‘ಇಂದಿರಾ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಟೈಟಲ್ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರತಂಡ – Kannada News | New Kannada movie titled Indira But not a political film
ಇಂದಿನ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ‘ಇಂದಿರಾ’ ಸಿನಿಮಾ (Indira Movie) ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಜೆನ್ ಜೀ (Gen Z) ಜೀವನ ಶೈಲಿಯ ಕುರಿತ ಕಥೆ ಇರಲಿದೆ. ಈ ತಲೆಮಾರಿನ ಯುವಕರ ಅಂಗೈಯಲ್ಲಿ ಯಾವಾಗಲೂ ಸ್ಮಾರ್ಟ್ ಪೋನ್ ಇರುತ್ತದೆ. ಈ ತಂತ್ರಜ್ಞಾನವನ್ನು ಹೇಗೆಲ್ಲ ಬಳಸಿಕೊಳ್ಳಲಾಗುತ್ತಿದೆ? ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ಕಥೆಯನ್ನು ‘ಇಂದಿರಾ’ ಸಿನಿಮಾ ಮೂಲಕ ಹೇಳಲಾಗುವುದು. ಈ ಹಿಂದೆ ‘ರಾವೆನ್’ ಸಿನಿಮಾ ನಿರ್ದೇಶಿಸಿದ್ದ ವೇದ್ ಅವರು ಈಗ ‘ಇಂದಿರಾ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ…