ನಷ್ಟ ಮಾಡಿ ಡಿಸ್ಕೌಂಟ್ ಕೇಳಿದ ರಣವೀರ್ ಸಿಂಗ್; ಸಂಧಾನ ಸಭೆಯಲ್ಲಿ ನಡೆದಿದ್ದೇನು?
ಬಾಲಿವುಡ್‌ನ ‘ಡಾನ್ 3’ ಸಿನಿಮಾ ವಿವಾದ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ರಣವೀರ್ ಸಿಂಗ್ ಮತ್ತು ‘ಎಕ್ಸೆಲ್ ಎಂಟರ್‌ಟೇನ್‌ಮೆಂಟ್’ ನಿರ್ಮಾಣ ಸಂಸ್ಥೆ ನಡುವಿನ ಮುನಿಸು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇತ್ತೀಚೆಗೆ ನಡೆದ ಸಂಧಾನ ಸಭೆಯೊಂದರ ಆಸಕ್ತಿದಾಯಕ ಮಾಹಿತಿ ಈಗ ಹೊರಬಿದ್ದಿದೆ. ಚಿತ್ರದಿಂದ ಹೊರನಡೆದ ಕಾರಣ ಎಕ್ಸೆಲ್ ಸಂಸ್ಥೆಗೆ ಉಂಟಾಗಿದ್ದ 45 ಕೋಟಿ ರೂಪಾಯಿ ನಷ್ಟಕ್ಕೆ ಪರಿಹಾರವಾಗಿ ರಣವೀರ್ ಸಿಂಗ್ 10 ಕೋಟಿ ರೂಪಾಯಿ ನೀಡಲು ಒಪ್ಪಿದ್ದರು ಮತ್ತು ಬಾಕಿ ಹಣದಲ್ಲಿ ಡಿಸ್ಕೌಂಟ್ ಕೇಳಿದ್ದರು…