Category Archives: Blog

Your blog category

Viral News: ಹೆಂಗಸರ ಒಳಉಡುಪು ಕದಿಯುತ್ತಿದ್ದ ಪತಿ; 30 ವರ್ಷಗಳ ಬಳಿಕ ಅಸಹ್ಯಕರ ಅಭ್ಯಾಸ ತಿಳಿದು ವಿಚ್ಛೇದನ ನೀಡಿದ ಪತ್ನಿ – Kannada News | 30 Year Marriage Ends: Husband’s Secret Underwear Theft Habit Revealed

ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಹಲವು ಕಾರಣಗಳಿವೆ. ಮದುವೆಯಾದ ಪ್ರಾರಂಭದ 2ರಿಂದ 5ವರ್ಷಗಳ ನಡುವೆ ಹೆಚ್ಚಾಗಿ ವಿಚ್ಛೇದನಗಳು ನಡೆಯುತ್ತವೆ. ಆದರೆ ಇಲ್ಲೊಬ್ಬಳು ಬರೋಬ್ಬರೀ 30 ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನ ನೀಡಿದ್ದಾಳೆ. ಹೌದು 30 ವರ್ಷಗಳ ಸುಖಿ ದಾಂಪತ್ಯ ನಡೆಸಿಕೊಂಡು ಬಂದಿದ್ದ ಮಹಿಳೆಯೊಬ್ಬಳು, ತನ್ನ ಪತಿಯ ಅಸಹ್ಯಕರ ಅಭ್ಯಾಸ ತಿಳಿದ ನಂತರ, ಆ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ.

ದಿ ಮಿರರ್ ವರದಿಯ ಪ್ರಕಾರ, ಮಹಿಳೆಗೆ ತನ್ನ ಪತಿ ಹಲವು ವರ್ಷಗಳಿಂದ ತನ್ನ ಸ್ನೇಹಿತರು, ನೆರೆಹೊರೆಯವರು ಮತ್ತು ಸಂಬಂಧಿಕ ಮಹಿಳೆಯರು ಬಳಸಿದ ಒಳಉಡುಪುಗಳನ್ನು ಗುಪ್ತವಾಗಿ ಕದಿಯುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಸಂಗತಿ 30 ವರ್ಷಗಳ ದಾಂಪತ್ಯ ಜೀವನದ ನಂತರ ಬಹಿರಂಗವಾಗಿದೆ. ಈ ಸತ್ಯ ತಿಳಿದ ಕ್ಷಣವೇ ಮಹಿಳೆ ಮಾನಸಿಕವಾಗಿ ಸಂಪೂರ್ಣ ಕುಸಿದಿದ್ದಾಳೆ.

ಸತ್ಯ ಹೊರಬಂದದ್ದು ಹೇಗೆ?

ಈ ಪ್ರಕರಣದ ಅತ್ಯಂತ ಆಘಾತಕಾರಿ ವಿಷಯವೆಂದರೆ ಪತಿ ಯಾವುದೇ ಅಪರಿಚಿತ ಮಹಿಳೆಯರನ್ನು ಗುರಿಯಾಗಿಸಿಕೊಂಡಿರಲಿಲ್ಲ, ಬದಲಾಗಿ ತನ್ನದೇ ಆದ ಸಾಮಾಜಿಕ ವಲಯದಲ್ಲಿರುವ ಮಹಿಳೆಯರ ಮೇಲೆ ಕಣ್ಣಿಟ್ಟಿದ್ದ. ಅಪರಿಚಿತ ವ್ಯಕ್ತಿಯೊಬ್ಬರು ಈ ಘಟನೆಯನ್ನು ಬಹಿರಂಗಪಡಿಸಿದ ನಂತರ, ಪತ್ನಿ ನೇರವಾಗಿ ತನ್ನ ಗಂಡನನ್ನೇ ಪ್ರಶ್ನಿಸಿದ್ದಾಳೆ. ಆರಂಭದಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಈ ಹೋಟೆಲ್​​​ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್​; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು

ಮಹಿಳೆ ಹೇಳುವಂತೆ, “ನನ್ನ ಗಂಡನಿಗೆ ಮಹಿಳೆಯರ ಒಳಉಡುಪುಗಳ ಬಗ್ಗೆ ವಿಚಿತ್ರ ಆಸಕ್ತಿ ಇದೆ ಎಂಬುದು ಸ್ವಲ್ಪ ಮಟ್ಟಿಗೆ ನನಗೆ ಗೊತ್ತಿತ್ತು. ಆದರೆ ಅದು ಇಷ್ಟೊಂದು ಗಂಭೀರವಾಗಿದ್ದು, ಇತರರ ಗೌಪ್ಯತೆಯನ್ನು ಉಲ್ಲಂಘಿಸುವ ಮಟ್ಟಕ್ಕೆ ಹೋಗಿದೆ ಎಂದು ನಾನು ಕನಸಲ್ಲೂ ಊಹಿಸಿರಲಿಲ್ಲ.” ಈ ಬಗ್ಗೆ ಮಹಿಳೆ ಒಂದು ಕೌನ್ಸೆಲಿಂಗ್ ವೆಬ್‌ಸೈಟ್‌ನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾಳೆ. “ಈಗ ನನಗೆ ನನ್ನ ಗಂಡನ ಬಗ್ಗೆ ನಾಚಿಕೆ ಮತ್ತು ಅಸಹ್ಯ ಎರಡೂ ಆಗುತ್ತಿದೆ. ಇದು ಕೇವಲ ವಿಚಿತ್ರ ಅಭ್ಯಾಸವಲ್ಲ, ನನ್ನ ನಂಬಿಕೆ, ಗೌರವ ಮತ್ತು ಭಾವನೆಗಳ ಮೇಲೆ ಮಾಡಿದ ಗಂಭೀರ ದ್ರೋಹ,” ಎಂದು ಆಕೆ ಬರೆದುಕೊಂಡಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಶ್ವಿನಿ, ಸತೀಶ್ ಮೇಲೆ ದ್ವೇಷ ಇಲ್ಲ: ಬಿಗ್ ಬಾಸ್ ಮುಗಿದ ಮೇಲೂ ಜನರ ಮನ ಗೆಲ್ಲುತ್ತಿರುವ ಗಿಲ್ಲಿ – Kannada News | Gilli Nata interview goes viral after Bigg Boss Kannada Season 12 Win

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ (Bigg Boss Kannada Season 12 Winner) ಗಿಲ್ಲಿ ನಟ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲಿ ಕೂಡ ಗಿಲ್ಲಿ ನಟ ಫೇಮಸ್ ಆಗಿದ್ದಾರೆ. ಅವರ ರೀಲ್ಸ್ ಎಲ್ಲ ಕಡೆಗಳಲ್ಲಿ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾಮಿಡಿ ಮೂಲಕ ಗಿಲ್ಲಿ ನಟ (Gilli Nata) ಅವರು ವೀಕ್ಷಕರ ಮನ ಗೆದ್ದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ಕೂಡ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗುತ್ತಿದ್ದಾರೆ. ತಮ್ಮ ಜೊತೆ ಸ್ಪರ್ಧಿಸಿದ್ದ ಅಶ್ವಿನಿ ಗೌಡ, ಸತೀಶ್ ಮುಂತಾದವರ ಮೇಲೆ ಕಿಂಚಿತ್ತೂ ದ್ವೇಷ ಇಲ್ಲ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸಹಜ. ಟಾಸ್ಕ್ ಗೆಲ್ಲಬೇಕು ಎಂಬ ಸಲುವಾಗಿ ಪರಸ್ಪರ ಕಿತ್ತಾಟ ಇದ್ದೇ ಇರುತ್ತದೆ. ನಾಮಿನೇಷನ್ ಸಮಯದಲ್ಲಿ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುವುದು ಕೂಡ ನಡೆಯುತ್ತದೆ. ಆದರೆ ಅದೆಲ್ಲವೂ ಆಟದ ಸಲುವಾಗಿ ಮಾತ್ರ. ಬಿಗ್ ಬಾಸ್ ಮುಗಿದ ಮೇಲೆ ಗಿಲ್ಲಿ ನಟ ಅವರು ಆ ಯಾವ ವಿಚಾರಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ.

ಈ ಸೀಸನ್​​ನಲ್ಲಿ ಸ್ಪರ್ಧಿಸಿ ಹೊರಬಂದ ಅನೇಕ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಡಾಗ್ ಸತೀಶ್ ಅವರು ಗಿಲ್ಲಿ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು. ಅಶ್ವಿನಿ ಗೌಡ ಅವರು ಗಿಲ್ಲಿ ಗೆಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಆ ಯಾವ ವಿಷಯಕ್ಕೂ ಗಿಲ್ಲಿ ನಟ ಅವರು ದ್ವೇಷ ಸಾಧಿಸುತ್ತಿಲ್ಲ. ಯಾರ ಮೇಲೂ ತಮಗೆ ದ್ವೇಷ ಎಲ್ಲ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ‘ಒಪ್ಪಿದೆ ಕಣಯ್ಯ.. ನಿನ್ನ ಮನಸ್ಸು ಎಷ್ಟು ಪರಿಶುದ್ಧವಾಗಿದೆಯೋ ಅಷ್ಟು ಚೆನ್ನಾಗಿ ನೀನು ಬದುಕುತ್ತೀಯ’ ಎಂದು ಸೂರ್ಯವಂಶ ಸಿನಿಮಾದ ಸ್ಟೈಲ್​​ನಲ್ಲಿ ಗಿಲ್ಲಿಗೆ ಅಭಿಮಾನಿಗಳು ಹಾರೈಸುತ್ತಿದ್ದಾರೆ. ನಿಷ್ಕಲ್ಮಶವಾದ ಮಾತುಗಳ ಮೂಲಕ ಗಿಲ್ಲಿ ನಟ ಅವರು ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿಗೆ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: ‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ

ಗಿಲ್ಲಿ ನಟ ಅವರು ತುಂಬಾ ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಈಗ ಅವರಿಗೆ ಸಿನಿಮಾ ಅವಕಾಶಗಳು ಹೆಚ್ಚಾಗಿವೆ. ಅಲ್ಲದೇ ಅನೇಕ ಕಾರ್ಯಕ್ರಮಗಳಿಗೆ ಅತಿಥಿ ಆಗಿಯೂ ಅವರು ತೆರಳುತ್ತಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಗಿಲ್ಲಿ ನಟ ಅವರನ್ನು 2 ಮಿಲಿಯನ್​ಗಿಂತಲೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್​ಗೆ ಬಲಿಷ್ಠ ಪಾಕಿಸ್ತಾನ್ ತಂಡ ಪ್ರಕಟ – Kannada News | Pakistan t20 squad for T20 World Cup 2026

ಟಿ20 ವಿಶ್ವಕಪ್​ಗೆ ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).

Source link

ಒಂದೇ ಒಂದು ಪಂದ್ಯ ಗೆಲ್ಲದೆ ಸೂಪರ್​ ಸಿಕ್ಸ್​ಗೇರಿದ ನ್ಯೂಝಿಲೆಂಡ್ – Kannada News | U19 World Cup 2026: New Zealand enter in Super 6 without any win

ಅಂಡರ್-19 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೇ ನ್ಯೂಝಿಲೆಂಡ್ ತಂಡವು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಕೇಳಲು ಅಚ್ಚರಿ ಎನಿಸಿದರೂ ಇಂತಹದೊಂದು ಫಲಿತಾಂಶಕ್ಕೆ ಕಿರಿಯರ ವಿಶ್ವಕಪ್ ಪಾಯಿಂಟ್ಸ್ ಟೇಬಲ್​ ಸಾಕ್ಷಿಯಾಗಿದೆ.

ಈ ಟೂರ್ನಿಯಲ್ಲಿ ಗ್ರೂಪ್-ಬಿ ನಲ್ಲಿ ಕಣಕ್ಕಿಳಿದಿದ್ದ ನ್ಯೂಝಿಲೆಂಡ್ ತಂಡದ ಮೊದಲೆರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದವು. ಇನ್ನು ಮೂರನೇ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್​ಗಳಿಂದ ಸೋಲನುಭವಿಸಿದ್ದರು.

ಅಂದರೆ ಮೂರು ಪಂದ್ಯಗಳಿಂದ ನ್ಯೂಝಿಲೆಂಡ್​ಗೆ ಸಿಕ್ಕಿರುವುದು ಕೇವಲ 2 ಅಂಕಗಳು ಮಾತ್ರ. ಅದು ಕೂಡ ರದ್ದಾದ ಪಂದ್ಯಗಳಿಂದ. ಆದರೆ ಇತ್ತ ಯುಎಸ್​ಎ ತಂಡವು ಆಡಿದ ಮೂರು ಪಂದ್ಯಗಳಿಂದ ಕೇವಲ 1 ಅಂಕ ಪಡೆಯಲಷ್ಟೇ ಶಕ್ತರಾಗಿದ್ದಾರೆ.

ಪರಿಣಾಮ ನ್ಯೂಝಿಲೆಂಡ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಈ ಮೂರನೇ ಸ್ಥಾನದೊಂದಿಗೆ ಕಿವೀಸ್ ಪಡೆ ಸೂಪರ್-6 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

ಸೂಪರ್ ಸಿಕ್ಸ್ ಹಂತದಲ್ಲಿ ನ್ಯೂಝಿಲೆಂಡ್ ತಂಡವು ಗ್ರೂಪ್-2 ನಲ್ಲಿ ಸ್ಥಾನ ಪಡೆದುಕೊಂಡಿದೆ. ಅದರಂತೆ ದ್ವಿತೀಯ ಸುತ್ತಿನಲ್ಲಿ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.

ಈ ಎರಡು ಪಂದ್ಯಗಳಲ್ಲಿ ನ್ಯೂಝಿಲೆಂಡ್ ತಂಡ ಜಯ ಸಾಧಿಸಿ ಗ್ರೂಪ್-2 ಅಂಕ ಪಟ್ಟಿಯಲ್ಲಿ ಟಾಪ್-2 ನಲ್ಲಿ ಸ್ಥಾನ ಪಡೆದರೆ ಸೆಮಿಫೈನಲ್​ಗೇರಬಹುದು.

ಹೀಗಾಗಿ ಸೂಪರ್-6 ಸುತ್ತಿನ ಎರಡೂ ಪಂದ್ಯಗಳು ನ್ಯೂಝಿಲೆಂಡ್ ತಂಡದ ಪಾಲಿಗೆ ನಿರ್ಣಾಯಕ. ಒಂದು ವೇಳೆ ಕಿವೀಸ್ ಪಡೆ ಸೂಪರ್-6 ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್​ಗೇರಿದರೆ, ಮೊದಲ ಸುತ್ತಿನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೆ ನಾಕೌಟ್ ಹಂತಕ್ಕೇರಿದ ತಂಡ ಎನಿಸಿಕೊಳ್ಳಲಿದೆ.

ಅಷ್ಟೇ ಅಲ್ಲದೆ ಫೈನಲ್​ಗೇರಿದೆ ಮೊದಲ ಮೂರು ಪಂದ್ಯಗಳಲ್ಲಿ ಜಯದ ಖಾತೆ ತೆರೆಯದೇ ಅಂತಿಮ ಹಂತಕ್ಕೇರಿದ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಹೀಗಾಗಿ ಇದೀಗ ನ್ಯೂಝಿಲೆಂಡ್ ತಂಡದ ಮುಂದಿನ ಪಂದ್ಯಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತ್ರಿ ಸೆಂಚುರಿ… ಸರ್ಫರಾಝ್ ಖಾನ್ ವಿಶ್ವ ದಾಖಲೆ

ಅದರಂತೆ ಪಾಕಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳಿಗೆ ಸೋಲುಣಿಸಿ ನ್ಯೂಝಿಲೆಂಡ್ ತಂಡವು ಈ ಬಾರಿಯ ಅಂಡರ್-19 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೇರಲಿದೆಯಾ ಕಾದು ನೋಡಬೇಕಿದೆ.

Source link

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ಹೊರಗುಳಿದರೆ ಯಾವ ತಂಡಕ್ಕೆ ಚಾನ್ಸ್​? – Kannada News | Which team could replace Pakistan in the T20 World Cup 2026 if they withdraw

T20 World Cup 2026: ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡ ಹೊರಬಿದ್ದಿದೆ. ಭಾರತದಲ್ಲಿ ಆಡಲು ನಿರಾಕರಿಸಿದ್ದ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್ ಪಟ್ಟಿಯಿಂದ ಐಸಿಸಿ ಕೈ ಬಿಟ್ಟಿದೆ. ಅಲ್ಲದೆ ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ್ ಕೂಡ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಸುದ್ದಿಗಳು ಹರಿದಾಡುತ್ತಿದೆ.

Source link

ಬೆಳಗಾವಿ: 400 ಕೋಟಿ ರೂ ರಾಬರಿ; ಚೋರ್ಲಾ ಘಾಟ್​ನಲ್ಲೇ ದರೋಡೆ ನಡೆದಿದ್ದೇಕೆ? ಎಸ್​​ಪಿ ಹೇಳಿದ್ದಿಷ್ಟು – Kannada News | Belagavi: Rs 400 crore robbery; Why did the robbery take place at Chorla Ghat, what did SP said

ಬೆಳಗಾವಿ, ಜನವರಿ 25: ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್​​ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ ರೂ ಹಣ ದರೋಡೆ (robbery) ಮಾಡಿದೆ. ಭಾರತದ ದರೋಡೆ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಎನ್ನಲಾಗುತ್ತಿದೆ. ಪ್ರಕರಣ ಬಗ್ಗೆ ಬೆಳಗಾವಿ ಎಸ್​​ಪಿ ಕೆ.ರಾಮರಾಜನ್​ ಮಾತನಾಡಿದ್ದು, ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದು, ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳಿಗೆ ಸಂಬಂಧಿಸಿದೆ. ಇಲ್ಲಿ ಘಟನೆ ಆಗಿರುವ ಕಾರಣ ಯಾರು ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಬೆಳಗಾವಿ ಎಸ್​​ಪಿ ಕೆ.ರಾಮರಾಜನ್​ ಹೇಳಿದ್ದಿಷ್ಟು

ನಗದರಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ಎಸ್​​ಪಿ ಕೆ.ರಾಮರಾಜನ್​, ಜನವರಿ 6ರಂದು ನಾಸಿಕ್ ಜಿಲ್ಲಾ ವರಿಷ್ಠಾಧಿಕಾರಿಯಿಂದ ನಮಗೆ ಪತ್ರ ಬರುತ್ತೆ. ಚೋರ್ಲಾ ಘಾಟ್​ನಲ್ಲಿ ರಾಬರಿಯಾಗಿದೆ. ಹಳೆಯ 400 ಕೋಟಿ ರೂ ಆಗಿರಬಹುದು ಅಂತಾ ಪತ್ರದಲ್ಲಿತ್ತು ಎಂದು ಮಾಹಿತಿ ನೀಡಿದರು.

ವಿಶಾಲ್ ನಾಯ್ಡು ಎಂಬಾತ ನಾಸಿಕ್​ನಲ್ಲಿ ಅಕ್ಟೋಬರ್ 22ರಂದು ಸಂದೀಪ್ ಪಾಟೀಲ್ ಎಂಬಾತನ ಕಿಡ್ನ್ಯಾಪ್ ಮಾಡಿರುತ್ತಾರೆ. ಅಕ್ಟೋಬರ್ 16ರಂದು 400 ಕೋಟಿ ರೂ ಅಪಹರಣವಾಗಿದೆ. ಆ ಹಣ ಎಲ್ಲಿಗೆ ಹೋಗಿದೆ ಅಂತಾ ಪ್ರಶ್ನೆ ಮಾಡುತ್ತಾರೆ. ಈ ರಾಬರಿ ಆಗಿದ್ದು ಚೋರ್ಲಾ ಘಾಟ್​ನಲ್ಲಿ ಅಂತಾ ಪತ್ರದಲ್ಲಿ ಉಲ್ಲೇಖವಿದೆ. ಈ ಕಾರಣಕ್ಕೆ ನಮ್ಮ ಖಾನಾಪುರದ ಸಬ್-ಇನ್ಸ್‌ಪೆಕ್ಟರ್ ಸೇರಿ ಒಂದು ತಂಡವನ್ನ ಕಳುಹಿಸಿದ್ದೇವೆ ಎಂದರು.

ಇದನ್ನೂ ಓದಿ: ದೇಶದ ಅತಿ ದೊಡ್ಡ ರಾಬರಿ: ಬೆಳಗಾವಿ ಗಡಿಭಾಗದಲ್ಲಿ 400 ಕೋಟಿ ರೂ ಹಣವಿದ್ದ 2 ಕಂಟೇನರ್​​​ ಹೈಜಾಕ್​?

ಎಸ್ಐಟಿ ತಂಡ ಕೂಡ ರಚನೆ ಆಗಿದೆ. ಸಂದೀಪ್ ಪಾಟೀಲ್ ಬಳಿ ನಮ್ಮವರು ಮಾತಾಡಿದ್ದಾರೆ. ಆತ ಹೇಳಿರುವ ಪ್ರಕಾರ ಕಿಡ್ನ್ಯಾಪ್ ಮಾಡಿದವರು ಆತನಿಗೆ ದರೋಡೆ ಬಗ್ಗೆ ಹೇಳಿದ್ದಾರೆ. ಇಲ್ಲಿ ಘಟನೆ ಆಗಿರುವ ಕಾರಣ ಯಾರು ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ. ಚೋರ್ಲಾ ಘಾಟ್​ನಲ್ಲಿ ಹೊಸದಾಗಿ ಸಿಸಿಟಿವಿ ಅಳವಡಿಕೆ ಮಾಡುತ್ತೇವೆ ಎಂದು ಎಸ್​​ಪಿ ಕೆ.ರಾಮರಾಜನ್ ಹೇಳಿದ್ದಾರೆ.

ದರೋಡೆಕೋರರು ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡಿದ್ದೇಕೆ?

ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ಮಧ್ಯೆ ಇರುವ ಚೋರ್ಲಾ ಘಾಟ್ ಪ್ರದೇಶದಲ್ಲಿ ನೆಟ್ವರ್ಕ್​ ಬರುವುದಿಲ್ಲ. ಗೋವಾದ ಕೇರಿಯಿಂದ ಬೆಳಗಾವಿಯ ಜಾಂಬೋಟಿವರೆಗೂ 4 ಗಂಟೆ ಸಂಪರ್ಕ ಕಡಿತಗೊಳ್ಳುತ್ತೆ. ಗೋವಾದಿಂದ ಚೋರ್ಲಾ ಘಾಟ್​​ಗೆ ಬರಲು 3 ಗಂಟೆ ಸಮಯ ಬೇಕು. ಚೋರ್ಲಾದಿಂದ ಮಹಾರಾಷ್ಟ್ರಕ್ಕೆ ಅರಣ್ಯ ಅಂಚಿನ ದಾರಿ ಕನೆಕ್ಟ್ ಆಗುತ್ತೆ. ಚೋರ್ಲಾದಲ್ಲಿ ಸಣ್ಣಪುಟ್ಟ ವಾಹನ ಹೋಗುವಷ್ಟು ಕಾಲುದಾರಿ ಇದೆ. ಕಂಟೇನರ್​ನಿಂದ ಮಿನಿ ಗೂಡ್ಸ್​​ಗೆ ಡಂಪ್ ಮಾಡಿ ಬಳಿಕ ಹಣ ಸಾಗಿಸಿದ್ರಾ, ಈ ಪ್ರದೇಶದಲ್ಲಿ ದರೋಡೆ ಮಾಡಿದರೆ ಯಾರಿಗೂ ಸಂಪರ್ಕ ಸಿಗೋದಿಲ್ಲ, ಹೀಗಾಗಿ ಈ ಎಲ್ಲಾ ವಿಚಾರಗಳಿಂದ ದರೋಡೆಕೋರರು ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

6 ಆರೋಪಿಗಳು ಅಂದರ್

400 ಕೋಟಿ ರೂ ದರೋಡೆ ಕೇಸ್​ಗೆ ಸಂಬಂಧಿಸಿದಂತೆ, ನಿನ್ನೆ ಐವರನ್ನ ಬಂಧಿಸಿದ್ದ ಮಹಾರಾಷ್ಟ್ರ ಎಸ್​ಐಟಿ ಅಧಿಕಾರಿಗಳು, ಇಂದು ಮತ್ತೊಬ್ಬನನ್ನ ಬಂಧಿಸಿದ್ದಾರೆ. ಜನವರಿ 23 ರಂದೇ ನಾಲ್ವರನ್ನ ಬಂಧಿಸಲಾಗಿತ್ತು. ಮಚೀಂದ್ರಾ ಮಾದವಿಯನ್ನ ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 1:48 pm, Sun, 25 January 26

Source link

ಗಣರಾಜ್ಯೋತ್ಸವಕ್ಕೆ ನೀವು ಬರೆದುಕೊಟ್ಟ ಭಾಷಣವನ್ನೇ ರಾಜ್ಯಪಾಲರು ಓದಬೇಕಾ ಎಂದಿದ್ದಕ್ಕೆ ಸಿಎಂ ರಿಯಾಕ್ಷನ್ ನೋಡಿ! – Kannada News | Siddaramaiah on Governors Speech, Karnataka Budget and Investment Drive

ಮೈಸೂರು, ಜನವರಿ 25: ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಸಿದ್ಧತೆಗಳು, ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳು ಮತ್ತು ರಾಜ್ಯಪಾಲರ ಸಂವಿಧಾನಾತ್ಮಕ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಬಜೆಟ್ ಸಭೆಗಳು ಫೆಬ್ರವರಿ 2 ರಿಂದ ಪ್ರಾರಂಭವಾಗಲಿದ್ದು, ಪ್ರಸ್ತುತ ಹಣಕಾಸು ಇಲಾಖೆಯೊಂದಿಗೆ ಪ್ರಾಥಮಿಕ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ರಾಜ್ಯಪಾಲರ ಭಾಷಣದ ಕುರಿತು ಸಂವಿಧಾನಾತ್ಮಕ ಅಂಶಗಳನ್ನು ವಿವರಿಸಿದ ಸಿದ್ದರಾಮಯ್ಯ, ಭಾರತೀಯ ಸಂವಿಧಾನದ 163 ಮತ್ತು 176ನೇ ವಿಧಿಗಳು ಭಾಷಣ ಮಾಡಲೇಬೇಕು ಎಂದು ಸ್ಪಷ್ಟವಾಗಿ ಬಳಸುತ್ತವೆ ಎಂದು ಹೇಳಿದರು. ನಾವು ಏನು ಬರೆದುಕೊಡುತ್ತೇವೋ, ಅದನ್ನು ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಮಾಡಲೇಬೇಕು ಎಂದು ಅವರು ಖಚಿತಪಡಿಸಿದರು. ನಾಳೆ ನಾವು ಭಾಷಣವನ್ನು ಬರೆದುಕೊಡುತ್ತೇವೆ. ಆದರೆ ರಾಜ್ಯಪಾಲರು ಅದನ್ನು ಬದಲಾಯಿಸುತ್ತಾರೋ ಇಲ್ಲವೋ ಎಂಬುದು ಅವರಿಗೆ ಬಿಟ್ಟಿದ್ದು ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಟಿವಿಕೆ ಬಾವುಟ ತೋರಿಸಿದ ವಿಜಯ್ ಅಭಿಮಾನಿಗೆ ಥಳಿಸಿದ ಅಜಿತ್ ಫ್ಯಾನ್ಸ್ – Kannada News | Ajith Kumar fans beat up Thalapathy Vijay fans during Mankatha re release for this reason

ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಅವರ ಅಭಿಮಾನಿಗಳ ನಡುವೆ ಯಾವಾಗಲೂ ಕಿರಿಕ್ ಆಗುತ್ತದೆ. ಅದಕ್ಕೆ ಈಗ ಹೊಸದೊಂದು ಉದಾಹರಣೆ ಸಿಕ್ಕಿದೆ. ಅಜಿತ್ ಕುಮಾರ್ (Ajith Kumar) ನಟನೆಯ ‘ಮಂಗಾತ’ ಸಿನಿಮಾ ಮರು ಬಿಡುಗಡೆ ಆಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಅಜಿತ್ ಅವರ ಅಭಿಮಾನಿಗಳನ್ನು ಕೆಣಕಲು ವಿಜಯ್ (Thalapathy Vijay) ಫ್ಯಾನ್ಸ್ ಪ್ರಯತ್ನಿಸಿದ್ದಾರೆ. ಅದರಿಂದಾಗಿ ಗಲಾಟೆ ಆಗಿದೆ. ವಿಜಯ್ ಅಭಿಮಾನಿಗೆ ಅಜಿತ್ ಫ್ಯಾನ್ಸ್ ಥಳಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಸಿನಿಮಾದಿಂದ ದೂರ ಸರಿದಿರುವ ದಳಪತಿ ವಿಜಯ್ ಅವರು ಈಗ ರಾಜಕೀಯದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಟಿವಿಕೆ ಪಕ್ಷ ಕಟ್ಟಿ, ಅದರ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಅಭಿಮಾನಿಗಳು ಕೂಡ ಅವರಿಗೆ ಸಿಕ್ಕಾಪಟ್ಟೆ ಸಪೋರ್ಟ್ ಮಾಡುತ್ತಿದ್ದಾರೆ. ಟಿವಿಕೆ ಪಕ್ಷದ ಬಾವುಟವನ್ನು ಹಿಡಿದು ಫ್ಯಾನ್ಸ್ ಓಡಾಡುತ್ತಿದ್ದಾರೆ. ಅದೇ ಈಗ ಕಿರಿಕ್​​ಗೆ ಕಾರಣ ಆಗಿದೆ.

ತಮಿಳುನಾಡಿನ ಚಿತ್ರಮಂದಿರವೊಂದರಲ್ಲಿ ಅಜಿತ್ ಅಭಿನಯದ ‘ಮಂಗಾತ’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಈ ವೇಳೆ ವಿಜಯ್ ಅಭಿಮಾನಿಯೊಬ್ಬ ಟಿವಿಕೆ ಪಕ್ಷದ ಬಾವುಟ ಪ್ರದರ್ಶಿದ್ದಾನೆ. ಇದರಿಂದಾಗಿ ಅಜಿತ್ ಅಭಿಮಾನಿಗಳಿಗೆ ಕೋಪ ಬಂದಿದೆ. ಬೇಕಂತಲೇ ಬಾವುಟ ಪ್ರದರ್ಶಿದ ವ್ಯಕ್ತಿಗೆ ಅಜಿತ್ ಫ್ಯಾನ್ಸ್ ಥಳಿಸಿದ್ದಾರೆ. ಬಟ್ಟೆ ಹರಿದುಹೋಗುವ ರೀತಿಯಲ್ಲಿ ಹೊಡೆಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ‘ದಳಪತಿ ವಿಜಯ್ ಅಭಿಮಾನಿಗಳ ಹುಚ್ಚು ಬಿಡಿಸುವುದು ಹೇಗೆ ಎಂಬುದು ಅಜಿತ್ ಫ್ಯಾನ್ಸ್ ಮತ್ತು ರಜನಿ ಫ್ಯಾನ್ಸ್​​ಗೆ ಮಾತ್ರ ಗೊತ್ತು’ ಎಂಬ ಕ್ಯಾಪ್ಷನ್​ನೊಂದಿಗೆ ನೆಟ್ಟಿಗರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ‘ಆದರೆ ಈ ರೀತಿ ಥಳಿಸಿದ್ದಕ್ಕೆ ಅಜಿತ್ ಅಭಿಮಾನಿಗಳಿಗೆ ನಾಚಿಕೆ ಆಗಬೇಕು’ ಎಂಬ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಮತ್ತೊಂದು ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು?

ಮರು ಬಿಡುಗಡೆ ವಿಚಾರದಲ್ಲಿ ವಿಜಯ್ ದಾಖಲೆಯನ್ನು ಅಜಿತ್ ಮುರಿದಿದ್ದಾರೆ. ವಿಜಯ್ ನಟನೆಯ ‘ಗಿಲ್ಲಿ’ ಸಿನಿಮಾ ಮರು ಬಿಡುಗಡೆ ಆದಾಗ ಮೊದಲ ದಿನ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಅಜಿತ್ ಅವರ ‘ಮಂಗಾತ’ ಸಿನಿಮಾ ಮರು-ಬಿಡುಗಡೆ ಆಗಿದ್ದು, ಮೊದಲ ದಿನ 4.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

DK Shivakumar on Davos Tour: ವಿಶ್ವ ಆರ್ಥಿಕ ಸಮ್ಮೇಳನ ಮುಗಿಸಿ ದಾವೋಸ್​ನಿಂದ ಬಂದ ಡಿಕೆಶಿ ಹೇಳಿದ್ದೇನು? – Kannada News | DK Shivakumar’s Davos Tour; The government is preparing to develop a comprehensive mobility system across the state says DCM

ವಿಶ್ವ ಆರ್ಥಿಕ ಸಮ್ಮೇಳನ ಮುಗಿಸಿ ದಾವೋಸ್​ನಿಂದ ಬಂದ ಡಿಕೆಶಿ ಹೇಳಿದ್ದೇನು?
(ಫೋಟೋ: ಡಿಕೆ ಶಿವಕುಮಾರ್​ರ ಎಕ್ಸ್ ಖಾತೆ)

ಬೆಂಗಳೂರು, ಜನವರಿ 25: ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) , ಹಲವು ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ ಭಾಗವಹಿಸಿದ್ದ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಇಡೀ ರಾಜ್ಯದಲ್ಲಿ ಸಮಗ್ರ ಮೊಬಿಲಿಟಿ ವ್ಯವಸ್ಥೆ ಅಭಿವೃದ್ಧಿಪಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ. ಬೆಂಗಳೂರು ಸೇರಿದಂತೆ ಚಿಕ್ಕ ಹಾಗೂ ದೊಡ್ಡ ನಗರಗಳ ಬೆಳವಣಿಗೆ ಅಗತ್ಯವಾಗಿದ್ದು, ದೇಶದ ಮಾನವ ಸಂಪತ್ತು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಅನಿವಾರ್ಯ ಎಂದರು.

ಕರ್ನಾಟಕದ ವ್ಯವಸ್ಥೆಗಳನ್ನು ಮೆಚ್ಚಿಕೊಂಡ ಅಂತಾರಾಷ್ಟ್ರೀಯ ನಾಯಕರು

ದಾವೋಸ್‌ ಸಭೆಯ ಕುರಿತು ಮಾತಾನಾಡಿದ ಡಿಸಿಎಂ, ಪ್ರಪಂಚದ 65 ದೇಶಗಳ ಪ್ರಮುಖರು ಅಲ್ಲಿ ಭಾಗವಹಿಸಿದ್ದರು. ಸುಮಾರು 45 ಕಂಪನಿಗಳ ಮುಖ್ಯಸ್ಥರು ಕರ್ನಾಟಕದಲ್ಲಿ ಹೂಡಿಕೆ ಬಗ್ಗೆ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ಸ್, ನ್ಯಾನೋ ಟೆಕ್ನಾಲಜಿ, ಎಐ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಆಸಕ್ತಿ ವ್ಯಕ್ತವಾಗಿದೆ ಎಂದು ಹೇಳಿದರು.

ಸೌದಿ ಅರೇಬಿಯಾ ಹಣಕಾಸು ಸಚಿವರು ಸೇರಿದಂತೆ ಹಲವು ಅಂತಾರಾಷ್ಟ್ರೀಯ ನಾಯಕರು ಕರ್ನಾಟಕದ ನೀರು, ವಿದ್ಯುತ್ ಮತ್ತು ಮೂಲಸೌಕರ್ಯ ವ್ಯವಸ್ಥೆಯನ್ನು ಮೆಚ್ಚಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ನಿರ್ವಹಣೆ ಹಾಗೂ ಟನಲ್ ರಸ್ತೆ ಯೋಜನೆಗಳ ಬಗ್ಗೆ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಹಾಗೂ ಜಪಾನ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಟನಲ್ ಮಿಷಿನ್ ಕುರಿತು ನಮ್ಮ ತಂಡ ಸಮಗ್ರ ಅಧ್ಯಯನ ನಡೆಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

‘ಅಲ್ಲಿ ಯಾರು ಕೂಡ ಸಿಗ್ನಲ್ ಜಂಪ್ ಮಾಡಲ್ಲ’-ಡಿಸಿಎಂ

ದಾವೋಸ್‌ ವ್ಯವಸ್ಥೆಯ ಕುರಿತು ಹೇಳುತ್ತಾ, ಅಲ್ಲಿನ ಕಾನೂನು ಪಾಲನೆಯ ವಾತಾವರಣ ಶ್ಲಾಘನೀಯವಾಗಿದ್ದು, ಅಲ್ಲಿ ಯಾರು ಕೂಡ ಸಿಗ್ನಲ್ ಜಂಪ್ ಮಾಡುವುದಿಲ್ಲ. ಕಾನೂನಿಗೆ ಗೌರವ ನೀಡುವ ಸಂಸ್ಕೃತಿ ನಮ್ಮಲ್ಲೂ ಬೆಳೆಯಬೇಕು ಎಂದು ಡಿಸಿಎಂ ಕರೆ ನೀಡಿದರು. ಈ ದಾವೋಸ್ ಭೇಟಿ ರಾಜ್ಯಕ್ಕೆ ಉತ್ತಮ ಅವಕಾಶಗಳನ್ನು ತಂದಿದ್ದು, ಯುವಕರಿಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಡದಿ ಬಳಿ ಐಟಿ ಸಿಟಿ ನಿರ್ಮಾಣ

ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು, ಫೆಬ್ರವರಿ ತಿಂಗಳಲ್ಲಿ ಕೆಲವು ಪ್ರಮುಖ ಯೋಜನೆಗಳ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು. ಬೆಂಗಳೂರು ಕೇಬಲ್ ವಿಚಾರದಲ್ಲಿ ಟೀಕೆಗಳಿದ್ದು, ಅದಕ್ಕೆ ಸಂಬಂಧಿಸಿದಂತೆ ತಜ್ಞರ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದರು. ಇದಲ್ಲದೆ ಬಿಡದಿ ಬಳಿ ಐಟಿ ಸಿಟಿ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವ್ಯಕ್ತವಾಗಿದ್ದು, ರೈತರು ಸ್ವಯಂಪ್ರೇರಿತವಾಗಿ ಭೂಮಿ ನೀಡಲು ಮುಂದಾಗಿದ್ದಾರೆ. ರೈತರಿಗೆ ಉತ್ತಮ ಪರಿಹಾರ ಹಾಗೂ ಸೌಲಭ್ಯ ಒದಗಿಸಲಾಗುತ್ತದೆ. ಇಂತಹ ಆಫರ್ ದೇಶದಲ್ಲಿ ಎಲ್ಲೂ ನೀಡಲಾಗಿಲ್ಲ ಎಂದು ಡಿಕೆ ಹೇಳಿದರು.

ವರದಿ : ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Mars in Capricorn: ಮಕರ ರಾಶಿಯಲ್ಲಿ ಕುಜ ಸಂಚಾರ; ಈ ನಾಲ್ಕು ರಾಶಿಗೆ ಅದೃಷ್ಟದ ಸುರಿಮಳೆ – Kannada News | Mars in Capricorn: Kuja’s Uttara Ashadha Transit and Rashi Effects

ಪ್ರಾಚೀನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ರಾಶಿಯು ಕುಜನ ಉಚ್ಚ ರಾಶಿ. ಅಂದರೆ ಇಲ್ಲಿ ಕುಜನು ಅತ್ಯಂತ ಬಲಿಷ್ಠನಾಗಿರುತ್ತಾನೆ. ಮಕರ ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಕುಜನು ಸಂಚರಿಸುವಾಗ ಉಂಟಾಗುವ ಶುಭ-ಅಶುಭ ಫಲಗಳ ವಿವರ ಇಲ್ಲಿದೆ. ಇನ್ನು ​ಉತ್ತರಾಷಾಢ ನಕ್ಷತ್ರದಲ್ಲಿ ಜನವರಿ 28 ರಬರೆಗೆ ಕುಜನು ಇರಲಿದ್ದು ಇದರ ಅಧಿಪತಿ ಸೂರ್ಯ. ಕುಜ ಮತ್ತು ಸೂರ್ಯ ಮಿತ್ರ ಗ್ರಹಗಳಾದ್ದರಿಂದ, ಈ ನಕ್ಷತ್ರದಲ್ಲಿ ಕುಜನಿರುವುದು ಸಾಮಾನ್ಯವಾಗಿ ಆಡಳಿತಾತ್ಮಕ ಕೆಲಸಗಳಲ್ಲಿ ಇರುವವರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ತುಂಬಾ ಒಳ್ಳೆಯದು. ಇದು ದೃಢ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ​ಶುಭ ಫಲಗಳನ್ನು ಪಡೆಯುವ ರಾಶಿಗಳು ​ಕುಜನು ಮಕರ ರಾಶಿಯಲ್ಲಿರುವಾಗ ಈ ಕೆಳಗಿನ ರಾಶಿಯವರಿಗೆ ಹೆಚ್ಚಿನ ಲಾಭ ಮತ್ತು ಪ್ರಗತಿ ಕಂಡುಬರುತ್ತದೆ.

​ಮೇಷ ರಾಶಿ:

ನಿಮ್ಮ ರಾಶ್ಯಾಧಿಪತಿಯಾದ ಕುಜನು ದಶಮ ಸ್ಥಾನದಲ್ಲಿ ಇರುವುದರಿಂದ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಹೊಸ ಉದ್ಯೋಗ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ.

​ವೃಶ್ಚಿಕ ರಾಶಿ:

ತೃತೀಯ ಸ್ಥಾನದಲ್ಲಿ ಕುಜನಿರುವುದರಿಂದ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ವಿಜಯ ಲಭಿಸುತ್ತದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಲಿದೆ.

​ಕನ್ಯಾ ರಾಶಿ:

ಪಂಚಮ ಸ್ಥಾನದಲ್ಲಿ ಕುಜನಿರುವುದು ಆರ್ಥಿಕವಾಗಿ ಲಾಭದಾಯಕ. ಹಳೆಯ ಹೂಡಿಕೆಗಳಿಂದ ಆದಾಯ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ.

​ಮೀನ ರಾಶಿ:

ಲಾಭ ಸ್ಥಾನದಲ್ಲಿ ಕುಜನಿರುವುದರಿಂದ ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಸ್ನೇಹಿತರಿಂದ ಮತ್ತು ಹಿರಿಯ ಸಹೋದರರಿಂದ ಬೆಂಬಲ ಸಿಗಲಿದೆ.

​ಮಿಶ್ರ ಫಲ:

​ಮಕರ ರಾಶಿ:

ಕುಜನು ನಿಮ್ಮದೇ ರಾಶಿಯಲ್ಲಿದ್ದಾಗ ಅಧಿಕಾರ ಮತ್ತು ಶಕ್ತಿ ನೀಡುತ್ತಾನೆ, ಆದರೆ ಅತಿಯಾದ ಆತುರ ಮತ್ತು ಕೋಪ ಉಂಟಾಗಬಹುದು. ರಕ್ತದೊತ್ತಡ ಅಥವಾ ಸಣ್ಣಪುಟ್ಟ ಗಾಯಗಳ ಬಗ್ಗೆ ಎಚ್ಚರವಿರಲಿ.

​ಕರ್ಕಾಟಕ ರಾಶಿ:

ಏಳನೇ ಮನೆಯಲ್ಲಿ ಕುಜನಿರುವುದರಿಂದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ.

​ಅಶುಭ ಫಲ:

ಮಿಥುನ ರಾಶಿ:

ಎಂಟನೇ ಮನೆಯಲ್ಲಿ ಕುಜನಿರುವುದು ಅನಿರೀಕ್ಷಿತ ಅಡೆತಡೆಗಳನ್ನು ತರಬಹುದು. ಆರೋಗ್ಯದ ಕಡೆ ಗಮನವಿರಲಿ ಮತ್ತು ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ.

​ಧನು ರಾಶಿ:

ಎರಡನೇ ಮನೆಯಲ್ಲಿ ಕುಜನಿರುವುದರಿಂದ ಮಾತಿನಲ್ಲಿ ಕಠೋರತೆ ಬರಬಹುದು. ಇದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

​ಕುಜನ ಪ್ರಭಾವದಿಂದ ತೊಂದರೆ ಆಗುತ್ತಿದ್ದರೆ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದು ಅಥವಾ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡುವುದು ಉತ್ತಮ.

– ಲೋಹಿತ ಹೆಬ್ಬಾರ್

Source link