Category Archives: Blog

Your blog category

Video: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ – Kannada News | Uttar Pradesh: The first vlog of a 70 year old man from Uttar Pradesh has received over 22 million views

ವಿನೋದ್ ಕುಮಾರ್ ಶರ್ಮಾImage Credit source: Instagram

ಸೋಶಿಯಲ್ ಮೀಡಿಯಾವೇ (social media) ಹಾಗೆ, ಜನಸಾಮಾನ್ಯರನ್ನು ಫೇಮಸ್ ಮಾಡಿ ಬಿಡುತ್ತದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಆದವರ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಉತ್ತರ ಪ್ರದೇಶದ (Uttar Pradesh) 70 ವರ್ಷದ ವೃದ್ಧರೊಬ್ಬರು ಮೊದಲ ಬಾರಿಗೆ ವ್ಲಾಗ್ ಮಾಡಿದ್ದು, ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ನೆಟ್ಟಿಗರ ಹೃದಯ ಗೆದ್ದು ಕೊಂಡಿದ್ದಾರೆ. ಇವರು ಅಪ್ಲೋಡ್ ಮಾಡಿದ ಮೊದಲ ವಿಡಿಯೋ 30 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ವಿನೋದ್ ಕುಮಾರ್ ಶರ್ಮಾ (Vinod Kumar Sharma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮೊದಲ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಹಳ ವಿನ್ರಮವಾಗಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ. ನಾನು ಉತ್ತರ ಪ್ರದೇಶದವನು. ನನಗೆ ವ್ಲಾಗ್ ಮಾಡುವುದು ಹೇಗೆಂದು ಗೊತ್ತಿಲ್ಲ, ಆದರೆ ನಾನು ವೀಡಿಯೊಗಳನ್ನು ಮಾಡುವ ಮೂಲಕ ನನ್ನ ಸಮಯವನ್ನು ಅರ್ಥ ಪೂರ್ಣವಾಗಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಈ ವ್ಲಾಗ್ ಅನ್ನು ಇಷ್ಟಪಡುತ್ತೇನೆ ಆದ್ದರಿಂದ ನಾನು ಈ ಕೆಲಸವನ್ನು ಮುಂದುವರಿಸಲು ನೀವು ಪ್ರೋತ್ಸಾಹಿಸುತ್ತೀರಿ ನಾನು ಭಾವಿಸುತ್ತೇನೆ ಎಂದು ಹೇಳುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ

ಜನವರಿ 19 ರಂದು ಹಂಚಿ ಕೊಂಡ ಈ ವಿಡಿಯೋ 30 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದೇ ರೀತಿ ಮುಂದುವರಿಸಿ, ದಾದಾ ಜಿ.ಕಲಿಯಲು ಯಾವುದೇ ವಯಸ್ಸಿಲ್ಲ. ಈ ಮಾತನ್ನು ನೀವು ಚೆನ್ನಾಗಿ ಸಾಬೀತುಪಡಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ನಮ್ಮ ಹೃದಯವನ್ನು ಗೆದ್ದಿದ್ದೀರಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಸರಳತೆ ನಿಮ್ಮ ವಿಶಿಷ್ಟ ಲಕ್ಷಣ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:19 pm, Thu, 22 January 26

Source link

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಕೊಟ್ಟ ಹೈಕೋರ್ಟ್​​ – Kannada News | High Court Rejects Rajeev Gowda’s Plea to Quash FIR in Shidlaghatta Commissioner Case

ರಾಜೀವ್​​ ಗೌಡ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು, ಜನವರಿ 22: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ಎಫ್​​ಐಆರ್​ ರದ್ದು ಕೋರಿ ಕಾಂಗ್ರೆಸ್​​ ಮುಖಂಡ ರಾಜೀವ್​ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​​ ವಜಾಗೊಳಿಸಿದೆ. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಬಗ್ಗೆ ಮಹತ್ವದ ಆದೇಶ ನೀಡಿದ್ದು, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್​​ ಮುಖಂಡನ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದ್ದರು.

ತರಾಟೆಗೆ ಪಡೆದಿದ್ದ ಕೋರ್ಟ್​​

ಫೋನ್ ಮೂಲಕ ಆಡಿದ ಮಾತಿಗೆ ಮಾಧ್ಯಮದಲ್ಲೇ ರಾಜೀವ್​​ ಗೌಡ ಕ್ಷಮೆ ಕೇಳಿದ್ದಾರೆ. ಬಿಎನ್‌ಎಸ್‌ ಸೆಕ್ಷನ್ 132 ಈ ಕೇಸಿನಲ್ಲಿ ಅನ್ವಯಿಸುವುದಿಲ್ಲ. ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ. ತನಿಖೆಗೆ ಸಹಕರಿಸಲು ಸಿದ್ಧರಿರುವ ಕಾರಣ ರಕ್ಷಣೆಗೆ ಮನವಿ ಮಾಡಲಾಗಿದೆ ಎಂದು ವಕೀಲರು ವಾದಿಸಿದ್ದರು. ಆದ್ರೆ ಈ ವೇಳೆ ಗರಂ ಆಗಿದ್ದ ನ್ಯಾಯಾಲಯ, ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ ಎಂದು ಪ್ರಶ್ನೆ ಮಾಡಿತ್ತು. ಅಲ್ಲದೆ, ಒಮ್ಮೆ ಮಾತನಾಡಿದರೆ ವಾಪಸ್ ಪಡೆಯಲು ಆಗುವುದಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು. ನೀವು ಕ್ಷಮೆ ಕೇಳಿದರೂ ಒಡೆದಿರುವುದು ಒಂದಾಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಅರ್ಜಿ ವಿಚಾರಣೆ ಸಂಬಂಧ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.

ಇದನ್ನೂ ಓದಿ: ರಾಜೀವ್​​ ಗೌಡ ಪರ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪತ್ರ; ಆ್ಯಸಿಡ್​​ ಎರಚುವುದಾಗಿ ಎಚ್ಚರಿಕೆ

ನಿರೀಕ್ಷಣಾ ಜಾಮೀನು ಅರ್ಜಿಗೆ ತಕಾರರು ಸಲ್ಲಿಕೆ

ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿಗೆ ಸರ್ಕಾರಿ ಅಭಿಯೋಜಕರು ತಕರಾರು ಸಲ್ಲಿಕೆ ಮಾಡಿದ್ದಾರೆ. ಕಳೆದ ಶನಿವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್‌, ವಿಚಾರಣೆಯನ್ನ ಇಂದಿಗೆ ಮುಂದೂಡಿತ್ತು. ಇಂದು ತಕರಾರು ಸಲ್ಲಿಕೆ ಹಿನ್ನೆಲೆ ರಾಜೀವ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿ ಭವಿಷ್ಯ ಸಂಜೆ ನಿರ್ಧಾರ ಆಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡು ಚುನಾವಣೆ 2026: ದಳಪತಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ‘ವಿಷಲ್’ ಚಿಹ್ನೆ ಕೊಟ್ಟ ಚುನಾವಣಾ ಆಯೋಗ – Kannada News | Whistle in Hand: Vijay’s TVK Secures Party Symbol Ahead of 2026 Tamil Nadu Elections

ನವದೆಹಲಿ, ಜನವರಿ 22: ಚುನಾವಣಾ ಆಯೋಗವು ಗುರುವಾರ ನಟ ದಳಪತಿ ವಿಜಯ್(Thalapathy Vijay) ಅವರ ತಮಿಳಗ ವೆಟ್ರಿ ಕಳಗಂಗೆ ‘ವಿಷಲ್’ ಚಿಹ್ನೆಯನ್ನು ನೀಡಿದೆ. ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಚಿಹ್ನೆಯಾಗಿ ಇದನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಯನ್ನು ಆಧರಿಸಿದ ಪ್ರಣಾಳಿಕೆಯನ್ನು ರೂಪಿಸಲು ಟಿವಿಕೆ ಮಂಗಳವಾರ ಚೆನ್ನೈನಲ್ಲಿ ತನ್ನ ಮೊದಲ ಚುನಾವಣಾ ಪ್ರಚಾರ ಸಮಿತಿ ಸಭೆಯನ್ನು ಕರೆದ ಕೇವಲ ಎರಡು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಜನವರಿ 16 ರಂದು, ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ಪಕ್ಷದ ಚುನಾವಣಾ ಪ್ರಚಾರ ಚಟುವಟಿಕೆಗಳನ್ನು ಸಂಘಟಿಸಲು ವಿಜಯ್ 12 ಸದಸ್ಯರ ಸಮಿತಿಯನ್ನು ರಚಿಸಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಸಾಮಾಜಿಕ ನ್ಯಾಯದ ಆಧಾರಸ್ತಂಭದ ಮೇಲೆ ನಿರ್ಮಿಸಲಾಗುವುದು ಮತ್ತು ಮಾರ್ಗಸೂಚಿಯು ಸಮಗ್ರ ಬೆಳವಣಿಗೆ ಮತ್ತು ಎಲ್ಲಾ ಕ್ಷೇತ್ರಗಳಿಗೆ ದೃಷ್ಟಿಕೋನದ ಮೂಲಕ ತಮಿಳುನಾಡಿನ ಪರಿವರ್ತನೆಯ ಮೇಲೆ ಕೇಂದ್ರೀಕರಿಸುತ್ತದೆ.

ತಮಿಳು ಸೂಪರ್‌ಸ್ಟಾರ್ ವಿಜಯ್ ದಳಪತಿ ಅವರು ಪ್ರಾರಂಭಿಸಿರುವ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (TVK) ಚುನಾವಣಾ ಆಯೋಗದ ಅಧಿಕೃತ ಮಾನ್ಯತೆ 2024ರಲ್ಲಿ ಸಿಕ್ಕಿತ್ತು.
ತಮ್ಮ ಸಿನಿಮಾಗಳಿಂದ ತಮಿಳುನಾಡು, ಕರ್ನಾಟಕ ಸೇರಿದಂತೆ ಅನೇಕ ಭಾಗಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ದಳಪತಿ ವಿಜಯ್ ಅವರು ಅದೇ ಫೆಬ್ರವರಿಯಲ್ಲಿ ರಾಜಕೀಯ ಪಕ್ಷ ಸ್ಥಾಪನೆಯನ್ನು ಪ್ರಕಟಿಸಿದ್ದರು.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಗೆ ನಟ ವಿಜಯ್ ಸಿಎಂ ಅಭ್ಯರ್ಥಿ; ಟಿವಿಕೆ ಅಧಿಕೃತ ಘೋಷಣೆ

ತಮ್ಮ ರಾಜಕೀಯ ಸಂಘಟನೆಯು ಸಾಮಾಜಿಕ ನ್ಯಾಯದ ಹಾದಿಯನ್ನು ಅನುಸರಿಸಲಿದೆ ಎಂದು ಹೇಳಿದ್ದರು. ಹಾಗೆಯೇ ತಮ್ಮ ಟಿವಿಕೆ ಪಕ್ಷವು ಪಾರದರ್ಶಕ, ಜಾತಿ ಮುಕ್ತ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಮೂಲಭೂತ ರಾಜಕೀಯ ಬದಲಾವಣೆಗಾಗಿ ಹೋರಾಡಲಿದೆ ಎಂದು ಭರವಸೆ ನೀಡಿದ್ದರು.

ತಮಿಳುನಾಡಿನ ಪಿಎಂಕೆಯಿಂದ ವಿಭಜನೆಯಾಗಿ ಪನ್ರುತಿ ಶಾಸಕ ಟಿ ವೇಲುಮುರುಗನ್ ಅವರು ಸ್ಥಾಪಿಸಿರುವ ತಮಿಳಿಗ ವಳುರಿಮೈ ಕಚ್ಚಿ (ಟಿವಿಕೆ) ಪಕ್ಷವು ‘ಟಿವಿಕೆ’ ಸಂಕ್ಷಿಪ್ತ ಹೆಸರು ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ವೇಲುಮುರುಗನ್ ಅವರ ಆಕ್ಷೇಪದ ನಡುವೆಯೂ, ಅದೇ ರೀತಿಯ ಸಂಕ್ಷಿಪ್ತ ಹೆಸರು ಇರುವ ವಿಜಯ್ ಅವರ ಹೊಸ ರಾಜಕೀಯ ಪಕ್ಷ ನೋಂದಣಿಗೆ ಕೇಂದ್ರ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿತ್ತು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಗುಲಾಮಿ ಮೈತ್ರಿಕೂಟಕ್ಕೆ ಸೇರುವ ಅಗತ್ಯವಿಲ್ಲ. ನಮ್ಮ ಮೈತ್ರಿಕೂಟ ಸ್ವಾರ್ಥದ ಮೈತ್ರಿಕೂಟವಾಗಿರುವುದಿಲ್ಲ. ಇದು ಸ್ವಾಭಿಮಾನ ಆಧಾರಿತ ಮೈತ್ರಿಕೂಟವಾಗಿರುತ್ತದೆ ಎಂದು ವಿಜಯ್ ಘೋಷಿಸಿದ್ದಾರೆ. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸೈದ್ಧಾಂತಿಕ ಶತ್ರು ಮತ್ತು ಡಿಎಂಕೆಯನ್ನು ಏಕೈಕ ರಾಜಕೀಯ ಶತ್ರು ಎಂದು ವಿಜಯ್ ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:08 pm, Thu, 22 January 26

Source link

ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’ – Kannada News | Dhurandhar OTT Release: Ranveer Singh Blockbuster Arrives on Netflix Jan 30

‘ಧುರಂಧರ್’ ಸಿನಿಮಾ (Dhurandhar) ಬಾಕ್ಸ್​ ಆಫೀಸ್​​​ನಲ್ಲಿ ಮೇಲುಗೈ ಸಾಧಿಸುತ್ತಿದೆ. ರಿಲೀಸ್ ಆಗಿ ಒಂದೂವರೆ ತಿಂಗಳು ಕಳೆದರೂ ಸಿನಿಮಾ ಇನ್ನೂ ಕೋಟಿಗಳಲ್ಲಿ ಕಲೆಕ್ಷನ್ ಮಾಡುತ್ತಿದೆ. ನಿರಂತರ ನಾಗಾಲೋಟದ ನಂತರ ‘ಧುರಂದರ್’ ಸಿನಿಮಾ ಒಟಿಟಿಗೆ ಬರಲು ರೆಡಿ ಆಗಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದರ ದಿನಾಂಕ ಕೂಡ ರಿವೀಲ್ ಆಗಿದೆ.

ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮೊದಲಾದವರು ನಟಿಸಿದ ‘ಧುರಂಧರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 5ರಂದು ಥಿಯೇಟರ್​​​ನಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್​​​ಗೂ ಮೊದಲು ಚಿತ್ರದ ಬಗ್ಗೆ ಸಾಕಷ್ಟು ನೆಗೆಟಿವಿಟಿ ಹರಡಿತ್ತು. ಆದರೆ, ಎಲ್ಲವನ್ನೂ ಚಿತ್ರ ಮೆಟ್ಟಿ ನಿಂತಿದೆ. ಈ ಸಿನಿಮಾ ಯಾವಾಗ ಒಟಿಟಿಗೆ ಬರುತ್ತದೆ ಎಂದು ಕೆಲವರು ಕಾದು ಕುಳಿತಿದ್ದಾರೆ. ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ.

‘ಧುರಂಧರ್’ ಸಿನಿಮಾ ಜನವರಿ 30ರಂದು ನೆಟ್​​ಫ್ಲಿಕ್ಸ್ ಮೂಲಕ ಪ್ರಸಾರ ಆಂಭಿಸಲಿದೆ. ಈ ಮೊದಲಿನ ಯೋಜನೆ ಪ್ರಕಾರ 30 ದಿನಕ್ಕೆ ಚಿತ್ರವನ್ನು ಒಟಿಟಿಗೆ ತರೋ ಆಲೋಚನೆ ಇತ್ತು. ಆದರೆ, ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಆಗಿದ್ದರಿಂದ ಸಿನಿಮಾ ಒಟಿಟಿ ರಿಲೀಸ್ ದಿನಾಂಕವನ್ನು 25 ದಿನ ಮತ್ತೆ ಮುಂದಕ್ಕೆ ಹಾಕಲಾಯಿತು. ಈಗ ಅಂತಿಮವಾಗಿ ಡಿಸೆಂಬರ್ 30ರಂದು ಸಿನಿಮಾ ಒಟಿಟಿಗೆ ಬರಲಿದೆ.

ಇದನ್ನೂ ಓದಿ: ‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

ಮಾರ್ಚ್ 19ರಂದು ‘ಧುರಂಧರ್ 2’ ಥಿಯೇಟರ್​​ ಅಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಮೊದಲ ಭಾಗವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲೇಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ. ಅಲ್ಲದೆ, ಮೊದಲ ಭಾಗವನ್ನು ಥಿಯೇಟರ್​​​ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಿ ಇಷ್ಟಪಟ್ಟರೆ, ಸೀಕ್ವೆಲ್​​​ಗೆ ಸಹಕಾರಿ ಆಗಲಿದೆ. ‘ಧುರಂಧರ್’ ಚಿತ್ರವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್​ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಸ್ಪೈ ಆಗಿ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಮಾತ್ರ ರಿಲೀಸ್ ಆದರೂ ಚಿತ್ರ ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದಿಂದಲೇ ಶ್ರದ್ಧಾಂಜಲಿ ಸಲ್ಲಿಸಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ಪೊಲೀಸರು – Kannada News | Mysuru Traffic Police Honour 2025 Road Accident Victims in Moving Awareness Drive

ಮೈಸೂರು, ಜ.22: ಸಂಚಾರ ಪೊಲೀಸರು ರಸ್ತೆ ಸುರಕ್ಷತೆಯ (Mysuru Traffic Police) ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರಸ್ತೆ ಅಪಘಾತಗಳಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಚಾರ ನಿಯಮಗಳನ್ನು ಪಾಲಿಸುವ ಅಗತ್ಯವನ್ನು ಜನರಿಗೆ ಮನಮುಟ್ಟಿಸುವ ಗುರಿಯನ್ನು ಈ ಜಾಗೃತಿ ಅಭಿಯಾನ ಹೊಂದಿತ್ತು. ಈ ವಿಶಿಷ್ಟ ಕಾರ್ಯಕ್ರಮವು ಮೈಸೂರಿನ ಪುರಭವನದಲ್ಲಿ ನಡೆಯಿತು. 2025ರಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಭಾವಚಿತ್ರಗಳಲ್ಲಿ ಮಧ್ಯವಯಸ್ಕರು, ಯುವಕರು, ವಯಸ್ಸಾದವರು, ಮಹಿಳೆಯರು ಮತ್ತು ಪುರುಷರು ಸೇರಿದ್ದರು. ಅವರಲ್ಲಿ ಹೆಚ್ಚಿನವರು ಸಂಚಾರ ನಿಯಮಗಳನ್ನು ಪಾಲಿಸದ ಕಾರಣ, ವಿಶೇಷವಾಗಿ ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರ ಪೆಟ್ಟಾಗಿ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.

ಈ ಘಟನೆಗಳ ಗಂಭೀರತೆಯನ್ನು ಜನರಿಗೆ ಮನವರಿಕೆ ಮಾಡಲು, ಮೈಸೂರು ನಗರ ಸಂಚಾರ ಪೊಲೀಸರು ಮೃತಪಟ್ಟವರ ಕುಟುಂಬ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅವರ ಸಮ್ಮುಖದಲ್ಲಿ, ಪ್ರದರ್ಶಿಸಲಾದ ಭಾವಚಿತ್ರಗಳ ಮುಂದೆ ಮೇಣದ ಬತ್ತಿಗಳನ್ನು ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಭಾವನಾತ್ಮಕ ಕ್ಷಣವು, ಸಂಚಾರ ನಿಯಮಗಳ ಉಲ್ಲಂಘನೆಯ ಪರಿಣಾಮಗಳನ್ನು ಜನರಿಗೆ ನೇರವಾಗಿ ತಲುಪಿಸುವ ಪ್ರಯತ್ನವಾಗಿತ್ತು. ಶ್ರದ್ಧಾಂಜಲಿ ಮೆರವಣಿಗೆಯು ಮೈಸೂರು ಅರಮನೆ ಕೋಟೆ ಆಂಜನೇಯ ದೇಗುಲದ ಬಳಿಯಿಂದ ಆರಂಭಗೊಂಡು, ಮೇಣದ ಬತ್ತಿಗಳನ್ನು ಹಿಡಿದು ಸಾಗಿ, ಕುಟುಂಬದವರ ಭಾಗವಹಿಸುವಿಕೆಯೊಂದಿಗೆ ಸಂಪನ್ನಗೊಂಡಿತು.

ವಿಡಿಯೋ ಇಲ್ಲಿದೆ ನೋಡಿ

ಸಂಚಾರ ನಿಯಮಗಳನ್ನು ಪಾಲಿಸುವುದು ಕೇವಲ ದಂಡದಿಂದ ಪಾರಾಗುವುದಕ್ಕೆ ಮಾತ್ರವಲ್ಲ, ಅದು ತಮ್ಮ ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಲು ಮತ್ತು ತಮ್ಮನ್ನು ನಂಬಿದ ಕುಟುಂಬದವರ ನೆಮ್ಮದಿಗಾಗಿ ಎಂಬ ಸಂದೇಶವನ್ನು ಪೊಲೀಸರು ಸ್ಪಷ್ಟವಾಗಿ ನೀಡಿದರು. ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಯಾವುದೇ ರೀತಿಯ ಅಪಘಾತಗಳನ್ನು ತಪ್ಪಿಸಬಹುದು ಎಂದು ಜನರಿಗೆ ತಿಳಿಸಲಾಯಿತು. ಅಮೂಲ್ಯ ಪ್ರಾಣ ರಕ್ಷಣೆ ಮುಖ್ಯವೇ ಹೊರತು, ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳುವುದು ಅಲ್ಲ ಎಂದು ಪೊಲೀಸರು ಜನರಿಗೆ ಮನವರಿಕೆ ಮಾಡಿದರು.

ಇದನ್ನೂ ಓದಿ: ಉರುಸ್ ಮೆರವಣಿಗೆ ವೇಳೆ ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರ ಮೇಲೆ ಹಲ್ಲೆ

ಈ ಜಾಗೃತಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. 2025ರಲ್ಲಿ ಸಂಭವಿಸಿದ ಕಹಿ ಘಟನೆಗಳು ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗಬಾರದು ಎಂಬುದು ಪೊಲೀಸರ ಆಶಯ. 2026ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಮತ್ತು ಸಾವುನೋವುಗಳು ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೈಸೂರು ನಗರ ಸಂಚಾರ ಪೊಲೀಸರ ಈ ಆಶಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವೋಸ್​​ನಲ್ಲೂ ಕರ್ನಾಟಕ ರಾಜಕಾರಣದ್ದೇ ಚರ್ಚೆ: ಸಿಎಂ ಕುರ್ಚಿ ಫೈಟ್​​ನದ್ದೇ​​ ಸದ್ದು – Kannada News | Karnataka CM Tussle: D.K. Shivakumar Expresses Confidence on Power Sharing at Davos

ದಾವೋಸ್​​ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​

ಬೆಂಗಳೂರು, ಜನವರಿ 22: ಸಿಎಂ ಕುರ್ಚಿ ವಿಚಾರವಾಗಿ ರಾಜ್ಯದಲ್ಲಿ ಪೈಪೋಟಿ ಮುಂದುವರಿದಿದ್ದು, ವಿಷಯವೀಗ ಹೈಕಮಾಂಡ್​ ಅಂಗಳದಲ್ಲಿದೆ. ಈ ನಡುವೆ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಡ್ ಎಕನಾಮಿಕ್ ಫೋರಂನಲ್ಲಿ ಭಾಗಿಯಾಗಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​, ತಮ್ಮ ನಾಯಕರು ತಮಗೆ ನಿರಾಸೆ ಮಾಡಲಾರರು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಆ ಮೂಲಕ ದಾವೋಸ್​​ನಲ್ಲಿಯೂ ಕರ್ನಾಟಕದಲ್ಲಿನ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾದಂತಾಗಿದೆ.

‘ಮಾಧ್ಯಮಗಳಲ್ಲಿ ಚರ್ಚಿಸಬೇಕಾದ ವಿಷಯ ಅಲ್ಲ’

ಹೌದು, ಎನ್​​ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಡಿಸಿಎಂ ಡಿಕೆಶಿ, ಎಲ್ಲ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ಮಾಧ್ಯಮಗಳಲ್ಲಿ ಚರ್ಚಿಸಬೇಕಾದ ವಿಷಯ ಅಲ್ಲ, ಇದು ನಮ್ಮಲ್ಲಿಯೇ ಆಗಬೇಕಾದ ಚರ್ಚೆ. ನಾನು ಸದಾ ಧನಾತ್ಮಕವಾಗಿದ್ದು, ಆಸೆಯ ಮೇಲೆಯೇ ಬದುಕುತ್ತೇನೆ. ಶ್ರಮಕ್ಕೆ ಯಾವಾಗಲೂ ಫಲ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ನಾಯಕರು ಖಂಡಿತವಾಗಿಯೂ ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂಬ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ, ರಾಹುಲ್​ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಣದಲ್ಲಿ ಹೆಚ್ಚಾಯ್ತು ಉತ್ಸಾಹ!

‘140 ಶಾಸಕರ ಬೆಂಬಲ ತನಗಿದೆ’

ಡಿಕೆಶಿ ಅವರು ಸಿಎಂ ಆಗಲು ಶಾಸಕರ ಬೆಂಬಲ ಇಲ್ಲವಂತಲ್ಲ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಹಾಗೆ ಹೇಳಿದ್ದು ಯಾರು? ಕೆಪಿಸಿಸಿ ಅಧ್ಯಕ್ಷನಾದ ತನಗೆ ಪಕ್ಷದ 140 ಶಾಸಕರ ಬೆಂಬಲವೂ ಇದೆ. ಹೀಗಾಗಿ ಸಂಖ್ಯೆಗಳ ಬಗ್ಗೆ ತೀರ್ಮಾನ ಬೇಕಿಲ್ಲ. ನಾವು ತಂಡವಾಗಿ ಕೆಲಸ ಮಾಡುತ್ತಿದ್ದು ಸಿದ್ದರಾಮಯ್ಯ ಮತ್ತು ತನಗೆ ಇಬ್ಬರಿಗೂ ಎಲ್ಲ ಶಾಸಕರ ಬೆಂಬಲ ಇದೆ. ನಾವು ಇಬ್ಬರೂ ಕೂತು ಚರ್ಚಿಸಿದ್ದು, ಎಲ್ಲವನ್ನೂ ಪಕ್ಷದ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಸಿದ್ದರಾಮಯ್ಯ ಮತ್ತು ತಾನು ಇಬ್ಬರೂ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ರಾಜಸ್ಥಾನದಿಂದ ಹೊರಬಂದ ರಾಜಸ್ಥಾನ್ ರಾಯಲ್ಸ್

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹೊಸ ಹೋಮ್ ಗ್ರೌಂಡ್​ನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಈ ಹಿಂದೆ ಆಡುತ್ತಿದ್ದ ಜೈಪುರದ ಸವಾಯಿ ಮಾನ್ ​ಸಿಂಗ್ ಸ್ಟೇಡಿಯಂ ಈ ಬಾರಿ ಆರ್​ಆರ್ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಪದೇ ಪದೇ ಎಚ್ಚರಿಕೆ ನೀಡಿದ್ದರೂ ರಾಜಸ್ಥಾನ ಕ್ರಿಕೆಟ್ ಸಂಘವು ಇನ್ನೂ ಸಹ ಚುನಾವಣೆಯನ್ನು ನಡೆಸಿಲ್ಲ. ಹೀಗಾಗಿ ಜೈಪುರದ ಸವಾಯಿ ಮಾನ್​ ಸಿಂಗ್​ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸದಿರಲು ಬಿಸಿಸಿಐ ನಿರ್ಧರಿಸಿದೆ.

ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬದಲಿ ಹೋಮ್ ಗ್ರೌಂಡ್ ಅನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಮುಂದಿನ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಎರಡು ಮೈದಾನಗಳಲ್ಲಿ ಕಣಕ್ಕಿಳಿಯಲಿದೆ. ಅದು ಸಹ ಅಸ್ಸಾಂ ಹಾಗೂ ಮಹಾರಾಷ್ಟ್ರದಲ್ಲಿ ಎಂಬುದು ವಿಶೇಷ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧೀನದಲ್ಲಿರುವ ಪುಣೆಯ ಎಂಸಿಎ ಸ್ಟೇಡಿಯಂ ಅನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಈ ಮೈದಾನದಲ್ಲಿ ಆರ್​ಆರ್ ನಾಲ್ಕರಿಂದ ಐದು ಪಂದ್ಯಗಳನ್ನಾಡಲಿದೆ ಎಂದು ವರದಿಯಾಗಿದೆ.

ಇನ್ನುಳಿದ ಹೋಮ್ ಗ್ರೌಂಡ್ ಮ್ಯಾಚ್​ಗಳನ್ನು ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಆಡಲಿದೆ. ಕಳೆದ ಕೆಲ ವರ್ಷಗಳಿಂದ ಬರ್ಸಾಪರ ಸ್ಟೇಡಿಯಂ ಅನ್ನು ರಾಜಸ್ಥಾನ್ ರಾಯಲ್ಸ್ ತನ್ನ ದ್ವಿತೀಯ ಹೋಮ್ ಗ್ರೌಂಡ್ ಆಗಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ಪ್ರತಿ ಸೀಸನ್​ನಲ್ಲೂ ಇಲ್ಲಿ 2 ಮ್ಯಾಚ್​ಗಳನ್ನಾಡುತ್ತಿದ್ದು, ಈ ಬಾರಿ ಕೂಡ ಅದು ಮುಂದುವರೆಯಲಿದೆ.

ಅಂದರೆ ತವರು ಮೈದಾನದಲ್ಲಿ ನಡೆಯಲಿರುವ 7 ಪಂದ್ಯಗಳನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 5+2 ರೀತಿಯಲ್ಲಿ ವಿಂಗಡಿಸುವ ಸಾಧ್ಯತೆಯಿದೆ. ಅದರಂತೆ 5 ಮ್ಯಾಚ್​ಗಳನ್ನು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಆಡಿದರೆ, ಇನ್ನುಳಿದ ಎರಡು ಪಂದ್ಯಗಳಿಗಾಗಿ ಗುವಾಹಟಿಗೆ ತೆರಳುವ ಸಾಧ್ಯತೆ ಹೆಚ್ಚಿದೆ.

ಆರ್​ಆರ್​ ಪಡೆಗೆ ಹೊಸ ನಾಯಕ

ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ. ಕಳೆದ ಸೀಸನ್​ನಲ್ಲಿ ಆರ್​ಆರ್ ತಂಡದ ಕ್ಯಾಪ್ಟನ್ ಆಗಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಹೀಗಾಗಿ ಆರ್​ಆರ್​ ಫ್ರಾಂಚೈಸಿಯು ಈ ಬಾರಿ ಹೊಸ ಕ್ಯಾಪ್ಟನ್​ನನ್ನು ಪರಿಚಯಿಸಲಿದೆ.

ಇದನ್ನೂ ಓದಿ: IPL 2026: ಇದೇ ಕಾರಣಕ್ಕೆ RCB ಬೆಂಗಳೂರಿನಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದೆ!

ರಾಜಸ್ಥಾನ್ ರಾಯಲ್ಸ್ ತಂಡ: ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ರಿಯಾನ್ ಪರಾಗ್, ಯಧುವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್​ರೆ ಬರ್ಗರ್,  ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರು, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್, ಕುಲ್ದೀಪ್ ಸೇನ್.

 

 

Source link

Ketu Transit 2026: ಜನವರಿ 25 ರಂದು ಕೇತು ಸಂಚಾರ; ಈ ಮೂರು ರಾಶಿಗೆ ಅದೃಷ್ಟವೋ ಅದೃಷ್ಟ – Kannada News | Ketu Transit 2026: Astrological Impact on Zodiac Signs Know Your Fortune

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಂಬತ್ತು ಗ್ರಹಗಳಲ್ಲಿ ಕೇತು ಅತ್ಯಂತ ನಿಗೂಢ ಗ್ರಹವೆಂದು ಪರಿಗಣಿಸಲಾಗುತ್ತದೆ. ಕೇತು ಮೋಕ್ಷ, ವೈರಾಗ್ಯ, ಆಂತರಿಕ ಬದಲಾವಣೆಗಳನ್ನು ಸೂಚಿಸುತ್ತದೆ. 12 ರಾಶಿಗಳ ಮೇಲೆ ಕೇತುವಿನ ಸಂಚಾರವು ಗಾಢ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕೇತು ಸುಮಾರು 18 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.

2026 ರಲ್ಲಿ ಕೇತು ಹೆಚ್ಚಿನ ಸಮಯ ಸಿಂಹ ರಾಶಿಯಲ್ಲಿ ಸಂಚರಿಸುತ್ತದೆ. ಆದರೆ ವರ್ಷದ ಅಂತ್ಯದಲ್ಲಿ, ಡಿಸೆಂಬರ್ 5ರಂದು, ಸಿಂಹ ರಾಶಿಯನ್ನು ಬಿಟ್ಟು ಚಂದ್ರನ ರಾಶಿಯಾದ ಕರ್ಕ ರಾಶಿಗೆ ಪ್ರವೇಶಿಸುತ್ತದೆ. ಇದಕ್ಕೂ ಮುನ್ನ, ಜನವರಿ 25ರಂದು ಕೇತು ಪುನರ್ವಸು ನಕ್ಷತ್ರದ 2ನೇ ಹಂತದಿಂದ 1ನೇ ಹಂತಕ್ಕೆ ಸಾಗುತ್ತದೆ. ಕೇತು ಮಾರ್ಚ್ 29ರವರೆಗೆ ಈ ನಕ್ಷತ್ರದಲ್ಲಿಯೇ ಇರುತ್ತಾನೆ. ನಂತರ ರಾಶಿ ಮತ್ತು ನಕ್ಷತ್ರ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳಲಿವೆ.

ಕೇತುವಿನ ಈ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.  ಇನ್ನೂ ಕೆಲವು ರಾಶಿಗಳಿಗೆ ಎಚ್ಚರಿಕೆಯ ಸಮಯವಾಗಲಿದೆ. ಈಗ ಯಾವ ರಾಶಿಗಳಿಗೆ ಶುಭ ಫಲ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ರಾಶಿಯವರು ಅದೃಷ್ಟವಂತರು:

ವೃಷಭ ರಾಶಿ:

ಕೇತುವಿನ ಸಂಚಾರವು ವೃಷಭ ರಾಶಿಯವರಿಗೆ ಶುಭ ಫಲ ನೀಡಲಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಈಗ ಪೂರ್ಣಗೊಳ್ಳುತ್ತವೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿಯೂ ಉತ್ತಮ ಪ್ರಗತಿ ಕಂಡುಬರುತ್ತದೆ. ಆರ್ಥಿಕ ಸ್ಥಿತಿಯು ನಿಧಾನವಾಗಿ ಬಲಗೊಳ್ಳಲಿದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಸಿಂಹ ರಾಶಿ:

ಕೇತು ಸ್ವರಾಶಿಯಲ್ಲಿ ಸಂಚರಿಸುವುದರಿಂದ ಸಿಂಹ ರಾಶಿಯವರಿಗೆ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಒಡಹುಟ್ಟಿದವರ ಬೆಂಬಲ ಹೆಚ್ಚಾಗುತ್ತದೆ. ಹೆಚ್ಚುವರಿ ಆದಾಯದ ಮೂಲಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಹೂಡಿಕೆ ಮಾಡಿದರೆ ಲಾಭದಾಯಕ ಫಲಿತಾಂಶ ಸಿಗಲಿದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಕೇತುವಿನ ಸಂಚಾರ ಒಂದು ರೀತಿಯ ಸುವರ್ಣಾವಕಾಶವನ್ನು ತರಲಿದೆ. ಶಿಕ್ಷಣ, ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ವೃತ್ತಿಜೀವನದಲ್ಲಿ ನೀವು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳು ಮುಂದಿನ ದಿನಗಳಲ್ಲಿ ಲಾಭ ತರುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೋಜಶಾಲಾದಲ್ಲಿ ಶುಕ್ರವಾರ ಹಿಂದೂಗಳು ಪೂಜೆ , ಮುಸ್ಲಿಮರು ನಮಾಜ್ ಮಾಡಲು ಸುಪ್ರೀಂ ಅನುಮತಿ – Kannada News | Supreme Court Clears Way for Saraswati Puja and Friday Prayers at Bhojshala

ಧಾರ್, ಜನವರಿ 22: ಭೋಜಶಾಲಾದಲ್ಲಿ ಶುಕ್ರವಾರ ಹಿಂದೂಗಳು ಪೂಜೆ ಮಾಡಲು, ಮುಸ್ಲಿಮರು ನಮಾಜ್ ಮಾಡಲು ಸುಪ್ರೀಂಕೋರ್ಟ್(Supreme Court)​ ಅನುಮತಿ ನೀಡಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಐತಿಹಾಸಿಕ ಭೋಜಶಾಲೆಯ ಕುರಿತಾದ ದೀರ್ಘಕಾಲದ ವಿವಾದದ ಹೊಸ ಅರ್ಜಿಯ ಕುರಿತು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಇಂದು ಒಂದು ಮಹತ್ವದ ತೀರ್ಪು ನೀಡಿದೆ.

ವಸಂತ ಪಂಚಮಿಯಂದು ಸರಸ್ವತಿ ಪೂಜೆ ಮತ್ತು ಭೋಜಶಾಲೆಯಲ್ಲಿ ನಮಾಜ್ ಮಾಡಲು ಎರಡೂ ಧರ್ಮದವರಿಗೆ ಜಾಗವನ್ನು ಹಂಚಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಮುಸ್ಲಿಂ ಸಮುದಾಯಕ್ಕೆ ಶುಕ್ರವಾರದಂದು ಮಧ್ಯಾಹ್ನ 1 ರಿಂದ 3 ರವರೆಗೆ ಪ್ರಾರ್ಥನೆ ಸಲ್ಲಿಸಲು ನ್ಯಾಯಾಲಯವು ಅನುಮತಿ ನೀಡಿದೆ.

ವಾಸ್ತವವಾಗಿ, ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಸಲ್ಲಿಸಿದ ಅರ್ಜಿಯಲ್ಲಿ ಮುಂಬರುವ ವಸಂತ ಪಂಚಮಿಯಂದು (ಶುಕ್ರವಾರ, ಜನವರಿ 23, 2026) ಭೋಜಶಾಲಾದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು ಮತ್ತು ಮುಸ್ಲಿಂ ಸಮುದಾಯವು ನಮಾಜ್ ಮಾಡುವುದನ್ನು ತಡೆಯಬೇಕು ಎಂದು ಕೋರಲಾಗಿತ್ತು.

ಅರ್ಜಿಯನ್ನು ಆಲಿಸಿದ ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಬಸಂತ್ ಪಂಚಮಿಯಂದು ದಿನವಿಡೀ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಲು ಹಿಂದೂಗಳಿಗೆ ಅನುಮತಿ ನೀಡಿತು, ಆದರೆ ನಮಾಜ್‌ಗೆ (ಮಧ್ಯಾಹ್ನ 1-3) ಸ್ಥಳಾವಕಾಶವನ್ನು ಒದಗಿಸಬೇಕೆಂದು ನಿರ್ದೇಶಿಸಿತು.

ಮತ್ತಷ್ಟು ಓದಿ: ಉರುಸ್ ಮೆರವಣಿಗೆ ವೇಳೆ ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರ ಮೇಲೆ ಹಲ್ಲೆ

ಗುರುವಾರ ಸಂಜೆಯೊಳಗೆ ಮುಸ್ಲಿಂ ಕಡೆಯವರು ಪ್ರಾರ್ಥನೆಗೆ ಹಾಜರಾಗುವ ಅಂದಾಜು ಜನರ ಸಂಖ್ಯೆಯನ್ನು ಧಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಒದಗಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಇದರಿಂದ ಪಾಸ್‌ಗಳನ್ನು ವಿತರಿಸಬಹುದು ಮತ್ತು ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳನ್ನು ಮಾಡಬಹುದು. ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಸಹಕಾರವನ್ನು ಪ್ರದರ್ಶಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಡಳಿತದೊಂದಿಗೆ ಕೆಲಸ ಮಾಡಲು ನ್ಯಾಯಾಲಯ ಎರಡೂ ಧರ್ಮದವರಿಗೆ ಮನವಿ ಮಾಡಿದೆ.

ಇದು ಮತ್ತೆ ಸಂಭವಿಸಲಿ. ಶುಕ್ರವಾರದ ಪ್ರಾರ್ಥನೆಗಳು ಮಧ್ಯಾಹ್ನ 1 ರಿಂದ 3 ರವರೆಗೆ ನಡೆಯುತ್ತವೆ, ನಾವು ಮಧ್ಯಾಹ್ನ 3 ಗಂಟೆಯೊಳಗೆ ಜಾಗವನ್ನು ಖಾಲಿ ಮಾಡುತ್ತೇವೆ. ಆಮೇಲೆ ಅವರು ಪೂಜೆ ಮುಂದುವರೆಸಬಹುದು ಎಂದು ಮಸೀದಿ ಸಮಿತಿ ಪ್ರತಿನಿಧಿಸುವ ವಕೀಲ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉರುಸ್ ಮೆರವಣಿಗೆ ವೇಳೆ ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರ ಮೇಲೆ ಹಲ್ಲೆ – Kannada News | Bangarpet Uruss: Moral Policing Assault on Hindu Youth; KGF SP Investigates

ಕೋಲಾರ, ಜ.22: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ದರ್ಗಾ ಮೈದಾನದಲ್ಲಿ ನಡೆಯುತ್ತಿರುವ ಉರುಸ್ ಮೆರವಣಿಗೆಯ ವೇಳೆ ನೈತಿಕ ಪೊಲೀಸ್‌ಗಿರಿ ನಡೆದ ಘಟನೆ ವರದಿಯಾಗಿದೆ.ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಎಂಬ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮುಸ್ಲಿಂ ಯುವಕರು ಹಿಂದೂ ಯುವಕರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಮುಸ್ಲಿಂ ಯುವಕ-ಯುವತಿಯರ ಜೊತೆಗಿದ್ದ ಹಿಂದೂ ಯುವಕರ ಮೇಲೆ ದಾಳಿ ನಡೆದಿದೆ. ಘಟನೆ ಸಂಬಂಧ ಮುಸ್ಲಿಂ ಯುವತಿ ಚಾಂದಿನಿ ನೀಡಿದ ದೂರಿನ ಆಧಾರದ ಮೇಲೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಜಹೀದ್, ಅಬೀದ್ ಅಹ್ಮದ್, ಶೇಕ್ ಸಕೀಬ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ದೂರುದಾರ ಚಾಂದಿನಿ ತನ್ನ ಅಣ್ಣ ರಫೀ ಜೊತೆಗೆ ಇದ್ದಾಗ, ಅವರೊಂದಿಗೆ ಇದ್ದ ರಾಹುಲ್, ಪುರುಶೋತಮ್, ಲಾವಣ್ಯ ಮತ್ತು ಸಂಜಯ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಘಟನೆಯ ಮಾಹಿತಿ ಪಡೆದ ಬಳಿಕ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link