Category Archives: Blog

Your blog category

ಸಿನಿಮಾ ನಿರ್ದೇಶನಕ್ಕೆ ಇಳಿಯುತ್ತಾರೆ ಗಿಲ್ಲಿ ನಟ? ದೊಡ್ಡ ಪ್ಲ್ಯಾನ್ ರಿವೀಲ್ – Kannada News | Gilli Nata: Bigg Boss 12 Winner’s Directorial Debut? Kannada Film Dreams After Victory

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ವಿನ್ನರ್ ಆಗಿ ಹೊರಹೊಮ್ಮಿದರು. ಅವರು ಅದ್ಭುತವಾಗಿ ಮನರಂಜನೆ ನೀಡಿದರು ಮತ್ತು ವಿಜಯ ಪತಾಕೆಯನ್ನು ಹಾರಿಸಿದರು. ಈಗ ಗಿಲ್ಲಿ ನಟ ಅವರನ್ನು ಹುಡುಕಿ ಸಿನಿಮಾ ಆಫರ್​​​ಗಳು ಬರಬಹುದು ಎಂದು ಹೇಳಲಾಗುತ್ತಾ ಇದೆ. ಇದರ ಜೊತೆಗೆ ಅವರಿಗೆ ಸಿನಿಮಾ ನಿರ್ದೇಶನ ಮಾಡೋ ಪ್ಲ್ಯಾನ್ ಇದೆ ಎಂದು ಹೇಳಲಾಗುತ್ತಾ ಇದೆ. ವೈರಲ್ ಆದ ಹಳೆಯ ವಿಡಿಯೋ ಇದಕ್ಕೆ ಕಾರಣ ಎನ್ನಬಹುದು.

ಗಿಲ್ಲಿ ನಟ ಅವರು ಮೊದಲಿನಿಂದಲೂ ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಈ ಮೊದಲು ಕೆಲವು ಶಾರ್ಟ್​ ಫಿಲ್ಮ್​​ಗಳನ್ನು ನಿರ್ದೇಶನ ಮಾಡಿದ್ದಾರೆ. ಅದಕ್ಕೆ ಅವರೇ ಸಂಭಾಷಣೆಗಳನ್ನು ಬರೆದಿದ್ದರು. ಹೀಗಾಗಿ, ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ಈಗ ಅವರಿಗೆ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಲಾಗುತ್ತಾ ಇದೆ.

ಯೋಗರಾಜ್ ಭಟ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಿಲ್ಲಿ ನಟ ಅವರ ಬಗ್ಗೆ ಯೋಗರಾಜ್ ಭಟ್ ಮಾತನಾಡಿದ್ದರು. ‘ನಿರ್ದೇಶನದಲ್ಲಿ ಆತನಿಗೆ ಹೆಚ್ಚು ಆಸಕ್ತಿ’ ಎಂದು ಯೋಗರಾಜ್ ಭಟ್ ಅವರು ಹೇಳಿದ್ದರು. ಹೀಗಾಗಿ, ಸಿನಿಮಾ ನಿರ್ದೇಶನ ಮಾಡಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ.

ಇನ್ನು, ಕಾವ್ಯಾ ಅವರು ಇತ್ತೀಚೆಗೆ ಪೋಸ್ಟ್ ಮಾಡುವಾಗ ಬರೆದ ಕ್ಯಾಪ್ಶನ್ ಗಮನ ಸೆಳೆದಿತ್ತು. ‘ಆದಷ್ಟು ಬೇಗ ಆ್ಯಕ್ಷನ್ ಕಟ್ ಹೇಳುವ ರೀತಿ ಆಗಲಿ’ ಎಂದು ಹಾರೈಸಿದ್ದರು. ನಿರ್ದೇಶನ ಮಾಡುತ್ತಾರೆ ಎಂದರೆ ಮಾತ್ರ ಆ್ಯಕ್ಷನ್ ಕಟ್ ಪದ ಬಳಕೆ ಮಾಡುತ್ತಾರೆ ಎನ್ನಬಹುದು. ಹೀಗಾಗಿ, ಕಾವ್ಯಾ ವಿಶ್ ಹಿಂದೆ ಈ ರೀತಿಯ ರಹಸ್ಯ ಅಡಗಿರಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ‘ತುಂಬಾ ಗೊಂದಲದಲ್ಲಿದ್ದೇನೆ’; ಮುಂದಿನ ಪ್ಲ್ಯಾನ್ ಬಗ್ಗೆ ಕನ್​​ಫ್ಯೂಸ್ ಆದ ಗಿಲ್ಲಿ ನಟ

ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ ಆದ ಬಳಿಕ ಹಲವು ರಾಜಕಾರಣಿಗಳು, ನಟರನ್ನು ಭೇಟಿ ಮಾಡಿದ್ದಾರೆ. ಹೊರಗೆ ಅವರ ಕ್ರೇಜ್ ಜೋರಾಗಿಯೇ ಇದೆ. ಅವರು ನಿರ್ದೇಶನ ಮಾಡುತ್ತಾರೆ ಎಂದರೆ ಹಣ ಹಾಕಲು ನಿರ್ಮಾಪಕರು ಬಂದೇ ಬರುತ್ತಾರೆ ಎನ್ನಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ಪತ್ನಿ ಕಿರಿಕ್; ಕತ್ತು ಹಿಸುಕಿ ಕೊಲೆ ಮಾಡಿದ ಪತಿ – Kannada News | Belagavi: Husband Murders Wife Over Childlessness in Bailhongal, Arrested

ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದಿಂದ ಸತ್ತಿದ್ದಾಳೆಂದ ಪತಿ!

ಬೆಳಗಾವಿ, ಜನವರಿ 23: ಜಿಲ್ಲೆಯ ಬೈಲಹೊಂಗಲ (Belagavi) ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಪತಿ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ  ಮಾಡಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಪತ್ನಿಯ ಕಾಟದಿಂದ ಸಿಟ್ಟಿಗೆದ್ದ ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮೃತರ ಪೋಷಕರ ದೂರಿನ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶವ ನೋಡಿ ಅನುಮಾನಗೊಂಡ ಕುಟುಂಬಸ್ಥರು

ಪತಿ ಫಕೀರಪ್ಪ ಗಿಲಕ್ಕನವರ ಜೊತೆ ಮದುವೆಯಾಗಿ 3 ವರ್ಷ ಕಳೆದರೂ ಮಕ್ಕಳಾಗುತ್ತಿಲ್ಲವೆಂದು ಪತ್ನಿ ರಾಜೇಶ್ವರಿ (21) ಆಗಾಗ್ಗೆ ಕಿರಿಕ್ ಮಾಡುತ್ತಿದ್ದಳು. ಇದರಿಂದ ಬೇಸತ್ತ ಪತಿ, ಸಿಟ್ಟಿಗೆದ್ದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಕಥೆ ಕಟ್ಟಿದ ಆರೋಪಿ, ಈ ಬಗ್ಗೆ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆದರೆ ಅಂತ್ಯಕ್ರಿಯೆ ವೇಳೆ ರಾಜೇಶ್ವರಿಯ ಪೋಷಕರು ಮಗಳ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಹಿಂಸೆ: ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ

ತನಿಖೆ ವೇಳೆ ತಪ್ಪೊಪ್ಪಿಕೊಂಡ ಪತಿ

ತಕ್ಷಣವೇ ಅವರು ಬೈಲಹೊಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಫಕೀರಪ್ಪ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿಯೂ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೈಲಹೊಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜನಗಣತಿ 2027: ಮೊದಲನೇ ಹಂತದಲ್ಲಿ ನಿಮಗೆ ಏನೇನು ಕೇಳಲಾಗುತ್ತೆ? 33 ಪ್ರಶ್ನೆಗಳ ಪೂರ್ಣ ಪಟ್ಟಿ ಇಲ್ಲಿದೆ – Kannada News | 33 Questions to Map India: Houselisting Exercise Kicks Off for Census 2027

ಜನಗಣತಿ-ಸಾಂದರ್ಭಿಕ ಚಿತ್ರImage Credit source: India Today

ನವದೆಹಲಿ, ಜನವರಿ 23: 2027 ರ ಜನಗಣತಿ(Census)ಗೆ ಕೇಂದ್ರ ಸರ್ಕಾರವು ಮೊದಲ ಔಪಚಾರಿಕ ಹೆಜ್ಜೆ ಇಟ್ಟಿದೆ. ದೇಶಾದ್ಯಂತ ಜನಗಣತಿ ಪ್ರಕ್ರಿಯೆಗೆ ಸಿದ್ಧತೆಗಳ ಆರಂಭವನ್ನು ಸೂಚಿಸುವ ಮೂಲಕ, ಜನಗಣತಿಯ ಮೊದಲ ಹಂತಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ವರ್ಷ ಜನಗಣತಿಯ ಮೊದಲ ಹಂತ ಪ್ರಾರಂಭವಾಗಲಿದೆ. ಇದು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಈ ಪ್ರಕ್ರಿಯೆಯನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುವುದು.

2027 ರ ಜನಗಣತಿಯಲ್ಲಿ ಜಾತಿ ಸಂಬಂಧಿತ ದತ್ತಾಂಶವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಈ ಕ್ರಮವು ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಅಧಿಕೃತ ಜನಗಣತಿಯಲ್ಲಿ ಜಾತಿ ದತ್ತಾಂಶವನ್ನು ಸೇರಿಸಲಾಗುತ್ತಿದೆ.
ಸರ್ಕಾರವು ಕುಟುಂಬ ಸದಸ್ಯರ ಸಂಖ್ಯೆ ಮತ್ತು ಕುಟುಂಬದ ಮುಖ್ಯಸ್ಥರ ಬಗ್ಗೆ ಮಾಹಿತಿಯನ್ನು ಮಾತ್ರವಲ್ಲದೆ, ನಿಮ್ಮ ಜೀವನಶೈಲಿ ಮತ್ತು ಸೌಕರ್ಯಗಳ ಬಗ್ಗೆಯೂ ವಿವರಗಳನ್ನು ಸಂಗ್ರಹಿಸುತ್ತಿದೆ.

ನಿಮ್ಮ ಮನೆಯ ಛಾವಣಿ ಮತ್ತು ಗೋಡೆಗಳನ್ನು ಯಾವ ವಸ್ತುಗಳಿಂದ ಮಾಡಲಾಗಿದೆ, ಕುಡಿಯುವ ನೀರು ಮತ್ತು ಶೌಚಾಲಯಗಳ ಲಭ್ಯತೆ, ನೀವು ಹೊಂದಿರುವ ಗ್ಯಾಜೆಟ್‌ಗಳು (ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್) ಮತ್ತು ವಾಹನಗಳು (ಕಾರು, ಬೈಕ್) ಎಲ್ಲವನ್ನೂ ಇದು ಒಳಗೊಂಡಿದೆ.

ಕೇಳಲಾಗುವ ಆ 33 ಪ್ರಶ್ನೆಗಳು ಯಾವುವು?

2021 ರಲ್ಲಿ ಜನಗಣತಿಯನ್ನು ಏಕೆ ನಡೆಸಲಿಲ್ಲ?

COVID-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ 2021 ರ ಜನಗಣತಿಯನ್ನು ಸ್ಥಗಿತಗೊಳಿಸಲಾಯಿತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಜನಗಣತಿಯನ್ನು ಸಮಯಕ್ಕೆ ಸರಿಯಾಗಿ ನಡೆಸಲು ಸಾಧ್ಯವಾಗದ ಘಟನೆ ಇದಾಗಿದೆ. ಇದಕ್ಕೂ ಮೊದಲು, ಎರಡನೇ ಮಹಾಯುದ್ಧದ ಸಮಯದಲ್ಲಿ ಅಥವಾ ಚೀನಾ ಮತ್ತು ಪಾಕಿಸ್ತಾನದ ವಿರುದ್ಧದ ಯುದ್ಧಗಳ ಸಮಯದಲ್ಲಿ, ಭಾರತದಲ್ಲಿ ಜನಗಣತಿಯನ್ನು ಎಂದಿಗೂ ನಿಲ್ಲಿಸಲಾಗಿಲ್ಲ. ಭಾರತೀಯ ಜನಗಣತಿಯು ದೇಶದ ಜನಸಂಖ್ಯಾ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಡಿಪಾಯವನ್ನು ಒದಗಿಸುವ ಪ್ರಮುಖ ಪ್ರಕ್ರಿಯೆಯಾಗಿದೆ.

ಮತ್ತಷ್ಟು ಓದಿ: Census 2027: ಇದೇ ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿಯ ಮೊದಲ ಹಂತ ಶುರು

ಭಾರತದ ಕೊನೆಯ ಜನಗಣತಿ, 2011 ರ ಜನಗಣತಿ, ದೇಶದ 15 ನೇ ಜನಗಣತಿ ಮತ್ತು ಸ್ವಾತಂತ್ರ್ಯದ ನಂತರದ ಏಳನೇ ಜನಗಣತಿಯಾಗಿದೆ. ಇದನ್ನು ಫೆಬ್ರವರಿ 9 ರಿಂದ ಫೆಬ್ರವರಿ 28, 2011 ರವರೆಗೆ ನಡೆಸಲಾಯಿತು. ಆ ಜನಗಣತಿಗಾಗಿ ಪ್ರಚಾರ ಮಾಡಲಾದ ಘೋಷಣೆ ನಮ್ಮ ಜನಗಣತಿ, ನಮ್ಮ ಭವಿಷ್ಯ, ಇದು ಈ ವ್ಯಾಯಾಮದ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ಹೊಸ ಜನಗಣತಿಯು ಭಾರತದ ಅಭಿವೃದ್ಧಿ ದಿಕ್ಕನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದ್ದರಿಂದ, ಜನಗಣತಿಯನ್ನು ಮುಂದೂಡುವುದು ಅನೇಕ ಪ್ರಾದೇಶಿಕ ಮತ್ತು ರಾಷ್ಟ್ರೀಯ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಆಚೆ ಬಂದಮೇಲೂ ಗೆದ್ರಿ’; ಅಪ್ಪುನ ಮರೆಯದ ಗಿಲ್ಲಿಗೆ ಫ್ಯಾನ್ಸ್ ಅಭಿನಂದನೆ – Kannada News | Gilli Nata Visits Puneeth Rajkumar Samadhi Fans Says you Are the real winner

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಹುಟ್ಟೂರಲ್ಲಿ ವಿಜಯ ಯಾತ್ರೆ ಮಾಡಿದರು. ಇದಾದ ಬಳಿಕ ಬೆಂಗಳೂರಿಗೆ ಮರಳಿದ್ದಾರೆ. ಅವರು ಪುನೀತ್ ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಪ್ರತಿ ಕಲಾವಿದರಿಗೂ, ಅದರಲ್ಲೂ ಯುವ ಕಲಾವಿದರಿಗೆ ಪುನೀತ್ ರಾಜ್​​ಕುಮಾರ್ ಎಂದರೆ ವಿಶೇಷ ಪ್ರೀತಿ ಇರುತ್ತದೆ. ಇದಕ್ಕೆ ಗಿಲ್ಲಿ ಕೂಡ ಹೊರತಾಗಿಲ್ಲ. ಅವರು ಪುನೀತ್ ಸ್ಮಾರಕಕ್ಕೆ ತೆರಳೋಕೆ ಮರೆತಿಲ್ಲ ಎಂಬುದು ವಿಶೇಷ.

ಬಿಗ್ ಬಾಸ್ ವಿನ್ ಆದ ಬಳಿಕ ಗಿಲ್ಲಿ ಅವರು ಪುನೀತ್ ಸ್ಮಾರಕದ ಬಳಿ ತೆರಳಿದ್ದಾರೆ. ಅಲ್ಲಿ ಅವರು ಅಪ್ಪು ಸಮಾಧಿಗೆ ಪೂಜೆ ಮಾಡಿದ್ದಾರೆ. ಈ ವೇಳೆ ಕಪ್​​ನ ಇಟ್ಟು ನಮಸ್ಕರಿಸಿದ್ದಾರೆ. ಅಪ್ಪು ಅಭಿಮಾನಿಗಳು ಗಿಲ್ಲಿ ನಡೆಯನ್ನು ನೋಡಿ ಇಷ್ಟಪಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸಾಕಷ್ಟು ಮನರಂಜನೆ ನೀಡಿದ್ದಾರೆ. ಈ ಕಾರಣದಿಂದಲೇ ಅವರಿಗೆ 45 ಕೋಟಿಗೂ ಹೆಚ್ಚು ವೋಟ್ ಬಿದ್ದಿದೆ. ಅಸಲಿ ವೋಟ್​​ನ ಸಂಖ್ಯೆಯನ್ನು ಯಾರೂ ರಿವೀಲ್ ಮಾಡಿಲ್ಲ.

ಗಿಲ್ಲಿ ಅವರು ಬಿಗ್ ಬಾಸ್ ವಿನ್ ಆದ ಬಳಿಕ ಸಿಎಂ ಸಿದ್ದರಾಮಯ್ಯ, ನಟರಾದ ಶಿವರಾಜ್​​​ಕುಮಾರ್, ಸುದೀಪ್ ಮೊದಲಾದವರನ್ನು ಭೇಟಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ ಕರೆ ಮಾಡಿ ಅವರಿಗೆ ವಿಶ್ ಮಾಡಿದ್ದಾರೆ.

Published On – 10:33 am, Fri, 23 January 26

Source link

Video: ರೈಲ್ವೆ ಹಳಿಯಲ್ಲಿ ಅಡ್ಡವಾಗಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ರೈಲು, ಭಯಾನಕ ವಿಡಿಯೋ – Kannada News | A Second from Disaster: Train Slams Truck at Jharkhand Level Crossing

ಜಾರ್ಖಂಡ್, ಜನವರಿ 23: ರೈಲ್ವೆ ಕ್ರಾಸಿಂಗ್​ನಲ್ಲಿ ಮುಂದಕ್ಕೆ ಹೋಗಲಾಗದೆ ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿರುವ ಭಯಾನಕ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ನವದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ. ಗೊಂಡಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತಿತ್ತು. ಟ್ರಕ್ ಈ ಕಡೆಯಿಂದ ಹಳಿ ದಾಟಿದಾಗ ಗೇಟ್ ತೆರೆದಿತ್ತು ಅತ್ತ ಹೋಗುವಷ್ಟರಲ್ಲಿ ಮುಚ್ಚಿತ್ತು ಹೀಗಾಗಿ ಅರ್ಧದಾರಿಯಲ್ಲಿ ನಿಂತ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿತ್ತು.

ರೈಲು ಡಿಕ್ಕಿ ಹೊಡೆದು ತಳ್ಳಿದ ಪರಿಣಾಮ ಟ್ರಕ್​ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಜಸಿದಿಹ್-ಅಸನ್ಸೋಲ್ ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾರು ಮಾರಾಟ ಮಾಡಿ ಕೇವಲ 24 ಗಂಟೆಯೊಳಗೆ ಅದೇ ಕಾರು ಕದ್ದು ಮತ್ತೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ – Kannada News | Facebook Marketplace Car Theft: Kansas Man Caught Reselling Stolen Vehicles

ಕಾನ್ಸಾಸ್, ಜನವರಿ 23: ವ್ಯಕ್ತಿಯೊಬ್ಬ ಫೇಸ್​ಬುಕ್​ನಲ್ಲಿ ಕಾರು(Car) ಮಾರಾಟ ಮಾಡಿ ಅದೇ ದಿನ ಆ ಕಾರನ್ನು ಕದಿಯುತ್ತಿದ್ದ ಕಳ್ಳನನ್ನು ಕಾನ್ಸಾಸ್ ನಗರದ ಸೆರೆಹಿಡಿಯಲಾಗಿದೆ. ಆ ವ್ಯಕ್ತಿ ಇಲ್ಲಿಯವರೆಗೆ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ್ದಾನೆ. ಈ ಹಗರಣದಲ್ಲಿ ವಾಹನಗಳನ್ನು ಬಹು ಖರೀದಿದಾರರಿಗೆ ಮಾರಾಟ ಮಾಡಿ ಒಂದು ದಿನದೊಳಗೆ ಕದಿಯಲಾಗುತ್ತಿತ್ತು. ಒಪ್ಪಂದಗಳನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ನಕಲಿ ದಾಖಲೆಗಳನ್ನು ಬಳಸಿದ್ದ. ಮಮಡೌ ಡಿಯಲ್ಲೋ ಎಂಬಾತನೇ ಹೀಗೆ ಕಾರುಗಳನ್ನು ಮಾರಾಟ ಮಾಡಿ ಕದಿಯುತ್ತಿದ್ದ ವ್ಯಕ್ತಿ.

ಕಾರನ್ನು ಕೊಡುವ ಮೊದಲು ಸಾವಿರಾರು ಡಾಲರ್​ಗಳನ್ನು ತನ್ನ ಅಕೌಂಟ್​ಗೆ ಹಾಕಿಸಿಕೊಳ್ಳುತ್ತಿದ್ದ, ಬಳಿಕ ಮಾರಾಟ ಮಾಡಿ, 24 ಗಂಟೆಯೊಳಗೆ ಅದನ್ನು ಕದಿಯುತ್ತಿದ್ದ. ಕೆಲವಂತೂ 24 ಗಂಟೆಯಲ್ಲಿ 7-8 ಗಂಟೆಗಳಲ್ಲಿ ಕದಿಯುತ್ತಿದ್ದ. ಆರೋಪಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಮತ್ತು ವಹಿವಾಟುಗಳನ್ನು ಪೂರ್ಣಗೊಳಿಸಲು ಖರೀದಿದಾರರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದ.

ಮಾರಾಟದ ಬಿಲ್‌ಗಳನ್ನು ಒಳಗೊಂಡಿರುವ ದಾಖಲೆಗಳನ್ನು ನೀಡಿದ ನಂತರ ಖರೀದಿದಾರರು ಕಾನೂನುಬದ್ಧವಾಗಿ ಒಡೆತನದ ವಾಹನಗಳನ್ನು ಖರೀದಿಸುತ್ತಿದ್ದೇವೆ ಎಂದು ನಂಬಿಕೊಂಡಿದ್ದರು. ಖರೀದಿಸಿ ಒಂದು ದಿನದೊಳಗೆ ಮಾರಾಟ ಮಾಡುವುದರಿಂದ ಹೊಸ ಮಾಲೀಕರಿಗೆ ಇತ್ತ ಹಣವೂ ಇಲ್ಲ ಅತ್ತ ಕಾರೂ ಇಲ್ಲದಂತಾಗಿತ್ತು. ಎಲ್ಲಾ ಆರೋಪಗಳಲ್ಲೂ ಶಿಕ್ಷೆ ವಿಧಿಸಿದರೆ, ಅವನಿಗೆ 98 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ಮತ್ತಷ್ಟು ಓದಿ: ವೇಗವಾಗಿ ಬಂದು ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ

ಒಂದೇ ರೀತಿ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ ಈತನ ಬುದ್ಧಿವಂತಿಕೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಅನೇಕರು ಆತ ಒಂದೇ ಕಾರನ್ನು ಇಷ್ಟು ಸುಲಭವಾಗಿ ಮಾರಾಟ ಮಾಡಲು ಹೇಗೆ ಸಾಧ್ಯವಾಗಿದೆ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ.

ಖರೀದಿದಾರರಿಗೆ 2013 ರ ಬೂದು ಬಣ್ಣದ ಹೋಂಡಾ ಸಿವಿಕ್ ಅಥವಾ 2013 ರ ಕಂದು ಬಣ್ಣದ ಬ್ಯೂಕ್ ವೆರಾನೊವನ್ನು ಖರೀದಿಸುತ್ತಿದ್ದರು. ಆದರೆ ಅದೇ ವಾಹನವು ಶೀಘ್ರದಲ್ಲೇ ಮತ್ತೊಂದು ಮಾರಾಟ ಸೈಟ್‌ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ವರದಿಯಾದ ಒಂದು ಪ್ರಕರಣದಲ್ಲಿ ಈ ವಂಚಕ ಕೇವಲ ಮಾರಾಟ ಮಾಡಿದ 7 ಗಂಟೆಯ ಒಳಗೆ ಕಾರನ್ನು ವಾಪಸ್ ಕದಿದ್ದ. ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿತ್ತು. ಹೀಗಾಗಿ ಡಿಯಲ್ಲೋ ವಿರುದ್ಧ ಈಗ 14 ಪ್ರಕರಣಗಳು ದಾಖಲಾಗಿವೆ. ಮೋಟಾರು ವಾಹನ ಕಾಯ್ದೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.

ಈ ಎಲ್ಲಾ ಪ್ರಕರಣಗಳು 2025ರ ಮೇ ಹಾಗೂ ಜೂನ್ ತಿಂಗಳ ಸಮಯದಲ್ಲಿ ನಡೆದಿದೆ. ಕಾನ್ಸಾಸ್ ಸಿಟಿ ಪೊಲೀಸರು ಫೇಸ್‌ಬುಕ್ ಮಾರುಕಟ್ಟೆ ಖರೀದಿಗಳಿಗೆ ಸಂಬಂಧಿಸಿದಂತೆ ಹಲವಾರು ಕದ್ದ ವಾಹನ ವರದಿಗಳನ್ನು ಸ್ವೀಕರಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಬಿಗ್​​ ಶಾಕ್​ ನೀಡಿದ ಕರ್ನಾಟಕ-ಕೇರಳ ಸರ್ಕಾರ! – Kannada News | Mangaluru Kasaragod Bus Travel Costlier: KSRTC Increases Fares Due to Kumbla Toll

ಮಂಗಳೂರು, ಜ.23: ಮಂಗಳೂರಿನಿಂದ ಕಾಸರಗೋಡಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಎಸ್​​ಆರ್​ಟಿಸಿ ಬಿಗ್ ಶಾಕ್​ ನೀಡಿದೆ. ಮಂಗಳೂರು-ಕಾಸರಗೋಡು ಪ್ರಯಾಣ ದುಬಾರಿಯಾಗಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಈ ಮಾರ್ಗದಲ್ಲಿ ಸಂಚಾರಿಸುವ ಬಸ್​​​ಗಳ ಟಿಕೆಟ್​​​​​ ದರವನ್ನು ಹೆಚ್ಚು ಮಾಡಿದ್ದಾರೆ. ಇದೀಗ ಮಂಗಳೂರು ಹಾಗೂ ಕಾಸರಗೋಡು ಜನರಿಗೆ ಇದು ಹೊರೆಯಾಗಲಿದೆ. ಮಂಗಳೂರು-ಕಾಸರಗೋಡು ಮಾರ್ಗದ ಕುಂಬಳದಲ್ಲಿ ಅಧಿಕೃತವಾಗಿ ಟೋಲ್ ಸಂಗ್ರಹ ಪ್ರಾರಂಭವಾಗುವ ಮೊದಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜ. 20ರಿಂದ ಅಂದರೆ ಮಂಗಳವಾರದಿಂದ ಈ ಟೋಲ್ ಮೊತ್ತವನ್ನು ಸೇರಿಸುವ ಮೂಲಕ ಪರಿಷ್ಕೃತ ದರವನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಗ್ರಹ ಮಾಡಲು ಶುರು ಮಾಡಿದೆ. ಇದರ ಜತೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೂಡ ಟಿಕೆಟ್​​ ದರದಲ್ಲಿ ಬದಲಾವಣೆಗಳನ್ನು ತಂದಿದೆ. ಕುಂಬಳದಿಂದ ಮಂಗಳೂರಿಗೆ ಈ ಹಿಂದೆ 67 ರೂ. ಇದ್ದ ಪ್ರಯಾಣ ದರವನ್ನು ಈಗ 75 ರೂ.ಗೆ ಹೆಚ್ಚಿಸಿದೆ.

ರಾಜಹಂಸ ಬಸ್​​ಗಳ ದರವನ್ನು ಕೂಡ 10 ರೂ. ವರೆಗೆ ಹೆಚ್ಚಿಸಿದೆ. 80 ರೂ.ನಿಂದ 90 ರೂ.ಗೆ ಏರಿಕೆಯಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳು ಟಿಕೆಟ್ ದರವನ್ನು 7 ರೂ. ಹೆಚ್ಚಿಸಿದ್ದು ಈಗಾಗಲೇ ಈ ದರ ಜಾರಿಯಲ್ಲಿದೆ. ಇನ್ನು ಟೋಲ್ ಪಾವತಿಯಿಂದ ವಿನಾಯಿತಿ ನೀಡುವಂತೆ ಕೋರಿ ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಸಾರಿಗೆ ಬಸ್‌ಗಳು ಸಂಪೂರ್ಣವಾಗಿ ಸರ್ವಿಸ್ ರಸ್ತೆಗಳಲ್ಲಿ ಸಂಚರಿಸುತ್ತವೆ. ಕುಂಬಳ ಟೋಲ್ ಗೇಟ್ ಬಿಟ್ಟು ಬೇರೆ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬಸ್ಸುಗಳು ಹೋಗುವುದಿಲ್ಲ. ಹಾಗಾಗಿ ಟೋಲ್ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಈ ಬದಲಾವಣೆಯನ್ನು ಮಾಡದಿದ್ದರೆ, ಹೆಚ್ಚಿನ ಟಿಕೆಟ್ ದರಗಳ ಮೂಲಕ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ!

ಕಾಸರಗೋಡು ಮಾರ್ಗದಲ್ಲಿ ಪ್ರತಿದಿನ ಸುಮಾರು 35 ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರಿಸುತ್ತದೆ. ಟೋಲ್ ಪಾವತಿಗಾಗಿ ದಿನಕ್ಕೆ ಸುಮಾರು 48,000 ರೂ. ವ್ಯಯ ಮಾಡುತ್ತಿದೆ. ಹೆದ್ದಾರಿಯನ್ನು ಬಳಸದಿದ್ದರೂ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿರುವುದರಿಂದ ದರ ಏರಿಕೆ ಮಾಡುವ ಅನಿರ್ವಾಯವಾಗಿದೆ. ಕೇರಳದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತದೆ. ಅದಕ್ಕೂ ಕೂಡ ಟೋಲ್​ ದರ ಇದೆ. ಅವರು ಯಾವುದೇ ಟಿಕೆಟ್​​​ ದರ ಹೆಚ್ಚು ಮಾಡಿಲ್ಲ. ಟಿಕೆಟ್ ದರಗಳನ್ನು ಪರಿಷ್ಕರಿಸಬೇಕಾದರೆ, ಸಾರಿಗೆ ಸಚಿವರು ಇಲಾಖಾ ಸಭೆ ನಡೆಸಿ, ನಿರ್ಧಾರ ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ಅಧಿಕೃತ ಆದೇಶಗಳನ್ನು ಹೊರಡಿಸಬೇಕು ಎಂದು ಕಾಸರಗೋಡು ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿನ ಆಚರಿಸುವುದರ ಹಿಂದಿದೆ ಈ ಕಾರಣ – Kannada News | Netaji Subhash Chandra Bose Jayanti 2026: Know the history and significance and how it is celebrated

ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮದಿನImage Credit source: Pinterest

ಭಾರತವು ಬ್ರಿಟಿಷರ ದಾಸ್ಯದಿಂದ ಮುಕ್ತರಾಗುವಲ್ಲಿ ಬಂಗಾಳದ ಶೌರ್ಯದ ಮಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಅಪಾರವಾಗಿದೆ. ಜನವರಿ 23 ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನ (Netaji Subhash Chandra Bose Jayanti). ಅವರ ಹೋರಾಟದ ಹಾದಿಯನ್ನು ನೆನಪಿಸಿಕೊಳ್ಳುತ್ತಾ ಈ ಬಾರಿ ಅವರ 129 ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅದಲ್ಲದೇ ಈ ದಿನದಂದೇ ಪರಾಕ್ರಮ ದಿನವನ್ನು(Parakram Diwas) ಆಚರಿಸಲಾಗುತ್ತದೆ. ಈ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಯುವಕರಲ್ಲಿ ಕಿಚ್ಚು ಹಚ್ಚಿಸಿದ್ದ ಸುಭಾಷ್ ಚಂದ್ರ ಬೋಸ್

‘ನನಗೆ ನಿಮ್ಮ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎನ್ನುವ ಘೋಷವಾಕ್ಯದಿಂದಲೇ ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದವರು ನೇತಾಜಿ ಸುಭಾಷ್ ಚಂದ್ರ ಬೋಸ್. ಭಾರತೀಯರ ಮೇಲೆ ದಬ್ಬಾಳಿಕೆ ಮಾಡುವ ಬ್ರಿಟಿಷರನ್ನು ಓಡಿಸಲು ಮಿಲಿಟರಿ ಕಾರ್ಯಾಚರಣೆಯೇ ಪರಿಣಾಮಕಾರಿ ಅಸ್ತ್ರ ಎಂದು ನಂಬಿದ್ದರು. ಹೀಗಾಗಿ ಈ ಅಸ್ತ್ರದಿಂದ ಮಾತ್ರ ಎಲ್ಲವೂ ಸಾಧ್ಯ ಎಂದುಕೊಂಡಿದ್ದರು. ಈ ಕಾರಣಕ್ಕಾಗಿ ತಮ್ಮ ಹೋರಾಟದ ಹಾದಿಯಲ್ಲಿ ಬದಲಾವಣೆ ತಂದುಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದರು. ಸುಭಾಸ್ ಚಂದ್ರ ಬೋಸ್ ಹೋರಾಟ ಹಾದಿಯ ಕಡೆಗೆ ಕಣ್ಣಾಯಿಸಿದಾಗೆಲೆಲ್ಲಾ ಮೈಯೆಲ್ಲಾ ರೋಮಾಂಚನವಾಗುತ್ತದೆ.

ಇದನ್ನೂ ಓದಿ:Penguin Awareness Day 2026: ಬದಲಾಗುತ್ತಿರುವ ಹವಾಮಾನದಿಂದಾಗಿ ಪೆಂಗ್ವಿನ್‌ಗಳ ಅಸ್ತಿತ್ವಕ್ಕೆ ಎದುರಾಗಿದೆ ಅಪಾಯ

ಪರಾಕ್ರಮ ದಿನವನ್ನು ಆಚರಿಸುವುದು ಏಕೆ?

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ನೀಡಿದ ಕೊಡುಗೆಗಳನ್ನು ಗೌರವಿಸಲು 2021 ರಲ್ಲಿ ಅವರ ಹುಟ್ಟುಹಬ್ಬದ ದಿನವೇ ಪರಾಕ್ರಮ ದಿನ ಆಚರಿಸಲು ನಿರ್ಧರಿಸಲಾಯಿತು. ಈ ದಿನದ ಆಚರಣೆಯ ಮೂಲ ಉದ್ದೇಶವು ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಯವರಿಗೆ ರವಾನಿಸುವುದಾಗಿದೆ. ಹೀಗಾಗಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನದಂದೇ ಪರಾಕ್ರಮ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:48 am, Fri, 23 January 26

Source link

ಬೆಂಗಳೂರಿನ ಅನೇಕ ಪೊಲೀಸ್ ಠಾಣೆಗಳಲ್ಲಿ ಇನ್ಸ್​ಪೆಕ್ಟರ್​ಗಳೇ ಇಲ್ಲ! ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲು – Kannada News | No Inspectors in Several Bengaluru Police Stations: Law and Order Under Severe Strain

ಬೆಂಗಳೂರು, ಜನವರಿ 22: ರಾಜಧಾನಿ ಬೆಂಗಳೂರಿನ (Bangalore) ಹಲವಾರು ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳ ಕೊರತೆ ತೀವ್ರವಾಗಿ ಕಾಣಿಸಿಕೊಂಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರದಲ್ಲೇ 15ಕ್ಕೂ ಹೆಚ್ಚು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಹಲವು ದಿನಗಳು ಹಾಗೂ ತಿಂಗಳಿನಿಂದ ಖಾಲಿಯಾಗಿವೆ. ಅಮಾನತು, ಕಡ್ಡಾಯ ರಜೆ, ನಿವೃತ್ತಿ ಹಾಗೂ ಭಡ್ತಿ ಪ್ರಕ್ರಿಯೆಗಳ ಪರಿಣಾಮವಾಗಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಯಾವೆಲ್ಲ ಠಾಣೆಗಳಲ್ಲಿ ಇನ್ಸ್​ಪೆಕ್ಟರ್ ಹುದ್ದೆ ಖಾಲಿ?

ಶಿವಾಜಿನಗರ, ಸಂಪಿಗೇಹಳ್ಳಿ, ಯಶವಂತಪುರ, ಮಲ್ಲೇಶ್ವರ, ಜ್ಞಾನಭಾರತಿ, ಬಾಗಲೂರು, ವಿವೇಕನಗರ, ಬಂಡೆಪಾಳ್ಯ, ಸದಾಶಿವನಗರ (OOD), ಡಿಜೆ ಹಳ್ಳಿ (OOD), ಕೊತ್ತನೂರು (OOD), ಜಾಲಹಳ್ಳಿ (OOD) ಸೇರಿದಂತೆ ಹಲವು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯೇ ಉಳಿದಿವೆ.

ಇದಷ್ಟೇ ಅಲ್ಲದೆ, ಮಾಗಡಿ ರೋಡ್ ಟ್ರಾಫಿಕ್, ಮಡಿವಾಳ ಟ್ರಾಫಿಕ್ ಠಾಣೆಗಳು ಹಾಗೂ ಶೇಷಾದ್ರಿಪುರಂ ಎಸಿಪಿ, ಮಲ್ಲೇಶ್ವರ ಎಸಿಪಿ, ಕೆಜಿ ಹಳ್ಳಿ ಎಸಿಪಿ ವ್ಯಾಪ್ತಿಗಳಲ್ಲೂ ಇನ್ಸ್‌ಪೆಕ್ಟರ್ ಮತ್ತು ಎಸಿಪಿ ಹುದ್ದೆಗಳು ಖಾಲಿಯಾಗಿವೆ. ಸರ್ಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು, ಬೇರೆ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಹೆಚ್ಚುವರಿ ಹೊಣೆ ನೀಡುವುದು ಅಥವಾ OOD ಮೂಲಕ ವ್ಯವಸ್ಥೆ ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವುದೇ ಕಷ್ಟ

ಒಬ್ಬೊಬ್ಬ ಇನ್ಸ್‌ಪೆಕ್ಟರ್‌ಗಳು ಎರಡು ಠಾಣೆಗಳ ಉಸ್ತುವಾರಿ ವಹಿಸಿಕೊಂಡು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುವುದು ಕಷ್ಟಕರವಾಗಿದೆ. ಹೆಚ್ಚುವರಿ ಹೊಣೆಗಾರಿಕೆಯ ಒತ್ತಡದಿಂದ ಅನೇಕ ಇನ್ಸ್‌ಪೆಕ್ಟರ್‌ಗಳು ಹೈರಾಣಾಗಿದ್ದಾರೆ ಎನ್ನಲಾಗಿದೆ.

ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆಯೂ ಸ್ಥಗಿತ

ಇನ್ಸ್‌ಪೆಕ್ಟರ್ ಮತ್ತು ಎಸಿಪಿಗಳ ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆಯೂ ಸ್ಥಗಿತಗೊಂಡಿರುವುದು ಇಲಾಖೆಯೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲಿಗೆ ಒಂದು ವರ್ಷಕ್ಕೊಮ್ಮೆ ನಡೆಯುತ್ತಿದ್ದ ವರ್ಗಾವಣೆ ನಿಯಮವನ್ನು ಎರಡು ವರ್ಷಗಳಿಗೆ ಬದಲಾಯಿಸಲಾಗಿತ್ತು. ಆದರೆ ಇದೀಗ 2.4 ವರ್ಷ ಕಳೆದರೂ ಬೆಂಗಳೂರನ್ನು ಸೇರಿಸಿ ಹಲವು ಜಿಲ್ಲೆಗಳ ಇನ್ಸ್‌ಪೆಕ್ಟರ್ ಹಾಗೂ ಎಸಿಪಿಗಳ ಸಾಮಾನ್ಯ ವರ್ಗಾವಣೆ ಇನ್ನೂ ಜಾರಿಯಾಗಿಲ್ಲ.

ಇದನ್ನೂ ಓದಿ: 1997ರ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸ್: 29 ವರ್ಷ ಬಳಿಕ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್​​ ಸದಸ್ಯ

ಪೊಲೀಸರ ಸಾಮಾನ್ಯ ವರ್ಗಾವಣೆ ಪಟ್ಟಿ ರಿಲೀಸ್‌ಗೆ ಪದೇಪದೇ ಅಡೆತಡೆ ಉಂಟಾಗುತ್ತಿದ್ದು, ಕೆಲ ರಾಜಕೀಯ ನಾಯಕರ ಮುಸುಕಿನ ಗುದ್ದಾಟ ಹಾಗೂ ತಮ್ಮ ತಮ್ಮ ‘ನೆಚ್ಚಿನ’ ಅಧಿಕಾರಿಗಳ ವರ್ಗಾವಣೆಯನ್ನು ತಡೆಯುವ ಪ್ರಯತ್ನಗಳಿಂದಾಗಿ ಪ್ರಕ್ರಿಯೆ ಮುಂದೂಡಲ್ಪಡುತ್ತಿದೆ ಎನ್ನಲಾಗಿದೆ. ಇದರಿಂದಾಗಿ ನಿಗದಿತ ಅವಧಿ ಕಳೆದರೂ ವರ್ಗಾವಣೆ ಆಗದೆ, ಪೊಲೀಸ್ ಇಲಾಖೆಯೊಳಗೆ ಅಸಮಾಧಾನದ ಹೊಗೆ ಕಾಡುತ್ತಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ! – Kannada News | Bengaluru Ranks 2nd Among World’s Most Traffic Congested Cities: TomTom Traffic Index 2025

ಬೆಂಗಳೂರು, ಜನವರಿ 23: ವಿಶ್ವದ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು (Bangalore Traffic) ಎರಡನೇ ಸ್ಥಾನ ಪಡೆದಿದೆ. ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ (Traffic Index) ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ವರದಿ ಪ್ರಕಾರ, 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಾಗಿದೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆ ಹೆಚ್ಚಳಕ್ಕೆ ಕಾರಣವೇನು?

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ, ರಸ್ತೆ ಮೂಲಸೌಕರ್ಯದ ಒತ್ತಡ ಹಾಗೂ ನಿರಂತರ ಕಾಮಗಾರಿಗಳು ಸಂಚಾರ ಸಮಸ್ಯೆ ಮತ್ತಷ್ಟು ತೀವ್ರಗೊಳಿಸುತ್ತಿವೆ ಎನ್ನಲಾಗಿದೆ.

ವಾಹನ ಸಂಚಾರದ ಸರಾಸರಿ ವೇಗದಲ್ಲೂ ಸ್ವಲ್ಪ ಬದಲಾವಣೆ ಕಂಡುಬಂದಿದೆ. 2024ರಲ್ಲಿ ಗಂಟೆಗೆ 16.6 ಕಿಲೋಮೀಟರ್ ಇದ್ದ ಸರಾಸರಿ ವೇಗ, 2025ರಲ್ಲಿ 17.6 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಆದರೂ ಸಂಚಾರದ ಒತ್ತಡ ಕಡಿಮೆಯಾಗಿಲ್ಲ. 2025ರಲ್ಲಿ 15 ನಿಮಿಷಗಳಲ್ಲಿ ಸರಾಸರಿ 4.4 ಕಿಲೋಮೀಟರ್ ಸಂಚರಿಸಬಹುದಾಗಿದ್ದು, 2024ರಲ್ಲಿ ಇದು 4.2 ಕಿಲೋಮೀಟರ್ ಆಗಿತ್ತು.

10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ!

ಬೆಂಗಳೂರು ನಗರದಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತಿದೆ ಎಂದು ವರದಿ ತಿಳಿಸಿದೆ. ಇದು ದಿನನಿತ್ಯದ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಂಚಾರ ದಟ್ಟಣೆ ಪಟ್ಟಿಯಲ್ಲಿ ದುಬೈ ಮೂರನೇ ಸ್ಥಾನದಲ್ಲಿದ್ದು, ಪೊಲ್ಯಾಂಡ್‌ನ ಲೊಡ್ಜ್ ನಗರ ನಾಲ್ಕನೇ ಸ್ಥಾನ ಪಡೆದಿದೆ. ಭಾರತದ ಪುಣೆ ನಗರ ಐದನೇ ಸ್ಥಾನದಲ್ಲಿದ್ದರೆ, ಮುಂಬೈ 18ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು

ಬೆಂಗಳೂರು ವಿಶ್ವದ ಪ್ರಮುಖ ಐಟಿ ನಗರವಾಗಿರುವುದರ ಜೊತೆಗೆ, ಸಂಚಾರ ದಟ್ಟಣೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನಗರಾಭಿವೃದ್ಧಿ ಹಾಗೂ ಸಂಚಾರ ನಿರ್ವಹಣೆಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link