Category Archives: Blog

Your blog category

IMF: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ – Kannada News | IMF chief praises India’s AI development path and Economic growth

ನವದೆಹಲಿ, ಜನವರಿ 23: ಎಐ ಕ್ಷೇತ್ರದಲ್ಲಿ ಭಾರತ ಇಡುತ್ತಿರುವ ಹೆಜ್ಜೆಗಳಿಗೆ ಐಎಂಎಫ್ (IMF) ಶ್ಲಾಘನೆ ನೀಡಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಭಾರತವೂ ಸೇರ್ಪಡೆಯಾಗುತ್ತಿದೆ. ಉತ್ತಮ ಸುಧಾರಣಾ ಕ್ರಮಗಳು, ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್, ಕೌಶಲ್ಯವಂತ ತಂತ್ರಜ್ಞಾನ ಕಾರ್ಮಿಕ ವರ್ಗವು ಭಾರತದ ಮುನ್ನಡೆಗೆ ಬಲ ಕೊಟ್ಟಿವೆ ಎಂದು ಐಎಂಎಫ್​ನ ನಿರ್ವಾಹಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿಯೆವಾ (Kristalina Georgieva) ಅಭಿಪ್ರಾಯಪಟ್ಟಿದ್ದಾರೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ವೇದಿಕೆಯಲ್ಲಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಐಎಂಎಫ್ ಮುಖ್ಯಸ್ಥೆ, ಭಾರತದ ಇತ್ತೀಚಿನ ಆರ್ಥಿಕ ಸುಧಾರಣೆಗಳ ಗುಣಮಟ್ಟ ಮತ್ತು ವೇಗದ ಬಗ್ಗೆ ಐಎಂಎಫ್​ಗೆ ಮೆಚ್ಚುಗೆ ಇದೆ. ಎಐ ಕ್ಷೇತ್ರದಲ್ಲಿ ಭಾರತದ ಶಕ್ತಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್

ಭಾರತದ ಆರ್ಥಿಕ ವೇಗಕ್ಕೆ ಎಐನಿಂದ ಇನ್ನಷ್ಟು ಚುರುಕು: ಐಎಂಎಫ್

ಕೃತಕ ಬುದ್ಧಿಮತ್ತೆಯು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು 0.8 ಪ್ರತಿಶತ ಅಂಕಗಳಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಭಾರತದಂತಹ ಚುರುಕಿನ ಆರ್ಥಿಕತೆಗೆ ಎಐ ಇನ್ನೂ ದೊಡ್ಡ ಮಟ್ಟದ ಪುಷ್ಟಿ ಕೊಡಬಲ್ಲುದು. ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಹಾಗೂ ಐಟಿ ಕೌಶಲ್ಯವಂತ ಉದ್ಯೋಗಿಗಳ ದೊಡ್ಡ ಸಮೂಹವನ್ನು ಭಾರತ ಬಹಳ ವೇಗವಾಗಿ ಸಿದ್ಧಪಡಿಸಿದೆ. ಇದು ಭಾರತಕ್ಕಿರುವ ಪ್ರಮುಖ ಶಕ್ತಿ. ಎಐ ಅಭಿವೃದ್ಧಿಯಲ್ಲಿ ಭಾರತ ತನ್ನದೇ ಹಾದಿಯಲ್ಲಿ ಸಾಗುತ್ತಿರುವುದೂ ಶ್ಲಾಘನೀಯ ವಿಚಾರ ಎಂದು ಕ್ರಿಸ್ಟಿಯಾಲೆನಾ ಜಾರ್ಜಿಯೆವಾ ವಿವರಿಸಿದ್ದಾರೆ.

ಭಾರತ ಬೆಳ್ಳಿ ಚುಕ್ಕಿ

ಜಾಗತಿಕವಾಗಿ ಅನಿಶ್ಚಿತವೆನಿಸಿರುವ ಆರ್ಥಿಕ ವಾತಾವರಣದಲ್ಲಿ ಭಾರತವು ಬೆಳ್ಳಿ ಚುಕ್ಕಿಯಂತೆ ಕಾಣುತ್ತದೆ ಎಂದು ಹೇಳಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಎಂಡಿ, ಭಾರತ ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂದು ಕಣ್ಣಾರೆ ನೋಡಲು ಬಯಸುತ್ತಿದ್ದು, ಫೆಬ್ರುವರಿಯಲ್ಲಿ ಎಐ ಸಮಿಟ್​ಗೆ ಭಾರತಕ್ಕೆ ಹೋಗುತ್ತಿರುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಎಐನಿಂದ ನಿರೀಕ್ಷೆಗಳು ಗಹನವಾಗಿವೆಯಾದರೂ, ಈ ನಿರೀಕ್ಷೆ ಈಡೇರುವುದು ವಿಫಲವಾದರೆ ಬಹಳ ಅಪಾಯ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ದೇಶಗಳು ಪ್ರಬಲ ಆರ್ಥಿಕ ಅಂಶಗಳಿಗೆ ಗಮನ ಕೊಡಬೇಕು. ನಿಮ್ಮ ಮನೆ ಸುವ್ಯವಸ್ಥಿತ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಜಾರ್ಜಿಯೆವಾ ಅವರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವೋಸ್​​ನಲ್ಲಿ ಭಾರತ ಹೊಗಳಿದ ಡಿ.ಕೆ. ಶಿವಕುಮಾರ್​: ರಾಹುಲ್​​ ಕಾಲೆಳೆದ ಕರ್ನಾಟಕ ಬಿಜೆಪಿ – Kannada News | DK Shivakumar Praises India Economy in Davos, Karnataka BJP Attacks Rahul Gandhi

ವರ್ಲ್ಡ್​​ ಎಕನಾಮಿಕ್​​ ಫೋರಂನಲ್ಲಿ ಡಿಕೆಶಿ.

ಬೆಂಗಳೂರು, ಜನವರಿ 23: ಭಾರತದ ಆರ್ಥಿಕತೆ ಬಗ್ಗೆ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಟೀಕೆ ನಡುವೆ ದಾವೋಸ್​​ನಲ್ಲಿ ನಡೆದ ವರ್ಲ್ಡ್​​ ಎಕನಾಮಿಕ್​​ ಫೋರಂನಲ್ಲಿ ಭಾಗಿಯಾಗಿದ್ದ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್​​ ಆಡಿರುವ ಮಾತುಗಳೀಗ ಬಿಜೆಪಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿರುವ ಡಿಕೆಶಿ, ಇಂದು ಜಗತ್ತು ಭಾರತವನ್ನು ಹೆಚ್ಚಿನ ವಿಶ್ವಾಸದೊಂದಿಗೆ ನೋಡುತ್ತಿದೆ. ನಮ್ಮ ಸಾಧನೆಗಳ ಮೇಲೂ, ಮುಂದೆ ಸಾಗುತ್ತಿರುವ ನಮ್ಮ ನಿರಂತರ ವೇಗದ ಮೇಲೂ ಜಾಗತಿಕ ವಿಶ್ವಾಸ ಹೆಚ್ಚುತ್ತಿದೆ ಎಂದಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್​​ಗೀಗ ಬಿಜೆಪಿ ತಿವಿದಿದೆ.

ಡಿಕೆಶಿಗೆ ಧನ್ಯವಾದ ಹೇಳಿದ ಬಿಜೆಪಿ!

ಬಿಜೆಪಿ ಪೋಸ್ಟ್​​

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಬೆಳವಣಿಗೆ ಎಷ್ಟೊಂದು ವೇಗವಾಗಿದೆ ಎಂಬುದನ್ನು ಈಗ ವಿರೋಧ ಪಕ್ಷವೂ ಸಹ ಒಪ್ಪಿಕೊಳ್ಳಲು ಆರಂಭಿಸಿದೆ. ಒಂದು ಕಡೆ ರಾಹುಲ್​​ ಗಾಂಧಿ ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಜಪವನ್ನೇ ಮುಂದುವರಿಸುತ್ತಿರುವಾಗ, ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅದನ್ನು ಖಂಡಿಸಿರೋದನ್ನು ನೋಡುವುದೇ ಸಂತೋಷಕರವಾಗಿದೆ. ಸತ್ತಿರೋದು ಭಾರತದ ಆರ್ಥಿಕತೆಯಲ್ಲ, ನಿಮ್ಮ ಹೈಕಮಾಂಡ್ನ ವಾಸ್ತವದ ಜ್ಞಾನ ಎಂಬುದನ್ನು ದೃಢಪಡಿಸಿದ್ದಕ್ಕೆ ಧನ್ಯವಾದ ಡಿಕೆಶಿ ಅವರೇ ಎಂದು ಬಿಜೆಪಿ ಎಕ್ಸ್​​ ಪೋಸ್ಟ್​​ ಮಾಡಿದೆ.

ಇದನ್ನೂ ಓದಿ:  ಜಾಗತಿಕ ಹೂಡಿಕೆಗೆ ಭಾರತ ವಿಶ್ವಾಸಾರ್ಹ ತಾಣ; ಹೂಡಿಕೆ ಒಪ್ಪಂದಕ್ಕೆ ಜೋಶಿ ಮಾತುಕತೆ ಫಲಪ್ರದ

‘ಡಿಕೆಶಿ ಸಹನೆಯೂ ಕ್ಷೀಣಿಸುತ್ತಿದೆ’

ಮತ್ತೊಂದೆಡೆ ಡಿಕೆಶಿ ಹೇಳೀಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​. ಅಶೋಕ್, ಕರ್ನಾಟಕ ಕಾಂಗ್ರೆಸ್‌ನ ಗಾಳಿಯ ದಿಕ್ಕೇ ಬದಲಾಗುತ್ತಿದೆಯೇ? ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ದಾವೋಸ್​​ನಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಪಕ್ಷದ ವರಿಷ್ಠ ನಾಯಕನ ಹೇಳಿಕೆಯನ್ನು ಜಾಗತಿಕ ವೇದಿಕೆಯಲ್ಲಿ ನಿಂತು ವಿರೋಧಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್​​ ಹೈಕಮಾಂಡ್ ವಿರುದ್ಧ ಅಸಮಾಧಾನಕ್ಕೆ ಕಾರಣಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ . ಅಧಿಕಾರ ಹಂಚಿಕೆಯ ಭರವಸೆಗಳು ಮುಂದೂಡಲ್ಪಟ್ಟಿವೆ, ಅಧಿಕಾರಕ್ಕೂ ಕಡಿವಾಣ ಹಾಕಲಾಗಿದೆ. ಹೀಗಾಗಿ ಅವರ ಸಹನೆಯೂ ನಿಧಾನವಾಗಿ ಕ್ಷೀಣಿಸುತ್ತಿರುವುದು ಸ್ಪಷ್ಟ. ಇದೀಗ ಅವರ ಧಾಟಿಯೇ ಬದಲಾಗಿದೆ. ರಾಹುಲ್ ಗಾಂಧಿ ಕೇಳಲು ನಿರಾಕರಿಸುವ ಸತ್ಯವನ್ನೇ ಅವರೀಗ ಹೇಳುತ್ತಿದ್ದಾರೆ. ಇದು ದೆಹಲಿಗೆ ಡಿಕೆಶಿ ನೀಡುತ್ತಿರುವ ಸೌಮ್ಯ ಎಚ್ಚರಿಕೆಯೇ? ಎಂದು ಪ್ರಶ್ನಿಸಿದ್ದಾರೆ.

ಭಾರತದ ಆರ್ಥಿಕತೆ ‘ಸತ್ತ ಆರ್ಥಿಕತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಟೀಕಿಸಿದ್ದರು. ಅದಕ್ಕೆ ಬೆಂಬಲ ಸೂಚಿಸಿದ್ದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ಸಂತೋಷವಾಗಿದೆ. ಭಾರತದ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆಯ ಪರಿಸ್ಥಿತಿ ಹೇಗಿದೆ ಎಂಬುದರ ವಾಸ್ತವದ ಅರಿವಿದೆ ಎಂದಿದ್ದರು ಎಂಬುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:02 pm, Fri, 23 January 26

Source link

Special Assembly Session Live: ನರೇಗಾ ಹೆಸರು ವಿವಾದ, ಸರ್ಕಾರ-ಪ್ರತಿಪಕ್ಷಗಳ ನಡುವೆ ಜಟಾಪಟಿ

ಬೆಂಗಳೂರು, ಜ.22: ನೆನ್ನೆ (ಜ.22)ಯಿಂದ ಜ.31ರವರೆಗೆ ವಿಶೇಷ ಅಧಿವೇಶ ಶುರುವಾಗಿದೆ. ಜ.22 ಅಂದರೆ ಗುರುವಾರದಿಂದ ರಾಜ್ಯಪಾಲರ ಭಾಷಣದ ನಂತರದಿಂದ ಈ ಅಧಿವೇಶನ ಶುರುವಾಗಿದೆ. ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಇದೀಗ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಚರ್ಚೆ ಶುರುವಾಗಿದೆ. ಇಂದಿನ ಅಧಿವೇಶನ ಲೈವ್​​​​​ ವಿಡಿಯೋ ಇಲ್ಲಿದೆ ನೋಡಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಧ್ಯಾ ಜೊತೆ ಸರಳವಾಗಿ ವಿವಾಹ ಆದ ಉಗ್ರಂ ಮಂಜು; ಇಲ್ಲಿದೆ ವಿಡಿಯೋ – Kannada News | Ugram Manju And Sandhay Wedding happens at Dharmasthala

ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ಅವರು ಇಂದು (ಜನವರಿ 2) ವಿವಾಹ ಆಗಿದ್ದಾರೆ. ಸಂಧ್ಯಾ ಜೊತೆ ಅವರು ಹಸೆಮಣೆ ಏರಿದ್ದಾರೆ. ಧರ್ಮಸ್ಥಳದಲ್ಲಿ ಸರಳ ವಿವಾಹ ಆಗಲು ಮಂಜು ನಿರ್ಧರಿಸಿದ್ದರು. ಅಂತೆಯೇ ಈ ಮದುವೆ ನಡೆದಿದೆ. ಆಪ್ತರು, ಗೆಳೆಯರು ಈ ಮದುವೆಗೆ ಆಗಮಿಸಿದ್ದರು. ಎಲ್ಲರೂ ಮಂಜುಗೆ ಶುಭಾಶಯ ಕೋರಿದ್ದಾರೆ. ನಟ ಪ್ರಮೋದ್ ಶೆಟ್ಟಿ ಕೂಡ ಮದುವೆಗೆ ಹಾಜರಿ ಹಾಕಿದ್ದರು. ವಿವಾಹಕ್ಕೂ ಮೊದಲು ಮಂಜು ಅವರು ಬಿಗ್ ಬಾಸ್ ಮನೆಗೆ ಬಂದು ಬ್ಯಾಚುಲರ್ಸ್ ಪಾರ್ಟಿ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ, ಮರು ಪರಿಶೀಲನೆಗಾಗಿ ಸರ್ಕಾರಕ್ಕೆ ಪತ್ರ: ಇದಕ್ಕಿದೆ ಹಲವು ಕಾರಣ! – Kannada News | Menstrual Leave Sparks Debate in Karnataka: Male Government Employees Seek Policy Review

ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ

ಬೆಂಗಳೂರು, ಜನವರಿ 23: ಮಹಿಳಾ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಋತುಚಕ್ರ ರಜೆಗೆ (Menstrual Leave) ಸರ್ಕಾರಿ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವಾಲಯದ ರಾಜ್ಯ ಶಿಷ್ಟಾಚಾರ ವಿಭಾಗದ ನೌಕರರು ಈ ಕುರಿತು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಋತುಚಕ್ರ ರಜೆ ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಬಾಣದ ರಂಗಯ್ಯ ಅವರ ನೇತೃತ್ವದಲ್ಲಿ ಸಲ್ಲಿಸಿರುವ ಈ ಪತ್ರದಲ್ಲಿ, ಸಮರ್ಪಕ ಅಧ್ಯಯನ ನಡೆಸದೇ ಋತುಚಕ್ರ ರಜೆಯನ್ನು ಜಾರಿಗೆ ತಂದಿರುವುದು ಸರಿಯಲ್ಲ ಎಂದು ಉಲ್ಲೇಖಿಸಲಾಗಿದೆ.

ಈಗಾಗಲೇ ಸರ್ಕಾರಿ ನೌಕರರಿಗೆ ಲಭ್ಯವಿರುವ ವಿವಿಧ ರಜೆಗಳನ್ನು ಮಹಿಳಾ ನೌಕರರು ಬಳಸಿಕೊಳ್ಳಬಹುದು ಎಂಬ ಸಲಹೆಯನ್ನೂ ಪತ್ರದಲ್ಲಿ ನೀಡಲಾಗಿದೆ.

‘ಪುರುಷ ನೌಕರರ ಮೇಲೆ ಹೆಚ್ಚುವರಿ ಹೊರೆ’

ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಹೆಚ್ಚುವರಿ ರಜೆ ನೀಡುವುದರಿಂದ ಪುರುಷ ನೌಕರರ ಮೇಲೆ ಹೆಚ್ಚುವರಿ ಕೆಲಸದ ಹೊರೆ ಬೀಳುತ್ತಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಪುರುಷ ಮತ್ತು ಮಹಿಳಾ ನೌಕರರ ನಡುವೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಮಹಿಳಾ ಸಿಬ್ಬಂದಿ ಹೆಚ್ಚಿರುವ ಇಲಾಖೆಗಳಲ್ಲಿ ಕರ್ತವ್ಯಗಳಿಗೆ ಸಮಸ್ಯೆ

ವಿಶೇಷವಾಗಿ, ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಲ್ಲಿನ ದೈನಂದಿನ ಕರ್ತವ್ಯಗಳಿಗೆ ಋತುಚಕ್ರ ರಜೆ ಅಡಚಣೆಯಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಜೆಗಳ ಕಾರಣದಿಂದ ಕೆಲಸಗಳು ಪೆಂಡಿಂಗ್ ಆಗಿ, ಅದರ ಒತ್ತಡ ಪುರುಷ ನೌಕರರ ಮೇಲೆ ಮಾತ್ರವಲ್ಲದೆ ಮಹಿಳಾ ನೌಕರರಿಗೂ ಸಂಕಷ್ಟ ಉಂಟುಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ಋತುಚಕ್ರ ರಜೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಗೆ ತಾತ್ಕಾಲಿಕ ಮಾರ್ಪಾಡು ಮಾಡಿದ ಹೈಕೋರ್ಟ್

ನಾಲ್ಕನೇ ವಾರದಲ್ಲಿ ರಜೆ ನೀಡುವ ಮುನ್ನ ನಡೆಸಿದ ರೀತಿಯಲ್ಲೇ ಋತುಚಕ್ರ ರಜೆಯ ಬಗ್ಗೆಯೂ ಸಮಗ್ರ ಅಧ್ಯಯನ ನಡೆಸಬೇಕಿದ್ದು, ಪುರುಷ ಮತ್ತು ಮಹಿಳಾ ನೌಕರರ ಕಾರ್ಯಭಾರ ಸಮತೋಲನದ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ವಿಷಯ ಇದೀಗ ಸರ್ಕಾರಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್ – Kannada News | Karnataka High Court Gives Green Signal to Bike Taxis, Orders Government to Issue Licenses

ಬೆಂಗಳೂರು, ಜನವರಿ 23: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದೆ. ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳನ್ನು ಪರಿಗಣಿಸಿ ಪರವಾನಗಿ ನೀಡಬೇಕು ಎಂದು ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಬೈಕ್ ಟ್ಯಾಕ್ಸಿ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಒಂದು ಭಾಗವಾಗಿದ್ದು, ಕಾನೂನು ಚೌಕಟ್ಟಿನೊಳಗೆ ಅವುಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ತೀರ್ಪಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಅಧಿಕೃತ ಪುನರಾರಂಭಕ್ಕೆ ಅವಕಾಶ ದೊರೆತಂತಾಗಿದ್ದು, ಉದ್ಯೋಗಾವಕಾಶಗಳು ಕೂಡ ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ, ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಹಾಗೂ ಸುಲಭ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನೀತಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ಮತ್ತೆ ಕಂಟಕ: ಸುರಕ್ಷಿತವಲ್ಲ, ಕಾನೂನು ಬಾಹಿರವೆಂದು ಹೈಕೋರ್ಟ್​ಗೆ ಹೈಪವರ್ ಕಮಿಟಿ ವರದಿ

ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಹಾಗೂ ಕಾನೂನು ಬಾಹಿರ ಎಂದು ಸರ್ಕಾರ ರಚಿಸಿದ್ದ ಹೈ ಪವರ್ ಕಮಿಟಿ 2025ರ ನವೆಂಬರ್ 26 ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಇದು ಕೇಂದ್ರ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಲಿದೆ. ಬೈಕ್ ಟ್ಯಾಕ್ಸಿಗಳು ನಗರದಲ್ಲಿ ವಿಪರೀತ ಸಂಚಾರ ದಟ್ಟಣೆಗೆ ಕಾರಣವಾಗುತ್ತವೆ. ಅಲ್ಲದೆ, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಹೈ ಪವರ್ ಕಮಿಟಿ ಉಲ್ಲೇಖಿಸಿತ್ತು. ಆದರೆ, ಇದೀಗ ಅಂತಿಮವಾಗಿ ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:25 am, Fri, 23 January 26

Source link

ಮೊದಲೇ ಗೆಲುವಿನ ಸೂಚನೆ ಕೊಟ್ಟಿದ್ದ ಸುದೀಪ್; ಗಿಲ್ಲಿ ಹೇಳಿದ್ದಿಷ್ಟು – Kannada News | Kichcha Sudeep Gave me a hint about winning Says Gilli Nata

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ವೇದಿಕೆ ಮೇಲಿದ್ದಾಗಲೇ ಸುದೀಪ್ ಸೂಚನೆ ಒಂದನ್ನು ನೀಡಿದ್ದರು. ಈ ಸೂಚನೆ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ. ಬಿಗ್ ಬಾಸ್ ಕೊನೆಯಲ್ಲಿ ಗಿಲ್ಲಿ ಜೊತೆ ಮೂವರು ಮಹಿಳಾ ಸ್ಪರ್ಧಿಗಳೇ ಇದ್ದರು. ‘ಮಹಿಳೆಯರ ಬಸ್ ಹತ್ತಿದಂತೆ ಅನಿಸ್ತಿದೆ’ ಎಂದು ಗಿಲ್ಲಿ ಅವರು ಸುದೀಪ್​​​ಗೆ ಹೇಳಿದ್ದರಂತೆ. ‘ನಿಮ್ಮ ಬಸ್​​ಗೆ ಅವರು ಬಂದಿದ್ದಾರೆ ಎಂದುಕೊಳ್ಳಿ’ ಎಂದು ಸುದೀಪ್ ಹೇಳಿದ್ದು, ಗಿಲ್ಲಿಗೆ ಗೆಲುವಿನ ಸೂಚನೆ ರೀತಿ ಕಾಣಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Smiley Moon : ಇಂದು ರಾತ್ರಿ ನಿಮ್ಮನ್ನು ನೋಡಿ ನಗ್ತಾನೆ ಚಂದ್ರ, ನೋಡಿ ನಾಚಿ ನೀರಾಗಬೇಡಿ – Kannada News | The Sky Smiles Back: Moon, Saturn and Neptune Form a Cosmic Grin

ಚಂದ್ರ(Moon)ನು ಸೃಷ್ಟಿಯ ಕುತೂಹಲಕಾರಿ ಗ್ರಹ. ಚಂದ್ರನನ್ನು ಅರ್ಥ ಮಾಡಿಕೊಳ್ಳುವುದು, ಆತನನ್ನು ನೋಡಿ ವರ್ಣಿಸಿದಷ್ಟು ಸುಲಭವಲ್ಲ.  ಪ್ರತಿ ದಿನವೂ ಬೇರೆ ಬೇರೆ ರೀತಿಯಲ್ಲೇ ಕಾಣುತ್ತಾನೆ. ಚಂದ್ರ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಮಗುವನ್ನು ತೊಡೆಯ ಮೇಲೆ ಕೂರಿಸಿ ಊಟ ಮಾಡಿಸಲು ತಾಯಿಗೂ ಚಂದಮಾಮನೇ ಬೇಕು, ಪ್ರಿಯಕರನಿಗೆ ಪ್ರೇಯಸಿಯ ಬಣ್ಣ ಹೋಲಿಸಲು ಈ ಚಂದ್ರನೇ ಬೇಕು. ಚಂದ್ರನನ್ನು ಇಷ್ಟಪಡದವರೇ ಇಲ್ಲ. ಆದರೆ ನೀವು ಚಂದ್ರನನ್ನು ಕಂಡು ನಕ್ಕಿದ್ದೀರಿ ಆದರೆ ಅವನು ನಕ್ಕಿರುವುದ ಕಂಡಿದ್ದೀರಾ.

ಹಾಗಾದರೆ ಇಂದು ನೋಡಲು ಮರೆಯದಿರಿ. ಚಂದ್ರ ಇಂದು ನಿಮ್ಮನ್ನು ನೋಡಿ ನಗ್ತಾನೆ, ಕಂಡು ನಾಚುವುದ ನೀವು ಮರೀಬೇಡಿ. ಇಂದು ರಾತ್ರಿ ಆಕಾಶದತ್ತ ನೋಡುವವರು ಚಂದ್ರ, ಶನಿ ಮತ್ತು ನೆಪ್ಚೂನ್‌ಗಳ ಅಪರೂಪದ ಸಂಯೋಗವನ್ನು ಕಾಣುತ್ತೀರಿ.

ಚಂದ್ರ ಅರ್ಧಾಕಾರದಲ್ಲಿ ಇರಲಿದ್ದು ಅವನ ಎರಡೂ ತುದಿಗಳಲ್ಲಿ ಎರಡು ಗ್ರಹಗಳಿರಲಿವೆ. ಅದು ಚಂದ್ರ ನಕ್ಕಂತೆಯೇ ಕಾಣುತ್ತದೆ. ವೀಕ್ಷಕರು ಚಂದ್ರ ಮತ್ತು ಶನಿ ಎರಡನ್ನೂ ಬರಿಗಣ್ಣಿನಿಂದ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ, ಆದರೆ ನೆಪ್ಚೂನ್ ಅನ್ನು ಸಹ ಗುರುತಿಸಲು ಬೈನಾಕ್ಯುಲರ್ ಅಥವಾ ದೂರದರ್ಶಕದ ಅಗತ್ಯ ಬೀಳಬಹುದು. ಅದು ಸ್ವಲ್ಪ ಮಸುಕಾಗಿ ಕಾಣುತ್ತದೆ.

ಮತ್ತಷ್ಟು ಓದಿ: Lunar Eclipse: ಚಂದ್ರ ಗ್ರಹಣ, ಬೆಂಕಿ ಚೆಂಡಿನಂತಾದ ಚಂದಿರ: ನಭೋ ಮಂಡಲಡದ ಅಪರೂಪದ ಚಮತ್ಕಾರ ಇಲ್ಲಿ ನೋಡಿ

ಭೂಮಿಯ ದೃಷ್ಟಿಕೋನದಿಂದ ಆಕಾಶದಲ್ಲಿ ಎರಡು ಅಥವಾ ಹೆಚ್ಚಿನ ಗ್ರಹಗಳು ಹತ್ತಿರದಲ್ಲಿ ಕಾಣಿಸಿಕೊಂಡಾಗ ಗ್ರಹಗಳ ಸಂಯೋಗ ಉಂಟಾಗುತ್ತದೆ. ಜನವರಿ 23 ರಂದು ನಿರೀಕ್ಷಿಸಲಾದ ತ್ರಿವಳಿ ಸಂಯೋಗವನ್ನು ಸೂರ್ಯಾಸ್ತದ ನಂತರ, ಪಶ್ಚಿಮ ಆಕಾಶದಲ್ಲಿ ಕಡಿಮೆ ಎತ್ತರದಲ್ಲಿ ವೀಕ್ಷಿಸಬಹುದು ಎಂದು ವಿಜ್ಞಾನ ಮತ್ತು ಖಗೋಳಶಾಸ್ತ್ರ ಹೇಳುತ್ತದೆ.

ಯಾವುದೇ ಮರಗಳು ಅಥವಾ ಕಟ್ಟಡಗಳು ನಿಮ್ಮ ದೃಷ್ಟಿಗೆ ಅಡ್ಡಿಯಾಗದಂತೆ ಸ್ಪಷ್ಟ ನೋಟವನ್ನು ಹೊಂದಿರುವ ಸ್ಥಳವನ್ನು ಹುಡುಕಲು ಪ್ರಯತ್ನಿಸಿ. ಚಂದ್ರನು ಶನಿ ಮತ್ತು ನೆಪ್ಚೂನ್ ಕೆಳಗೆ ನಿಧಾನವಾಗಿ ಬಾಗುತ್ತಾನೆ, ಅದು ನಗುಮುಖದಂತೆ ಕಾಣುತ್ತದೆ. ಚಂದ್ರನು ಇರುವ ನಕ್ಷತ್ರ ಹಾಗೂ ಆತನು ಸಂಚರಿಸುವ ದಿಕ್ಕಿನ ಮೇಲೆ ಕೆಲವು ಪರಿಣಾಮಗಳು ಆಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:18 am, Fri, 23 January 26

Source link

Optical Illusion: ನೀವು ಜಾಣರೇ, ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ಕಂಡು ಹಿಡಿಯಬಲ್ಲಿರಾ – Kannada News | Optical Illusion: You only have 5 seconds, can you identify the giraffe in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಹೆಸರೇ ಹೇಳುವಂತೆ ಭ್ರಮೆಯನ್ನು ಉಂಟು ಮಾಡುತ್ತವೆ. ಒಂದು ಕ್ಷಣ ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಆದರೆ ಕೆಲವರು ಇಂತಹ ಟ್ರಿಕ್ಕಿ ಒಗಟುಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ
ಈ ಚಿತ್ರದಲ್ಲಿ ಜಿರಾಫೆಯನ್ನು ಎಲ್ಲಿದೆ ಎಂದು ಐದು ಸೆಕೆಂಡುಗಳಲ್ಲಿ ಹೇಳಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರ ನೋಡಿದಾಗ ನಿಮಗೇನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೀವು ನೋಡಿರಬಹುದು. ಈ ಚಿತ್ರದಲ್ಲಿ ಮೂರು ಮರಗಳನ್ನು ಕಾಣಬಹುದು. ಇಲ್ಲಿ ಸೂರ್ಯಾಸ್ತದ ಸುಂದರ ನೋಟವಿದೆ. ಈ ಆಕರ್ಷಕ ಚಿತ್ರದಲ್ಲಿ ಜಿರಾಫೆ ಎಲ್ಲಿದೆ ಎಂದು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ಐದು ಸೆಕೆಂಡುಗಳೊಳಗೆ ಜಿರಾಫೆಯನ್ನು ಹುಡುಕಲು ಸಾಧ್ಯವೇ ಎಂದು ನೋಡಿ. ನೀವು ಈ ಸವಾಲು ಸ್ವೀಕರಿಸುವಿರಾ.

ಇದನ್ನೂ ಓದಿ: ನೀವು ಬುದ್ಧಿವಂತರೇ, ಈ ಚಿತ್ರದಲ್ಲಿರುವ ಬೆಕ್ಕನ್ನು ಹುಡುಕಿ ನೋಡೋಣ

ಜಿರಾಫೆ ನಿಮ್ಮ ಕಣ್ಣಿಗೆ ಬಿದ್ದಿತೇ?

ಮೊದಲಿಗೆ ಈ ಚಿತ್ರ ಒಗಟು ಭೇದಿಸುವುದು ಸುಲಭವೆಂದು ಭಾವಿಸಿರಬಹುದು. ಆದರೆ ಸಮಯ ಕಳೆದಂತೆ ಟ್ರಿಕ್ಕಿ ಎಂದೆನಿಸುತ್ತದೆ. ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದ್ರೂ ಜಿರಾಫೆಯನ್ನು ಗುರುತಿಸಲು ಸಾಧ್ಯವಾಗದೇ ಹೋಗಬಹುದು. ಆದರೆ ಈ ಕೆಳಗಿನ ಚಿತ್ರದಲ್ಲಿ ಜಿರಾಫೆ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸುವುದು ಸರಿಯೇ? ಹೈಕೋರ್ಟ್​​​ ಆದೇಶದಲ್ಲಿ ಏನಿದೆ? – Kannada News | Elephant Welfare in Karnataka: Debate Over Using Elephants in Private Events and Processions

ಬೆಂಗಳೂರು, ಜ.23: ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಥವಾ ಮೆರವಣಿಗೆಗಳಲ್ಲಿ ಆನೆಗಳನ್ನು (Karnataka Elephant Use Row) ಬಳಸುವುದು ಎಷ್ಟು ಸರಿ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ. ಖಾಸಗಿ ಕಾರ್ಯಕ್ರಮಗಳ ಮೆರವಣಿಗೆಗೆ ಆನೆಗಳನ್ನು ಬಳಸಲು ಸರ್ಕಾರ ಅನುಮತಿ ನೀಡುವುದು ಸರಿಯೇ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸಂಘದ ಸದಸ್ಯ ಅರುಣ್ ಪ್ರಸಾದ್ ಕೇಳಿದ್ದಾರೆ. ಈ ಬಗ್ಗೆ ತುಮಕೂರು ಜಿಲ್ಲೆಯ ತಿಪಟೂರಿನ ನೊಣವಿನಕೆರೆಯಲ್ಲಿರುವ ಮಠದ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ವನ್ಯಜೀವಿಗಳ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ದೇವಾಲಯದ ಉದ್ಘಾಟನೆಗೆ ಮಠಕ್ಕೆ ಸೇರಿದ ಹೆಣ್ಣು ಆನೆಯನ್ನು ಬಳಸಲು ಅನುಮತಿ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದ್ದಾರೆ. ಸೆಪ್ಟೆಂಬರ್ 11, 2017 ರ ಸರ್ಕಾರಿ ಆದೇಶದ (FEE 248 FWL 2015) ನಿಯಮಗಳ ಅಡಿಯಲ್ಲಿ ಆನೆಯನ್ನು ಬಳಸಲು ಅನುಮತಿ ನೀಡುವ ಪತ್ರದಲ್ಲಿ ಏನಿದೆ? ಎಂಬುದರ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಇದರಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಖಾಸಗಿ ಒಡೆತನದ ಆನೆಗಳ ನಿರ್ವಹಣೆ ಮಾರ್ಗಸೂಚಿಯ ಬಗ್ಗೆ ತಿಳಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ನ ಆದೇಶದ ನಂತರ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ನವೆಂಬರ್ 23, 2015 ರಂದು, ನ್ಯಾಯಾಲಯದ ವಿಭಾಗೀಯ ಪೀಠವು ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಆನೆಗಳ ಬಳಸಬಾರದು ಎಂದು ಆದೇಶವನ್ನು ನೀಡಿತ್ತು. ಯಾವುದೇ ರೀತಿಯ ಭಿಕ್ಷಾಟನೆ, ಪ್ರದರ್ಶನ ಅಥವಾ ಮೆರವಣಿಗೆಯಲ್ಲಿ ಆನೆಗಳ ಬಳಕೆಯನ್ನು ನಿಷೇಧಿಸಲು ಮಾರ್ಗಸೂಚಿಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದೆ. ಹಾಗೂ ಈ ಬಗ್ಗೆ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವರ ಜತೆಗೆ ಸಮಾಲೋಚಿಸಿ ಎಂದು ಕೋರ್ಟ್​ ಹೇಳಿದೆ.

ಇದನ್ನೂ ಓದಿ: ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಬಿಗ್​​ ಶಾಕ್​ ನೀಡಿದ ಕರ್ನಾಟಕ-ಕೇರಳ ಸರ್ಕಾರ!

ಆದರೆ ಇದೀಗ ಈ ಸೂಚನೆಯನ್ನು ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸಂಘದ ಸದಸ್ಯ ಅರುಣ್ ಪ್ರಸಾದ್ ಅವರು ಹೇಳಿದ್ದಾರೆ. ಖಾಸಗಿ ಆನೆಗಳನ್ನು ಮೆರವಣಿಗೆ ಮತ್ತು ಪ್ರದರ್ಶನಕ್ಕೆ ಅವಕಾಶ ನೀಡುವ ಮಾರ್ಗಸೂಚಿಗಳ ನ್ಯಾಯಾಲಯದ ಆದೇಶದ ಸಂಪೂರ್ಣ ಉಲ್ಲಂಘನೆಯಾಗಿದೆ. ಅಧಿಕಾರಿಗಳಿಗೆ ನಿಷೇಧ ಮತ್ತು ನಿಯಂತ್ರಣದ ನಡುವಿನ ವ್ಯತ್ಯಾಸ ತಿಳಿದಿದೆ. ಹಾಗಾಗಿ ಈ ಪದ್ಧತಿಯನ್ನು ಬದಲಾಯಿಸಿಕೊಳ್ಳದಿದ್ದರೆ, ಕೋರ್ಟ್​​ನ ಆದೇಶವನ್ನು ಪಾಲಿಸದಿದ್ದರೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಅರುಣ್​​​​​​​​​​ ಪ್ರಸಾದ್​​ ಹೇಳಿದ್ದಾರೆ. ಈ ಬಗ್ಗೆ ಪಿಸಿಸಿಎಫ್ ಪತ್ರ ಬರೆದಿದ್ದರು, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಪ್ರತಿ ವರ್ಷ ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. ಜನಸಂದಣಿ ಮತ್ತು ಮೆರವಣಿಗೆಗಳ ನಡುವೆ ಆನೆಗಳನ್ನು ತಂದರೆ ಅವುಗಳ ತೊಂದರೆ ಆಗುತ್ತದೆ. ಅದು ರೊಚ್ಚಿಗೇಲು ಸಾಧ್ಯತೆ ಕೂಡ ಇದೆ. ಇದರಿಂದ ಜನರ ಮೇಲೆ ದಾಳಿಯನ್ನು ಕೂಡ ಮಾಡಬಹುದು ಎಂದು ಕರುಣೆ ಅನ್‌ಲಿಮಿಟೆಡ್ ಪ್ಲಸ್ ಆಕ್ಷನ್ (ಸಿಯುಪಿಎ) ನ ಸುಪರ್ಣ ಗಂಗೂಲಿ ಹೇಳಿದ್ದಾರೆ. ಇದರ ಜತೆಗೆ ಅವುಗಳಿಗೆ ಮೆರೆವಣಿಗಳಲ್ಲಿ ಹೋಗಿ ಸುಸ್ತಾಗುತ್ತದೆ. ಈ ವಿಚಾರಗಳನ್ನು ಸರ್ಕಾರ ಅರಿತಕೊಳ್ಳಬೇಕು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:04 am, Fri, 23 January 26

Source link