Maharashtra Accident: ಬೈಕ್ಗೆ ಗುದ್ದಿದ ಖಾಸಗಿ ಬಸ್, ನಾಲ್ವರು ಯುವಕರು ಸ್ಥಳದಲ್ಲೇ ಸಾವು
ಪರ್ಭಾನಿ, ಮೇ 30: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಮನ್ವತ್ ಪಟ್ಟಣದ ಬಳಿ ಶುಕ್ರವಾರ ರಾತ್ರಿ ಪರ್ಭಾನಿಯಿಂದ ಪುಣೆಗೆ ಹೋಗುತ್ತಿದ್ದ ಖಾಸಗಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ನಾಲ್ವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೋಟಾರ್ ಸೈಕಲ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರ್ಭಾನಿ-ಪತ್ರಿ ಹೆದ್ದಾರಿಯಲ್ಲಿ ರಾಹುಲ್ ಗಿನ್ನಿಂಗ್ ಬಳಿಯ ಅಂಧರ್ವಾಡ್ ಮಾರುತಿ ದೇವಸ್ಥಾನ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಖಾಸಗಿ ಬಸ್ ಪುಣೆ ಕಡೆಗೆ ಪ್ರಯಾಣಿಸುತ್ತಿದ್ದಾಗ, ಎದುರುಗಡೆಯಿಂದ…