ಗಣರಾಜ್ಯೋತ್ಸವದಂದು ರೂಪಿಸಿದ್ದ ಬಹುದೊಡ್ಡ ಸಂಚು ವಿಫಲಗೊಳಿಸಿದ ಭದ್ರತಾ ಪಡೆ, 10,000 ಕೆಜಿ ಸ್ಫೋಟಕ ವಶ – Kannada News | Rajasthan Security Alert: Huge Explosive Cache Seized in Nagaur Before Republic Day
ದೆಹಲಿ, ಜ.26: ಇಡೀ ದೇಶವೇ 77 ಗಣರಾಜ್ಯೋತ್ಸವವನ್ನು (Republic Day) ಅದ್ಧೂರಿಯನ್ನು ಆಚರಣೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಅವರು ಇಂದು ದೇಶದ ಜನರನ್ನದ್ದೇಶಿ ಮಾತನಾಡುತ್ತಿದ್ದಾರೆ. ಇದೀಗ ಇದಕ್ಕೂ ಮುನ್ನ ಅಂದರೆ ನೆನ್ನೆ (ಜ.25) ರಾಜಸ್ಥಾನದಲ್ಲಿ ಉಗ್ರರು ಸಂಚು ರೂಪಿಸಿರುವ ಅಘಾತಕಾರಿ ಸುದ್ದಿ ಬಹಿರಂಗವಾಗಿದೆ. ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಈ ಸಂಚು ವಿಫಲವಾಗಿದೆ. ರಾಜಸ್ಥಾನದ ನಾಗೌರ್ (Nagaur) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಕಾರ್ಯಚರಣೆ ಎಂದು…