ಹಮೀರ್‌ಪುರ, ಮೇ 29: ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಬೀಸಿದ ಬಿರುಗಾಳಿಯಿಂದಾಗಿ ಬೆಟ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಒಂದು ಭಾಗ ಕುಸಿದು ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಮಾಣ ಕಾರ್ಯದ ಸಮಯದಲ್ಲಿ ಬಲವಾದ ಗಾಳಿ ಬೀಸಿದಾಗ ಸೇತುವೆಯ ಸ್ಲ್ಯಾಬ್ ಮತ್ತು ಪಿಯರ್, ಸ್ಕ್ಯಾಫೋಲ್ಡಿಂಗ್ ರಚನೆಯೊಂದಿಗೆ ಕುಸಿದು ಬಿದ್ದಿದೆ. ಕುರಾರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದಲ್ಲಿರುವ ಕಂದೌರ್-ಮೊರಕಂದರ್ ಸೇತುವೆಯಲ್ಲಿ ಈ ಘಟನೆ ನಡೆದಿದೆ.
ಮೀನ ರಾಶಿಯವರಿಗೆ 2026ರ ಗುರು ಸಂಚಾರವು ಮಹತ್ವದ ಪರಿವರ್ತನೆಗಳನ್ನು ತರಲಿದೆ ಎಂದು ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ. ಜೂನ್ 2ರಿಂದ ಆರಂಭವಾಗುವ ಈ ಗುರುಬಲದಿಂದ ಮೀನ ರಾಶಿಯವರಿಗೆ ಹಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಈ ಸಮಯದಲ್ಲಿ ಐದನೇ ಮನೆಯಲ್ಲಿ ಗುರು ಸಂಚಾರ ಇರುವುದರಿಂದ, ಆರ್ಥಿಕವಾಗಿ ಉತ್ತಮ ಫಲಿತಾಂಶಗಳು ಸಿಗುತ್ತವೆ. ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.
ಈ ಅವಧಿಯಲ್ಲಿ ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ಸ್ಥೈರ್ಯ ಮತ್ತು ಆತ್ಮಗೌರವ ಹೆಚ್ಚುತ್ತದೆ. ಸಾಡೇಸಾತಿ ನಡೆಯುತ್ತಿದ್ದರೂ, ಗುರು ಬಲದ ಕಾರಣ ಅದರ ಪ್ರಭಾವ ಕಡಿಮೆಯಾಗುತ್ತದೆ. ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ಸು, ಮಹಿಳೆಯರಿಗೆ ಅಧಿಕಾರ ಪ್ರಾಪ್ತಿ ಹಾಗೂ ಮಕ್ಕಳಿಂದ ಬೆಂಬಲ ದೊರೆಯುತ್ತದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶಗಳು ಲಭಿಸುತ್ತವೆ. ತಾಳ್ಮೆಯಿಂದ ಕೆಲಸ ಮಾಡುವ ಮೂಲಕ ಈ ಶುಭ ಸಮಯದ ಸಂಪೂರ್ಣ ಲಾಭ ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ವರುಣನ ಕೃಪೆಯಿಂದ ಬೆಂಗಳೂರಲ್ಲಿ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ!
ಬೆಂಗಳೂರು, ಮೇ 29: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಹೆಚ್ಚಾಗಿ ‘ಸಾಧಾರಣ’ (Moderate) ಹಾಗೂ ಕೆಲವು ಜಿಲ್ಲೆಗಳಲ್ಲಿ ‘ಉತ್ತಮ’ (Good) ಮಟ್ಟದಲ್ಲಿದೆ. ಇತ್ತೀಚೆಗೆ ಸುರಿದ ಸಾಧಾರಣ ಮಳೆ ಹಾಗೂ ಬೀಸುತ್ತಿರುವ ತಂಪಾದ ಗಾಳಿಯ ಕಾರಣದಿಂದಾಗಿ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದ್ದು, ಜನ ನಿರಾಳವಾಗಿ ಉಸಿರಾಡುವಂತಾಗಿದೆ.
ಮುಖ್ಯಾಂಶಗಳು
ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆ.
ಧಾರವಾಡದಲ್ಲಿ ವಾಯು ಮಾಲಿನ್ಯದ ಪ್ರಮಾಣ ಸೂಕ್ಷ್ಮ ಆರೋಗ್ಯದವರಿಗೆ ಹಾನಿಕಾರಕವಾಗಿದೆ.
ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ.
ಬೆಂಗಳೂರಿನ ಇಂದಿನ ವಾಯು ಗುಣಮಟ್ಟ
ಬೆಂಗಳೂರು ನಗರದಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು ಸರಾಸರಿ 66 ರಿಂದ 79 ರ ಆಸುಪಾಸಿನಲ್ಲಿದ್ದು, ಇದು ‘ಸಾಧಾರಣ’ (Moderate) ವಲಯಕ್ಕೆ ಸೇರುತ್ತದೆ. ನಗರದ ಪ್ರಮುಖ ವಲಯಗಳಾದ ಸಿಲ್ಕ್ ಬೋರ್ಡ್ ಮತ್ತು ಜಯನಗರದಲ್ಲಿ AQI ಕೊಂಚ ಹೆಚ್ಚಿದ್ದು (ಸುಮಾರು 98-100), ಇನ್ನುಳಿದಂತೆ ಹೆಬ್ಬಾಳ, ಪೀಣ್ಯ ಮತ್ತು ಮೈಸೂರು ರಸ್ತೆ ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೃಪ್ತಿಕರವಾಗಿದೆ. ಪ್ರಮುಖ ಮಾಲಿನ್ಯಕಾರಕ ಅಂಶವಾದ PM2.5 ಸಾಂದ್ರತೆಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಉಸಿರಾಟದ ತೊಂದರೆ ಇರುವವರು ಹಾಗೂ ಹಿರಿಯ ನಾಗರಿಕರು ಮುಂಜಾನೆ ಮತ್ತು ಸಂಜೆ ಸಂಚಾರದ ವೇಳೆ ಕೊಂಚ ಜಾಗ್ರತೆ ವಹಿಸುವುದು ಉತ್ತಮ.
ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿ
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲೂ ವಾಯು ಗುಣಮಟ್ಟ ಉತ್ತಮ ಹಾಗೂ ಸಾಧಾರಣ ಸ್ಥಿತಿಯಲ್ಲಿದೆ. ಕರಾವಳಿ ಭಾಗದಲ್ಲಿ ಇತ್ತೀಚೆಗೆ ಮಳೆಯಾಗಿರುವುದರಿಂದ ಇಲ್ಲಿನ AQI ಅತ್ಯಂತ ಉತ್ತಮವಾಗಿದ್ದು, 40-50 ರ ಒಳಗೆ ದಾಖಲಾಗಿದೆ. ಇದು ‘ಉತ್ತಮ’ (Good) ವಾಯು ಗುಣಮಟ್ಟವನ್ನು ಸೂಚಿಸುತ್ತದೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 55 ರಿಂದ 65 ರಷ್ಟಿದ್ದು, ಹವಾಮಾನವು ಆಹ್ಲಾದಕರವಾಗಿದೆ.
ಉತ್ತರ ಒಳನಾಡಿನ ಕೈಗಾರಿಕಾ ವಲಯ ಹಾಗೂ ಬಿಸಿಲು ಹೆಚ್ಚಿರುವ ಬಳ್ಳಾರಿ ಮತ್ತು ಕಲ್ಬುರ್ಗಿಯಲ್ಲಿ ಕಣಗಳ ತೀವ್ರತೆ (PM10) ಕೊಂಚ ಹೆಚ್ಚಾಗಿದ್ದು, AQI 85 ರಿಂದ 95 ರ ಆಸುಪಾಸಿನಲ್ಲಿದೆ. ಬಿರುಗಾಳಿ ಬೀಸುತ್ತಿರುವುದರಿಂದ ಧೂಳಿನ ಪ್ರಮಾಣ ತುಸು ಹೆಚ್ಚಾಗಿದೆ. ರಾಜ್ಯದ ಒಟ್ಟಾರೆ ವಾಯು ಗುಣಮಟ್ಟ ಪರಿಸರವು ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯದ ಅಪಾಯವನ್ನು ಹೊಂದಿಲ್ಲ ಎಂದು ವರದಿಗಳು ತಿಳಿಸಿವೆ.
ಸನಾತನ ಧರ್ಮದಲ್ಲಿ ಶುಕ್ರವಾರಕ್ಕೆ ಅತ್ಯಂತ ವಿಶೇಷವಾದ ಮಹತ್ವವಿದೆ. ಈ ದಿನವನ್ನು ಧನ, ಐಶ್ವರ್ಯ ಮತ್ತು ಸೌಭಾಗ್ಯದ ದೇವತೆಯಾದ ಲಕ್ಷ್ಮಿ ದೇವಿಗೆ ಪ್ರೀತಿಪಾತ್ರವಾದ ದಿನವೆಂದು ನಂಬಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ನಿಯಮಗಳ ಪ್ರಕಾರ, ಶುಕ್ರವಾರದಂದು ಮಾಡುವ ಕೆಲವು ಸರಳವಾದ ಪೂಜೆ ಮತ್ತು ಪರಿಹಾರಗಳು ನಮ್ಮ ಜೀವನದಲ್ಲಿ ಅದ್ಭುತವಾದ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.
ವಿಶೇಷವಾಗಿ ಮನೆಯಲ್ಲಿನ ಆರ್ಥಿಕ ಸಂಕಷ್ಟಗಳು ದೂರವಾಗಿ, ಸಂಪತ್ತು ವೃದ್ಧಿಯಾಗಬೇಕೆಂದು ಬಯಸುವವರು ಶುಕ್ರವಾರದಂದು ಭಕ್ತಿಶ್ರದ್ಧೆಗಳಿಂದ ದೇವಿಯನ್ನು ಆರಾಧಿಸಿದರೆ ಶೀಘ್ರದಲ್ಲೇ ಉತ್ತಮ ಫಲಿತಾಂಶಗಳು ಸಿಗುತ್ತವೆ. ಹಾಗಾದರೆ, ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಶುಕ್ರವಾರದಂದು ಏನೇನು ಮಾಡಬೇಕು ಮತ್ತು ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.
ಮನೆ ಹಾಗೂ ಪೂಜಾ ಕೋಣೆಯ ಸ್ವಚ್ಛತೆ:
ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛತೆ ಇರುವಲ್ಲಿ ಮಾತ್ರ ನೆಲೆಸುತ್ತಾಳೆ. ಆದ್ದರಿಂದ, ಶುಕ್ರವಾರದಂದು ಸೂರ್ಯೋದಯಕ್ಕೂ ಮುನ್ನವೇ ಎದ್ದು ಮನೆ ಸ್ವಚ್ಛಗೊಳಿಸಬೇಕು. ಮನೆಯ ಮುಖ್ಯ ದ್ವಾರಕ್ಕೆ ಅರಿಶಿನ-ಕುಂಕುಮ ಇಟ್ಟು, ಸುಂದರವಾದ ರಂಗೋಲಿಯನ್ನು ಬಿಡಿಸಬೇಕು. ನಂತರ ಪೂಜಾ ಕೋಣೆಯಲ್ಲಿರುವ ದೇವತೆಗಳ ಫೋಟೋ ಮತ್ತು ವಿಗ್ರಹಗಳನ್ನು ಸ್ವಚ್ಛಗೊಳಿಸಿ, ತಾಜಾ ಹೂವುಗಳಿಂದ ಅಲಂಕರಿಸಬೇಕು.
ಪೂಜಾ ಕೋಣೆಯಲ್ಲಿ ಇಡಬೇಕಾದ ವಿಶೇಷ ವಸ್ತುಗಳು:
ಶಾಸ್ತ್ರಗಳ ಪ್ರಕಾರ, ಪೂಜಾ ಕೋಣೆಯಲ್ಲಿ ಕೇವಲ ದೇವರ ಫೋಟೋಗಳಷ್ಟೇ ಅಲ್ಲದೆ, ಲಕ್ಷ್ಮಿ ದೇವಿಗೆ ಪ್ರಿಯವಾದ ಕೆಲವು ವಿಶೇಷ ವಸ್ತುಗಳನ್ನು ಇಡುವುದರಿಂದ ದೇವಿಯು ನಿಮ್ಮ ಮನೆಯಲ್ಲೇ ಶಾಶ್ವತವಾಗಿ ನೆಲೆಸುತ್ತಾಳೆ. ಲಕ್ಷ್ಮಿ ದೇವಿಗೆ ಕವಡೆಗಳೆಂದರೆ ಅಪಾರ ಪ್ರೀತಿ. ಪೂಜಾ ಕೋಣೆಯಲ್ಲಿ 6 ಅಥವಾ 9 ಹಳದಿ ಬಣ್ಣದ ಕವಡೆಗಳನ್ನು ಇಟ್ಟರೆ ಧನಲಾಭ ಉಂಟಾಗುತ್ತದೆ. ಇದಲ್ಲದೇ ಪೂಜಾ ಕೋಣೆಯಲ್ಲಿ ಕಾಮಧೇನು (ಹಸು ಮತ್ತು ಕರು ಒಟ್ಟಿಗಿರುವ) ವಿಗ್ರಹ ಅಥವಾ ಚಿತ್ರಪಟವನ್ನು ಇಡುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಐಶ್ವರ್ಯ ವೃದ್ಧಿಯಾಗುತ್ತದೆ. ಇದಲ್ಲದೇ ಒಂದು ಸಣ್ಣ ಪಾತ್ರೆಯಲ್ಲಿ ಅಥವಾ ಡಬ್ಬಿಯಲ್ಲಿ ಪಚ್ಚಕರ್ಪೂರ, 9 ಏಲಕ್ಕಿ ಮತ್ತು 9 ಲವಂಗಗಳನ್ನು ಒಟ್ಟಿಗೆ ಇಡಿ. ಇದರಿಂದ ಹೊರಹೊಮ್ಮುವ ದಿವ್ಯ ಸುಗಂಧವು ಲಕ್ಷ್ಮಿ ದೇವಿಯನ್ನು ಆಕರ್ಷಿಸುತ್ತದೆ. ಪಾದರಸದ ಶಿವಲಿಂಗ ಅಥವಾ ಗುಳಿಕೆಯನ್ನು ಶ್ರೀಗಂಧದ ತುಂಡಿನೊಂದಿಗೆ ಪೂಜಾ ಕೋಣೆಯಲ್ಲಿ ಇಡುವುದರಿಂದ ಶಿವ ಮತ್ತು ಲಕ್ಷ್ಮಿ ಇಬ್ಬರ ಅನುಗ್ರಹವೂ ಏಕಕಾಲದಲ್ಲಿ ದೊರೆಯುತ್ತದೆ. ಪೂಜಾ ಕೋಣೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ನವಗ್ರಹ ದೋಷಗಳು ನಿವಾರಣೆಯಾಗಿ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿ (ನೆಗೆಟಿವ್ ಎನರ್ಜಿ) ನಾಶವಾಗುತ್ತದೆ.
ದೀಪಾರಾಧನೆ: ಶುಕ್ರವಾರ ಸಾಯಂಕಾಲದ ಪ್ರದೋಷ ಕಾಲದಲ್ಲಿ (ಸೂರ್ಯಾಸ್ತದ ಸಮಯ) ಮನೆಯ ಮುಖ್ಯ ದ್ವಾರದ ಬಳಿ ಮತ್ತು ಪೂಜಾ ಕೋಣೆಯಲ್ಲಿ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು. ಇದು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅರ್ಚನೆ ಮತ್ತು ಪಾರಾಯಣ: ಸಾಧ್ಯವಾದರೆ ಲಕ್ಷ್ಮಿ ದೇವಿಯ ವಿಗ್ರಹಕ್ಕೆ ಅಥವಾ ಶ್ರೀಚಕ್ರಕ್ಕೆ ಅರಿಶಿನ ಮಿಶ್ರಿತ ಅಕ್ಷತೆ ಅಥವಾ ಬೆಳ್ಳಿಯ ಹೂವುಗಳಿಂದ ಅರ್ಚನೆ ಮಾಡಬೇಕು. ಮುತ್ತೈದೆಯರು ಕುಂಕುಮಾರ್ಚನೆ ಮಾಡುವುದು ಶ್ರೇಷ್ಠ. ಈ ದಿನ ‘ಕನಕಧಾರಾ ಸ್ತೋತ್ರ’, ‘ಶ್ರೀಸೂಕ್ತ’ ಅಥವಾ ‘ಲಕ್ಷ್ಮಿ ಅಷ್ಟೋತ್ತರ’ವನ್ನು ಪಠಿಸಬೇಕು.
ನೈವೇದ್ಯ: ದೇವಿಗೆ ಹಾಲಿನ ಪಾಯಸ (ಕ್ಷೀರಾನ್ನ) ಅಥವಾ ಪಚ್ಚಕರ್ಪೂರ ಹಾಕಿದ ಸಿಹಿಯನ್ನು ನೈವೇದ್ಯವಾಗಿ ಸಮರ್ಪಿಸಬೇಕು.
ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ:
ಶುಕ್ರವಾರದ ದಿನ ಯಾರಿಗೂ ಸಾಲವನ್ನು ನೀಡಬಾರದು ಮತ್ತು ಯಾರಿಂದಲೂ ಸಾಲವನ್ನು ಪಡೆಯಬಾರದು. ಹೀಗೆ ಮಾಡುವುದರಿಂದ ಕೈಯಲ್ಲಿರುವ ಲಕ್ಷ್ಮಿ ದೂರವಾಗುತ್ತಾಳೆ ಎಂಬ ನಂಬಿಕೆಯಿದೆ.
ಸಾಯಂಕಾಲದ ಸಮಯದಲ್ಲಿ ಮನೆಯನ್ನು ಕತ್ತಲಾಗಿ ಇಡಬಾರದು. ಕನಿಷ್ಠ ಪಕ್ಷ ಒಂದು ಸಣ್ಣ ದೀಪವನ್ನಾದರೂ ಹಚ್ಚಬೇಕು.
ಶುಕ್ರವಾರದಂದು ಮನೆಯಲ್ಲಿ ಜಗಳವಾಡುವುದು, ಕಿರುಚಾಡುವುದು ಅಥವಾ ಯಾರನ್ನಾದರೂ ನಿಂದಿಸುವುದನ್ನು ಮಾಡಬಾರದು. ಕೋಪ ಮತ್ತು ಅಶಾಂತಿ ಇರುವ ಜಾಗದಿಂದ ಲಕ್ಷ್ಮಿ ದೇವಿ ಹೊರಟುಹೋಗುತ್ತಾಳೆ.
ಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಆರಾಧಿಸಿ, ಈ ಸರಳ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುವುದರ ಜೊತೆಗೆ ಅಷ್ಟೈಶ್ವರ್ಯಗಳು ನಿಮ್ಮದಾಗುವುದು ಖಂಡಿತ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮೇ 29: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರ ಹಂಚಿಕೆ ವಿಚಾರವಾಗಿ ಡಿಕೆಶಿ ಈವರೆಗೂ ಮೌನವಾಗಿಯೇ ಇದ್ದರು. ಅಲ್ಲದೆ, ಯಾವುದೇ ರೀತಿಯ ಹೇಳಿಕೆ ನೀಡದಂತೆ ಬೆಂಬಲಿಗರಿಗೂ ಖಡಕ್ ಎಚ್ಚರಿಕೆ ನೀಡಿದ್ದರು. ಸದ್ಯ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಬಳಿ ಪತ್ರಕರ್ತರು, ‘ನೀವೇ ಮುಂದಿನ ಮುಖ್ಯಮಂತ್ರಿ ಆಗುತ್ತೀರಾ ಸರ್’ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಸದ್ಯಕ್ಕೆ ಹವಾಮಾನ ಸ್ವಲ್ಪ ತೊಂದರೆ ಕೊಡುತ್ತಿದೆ. ನಮ್ಮ ಸಿಎಂ ಸಿದ್ದರಾಮಯ್ಯ ಅವರು ಜೈಪುರದಲ್ಲಿ ಲ್ಯಾಂಡ್ ಆಗಿದ್ದಾರೆ. ಹವಾಮಾನದಲ್ಲಿ ಬಹಳಷ್ಟು ಪ್ರಕ್ಷುಬ್ಧತೆ ಇದೆ, ನಾವು ಅದನ್ನ ಮೊದಲು ನೋಡಬೇಕು’ ಎಂದು ಹೇಳಿದ್ದಾರೆ. ಆದರೆ, ಸಿಎಂ ವಿಚಾರವಾಗಿ ತುಟಿಪಿಟಿಕ್ ಅನ್ನಲಿಲ್ಲ. ಮತ್ತೊಂದೆಡೆ, ಸಿದ್ದರಾಮಯ್ಯ ಸುರಕ್ಷಿತವಾಗಿ ದೆಹಲಿ ತಲುಪಿದ್ದಾರೆ.
‘ಸದ್ಯಕ್ಕೆ ಸಿಎಂ ವಿಚಾರವಾಗಿ ಯಾವುದೇ ಹೇಳಿಕೆಗಳನ್ನು ನೀಡಬಾರದು. ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ ಶುರುವಾಗುವುದರಿಂದ ಅತ್ಯಂತ ಜಾಗರೂಕರಾಗಿ ಇರಬೇಕು. ಈಗ ಏನೇ ಹೇಳಿಕೆ ನೀಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಬಹುದು’ ಎಂದು ಡಿಕೆಶಿಗೆ ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಆ ಕಾರಣ ಅವರು ಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ಹೇಳಿಕೆ ನೀಡದೆ ಕೇವಲ ವಿಜಯದ ಸಂಕೇತ ತೋರಿಸುತ್ತಿದ್ದಾರೆ ಅಷ್ಟೇ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಜ್ಮೀರ್, ಮೇ 29: ರಾಜಸ್ಥಾನದ ಅಜ್ಮೀರ್ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಆದರೆ ಆ ಸಾವು ಸಹಜ ಸಾವಲ್ಲ ಕೊಲೆ(Murder) ಎಂಬುದು ಈಗ ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲು ಶವಗಳಿದ್ದ ಕಾರಿಗೆ ಬೆಂಕಿ ಹಚ್ಚಲಾಗಿದೆ. ಅಚ್ಚರಿಯೆಂದರೆ, ಈ ಇಡೀ ಹತ್ಯಾಕಾಂಡದ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಮೃತರ ಮನೆಯಲ್ಲೇ ಕಣ್ಣೀರಿಡುತ್ತಾ ಮೂರ್ಛೆ ಹೋದಂತೆ ನಟಿಸುತ್ತಿದ್ದ ಮೊದಲ ಪತ್ನಿ.
ಘಟನೆ ಏನು?
ಅಜ್ಮೀರ್ ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಶ್ರೀರಾಂಪುರ ಗ್ರಾಮದ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಸ್ಕಾರ್ಪಿಯೋ ಎಸ್‌ಯುವಿ (SUV) ಪತ್ತೆಯಾಗಿತ್ತು. ವಾಹನದೊಳಗೆ ಮೂರು ಮತ್ತು ಹತ್ತಿರದ ಹೊಲದಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಸುಟ್ಟ ಶವಗಳು ಸಿಕ್ಕಿದ್ದವು.
ರಾಮ್ ಸಿಂಗ್ ಚೌಧರಿ (ಮಾಜಿ ಸರಪಂಚ್)
ಪೂಸಿ ದೇವಿ (ರಾಮ್ ಸಿಂಗ್ ತಾಯಿ)
ಸೂರ್ಯಜ್ಞಾನ ದೇವಿ (ರಾಮ್ ಸಿಂಗ್ ಎರಡನೇ ಪತ್ನಿ)
ಮಹಿಮಾ ಚೌಧರಿ (ಚಿಕ್ಕಮ್ಮನ ಮಗಳು)
ಅಪಘಾತವಲ್ಲ, ಇದು ಬರ್ಬರ ಕೊಲೆ
ಆರಂಭದಲ್ಲಿ ಪೊಲೀಸರು ಇದನ್ನು ರಸ್ತೆ ಅಪಘಾತ ಎಂದು ಶಂಕಿಸಿದ್ದರು. ಆದರೆ ವಿಧಿವಿಜ್ಞಾನ ತಜ್ಞರು (FSL) ಮತ್ತು ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿದಾಗ ದೇಹದ ಮೇಲಿದ್ದ ಗಾಯಗಳು ಇವು ಕೊಲೆ ಎಂಬುದನ್ನು ಖಚಿತಪಡಿಸಿದವು. ಕೊಲೆಗಾರರು ಮೊದಲು ಮನೆಯಲ್ಲೇ ನಾಲ್ವರನ್ನು ಹತ್ಯೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿಗೆ ತುಂಬಿಸಿ ಹೆದ್ದಾರಿಗೆ ತಂದು ಬೆಂಕಿ ಹಚ್ಚಿದ್ದರು.
ಪೊಲೀಸರು ತನಿಖೆಗಾಗಿ ರಾಮ್ ಸಿಂಗ್ ಮನೆಗೆ ಹೋದಾಗ, ಅವರ ಮೊದಲ ಪತ್ನಿ ಸುನೀತಾ ಗ್ರಾಮದ ಮಹಿಳೆಯರ ನಡುವೆ ಕುಳಿತು ಜೋರಾಗಿ ಅಳುತ್ತಾ, ಎದೆಗೆ ಹೊಡೆದುಕೊಳ್ಳುತ್ತಾ ತೀವ್ರ ದುಃಖದಲ್ಲಿರುವಂತೆ ನಟಿಸುತ್ತಿದ್ದಳು. ತಾಯಿಗೆ ಎದೆನೋವು ಬಂದಿದ್ದರಿಂದ ರಾಮ್ ಸಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಪೊಲೀಸರಿಗೆ ಸುಳ್ಳು ಕಥೆ ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಳು.
ಪಿತೂರಿ ಬಯಲಾಗಿದ್ದು ಹೇಗೆ?
ಅಜ್ಮೀರ್ ಎಸ್‌ಪಿ ಹರ್ಷವರ್ಧನ್ ಅಗರ್‌ವಾಲ್ ನೇತೃತ್ವದ ತಂಡಕ್ಕೆ ಕೌಟುಂಬಿಕ ಹಿನ್ನೆಲೆ ಕೆದಕಿದಾಗ ಅಸಲಿ ಸತ್ಯ ತಿಳಿಯಿತು. ರಾಮ್ ಸಿಂಗ್ ಇಬ್ಬರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮದುವೆ ವಿಷಯವಾಗಿ ಮನೆಯಲ್ಲಿ ದೀರ್ಘಕಾಲದ ಆಸ್ತಿ ಮತ್ತು ಕೌಟುಂಬಿಕ ವಿವಾದವಿತ್ತು. ಬುಧವಾರ ತಡರಾತ್ರಿ ಮನೆಯಲ್ಲಿ ಭೀಕರ ಜಗಳ ನಡೆದಿದೆ. ಈ ವೇಳೆ ಮೊದಲ ಪತ್ನಿ ಸುನೀತಾ, ಆಕೆಯ ಮಗಳು ಸರಿತಾ ಮತ್ತು ಅಪ್ರಾಪ್ತ ಮಗ ಸೇರಿ ಹರಿತವಾದ ಆಯುಧಗಳಿಂದ ನಾಲ್ವರನ್ನು ಭೀಕರವಾಗಿ ಕತ್ತರಿಸಿ ಕೊಂದಿದ್ದಾರೆ.
ಗ್ರಾಮಸ್ಥರು ನೀಡಿದ ಸುಳಿವು ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ಆರೋಪಿ ಸುನೀತಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಹಂತಕಿಯ ಈ ಕ್ರೂರ ನಾಟಕ ಇಡೀ ಗ್ರಾಮಸ್ಥರನ್ನು ಆಘಾತಕ್ಕೆ ದೂಡಿದೆ.
ಸ್ಟಾರ್ ಪ್ಲಸ್ ವಾಹಿನಿಯಲ್ಲಿ 2013ರಲ್ಲಿ ಪ್ರಸಾರವಾದ ಪೌರಾಣಿಕ ಧಾರಾವಾಹಿ‘ಮಹಾಭಾರತ’ (Mahabharat) ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸೀರಿಯಲ್‌ಗಳಲ್ಲಿ ಒಂದು. 16 ಸೆಪ್ಟೆಂಬರ್ 2013 ರಿಂದ 16 ಆಗಸ್ಟ್ 2014ರವರೆಗೆ ಒಟ್ಟು 267 ಸಂಚಿಕೆಗಳಾಗಿ ಮೂಡಿಬಂದ ಈ ಅದ್ಭುತ ಸರಣಿಯಲ್ಲಿ ಹಲವು ಪ್ರಮುಖ ನಟರು ಬಣ್ಣ ಹಚ್ಚಿದ್ದರು. ಈ ಧಾರಾವಾಹಿಯಲ್ಲಿ ಪಾಂಡವರ ತಾಯಿ ‘ಕುಂತಿ’ ಪಾತ್ರದಲ್ಲಿ ನಟಿಸಿದ್ದ ಮುಸ್ಲಿಂ ನಟಿ ಶಫಕ್ ನಾಜ್ ಅವರ ಬಗ್ಗೆ ಒಂದು ಕುತೂಹಲಕಾರಿ ವಿಷಯ ಇಲ್ಲಿದೆ.
ಕೇವಲ 21ನೇ ವಯಸ್ಸಿಗೆ ತಾಯಿ ಪಾತ್ರ!
ಧಾರಾವಾಹಿಯಲ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಕಷ್ಟಕರವಾದ ಕುಂತಿ ಪಾತ್ರಕ್ಕೆ ಶಫಕ್ ನಾಜ್ ಆಯ್ಕೆಯಾದಾಗ ಅವರಿಗೆ ಕೇವಲ 21 ವರ್ಷ ವಯಸ್ಸು! ಆಶ್ಚರ್ಯದ ಸಂಗತಿಯೆಂದರೆ, ಅವರ ಮಕ್ಕಳಾಗಿ ನಟಿಸಿದ ಪಾಂಡವರು ಮತ್ತು ಕರ್ಣನ ಪಾತ್ರಧಾರಿಗಳು ನಿಜ ಜೀವನದಲ್ಲಿ ಈ ನಟಿಗಿಂತ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರಾಗಿದ್ದರು.
ಯುಧಿಷ್ಠಿರ (ರೋಹಿತ್ ಭಾರದ್ವಾಜ್’: ಸರಣಿಯಲ್ಲಿ ಧರ್ಮರಾಯನಾಗಿ ನಟಿಸಿದ್ದ ರೋಹಿತ್ ಭಾರದ್ವಾಜ್ ಅವರಿಗೆ ಆಗ 31 ವರ್ಷ ವಯಸ್ಸು. ಅಂದರೆ ತಾಯಿಯ ಪಾತ್ರ ಮಾಡಿದ್ದ ಶಫಕ್ ನಾಜ್ ಅವರಿಗಿಂತ ರೋಹಿತ್ 10 ವರ್ಷ ದೊಡ್ಡವರಾಗಿದ್ದರು.
ಭೀಮ (ಸೌರವ್ ಗುರ್ಜರ್): ಭೀಮನ ಪಾತ್ರದಲ್ಲಿ ಅಬ್ಬರಿಸಿದ್ದ ಸೌರವ್ ಗುರ್ಜರ್ ಅವರಿಗೆ ಆ ಸಮಯದಲ್ಲಿ 29 ವರ್ಷ ವಯಸ್ಸಾಗಿತ್ತು. ಇವರೂ ಕೂಡ ತೆರೆಯ ಮೇಲಿನ ತಮ್ಮ ತಾಯಿಗಿಂತ ವಯಸ್ಸಿನಲ್ಲಿ ಹಿರಿಯರು.
ಕರ್ಣ (ಅಹಂ ಶರ್ಮಾ): ಸೂರ್ಯಪುತ್ರ ಕರ್ಣನ ಪಾತ್ರದ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಭಾರಿ ಪ್ರಸಿದ್ಧಿ ಪಡೆದ ನಟ ಅಹಂ ಶರ್ಮಾ ಅವರಿಗೆ ಆಗ 24 ವರ್ಷ ವಯಸ್ಸಾಗಿತ್ತು. ಇವರೂ ಸಹ ಶಫಕ್‌ಗಿಂತ ದೊಡ್ಡವರಾಗಿದ್ದರು.
ಈಗ ಎಲ್ಲಿದ್ದಾರೆ ಶಫಕ್ ನಾಜ್?
ಚಿಕ್ಕ ವಯಸ್ಸಿನಲ್ಲೇ ಹಿರಿಯ ನಟರಿಗೆ ತಾಯಿಯಾಗಿ ನಟಿಸಿ, ಆ ಕಠಿಣ ಪಾತ್ರಕ್ಕೆ ಶಫಕ್ ನಾಜ್ ಸಂಪೂರ್ಣ ನ್ಯಾಯ ಒದಗಿಸಿದ್ದರು. ಅವರ ನಟನೆಗೆ ಆಗ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಇನ್ನು ಇವರ ಪ್ರಸ್ತುತ ಜೀವನದ ಬಗ್ಗೆ ಹೇಳುವುದಾದರೆ, ಶಫಕ್ ಸದ್ಯ ಕಿರುತೆರೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ವೆಬ್ ಸರಣಿಗಳಲ್ಲಿ ಸಕ್ರಿಯರಾಗಿದ್ದು, ಡಿಜಿಟಲ್ ಪರದೆಯ ಮೇಲೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಎಂಐ ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಅದರ ಮೊದಲ ಹೆಜ್ಜೆಯಾಗಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ತಲೆದಂಡವಾಗಲಿದೆ. (PC: IPL)
ಎಕ್ಸ್ಪ್ರೆಸ್ ಸ್ಪೋರ್ಟ್ಸ್ ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ. ಕಳೆದ ಮೂರು ಸೀಸನ್ಗಳಲ್ಲಿ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. (PC: IPL)
ಈ ಮೂರು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪಾಂಡ್ಯ 38 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಎಂಐ ಪಡೆ ಗೆದ್ದಿರುವುದು ಕೇವಲ 15 ಮ್ಯಾಚ್ಗಳಲ್ಲಿ ಮಾತ್ರ. ಅಂದರೆ ಬರೋಬ್ಬರಿ 23 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲನುಭವಿಸಿದೆ. (PC: IPL)
ಈ ಸೋಲುಗಳೊಂದಿಗೆ ಹಾರ್ದಿಕ್ ಪಾಂಡ್ಯ ಹೊಂದಿರುವ ಗೆಲುವಿನ ಶೇಕಡಾವಾರು ಕೇವಲ 39.4 ಪರ್ಸೆಂಟ್ ಮಾತ್ರ. ಅತ್ತ 158 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ 55.06% ಹೊಂದಿದ್ದರು. ಅಂದರೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತನ್ನ ಹಳೆಯ ಖದರ್ ಕಳೆದುಕೊಂಡಿದೆ. (PC: IPL)
ಹೀಗಾಗಿಯೇ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಇದೀಗ ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇದಾಗ್ಯೂ ಹೊಸ ನಾಯಕ ಯಾರಾಗಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ ಐಪಿಎಲ್ 2027 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬುದನ್ನು ತಿಳಿಯಲು ಮುಂದಿನ ಹರಾಜಿನವರೆಗೆಕಾಯಲೇಬೇಕು. (PC: IPL)
ಹರಿದ ಬಟ್ಟೆ ಮನೆ ಒರೆಸಲು ಬಳಸುವುದುImage Credit source: Pinterest
ಶುಚಿತ್ವವು ನಮ್ಮ ಬದುಕು, ಕುಟುಂಬ ಮತ್ತು ಮನೆಗೆ ಶ್ರೇಯಸ್ಸು, ಸಮೃದ್ಧಿ ಹಾಗೂ ನೆಮ್ಮದಿ ತರುತ್ತದೆ. ಮನೆಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ನಾವು ಬಳಸುವ ವಸ್ತುಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಹಿಂದಿನ ಕಾಲದಿಂದಲೂ ಮನೆ ಒರೆಸುವ ವಿಧಾನಗಳಲ್ಲಿ ಬದಲಾವಣೆಗಳಾಗಿವೆ. ಆಧುನಿಕ ಯುಗದಲ್ಲಿ ಮಾಫ್‌ಗಳ ಬಳಕೆ ಸಾಮಾನ್ಯವಾದರೆ, ಕೆಲವರು ಈಗಲೂ ಹಳೆಯ, ಉಪಯೋಗಿಸಿದ, ಹರಿದ ಬಟ್ಟೆಗಳನ್ನು ಮನೆ ಒರೆಸಲು ಬಳಸುತ್ತಾರೆ. ಇದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಉತ್ತರ ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಮನೆಯ ಶುಚಿಗೆ ಚಂದ್ರ, ಶುಕ್ರ ಮತ್ತು ರವಿ ಈ ಮೂರು ಗ್ರಹಗಳು ಕಾರಕತ್ವವಾಗಿವೆ. ಇವುಗಳಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಪಾತ್ರ ಪ್ರಧಾನವಾಗಿದೆ. ಚಂದ್ರನು ಶಾಂತಿ, ತಾಳ್ಮೆ, ಸಹನೆ ಮತ್ತು ಮನಸ್ಸಿನ ತಂಪುತನಕ್ಕೆ ಅಧಿಪತಿ. ಶುಕ್ರನು ಐಷಾರಾಮಿ ಜೀವನ, ಉತ್ತಮ ಉಡುಗೆ-ತೊಡುಗೆ ಮತ್ತು ಆಹಾರದ ಸುಖಕ್ಕೆ ಕಾರಕನಾಗಿದ್ದಾನೆ. ಮನೆಯನ್ನು ಶುದ್ಧವಾಗಿ ಇಡಲು ಈ ಗ್ರಹಗಳ ಪ್ರಭಾವ ಅತ್ಯಗತ್ಯ.
ಹಳೆಯ, ಕೊಳಕು ಅಥವಾ ಹರಿದ ಬಟ್ಟೆಗಳನ್ನು ಮನೆ ಒರೆಸಲು ಉಪಯೋಗಿಸಿದಾಗ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಎಚ್ಚರಿಸುತ್ತಾರೆ. ಇಂತಹ ಬಟ್ಟೆಗಳ ಬಳಕೆಯಿಂದ ಹೊರಗಿನ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಚಂದ್ರನಿಗೆ ದಕ್ಕೆ ಉಂಟಾದಾಗ ನಮ್ಮ ಭಾವನೆಗಳಿಗೆ ತೊಂದರೆಯಾಗಿ, ಗಂಡ-ಹೆಂಡತಿಯ ಜಗಳ, ಮಕ್ಕಳ ಕಲಹ, ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಶುಕ್ರನ ಪ್ರಭಾವ ಕಡಿಮೆಯಾದಾಗ ಮುಖದ ತೇಜಸ್ಸು ಕುಂದಿ, ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಹರಿದ ಬಟ್ಟೆಗಳನ್ನು ಧರಿಸುವುದು ಅಥವಾ ಅವುಗಳಿಂದ ಮನೆ ಒರೆಸುವುದು ಸಹ ಅಶುಭ. ರಾಹು ಗ್ರಹವು ಹರಿದ ಬಟ್ಟೆಗಳಿಗೆ ಕಾರಕನಾಗಿದ್ದು, ಇದರ ಪ್ರಭಾವದಿಂದ ಆಕಸ್ಮಿಕ ಘಟನೆಗಳು, ಕೋಪ, ಮತ್ತು ತಕ್ಷಣದ ಪ್ರತಿಕ್ರಿಯೆಗಳು ಹೆಚ್ಚಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹರಿದ ಬಟ್ಟೆಗಳನ್ನು ಧರಿಸುವುದು ಫ್ಯಾಷನ್ ಆಗಿದ್ದರೂ, ಇದು ಶುಭವೆಂದು ಪರಿಗಣಿಸಲಾಗುವುದಿಲ್ಲ.
ಹಳೆಯ ಬಟ್ಟೆಗಳಿಂದ ಮನೆ ಒರೆಸುವುದರಿಂದ ಮನೆಯಲ್ಲಿ ಅಸ್ಥಿರತೆ, ಅಶಾಂತಿ, ಅತಿಯಾದ ನಿದ್ರೆ, ದುಃಖ ಮತ್ತು ಒಂಟಿತನ ಕಾಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತಮ ಕಾಲದಲ್ಲಿ ಮನೆ ಒರೆಸುವುದರಿಂದ ಸೂರ್ಯನ ಪ್ರಭಾವವೂ ಮನೆಯ ಮೇಲೆ ಇರುತ್ತದೆ. ಸೂರ್ಯನು ಆರೋಗ್ಯದ ಕಾರಕನಾಗಿರುವುದರಿಂದ, ಹಳೆಯ ಬಟ್ಟೆಗಳ ಬಳಕೆಯು ಮನೆಯ ಸದಸ್ಯರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ರಾಜಕೀಯ ವ್ಯಕ್ತಿಗಳು, ವ್ಯಾಪಾರಸ್ಥರು, ಇಂಜಿನಿಯರ್‌ಗಳು ಸೇರಿದಂತೆ ಯಾವುದೇ ವೃತ್ತಿಯಲ್ಲಿರುವವರಿಗೂ ವೃತ್ತಿಜೀವನದಲ್ಲಿ ಸಣ್ಣಪುಟ್ಟ ಕಂಟಕಗಳು ಎದುರಾಗಬಹುದು.
ಆದ್ದರಿಂದ, ಮನೆಯನ್ನು ಶುಚಿಗೊಳಿಸಲು ಹೊಸ ಬಟ್ಟೆಗಳನ್ನು ಅಥವಾ ಸೂಕ್ತವಾದ ಶುಚಿಗೊಳಿಸುವ ಸಾಧನಗಳನ್ನು ಬಳಸುವುದು ಅತ್ಯಂತ ಶುಭ. ಹಳೆಯ ಮತ್ತು ಹರಿದ ಬಟ್ಟೆಗಳನ್ನು ಮನೆ ಸ್ವಚ್ಛತೆಗೆ ಬಳಸುವುದನ್ನು ತ್ಯಜಿಸಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ನೆಮ್ಮದಿಯ ವಾತಾವರಣವನ್ನು ಕಾಪಾಡಿಕೊಳ್ಳುವಂತೆ ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜೀ ಕನ್ನಡ ವಾಹಿನಿಯು ಸದಾ ವಿನೂತನ ಕಥಾಹಂದರ ಹೊಂದಿರುವ ಧಾರಾವಾಹಿಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಈ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವ ಮತ್ತೊಂದು ಸೀರಿಯಲ್ ಎಂದರೆ ಅದು ‘ಜಗದ್ಧಾತ್ರಿ’. ಸದ್ಯ ಪ್ರಸಾರ ಕಾಣುತ್ತಿರುವ ಈ ಧಾರಾವಾಹಿ ಕಿರುತೆರೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ತನ್ನ ವಿಭಿನ್ನ ಕಥಾಹಂದರ ಹಾಗೂ ತಾರಾಗಣದಿಂದಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಎಂದರೆ ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಗೆದ್ದ ಖ್ಯಾತ ನಟಿ ಮೋಕ್ಷಿತಾ ಪೈ. ‘ಪಾರು’ ಸೇರಿದಂತೆ ಹಲವು ಸೀರಿಯಲ್‌ಗಳ ಮೂಲಕ ಈ ಹಿಂದೆ ಜನಪ್ರಿಯತೆ ಗಳಿಸಿದ್ದ ಮೋಕ್ಷಿತಾ, ಈಗ ‘ಜಗದ್ಧಾತ್ರಿ’ಯಾಗಿ ಕಮಾಲ್ ಮಾಡಲು ಮರಳಿದ್ದಾರೆ ಎನ್ನಲಾಗಿದೆ. ಸದಾ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅವರು, ಈ ಸೀರಿಯಲ್‌ನಲ್ಲಿ ವಿಭಿನ್ನ ಶೇಡ್ ಹಾಗೂ ಬಲಿಷ್ಠ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅವರ ನಟನೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಧಾರಾವಾಹಿ ದೊಡ್ಡ ಹಬ್ಬವಾಗಿ ಪರಿಣಮಿಸಿದೆ.
ಈ ಮಧ್ಯೆ ಕಿರುತೆರೆ ವಲಯದಲ್ಲಿ ಮತ್ತೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹೌದು, ಮೋಕ್ಷಿತಾ ಪೈ ಅವರ ಜೊತೆಗೆ ಕನ್ನಡ ಕಿರುತೆರೆಯ ಮತ್ತೊಬ್ಬ ಸ್ಟಾರ್ ನಟಿ ಕವಿತಾ ಗೌಡ ಕೂಡ ‘ಜಗದ್ಧಾತ್ರಿ’ ಬಳಗವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ‘ಚಿನ್ನು’ ಪಾತ್ರದ ಮೂಲಕ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವ ಕವಿತಾ ಗೌಡ, ಈ ಸೀರಿಯಲ್ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ಕವಿತಾ ಗೌಡ ಅವರ ಎಂಟ್ರಿ ಅಧಿಕೃತವಾದರೆ, ಮೋಕ್ಷಿತಾ ಮತ್ತು ಕವಿತಾ ಅವರಂತಹ ಇಬ್ಬರು ಪ್ರಭಾವಶಾಲಿ ನಟಿಯರನ್ನು ಒಂದೇ ಪರದೆಯ ಮೇಲೆ ನೋಡುವುದು ವೀಕ್ಷಕರಿಗೆ ಡಬಲ್ ಧಮಾಕಾ ಸಿಕ್ಕಂತಾಗಲಿದೆ. ಇದು ಧಾರಾವಾಹಿಯ ಟಿಆರ್‌ಪಿ (TRP) ರೇಟಿಂಗ್ ಅನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಕುತೂಹಲಕಾರಿ ತಿರುವುಗಳು, ಅದ್ದೂರಿ ಮೇಕಿಂಗ್ ಮತ್ತು ಸ್ಟಾರ್ ತಾರಾಗಣವನ್ನು ಹೊಂದಿರುವ ‘ಜಗದ್ಧಾತ್ರಿ’ ಸೀರಿಯಲ್ ಜೀ ಕನ್ನಡದಲ್ಲಿ ಯಾವಾಗ ಪ್ರಸಾರ ಕಾಣಲಿದೆ ಎಂಬ ಕುತೂಹಲ ಮೂಡಿದೆ. ಕವಿತಾ ಗೌಡ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ.