂದರ್ ಸಿ ಬಂದರು. ಆದರೆ ಇಬ್ಬರೂ ಚಿತ್ರದಿಂದ ಹೊರಗುಳಿದರು. ಲೋಕೇಶ್ ಏಕೆ ಇಷ್ಟು ದೊಡ್ಡ ಅವಕಾಶವನ್ನು ಬಿಟ್ಟುಕೊಟ್ಟರು? ಇತ್ತೀಚೆಗೆ ಲೋಕೇಶ್ ಕನಕರಾಜ್ ಈ ಬಗ್ಗೆ ಮಾತನಾಡಿದ್ದಾರೆ.

ರಜನಿಕಾಂತ್ ಅವರ 173 ನೇ ಚಿತ್ರವಾಗಲಿರುವ ಈ ಕ್ರೇಜಿ ಪ್ರಾಜೆಕ್ಟ್ ಅನ್ನು ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆ ರಾಜ್‌ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಲೋಕೇಶ್ ಕನಕರಾಜ್ ಅವರಿಗೆ ಈ ಚಿತ್ರವನ್ನು ನಿರ್ದೇಶಿಸುವ ಅವಕಾಶ ನೀಡಲಾಯಿತು. ಲೋಕೇಶ್ ಈ ಕಥೆಯ ಮೇಲೆ ಸುಮಾರು ಒಂದೂವರೆ ತಿಂಗಳು ಶ್ರಮಿಸಿದರು. ಇಬ್ಬರು ದಂತಕಥೆಗಳ ಇಮೇಜ್‌ಗೆ ಸೂಕ್ತವಾದ ಶಕ್ತಿಶಾಲಿ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಿ ಅವರಿಗೆ ಹೇಳಿದರು. ಕಥೆಯನ್ನು ಕೇಳಿದ ನಂತರ, ರಜನಿ ಮತ್ತು ಕಮಲ್ ಇಬ್ಬರೂ ತುಂಬಾ ಉತ್ಸುಕರಾಗಿದ್ದರು.

ಲೋಕೇಶ್ ಕನಕರಾಜ್ ಹೈ-ವೋಲ್ಟೇಜ್ ಆಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡುವ ನಿರ್ದೇಶಕ. ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಸತತವಾಗಿ ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ‘ಜೈಲರ್ 2’ ರವರೆಗೆ ಆಕ್ಷನ್ ಚಿತ್ರಗಳಲ್ಲಿ ನಿರತರಾಗಿದ್ದರೆ. ‘ನಾವು ಮತ್ತೆ ಆಕ್ಷನ್ ಚಿತ್ರ ಮಾಡಬೇಕೇ? ಈ ಬಾರಿ ಹಾಸ್ಯದ ಚಿತ್ರ ಮಾಡೋಣ’ ಎಂದು ಅವರಿಬ್ಬರೂ ಕೇಳಿದ್ದರು. ಆದರೆ ಲೋಕೇಶ್ ಅವರ ಶೈಲಿ ಆಕ್ಷನ್ ಚಿತ್ರಗಳಾಗಿರುವುದರಿಂದ, ಈ ರೀತಿಯ ಚಿತ್ರಗಳನ್ನು ಮಾಡುವುದಿಲ್ಲ ಎಂದರು. ಹೀಗಾಗಿ, ಅವರು ಸಿನಿಮಾದಿಂದ ಹೊರನಡೆದರು ಎಂದು ಅವರು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್?

ಲೋಕೇಶ್ ಕನಕರಾಜ್ ಆಕ್ಷನ್ ಬಯಸಿದರೆ, ರಜನಿ-ಕಮಲ್ ಮನರಂಜನೆಯನ್ನು ಆರಿಸಿಕೊಂಡಿದ್ದಾರೆ. ಈ ಕಾರಣದಿಂದ ಸಿನಿಮಾ ಮಾಡುವ ಅವಕಾಶ ಲೋಕೇಶ್​​​ಗೆ ಕೈ ತಪ್ಪಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸುದೀಪ್​​ಗೆ ನಾನೇ ಫೇವರಿಟ್; ಹೆಮ್ಮೆಯಿಂದ ಹೇಳಿಕೊಂಡ ಸತೀಶ್ – Kannada News | BBK 12: Dog Satish Claims Sudeep’s Favorite Status; His Viral Finale Statements Explained

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿ ಡಾಗ್ ಸತೀಶ್ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರು ಮೂರನೇ ವಾರವೇ ಹೊರ ಹೋದರು ಎಲ್ಲಾ ರೀತಿಯಲ್ಲೂ ಚರ್ಚೆಯಲ್ಲಿರುವ ಪ್ರಯತ್ನಮಾಡುತ್ತಿದ್ದಾರೆ. ಈಗ ಸತೀಶ್ ಅವರು ಫಿನಾಲೆ ದಿನ ಸುದೀಪ್ ಅವರು 12 ಬಾರಿ ಮಾತನಾಡಿಸಿದ್ದಾಗಿ ಹೇಳಿದ್ದಾರೆ. ಯಾವ ಸ್ಪರ್ಧಿಯನ್ನೂ ಅವರು ಇಷ್ಟು ಮಾತನಾಡಿಸಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮೂಲಕ ಸುದೀಪ್​ ಅವರಿಗೆ ನಾನೇ ಫೇವರಿಟ್ ಸ್ಪರ್ಧಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಸತೀಶ್ ಅವರ ಕ್ಯಾರೆಕ್ಟರ್ ತುಂಬಾನೇ ವಿಚಿತ್ರ. ಅವರು ಯಾವುದೇ ವಿಷಯ ಸಿಕ್ಕರೂ ಅದರಿಂದ ಮೈಲೇಜ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈಗ ಅವರು ಬಿಗ್ ಬಾಸ್ ಫಿನಾಲೆ ಬಗ್ಗೆ ಮಾತನಾಡಿದ್ದಾರೆ. ‘ಫಿನಾಲೆ ದಿನ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ನನ್ನನ್ನು 18 ಬಾರಿ ಮಾತನಾಡಿಸಿದರು. ಉಳಿದ ಸ್ಪರ್ಧಿಗಳನ್ನು ಒಮ್ಮೆಯೂ ಮಾತನಾಡಿಸಿಲ್ಲ’ ಎಂದು ಹೇಳಿದ್ದಾರೆ.

ಸತೀಶ್ ಅವರು ಪಾರ್ಟಿ ಆಯೋಜನೆ ಮಾಡುತ್ತಿದ್ದಾರಂತೆ. ಗಿಲ್ಲಿಯನ್ನು ಈ ಪಾರ್ಟಿಗೆ ಅವರು ಕರೆಯೋದಿಲ್ಲವಂತೆ. ‘ನಾನು ಎಲ್ಲರಿಗೂ ಗೆಟ್ ಟುಗೆದರ್ ರೀತಿ ಪಾರ್ಟಿ ಆಯೋಜನೆ ಮಾಡುತ್ತಿದ್ದೇನೆ. ಗಿಲ್ಲಿನ ಇದಕ್ಕೆ ಕರೆಯಲ್ಲ. ಉಳಿದ ಸ್ಪರ್ಧಿಗಳು ಬರುತ್ತಾ ಬಿಡ್ತಾರೋ ಅವರಿಗೆ ಬಿಟ್ಟಿದ್ದು’ ಎಂದು ಸತೀಶ್ ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್ ವ್ಯಂಗ್ಯವಾಗಿ ಹೇಳಿದ್ದನ್ನೇ ಇಟ್ಟುಕೊಂಡು ಬಡಾಯಿಕೊಚ್ಚಿಕೊಂಡ ಸತೀಶ್

‘ನಿಮಗೆ ಶೇಕ್​ಹ್ಯಾಂಡ್ ಮಾಡೋ ವಿಡಿಯೋ ಹಾಕಿದ್ರೆ ಲಕ್ಷ ಲಕ್ಷ ವೀವ್ಸ್ ಬರುತ್ತದೆ’ ಎಂದು ಸುದೀಪ್ ಹೇಳಿದ್ದರು. ಇದನ್ನು ಸುದೀಪ್ ಹೇಳಿದ್ದು ವ್ಯಂಗದ ರೀತಿಯಲ್ಲಿ. ಆದರೆ, ಇದನ್ನು ಸತೀಶ್ ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ‘ಸುದೀಪ್ ನನ್ನ ಬಗ್ಗೆ ಹೀಗೆ ಹೇಳಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link