Category Archives: Blog

Your blog category

ಭೋಜಶಾಲಾದಲ್ಲಿ ಶುಕ್ರವಾರ ಹಿಂದೂಗಳು ಪೂಜೆ , ಮುಸ್ಲಿಮರು ನಮಾಜ್ ಮಾಡಲು ಸುಪ್ರೀಂ ಅನುಮತಿ – Kannada News | Supreme Court Clears Way for Saraswati Puja and Friday Prayers at Bhojshala

ಧಾರ್, ಜನವರಿ 22: ಭೋಜಶಾಲಾದಲ್ಲಿ ಶುಕ್ರವಾರ ಹಿಂದೂಗಳು ಪೂಜೆ ಮಾಡಲು, ಮುಸ್ಲಿಮರು ನಮಾಜ್ ಮಾಡಲು ಸುಪ್ರೀಂಕೋರ್ಟ್(Supreme Court)​ ಅನುಮತಿ ನೀಡಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಐತಿಹಾಸಿಕ ಭೋಜಶಾಲೆಯ ಕುರಿತಾದ ದೀರ್ಘಕಾಲದ ವಿವಾದದ ಹೊಸ ಅರ್ಜಿಯ ಕುರಿತು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಇಂದು ಒಂದು ಮಹತ್ವದ ತೀರ್ಪು ನೀಡಿದೆ.

ವಸಂತ ಪಂಚಮಿಯಂದು ಸರಸ್ವತಿ ಪೂಜೆ ಮತ್ತು ಭೋಜಶಾಲೆಯಲ್ಲಿ ನಮಾಜ್ ಮಾಡಲು ಎರಡೂ ಧರ್ಮದವರಿಗೆ ಜಾಗವನ್ನು ಹಂಚಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಮುಸ್ಲಿಂ ಸಮುದಾಯಕ್ಕೆ ಶುಕ್ರವಾರದಂದು ಮಧ್ಯಾಹ್ನ 1 ರಿಂದ 3 ರವರೆಗೆ ಪ್ರಾರ್ಥನೆ ಸಲ್ಲಿಸಲು ನ್ಯಾಯಾಲಯವು ಅನುಮತಿ ನೀಡಿದೆ.

ವಾಸ್ತವವಾಗಿ, ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಸಲ್ಲಿಸಿದ ಅರ್ಜಿಯಲ್ಲಿ ಮುಂಬರುವ ವಸಂತ ಪಂಚಮಿಯಂದು (ಶುಕ್ರವಾರ, ಜನವರಿ 23, 2026) ಭೋಜಶಾಲಾದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು ಮತ್ತು ಮುಸ್ಲಿಂ ಸಮುದಾಯವು ನಮಾಜ್ ಮಾಡುವುದನ್ನು ತಡೆಯಬೇಕು ಎಂದು ಕೋರಲಾಗಿತ್ತು.

ಅರ್ಜಿಯನ್ನು ಆಲಿಸಿದ ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಬಸಂತ್ ಪಂಚಮಿಯಂದು ದಿನವಿಡೀ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಲು ಹಿಂದೂಗಳಿಗೆ ಅನುಮತಿ ನೀಡಿತು, ಆದರೆ ನಮಾಜ್‌ಗೆ (ಮಧ್ಯಾಹ್ನ 1-3) ಸ್ಥಳಾವಕಾಶವನ್ನು ಒದಗಿಸಬೇಕೆಂದು ನಿರ್ದೇಶಿಸಿತು.

ಮತ್ತಷ್ಟು ಓದಿ: ಉರುಸ್ ಮೆರವಣಿಗೆ ವೇಳೆ ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರ ಮೇಲೆ ಹಲ್ಲೆ

ಗುರುವಾರ ಸಂಜೆಯೊಳಗೆ ಮುಸ್ಲಿಂ ಕಡೆಯವರು ಪ್ರಾರ್ಥನೆಗೆ ಹಾಜರಾಗುವ ಅಂದಾಜು ಜನರ ಸಂಖ್ಯೆಯನ್ನು ಧಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಒದಗಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಇದರಿಂದ ಪಾಸ್‌ಗಳನ್ನು ವಿತರಿಸಬಹುದು ಮತ್ತು ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳನ್ನು ಮಾಡಬಹುದು. ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಸಹಕಾರವನ್ನು ಪ್ರದರ್ಶಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಡಳಿತದೊಂದಿಗೆ ಕೆಲಸ ಮಾಡಲು ನ್ಯಾಯಾಲಯ ಎರಡೂ ಧರ್ಮದವರಿಗೆ ಮನವಿ ಮಾಡಿದೆ.

ಇದು ಮತ್ತೆ ಸಂಭವಿಸಲಿ. ಶುಕ್ರವಾರದ ಪ್ರಾರ್ಥನೆಗಳು ಮಧ್ಯಾಹ್ನ 1 ರಿಂದ 3 ರವರೆಗೆ ನಡೆಯುತ್ತವೆ, ನಾವು ಮಧ್ಯಾಹ್ನ 3 ಗಂಟೆಯೊಳಗೆ ಜಾಗವನ್ನು ಖಾಲಿ ಮಾಡುತ್ತೇವೆ. ಆಮೇಲೆ ಅವರು ಪೂಜೆ ಮುಂದುವರೆಸಬಹುದು ಎಂದು ಮಸೀದಿ ಸಮಿತಿ ಪ್ರತಿನಿಧಿಸುವ ವಕೀಲ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉರುಸ್ ಮೆರವಣಿಗೆ ವೇಳೆ ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರ ಮೇಲೆ ಹಲ್ಲೆ – Kannada News | Bangarpet Uruss: Moral Policing Assault on Hindu Youth; KGF SP Investigates

ಕೋಲಾರ, ಜ.22: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ದರ್ಗಾ ಮೈದಾನದಲ್ಲಿ ನಡೆಯುತ್ತಿರುವ ಉರುಸ್ ಮೆರವಣಿಗೆಯ ವೇಳೆ ನೈತಿಕ ಪೊಲೀಸ್‌ಗಿರಿ ನಡೆದ ಘಟನೆ ವರದಿಯಾಗಿದೆ.ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಎಂಬ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮುಸ್ಲಿಂ ಯುವಕರು ಹಿಂದೂ ಯುವಕರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಮುಸ್ಲಿಂ ಯುವಕ-ಯುವತಿಯರ ಜೊತೆಗಿದ್ದ ಹಿಂದೂ ಯುವಕರ ಮೇಲೆ ದಾಳಿ ನಡೆದಿದೆ. ಘಟನೆ ಸಂಬಂಧ ಮುಸ್ಲಿಂ ಯುವತಿ ಚಾಂದಿನಿ ನೀಡಿದ ದೂರಿನ ಆಧಾರದ ಮೇಲೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಜಹೀದ್, ಅಬೀದ್ ಅಹ್ಮದ್, ಶೇಕ್ ಸಕೀಬ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ದೂರುದಾರ ಚಾಂದಿನಿ ತನ್ನ ಅಣ್ಣ ರಫೀ ಜೊತೆಗೆ ಇದ್ದಾಗ, ಅವರೊಂದಿಗೆ ಇದ್ದ ರಾಹುಲ್, ಪುರುಶೋತಮ್, ಲಾವಣ್ಯ ಮತ್ತು ಸಂಜಯ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಘಟನೆಯ ಮಾಹಿತಿ ಪಡೆದ ಬಳಿಕ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜೀವ್​​ ಗೌಡ ಪರ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಪತ್ರ: ಆ್ಯಸಿಡ್​​ ಎರಚುವುದಾಗಿ ಬೆದರಿಕೆ – Kannada News | Acid Attack Threat to Shidlaghatta Municipal Commissioner; Letter Handed Over to Police

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ

ಚಿಕ್ಕಬಳ್ಳಾಪುರ, ಜನವರಿ 22: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಬಂಧನ ಇನ್ನೂ ಆಗಿಲ್ಲ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ತಂಡಗಳಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ. ಹೀಗಿದ್ದರೂ ಈ ನಡುವೆ ಪುಂಡಾಟ ಮಾತ್ರ ಮುಂದುವರಿದಿದೆ. ಆ್ಯಸಿಡ್​​ ಎರಚುವುದಾಗಿ ಶಿಡ್ಲಘಟ್ಟ ಪೌರಾಯುಕ್ತೆಗೆ ಮತ್ತೆ ಬೆದರಿಕೆ ಹಾಕಲಾಗಿದ್ದು, ಆರೋಪಿ ರಾಜೀವ್ ಗೌಡ ಪರ ಪತ್ರ ಬರೆದು ಎಚ್ಚರಿಕೆ ನೀಡಿರುವ ಬಗ್ಗೆ ಪೌರಾಯುಕ್ತೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬೆದರಿಕೆ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಾಂಗ್ರೆಸ್​​ ಮುಖಂಡರಿಂದಲೇ ಆಕ್ರೋಶ

ಪೌರಾಯುಕ್ತೆಗೆ ನಿಂದಿಸಿ, ಬೆದರಿಕೆ ಹಾಕಿರುವ ಪ್ರಕರಣ ವಿಚಾರವಾಗಿ ರಾಜೀವ್​​ ಗೌಡನನ್ನು ಪೊಲೀಸರು ಇನ್ನೂ ಬಂಧಿಸದ ಬಗ್ಗೆ ಸ್ವಪಕ್ಷ ಕಾಂಗ್ರೆಸ್​​ನಲ್ಲಿಯೇ ಆಕ್ರೋಶ ಭುಗಿಲೆದ್ದಿದೆ. ಆತ ನಡೆದುಕೊಂಡಿರುವ ರೀತಿಯಿಂದ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್​​ ಪಕ್ಷಕ್ಕೆ ನಷ್ಟವಾಗ್ತಿದ್ದು, ಪೊಲೀಸರು ಶೀಘ್ರ ಸೂಕ್ತಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು; ರಾಜೀವ್ ಗೌಡಗೆ ಕೋರ್ಟ್ ತರಾಟೆ

ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಚಿಕ್ಕಬಳ್ಳಾಪುರ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ಮತ್ತೆ ನಡೆಯಲಿದೆ. ನಿರೀಕ್ಷಣಾ ಜಾಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್‌, ವಿಚಾರಣೆಯನ್ನ ಜನವರಿ 22ಕ್ಕೆ ಅಂದರೆ ಇಂದಿಗೆ ಮುಂದೂಡಿತ್ತು.

ಅಮಾನತಿಗೆ ಶಿಫಾರಸು

ಪಕ್ಷದ ಮುಖಂಡನ ವರ್ತನೆ ಆಡಳಿತರೂಢ ಕಾಂಗ್ರೆಸ್​​ಗೆ ಮುಜುಗರ ತಂದ ಹಿನ್ನೆಲೆ, ಆರೋಪಿ ರಾಜೀವ್​ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ ಅದಕ್ಕೆ ನಾಪತ್ತೆಯಾಗಿರುವ ರಾಜೀವ್​​ ಗೌಡ ಉತ್ತರಿಸದ ಕಾರಣ ಆತನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಸ್ಲಿಂ ಯುವಕನ ಪ್ರೀತಿಸಿದ್ದಕ್ಕೆ ತಂಗಿಯೆಂದೂ ನೋಡದೆ ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದ ಸಹೋದರರು – Kannada News | UP Honor Killing: Interfaith Couple Murdered by Brothers in Moradabad

ಲಕ್ನೋ, ಜನವರಿ 22: ಉತ್ತರ ಪ್ರದೇಶದ ಮೊರಾದಾಬಾದಿನಲ್ಲಿ  ಮರ್ಯಾದಾ ಹತ್ಯೆ(Honor Killing)ಯೊಂದು ನಡೆದಿದೆ. ತಮ್ಮ ತಂಗಿ ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ಸಹೋದರರು ತಂಗಿಯಂದೂ ನೋಡದೆ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ. 27 ವರ್ಷದ ಮುಸ್ಲಿಂ ಯುವಕ ಹಾಗೂ 22 ವರ್ಷದ ಹಿಂದೂ ಯುವತಿಯನ್ನು ಕಟ್ಟಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್ ಕೆಲವು ತಿಂಗಳುಗಳಿಂದ ಮೊರಾದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಈ ಸಮಯದಲ್ಲಿ, ಅವರು ಕಾಜಲ್ ಅವರನ್ನು ಭೇಟಿಯಾದರು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕಾಜಲ್ ಅವರ ಸಹೋದರರು ಅಂತರ್ಧರ್ಮೀಯ ಸಂಬಂಧವನ್ನು ವಿರೋಧಿಸಿದರು ಮತ್ತು ಆತನನ್ನು ಮರೆತುಬಿಡು ಎಂದು ಕೇಳಿಕೊಂಡಿದ್ದರು.

ಸುಮಾರು ಮೂರು ದಿನಗಳ ಹಿಂದೆ, ಅರ್ಮಾನ್ ಮತ್ತು ಕಾಜಲ್ ಕಾಣೆಯಾಗಿದ್ದರು. ಅರ್ಮಾನ್ ತಂದೆ ಹನೀಫ್ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ, ಕಾಜಲ್ ಕೂಡ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿತ್ತು. ಆಕೆಯ ಸಹೋದರರನ್ನು ವಿಚಾರಣೆ ನಡೆಸಿದಾಗ, ಇಬ್ಬರನ್ನು ಕೊಂದಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ಮತ್ತಷ್ಟು ಓದಿ: ಹುಬ್ಬಳ್ಳಿ ಮರ್ಯಾದಾ ಹತ್ಯೆ ಬೆನ್ನಲ್ಲೇ ಹೊಸ ಕಾನೂನು ತರಲು ಮುಂದಾದ ಸರ್ಕಾರ

ಆರೋಪಿಗಳು ಪೊಲೀಸರಿಗೆ ಶವಗಳನ್ನು ಹೂತಿಟ್ಟ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿದ್ದರು. ಬುಧವಾರ ಸಂಜೆ ಶವಗಳನ್ನು ಹೊರತೆಗೆಯಲಾಯಿತು. ಅರ್ಮಾನ್ ಮತ್ತು ಕಾಜಲ್ ಅವರ ಕೈಕಾಲುಗಳನ್ನು ಕಟ್ಟಿಹಾಕಿ ಕೊಚ್ಚಿ ಕೊಲ್ಲಲಾಗಿದೆ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಯುವತಿಯ ಸಹೋದರರೇ ಅವರನ್ನು ಕೊಂದಿದ್ದಾರೆ ಎಂಬುದು ತಿಳಿದುಬಂದಿದೆ. ಸಹೋದರರು ತಪ್ಪೊಪ್ಪಿಕೊಂಡಿದ್ದು, ನಾವು ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಕೊಲೆಗಳಿಗೆ ಬಳಸಿದ ಗುದ್ದಲಿಯನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಆಂಟಿಲ್ ಹೇಳಿದ್ದಾರೆ.

ಮಹಿಳೆಯ ಮೂವರು ಸಹೋದರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವರಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅರ್ಮಾನ್ ಮತ್ತು ಕಾಜಲ್ ನಡುವಿನ ಯಾವುದೇ ಸಂಬಂಧದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅರ್ಮಾನ್ ಸಹೋದರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿಡ್ಲಘಟ್ಟ, ಮೈಸೂರು ಆಯ್ತು ಶಿವಮೊಗ್ಗ ಸರದಿ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ – Kannada News | After Sidlaghatta and Mysuru, Shivamogga Next: Congress Worker Abuses Villager, Video Goes Viral

ಶಿವಮೊಗ್ಗ, ಜನವರಿ 22: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸವೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಸಾರ್ವಜನಿಕವಾಗಿ ದಬ್ಬಾಳಿಕೆ ನಡೆಸಿದ ಆರೋಪ ಕೇಳಿಬಂದಿದೆ. ರಸ್ತೆ ಕಾಮಗಾರಿ ವಿಚಾರವಾಗಿ ಗ್ರಾಮಸ್ಥನೊಂದಿಗೆ ವಾಗ್ವಾದಕ್ಕಿಳಿದ ಸದಸ್ಯ ಧರ್ಮಪ್ಪ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದು, ಘಟನೆ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿ ರಮೇಶ್​ಗೆ ಧರ್ಮಪ್ಪ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಕೋಪದ ಅತಿರೇಕದಲ್ಲಿ ಪಾದರಕ್ಷೆಯಿಂದ ಹೊಡೆಯಲು ಮುಂದಾದ ಘಟನೆಯೂ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹಾಗೂ ಮೈಸೂರಿನಲ್ಲಿ ನಡೆದ ಇಂತಹ ಘಟನೆಗಳ ಬಳಿಕ, ಇದೀಗ ಶಿವಮೊಗ್ಗದಲ್ಲೂ ಪುಡಿ ಕಾರ್ಯಕರ್ತನ ಪುಂಡಾಟ ಮರುಕಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ‘ಕಾನೂನಿನ ಭಯವೇ ಇಲ್ಲದಂತೆ ವರ್ತಿಸುವ ಇಂಥ ಕೆಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿಯ ನಂತರ ಅತ್ಯಂತ ಕಷ್ಟಕರ ಕೆಲಸವನ್ನು ನಿರ್ವಹಿಸುತ್ತಿರುವುದು ಗಂಭೀರ್! – Kannada News | Shashi Tharoor Shout Out To Gambhir Amid Criticism For NZ ODI Loss

ಭಾರತದಲ್ಲಿ ಪ್ರಧಾನಿ ಹುದ್ದೆಯ ನಂತರ ಅತ್ಯಂತ ಕಷ್ಟಕರ ಕೆಲಸವನ್ನು ನಿರ್ವಹಿಸುತ್ತಿರುವುದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್. ಹೀಗೆ ಹೇಳಿರುವುದು ಮತ್ಯಾರೂ ಅಲ್ಲ, ಕಾಂಗ್ರೆಸ್ ಸಂಸದ ಶಶಿ ತರೂರ್. ನಾಗಪುರದಲ್ಲಿ ಗೌತಮ್ ಗಂಭೀರ್ ಅವರನ್ನು ಭೇಟಿಯಾದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶಶಿ ತರೂರ್ ಟೀಮ್ ಇಂಡಿಯಾ ಕೋಚ್ ಅನ್ನು ಹಾಡಿ ಹೊಗಳಿದ್ದಾರೆ.

ನನ್ನ ಹಳೆಯ ಗೆಳೆಯ ಗೌತಮ್ ಗಂಭೀರ್ ಅವರನ್ನು ನಾಗಪುರದಲ್ಲಿ ಭೇಟಿಯಾದೆ. ಅವರೊಂದಿಗಿನ ಒಳ್ಳೆಯ ಮತ್ತು ಮುಕ್ತ ಚರ್ಚೆಯನ್ನು ಆನಂದಿಸಿದೆ. ಪ್ರಧಾನಿ ಹುದ್ದೆಯ ನಂತರ ಭಾರತದಲ್ಲಿ ಅತ್ಯಂತ ಕಠಿಣ ಕೆಲಸ ಮಾಡುವ ವ್ಯಕ್ತಿ ಗೌತಮ್ ಗಂಭೀರ್.

ಪ್ರತಿದಿನ ಲಕ್ಷಾಂತರ ಜನರು ಅವರ ನಿರ್ಧಾರಗಳನ್ನು ಪ್ರಶ್ನಿಸುತ್ತಾರೆ. ಆದರೆ, ಅವರು ಸಂಪೂರ್ಣ ಶಾಂತತೆ ಮತ್ತು ದೃಢನಿಶ್ಚಯದಿಂದ, ಹಿಂಜರಿಯದೆ ಮುಂದುವರಿಯುತ್ತಿದ್ದಾರೆ. ಅವರ ಶಾಂತ ಸಂಕಲ್ಪ ಮತ್ತು ಸಮರ್ಥ ನಾಯಕತ್ವವನ್ನು ಶ್ಲಾಘಿಸಬೇಕು. ಮುಂದಿನ ಸವಾಲುಗಳಿಗೆ ಅವರು ಅವರಿಗೆ ಶುಭ ಹಾರೈಸುತ್ತೇನೆ ಎಂದು ಶಶಿ ತರೂರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಶಶಿ ತರೂರ್ ಅವರ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ಧನ್ಯವಾದಗಳು… ಎಲ್ಲಾ ಗದ್ದಲ ಮತ್ತು ಟೀಕೆಗಳು ಕಡಿಮೆಯಾದಾಗ, ತರಬೇತುದಾರರ ಅಪರಿಮಿತ ಶಕ್ತಿಯ ಹಿಂದಿನ ಸತ್ಯ ಮತ್ತು ತರ್ಕವು ಸ್ಪಷ್ಟವಾಗುತ್ತದೆ.ಅಲ್ಲಿಯವರೆಗೆ, ಅತ್ಯುತ್ತಮವಾಗಿರುವ ನನ್ನವರ ವಿರುದ್ಧವೇ ನನ್ನನ್ನು ಎತ್ತಿಕಟ್ಟುತ್ತಿರುವುದನ್ನು ನೋಡುವುದೇ ಕುತೂಹಲಕಾರಿ ಎಂದು ಗಂಭೀರ್ ಬರೆದುಕೊಂಡಿದ್ದಾರೆ.

ಅಂದಹಾಗೆ ಶಶಿ ತರೂರ್ ಅವರು ಗೌತಮ್ ಗಂಭೀರ್ ಅವರು ಕಷ್ಟಕರ ಹುದ್ದೆಯಲ್ಲಿದ್ದಾರೆ ಎಂದು ಹೇಳಲು ಮುಖ್ಯ ಕಾರಣ ಟೀಮ್ ಇಂಡಿಯಾ ಕೋಚ್ ವಿರುದ್ಧ ಕೇಳಿ ಬರುತ್ತಿರುವ ಟೀಕೆ ಟಿಪ್ಪಣಿಗಳು. ಗಂಭೀರ್ ಕೋಚಿಂಗ್​ನಲ್ಲಿ ಭಾರತ ಟೆಸ್ಟ್ ತಂಡವು ಅಧಃಪತನದತ್ತ ಸಾಗಿದೆ.

ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಸೋಲನುಭವಿಸಿದೆ. ಈ ಮೂಲಕ ನ್ಯೂಝಿಲೆಂಡ್ ತಂಡವು ಇದೇ ಮೊದಲ ಬಾರಿಗೆ ಭಾರತದಲ್ಲಿ ಏಕದಿನ ಸರಣಿ ಗೆದ್ದುಕೊಂಡಿದೆ.

ಇದನ್ನೂ ಓದಿ: ಗೆದ್ದರೂ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ ಕಳಪೆಯಾಟ..!

ಅಂದರೆ ಕಳೆದ 37 ವರ್ಷಗಳಲ್ಲಿ ನ್ಯೂಝಿಲೆಂಡ್ ಒಮ್ಮೆಯೂ ಭಾರತದಲ್ಲಿ ಏಕದಿನ ಸರಣಿ ಗೆದ್ದಿರಲಿಲ್ಲ. ಹೀಗಾಗಿಯೇ ಭಾರತ ತಂಡದ ಸೋಲಿಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು ಟೀಕಿಸಲಾಗಿತ್ತು. ಅವರ ಕಾರ್ಯ ವೈಖರಿಗಳ ಬಗ್ಗೆ ಪ್ರಶ್ನೆಗಳನ್ನೆತ್ತಲಾಗಿತ್ತು. ಹೀಗಾಗಿಯೇ ಶಶಿ ತರೂರ್ ಅವರು ಭಾರತದಲ್ಲಿ ಪ್ರಧಾನಿ ಹುದ್ದೆಯ ನಂತರ ಅತ್ಯಂತ ಕಷ್ಟಕರ ಕಷ್ಟಕರ ಕೆಲಸವನ್ನು ನಿರ್ವಹಿಸುತ್ತಿರುವುದು ಗಂಭೀರ್ ಎಂದಿದ್ದಾರೆ.

Source link

‘ಟಾಕ್ಸಿಕ್’ ಟ್ರೇಲರ್ ಬರೋದು ಯಾವಾಗ? ಕಾಯಬೇಕು ಇನ್ನಷ್ಟು ದಿನ – Kannada News | Yash’s Toxic Trailer Release: Dates and March 19 Movie Premiere Details Revealed

ಯಶ್ (Yash) ನಟನೆಯ‘ಟಾಕ್ಸಿಕ್’ ಸಿನಿಮಾದ ಟೀಸರ್ ರಿಲೀಸ್ ಆಗಿ ಹಲವು ದಿನಗಳು ಕಳೆದರೂ ಅದರ ಬಗ್ಗೆ ಶುರುವಾದ ಚರ್ಚೆ ನಿಂತಿಲ್ಲ. ಅನೇಕರು ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್​​ನಲ್ಲಿ ಯಶ್ ಹೆಚ್ಚಿನ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಕೆಲ ಬೋಲ್ಡ್ ದೃಶ್ಯಗಳು ಚರ್ಚೆ ಹುಟ್ಟುಹಾಕಿದ್ದವು. ಟ್ರೇಲರ್ ರಿಲೀಸ್​​ಗೆ ಅಭಿಮಾನಿಗಳು ಕಾದಿದ್ದಾರೆ. ಇದಕ್ಕಾಗಿ ಮತ್ತಷ್ಟು ದಿನ ಕಾಯಬೇಕಾಗಿ ಬರಬಹುದು ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.

‘ಟಾಕ್ಸಿಕ್’ ಸಿನಿಮಾ ರಿಲೀಸ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈದ್ ಹಾಗೂ ಯುಗಾದಿ ಪ್ರಯುಕ್ತ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್​​ಗೆ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಸಿನಿಮಾ ಟೀಸರ್ ಈಗಾಗಲೇ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಕೆಲವರು ಟೀಸರ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆಯಾದರೂ ಇದರಿಂದ ಚಿತ್ರಕ್ಕೆ ಪ್ರಚಾರ ಆಗಿದೆ. ಈಗ ಟ್ರೇಲರ್ ಮೂಲಕ ಜನರ ಎದುರು ಬರಲು ಯಶ್ ರೆಡಿ ಆಗುತ್ತಿದ್ದಾರೆ ಎಂದು ವರದಿ ಆಗಿದೆ.

ಮಾರ್ಚ್ 8-10ನೇ ತಾರಿಕಿನ ಸಮಯದಲ್ಲಿ ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಮಾಡುವ ಆಲೋಚನೆ ‘ಟಾಕ್ಸಿಕ್’ ತಂಡಕ್ಕೆ ಇದೆಯಂತೆ. ಟ್ರೇಲರ್ ಅದ್ದೂರಿಯಾಗಿ, ಗಮನ ಸೆಳೆಯುವ ರೀತಿಯಲ್ಲಿ ಇದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾಗೆ ಬರುತ್ತಾರೆ. ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್. ಅದಕ್ಕೂ 8-10 ದಿನ ಮೊದಲು ಟ್ರೇಲರ್ ರಿಲೀಸ್ ಮಾಡಿದರೆ ಟಾಕ್ ಜೋರಾಗಿಯೇ ಇರುತ್ತದೆ ಎಂಬ ಊಹೆ ಪ್ರೇಕ್ಷಕರದ್ದು.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಅಶ್ಲೀಲತೆ: ಸಿಬಿಎಫ್​​ಸಿ ಮುಖ್ಯಸ್ಥ ಹೇಳಿದ್ದೇನು?

‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಯಶ್ ಅವರನ್ನು ಮಾತ್ರ ತೋರಿಸಲಾಗಿದೆ. ಈ ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕರಿದ್ದಾರೆ. ಅವರೆಲ್ಲರನ್ನೂ ಟ್ರೇಲರ್​​ನಲ್ಲಿ ಪರಿಚಯೋ ಸಾಧ್ಯತೆ ಇದೆ. ಒಂದಷ್ಟು ಮಾಸ್ ಡೈಲಾಗ್​​​ಗಳು ಇದ್ದರಂತೂ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ.
‘ಟಾಕ್ಸಿಕ್’ ಚಿತ್ರಕ್ಕೆ ದೊಡ್ಡ ಎದುರಾಳಿ ರೆಡಿ ಆಗಿದೆ. ಬಾಲಿವುಡ್​​ನ ‘ಧುರಂಧರ್ 2’ ಇದೇ ಸಮಯದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕಿಂತ ಹೆಚ್ಚಿನ ಮೈಲೇಜ್ ಪಡೆಯೋ ಅಗತ್ಯ ‘ಟಾಕ್ಸಿಕ್’ ಚಿತ್ರಕ್ಕೆ ಇದೆ. ಹೀಗಾಗಿ, ಆ ದೃಷ್ಟಿಯಲ್ಲಿ ಪ್ಲ್ಯಾನಿಂಗ್​​​ಗಳು ನಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಕಾರ ಕೊಟ್ಟ ಭಾಷಣ ಓದದ ಗವರ್ನರ್​​: ಸದನದಲ್ಲೇ ಸಿಡಿದೆದ್ದ ಕಾಂಗ್ರೆಸ್​​ ನಾಯಕರು – Kannada News | Governor Skips Government Speech in Karnataka Assembly; Congress Opposes Gehlot’s Move

ರಾಜ್ಯಪಾಲರ ನಡೆಗೆ ಕಾಂಗ್ರೆಸಿಗರ ಆಕ್ರೋಶ

ಬೆಂಗಳೂರು, ಜನವರಿ 22: ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲ ಅಧಿವೇಶನ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲ ಥಾವರ್​​​ಚಂದ್​​ ಗೆಹ್ಲೋಟ್​​, ಸರ್ಕಾರ ನೀಡಿದ ಭಾಷಣ ಓದದೆ, ಕೇವಲ ಎರಡು ಸಾಲು ಓದಿ ಅಧಿವೇಶನದಿಂದ ಹೊರನಡೆದಿದ್ದಾರೆ. ಗವರ್ನರ್​​ ನಡೆಗೆ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಿರ್ಗಮನ ವೇಳೆ ಘೋಷಣೆ ಕೂಗುವ ಮೂಲಕ ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಹೀಗಾಗಿ ಜಂಟಿ ಅಧಿವೇಶನ ಹೈಡ್ರಾಮಾಗೆ ಸಾಕ್ಷಿಯಾಗಿದೆ.

ಗವರ್ನರ್​​ ಅಡ್ಡಗಟ್ಟಿದ ಹರಿಪ್ರಸಾದ್​​

ಕೇವಲ ಎರಡು ಸಾಲು ಭಾಷಣ ಮಾಡಿ ಸದನದಿಂದ ಹೊರ ನಡೆಯುತ್ತಿದ್ದ ಗವರ್ನರ್​​ ಬಳಿಗೆ ತೆರಳಲು ಅನೇಕ ಕಾಂಗ್ರೆಸ್​​ ನಾಯಕರು ಯತ್ನಿಸಿದ್ದಾರೆ. ಈ ವೇಳೆ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​​ ರಾಜ್ಯಪಾಲರನ್ನು ಅಡ್ಡಗಟ್ಟಿದ್ದು, ಭಾಷಣ ಓದುವಂತೆ ಪಟ್ಟು ಹಿಡಿದಿದ್ದಾರೆ.  ಕಾಂಗ್ರೆಸ್​​ ನಾಯಕರನ್ನು ಮಾರ್ಷಲ್​​ಗಳು ತಡೆದಿದ್ದು, ರಾಜ್ಯಪಾಲರು ಹೊರ ಹೋಗಲು ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು, ಸರ್ಕಾರದ ಭಾಷಣ ಓದಲು ನಕಾರ; ವಿಧಾನಸಭೆಯಲ್ಲಿ ಹೈಡ್ರಾಮಾ

ರಾಜ್ಯಪಾಲರ ನಡೆಗೆ ಸಿಎಂ ಕಿಡಿ


ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ವರ್ತಿಸಿದ್ದು, ಈ ನಡೆ ಸಂವಿಧಾನ ಬಾಹಿರ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯಪಾಲ ಗೆಹ್ಲೋಟ್​ ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ. ಹೀಗಾಗಿ ಸುಪ್ರೀಂಕೋರ್ಟ್​ ಮೊರೆ ಹೋಗುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯಪಾಲರು ತಾವೇ ತಯಾರು ಮಾಡಿದ ಭಾಷಣ ಮಾಡಿದ್ದಾರೆ. ಈ ಮೂಲಕ ಸಂವಿಧಾನದ ವಿಧಿಗಳನ್ನು ವಿರೋಧಿಸಿದ್ದಾರೆ. ರಾಜ್ಯಪಾಲರ ನಡೆ ಖಂಡಿಸಿ ನಮ್ಮ ಶಾಸಕರು ಪ್ರತಿಭಟನೆ ಮಾಡ್ತಾರೆ ಎಂದು ತಿಳಿಸಿದ್ದಾರೆ.

ಸಂವಿಧಾನದ ಪ್ರಕಾರ ಭಾಷಣ ಮಾಡೋದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಅವರು ರೆಡಿ ಮಾಡಿ ಭಾಷಣವನ್ನು ಓದುವಂತಿಲ್ಲ. ಸರ್ಕಾರ ರೆಡಿ ಮಾಡಿದ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕು ಎಂದು ರಾಜ್ಯಪಾಲರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮನ್‌ರೇಗಾ ಮರುಸ್ಥಾಪನೆ‌ ಮಾಡಿ, ವಿಬಿ ಜಿ ರಾಮ್‌ಜೀ ರದ್ದು ಮಾಡುವವರೆಗೂ ನಿರಂತರ ಹೋರಾಟ ಮಾಡೋದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯಪಾಲರಿಗೆ ನೀಡಿದ ಭಾಷಣದಲ್ಲಿ ಕೇಂದ್ರದ ಯೋಜನೆ ಹೆಸರನ್ನೇ ಬದಲಿಸಿದ ರಾಜ್ಯ ಸರ್ಕಾರ! – Kannada News | Karnataka government alters name of central scheme in Governor’s speech

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

ಬೆಂಗಳೂರು, ಜನವರಿ 22: ವಿಧಾನ ಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣದ ವೇಳೆ ಸರ್ಕಾರ ಕೊಟ್ಟಿದ್ದನ್ನು ಪೂರ್ತಿ ಓದದೆ ಮೊದಲು, ಕೊನೆ ಪ್ಯಾರಾಗಳನ್ನು ಮಾತ್ರ ಗವರ್ನರ್​​ ಗೆಹ್ಲೋಟ್​​ ಓದಿರೋದೀಗ ಕಾಂಗ್ರೆಸಿಗರ ಭಾರೀ ವಿರೋಧಕ್ಕೆ ಕಾರಣವಾಗಿದೆ. ಸಿಎಂ, ಸ್ಪೀಕರ್, ಎಲ್ಲಾ ಸದಸ್ಯರಿಗೆ ಜಂಟಿ ಅಧಿವೇಶನಕ್ಕೆ ಸ್ವಾಗತ. ಸರ್ಕಾರ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ವಿಕಾಸ 2 ಪಟ್ಟು ಹೆಚ್ಚಿಸಲು ಸರ್ಕಾರ ಬದ್ಧ. ಜೈಹಿಂದ್, ಜೈ ಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದರು.

ಕೇಂದ್ರ ಸರ್ಕಾರದ ಯೋಜನೆಯ ಹೆಸರೇ ಬದಲು!

ಇನ್ನು ರಾಜ್ಯಪಾಲರಿಗೆ ನೀಡಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ‘ರಾಮ್’ ಹೆಸರು ಬಳಸದ ರಾಜ್ಯ ಸರ್ಕಾರ, ವಿಬಿ ಜಿ ರಾಮ್ ಜಿ ಬದಲು ವಿಬಿ ಗ್ರಾಮ್​ ಜಿ ಎಂದು ನಮೂದು ಮಾಡಿದೆ. ರಾಜ್ಯಪಾಲರ ಭಾಷಣದ ಪ್ರತಿಯಲ್ಲಿನ ಅಂಶ ವಿಧಾನಸಭೆಯಲ್ಲಿ ದಾಖಲಾಗುತ್ತೆ. ಹೀಗಾಗಿ ಅಧಿಕೃತ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಾಯಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು; ಸದನದಿಂದ ಹೊರಟ ಗವರ್ನರ್ ಗೆಹ್ಲೋಟ್​​​ ತಡೆದು ಹೈಡ್ರಾಮಾ

ರಾಷ್ಟ್ರಗೀತೆಗೆ ರಾಜ್ಯಪಾಲರಿಂದ ಅವಮಾನ ಆರೋಪ

ರಾಜ್ಯಪಾಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸಿಗರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಾಷ್ಟ್ರಗೀತೆಗೆ ರಾಜ್ಯಪಾಲರು ಅವಮಾನ ಮಾಡಿದ್ದಾರೆಂದು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ದೂರಿದ್ದು, ಈ ಬಗ್ಗೆ ಸದನದಲ್ಲಿ ನಿರ್ಣಯ ಮಾಡಬೇಕು ಎಂದು ಸಂಸದೀಯ ವ್ಯವಹಾರ ಸಚಿವ H.K.ಪಾಟೀಲ್ ಒತ್ತಾಯ ಮಾಡಿದ ಪ್ರಸಂಗ ನಡೆದಿದೆ.

ರಾಜ್ಯಪಾಲರಿಗೆ ಅಗೌರವ: ಕ್ರಮಕ್ಕೆ ಬಿಜೆಪಿ ಆಗ್ರಹ

ಮತ್ತೊಂದೆಡೆ ರಾಜ್ಯಪಾಲರು ನಿರ್ಗಮಿಸುವ ವೇಳೆ ಅವರನ್ನು ಮುತ್ತಿಗೆ ಹಾಕಲು ಯತ್ನಿಸಿದ ಆಡಳಿತ ಪಕ್ಷ ಕಾಂಗ್ರೆಸ್​​ ನಡೆಗೆ ಬಿಜೆಪಿ ಕಿಡಿ ಕಾರಿದೆ. ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್​ಗೆ ಲಿಖಿತ ದೂರು ಸಲ್ಲಿಸಿದ ಬಿಜೆಪಿ, ರಾಜ್ಯಪಾಲರಿಗೆ ಅಗೌರವ ತೋರಿದ ಶಾಸಕರು, ಎಂಎಲ್​ಸಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ್ ನೇತೃತ್ವದಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ದೂರು ನೀಡಲಾಗಿದ್ದು, ರಾಜ್ಯಪಾಲರನ್ನು ಅಡ್ಡಗಟ್ಟಿ, ತಳ್ಳಾಡಿ, ನೂಕುನುಗ್ಗಲು ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ? – Kannada News | PM Kisan Samman Nidhi Yojana, expectations of rise in funding for this scheme

ನವದೆಹಲಿ, ಜನವರಿ 22: ಮುಂಬರುವ ಬಜೆಟ್​ನಲ್ಲಿ (Union Budget) ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಉತ್ತೇಜನಕಾರಿ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ನಿರೀಕ್ಷೆ ಇದೆ. ಕಳೆದ ಕೆಲ ವರ್ಷಗಳಿಂದ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ಹಣ ಕ್ರಮೇಣವಾಗಿ ಹೆಚ್ಚುತ್ತಾ ಬಂದಿದೆ. 2013-14ರಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ರೂ ನೀಡಲಾಗಿತ್ತು. 2025-26ರ ಬಜೆಟ್​ನಲ್ಲಿ 1.27 ಲಕ್ಷ ಕೋಟಿ ರೂಗಿಂತ ಹೆಚ್ಚಿನ ಮೊತ್ತವನ್ನು ಕೃಷಿಗೆ ವಿನಿಯೋಗಿಸಲಾಗಿದೆ. 2026-27ರ ಬಜೆಟ್​ನಲ್ಲಿ ಇದು 1.50 ಲಕ್ಷ ಕೋಟಿ ರೂ ಮುಟ್ಟುವ ನಿರೀಕ್ಷೆ ಇದೆ.

ಪಿಎಂ ಕಿಸಾನ್ ಯೋಜನೆಯ ಹಣ ಡಬಲ್ ಆಗುತ್ತಾ?

ಈ ಬಾರಿಯ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬಹುದು. ಪಿಎಂ ಕಿಸಾನ್, ಫಸಲ್ ಬಿಮಾ ಯೋಜನೆ, ಕೃಷಿ ಸಂಚಯಿ ಯೋಜನೆ ಇತ್ಯಾದಿ ಸ್ಕೀಮ್​ಗಳಿಗೆ ಹೆಚ್ಚಿನ ಫಂಡಿಂಗ್ ಬರುವ ಅಪೇಕ್ಷೆಗಳಿವೆ.

ಇದನ್ನೂ ಓದಿ: ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು…

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಸರ್ಕಾರ ಪ್ರತೀ ವರ್ಷ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ರೈತರಿಗೆ ನೀಡುತ್ತದೆ. ಸುಮಾರು 9-10 ಕೋಟಿ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸರ್ಕಾರ ಪ್ರತೀ ಕಂತಿನ ಹಣಕ್ಕೆ ಸುಮಾರು 20,000 ಕೋಟಿ ರೂ ವ್ಯಯಿಸುತ್ತಿದೆ.

ಈಗ ಪಿಎಂ ಕಿಸಾನ್ ಹಣವನ್ನು ಡಬಲ್ ಮಾಡಿದರೆ ಸರ್ಕಾರಕ್ಕೆ ವರ್ಷಕ್ಕೆ 60,000 ಕೋಟಿ ರೂ ಹೆಚ್ಚುವರಿ ಹೊರೆ ಬೀಳುತ್ತದೆ. ಕೆಲ ವರದಿಗಳ ಪ್ರಕಾರ ಸ್ಕೀಮ್ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಕಡಿಮೆ. ಕಂತಿನ ಹಣ ಹೆಚ್ಚಿಸುವ ಯಾವ ಪ್ರಸ್ತಾಪವೂ ಇಲ್ಲ ಎಂದು ಈ ಹಿಂದೆ ಸರ್ಕಾರವೂ ಹೇಳಿದ್ದಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಈ ವರ್ಷ ಯೋಜನೆಯಲ್ಲಿ ಒಂದು ಕಂತು ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಫ್ಯಾಮಿಲಿ ಭಾಗ್ಯ; ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ?

ಬಜೆಟ್​ಗೆ ಮುಂಚೆ ಸಿಗುತ್ತಾ ಪಿಎಂ ಕಿಸಾನ್ ಹಣ?

2019ರಲ್ಲಿ ಶುರುವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ 21 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. 21ನೇ ಕಂತಿನ ಹಣ ನವೆಂಬರ್​ನಲ್ಲಿ ಬಿಡುಗಡೆ ಆಗಿದ್ದರೂ, 22ನೇ ಕಂತಿನ ಹಣ ಈ ತಿಂಗಳೇ ಸಿಗಬಹುದು ಎನ್ನಲಾಗುತ್ತಿದೆ. ಬಜೆಟ್​ಗೆ ಮುಂಚೆ ಸರ್ಕಾರ ಹಣ ಬಿಡುಗಡೆ ಮಾಡಬಹುದು ಎನ್ನುವ ಸುದ್ದಿಗಳು ಕೇಳಿಬರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:05 pm, Thu, 22 January 26

Source link