ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆ: ತಕ್ಷಣ ಫಲಿತಾಂಶ ಘೋಷಣೆ ಕೋರಿ ಲೀಗಲ್ ನೋಟಿಸ್ – Kannada News | BJP Candidate Jeevaraj advocate Sends Legal Notice to Election Officer Over Announce Sringeri assembly Re courting Result
ಬೆಂಗಳೂರು/ಚಿಕ್ಕಮಗಳೂರು) ಮೇ 03): ಕರ್ನಾಟಕ ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ (Sringeri assembly Re courting) ಆಗಿದ್ದು, ಫಲಿತಾಂಶ ವ್ಯತಿರಿಕ್ತವಾಗಿದೆ. ಹೌದು.. 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಶಾಸಕ ರಾಜೇಗೌಡ ಅವರಿಗೆ ಹಿನ್ನಡೆಯಾಗಿದ್ದು, ಬಿಜೆಪಿಯ ಜೀವರಾಜ್ ಅವರು ಮುನ್ನಡೆ ಸಾಧಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮೂಲಗಳ ಮಾಹಿತಿ ಪ್ರಕಾರ, ರಾಜೇಗೌಡರು ಪಡೆದಿದ್ದ 569 ಅಂಚೆಮತಗಳ ಪೈಕಿ 255 ಅಸಿಂಧು ಆಗಿದ್ದು, ಅವರ ಮತ 314ಕ್ಕೆ ಕುಸಿದಿದೆ. ಹೀಗಾಗಿ…