ಚಾಲಕ ಸಮೇತ ಅಕ್ಕಿ ಲಾರಿ ದರೋಡೆ ಮಾಡಿದ್ದ ಅಂತಾರಾಜ್ಯ ದರೋಡೆಕೋರರ ಬಂಧನ: ಲಾಕ್ ಆಗಿದ್ದೇಗೆ ಗೊತ್ತಾ? – Kannada News | Bagalkote: Mahalingapura Police Nab 8 Interstate Robbers in Rice Truck Heist Operation
ದರೋಡೆಕೋರರನ್ನು ಬಂಧಿಸಿದ ಮಹಾಲಿಂಗಪುರ ಪೊಲೀಸರು ಬಾಗಲಕೋಟೆ, ಜನವರಿ 24: ಅಕ್ಕಿ (Rice) ಸಾಗಾಟ ಮಾಡುತ್ತಿದ್ದ ಚಾಲಕ ಸೇರಿದಂತೆ ಲಾರಿ ಅಪಹರಿಸಿದ್ದ 8 ಜನ ಅಂತಾರಾಜ್ಯ ದರೋಡೆಕೋರರನ್ನು (Robbers) ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಪೊಲೀಸರು ರೋಚಕ ಕಾರ್ಯಾಚರಣೆ ನಡೆಸುವ ಮೂಲಕ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ. ವಿಜಯಪುರ ಮೂಲದ ಜಾಕೀರ್ ಮಕಾಂದಾರ್, ಸಚಿನ್ ನಾಯ್ಕೊಡಿ, ಅರ್ಪಾತ್ ತಾಳಿಕೋಟಿ, ಸಂತೋಷ್ ಕಾಂಬಳೆ, ಫಯಾಜ್ ಮಕಾಂದಾರ್, ಜಮಖಂಡಿಯ ಸಂಜು ಕಡಕೋಳ, ವಿಶ್ವನಾಥ ಲಗಳಿ, ಜಮಖಂಡಿ ತಾಲ್ಲೂಕಿನ ಮೈಗೂರು…