ಬುಧವಾರವೂ ಜಾರ್ಜ್‌ಕುಟ್ಟಿ ಕಮಾಲ್; 7 ದಿನಕ್ಕೆ ‘ದೃಶ್ಯಂ 3’ ಗಳಿಕೆ ಎಷ್ಟು?
ಮಲಯಾಳಂ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ದೃಶ್ಯಂ 3’, ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ಮೇ 21ರಂದು ರಿಲೀಸ್ ಆದ ಈ ಫ್ಯಾಮಿಲಿ ಕ್ರೈಮ್ ಥ್ರಿಲ್ಲರ್ ಸಿನಿಮಾ, ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ವಾರದ ದಿನಗಳಲ್ಲಿ ಸಹಜವಾಗಿಯೇ ಕಲೆಕ್ಷನ್ ಕೊಂಚ ಕುಸಿದಿತ್ತಾದರೂ, ಬುಧವಾರ (ಮೇ 27) ಚಿತ್ರದ ಗಳಿಕೆಯಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬಂದಿದೆ. ಇದರೊಂದಿಗೆ ಬಿಡುಗಡೆಯಾದ ಕೇವಲ 7 ದಿನಗಳಲ್ಲೇ ಸಿನಿಮಾ ಭಾರತದಾದ್ಯಂತ 75 ಕೋಟಿ ರೂಪಾಯಿ ಗಳಿಕೆ…