ಚೆನ್ನೈ vs ಎಸ್ಆರ್ಎಚ್ ಪಂದ್ಯದಲ್ಲಿ ಹೈದರಾಬಾದ್ ತಂಡ ಗೆದ್ದು ಬೀಗಿತ್ತು. ಇದಾದ ಬಳಿಕ ಇಶನ್ ಕಿಶನ್ ಅವರು ನಡೆದುಕೊಂಡ ರೀತಿ ಚರ್ಚೆಗೆ ಗ್ರಾಸವಾಗಿತ್ತು. ‘ವಿಸಿಲ್ ಹೊಡೆಯುತ್ತಾ ಮನೆಗೆ ಹೋಗಿ’ ಎಂದು ಕಿಶನ್ ಹೇಳಿದ್ದರು. ಅಲ್ಲದೆ, ಹೋಗಿ ಹೋಗಿ ಎಂದು ಸನ್ನೆ ಮಾಡಿದ್ದರು. ಈಗ ಎಲಿಮಿನೇಟರ್ ಪಂದ್ಯದಲ್ಲಿ ಇಶಾನ್ ತಂಡವೇ ಹೊರ ಹೋಗಿದ್ದಾರೆ. ಇದಾದ ಬಳಿಕ ಚೆನ್ನೈ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದನ್ನು ಕರ್ಮ ಎಂದು ಕರೆದಿದ್ದಾರೆ.
ಕ್ರೀದ್ ಹಿನ್ನೆಲೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ
ಬೆಂಗಳೂರು, ಮೇ 28: ನಗರದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಹಲವೆಡೆ ಸಂಚಾರ ಮಾರ್ಗಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಬೆಂಗಳೂರಿನ (Bengaluru) ದಕ್ಷಿಣ ವಿಭಾಗದ ಸಂಚಾರ ಪೊಲೀಸ್ ಉಪ ಆಯುಕ್ತರು ತಮ್ಮ ಅಧಿಕೃತ X ಖಾತೆಯಲ್ಲಿ ನಗರದ ವಾಹನ ಸವಾರರಿಗಾಗಿ ಪ್ರಮುಖ ಸಂಚಾರ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ. ರಸ್ತೆ ಕಾಮಗಾರಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದ್ದು, ಪರ್ಯಾಯ ಮಾರ್ಗಗಳ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ಮುಖ್ಯಾಂಶಗಳು
ಬಕ್ರೀದ್ ಪ್ರಯುಕ್ತ ಬನ್ನೇರುಘಟ್ಟ ಮತ್ತು ಕನಕಪುರ ರಸ್ತೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ಗುರಪ್ಪನಪಾಳ್ಯ ಹಾಗೂ ಕೆ.ಎಸ್ ಲೇಔಟ್ ಈದ್ಗಾ ಮೈದಾನದ ಸುತ್ತಮುತ್ತ ನಿರ್ಬಂಧ ಹೇರಲಾಗಿದೆ.
ವಾಹನ ಸವಾರರ ಸುಗಮ ಸಂಚಾರಕ್ಕಾಗಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ಮೇ 28ರಂದು ಬೆಳಿಗ್ಗೆ 08-00 ಗಂಟೆಯಿಂದ 12-00 ಗಂಟೆಯವರೆಗೆ ಬಕ್ರೀದ್ ಹಬ್ಬದ ಪ್ರಯುಕ್ತ ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಬನ್ನೇರುಘಟ್ಟ ಮುಖ್ಯ ರಸ್ತೆಯ, ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ಮತ್ತು ಕೆ.ಎಸ್ ಲೇಔಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಔಟರ್ ರಿಂಗ್ ರಸ್ತೆಯಲ್ಲಿರುವ ಈದಾ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದು, ಸಾರ್ವಜನಿಕ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ದಕ್ಷಿಣ ವಿಭಾಗ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
🚧 ಸಂಚಾರ ಸಲಹೆ / Traffic Advisory 🚧
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ @micolyttrfps ಹಾಗೂ @kslayoutrfps ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗಗಳಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ವಿನಂತಿ. pic.twitter.com/zzFmpGL0MV
ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿರ್ಬಂಧ
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಗರ್ ಆಸ್ಪತ್ರೆ ಜಂಕ್ಷನ್ ನಿಂದ ಗುರಪ್ಪನಪಾಳ್ಯ ಜಂಕ್ಷನ್ ವರೆಗೆ.
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಯಿರಾಂ ಜಂಕ್ಷನ್ ನಿಂದ ಗುರಪ್ಪನಪಾಳ್ಯ ಜಂಕ್ಷನ್ ವರೆಗೆ.
39ನೇ ಕ್ರಾಸ್ ರಸ್ತೆಯಲ್ಲಿ ಗುರಪ್ಪನಪಾಳ್ಯ ಜಂಕ್ಷನ್ ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್ ವರೆಗೆ.
ಪರ್ಯಾಯ ಮಾರ್ಗಗಳು
ಡೈರಿ ಸರ್ಕಲ್ ನಿಂದ ಬರುವ ವಾಹನಗಳು ಸಾಗರ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ತಿಲಕ ನಗರ ಮುಖ್ಯ ರಸ್ತೆಯಲ್ಲಿ ಚಲಿಸಿ ಸ್ವಾಗತ್ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು, ಈಸ್ಟ್ ಎಂಡ್ ಮುಖ್ಯ ರಸ್ತೆಯಲ್ಲಿ ಚಲಿಸಿ, ಈಸ್ಟ್ ಎಂಡ್ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಜಯದೇವಾ “ಯು” ಟರ್ನ ಜಂಕ್ಷನ್ನಲ್ಲಿ “ಯು” ತಿರುವು ಪಡೆದು ಹೊರ ರಿಂಗ್ ರಸ್ತೆಯಲ್ಲಿ ಚಲಿಸಿ ಜಯದೇವಾ ಜಂಕ್ಷನ್ ಸರ್ವಿಸ್ ರಸ್ತೆಯಲ್ಲಿ ಮುಕ್ತ ಎಡ ತಿರುವು ಪಡೆದು ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿದೆ.
ಬನ್ನೇರುಘಟ್ಟ ಮುಖ್ಯ ರಸ್ತೆ ಜಿ ಡಿ ಮರ ಜಂಕ್ಷನ್ ( ನೆಕ್‌ಸ್‌ಸ್ ವೆಗಾ ಸಿಟಿ ಮಾಲ್ ಜಂಕ್ಷನ್ ಕಡೆಯಿಂದ ಡೈರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಸಾಯಿ ರಾಂ ಜಂಕ್ಷನ ಸರ್ವಿಸ್ ರಸ್ತೆಯಲ್ಲಿ ಮುಕ್ತ ಎಡ ತಿರುವು ಪಡೆದು ಜಯದೇವಾ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು. ಈಸ್ಟ್ ಎಂಡ್ ಜಂಕ್ಷನ್ ನಲ್ಲಿ ಬಲಕ್ಕೆ ತಿರುವು ಪಡೆದು, ಈಸ್ಟ್ ಎಂಡ್ ಮುಖ್ಯ ರಸ್ತೆಯ ಮುಖಾಂತರ ಸ್ವಾಗತ್ ಜಂಕ್ಷನ್ ತಲುಪಿ ಬಲ ತಿರುವು ಪಡೆದು, ಸಾಗರ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಪಡೆದು, ಡೈರಿ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.
ಕೆ.ಎಸ್ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಸಂಚಾರ ನಿರ್ಬಂಧ
ಕನಕಪುರ ಮುಖ್ಯ ರಸ್ತೆ ಸಾರಕ್ಕಿ ಸಿಗ್ನಲ್ ನಿಂದ ಔಟರ್ ರಿಂಗ್ ರಸ್ತೆ ಕೆ.ಎಸ್. ಲೇಔಟ್ ಸಿಗ್ನಲ್ ವರೆಗೆ
ಪರ್ಯಾಯ ಮಾರ್ಗಗಳು
ಕನಕಪುರ ಮುಖ್ಯ ರಸ್ತೆ ಸಾರಕ್ಕಿ ಸಿಗ್ನಲ್ ನಿಂದ ಮುಂದೆ ಸಾಗಿ ಸಾರಕ್ಕಿ ಮಾರ್ಕೆಟ್-ಬನಶಂಕರಿ ಬಸ್ ನಿಲ್ದಾಣ (ಎಡ ತಿರುವು)- ಬೇಂದ್ರೆ ಸರ್ಕಲ್ ಮೂಲಕ ಔಟರ್ ರಿಂಗ್ ರಸ್ತೆ ತಲುಪಿ ಅವಶ್ಯಕ ಮಾರ್ಗಗಳಲ್ಲಿ ತೆರಳಬಹುದು.
ಮದುವೆ ಆಮಂತ್ರಣ ಪತ್ರಿಕೆImage Credit source: Pinterest
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋಗಳನ್ನು ಹಾಕುವ ಇತ್ತೀಚಿನ ಪ್ರವೃತ್ತಿ ಶುಭವೋ ಅಶುಭವೋ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ಅನಾದಿ ಕಾಲದಿಂದಲೂ ವಿವಾಹ ಆಮಂತ್ರಣವನ್ನು ವೈಯಕ್ತಿಕವಾಗಿ ನೀಡುವುದು ಅಥವಾ ಕರೆಯುವ ಪದ್ಧತಿ ಇತ್ತು. ಕಲಿಯುಗದಲ್ಲಿ ಆಮಂತ್ರಣ ಪತ್ರಿಕೆಗಳ ಬಳಕೆ ಹೆಚ್ಚಾಗಿದೆ ಮತ್ತು ಕಾಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳಾಗಿವೆ. ಸಾಂಪ್ರದಾಯಿಕವಾಗಿ, ಲಗ್ನ ಪತ್ರಿಕೆಗಳಲ್ಲಿ ಕುಲದೇವರು, ಇಷ್ಟದೇವರು, ಗಣಪತಿಯ ಚಿತ್ರಗಳು, ಹಾಗೂ ಹಿರಿಯರ, ಸ್ವಾಮೀಜಿಗಳ, ಮಠಾಧೀಶರ, ತಂದೆ-ತಾಯಿಗಳ ಹೆಸರುಗಳನ್ನು ಮುದ್ರಿಸುವ ಪದ್ಧತಿ ಇತ್ತು. ಇದು ಹಿರಿಯರ ಆಶೀರ್ವಾದ ಮತ್ತು ದೇವರ ಅನುಗ್ರಹವನ್ನು ಆಹ್ವಾನಿಸುವ ಸಂಕೇತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ಕೆಲವು ಆಮಂತ್ರಣ ಪತ್ರಿಕೆಗಳಲ್ಲಿ ವಧು-ವರರ ಫೋಟೋಗಳನ್ನು ಹಾಕುವ ಪ್ರವೃತ್ತಿ ಪ್ರಾರಂಭವಾಗಿದೆ. ಇದು ಸರಿಯೇ ಅಥವಾ ತಪ್ಪೇ ಎಂಬುದು ಈ ಚರ್ಚೆಯ ಮೂಲ ವಿಷಯವಾಗಿದೆ.
ಹಿಂದೂ ಸಂಪ್ರದಾಯದ ಪ್ರಕಾರ, ಲಗ್ನ ಪತ್ರಿಕೆಗೆ ಅದರದೇ ಆದ ವಿಶಿಷ್ಟ ಸ್ಥಾನಮಾನವಿದೆ. ವಿವಾಹ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು, ಲಗ್ನ ಪತ್ರಿಕೆಗೆ ಪೂಜೆ ಸಲ್ಲಿಸಿ, ನಾಲ್ಕು ಭಾಗಗಳಲ್ಲಿ ಅರಿಶಿಣ ಕುಂಕುಮವನ್ನಿಟ್ಟು, ಭಗವಂತನ, ಕುಲದೇವರ, ಇಷ್ಟದೇವರ, ಹಾಗೂ ವಿನಾಯಕನಿಗೆ ಅರ್ಪಿಸಿದ ನಂತರವೇ ಹಂಚಿಕೆ ಮಾಡಲಾಗುತ್ತದೆ. ಇದು ದೇವರ ಆಶೀರ್ವಾದವನ್ನು ಪಡೆಯುವ ಪವಿತ್ರ ಪ್ರಕ್ರಿಯೆಯಾಗಿದೆ. ಈ ಪವಿತ್ರವಾದ ಪತ್ರಿಕೆಯಲ್ಲಿ ಜೀವಂತ ವ್ಯಕ್ತಿಗಳಾದ ವಧು-ವರರ ಫೋಟೋಗಳನ್ನು ಹಾಕುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು ಎಂದು ಹೇಳಲಾಗಿದೆ.
ವಧು-ವರರ ಫೋಟೋಗಳನ್ನು ಆಮಂತ್ರಣ ಪತ್ರಿಕೆಗಳಲ್ಲಿ ಹಾಕುವುದರಿಂದ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇದೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಇದು ಅವರ ಆರೋಗ್ಯದಲ್ಲಿ ಏರುಪೇರು, ವೈವಾಹಿಕ ಜೀವನದಲ್ಲಿ ಮನಸ್ತಾಪಗಳು ಅಥವಾ ಮದುವೆಗೆ ವಿಘ್ನಗಳನ್ನು ತಂದೊಡ್ಡಬಹುದು. ಅನೇಕರಿಗೆ ತಿಳಿದಿಲ್ಲದಿದ್ದರೂ, ಇಂತಹ ಕಾರ್ಯಗಳು ಭವಿಷ್ಯದಲ್ಲಿ ತೊಂದರೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಡಿಜಿಟಲ್ ಯುಗದಲ್ಲಿ ಪ್ರಚಾರ, ಪ್ರಚಾರ, ಪ್ರಚಾರ ಎಂಬ ಮನೋಭಾವದಿಂದ ಎಲ್ಲವನ್ನೂ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ, ಇಂತಹ ಆತುರದ ನಿರ್ಧಾರಗಳು 100 ವರ್ಷಗಳ ಬಾಳ್ವೆ ನಡೆಸಬೇಕಾದ ದಂಪತಿಯ ಜೀವನದ ಮೇಲೆ ಪರಿಣಾಮ ಬೀರಬಹುದು.
ಮದುವೆ ಮುಗಿದ ನಂತರ, ಆಮಂತ್ರಣ ಪತ್ರಿಕೆಗಳ ಸ್ಥಿತಿ ಸಾಮಾನ್ಯವಾಗಿ ಗಮನಾರ್ಹವಾಗಿದೆ. ಜನರು ಈ ಪತ್ರಿಕೆಗಳನ್ನು ಕಸದ ಬುಟ್ಟಿಗೆ ಹಾಕಬಹುದು, ಬಿಸಾಡಬಹುದು, ಅಥವಾ ರದ್ದಿ ಕಾಗದದ ಜೊತೆ ಸುಡಲು ಕೊಡಬಹುದು. ವಧು-ವರರ ಫೋಟೋಗಳು ಇರುವ ಪತ್ರಿಕೆಗಳು ಇಂತಹ ಪರಿಸ್ಥಿತಿಗಳನ್ನು ಎದುರಿಸಿದಾಗ, ಅದು ವಧು-ವರರ ಜೀವನಕ್ಕೆ ಸಂಕಷ್ಟ ತರುತ್ತದೆ ಎಂದು ಹೇಳಲಾಗಿದೆ. ದುಡ್ಡಿದೆ, ಅಧಿಕಾರವಿದೆ ಎಂದು ದರ್ಪದಿಂದ ಅಥವಾ ಪ್ರಚಾರಕ್ಕಾಗಿ ಇಂತಹ ಕೆಲಸಗಳನ್ನು ಮಾಡಬಾರದು. ಯಾವುದೇ ಕಾರಣಕ್ಕೂ ವಿವಾಹದ ಆಮಂತ್ರಣ ಪತ್ರಿಕೆಗಳಲ್ಲಿ ದೇವರ ಫೋಟೋಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಜೀವಂತ ವ್ಯಕ್ತಿಗಳ ಫೋಟೋಗಳನ್ನು ಹಾಕಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಇದು ಶುಭವಲ್ಲ ಮತ್ತು ಭವಿಷ್ಯದಲ್ಲಿ ವ್ಯಕ್ತಿಗಳಿಗೆ ಅನೇಕ ಸಂಕಷ್ಟಗಳನ್ನು ತಂದೊಡ್ಡಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತು. ವಯಸ್ಸಾಗುತ್ತಿದ್ದರೂ ಮತ್ತಷ್ಟು ಹ್ಯಾಂಡ್‌ಸಮ್ ಆಗಿ ಕಾಣುವ ಮಹೇಶ್, ಪ್ರಸ್ತುತ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಹಾಗೂ ಮಲಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಭರದಿಂದ ಚಿತ್ರೀಕರಣ ನಡೆಯುತ್ತಿರುವ ಈ ಸಿನಿಮಾ ಮುಂದಿನ ವರ್ಷದ ಬೇಸಿಗೆಯಲ್ಲಿ ತೆರೆಗೆ ಬರಲಿದೆ. ಈ ನಡುವೆ ಮಹೇಶ್ ಬಾಬು ಅವರ ಕಾಲೇಜು ದಿನಗಳ ಅಪರೂಪದ ಐಡಿ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮಹೇಶ್ ಬಾಬು ಅವರು ಚೆನ್ನೈನ ಪ್ರಸಿದ್ಧ ‘ಲೊಯೊಲಾ ಕಾಲೇಜಿನಲ್ಲಿ’ ಬಿ.ಕಾಂ ಪದವಿ ವ್ಯಾಸಂಗ ಮಾಡಿದ್ದರು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ಐಡಿ ಕಾರ್ಡ್ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರ ಪೂರ್ಣ ಹೆಸರು ಘಟ್ಟಮನೇನಿ ಮಹೇಶ್ ಬಾಬು ಎಂದು ಬರೆಯಲಾಗಿದೆ. ಅಲ್ಲದೆ ಐಡಿ ಸಂಖ್ಯೆ LCC/1997/4321, ರೋಲ್ ಸಂಖ್ಯೆ 97-1186 ಹಾಗೂ ಅವರು 1997 ರಿಂದ 2000 ರ ಬ್ಯಾಚ್‌ನಲ್ಲಿ ಓದುತ್ತಿದ್ದರು ಎಂಬ ಮಾಹಿತಿ ಕಾರ್ಡ್‌ನಲ್ಲಿದೆ. ಜುಲೈ 15, 1997 ರಂದು ವಿತರಿಸಲಾದ ಈ ಕಾರ್ಡ್ ಮೇ 2000 ರವರೆಗೆ ಮಾನ್ಯತೆ ಹೊಂದಿತ್ತು ಎಂದು ತೋರಿಸಲಾಗಿದೆ.
ಈ ಐಡಿ ಕಾರ್ಡ್‌ನಲ್ಲಿ ಮಹೇಶ್ ಬಾಬು ಅವರ ಜನ್ಮ ದಿನಾಂಕ 09-08-1975 ಮತ್ತು ರಕ್ತದ ಗುಂಪು ‘O +ve’ ಎಂದು ನಮೂದಿಸಲಾಗಿದೆ. ವಿಶೇಷವೆಂದರೆ, ಇದರಲ್ಲಿ ಅವರ ಮನೆಯ ವಿಳಾಸದ ಜಾಗದಲ್ಲಿ ಹೈದರಾಬಾದ್‌ನ ‘ಪದ್ಮಾಲಯ ಸ್ಟುಡಿಯೋಸ್, ರಸ್ತೆ ಸಂಖ್ಯೆ 12, ಬಂಜಾರ ಹಿಲ್ಸ್’ ಎಂದು ಮುದ್ರಿಸಲಾಗಿದೆ. ಅಂದಿನ ಪ್ರಾಂಶುಪಾಲರಾದ ಡಾ. ಎಫ್. ಆಂಡ್ರ್ಯೂ ಅವರ ಸಹಿಯೊಂದಿಗೆ ಮಹೇಶ್ ಬಾಬು ಅವರ ಸಹಿ ಮತ್ತು ಅವರ ಹಳೆಯ ಭಾವಚಿತ್ರವೂ ಈ ಗುರುತಿನ ಚೀಟಿಯಲ್ಲಿ ಕಂಡುಬಂದಿದೆ.
ಆದರೆ ಈ ವೈರಲ್ ಐಡಿ ಕಾರ್ಡ್ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲೂ ಮಹೇಶ್ ಬಾಬು ತುಂಬಾ ಕ್ಯೂಟ್ ಆಗಿದ್ದರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಹಲವರು ಇದು ಅಸಲಿ ಕಾರ್ಡ್ ಅಲ್ಲ, ಬದಲಿಗೆ ಎಐ ಇಂದ ಮಾಡಿರುವ ನಕಲಿ ಕಾರ್ಡ್ ಎಂದು ವಾದಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇದು ನಕಲಿ ಐಡಿ ಕಾರ್ಡ್ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಇದೇ ಮಾದರಿಯ ವಿನ್ಯಾಸವನ್ನು ಹೊಂದಿರುವ ಬೇರೆ ಬೇರೆ ಸ್ಟಾರ್ ನಟರ ಕಾಲೇಜು ಐಡಿ ಕಾರ್ಡ್‌ಗಳು ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಗುವಾಹಟಿ, ಮೇ 28: ಅಸ್ಸಾಂನಲ್ಲಿ ನಡೆದ ಮದುವೆಯೊಂದರಲ್ಲಿ ಕರೆಯದೇ ಇದ್ದರೂ ಬಂದು ಊಟ ಮಾಡಿದ್ದ ಮಾನಸಿಕ ಅಸ್ವಸ್ಥ ಹೋಗುವಾಗ ವಧುವಿಗೆ 10 ರೂ. ಉಡುಗೊರೆ ಕೊಟ್ಟು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿ ಸೇರಿದ್ದ ಅತಿಥಿಗಳೊಂದಿಗೆ ಅತ್ಯಂತ ಶಾಂತವಾಗಿ ಕುಳಿತು ಅವರು ಊಟ ಮಾಡಿದ್ದರು. ಆ ವ್ಯಕ್ತಿಯ ಮುಗ್ಧತೆಯನ್ನು ಕಂಡು ಅಲ್ಲಿದ್ದ ಯಾರೊಬ್ಬರೂ ಆತನನ್ನು ಪ್ರಶ್ನಿಸಲಿಲ್ಲ ಅಥವಾ ಹೊರಗೆ ಹಾಕಲಿಲ್ಲ.
ಆದರೆ, ಊಟ ಮುಗಿಸಿ ಅಲ್ಲಿಂದ ಹೊರಡುವ ಮುನ್ನ ಆ ವ್ಯಕ್ತಿ ಮಾಡಿದ ಕೆಲಸ ಎಲ್ಲರ ಹೃದಯ ಮುಟ್ಟುವಂತಿತ್ತು. ಆತ ತನ್ನ ಹರಿದ ಜೇಬಿನಿಂದ ಅತ್ಯಂತ ಜಾಗರೂಕತೆಯಿಂದ ಹತ್ತು ರೂಪಾಯಿಯ ಮುದ್ದೆಯಾಗಿದ್ದ ನೋಟನ್ನು ಹೊರಗೆ ತೆಗೆದು, ಅಲ್ಲಿಯೇ ಇದ್ದ ನವವಧುವಿನ ಕೈಯಲ್ಲಿ ಅತ್ಯಂತ ಪ್ರೀತಿಯಿಂದ ಉಡುಗೊರೆ ರೂಪದಲ್ಲಿ ಕೊಟ್ಟು ಹೋಗಿದ್ದಾರೆ. ಅವರ ಈ ನಿಸ್ವಾರ್ಥ ನಡೆ ಮತ್ತು ಮುಗ್ಧ ಪ್ರೀತಿಯನ್ನು ಕಂಡು ವಧು ಸೇರಿದಂತೆ ಮದುವೆ ಮನೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣುಗಳು ಆನಂದಬಾಷ್ಪದಿಂದ ತುಂಬಿ ಬಂದವು. ಈ ಜಗತ್ತಿನಲ್ಲಿ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI
ಬೆಂಗಳೂರು, ಮೇ 28: ಸಿಲಿಕಾನ್ ಸಿಟಿ ಬೆಂಗಳೂರಿನ ದೈನಂದಿನ ಟ್ರಾಫಿಕ್ ಕಿರಿಕಿರಿ ಕಡಿಮೆ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಅಧಿಕೃತವಾಗಿ ಅಖಾಡಕ್ಕಿಳಿದಿದೆ. ಹಲವು ವರ್ಷಗಳಿಂದ ಕಾಗದದ ಮೇಲೆಯೇ ನೆನಗುದಿಗೆ ಬಿದ್ದಿದ್ದ ಪ್ರಮುಖ ಮೇಲ್ಸೇತುವೆ ಯೋಜನೆಗಳಿಗೆ ಜಿಬಿಎ ಈಗ ಮರುಜೀವ ನೀಡಿದೆ. ನಗರದ ಅತ್ಯಂತ ದಟ್ಟಣೆಯ ಮತ್ತು ಪ್ರಮುಖ 5 ಭಾಗಗಳಲ್ಲಿ ಹೊಸ ಫ್ಲೈಓವರ್‌ಗಳನ್ನು ನಿರ್ಮಾಣ ಮಾಡಲು ಪ್ರಾಧಿಕಾರವು ಭರ್ಜರಿ ತಯಾರಿ ನಡೆಸಿದ್ದು, ಇದಕ್ಕಾಗಿ ಅಧಿಕೃತವಾಗಿ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ.
ಮುಖ್ಯಾಂಶಗಳು
ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ಮುಕ್ತ ಸಂಚಾರ ಕಲ್ಪಿಸುವ ಉದ್ದೇಶ.
ಜಿಬಿಎಯಿಂದ 5 ಹೊಸ ಫ್ಲೈಓವರ್‌ಗಳಿಗೆ ಟೆಂಡರ್ ಆಹ್ವಾನ.
ಮಿನರ್ವ ಸರ್ಕಲ್, ಕೆ.ಆರ್. ಮಾರ್ಕೆಟ್, ಓಲ್ಡ್ ಮದ್ರಾಸ್ ರಸ್ತೆ ಹಾಗೂ ಯಲಹಂಕ ಮಾರ್ಗಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್.
ಯಾವೆಲ್ಲಾ ಭಾಗಗಳಲ್ಲಿ ಹೊಸ ಫ್ಲೈಓವರ್?
ನಗರದ ಹೃದಯಭಾಗ ಮತ್ತು ಹೊರವಲಯಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ 5 ಮಾರ್ಗಗಳನ್ನು ಗುರುತಿಸಿ ಈ ಬೃಹತ್ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ.
ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್‌ವರೆಗೆ: ಕೇಂದ್ರ ವಾಣಿಜ್ಯ ವಲಯದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೃಹತ್ ಮೇಲ್ಸೇತುವೆ.
ಕೆ.ಆರ್. ಮಾರ್ಕೆಟ್ ಟು ಟೌನ್ ಹಾಲ್ ಲೂಪ್: ಪ್ರಸ್ತುತ ಇರುವ ಕೆ.ಆರ್. ಮಾರ್ಕೆಟ್ ಫ್ಲೈಓವರ್‌ಗೆ ಟೌನ್ ಹಾಲ್ ಭಾಗದಿಂದ ಹೊಸದಾಗಿ ಲೂಪ್ ಸಂಪರ್ಕ ಕಲ್ಪಿಸುವುದು.
ಓಲ್ಡ್ ಮದ್ರಾಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ: ಐಟಿ ಉದ್ಯೋಗಿಗಳಿಗೆ ಸುಗಮ ಸಂಚಾರ ಕಲ್ಪಿಸಲು ಈ ಪ್ರಮುಖ ಸಂಪರ್ಕ ಮೇಲ್ಸೇತುವೆ ನೆರವಾಗಲಿದೆ.
ಶೋಲೆ ಸರ್ಕಲ್‌ನಿಂದ ಸೈಂಟ್ ಜಾನ್ಸ್ ಆಸ್ಪತ್ರೆ: ನಿರಂತರ ವಾಹನ ದಟ್ಟಣೆ ಇರುವ ಈ ಜಂಕ್ಷನ್‌ನಲ್ಲಿ ಸಿಗ್ನಲ್ ಮುಕ್ತ ರಸ್ತೆ ನಿರ್ಮಾಣ.
ಯಲಹಂಕ ಪೊಲೀಸ್ ಸ್ಟೇಷನ್‌ನಿಂದ ಕೋಗಿಲು ಕ್ರಾಸ್‌ವರೆಗೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಭಾಗದ ಟ್ರಾಫಿಕ್ ಸುಧಾರಣೆಗೆ ಈ ಮೇಲ್ಸೇತುವೆ ಸಹಕಾರಿಯಾಗಲಿದೆ.
ಸಾರ್ವಜನಿಕ ವಲಯದಿಂದ ವ್ಯಕ್ತವಾದ ಮೆಚ್ಚುಗೆ
ಈ ಐದು ಬೃಹತ್ ಯೋಜನೆಗಳು ಜಾರಿಗೆ ಬಂದರೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಕಾಯುವುದು ತಪ್ಪಲಿದೆ ಎಂದು ಜಿಬಿಎ ಮುಖ್ಯಸ್ಥರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ. ವಿಶೇಷವಾಗಿ ಸಾರ್ವಜನಿಕರಿಗೆ ತಲೆನೋವಾಗಿದ್ದ ಮಾರುಕಟ್ಟೆ ಮತ್ತು ಯಲಹಂಕ ಭಾಗದಲ್ಲಿ ಇನ್ಮುಂದೆ ಸಂಚಾರ ಸುಗಮವಾಗಲಿದೆ.
ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹಂತ ಹಂತವಾಗಿ ಕಾಮಗಾರಿಗಳು ಆರಂಭವಾಗಲಿದ್ದು, ಜಿಬಿಎ ತೆಗೆದುಕೊಂಡಿರುವ ಈ ತ್ವರಿತ ನಿರ್ಧಾರಕ್ಕೆ ಬೆಂಗಳೂರಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಈಗ ಟೆಂಡರ್ ಭಾಗ್ಯ ಸಿಕ್ಕಿದ್ದು, ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿದು ಟ್ರಾಫಿಕ್ ಕಷ್ಟದಿಂದ ಮುಕ್ತಿ ಸಿಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ ಚಿತ್ರರಂಗದಲ್ಲಿ ಇಂದು ಪಂಕಜ್ ತ್ರಿಪಾಠಿ ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಈ ಯಶಸ್ಸಿನ ಹಿಂದಿರುವುದು ಸುದೀರ್ಘ ವರ್ಷಗಳ ಕಠಿಣ ಹೋರಾಟ ಮತ್ತು ಅವಮಾನಗಳ ಕಥೆ. ತಮ್ಮ ನಟನಾ ಕನಸನ್ನು ಹೊತ್ತು 2001ರಲ್ಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಸೇರಿದಾಗ ತಾವು ಎದುರಿಸಿದ ಸಾಂಸ್ಕೃತಿಕ ಆಘಾತ ಮತ್ತು ಭಾಷಾ ತಾರತಮ್ಯದ ಬಗ್ಗೆ ಪಂಕಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ‘ಯುವಾ’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಂಕಜ್, ‘2001ರಲ್ಲಿ ನಾನು ದೆಹಲಿಗೆ ಬಂದಾಗ ನನಗೆ ದೊಡ್ಡ ಕಲ್ಚರಲ್ ಶಾಕ್ ಎದುರಾಗಿತ್ತು. ಅಲ್ಲಿ ಮೊದಲ ಬಾರಿಗೆ ಹುಡುಗಿಯರು ಸಿಗರೇಟ್ ಸೇದುವುದನ್ನು ನೋಡಿದಾಗ, ‘ಇವರು ಎಂತಹ ಹುಡುಗಿಯರು?’ ಎಂದು ಆಶ್ಚರ್ಯಪಟ್ಟುಕೊಂಡಿದ್ದೆ. ಆದರೆ, ಒಂದು 15 ದಿನಗಳ ನಂತರ ನನ್ನ ಆಲೋಚನಾ ಶೈಲಿ ತಪ್ಪಾಗಿತ್ತು ಮತ್ತು ಯಾರನ್ನೂ ಹಾಗೆ ಅಳೆಯಬಾರದು ಎಂಬ ಸತ್ಯ ನನಗೆ ಅರ್ಥವಾಯಿತು’ ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಹಿಂದಿ ಮಾಧ್ಯಮದ ಹಿನ್ನೆಲೆಯಿಂದ ಬಂದಿದ್ದ ಪಂಕಜ್ ಅವರಿಗೆ ಭಾಷೆಯೇ ದೊಡ್ಡ ಸವಾಲಾಗಿತ್ತು. ‘ನನ್ನ ಭಾಷೆಯನ್ನು ನೋಡಿ ಜನರು ತಕ್ಷಣವೇ ನನ್ನನ್ನು ಜಡ್ಜ್ ಮಾಡುತ್ತಿದ್ದರು. ಒಬ್ಬ ವ್ಯಕ್ತಿಗೆ ಸರಾಗವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದರೆ, ಅವನು ತುಂಬಾ ಬಡ ಹಿನ್ನೆಲೆಯಿಂದ ಬಂದಿದ್ದಾನೆ ಅಥವಾ ಅವನಿಗೆ ಜ್ಞಾನದ ಕೊರತೆ ಇದೆ ಎಂದೇ ಜನರು ಭಾವಿಸುತ್ತಾರೆ. ಇಂದಿಗೂ ಜನರು ನಿಮ್ಮ ಸಾಮರ್ಥ್ಯವನ್ನು ನೀವು ಮಾತನಾಡುವ ಭಾಷೆಯ ಆಧಾರದ ಮೇಲೆ ಅಳೆಯುತ್ತಾರೆ. ಆದರೆ ವಾಸ್ತವದಲ್ಲಿ, ಭಾಷೆಗೂ ಮತ್ತು ಒಬ್ಬರ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿರುವುದಿಲ್ಲ,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಅನುಭವಗಳು ಯಾರನ್ನಾದರೂ ಕೀಳರಿಮೆಗೆ ತಳ್ಳಬಹುದು. ಆದರೆ ಪಂಕಜ್ ಮಾತ್ರ ಇದಕ್ಕೆ ಧೃತಿಗೆಡಲಿಲ್ಲ. ‘ಇಂತಹ ಪರಿಸ್ಥಿತಿಯನ್ನು ಎದುರಿಸಲು ಎರಡೇ ದಾರಿ ಇರುತ್ತದೆ. ಒಂದೋ ನೀವು ಕೀಳರಿಮೆಗೆ ಒಳಗಾಗಬೇಕು, ಇಲ್ಲವೇ ಅದನ್ನೆಲ್ಲ ಮೀರಿ ಬೆಳೆಯಬೇಕು. ಅದೃಷ್ಟವಶಾತ್ ನಾನು ಎಂದಿಗೂ ಕೀಳರಿಮೆಯ ಸುಳಿಗೆ ಸಿಲುಕಲಿಲ್ಲ ಮತ್ತು ನನ್ನ ಅಸ್ತಿತ್ವದ ಬಗ್ಗೆ ನನಗೆ ಗೊಂದಲವಿರಲಿಲ್ಲ. ಅದೇ ನನ್ನನ್ನು ಆ ಕಷ್ಟದ ದಿನಗಳಲ್ಲಿ ಕಾಪಾಡಿತು’ ಎಂದಿದ್ದಾರೆ.
ಸುದೀರ್ಘ ಹೋರಾಟದ ನಂತರ 2012ರ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಸಿನಿಮಾ ಪಂಕಜ್ ತ್ರಿಪಾಠಿ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆದರೆ ಮುಂಬೈನಲ್ಲಿ ಅವಕಾಶಗಳಿಗಾಗಿ ಅಲೆಯುತ್ತಿದ್ದ ದಿನಗಳಲ್ಲಿ ಇವರ ಇಡೀ ಕುಟುಂಬವನ್ನು ಮುನ್ನಡೆಸಿದ್ದು ಅವರ ಪತ್ನಿ ಮೃದುಲಾ. ಪಂಕಜ್ ಅವರ ಕನಸಿಗಾಗಿ ಮೃದುಲಾ ಅವರೊಬ್ಬರೇ ದುಡಿದು ಮನೆ ನಡೆಸುತ್ತಿದ್ದರು.
ಭೋಪಾಲ್, ಮೇ 28: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮಾಡೆಲ್ ತ್ವಿಶಾ ಶರ್ಮಾ(Twisha Sharma) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶೆ ಹಾಗೂ ತ್ವಿಶಾ ಶರ್ಮಾ ಅತ್ತೆಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಗಿರಿಬಾಲಾ ಅವರನ್ನು ಬಂಧಿಸಲು ಕೇಂದ್ರ ತನಿಖಾ ದಳಕ್ಕೆ (CBI) ಇದ್ದ ಎಲ್ಲಾ ಕಾನೂನು ಅಡೆತಡೆಗಳು ನಿವಾರಣೆಯಾಗಿದ್ದು, ಯಾವುದೇ ಕ್ಷಣದಲ್ಲಿ ಅವರು ಬಂಧನಕ್ಕೊಳಗಾಗಬಹುದು ಅಥವಾ ನ್ಯಾಯಾಲಯಕ್ಕೆ ಶರಣಾಗಬಹುದು.
ಹೈಕೋರ್ಟ್ ಜಾಮೀನು ರದ್ದುಗೊಳಿಸಲು ಕಾರಣಗಳೇನು?
ನ್ಯಾ. ದೇವನಾರಾಯಣ್ ಮಿಶ್ರಾ ಅವರು 17 ಪುಟಗಳ ಕಠಿಣ ಆದೇಶವನ್ನು ಹೊರಡಿಸಿದ್ದಾರೆ. ಮೇ 15, 2026 ರಂದು ಭೋಪಾಲ್‌ನ ಸೆಷನ್ಸ್ ನ್ಯಾಯಾಲಯವು ಗಿರಿಬಾಲಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು, ಇದನ್ನು ಹೈಕೋರ್ಟ್ ಈಗ ರದ್ದುಗೊಳಿಸಿದೆ. ಮೃತರ ಕುಟುಂಬದವರು ಸಲ್ಲಿಸಿದ ವಾಟ್ಸಾಪ್ ಸಂದೇಶಗಳಲ್ಲಿ ತ್ವಿಶಾ ಶರ್ಮಾ ಮೇಲೆ ಅವರ ಪತಿ ಮತ್ತು ಅತ್ತೆ ಗಿರಿಬಾಲಾ ಅವರಿಗೆ ಅನುಮಾನ ಇತ್ತು. ಆಕೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ನಿತ್ಯ ಒತ್ತಡ ಹೇರುತ್ತಿದ್ದರು ಎಂಬುದು ಸಾಬೀತಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತ್ವಿಶಾ ಅವರ ದೇಹದ ಮೇಲೆ ಹಲವು ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಸಿಬಿಐ ಕೋರ್ಟ್‌ಗೆ ತಿಳಿಸಿದೆ. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಹೆಚ್ಚಿದೆ ಎಂದು ಸಿಬಿಐ ವಾದಿಸಿದೆ. ಕೆಳ ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಸರಿಯಾಗಿ ಪರಿಗಣಿಸಲು ವಿಫಲವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯೂ ಸಿಬಿಐ ವಶಕ್ಕೆ:
ಮೇ 12 ರಂದು ತ್ವಿಶಾ ಶರ್ಮಾ ಅವರು ತಮ್ಮ ವೈವಾಹಿಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಾವಿನ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸಿಬಿಐ ವಹಿಸಿಕೊಂಡಿದೆ. ತ್ವಿಶಾ ಅವರ ಪತಿ, ವಕೀಲ ಸಮರ್ಥ್ ಸಿಂಗ್ ಅವರು ಘಟನೆಯ ನಂತರ 10 ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ಮೇ22 ರಂದು ಅವರನ್ನು ಜಬಲ್ಪುರದಲ್ಲಿ ವಿಶೇಷ ತನಿಖಾ ತಂಡ ಬಂಧಿಸಿತ್ತು. ಪ್ರಸ್ತುತ ಭೋಪಾಲ್ ನ್ಯಾಯಾಲಯವು ಸಮರ್ಥ್ ಸಿಂಗ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳು ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದ್ದು, ನಿವೃತ್ತ ನ್ಯಾಯಾಧೀಶರೇ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಭಾರಿ ಸಂಚಲನ ಸೃಷ್ಟಿಸಿದೆ.
ಮಲಯಾಳಂ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ದೃಶ್ಯಂ 3’, ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ಮೇ 21ರಂದು ರಿಲೀಸ್ ಆದ ಈ ಫ್ಯಾಮಿಲಿ ಕ್ರೈಮ್ ಥ್ರಿಲ್ಲರ್ ಸಿನಿಮಾ, ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ವಾರದ ದಿನಗಳಲ್ಲಿ ಸಹಜವಾಗಿಯೇ ಕಲೆಕ್ಷನ್ ಕೊಂಚ ಕುಸಿದಿತ್ತಾದರೂ, ಬುಧವಾರ (ಮೇ 27) ಚಿತ್ರದ ಗಳಿಕೆಯಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬಂದಿದೆ. ಇದರೊಂದಿಗೆ ಬಿಡುಗಡೆಯಾದ ಕೇವಲ 7 ದಿನಗಳಲ್ಲೇ ಸಿನಿಮಾ ಭಾರತದಾದ್ಯಂತ 75 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ಅಂಕಿ-ಅಂಶಗಳ ಪ್ರಕಾರ, 7ನೇ ದಿನ ಈ ಚಿತ್ರ ಭಾರತದಲ್ಲಿ ಬರೋಬ್ಬರಿ 6.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ, ಮಂಗಳವಾರ ಈ ಚಿತ್ರ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದು (ಮೇ 28) ಬಕ್ರೀದ್ ಪ್ರಯುಕ್ತ ಸರ್ಕಾರಿ ರಜೆ ಇದ್ದು, ಚಿತ್ರ ಮತ್ತಷ್ಟು ಗಳಿಸಬಹುದು.
ಭಾರತದಲ್ಲಿ ಚಿತ್ರದ 7 ದಿನಗಳ ಒಟ್ಟು ನೆಟ್ ಕಲೆಕ್ಷನ್ 75.30 ಕೋಟಿ ರೂಪಾಯಿಗೆ ತಲುಪಿದ್ದು, ಗ್ರಾಸ್ ಕಲೆಕ್ಷನ್ 87.38 ಕೋಟಿ ರೂಪಾಯಿ ಮುಟ್ಟಿದೆ. ಭಾರತದಷ್ಟೇ ವಿದೇಶದಲ್ಲೂ ಈ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. 7ನೇ ದಿನ ವಿದೇಶಿ ಮಾರುಕಟ್ಟೆಯಿಂದಲೇ ಚಿತ್ರಕ್ಕೆ 5 ಕೋಟಿ ರೂಪಾಯಿ ಹರಿದುಬಂದಿದೆ. ಇದರೊಂದಿಗೆ ವಿದೇಶದ ಒಟ್ಟು ಗ್ರಾಸ್ ಗಳಿಕೆ ಬರೋಬ್ಬರಿ 95.70 ಕೋಟಿ ರೂಪಾಯಿಗೆ ತಲುಪಿದೆ.
ಭಾರತ ಹಾಗೂ ವಿದೇಶಿ ಕಲೆಕ್ಷನ್ ಎರಡನ್ನೂ ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಚಿತ್ರದ ವಿಶ್ವಾದ್ಯಂತ ಒಟ್ಟು ಜಾಗತಿಕ ಗ್ರಾಸ್ ಕಲೆಕ್ಷನ್ ಸದ್ಯ 183.08 ಕೋಟಿ ರೂಪಾಯಿ ತಲುಪಿದೆ. ಇನ್ನು ಕೇವಲ ಎರಡು ದಿನಗಳಲ್ಲಿ ಸಿನಿಮಾ ಸುಲಭವಾಗಿ 200 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.
ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಮಾತ್ರ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮೋಹನ್‌ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಸಿದ್ದಿಕ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ!
ಬೆಂಗಳೂರು, ಮೇ 28: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಹೆಚ್ಚಾಗಿ ‘ಸಾಧಾರಣ’ (Moderate) ಹಾಗೂ ಕೆಲವು ಜಿಲ್ಲೆಗಳಲ್ಲಿ ‘ಉತ್ತಮ’ (Good) ಮಟ್ಟದಲ್ಲಿದೆ. ಇತ್ತೀಚೆಗೆ ರಾಜ್ಯದ ಹಲವೆಡೆ ಬಿದ್ದ ಮಳೆ ಮತ್ತು ಬಿರುಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ನಿಯಂತ್ರಣಕ್ಕೆ ಬಂದಿದ್ದು, ವಾಯು ಮಾಲಿನ್ಯದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಮುಖ್ಯಾಂಶಗಳು
ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆ.
ಧಾರವಾಡದಲ್ಲಿ ವಾಯು ಮಾಲಿನ್ಯದ ಪ್ರಮಾಣ ಸೂಕ್ಷ್ಮ ಆರೋಗ್ಯದವರಿಗೆ ಹಾನಿಕಾರಕವಾಗಿದೆ.
ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ.
ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಹೇಗಿದೆ?
ಬೆಂಗಳೂರು ನಗರದಲ್ಲಿ ಇಂದು ಸರಾಸರಿ AQI 92 ರಿಂದ 94ರಷ್ಟಿದ್ದು, ಇದು ‘ಸಾಧಾರಣ’ ವಲಯಕ್ಕೆ ಸೇರುತ್ತದೆ.
ಬೆಂಗಳೂರಿನಲ್ಲಿ ಸದ್ಯಕ್ಕೆ PM2.5 ಕಣಗಳ ಪ್ರಮಾಣ ಹೆಚ್ಚಾಗಿದ್ದು, ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು (ಅಸ್ತಮಾ ಅಥವಾ ಶ್ವಾಸಕೋಶದ ತೊಂದರೆ ಇರುವವರು) ದೀರ್ಘಕಾಲದವರೆಗೆ ಹೊರಾಂಗಣದಲ್ಲಿ ಕಳೆಯುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಾಮಾನ್ಯ ಜನರಿಗೆ ಈ ವಾತಾವರಣದಿಂದ ಯಾವುದೇ ತೊಂದರೆಯಿಲ್ಲ.
ಕರ್ನಾಟಕದ ಇತರೆ ನಗರಗಳ ವಾಯು ಮಾಲಿನ್ಯದ ಸ್ಥಿತಿ
ಧಾರವಾಡ: 118 AQI (ಇದು ಸೂಕ್ಷ್ಮ ಆರೋಗ್ಯ ಹೊಂದಿರುವವರಿಗೆ ಹಾನಿಕಾರಕ ಮಟ್ಟದಲ್ಲಿದೆ).
ಮೈಸೂರು: 63 AQI (ಸಾಧಾರಣ ಹಾಗೂ ಆರೋಗ್ಯಕರ).
ಶಿವಮೊಗ್ಗ ಮತ್ತು ಚಿಕ್ಕಮಗಳೂರು: 32 AQI (ಉತ್ತಮ ಮತ್ತು ಅತ್ಯಂತ ಶುದ್ಧ ಗಾಳಿ).
ಗದಗ: 17 AQI (ರಾಜ್ಯದಲ್ಲೇ ಇವತ್ತು ಅತ್ಯಂತ ಶುದ್ಧವಾದ ಗಾಳಿ ಹೊಂದಿರುವ ನಗರ).
ಬಾಗಲಕೋಟೆ ಮತ್ತು ರಾಮನಗರ: 73 AQI (ಸಾಧಾರಣ).
ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ಸದ್ಯಕ್ಕೆ ನಿಯಂತ್ರಣದಲ್ಲಿದೆ. ಕೈಗಾರಿಕಾ ಪ್ರದೇಶಗಳು ಮತ್ತು ವಾಹನ ದಟ್ಟಣೆ ಹೆಚ್ಚಿರುವ ಧಾರವಾಡ ಹಾಗೂ ಬೆಂಗಳೂರಿನ ಕೆಲವು ವಾಣಿಜ್ಯ ವಲಯಗಳನ್ನು ಹೊರತುಪಡಿಸಿದರೆ, ಉಳಿದ ಜಿಲ್ಲೆಗಳಲ್ಲಿ ಜನರು ನೆಮ್ಮದಿಯಾಗಿ ನಿಟ್ಟುಸಿರು ಬಿಡಬಹುದಾದ ವಾತಾವರಣವಿದೆ.