Category Archives: Blog

Your blog category

ಛತ್ತೀಸ್​ಗಢದ ಉಕ್ಕಿನ ಸ್ಥಾವರದಲ್ಲಿ ಭಾರಿ ಸ್ಫೋಟ, 7 ಮಂದಿ ಸಾವು, ಹಲವರಿಗೆ ಗಾಯ – Kannada News | Tragedy in Chhattisgarh: 7 Killed, Several Injured in Steel Plant Blast

ಬಲೋಡಾ ಬಜಾರ್, ಜನವರಿ 22: ಛತ್ತೀಸ್​ಗಢದ ಬಲೋಡಾ ಬಜಾರ್ ಜಿಲ್ಲೆಯಲ್ಲಿರುವ ಉಕ್ಕಿನ ಸ್ಥಾವರದಲ್ಲಿ ಗುರುವಾರ ಭಾರಿ ಸ್ಫೋಟ(Blast) ಸಂಭಿಸಿದ್ದು, 7  ಕಾರ್ಮಿಕರು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಬಕುಲಾಹಿ ಮೂಲದ ರಿಯಲ್ ಇಸ್ಪಾಟ್ ಸ್ಟೀಲ್ ಪ್ಲಾಂಟ್‌ನಲ್ಲಿ ಕಲ್ಲಿದ್ದಲು ಕುಲುಮೆ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಈ ಸ್ಫೋಟ ಸಂಭವಿಸಿದೆ.

ಘಟನೆಯ ಸಮಯದಲ್ಲಿ, ಕಾರ್ಮಿಕರ ಗುಂಪೊಂದು ಕುಲುಮೆ ಪ್ರದೇಶದ ಸುತ್ತಲೂ ಶುಚಿಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಅವರು ಶಾಖದ ಉಲ್ಬಣ ಮತ್ತು ಸುಡುವ ಕಲ್ಲಿದ್ದಲಿನಲ್ಲಿ ಸಿಲುಕಿಕೊಂಡಿದ್ದರು, ಇದರಿಂದಾಗಿ ಹಲವಾರು ಕಾರ್ಮಿಕರು ಸ್ಥಳದಲ್ಲೇ ಬೆಂದು ಹೋದರು.

ಸ್ಫೋಟದ ನಂತರ ಬಿಸಿ ಕಲ್ಲಿದ್ದಲು ಮತ್ತು ಜ್ವಾಲೆಯ ನೇರ ಸಂಪರ್ಕಕ್ಕೆ ಬಂದ ನಂತರ ಕಾರ್ಮಿಕರು ಮಾರಣಾಂತಿಕ ಸುಟ್ಟ ಗಾಯಗಳನ್ನು ಅನುಭವಿಸಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಕೆಲವು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ, ಆದರೂ ಗಾಯಗೊಂಡವರ ನಿಖರವಾದ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ.

ಮತ್ತಷ್ಟು ಓದಿ: ಹೈದರಾಬಾದ್​ನ ಜೈನ ದೇವಾಲಯದ ಬಳಿ ವಾಷಿಂಗ್​ ಮಷಿನ್ ಸ್ಫೋಟ

ಇಲ್ಲಿಯವರೆಗೆ, ಸ್ಥಾವರ ಆಡಳಿತ ಮಂಡಳಿಯು ಸ್ಫೋಟದ ಕಾರಣ ಅಥವಾ ಗಾಯಗೊಂಡ ಕಾರ್ಮಿಕರ ಸ್ಥಿತಿಯ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಅಧಿಕಾರಿಗಳು ಸ್ಥಾವರದಲ್ಲಿನ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಮತ್ತು ಕುಲುಮೆ ಸ್ಫೋಟಕ್ಕೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:37 pm, Thu, 22 January 26

Source link

ಬಿಎಂಟಿಸಿ ಬಸ್​​​​​​​​ನಲ್ಲಿ 6 ರೂ. ಬದಲು 60 ಸಾವಿರ ರೂ ಫೋನ್ ಪೇ ಮಾಡಿದ ಪ್ರಯಾಣಿಕ, ಮುಂದೇನಾಯ್ತು ನೋಡಿ – Kannada News | Digital Payment Caution: Bengaluru Rider Pays ₹60,000 Instead of ₹6 on PhonePe. Avoid UPI Errors.

ಬೆಂಗಳೂರು, ಜ.22: ಫೋನ್ ಪೇ ಮಾಡುವಾಗ ಸ್ವಲ್ಪ ಗಮನ ನೀಡಬೇಕು ಎನ್ನುವುದು ಇದೇ ಕಾರಣಕ್ಕೆ ನೋಡಿ, ಇಲ್ಲೊಬ್ಬ ವ್ಯಕ್ತಿ ಬಿಎಂಟಿಸಿಯಲ್ಲಿ (BMTC fare mistake) 6 ರೂ ಬದಲು 60 ಸಾವಿರ ಫೋನ್ ಪೇ ಮಾಡಿದ್ದಾರೆ. ಇದೀಗ ಈ ಸುದ್ದಿ ಭಾರೀ ವೈರಲ್​​ ಆಗಿದೆ. ಕೆಲವೊಂದು ಬಾರಿ ಫೋನ್​​ ಪೇ ಮಾಡುವಾಗ ತಪ್ಪಿ ಸೊನ್ನೆ ಹೆಚ್ಚು ಹಾಕಿ ಪಜೀತಿಗೆ ಸಿಲುಕಿಕೊಂಡಿರುವ ಘಟನೆಗಳು ಆಗ್ಗಾಗೆ ನಡೆಯುತ್ತಿರುತ್ತದೆ. ಕೆಲಸದ ಒತ್ತಡದಿಂದ ಅಥವಾ ಕೈ ತಪ್ಪಿಯು ಹೀಗೆ ಆಗಬಹುದು. ಹಾಗಾಗಿ ಎಚ್ಚರಿಕೆಯಿಂದ ಫೋನ್​​ ಪೇ ಮಾಡಬೇಕು. ಬಿಎಂಟಿಸಿಯಲ್ಲಿ ಪ್ರಯಾಣಿಕರೊಬ್ಬರ ಎಡವಟ್ಟಿನಿಂದ 60 ಸಾವಿರ ಖಾತೆಯಿಂದ ಹೋಗಿದೆ.

ಈ ಘಟನೆ ಜ.14ರಂದು ಬನಶಂಕರಿಯಲ್ಲಿ ನಡೆದಿದೆ. ರಾತ್ರಿ ವೇಳೆ ಈ ವ್ಯಕ್ತಿ ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ಆರು ರೂಪಾಯಿ ಬದಲು ಆರವತ್ತು ಸಾವಿರ ಪೋನ್ ಪೇ ಮಾಡಿದ್ದಾರೆ. ಪ್ರಯಾಣಿಕ 60 ಸಾವಿರ ಫೋನ್​​ ಪೇ ಮಾಡಿರುವುದನ್ನು ನೋಡಿ ಕಂಡಕ್ಟರ್ ಶಾಕ್​​​ ಆಗಿದ್ದಾರೆ. ಪ್ರಯಾಣಿಕ 6 ರೂ. ಮಾಡುವ ಬದಲು ತಪ್ಪಿ 60 ಸಾವಿರ ರೂ ಮಾಡಿದ್ದಾರೆ. ಇದೀಗ ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲೂ ದೊಡ್ಡ ಸುದ್ದಿ ಮಾಡಿದೆ. ಈ ಬಗ್ಗೆ ಪ್ರಯಾಣಿಕ ಕಂಡಕ್ಟರ್ ಗೆ ಮಾಹಿತಿ ನೀಡಿದ್ದಾರೆ. ಬಸ್​​​ ನಿರ್ವಾಹಕ  ಖಾತೆ ಪರಿಶೀಲಿಸಿದಾಗ 62,316 ರೂ ಹಾಕಿರುವುದು ಗೊತ್ತಾಗಿದೆ.

ಈ ಹಣವನ್ನು ನೋಡಿ ಕಂಡಕ್ಟರ್ ಬೆಚ್ಚಿಬಿದ್ದಿದ್ದಾರೆ. ನಂತರ  ಈ ಹಣವನ್ನು ತಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ. ಮೊದಲು ನಿರ್ವಾಹಕ ಈ ಬಗ್ಗೆ ತನ್ನ ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ ಅವರ ನಂಬರ್​​ ಪಡೆದುಕೊಂಡಿದ್ದಾರೆ. ಡಿಪೋ ಮ್ಯಾನೇಜರ್ ಫೋನ್ ನಂಬರ್​​ ಕೂಡ ನೀಡಲಾಗಿದೆ. ಅವರು ಪರಿಶೀಲನೆ ನಡೆಸಿದ ನಂತರ ಹಣ ಪಡೆಯಬಹುದು. ಹಣ ಪಡೆಯಲು ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಇನ್ನೂ ಕೂಡ ಹಣ ಪಾವತಿ ಆಗಿಲ್ಲ. ಇವತ್ತು ಅಥವಾ ನಾಳೆಯೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಮುದ್ವೇಷದ ಭಾಷಣ: ಕಲ್ಲಡ್ಕ ಪ್ರಭಾಕರ್​​​ ಭಟ್ ಮೇಲೆ ಮತ್ತೆ ಎಫ್​​ಐಆರ್ ದಾಖಲು

ಫೋನ್​​ ಪೇ ಮಾಡುವ ಮುನ್ನ ಈ ವಿಚಾರ ಗಮನಿಸಲೇಬಬೇಕು:

ಹಣ ಕಳುಹಿಸುವ ಮೊದಲು ಅಮೌಂಟ್ ಸರಿಯಾಗಿದೆಯೇ ಎಂದು ಎರಡು ಬಾರಿ ನೋಡಬೇಕು. ಸಾಮಾನ್ಯವಾಗಿ ದೊಡ್ಡ ಮೊತ್ತವನ್ನು ಪಾವತಿಸುವಾಗ ಹೆಚ್ಚಿನ ಯುಪಿಐ ಆ್ಯಪ್‌ಗಳು ತಪ್ಪು ನೀಡುತ್ತದೆ. ಹಾಗಾಗಿ ಇದನ್ನು ಗಮನಿಸಲೇಬೇಕು. ಬಸ್ ಚಲಿಸುತ್ತಿರುವಾಗ ಅಥವಾ ಜನದಟ್ಟಣೆಯ ಸಮಯದಲ್ಲಿ ಡಿಜಿಟಲ್ ಪಾವತಿ ಮಾಡುವಾಗ ಎಚ್ಚರ ವಹಿಸುವುದು ಅಗತ್ಯವಾಗಿರುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಅವಮಾನಕ್ಕೂ ಮುನ್ನ ಬಾಬರ್ ಆಝಂ ಎಸ್ಕೇಪ್!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಿಂದ ಬಾಬರ್ ಆಝಂ ಅರ್ಧದಲ್ಲೇ ಹೊರ ನಡೆದಿದ್ದಾರೆ. ಅದು ಸಹ ಮತ್ತೊಂದು ಅವಮಾನದ ಮುನ್ಸೂಚನೆ ಸಿಗುತ್ತಿದ್ದಂತೆ ಎಂಬುದು ವಿಶೇಷ. ಈ ಬಾರಿಯ ಬಿಬಿಎಲ್​ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕಿಳಿದಿದ್ದ ಬಾಬರ್ ಆಝಂ ಸುದ್ದಿಯಾಗಿದ್ದು ಮಾತ್ರ ತನ್ನ ಕಳಪೆಯಾಟದಿಂದ. ಅದರಲ್ಲೂ ರನ್​ಗಳಿಸಲು ತಡಕಾಡುತ್ತಿದ್ದ ಬಾಬರ್ ಅವರಿಗೆ ಸ್ಟೀವ್ ಸ್ಮಿತ್ ಸ್ಟ್ರೈಕ್ ನೀಡದಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಅಷ್ಟೇ ಅಲ್ಲದೆ ಬಾಬರ್ ಆಝಂ ಅವರ ಕಳಪೆ ಫೀಲ್ಡಿಂಗ್ ಕೂಡ ಸಿಡ್ನಿ ಸಿಕ್ಸರ್ಸ್​ ಆಟಗಾರರಲ್ಲಿ ಅಸಮಾಧಾನವನ್ನು ಉಂಟು ಮಾಡಿತ್ತು. ಇದಾಗ್ಯೂ ಕಳೆದ 11 ಪಂದ್ಯಗಳಲ್ಲಿ ಬಾಬರ್ ಆಝಂ ಅವರನ್ನು ಕಣಕ್ಕಿಳಿಸಲಾಗಿತ್ತು.

ಆದರೆ 11 ಪಂದ್ಯಗಳಿಂದ ಬಾಬರ್ ಆಝಂ ಕಲೆಹಾಕಿದ್ದು ಕೇವಲ 202 ರನ್​ಗಳು. ಅಂದರೆ 22.44 ರ ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದರು. ಅದು ಕೂಡ 103 ರ ಸ್ಟ್ರೈಕ್ ರೇಟ್​ನಲ್ಲಿ. ಹೀಗಾಗಿಯೇ ಬಾಬರ್ ಆಝಂ ಅವರನ್ನು ಚಾಲೆಂಜರ್ (ನಾಕೌಟ್) ಪಂದ್ಯದಿಂದ ಕೈ ಬಿಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಚಾಲೆಂಜರ್ ಪಂದ್ಯವು ಸಿಡ್ನಿ ಸಿಕ್ಸರ್ಸ್ ತಂಡದ ಪಾಲಿಗೆ ನಿರ್ಣಾಯಕ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಫೈನಲ್​ಗೇರುತ್ತದೆ. ಅತ್ತ ಪರ್ತ್​ ಸ್ಕಾಚರ್ಸ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಬಾಬರ್ ಮೊದಲ ಓವರ್​ನಲ್ಲೇ ಸ್ಟಂಪ್ ಔಟ್ ಆಗಿದ್ದರು.

ಹೀಗಾಗಿಯೇ ಚಾಲೆಂಜರ್ ಪಂದ್ಯದಲ್ಲಿ ಬಾಬರ್ ಆಝಂ ಅವರ ಬದಲಿಗೆ ಬೇರೊಬ್ಬ ಆರಂಭಿಕನನ್ನು ಕಣಕ್ಕಿಳಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದರು. ಅತ್ತ ಸಿಡ್ನಿ ಸಿಕ್ಸರ್ಸ್ ಮ್ಯಾನೇಜ್ಮೆಂಟ್ ಕೂಡ ಬಾಬರ್ ಅವರನ್ನು ನಿರ್ಣಾಯಕ ಪಂದ್ಯದಿಂದ ಕೈ ಬಿಡಲು ಯೋಜನೆ ರೂಪಿಸಿದ್ದರು.

ಈ ಸೂಚನೆ ಸಿಕ್ಕ ಬೆನ್ನಲ್ಲೇ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್​ನಿಂದ ಹೊರ ನಡೆದಿದ್ದಾರೆ. ಅದು ಕೂಡ ರಾಷ್ಟ್ರೀಯ ತಂಡದ ಪರ ಆಡುವ ನೆಪದೊಂದಿಗೆ. ಅಂದರೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗಲು ತವರಿಗೆ ಹಿಂತಿರುಗುತ್ತಿರುವುದಾಗಿ ಬಾಬರ್ ಆಝಂ ತಿಳಿಸಿದ್ದಾರೆ.

ಆದರೆ ಇಂಟ್ರೆಸ್ಟಿಂಗ್ ವಿಷಯ ಎಂದರೆ, ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗುವುದು ಜನವರಿ 29 ರಿಂದ ಎಂಬುದು. ಅಂದರೆ ಮುಂದಿನ ಸರಣಿಗೆ ಇನ್ನೂ ಒಂದು ವಾರವಿದೆ. ಇತ್ತ ಬಿಗ್ ಬ್ಯಾಷ್ ಲೀಗ್​ನಲ್ಲಿ ಉಳಿದಿರುವುದು ಕೇವಲ 2 ಮ್ಯಾಚ್​ಗಳು ಮಾತ್ರ.

ಅಂದರೆ ಜನವರಿ 23 ರಂದು ಸಿಡ್ನಿ ಸಿಕ್ಸರ್ಸ್ ಹಾಗೂ ಹೋಬಾರ್ಟ್ ಹರಿಕೇನ್ಸ್ ನಡುವೆ ಚಾಲೆಂಜರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಜನವರಿ 25 ರಂದು ಪರ್ತ್ ಸ್ಕಾಚರ್ಸ್ ವಿರುದ್ಧ ಫೈನಲ್ ಪಂದ್ಯವಾಡಲಿದೆ.

ಆದರೆ ಬಿಗ್ ಬ್ಯಾಷ್ ಲೀಗ್​ ಮುಗಿಯಲು ಕೇವಲ ಮೂರು ದಿನಗಳಿರುವಾಗ ಬಾಬರ್ ಆಝಂ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅದು ಸಹ ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ನೆನಪೊಡ್ಡಿ.

ಇದರಾರ್ಥ ಬಾಬರ್ ಆಝಂ ಅವರನ್ನು ಚಾಲೆಂಜರ್ ಪಂದ್ಯದಿಂದ ಸಿಡ್ನಿ ಸಿಕ್ಸರ್ಸ್ ಕೈ ಬಿಡುವುದು ಖಚಿತವಾಗಿತ್ತು. ಅಲ್ಲದೆ ಸಿಡ್ನಿ ತಂಡವು ಪೈನಲ್​ಗೇರಿದರೂ ಬಾಬರ್​ನನ್ನು ಕಣಕ್ಕಿಳಿಸದಿರಲು ನಿರ್ಧರಿಸಿತ್ತು. ಹೀಗಾಗಿಯೇ ಮತ್ತೊಂದು ಅವಮಾನ ಎದುರಾಗುವ ಮುನ್ನವೇ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್​ನಿಂದ ಎಸ್ಕೇಪ್ ಆಗಿದ್ದಾರೆ.

 

Source link

ರಾಜ್ಯಪಾಲರನ್ನೇ ತಡೆದು ಗೂಂಡಾಗಿರಿ, ಇದೊಂದು ಕರಾಳ ದಿನ: ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ – Kannada News | Assembly Chaos: R Ashok Calls Karnataka Governor Obstruction a Dark Day, BJP Slams Congress

ಬೆಂಗಳೂರು, ಜನವರಿ 22: ವಿಧಾನಸಭೆಯ ವಿಶೇಷ ಅಧಿವೇಶನದ (Karnataka Assembly Session) ವೇಳೆ ಭಾಷಣ ಮುಗಿಸಿ ಹೊರಟ ರಾಜ್ಯಪಾಲ (Karnataka Governor) ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಶಾಸಕರು ಅಡ್ಡಿಗಟ್ಟಿರುವುದನ್ನು ಖಂಡಿಸಿದ ವಿಪಕ್ಷ ನಾಯಕ ಆರ್ ಅಶೋಕ್ (R Ashoka), ಇದೊಂದು ‘ಕರಾಳ ದಿನ’ ಎಂದು ಕರೆದಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಹೇಳಿ ಹೊರಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಭಾಷಣವನ್ನು ಓದದೇ ಹೊರಡುವುದಕ್ಕೂ ಅವರಿಗೆ ಅಧಿಕಾರವಿದೆ ಎಂದು ಅಶೋಕ್ ಹೇಳಿದರು. ಆದರೆ ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದು ಗೂಂಡಾಗಿರಿ ಎಂದು ಕಿಡಿಕಾರಿದರು. ಅಧಿವೇಶನವನ್ನು ಕಾಂಗ್ರೆಸ್ ಕರಾಳ ರೀತಿಯಲ್ಲಿ ನಡೆಸಿದೆ ಎಂದು ಆರೋಪಿಸಿದರು.

ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಶೋಕ್, ಈ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ನೀಡುವುದಾಗಿ ತಿಳಿಸಿದರು. ಸದನದಲ್ಲಿ ಅಗೌರವ ತೋರಿದವರನ್ನು ಹೊರಹಾಕಬೇಕು ಎಂದೂ ಒತ್ತಾಯಿಸಿದರು. ಇದೇ ರಾಜ್ಯಪಾಲರು ಸರ್ಕಾರದ ಅನೇಕ ಬಿಲ್‌ಗಳಿಗೆ ಸಹಿ ಹಾಕಿದ್ದಾರೆ. ಆಗ ರಾಜ್ಯಪಾಲರು ಸರಿಯಾಗಿದ್ದರಾ ಎಂದು ಕಾಂಗ್ರೆಸ್‌ ಅನ್ನು ಪ್ರಶ್ನಿಸಿದರು.

ವಿಧಾನಸಭೆಯನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದೆ. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು, ಸರ್ಕಾರದ ಭಾಷಣ ಓದಲು ನಕಾರ: ವಿಧಾನಸಭೆಯಲ್ಲಿ ಹೈಡ್ರಾಮಾ

ನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೆಲ ಸುಧಾರಣೆಗಳನ್ನು ತಂದಿದ್ದು, ಅದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. 140 ಶಾಸಕರ ಬೆಂಬಲವಿದೆ ಎಂಬ ದರ್ಪದಲ್ಲಿ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಅವರು ಕಿಡಿಕಾರಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಟರ್ನಲ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ ರಾಜೀನಾಮೆ ಕೊಟ್ಟಿದ್ದು ಯಾಕೆ? ಮುಂದೇನು ಅವರ ದಾರಿ? – Kannada News | Reasons why Deepinder Goyal resigns as CEO of Eternal

ನವದೆಹಲಿ, ಜನವರಿ 22: ಬ್ಲಿಂಕಿಟ್ ಮತ್ತು ಜೊಮಾಟೊದ ಮಾಲಕ ಸಂಸ್ಥೆಯಾದ ಎಟರ್ನಲ್​ನ ಗ್ರೂಪ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ (Deepinder Goyal) ನಿನ್ನೆ ರಾಜೀನಾಮೆ ಕೊಟ್ಟಿದ್ದಾರೆ. ಬ್ಲಿಂಕಿಟ್​ನ ಸಿಇಒ ಆಗಿದ್ದ ಆಲ್ಬೀಂದರ್ ಧಿಂಡ್ಸ ಅವರು ಎಟರ್ನಲ್ ಗ್ರೂಪ್​ನ ಸಿಇಒ ಆಗಿ ಬಡ್ತಿ ಮತ್ತು ಜವಾಬ್ದಾರಿ ಪಡೆಯಲಿದ್ದಾರೆ. ದೀಪಿಂದರ್ ಗೋಯಲ್ ಅವರು ಸ್ಟಾಕ್ ಫೈಲಿಂಗ್​ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ಷೇರುದಾರರು ಅನುಮಸತಿಸಿದರೆ ಎಟರ್ನಲ್ ನಿರ್ದೇಶಕರ ಮಂಡಳಿಯಲ್ಲಿ ವೈಸ್ ಛೇರ್ಮನ್ ಆಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ. ಹಾಗೆಯೇ, ತಾನು ಎಟರ್ನಲ್ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಯಾಕೆ? ಮುಂದೆ ಏನು ಮಾಡಲು ಹೊರಟಿದ್ದೇನೆ ಎಂಬುದರ ಮಾಹಿತಿ ನೀಡಿದ್ದಾರೆ.

ದೀಪಿಂದರ್ ಗೋಯಲ್ ಅವರಿಗೆ ಹಲವು ಕನಸುಗಳ ಸಾಕಾರಗೊಳಿಸುವ ಹುಮ್ಮಸ್ಸು

ದೀಪಿಂದರ್ ಗೋಯಲ್ ಜೊಮಾಟೊವನ್ನು ಯಶಸ್ವಿ ಕಂಪನಿಯಾಗಿಸಿದರು. ಬ್ಲಿಂಕಿಟ್ ಅನ್ನೂ ಸೂಪರ್ ಸಕ್ಸಸ್ ಆಗಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಎಟರ್ನಲ್ ಎನ್ನುವ ಗ್ರೂಪ್ ಕಂಪನಿಯ ನಿರ್ಮಾಣವಾಗಿದ್ದು, ಇದರ ಅಡಿಯಲ್ಲಿ ಜೊಮಾಟೊ ಮತ್ತು ಬ್ಲಿಂಕಿಟ್ ಇವೆ. ಎಟರ್ನಲ್​ಗೆ ಪ್ರಮುಖ ಆದಾಯ ಮೂಲವೇ ಬ್ಲಿಂಕಿಟ್ ಆಗಿದೆ. ಯಶಸ್ವಿ ಬ್ಯುಸಿನೆಸ್ ಮಾಡಲ್ ಅನ್ನು ರೂಪಿಸಿದ್ದರ ಹಿಂದೆ ದೀಪಿಂದರ್ ಅವರ ಶ್ರಮ ಇದೆ.

ಇದನ್ನೂ ಓದಿ: ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ

ಟೆಂಪಲ್ ಡಿವೈಸ್ ಅಭಿವೃದ್ಧಿ

ದೀಪಿಂದರ್ ಗೋಯಲ್ ಕೆಲ ಕುತೂಹಲಕಾರಿ ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಟೆಂಪಲ್ ಒಂದು. ಮುಖದ ಬದಲಿಯಲ್ಲಿ, ಅಂದರೆ ಕಣ್ಣು ಮತ್ತು ಕಿವಿ ನಡುವೆ ತುಸು ಮೇಲಿನ ಪ್ರದೇಶವನ್ನು ಟೆಂಪಲ್ ಎನ್ನುತ್ತಾರೆ. ಆ ಜಾಗದಲ್ಲಿ ಧರಿಸಬಹುದಾದ ಒಂದು ಉಪಕರಣವನ್ನು (Temple Device) ಗೋಯಲ್ ಅಭಿವೃದ್ಧಿಪಡಿಸುತ್ತಿದ್ದಾರೆ. ಮಿದುಳಿಗೆ ರಕ್ತದ ಹರಿವವನ್ನು ಇದು ಅಳೆಯಬಲ್ಲುದು. ಗುರುತ್ವಾಕರ್ಷಣ ಶಕ್ತಿಯಿಂದ ಮಿದುಳಿಗೆ ರಕ್ತದ ಚಲನೆ ಕಡಿಮೆ ಆಗಬಲ್ಲುದು ಎಂದು ಕೆಲ ತಜ್ಞರು ವಾದಿಸುತ್ತಿದ್ದಾರೆ. ಟೆಂಪಲ್ ಸಾಧನದ ಮೂಲಕ ಇದನ್ನು ಪರೀಕ್ಷಿಸಲಾಗುತ್ತಿದೆ. ಇದು ನಿಜವೇ ಎಂಬುದಕ್ಕೆ ಸಾಕ್ಷ್ಯಾಧಾರ ಸಿಕ್ಕರೆ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವುದು ಸುಲಭವಾಗಬಹುದು.

ಎಲ್​ಎಟಿ ಏರೋಸ್ಪೇಸ್ ಮೂಲಕ ವೈಮಾನಿಕ ಕ್ರಾಂತಿ ಮಾಡ ಹೊರಟಿರುವ ಗೋಯಲ್

ಎಲ್​ಎಟಿ ಏರೋಸ್ಪೇಸ್ (LAT Aerospace) ಸದ್ಯ ದೀಪಿಂದರ್ ಗೋಯಲ್ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್. ದೇಶದಲ್ಲಿ ವೈಮಾನಿಕ ಕ್ರಾಂತಿ ಮಾಡಲು ಹೊರಟಂತಿದೆ. ಬಸ್ಸು, ಮೆಟ್ರೋಗಳಂತೆ ವಿಮಾನಗಳೂ ಕೂಡ ನಗರದ ವಿವಿಧ ಏರಿಯಾಗಳಲ್ಲಿ ಇಳಿಯಬಲ್ಲಂತಹ ಒಂದು ವ್ಯವಸ್ಥೆಯ ಪರಿಕಲ್ಪನೆ ಅದು. ಫ್ಲೈಯಿಂಗ್ ಟ್ಯಾಕ್ಸಿ ರೀತಿಯದ್ದು. 10-20 ಸೀಟರ್​ಗಳ ಸಣ್ಣ ಸಣ್ಣ ವಿಮಾನಗಳನ್ನು ನಿರ್ಮಿಸಲು ಯತ್ನಿಸಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯೋಗಗಳಾಗಿವೆ. ಲಂಬವಾಗಿ ಟೆಕಾಫ್ ಆಗಿ ನಂತರ ಸುರಕ್ಷಿತವಾಗಿ ಇಳಿಯಬಲ್ಲಂತೆ ಆಗುವವರೆಗೂ ಪ್ರಯೋಗಗಳು ನಡೆಯಲಿವೆ.

ಇದನ್ನೂ ಓದಿ: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ

ವಿಶ್ವದಲ್ಲಿ ಯಾರೂ ಕೂಡ ಈ ಪ್ರಯೋಗ ಮಾಡಿಲ್ಲ. ತಾವೇ ಮೊದಲು ಮಾಡುತ್ತಿರುವುದು. ಇದು ವಿಫಲವಾದರೂ ಪರವಾಗಿಲ್ಲ. ಪ್ರಯತ್ನವನ್ನಂತೂ ಮಾಡುವುದಾಗಿ ರಾಜ್ ಶಮಾನಿ ಪೋಡ್​ಕ್ಯಾಸ್ಟ್​ನಲ್ಲಿ ದೀಪಿಂದರ್ ಗೋಯಲ್ ಹೇಳಿಕೊಂಡಿದ್ದಾರೆ. ಗೋಯಲ್ ಅವರು ಇವಿಷ್ಟೂ ಮಾತ್ರವಲ್ಲ, ಇನ್ನೂ ಕೆಲ ಬ್ಯುಸಿನೆಸ್ ಹಾಗೂ ಇತರ ಪರಿಕಲ್ಪನೆಗಳನ್ನು ಇಟ್ಟುಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್. ಅವರು ವಿನ್ ಆದ ಬಳಿಕ ಇದೇ ಮೊದಲ ಬಾರಿಗೆ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ‘ಇದೆಲ್ಲ ನಿಜ ಎಂದು ನಂಬೋಕೆ ಇನ್ನೂ ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ. ಅಂದರೆ, ಅವರಿಗೆ ಇನ್ನೂ ವಾಸ್ತವಕ್ಕೆ ಬರೋಕೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಅವರು ಎಲ್ಲಾ ಅಭಿಮಾನಿಗಳಿಗೆ, ಬೆಂಬಲಿಗರಿಗೆ, ಮಾಧ್ಯಮದವರಿಗೆ, ಸೋಶಿಯಲ್ ಮೀಡಿಯಾ ಮೀಮ್ ಪೇಜ್​​​ಗಳಿಗೆ ಧನ್ಯವಾದ ಹೇಳಿದ್ದಾರೆ. ಆ ಸಂಧರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Spiritual Tips: ಹಾಸಿಗೆ ಮೇಲೆ ಕುಳಿತು ಏಕೆ ಊಟ ಸೇವನೆ ಮಾಡಬಾರದು? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | The Spiritual and Practical Consequences of Eating on the Bed: Insights

ಸನಾತನ ಸಂಪ್ರದಾಯದಲ್ಲಿ ಅನ್ನಕ್ಕೆ ವಿಶೇಷ ಸ್ಥಾನಮಾನವಿದೆ. ಅನೇಕ ಯಜ್ಞ, ಹೋಮ, ಹವನಗಳಲ್ಲಿ ಅನ್ನ ಯಜ್ಞಕ್ಕೆ ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ ‘ಅನ್ನಾತ್ ಭವಂತಿ ಭೂತಾನಿ ಪರ್ಜನ್ಯಾತ್ ಅನ್ನಸಂಭವಃ’ ಎಂದು ಹೇಳಿದಂತೆ, ಅನ್ನವು ಜೀವರಕ್ಷಕ ಮತ್ತು ಪ್ರಾಣ ರಕ್ಷಕವಾಗಿದೆ. ಅನ್ನಪೂರ್ಣೇಶ್ವರಿಯನ್ನು ನಾವು ಸದಾ ಪೂರ್ಣೆಯೆಂದು ಪೂಜಿಸುತ್ತೇವೆ. ನಾವು ಅನ್ನಕ್ಕೆ ಎಷ್ಟು ಗೌರವ ಮತ್ತು ಭಕ್ತಿ ಸಮರ್ಪಿಸುತ್ತೇವೆಯೋ, ನಮ್ಮ ದೇಹವೂ ಅಷ್ಟು ಚೆನ್ನಾಗಿರುತ್ತದೆ.

ಆದರೆ, ಅನ್ನದ ವಿಷಯದಲ್ಲಿ ಕೆಲವು ಅಭ್ಯಾಸಗಳನ್ನು ತ್ಯಜಿಸುವುದು ಅವಶ್ಯಕ. ಅವುಗಳಲ್ಲಿ ಪ್ರಮುಖವಾದುದು ಹಾಸಿಗೆ ಮೇಲೆ ಕುಳಿತು ಆಹಾರ ಸೇವಿಸುವುದು. ಹಾಸಿಗೆ ಮೇಲೆ ಕುಳಿತು ಅನ್ನ, ನೀರು, ಕಾಫಿ, ಅಥವಾ ಯಾವುದೇ ಹಣ್ಣುಗಳನ್ನು ತಿನ್ನುವುದು ಸಮಂಜಸವಲ್ಲ. ಈ ಅಭ್ಯಾಸವು ಸಕಾರಾತ್ಮಕ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಈ ಅಭ್ಯಾಸದಿಂದ ಮಕ್ಕಳಾಗಲಿ, ವಿದ್ಯಾರ್ಥಿಗಳಾಗಲಿ ಜ್ಞಾಪಕ ಶಕ್ತಿ ಕಡಿಮೆಯಾಗಲು ಕಾರಣವಾಗಬಹುದು. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ನಷ್ಟಗಳು ಸಂಭವಿಸುತ್ತವೆ. ಒಟ್ಟಾರೆ, ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತವೆ ಮತ್ತು ಕೆಲವರು ಇದನ್ನು ನರಕ ಪ್ರಾಪ್ತಿಗೆ ಸಮವೆಂದು ಹೇಳುತ್ತಾರೆ. ಹಾಸಿಗೆ ಮೇಲೆ ಆಹಾರ ಸೇವನೆಯಿಂದ ಮಹಾಲಕ್ಷ್ಮಿಗೆ ಕೋಪ ಬರುತ್ತದೆ. ಇದರ ಜೊತೆಗೆ ನಮ್ಮ ನವಗ್ರಹಗಳು ಸಹ ವಿಚಿತ್ರವಾಗಿ ಮತ್ತು ವಿರೋಧವಾಗಿ ವರ್ತಿಸುತ್ತವೆ. ಇದರಿಂದ ಸಕಲ ದೇವಾನುದೇವತೆಗಳ ಕೃಪೆಗೆ ಪಾತ್ರರಾಗಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಪರಿಣಾಮವಾಗಿ, ಮನೆಯಲ್ಲಿ ಕಲಹಗಳು, ಗಲಾಟೆಗಳು, ಕೋಪ-ತಾಪಗಳು ಹೆಚ್ಚಾಗುತ್ತವೆ. ಮನಸ್ಸು ವಿಚಲಿತವಾಗುತ್ತದೆ ಮತ್ತು ಶುದ್ಧತೆ ಇರುವುದಿಲ್ಲ. ಸನಾತನ ಸಂಪ್ರದಾಯದಲ್ಲಿ ಹಾಸಿಗೆ ಮೇಲೆ ಕುಳಿತು ಆಹಾರವಾಗಲಿ, ಕಾಫಿಯಾಗಲಿ, ಪಾನೀಯವಾಗಲಿ ಅಥವಾ ಹಣ್ಣುಗಳಾಗಲಿ ಸೇವಿಸುವುದು ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿಯನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ನಾಯಕನ ಸೋದರಳಿಯ – Kannada News | Gujarat Crime: Tragic End After Domestic Fight, Couple Die in Suspected Murder Suicide

ಅಹಮದಾಬಾದ್, ಜನವರಿ 22: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಗುಜರಾತ್ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಶಕ್ತಿಸಿನ್ಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಗೋಹಿಲ್, ತನ್ನ ಪತ್ನಿ ರಾಜೇಶ್ವರಿ ಜಡೇಜಾ ಅವರನ್ನು ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಮೂಲತಃ ಭಾವನಗರದ ಈ ದಂಪತಿ ಎರಡು ತಿಂಗಳ ಹಿಂದೆ ಮದುವೆಯಾದ ನಂತರ ಅಹಮದಾಬಾದ್‌ನಲ್ಲಿ ನೆಲೆಸಿದ್ದರು. ಇಬ್ಬರೂ ಈ ಹಿಂದೆ ಮದುವೆಯಾಗಿದ್ದರು, ಮತ್ತು ಇದು ಇಬ್ಬರಿಗೂ ಎರಡನೇ ವಿವಾಹವಾಗಿತ್ತು.

ಪೊಲೀಸ್ ಪ್ರಾಥಮಿಕ ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ದಂಪತಿ ಊಟ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಈ ಘಟನೆ ನಡೆದಿದೆ. ಯಶ್​ರಾಜ್, ರಾಜೇಶ್ವರಿ (30) ಅವರನ್ನು ಹತ್ಯೆ ಮಾಡಲು ತಮ್ಮ ಮನೆಯಲ್ಲಿ ಇರಿಸಲಾಗಿದ್ದ ಪರವಾನಗಿ ಪಡೆದ ಬಂದೂಕನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಯ ಪಂಚತಾರಾ ಹೋಟೆಲ್​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಪೊಲೀಸರ ಪ್ರಕಾರ, ರಾಜೇಶ್ವರಿ ಅವರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಲಾಗಿತ್ತು ಮತ್ತು ಯಶ್ರಾಜ್ ಕೂಡ ತಲೆಗೆ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲೇ ರಾಜೇಶ್ವರಿ ಸಾವನ್ನು ದೃಢಪಡಿಸಿದ್ದಾರೆ.ರಾಜೇಶ್ವರಿ ಮೃತಪಟ್ಟ ಬಳಿಕ, ಸ್ವಲ್ಪ ಸಮಯದ ನಂತರ, ಯಶ್ರಾಜ್ ತನ್ನ ಪ್ರಾಣವನ್ನು ತಾನೇ ಕೊನೆಗೊಳಿಸಲು ಅದೇ ಪಿಸ್ತೂಲ್ ಬಳಸಿದ್ದಾರೆಂದು ವರದಿಯಾಗಿದೆ.
ಯಶ್‌ರಾಜ್ ಮನೆಯಲ್ಲಿ ಬಂದೂಕನ್ನು ಹೇಗೆ ಮತ್ತು ಏಕೆ ಇಟ್ಟುಕೊಂಡಿದ್ದನು ಎಂಬುದರ ಜೊತೆಗೆ, ಸಾವಿಗೆ ಕಾರಣವಾದ ಸಂದರ್ಭಗಳನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಮತ್ತೊಂದು ಘಟನೆ
ಕೋಲ್ಕತ್ತಾದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಪತ್ನಿ ಮತ್ತು ಆಕೆಯ ಸಂಬಂಧಿಕರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಮೃತ ಸನ್ನಿ ಸಿಂಗ್ (34) ಅವರ ಶವವನ್ನು ನಿನ್ನೆ ರಾತ್ರಿ ಪೊಲೀಸರು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ತನಿಖೆ ಆರಂಭವಾಗಿದೆ. ಆತನ ಕುಟುಂಬ ಸದಸ್ಯರು ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ, ಯುವಕನ ಪತ್ನಿ ಮತ್ತು ಭಾವನ ಕಡೆಗೆ ಬೆರಳು ತೋರಿಸಿದರು.

ಸಿಂಗ್ ಅವರ ಮೃತದೇಹ ಅದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪುನಿತಾ ವಾಸಿಸುತ್ತಿದ್ದ ಕೋಣೆಯ ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ, ಅವರು ಬಾಲ್ಕನಿಯಿಂದ ಕೆಳಗೆ ಇಳಿದು, ಮನೆಯ ಬಾಗಿಲು ತೆರೆದು, ಒಳಗೆ ಹೋಗಿ ನೇತಾಡುತ್ತಿರುವ ಶವವನ್ನು ಕಂಡುಕೊಂಡಿದ್ದಾರೆ. ಶೀಘ್ರದಲ್ಲೇ ಸರ್ಶುನಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಶವವನ್ನು ವಶಪಡಿಸಿಕೊಂಡರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Weekly Career Predictions: ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಉದ್ಯೋಗ ದೊರೆಯುವ ಸಾಧ್ಯತೆಯಿದೆ – Kannada News | Career Predictions Jan 25 31, 2026: Navigating Job Challenges and New Opportunities

25-01-2026ರಿಂದ 31  ರವರೆಗೆ ವೃತ್ತಿಯು ಅಧಿಕಾರಿಗಳ ಆಳ್ವಿಕೆಯಲ್ಲಿ ಇರಲಿದೆ. ಕೆಲವರಿಗೆ ಮುಂದಿನ ದಾರಿ ಕತ್ತಲೆನಿಸುವ ಸ್ಥಿತಿ. ಶ್ರಮ ಅಧಿಕವಾಗಲಿದೆ. ಸ್ವಂತ ಉದ್ಯಮಿಗಳಿಗೆ ನಷ್ಟವನ್ನು ತುಂಬಿಕೊಳ್ಳುವ ಯೋಚನೆ ಬರಲಿದ್ದು ಅಡ್ಡ ದಾರಿಗಳು ಗಮನ ಸೆಳೆಯಬಹುದು‌. ಸರಿಯಾದ ಮಾರ್ಗವಿದ್ದರೆ ಭಯದ ಅವಶ್ಯಕತೆ ಇಲ್ಲ. ದೈವ ನಿಮ್ಮನ್ನು ಕಾಪಾಡುತ್ತದೆ.

ಮೇಷ ರಾಶಿ:

ಈ ವಾರ ವೃತ್ತಿಜೀವನ ಹೊಸ ಎತ್ತರಕ್ಕೆ ಏರಲಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭ ಸುದ್ದಿ ಸಿಗಲಿದೆ.

ವೃಷಭ ರಾಶಿ:

ನಿಮಗೆ ಕೆಲಸದ ಸ್ಥಳದಲ್ಲಿ ಈ ವಾರ ಸ್ಥಿರತೆ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವ ಬಲವಾದ ಲಕ್ಷಣಗಳಿವೆ. ಹಿರಿಯ ಅಧಿಕಾರಿಗಳೊಂದಿಗೆ ವಾದ ಮಾಡಬೇಡಿ.

ಮಿಥುನ ರಾಶಿ:

ಮೂರನೇ ರಾಶಿಗೆ ಈ ವಾರ ಒಂದಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳು ಎದುರಾಗಬಹುದು. ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಪ್ರಗತಿ ಕಂಡುಬರಲಿದೆ.

ಕರ್ಕಾಟಕ ರಾಶಿ:

ನಿಮ್ಮ ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಗೌರವ ಸಿಗಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯುತ್ತದೆ.

ಸಿಂಹ ರಾಶಿ:

ಈ ವಾರ ನಿಮ್ಮ ಕೆಲಸದ ಬಗ್ಗೆ ಇತರರಿಂದ ಮೆಚ್ಚುಗೆ ಪಡೆಯುವಿರಿ. ಆದರೆ ಕಚೇರಿ ರಾಜಕೀಯದಿಂದ ದೂರವಿರುವುದು ಉತ್ತಮ.

ಕನ್ಯಾ ರಾಶಿ:

ಆರನೇ ರಾಶಿಗೆ ವೃತ್ತಿಯಲ್ಲಿ ಪ್ರಾಯೋಗಿಕ ನಿರ್ಧಾರಗಳು ಮುಖ್ಯ. ಕೆಲಸದ ಹೊರೆ ಹೆಚ್ಚಾದರೂ ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿರುತ್ತದೆ.

ತುಲಾ ರಾಶಿ:

ನೀವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ. ವ್ಯಾಪಾರಸ್ಥರಿಗೆ ಈ ವಾರ ಸಾಧಾರಣ ಲಾಭ ಇರಲಿದೆ.

ವೃಶ್ಚಿಕ ರಾಶಿ:

ಈ ವಾರ ರಹಸ್ಯ ಮೂಲಗಳಿಂದ ಬಂದ ಅವಕಾಶಗಳು ನಿಮ್ಮ ವೃತ್ತಿಯ ದಿಕ್ಕನ್ನೇ ಬದಲಿಸಬಹುದು. ಸಂಶೋಧನೆ ಮತ್ತು ಭದ್ರತಾ ಕ್ಷೇತ್ರದಲ್ಲಿ ಇರುವವರಿಗೆ ಯಶಸ್ಸು ಸಿಗಲಿದೆ.

ಧನು ರಾಶಿ:

ನಿಮಗೆ ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ರಾಜಕೀಯ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ.

ಮಕರ:

ಹತ್ತನೇ ರಾಶಿಯವರಿಗೆ ನಿಮ್ಮ ಕಾರ್ಯಕ್ಷಮತೆಗೆ ಹಿರಿಯರ ಆಶೀರ್ವಾದ ಸಿಗಲಿದೆ. ದೂರ ಪ್ರಯಾಣದ ಕೆಲಸಗಳಲ್ಲಿ ಲಾಭದಾಯಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಕುಂಭ ರಾಶಿ:

ಶನಿಯ ಆಧಿಪತ್ಯದ ಈ ರಾಶಿಗೆ ಶಿಕ್ಷಕ ವೃತ್ತಿ ಅಥವಾ ಬಟ್ಟೆ ವ್ಯಾಪಾರದಲ್ಲಿ ಇರುವವರಿಗೆ ಈ ವಾರ ಅತ್ಯಂತ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯಲಿದೆ.

ಮೀನ ರಾಶಿ:

ಈ ವಾರ ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಸಹೋದ್ಯೋಗಿಗಳ ಜೊತೆ ಕಿರಿಕಿರಿ ಉಂಟಾಗದಂತೆ ಎಚ್ಚರವಹಿಸಿ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಕೋಮುದ್ವೇಷದ ಭಾಷಣ: ಕಲ್ಲಡ್ಕ ಪ್ರಭಾಕರ್​​​ ಭಟ್ ಮೇಲೆ ಮತ್ತೆ ಎಫ್​​ಐಆರ್ ದಾಖಲು – Kannada News | RSS Leader Kalladka Bhat Booked Over Provocative Speech; BNS Charges in Puttur

ಮಂಗಳೂರು, ಜ.22: ಆರ್​​​​ಎಸ್​​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್​​​ ಭಟ್​​ (Kalladka Prabhakar Bhat) ವಿರುದ್ಧ ಪತ್ತೆ ಎಫ್​​ಐಆರ್​​ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಆರೋಪದಡಿ ಪುತ್ತೂರಿನಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪುತ್ತೂರಿನ ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಅವರ ಮೇಲೆ ದೂರು ದಾಖಲಿಸಲಾಗಿದೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿದೆ ಎಂದು ಹೇಳಲಾಗಿದೆ. ಪುತ್ತೂರು ನಿವಾಸಿ ರಾಮಚಂದ್ರ ಕೆ. ಎಂಬುವವರು ಕಲ್ಲಡ್ಕ ಪ್ರಭಾಕರ್​​​ ಭಟ್​​ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.

ಇನ್ನು ಇದರ ಜತೆಗೆ ಕಲ್ಲಡ್ಕ ಪ್ರಭಾಕರ್​​ ಭಟ್​​ ಅವರ ಈ ಭಾಷಣವನ್ನು ಪ್ರಸಾರ ಮಾಡಿದ ‘ವಿಕಸನ ಟಿವಿ’ ಯೂಟ್ಯೂಬ್ ಚಾನಲ್ ಹಾಗೂ ಆಯೋಜಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಜನವರಿ 12ರಂದು ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಕೋಮುದ್ವೇಷದ ವಿಚಾರಗಳು ಇತ್ತು ಎಂದು ಹೇಳಲಾಗಿದೆ. ಅವರು ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರು ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ ಎಂದು ಹೇಳಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿವಿಧ ಗಂಭೀರ ಸೆಕ್ಷನ್‌ಗಳ ಮೂಲಕ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬೇಡಿ ಎಂದ ಕಾಂಗ್ರೆಸ್​​ನ ಮಾಜಿ ಸಚಿವ

ಮಾನವ ಬಂಧುತ್ವ ವೇದಿಕೆಯಿಂದ ದೂರು:

ಇನ್ನು ಕೋಮುದ್ವೇಷದ ಭಾಷಣ ಮಾಡಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷರಾದ ರಾಮಚಂದ್ರ ಕೆ. ಅವರು ಪೋಲಿಸರಿಗೆ ದೂರು ನೀಡಿದ್ದಾರೆ. ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಪ್ರಭಾಕರ್​​ ಭಟ್​ ಮಾಡುತ್ತಿದ್ದಾರೆ. ಈ ಹಿಂದೆ ನ್ಯಾಯಾಲಯವು ದ್ವೇಷ ಭಾಷಣ ಮಾಡದಂತೆ ಅವರಿಗೆ ಷರತ್ತು ವಿಧಿಸಿದ್ದರೂ, ಅದರ ಉಲ್ಲಂಘನೆ ಮಾಡಿ ಮತ್ತೆ ಇಂತಹ ಭಾಷಣವನ್ನು ಮಾಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಿಎನ್ ಎಸ್ (BNS) ಸೆಕ್ಷನ್ 196, 299, 302, 353(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಇನ್ಮುಂದೆ ಯಾವ ಕಾರಣಕ್ಕೂ ದ್ವೇಷದ ಭಾಷಣ ಮಾಡುವುದಿಲ್ಲ ಎಂದು ಹೇಳಿದರೂ. ಇದೀಗ ಅದರ ಉಲ್ಲಂಘನೆ ಆಗಿದೆ. ಇದೀಗ ಅವರಿಗೆ ಅವರಿಗೆ ಕಾನೂನುಬದ್ಧವಾಗಿ ದೊಡ್ಡ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:46 am, Thu, 22 January 26

Source link