Category Archives: Blog

Your blog category

ಭಾಷಣ ಮಾಡಲ್ಲ ಎಂದ ರಾಜ್ಯಪಾಲರು: ವಿಶೇಷ ಅಧಿವೇಶನ ರದ್ದಾಗುತ್ತಾ? ಸರ್ಕಾರದ ಮುಂದಿರುವ ಆಯ್ಕೆಗಳೇನು? – Kannada News | Karnataka Governor Rejects Joint Session Speech; Constitutional Crisis Expected

ಬೆಂಗಳೂರು, ಜನವರಿ 21: ನಾಳೆಯಿಂದ ಜ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದ್ದು, ನಿಯಮದಂತೆ ಜಂಟಿ ಅಧಿವೇಶನ ಉದ್ದೇಶಿಸಿ ಗವರ್ನರ್​​ ಭಾಷಣ ಮಾಡಬೇಕು. ಆದರೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣಕ್ಕೆ ಗವರ್ನರ್ ನಿರಾಕರಿಸಿರುವ ಹಿನ್ನೆಲೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರು ಆರಂಭಿಸಬೇಕು. ಆದರೆ ಗವರ್ನರ್​​ ನಡೆ ಗಮನಿಸಿದೆ ನಾಳೆಯಿಂದ ವಿಶೇಷ ಅಧಿವೇಶನ ಆರಂಭವಾಗುವ ಸಾಧ್ಯತೆಯಿಲ್ಲ ಎನ್ನುವ ಮಾತುಗಳೀಗ ಕೇಳಿಬಂದಿವೆ. ಈ ನಡುವೆ ಲೋಕಭವನಕ್ಕೆ ಸಚಿವ ಹೆಚ್.ಕೆ. ಪಾಟೀಲ್ ನೇತೃತ್ವದ ನಿಯೋಗ ಭೇಟಿ ನೀಡಿ ರಾಜ್ಯಪಾಲರಿಗೆ ಸಾಂವಿಧಾನಿಕ ಹುದ್ದೆ ಸ್ಥಾನಮಾನಗಳ ಬಗ್ಗೆ ಮಾಹಿತಿ ನೀಡಿದೆ.

ನಿಯಮಾವಳಿ ಹೇಳೋದೇನು?

ನಿಯಮಾವಳಿ ಪ್ರಕಾರ ರಾಜ್ಯಪಾಲರು ಸದನಕ್ಕೆ ಹಾಜರಾಗುವುದಿಲ್ಲ ಎಂದು ನಿರಾಕರಿಸಲು ಸಾಧ್ಯವಿಲ್ಲ. ಅವರ ಕಡ್ಡಾಯ ಕರ್ತವ್ಯಗಳಲ್ಲಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುವುದೂ ಕೂಡ ಒಂದು. ಆರ್ಟಿಕಲ್​​ 176(1)ರ ಪ್ರಕಾರ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡಬೇಕು. ಪ್ರತಿ ವರ್ಷದ ಮೊದಲ ಅಧಿವೇಶನ ಅಥವಾ ಹೊಸ ಸರ್ಕಾರ ರಚನೆಯಾದ ನಂತರದ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಕಡ್ಡಾಯ. ಭಾಷಣದ ವಿಷಯದ ಮೇಲೆ ರಾಜ್ಯಪಾಲರು ಸ್ವತಂತ್ರ ನಿರ್ಣಯ ಕೈಗೊಳ್ಳುವಂತಿಲ್ಲ. ರಾಜ್ಯಪಾಲರು ಹೀಗೆ ನಿರಾಕರಿಸಿದರೆ ಅದು ಸಾಂವಿಧಾನಿಕ ಬಿಕ್ಕಟ್ಟು. ಕಾನೂನು ಬಾಹಿರ ಎಂಬುದಕ್ಕಿಂತ ಹೆಚ್ಚಾಗಿ ಇದು ಸಾಂವಿಧಾನಿಕ ಕರ್ತವ್ಯದ ನಿರಾಕರಣೆ ಎನ್ನಲಾಗಿದೆ. ಇನ್ನು ​ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಕರಡು ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ಡ್ರಾಫ್ಟ್​​ ಸ್ಪೀಚ್​​ನಲ್ಲಿ ರಾಜ್ಯಪಾಲರಿಗೆ ಸಮ್ಮತಿಯಿಲ್ಲದ ಅಂಶಗಳಿದ್ದರೆ ಅಥವಾ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ ಎಂದು ಅನಿಸಿದರೆ ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ ರಾಜ್ಯಪಾಲರು ಸ್ವತಂತ್ರ ನಿರ್ಣಯ ಕೈಗೊಳ್ಳುವಂತಿಲ್ಲ.

ಇದನ್ನೂ ಓದಿ: ಜನವರಿ 22ರಿಂದ 31ರ ವರೆಗೆ ವಿಶೇಷ ಅಧಿವೇಶನಕ್ಕೆ ಕ್ಯಾಬಿನೆಟ್​​ ನಿರ್ಧಾರ; ಕಾರಣ ಏನು?

ಸರ್ಕಾರದ ಮುಂದಿರುವ ಆಯ್ಕೆಗಳೇನು?

  • ಸಂವಿಧಾನದ 176ನೇ ವಿಧಿಯ ಪ್ರಕಾರ ರಾಜ್ಯಪಾಲರು ಕಡ್ಡಾಯವಾಗಿ ಭಾಷಣವನ್ನ ಓದಲೇಬೇಕೆಂಬ ವಾದ ಮುಂದಿಡುವುದು
  • ವೈಯಕ್ತಿಕ ಅಂಶಗಳನ್ನು ಓದಲು ಇಲ್ಲವೇ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇಲ್ಲ ಎಂದು ಪ್ರತಿಪಾದಿಸುವುದು
  • ಇದಕ್ಕೂ ಒಪ್ಪದೇ ಇದ್ದಲ್ಲಿ ರಾಜ್ಯಪಾಲರ ಮನವೊಲಿಕೆ ಯತ್ನ ನಡೆಸುವುದು
  • ಈ ವೇಳೆ ನರೇಗಾ ವಿಚಾರವನ್ನ ಭಾಷಣದಲ್ಲಿ ಕೈಬಿಡಬೇಕೆಂದು ರಾಜ್ಯಪಾಲರ ಪಟ್ಟು ಹಿಡಿಯುವ ಸಾಧ್ಯತೆ
  • ಆಗಲೂ ರಾಜ್ಯಪಾಲರ ಮಾತಿಗೆ ಒಪ್ಪದಿದ್ದಲ್ಲಿ ತುರ್ತು ಸಚಿವ ಸಂಪುಟ ಸಭೆ ಕರೆಯುವ ಸಾಧ್ಯತೆ
  • ಕೆಲ ಕಾಲ ವಿಶೇಷ ಅಧಿವೇಶನ ಮುಂದೂಡಿ ತುರ್ತು ಸಚಿವ ಸಂಪುಟ ಕರೆಯಲು ಅವಕಾಶ
  • ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಳ್ಳಲು ಅವಕಾಶ
  • ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳಿ ಎಂದು ಒತ್ತಾಯಿಸಿ ಕೇಂದ್ರಕ್ಕೆ ನಿರ್ಣಯ ಪಾಸ್ ಮಾಡುವ ಸಾಧ್ಯತೆ
  • ಜೊತೆಗೆ ರಾಜ್ಯಪಾಲರ ನಡೆ ವಿರೋಧಿಸಿ ರಾಷ್ಟ್ರಪತಿಗಳಿಗೆ ದೂರು ನೀಡಲು ಅವಕಾಶ
  • ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ನಡೆಸಬಹುದು

ಸ್ಪೀಕರ್​​, ಸಭಾಪತಿ ಅಭಿಪ್ರಾಯವೇನು?

ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ಸರ್ಕಾರ ಕೊಟ್ಟಿದ್ದೇ ಫೈನಲ್ ಆಗಿದ್ದು, ರಾಜ್ಯಪಾಲರು ತಮ್ಮದೇ ಲೈನ್ ಸೇರಿಸಲು ಕಟ್ ಮಾಡಲು ಬರಲ್ಲ. ಸರ್ಕಾರ ನೀಡಿದ ಭಾಷಣವನ್ನ ಓದೋದು ರಾಜ್ಯಪಾಲರ ಕರ್ತವ್ಯ ಎಂದು ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಮ್ಮ ರಾಜ್ಯಪಾಲರು ಪ್ರಬುದ್ಧರು, ಹಿರಿಯರು, ಸಂವಿಧಾನ, ನಿಯಮ ಎಲ್ಲ ಗೊತ್ತಿದೆ. ಅವರು ಸಂವಿಧಾನದ ಪ್ರಕಾರ ನಡೆಯುತ್ತಾರೆ ಅಂತಾ ನನಗೆ ನಂಬಿಕೆ ಇದೆ. ಸರ್ಕಾರ ಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಬೇಕು ಅಂತಾ ಸಭಾಪತಿ ಹೊರಟ್ಟಿ ಹೇಳಿರೋದನ್ನ ನಾನು ಅನುಮೋದಿಸುತ್ತೇನೆ ಎಂದು ಸ್ಪೀಕರ್​​ ಖಾದರ್​​ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೆಡ್​​​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ, ಯಾವುದು ಗೊತ್ತಾ? – Kannada News | Republic Day 2025: Karnataka’s Innovative Tableau Highlights Agri Tech and Atmanirbhar Bharat

ದೆಹಲಿ, ಜ.21: ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಈ ಹಿಂದೆಯೂ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಹಲವಾರು ಬಾರಿ ಅವಕಾಶಗಳು ಸಿಕ್ಕಿತು. ಇದೀಗ ಮತ್ತೊಮ್ಮೆ ಕರ್ನಾಟಕಕ್ಕೆ ಅವಕಾಶ ಸಿಕ್ಕಿದೆ. ಈ ಬಾರಿ ವಿಶೇಷ ಸ್ತಬ್ಧಚಿತ್ರಗಳನ್ನು ಕರ್ನಾಟಕ ನೀಡಿಲಿದೆ. ಇದಕ್ಕೂ ಮುನ್ನ ಇದರ ಪರೇಡ್​​​ ಅಭ್ಯಾಸಗಳು ನಡೆಯಲಿದೆ ಎಂದು ಹೇಳಲಾಗಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಈ ಪರೇಡ್​​​ ನಡೆಯಲಿದೆ. ಈ ಬಾರಿ ಟ್ಯಾಬ್ಲೋ ಮಿಲೆಟ್ಸ್ ಟು ಮೈಕ್ರೋಚಿಪ್ ಪರಿಕಲ್ಪನೆಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಮಿಲೆಟ್ಸ್ ಟು ಮೈಕ್ರೋಚಿಪ್ ಸ್ತಬ್ಧಚಿತ್ರದ ಮೂಲಕ ಕರ್ನಾಟಕದ ಬೆಳೆಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆಯ ಬಗ್ಗೆ ಈ ಟ್ಯಾಬ್ಲೋದಲ್ಲಿ ಪ್ರದರ್ಶನ ಮಾಡಲಾಗುವುದು. ಇದರ ಜತೆಗೆ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಬಗ್ಗೆಯೂ ಟ್ಯಾಬ್ಲೋದಲ್ಲಿ ಮಾಹಿತಿ ನೀಡಲಾಗುವುದು. ಈ ಮೂಲಕ ಆತ್ಮನಿರ್ಭರ ಭಾರತದ ಹಾದಿ ಸ್ವಾವಲಂಬನೆ ಬಗ್ಗೆ ಮಾಹಿತಿ ನೀಡಲಾಗುವುದು. ಇದು ರಾಜ್ಯಗಳಿಂದ ಪ್ರಾರಂಭಾಗಲಿದೆ ಎಂಬ ಉದ್ದೇಶವನ್ನು ಕೂಡ ಈ ಟ್ಯಾಬ್ಲೋದಲ್ಲಿ ತಿಳಿಸಲಾಗುವುದು. ಆತ್ಮನಿರ್ಭರ ಭಾರತಕ್ಕೆ ಕರ್ನಾಟಕದ ಕೊಡುಗೆ ಏನು ಎಂಬ ಬಗ್ಗೆ ಇಲ್ಲಿ ತಿಳಸಲಾಗುವುದು. ಕರ್ನಾಟಕದ ವಿಶಿಷ್ಟ ಕಲೆಗಳಾದ ಯಕ್ಷಗಾನ ಅಥವಾ ಕಂಸಾಳೆ ನೃತ್ಯದ ಲೋಗೋಗಳನ್ನು ಸ್ತಬ್ಧಚಿತ್ರದ ವಿವಿಧ ಭಾಗಗಳಲ್ಲಿ ಅಳವಡಿಸಲಾಗುವುದು.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಖ್ಯಾತ ಕಲಾ ನಿರ್ದೇಶಕರು ಮತ್ತು ರಾಜ್ಯದ ಹಿರಿಯ ಕಲಾವಿದರು ಈ ಸ್ತಬ್ಧಚಿತ್ರದ ವಿನ್ಯಾಸ ಮಾಡಿದ್ದಾರೆ. ಇದರ ಜತೆಗೆ ಈ ಸ್ತಬ್ಧಚಿತ್ರಕ್ಕೆ ಹಿನ್ನಲೆ ಸಂಗೀತವಾಗಿ ಕರ್ನಾಟಕದ ಜನಪದ ಶೈಲಿಯ ಸಂಗೀತ ಮತ್ತು ನಾಡಗೀತೆಯ ಧಾಟಿಯನ್ನು ಬಳಸಲಾಗುತ್ತದೆ. ಕಳೆದ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೊತ್ಸವ ಪರೇಡ್‌ನಲ್ಲಿ ಐತಿಹಾಸಿಕ ನಗರವಾದ ಲಕ್ಕುಂಡಿಯ ವೈಶಿಷ್ಟ್ಯಪೂರ್ಣ ಹಾಗೂ ಕಲಾತ್ಮಕ ದೇವಾಲಯಗಳ ಸ್ತಬ್ಧ ಚಿತ್ರ ಗಮನ ಸೆಳೆದಿತ್ತು. ಕರ್ನಾಟಕವು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸತತವಾಗಿ ಭಾಗವಹಿಸುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. 2023 ರಲ್ಲಿ ‘ನಾರಿ ಶಕ್ತಿ’ ಅಡಿಯಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿತ್ತು. 2024ರಲ್ಲಿ ‘ಮೈಸೂರು ಪೇಟ’ ಮತ್ತು ಸಾಂಸ್ಕೃತಿಕ ಪರಂಪರೆಯ ಸ್ತಬ್ಧಚಿತ್ರ ಪ್ರದರ್ಶಿಸಲಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಟಾಸ್ ಸೋತ ಭಾರತ, ಕಿಶನ್​ಗೆ ಅವಕಾಶ; ಹೀಗಿದೆ ಪ್ಲೇಯಿಂಗ್ 11 – Kannada News | Ind vs NZ 1st T20: Head to Head, toss and Playing XI updates

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಎದುರು ನೋಡುತ್ತಿದೆ. ಮಾತ್ರವಲ್ಲದೆ 2026 ರ ಟಿ20 ವಿಶ್ವಕಪ್‌ಗೆ (2026 T20 World Cup) ಸಿದ್ಧತೆ ನಡೆಸುವತ್ತಲೂ ತನ್ನ ಗಮನಹರಿಸಲಿದೆ. ಟೀಂ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದರೆ, ಮಿಚೆಲ್ ಸ್ಯಾಂಟ್ನರ್ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಲಿದೆ.

ಟಾಸ್ ಸೋತ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ನಾವು ಕೂಡ ಟಾಸ್ ಗೆದ್ದಿದ್ದರೆ ಮೊದಲು ಬ್ಯಾಟಿಂಗ್‌ ಮಾಡುತ್ತಿದ್ದೇವು. ಏಕೆಂದರೆ ಕಳೆದೆರಡು ದಿನಗಳಿಂದ ನಾವಿಲ್ಲಿ ಅಭ್ಯಾಸ ನಡೆಸಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗಲಿದೆ ಎಂದಿದ್ದಾರೆ. ಇನ್ನು ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊದರ ಬಳಗವೂ ಹೊರಬಿದ್ದಿದೆ.

ಹೆಡ್ ಟು ಹೆಡ್ ದಾಖಲೆ

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದುವರೆಗೆ ಒಟ್ಟು 25 ಟಿ20 ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ, ಟೀಂ ಇಂಡಿಯಾ 14 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 10 ಪಂದ್ಯಗಳನ್ನು ಗೆದ್ದಿದೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 11 ಟಿ20 ಪಂದ್ಯಗಳಲ್ಲಿ ಏಳರಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿರುವ ಟೀಂ ಇಂಡಿಯಾ ಭಾರತದಲ್ಲಿಯೂ ಮೇಲುಗೈ ಸಾಧಿಸಿದೆ. ಮತ್ತೊಂದೆಡೆ, ಕಿವೀಸ್ ಭಾರತದಲ್ಲಿ ಕೇವಲ ನಾಲ್ಕು ಟಿ20 ಪಂದ್ಯಗಳನ್ನು ಗೆದ್ದಿದೆ.

14 ವರ್ಷಗಳ ಭಾರತದ ಪ್ರಾಬಲ್ಯ

ಕಳೆದ 14 ವರ್ಷಗಳಲ್ಲಿ ನ್ಯೂಜಿಲೆಂಡ್ ಭಾರತದಲ್ಲಿ ಭಾರತದ ವಿರುದ್ಧ ಟಿ20 ಸರಣಿಯನ್ನು ಗೆದ್ದಿಲ್ಲ. 2012 ರಲ್ಲಿ, ನ್ಯೂಜಿಲೆಂಡ್ ಭಾರತದ ವಿರುದ್ಧ ತವರಿನಲ್ಲಿ ತನ್ನ ಏಕೈಕ ಟಿ20 ಸರಣಿಯನ್ನು ಗೆದ್ದಿತು. ಆ ಸಮಯದಲ್ಲಿ ಭಾರತ 0-1 ಅಂತರದಲ್ಲಿ ಸರಣಿ ಸೋತಿತ್ತು.

ಉಭಯ ತಂಡಗಳು

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ತಂಡ: ಟಿಮ್ ರಾಬಿನ್ಸನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಇಶ್ ಸೋಧಿ ಮತ್ತು ಜಾಕೋಬ್ ಡಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:41 pm, Wed, 21 January 26

Source link

ಡಾಲರ್ ಎದುರು ರುಪಾಯಿ ಮೌಲ್ಯ 91.70ಕ್ಕೆ ಕುಸಿತ; ಇದೇ ಟ್ರೆಂಡ್ ಇದ್ದರೆ 93ಕ್ಕೆ ಇಳಿಯಬಹುದು ಎಂದ ತಜ್ಞರು – Kannada News | Rupee fell to new low of 91.70 against Dollar on Jan 21st

ನವದೆಹಲಿ, ಜನವರಿ 21: ಭಾರತದ ರುಪಾಯಿ ಕರೆನ್ಸಿಯ ದುರ್ಬಲ ಪ್ರದರ್ಶನ (Dollar vs Rupee) ಮುಂದುವರಿದಿದೆ. ಬೇರೆ ಬೇರೆ ಕಾರಣಗಳಿಗೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ನಿನ್ನೆ 90.98 ಇದ್ದ ರುಪಾಯಿ ಮೌಲ್ಯ ಇವತ್ತು 91 ದಾಟಿ ಹೋಗಿದೆ. ಬುಧವಾರ ಒಂದು ಹಂತದಲ್ಲಿ 76 ಪೈಸೆ ಕುಸಿತಗೊಂಡು 91.74ಕ್ಕೆ ಹೋಗಿದ್ದ ರುಪಾಯಿ, ಅಂತಿಮವಾಗಿ 91.70ಗೆ ನಿಂತಿದೆ. ಇದು ಡಾಲರ್ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ ಎನಿಸಿದೆ.

ಡಾಲರ್ ಎದುರು ರುಪಾಯಿ ದುರ್ಬಲ ಪ್ರದರ್ಶನಕ್ಕೆ ಕಾರಣಗಳಿವು..

ವಿದೇಶೀ ಹೂಡಿಕೆಗಳು ಹೊರಹೋಗುವುದು ಮುಂದುವರಿಯುತ್ತಲೇ ಇದೆ; ಆಮದು ಅವಶ್ಯಕತೆ ಹೆಚ್ಚುತ್ತಿದೆ; ಡಾಲರ್ ಕರೆನ್ಸಿ ಪ್ರಬಲಗೊಳ್ಳುತ್ತಿದೆ. ರುಪಾಯಿ ಮೌಲ್ಯ ಕುಸಿಯಲು ಕಾರಣವಾಗಿರುವ ಅಂಶಗಳಲ್ಲಿ ಈ ಮೂರು ಇವೆ. ಅಮೆರಿಕದ ಟ್ಯಾರಿಫ್ ಬೆದರಿಕೆಯೂ ಹೂಡಿಕೆಗಳ ಹೊರಹರಿವಿಗೆ ಕಾರಣವಾಗಿರಬಹುದು.

ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಡಿಸೆಂಬರ್​ನಲ್ಲಿ ಕನಿಷ್ಠ ಮಟ್ಟಕ್ಕೆ ಹೋಗಿತ್ತು. ಜನವರಿಯಲ್ಲಿ ಚೇತರಿಸಿಕೊಂಡಿತ್ತು. ಆದರೆ, ಕಳೆದ ಐದಾರು ಸೆಷನ್​ಗಳಿಂದ ರುಪಾಯಿ ಸತತವಾಗಿ ಹಿನ್ನಡೆ ಕಾಣುತ್ತಿದೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಡಾಲರ್ ಎದುರು 93ಕ್ಕೆ ಕುಸಿಯುತ್ತಾ ರುಪಾಯಿ?

ಈಗಿರುವ ಒತ್ತಡಗಳು ಹೀಗೇ ಮುಂದುವರಿದಲ್ಲಿ ರುಪಾಯಿ ಮೌಲ್ಯವು 92.5ರಿಂದ 93ರವರೆಗೆ ಕುಸಿಯಬಹುದು ಎಂದು ಎಎನ್​ಝಡ್ ರಿಸರ್ಚ್​ನ ಧೀರಜ್ ನಿಮ್ ಹೇಳುತ್ತಾರೆ. ಆದರೆ, ಜಿಡಿಪಿ ಉತ್ತಮವಾಗಿ ವೃದ್ಧಿಸಿದರೆ, ಕಾರ್ಪೊರೇಟ್ ಗಳಿಕೆಗಳು ಉತ್ತಮವಾಗಿದ್ದರೆ, ಎಫ್​ಡಿಐ ಒಳಹರಿವು ಹೆಚ್ಚಿದರೆ ರುಪಾಯಿ ಕರೆನ್ಸಿ ಮತ್ತೆ ಬಲಗೊಳ್ಳಬಹುದು ಎನ್ನುವುದು ಇವರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ‘ಐಪಿಎಲ್​ಗೆ ಚಿನ್ನಸ್ವಾಮಿ ರೆಡಿ ಇದ್ರು ಆರ್​ಸಿಬಿ ಮನಸ್ಸು ಮಾಡ್ತಿಲ್ಲ’; ವೆಂಕಟೇಶ್ ಪ್ರಸಾದ್ – Kannada News | Chinnaswamy IPL Doubt: RCB Hesitates, KCA Promises Cricket Return to Bengaluru

ಚಿನ್ನಸ್ವಾಮಿ ಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದು ಹತ್ತಿರ ಹತ್ತಿರ ವರ್ಷವಾಗುತ್ತಾ ಬರುತ್ತಿದೆ. ಆರ್​ಸಿಬಿ (RCB) ವಿಜಯೋತ್ಸವದ ಮೆರವಣಿಗೆಯಲ್ಲಿ ಆದ ಅವಘಡದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಆದರೆ ವೆಂಕಟೇಶ್ ಪ್ರಸಾದ್ ಕೆಎಸ್​ಸಿಎ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಚಿನ್ನಸ್ವಾಮಿಗೆ ಕ್ರಿಕೆಟ್ ಮರಳಿ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಮುಂಬರುವ ಐಪಿಎಲ್​ (IPL) ಪಂದ್ಯಾವಳಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬಹುದು ಎಂದು ಆಸೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದುವರೆಗೆ ಸಿಹಿ ಸುದ್ದಿ ಸಿಕ್ಕಿಲ್ಲ. ಇದೆಲ್ಲದರ ನಡುವೆ ಇಂದು ಕೆಎಸ್​ಸಿಎಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಚಿನ್ನಸ್ವಾಮಿಗೆ ಕ್ರಿಕೆಟ್ ಪಂದ್ಯಗಳನ್ನು ಮರಳಿ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಸರ್ಕಾರ ಕೂಡ ನಮ್ಮ ಜೊತೆಗಿದೆ. ಆದರೆ ಆರ್​ಸಿಬಿ ಯಾಕೋ ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸಲು ಅಷ್ಟು ಒಲವು ತೋರಿಸುತ್ತಿಲ್ಲ ಎಂದಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವುದು ಅನುಮಾನ ಎಂದು ತೋರುತ್ತಿದೆ.

ಆರ್​ಸಿಬಿ ಒಲವು ತೋರಿಸುತ್ತಿಲ್ಲ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೆಂಕಟೇಶ್ ಪ್ರಸಾದ್, ‘ಬೆಂಗಳೂರಿನಲ್ಲಿ ಮತ್ತೆ ಐಪಿಎಲ್​ ಪಂದ್ಯ ಆಡಿಸಲು ಸಿದ್ಧರಿದ್ದೇವೆ. ಆದ್ರೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಅಷ್ಟು ಒಲವು ತೋರಿಸುತ್ತಿಲ್ಲ. ಹೀಗಾಗಿ ಇಲ್ಲಿನ ಕ್ರಿಕೆಟ್ ಅಭಿಮಾನಿಗಳಿಗಾಗಿ ನೀವೂ ಇಲ್ಲಿ ಆಡಬೇಕು ಎಂದು ಆರ್​ಸಿಬಿ ಮ್ಯಾನೇಜ್​ಮೆಂಟ್ ಬಳಿ ಮನವಿ ಮಾಡುತ್ತಿದ್ದೇವೆ. ಅಲ್ಲದೆ ನಿಮಗೆ ಏನೇ ಸಂಶಯಗಳಿದ್ರು ಸರ್ಕಾರದ ಜೊತೆ ಮಾತನಾಡಿ ಎಂಬ ಸಲಹೆಯನ್ನು ನೀಡಿದ್ದೇವೆ. ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ತನ್ನ ಪಂದ್ಯಗಳನ್ನು ಆಡಬೇಕು ಅನ್ನೋದು ನಮ್ಮ ಆಶಯ.

‘ಆದಷ್ಟು ಬೇಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸುತ್ತೇವೆ. ಅಂತಾರಾಷ್ಟ್ರೀಯ, ಐಪಿಎಲ್ ಪಂದ್ಯಗಳನ್ನು ಮತ್ತೆ ಬೆಂಗಳೂರಿಗೆ ತರುತ್ತೇವೆ. ಕರ್ನಾಟಕ ಸರ್ಕಾರ ನಮ್ಮ ಜೊತೆಗಿದೆ. ನಾವೂ ಸರ್ಕಾರದ ಇಲಾಖೆಗಳಿಗೆ ಮನವೊಲಿಸುತ್ತೇವೆ. ಜಿಬಿಎ, ಬೆಸ್ಕಾಂ, BWSSB, ಪೊಲೀಸ್ ಎಲ್ಲರ ವಿಶ್ವಾಸ ಗಿಟ್ಟಿಸುವ ಭರವಸೆ ಇದೆ. ಎಲ್ಲವನ್ನು ಕೂಡಲೇ ಮಾಡುವುದು ಅಷ್ಟು ಸುಲಭವಲ್ಲ. ಆದ್ರೆ ನಾವು ಮ್ಯಾನೇಜ್ ಮಾಡುತ್ತೇವೆ. ಆ ಕೆಲಸವನ್ನು ನಮ್ಮ ಕಮಿಟಿ ಮಾಡಲಿದೆ. ನಾವು ಕ್ರಿಕೆಟ್ ಅಭಿಮಾನಿಗಳಿಗೆ ಮಾತು ಕೊಡುತ್ತಿದ್ದೇವೆ. ಮತ್ತೇ ಚಿನ್ನಸ್ವಾಮಿ ಯಲ್ಲಿ ಪದ್ಯಗಳನ್ನು ಆದಷ್ಟು ಬೇಗ ಆಯೋಜಿಸುತ್ತೇವೆ ಎಂದಿದ್ದಾರೆ.

ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್‌ಸಿಗ್ನಲ್‌: ತವರಿಗೆ ಮರಳುತ್ತಾ ಆರ್​ಸಿಬಿ?

ಅವರೇ ಉತ್ತರ ಕೊಡಬೇಕು

ಇನ್ನು ಕಾಲ್ತುಳಿತ ಪ್ರಕರಣದಲ್ಲಿ ಆರ್​ಸಿಬಿಯನ್ನು ಟಾರ್ಗೆಟ್ ಮಾಡಿದ್ದಕ್ಕೆ, ಆಡಳಿತ ಮಂಡಳಿ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ಹಿಂಜರಿಕೆ ಮಾಡುತ್ತಿದ್ದೇಯಾ ಎಂಬ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶ ಪ್ರಸಾದ್,‘ ಇರಬಹುದೇನೋ ಆದರೆ ಅವರೇ ಉತ್ತರ ಕೊಡಬೇಕು. ಆದರೆ ನಾವು ಗೇಟ್​ಗಳು, ಸ್ಟ್ಯಾಂಡ್​ಗಳ ದುರಸ್ತಿ ಮಾಡಿದ್ದೇವೆ. ಈ ಮೂಲಕ ಫೈರ್ ಇಂಜಿನ್ ಒಳಗೆ ಬರಲು ಅನುಕೂಲ ಆಗುತ್ತೆ. ಹಾಗೇ ಗೇಟ್ ಆರು ಮೀಟರ್ ಅಗಲ ಮಾಡುತ್ತಿದ್ದೆವೆ. ಗೋಡೆಗಳನ್ನು ದುರಸ್ತಿ ಮಾಡುತ್ತಿದ್ದೇವೆ. ಅಗ್ನಿ ಶಾಮಕ ಕಾಮಗಾರಿ ಈಗಾಗಲೇ ಮುಗಿದಿದೆ. ಇನ್ನು ಕೆಲವು ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ. 50 ಸಾವಿರ ಲೀಟರ್ ಸಾಮರ್ಥ್ಯ ಟ್ಯಾಂಕ್ ಮಾಡುತ್ತಿದ್ದೇವೆ. ಬೆಸ್ಕಾಂ ಕೆಲಸ ಕೂಡ ಈಗಾಗಲೇ ಮುಗಿದಿದೆ. ಹಾಗೇ ಒಂದು ವಾರದಲ್ಲಿ ಆರ್ ಸಿಬಿಯನ್ನು ಸಂಪರ್ಕಿಸಿದ್ದೆವೆ. ಆದರೆ ಅವರಿಂದ ಯಾವುದೇ ಸ್ಪಷ್ಟ ಸಂದೇಶ ಬಂದಿಲ್ಲ ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:50 pm, Wed, 21 January 26

Source link

ನೆಲನೆಲ್ಲಿ ಗಿಡ ಸಿಕ್ಕರೆ ಮೊದಲು ಮನೆಗೆ ತನ್ನಿ! ಮೊಡವೆಯಿಂದ ಮಲಬದ್ಧತೆವರೆಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು – Kannada News | Bhoomi Amla: Your Natural Solution for Jaundice, Constipation

Bhoomi Amla Your Natural Solution For Jaundice, ConstipationImage Credit source: GettyImages

ನಮ್ಮ ಸುತ್ತಮುತ್ತ ಹಲವು ಬಗೆಯ ಔಷಧೀಯ ಸಸ್ಯಗಳಿವೆ. ಅವುಗಳಲ್ಲಿ ಕೆಲವುದರ ಬಗ್ಗೆ ನಮಗೆ ತಿಳಿದಿದೆ. ಆದರೆ ತಿಳಿದಿಲ್ಲದ ನೈಸರ್ಗಿಕ, ಔಷಧೀಯ ಗುಣಗಳನ್ನು ಹೊಂದಿರುವ ಹಲವು ಸಸ್ಯಗಳಿವೆ. ಇವು ವಿವಿಧ ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇಂತಹ ಸಸ್ಯಗಳಲ್ಲಿ ನೆಲದ ನೆಲ್ಲಿಕಾಯಿ ಅಥವಾ ನೆಲನೆಲ್ಲಿಯೂ (Nela Nelli) ಒಂದು. ಹಳ್ಳಿಗಳಲ್ಲಿ ತೋಟ, ಗದ್ದೆ ಹಾಗೆಯೇ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಸ್ಯಗಳನ್ನು ಹೆಚ್ಚಾಗಿ ಕಾಣಬಹುದು, ಸುಮಾರು ಒಂದು ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯ ನೆಲ್ಲಿಕಾಯಿಯನ್ನು ಹೋಲುವ ಎಲೆಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಇದನ್ನು ನೆಲನೆಲ್ಲಿ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ಇದನ್ನು ‘ಭೂಮಿ ಆಮ್ಲ’ (Bhoomi Amla) ಎಂದು ಕರೆಯಲಾಗುತ್ತದೆ. ಬಹುತೇಕ ವರ್ಷಪೂರ್ತಿ ಕಂಡುಬರುವ ಈ ಸಸ್ಯಗಳು ವಿವಿಧ ರೀತಿಯ ವೈರಲ್ ಸೋಂಕುಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಾಬೀತಾಗಿದ್ದು, ಮೊಡವೆ, ಹುಣ್ಣು, ಹೆಪಟೈಟಿಸ್ ಎ, ಬಿ ಮತ್ತು ಸಿ, ಹರ್ಪಿಸ್ ಮತ್ತು ಎಚ್‌ಐವಿಗಳಿಂದ ಉಂಟಾಗುವ ಕಾಮಾಲೆಗೆ ಇದು ಪರಿಹಾರ ನೀಡುವಂತಹ ಶಕ್ತಿ ಹೊಂದಿದೆ. ಹಾಗಾದರೆ ಇದರಿಂದ ಸಿಗುವ ಉಪಯೋಗವೇನು, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಕಾಮಾಲೆಗೆ ರೋಗಕ್ಕೆ ರಾಮಬಾಣ: ಸಾಮಾನ್ಯವಾಗಿ ಈ ಎಲೆಗಳು ಕಾಮಾಲೆಯನ್ನು ಕಡಿಮೆ ಮಾಡುವಲ್ಲಿ, ಯಕೃತ್ತಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದಲ್ಲಿನ ಬಿಲಿರುಬಿನ್ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ, ಯಕೃತ್ತನ್ನು ಬಲಪಡಿಸುತ್ತದೆ ಮತ್ತು ದೇಹಕ್ಕೆ ವೈರಸ್‌ಗಳ ವಿರುದ್ಧ ಹೋರಾಡಲು ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ.

ಚರ್ಮದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು: ಚರ್ಮದ ಮೇಲಿನ ತುರಿಕೆ, ದದ್ದುಗಳು ಮತ್ತು ಎಸ್ಜಿಮಾದಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಬಾಹ್ಯ ಅನ್ವಯಿಕೆಯಾಗಿ ನೆಲನೆಲ್ಲಿ ಕಾರ್ಯನಿರ್ವಹಿಸುತ್ತದೆ.

ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುವ ದಿವ್ಯಔಷಧ: ನೆಲನೆಲ್ಲಿ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಈ ಎಲೆಯ ಸೇವನೆಯಿಂದ ಕರುಳಿನ ಚಲನೆ ಸುಧಾರಣೆಗೊಂಡು, ಮಲವಿಸರ್ಜನೆ ಸುಲಭವಾಗುತ್ತದೆ.

ಇದನ್ನೂ ಓದಿ: ಬಾಳೆಹಣ್ಣನ್ನು ಈ ಸಮಯದಲ್ಲಿ ತಿನ್ನುವುದರಿಂದ ಸಿಗುತ್ತೆ ಊಹಿಸಲೂ ಸಾಧ್ಯವಾಗದ ಪ್ರಯೋಜನ!

ಅಷ್ಟೇ ಅಲ್ಲ, ಈ ಎಲೆಗಳ ಸೇವನೆ ಮಾಡುವುದರಿಂದ ದೇಹದಿಂದ ವಿಷವ ಹೊರಹೋಗಿ ಜೀರ್ಣಾಂಗ ವ್ಯವಸ್ಥೆ ಸುಧಾರಣೆಗೊಳ್ಳುತ್ತದೆ. ಪರೋಕ್ಷವಾಗಿ, ಇದು ಹೃದಯ ಸಂಬಂಧಿ ಕಾಯಿಲೆ, ರಕ್ತನಾಳಗಳ ಸಮಸ್ಯೆಗಳು ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ನೆಲ್ಲಿ ಗಿಡವನ್ನು ಸರಿಯಾಗಿ ಬಳಸುವುದರಿಂದ, ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇವುಗಳನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊರಿಯನ್‌ ಸುಂದರಿಯರಂತೆ ಹೊಳೆಯುವ ತ್ವಚೆ ನಿಮ್ಮದಾಗಬೇಕೆಂದರೆ ಈ ಸಿಂಪಲ್‌ ಟಿಪ್ಸ್‌ ಪಾಲಿಸಿ – Kannada News | Follow these simple tips to get glowing skin like Korean beauties

ಕೊರಿಯನ್‌ ಮಹಿಳೆಯರಂತೆ ಸುಂದರ, ಕಾಂತಿಯುತ ತ್ವಚೆ (glowing skin) ನಮ್ಮದಾಗಬೇಕೆಂಬ ಬಯಕೆ ಪ್ರತಿಯೊಬ್ಬ ಮಹಿಳೆಯರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ದುಬಾರಿ ಕ್ರೀಮ್‌ ಬಳಕೆ ಮಾಡುತ್ತಾರೆ. ತ್ವಚೆಯ ಹೊಳಪು ಹೆಚ್ಚಾಗಬೇಕೆಂದು ಫೇಶಿಯಲ್‌ ಸೇರಿದಂತೆ ಇತ್ಯಾದಿ ಪ್ರಯೋಗಗಳನ್ನು ಮಾಡುತ್ತಾರೆ. ಇದರಿಂದ ತ್ವಚೆಯ ಸೌಂದರ್ಯ ಹೆಚ್ಚಾಗುವ ಬದಲು ಮೊಡವೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದೇ ಹೆಚ್ಚು. ಇದರ ಬದಲು ಹೆಚ್ಚು ಹಣ ಖರ್ಚು ಮಾಡದೆ ಈ ಕೆಲವೊಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ನೈಸರ್ಗಿಕ ರೀತಿಯಲ್ಲಿ ಕೊರಿಯನ್‌ ಮಹಿಳೆಯರಂತೆ ಕಾಂತಿಯುತ ತ್ವಚೆಯನ್ನು ನೀವು ಕೂಡ ಪಡೆಯಬಹುದು. ಅದಕ್ಕಾಗಿ ಏನು ಮಾಡಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಕೊರಿಯನ್‌ ಗ್ಲಾಸ್‌ ಸ್ಕಿನ್‌ ನಿಮ್ಮದಾಗಲು ಈ ಟಿಪ್ಸ್‌ ಪಾಲಿಸಿ:

ಟೋನರ್:‌ ಟೋನರ್‌ ತ್ವಚೆಗೆ ತೇವಾಂಶವನ್ನು ನೀಡುತ್ತದೆ. ಜೊತೆಗೆ ಇದು ತ್ವಚೆಯನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ದುಬಾರಿ ಟೋನರ್‌ಗಳನ್ನು ಬಳಸಬೇಕಿಲ್ಲ, ರೋಸ್‌ ವಾಟರ್‌ ಕೂಡ ಉತ್ತಮವಾಗಿ ಕೆಲಸ ಮಾಡುತ್ತದೆ. ರೋಸ್‌ ವಾಟರನ್ನು ಹತ್ತಿಯ ಉಂಡೆಯಿಂದ ಮುಖಕ್ಕೆ ಹಚ್ಚಿ ಇಲ್ಲದಿದ್ದರೆ ಸ್ಪ್ರೇ ಕೂಡ ಮಾಡಬಹುದು.

ಸೀರಮ್‌ ಹಚ್ಚಿ: ಕೊರಿಯನ್‌ ಸ್ಕಿನ್‌ಕೇರ್‌ನಲ್ಲಿ ಸೀರಮ್‌ಗಳನ್ನು ಅತ್ಯಗತ್ಯವೆಂದು ಪರಿಗಣಿಸಲಾಗುತ್ತದೆ. ಈ ಸೀರಮ್‌ ತ್ವಚೆಗೆ ಅಗತ್ಯವಿರುವ ಹವಾರು ವಿಟಮಿನ್‌ಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತವೆ. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ಇದಕ್ಕಾಗಿ ಅಲೋವೆರಾ ಜೆಲ್‌ ಮತ್ತು ವಿಟಮಿನ್‌ ಇ ಕ್ಯಾಪ್ಸುಲ್‌ಗಳನ್ನು ಬೆರೆಸಿ ನೀವು ಮನೆಯಲ್ಲಿಯೇ ನೈಸರ್ಗಿಕ ಸೀರಮ್‌ ತಯಾರಿಸಬಹುದು. ಮಲಗುವ ಮುನ್ನ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್‌ ಮಾಡಿ.

ಮಾಯಿಶ್ಚರೈಸರ್‌ ಬಳಸಿ: ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಮಾಯಿಶ್ವರೈಸರ್‌ ಬಳಸುವುದು ಸಹ ಮುಖ್ಯ. ಇದು ಶುಷ್ಕತೆಯನ್ನು ನಿವಾರಿಸಿ ತ್ವಚೆಯನ್ನು ಮೃದುವಾಗಿಸುತ್ತದೆ. ವಿಶೇಷವಾಗಿ ಒಣ ಚರ್ಮಕ್ಕೆ ಕ್ರೀಮ್‌ ಅಥವಾ ತೆಂಗಿನ ಎಣ್ಣೆಯನ್ನು ಲಘುವಾಗಿ ಹಚ್ಚುವುದು ಸೂಕ್ತವಾಗಿದೆ.  ಇದು ತ್ವಚೆಯ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಫೇಸ್‌ ಪ್ಯಾಕ್:‌ ವಾರಕ್ಕೆ ಒಂದು ಅಥವಾ ಎರಡು ಬಾರಿ ಮೊಸರು ಮತ್ತು ಜೇನುತುಪ್ಪದ ಫೇಸ್‌ ಪ್ಯಾಕ್‌ ಹಚ್ಚಿಕೊಳ್ಳಿ. ಮೊಸರು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಜೇನುತುಪ್ಪವು ತ್ವಚೆಗೆ ನೈಸರ್ಗಿಕ ಹೊಳಪನ್ನು ತರುತ್ತದೆ. ಅಲ್ಲದೆ ಈ ಫೇಸ್‌ಪ್ಯಾಕ್‌ ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮುಖಕ್ಕೆ ಹೊಳಪನ್ನು ತರುತ್ತದೆ.

ಇದನ್ನೂ ಓದಿ: ಜೀವನದಲ್ಲಿ ಸಂತೋಷ ಬೇಕೆಂದರೆ ನೀವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಉತ್ತಮ ಆಹಾರ ಸೇವನೆ: ಕಾಂತಿಯುತ ತ್ವಚೆಗಾಗಿ ಬಾಹ್ಯ ಆರೈಕೆ ಮಾತ್ರವಲ್ಲ, ಒಳಗಿನಿಂದ ಪೋಷಣೆ ಮಾಡುವುದು ಕೂಡ ಅತ್ಯಗತ್ಯ. ಅದಕ್ಕಾಗಿ ದಿನಕ್ಕೆ ಎಂಟು ಗ್ಲಾಸ್‌ ನೀರು ಕುಡಿಯಿರಿ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ, ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವುದನ್ನು ಮಿತಿಗೊಳಿಸಿ.

ನಿದ್ರೆ ಮತ್ತು ಒತ್ತಡ ರಹಿಸತ ಜೀವನ: ಕೊರಿಯನ್‌ ಮಹಿಳೆಯರ ಸುಂದರ ತ್ವಚೆಯ ಹಿಂದಿನ ಪ್ರಮುಖ ಕಾರಣವೆಂದರೆ ಸರಿಯಾದ ನಿದ್ರೆ ಮತ್ತು ಒತ್ತಡ ರಹಿತ ಜೀವನ. ಮನಸ್ಸು ಸಂತೋಷವಾಗಿದ್ದಾಗ ಅದರ ಪರಿಣಾಮಗಳು ನೇರವಾಗಿ ಮುಖದ ಮೇಲೆ ಪ್ರತಿಫಲಿಸುತ್ತದೆ. ಹಾಗಾಗಿ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳಲು ಸರಿಯಾಗಿ ನಿದ್ರೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಳೇ ದ್ವೇಷಕ್ಕೆ ನಡು ರಸ್ತೆಯಲ್ಲಿ ಹರಿದಿದ್ದ ನೆತ್ತರು: ರೌಡಿಶೀಟರ್​​ ಮರ್ಡರ್​​ ಕೆಸ್​​ನಲ್ಲಿ 8 ಮಂದಿ ಅಂದರ್​​ – Kannada News | Mangammanapalya Rowdy Murder: 8 Held in Shabbir Killing Over Area Dominance

ಬೆಂಗಳೂರು, ಜನವರಿ 21: ಬಂಡೆಪಾಳ್ಯ ಠಾಣಾ ವ್ಯಾಪ್ತಿಯ ಮಂಗಮ್ಮನಪಾಳ್ಯದಲ್ಲಿ ಹಳೇ ದ್ವೇಷದ ಹಿನ್ನೆಲೆ ನಟೋರಿಯಸ್ ರೌಡಿಶೀಟರ್ ಮೊಹಮ್ಮದ್ ಶಬ್ಬೀರ್​​ನ ವೈರಿಗಳು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಬರೋಬ್ಬರಿ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಮಂಗಮ್ಮನಪಾಳ್ಯ ನಿವಾಸಿ ಮೊಹಮ್ಮದ್ ಶಬ್ಬೀರ್ ಮತ್ತು ಐವರು ರಾತ್ರಿ ತಮ್ಮ ಸ್ನೇಹಿತನ್ನ ಮಾತಾಡಿಸಿ ಆಟೋದಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭ ದಾಳಿ ನಡೆಸಿದ್ದ ಆರೋಪಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.

ಶಬ್ಬೀರ್​​ ಕಾಟ ತಾಳಲಾರದೆ ಮರ್ಡರ್​

ನೂರುಲ್ಲ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಅಲಿ, ಸೖಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ದಿಕ್, ಸೖಯದ್ ಕಲೀಂ, ಉಮ್ರೇಜ್ ಬಂಧಿತ ಆರೋಪಿಗಳಾಗಿದ್ದು, ಹಳೆ ವೈಷ್ಯಮ್ಯ ಮತ್ತು ಹವಾ ಮಾಡೋ ವಿಚಾರಕ್ಕೆ ಶಬ್ಬೀರನನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೊದಲೇ ರೌಡಿ ಶೀಟರ್ ಆಗಿದ್ದ ಶಬ್ಬೀರ್​​ ಹಾವಳಿ ಏರಿಯಾದಲ್ಲಿ ಹೆಚ್ಚಾಗಿತ್ತು. ಇಡೀ ಏರಿಯಾದಲ್ಲಿ ಯಾರೂ ಶಬ್ಬೀರ್​​ನ ಮಾತು ಮೀರುವಂತಿರಲಿಲ್ಲ. ಯಾರೇ ರೌಡಿಸಂ ಮಾಡಿದ್ರೂ ಮೊದಲು ಶಬ್ಬೀರ್​​ಗೆ ವಿಚಾರ ಹೇಳಬೇಕಿತ್ತು. ಆತನ ಬಿಟ್ಟು ಯಾವುದೇ ವ್ಯವಹಾರ ಮಾಡುವಂತಿರಲಿಲ್ಲ. ಯಾರಾದ್ರೂ ತಾನು ಮಾಡ್ತಿದ್ದ ಬ್ಯುಸಿನೆಸ್ ಮಾಡಿದ್ರೆ, ಹಫ್ತಾ ವಸೂಲಿ, ಸೆಟ್ಲಮೆಂಟ್ ಮಾಡಿದ್ರೆ ಗರಂ ಆಗ್ತಿದ್ದ. ಕೂಡಲೇ ಅವರನ್ನು ಕರೆಸಿ ಬೆದರಿಕೆ ಹಾಕಿ ಹಲ್ಲೆ ಮಾಡ್ತಿದ್ದ. ಇಂತಹುದ್ದೇ ಕಾರಣದಿಂದ ಸುಮಾರು 10-15 ಜನ ಶಬ್ಬೀರ್​​ನಿಂದ ಹಲ್ಲೆಗೊಳಗಾಗಿದ್ರು. ಹೀಗಾಗಿ ಶಬ್ಬೀರ್ ಇದ್ರೆ ನಮ್ಮ ವ್ಯವಹಾರಗಳು ನಡೆಯಲ್ಲ, ನಮ್ಮ ಜೀವಕ್ಕೆ ಅಪಾಯ ಎಂದು ಎಲ್ಲ ಸೇರಿ ಆತನ ಕತೆಯನ್ನೇ ಮುಗಿಸಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ರಾತ್ರಿ ವೇಳೆ ನಡುರಸ್ತೆಯಲ್ಲೇ ಝಳಪಿಸಿದ ಲಾಂಗ್​​; ಖಾರದ ಪುಡಿ ಎರಚಿ ರೌಡಿ ಶೀಟರ್​​ನ ಭೀಕರ ಹತ್ಯೆ

ಎರಡು ಬಾರಿ ಫೇಲ್​ ಆಗಿತ್ತು ಆರೋಪಿಗಳ ಪ್ಲ್ಯಾನ್​​!

ಇನ್ನು ಆರೋಪಿಗಳು ಈ ಹಿಂದೆಯೂ ಎರಡೆರಡು ಬಾರಿ ಶಬ್ಬೀರ್​​ನ ಮುಗಿಸಲೇ ಬೇಕು ಎಂದು ಹೊಂಚು ಹಾಕಿದ್ದರು. ಆದರೆ ಆತನ ಮೇಲಿನ ಭಯ ಇವರನ್ನು ಕೃತ್ಯದಿಂದ ಹಿಂದೆ ಸರಿಯುವಂತೆ ಮಾಡಿತ್ತು. ಅದಾದ ಬಳಿಕ ಮತ್ತೆ ಮೂರನೇ ಬಾರಿಗೆ ಸ್ಕೆಚ್​​ ಹಾಕಿದ್ದ ಗ್ಯಾಂಗ್​​, ಜ.12ರಂದು ಪಕ್ಕಾ ಪ್ಲ್ಯಾನ್​​ ಮಾಡಿ ಆಟೋದಲ್ಲಿ ಬರ್ತಿದ್ದ ಶಬ್ಬೀರ್ ಅಡ್ಡಗಟ್ಟಿ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿರುವ ಪೊಲೀಸರು, ಇನ್ನೂ ಕೆಲವರಿಗೆ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:10 pm, Wed, 21 January 26

Source link

ವಿಜಯಲಕ್ಷ್ಮಿ ದರ್ಶನ್​​ಗೆ ಅಶ್ಲೀಲ ಸಂದೇಶ: ಬಂಧಿತರ ಸಂಖ್ಯೆ 8ಕ್ಕೆ ಏರಿಕೆ – Kannada News | Bad comment to Vijayalakshmi Darshan eight people arrested

ದರ್ಶನ್ ತೂಗುದೀಪ (Darshan Thoogudeepa) ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆಗೆ ಸಜ್ಜಾಗುತ್ತಿದ್ದಾರೆ. ವಿಜಯಲಕ್ಷ್ಮಿ ಅವರು ಡಿಸೆಂಬರ್ ತಿಂಗಳಲ್ಲಿ ತಮ್ಮ ಬಗ್ಗೆ ಅಶ್ಲೀಲ ಕಮೆಂಟ್​​ಗಳನ್ನು ಮಾಡುತ್ತಿರುವ, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿರುವವರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರನ್ನು ಭೇಟಿ ಆಗಿ ಮೌಕಿಖವಾಗಿಯೂ ದೂರು ಹೇಳಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮೊದಲು ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ದಾವಣಗೆರೆಯ ಇಂಜಿನಿಯರ್ ನಿತಿನ್, ಚಿಕ್ಕಬಾಣಾವರದ ಆಟೋ ಡ್ರೈವರ್ ಚಂದ್ರು, ಹುಬ್ಬಳ್ಳಿ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ತಳವಾರ್, ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ್ ಬಂಧಿತರಾಗಿದ್ದರು. ಇವರ ಜೊತೆಗೆ ಇನ್ನೂ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಟೆಕ್ನಿಕಲ್ ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದಾರೆ. ಕೆಲವರನ್ನು ಜನವರಿ 7ನೇ ತಾರೀಖು ಹಾಗೂ ಅದಕ್ಕೆ ಮುಂಚೆಯೇ ಪೊಲೀಸರು ಬಂಧಿಸಿದ್ದರು. ಕೆಲವು ಆರೋಪಿಗಳು ಪರಾರಿ ಆಗಿದ್ದರು. ಇದೀಗ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದು, ಸಾಕ್ಷ್ಯಗಳ ಪರಿಶೀಲನೆ ಬಳಿಕ ಎಲ್ಲರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ದಾವಣಗೆರೆಯಲ್ಲಿ ಮಾತನಾಡಿದ್ದ ವಿಜಯಲಕ್ಷ್ಮಿ, ‘ದರ್ಶನ್ ಇಲ್ಲದೇ ಇರುವಾಗ ಕೆಲವರು ಮಾತನಾಡುತ್ತಿದ್ದಾರೆ, ದರ್ಶನ್ ಇದ್ದಾಗ ಅವರ ಇದ್ದಾರೆಂಬುದು ಸಹ ಗೊತ್ತಾಗುತ್ತಿರಲಿಲ್ಲ’ ಎಂದು ಪರೋಕ್ಷವಾಗಿ ಸುದೀಪ್​​ಗೆ ಟಾಂಗ್ ನೀಡಿದ್ದರು. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ವಿರುದ್ಧ ಟ್ರೋಲಿಂಗ್ ಶುರುವಾಗಿತ್ತು, ಅವರ ವಿರುದ್ಧ ಸುದೀಪ್ ಅಭಿಮಾನಿಗಳು ಮುಗಿಬಿದ್ದಿದ್ದರು. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ಅವರು ಪೊಲೀಸರಿಗೆ 15 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ದೂರು ನೀಡಿದ್ದರು. 150 ಸ್ಕ್ರೀನ್ ಶಾಟ್​​ಗಳನ್ನು ಸಹ ವಿಜಯಲಕ್ಷ್ಮಿ ಹಂಚಿಕೊಂಡಿದ್ದರು.

ಇದನ್ನೂ ಓದಿ:ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್

ವಿಜಯಲಕ್ಷ್ಮಿ ಅವರು ದೂರು ನೀಡಿದ ಕೆಲ ದಿನಗಳ ಬಳಿಕ, ತಮ್ಮ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವಿಜಯಲಕ್ಷ್ಮಿ, ‘ನಾನು ನೀಡಿದ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ, ಕಾನೂನಿನ ಮೇಲೆ ನನಗೆ ನಂಬಿಕೆ ಇತ್ತು, ಆದರೆ ಈಗ ಆ ನಂಬಿಕೆಯನ್ನು ಪ್ರಶ್ನೆ ಮಾಡುವಂತಾಗಿದೆ. ಅದೇ ಮತ್ತೊಬ್ಬ ಮಹಿಳೆ ಕೊಟ್ಟಿದ್ದ ದೂರಿಗೆ ಒಂದೇ ದಿನದಲ್ಲಿ ಸ್ಪಂದಿಸಿದ್ದರು. ನನ್ನ ವಕೀಲರು ಪದೇ ಪದೇ ಫಾಲೋ ಅಪ್ ಮಾಡಿದರೂ ಸಹ ಪೊಲೀಸರು ತನಿಖೆ ಮಾಡುತ್ತಿಲ್ಲ’ ಎಂದು ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸರು ಸ್ಪಷ್ಟನೆ ನೀಡಿ, ಇನ್ನಷ್ಟು ಸಕ್ರಿಯವಾಗಿ ತನಿಖೆ ನಡೆಸಿದ್ದು, ಈ ವರೆಗೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಲಕ್ಷ್ಮಿ ಅವರಿಗೆ ಮುಂಚೆ ನಟಿ ರಮ್ಯಾ ಅವರು ತಮಗೆ ಅಶ್ಲೀಲ ಕಮೆಂಟ್​​ಗಳನ್ನು ಮಾಡಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರು. ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಿದ್ದರು. ಅದರ ಬಳಿಕ ವಿಜಯಲಕ್ಷ್ಮಿ ಅವರು ಸುದೀಪ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್ – Kannada News | Minister Ashwini Vaishnaw explains India’s AI preparedness at Davos WEF Summit

ನವದೆಹಲಿ, ಜನವರಿ 21: ಎಐ ಸಾಮರ್ಥ್ಯದಲ್ಲಿ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರು ಡಾವೊಸ್ ಶೃಂಗಸಭೆಯಲ್ಲಿ (Davos WEF Summit) ವಿವರಿಸಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ 2026 ವೇದಿಕೆಯಲ್ಲಿ ಎಐ ಸಿದ್ಧತೆ (AI Preparedness) ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವ ಎ ವೈಷ್ಣವ್ ಅವರು ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ನಿಯೋಜನೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ವಿಶದಪಡಿಸಿದ್ದಾರೆ.

ಬಹಳ ದೊಡ್ಡದಾದ, ತೀವ್ರ ಗಣಕದ ಅವಶ್ಯಕತೆ ಇರುವ ಮಾಡಲ್​ಗಳ ಬದಲು 20ರಿಂದ 50 ಬಿಲಿಯನ್ ಪ್ಯಾರಾಮೀಟರ್​ಗಳಿರುವ ಸಣ್ಣ ಸಣ್ಣ ಮಾಡಲ್​ಗಳನ್ನು ನಿರ್ಮಿಸಿ ಭಾರತೀಯ ಭಾಷೆಗಳಿಗೆ ತಕ್ಕಂತೆ ರೂಪಿಸಿ ವಿವಿಧ ಸೆಕ್ಟರ್​ಗಳಿಗೆ ಅವುಗಳನ್ನು ನಿಯೋಜಿಸಲಾಗುತ್ತಿದೆ. ಈ ರೀತಿಯಾಗಿ ಎಐನ ಫಲವನ್ನು ಅತಿಹೆಚ್ಚು ಪಡೆಯಲು ಸಾಧ್ಯವಾಗುತ್ತದೆ ಎಂದು ಎ ವೈಷ್ಣವ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಡಬ್ಲ್ಯುಇಎಫ್ ಫೋರಂನ ಸಂವಾದದಲ್ಲಿ ಅಶ್ವಿನಿ ವೈಷ್ಣವ್ ಅವರು ಭಾರತದ ಎಐ ಸಿದ್ಧತೆಯಲ್ಲಿನ ಐದು ಎಳೆಗಳನ್ನು ವಿವರಿಸಿದ್ದಾರೆ.

  1. ಅಪ್ಲಿಕೇಶನ್ ಲೇಯರ್
  2. ಮಾಡಲ್ ಲೇಯರ್
  3. ಚಿಪ್ ಲೇಯರ್
  4. ಡಾಟಾ ಸೆಂಟರ್ ಲೇಯರ್
  5. ಎನರ್ಜಿ ಲೇಯರ್

ಈ ಐದು ಲೇಯರ್​ಗಳಲ್ಲಿ ಭಾರತ ಪ್ರಗತಿ ಕಾಣುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಎಐ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಬಹಳ ಮುಖ್ಯವಾಗಿರುವ ಕಂಪ್ಯೂಟ್ ವ್ಯವಸ್ಥೆಗೆ ಜಿಪಿಯುಗಳು ಅಗತ್ಯ. ಅದಕ್ಕಾಗಿ ಭಾರತದಲ್ಲಿ 38,000 ಜಿಪಿಯುಗಳಿರುವ ಸಾಮಾನ್ಯ ಕಂಪ್ಯೂಟ್ ಫೆಸಿಲಿಟಿ ನಿರ್ಮಿಸಲಾಗುತ್ತಿದೆ. ಇದರಿಂದ ಜಿಪಿಯು ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದ್ಧಾರೆ.

ಇದನ್ನೂ ಓದಿ: ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್​ನಲ್ಲಿ ಪ್ರಹ್ಲಾದ ಜೋಷಿ

ಭಾರತದ ಎಐ ಸ್ಟ್ಯಾಕ್​ನ ಐದು ಲೇಯರ್​ಗಳ ಪರಿಚಯ

1. ಅಪ್ಲಿಕೇಶನ್ ಲೇಯರ್: ಕೃಷಿ, ಹೆಲ್ತ್​ಕೇರ್, ಶಿಕ್ಷಣ, ಆಡಳಿತ, ಉತ್ಪಾದನೆ ಇತ್ಯಾದಿ ವಿವಿಧ ಸೆಕ್ಟರ್​ಗಳಿಗೆ ಎಐ ಅನ್ನು ಸೂಕ್ತವಾಗಿ ಅಳವಡಿಸಲಾಗುತ್ತದೆ. ಜನರು ಮತ್ತು ಉದ್ಯಮಗಳು ಎಐ ಫಲಾನುಭವಿಗಳಾಗುತ್ತಾರೆ.

2. ಮಾಡಲ್ ಲೇಯರ್: ವಿವಿಧ ಎಐ ಮಾಡಲ್​ಗಳನ್ನು ತಯಾರಿಸುವುದು. ಭಾರತೀಯ ಭಾಷೆಗಳು, ಸೆಕ್ಟರ್​ಗಳು ಮತ್ತು ನಿಯಮಾವಳಿಗಳಿಗೆ ಅನುಗುಣವಾದ ಮಾಡಲ್​ಗಳನ್ನು ನಿರ್ಮಿಸಲಾಗುವುದು.

3. ಚಿಪ್ ಲೇಯರ್: ಸಬ್ಸಿಡಿಗಳ ಮೂಲಕ ಬಹಳ ಕಡಿಮೆ ಬೆಲೆಗೆ 38,000ಕ್ಕೂ ಅಧಿಕ ಜಿಪಿಯುಗಳನ್ನು ತಯಾರಿಸಲಾಗುತ್ತದೆ. ಎಐ ಅಭಿವೃದ್ಧಿಯಲ್ಲಿ ತೊಡಗಿರುವವರೆಲ್ಲರಿಗೂ ಈ ಜಿಪಿಯುಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು.

4. ಡಾಟಾ ಸೆಂಟರ್ ಲೇಯರ್: ಎಐ ಮಾಡಲ್​ಗಳು, ಡಾಟಾ ಮತ್ತು ಕಂಪ್ಯೂಟ್ ರಿಸೋರ್ಸ್​ಗಳನ್ನು ಹೋಸ್ಟ್ ಮಾಡಲು ಡಾಟಾ ಸೆಂಟರ್ ಬೇಕು. ಈ ಡಾಟಾ ಸೆಂಟರ್​ಗಳನ್ನು ಕೂಲಿಂಗ್ ಮಾಡಲು, ಸಮರ್ಪಕವಾಗಿ ನೀರು ಉಪಯೋಗಿಸಲು ಮತ್ತು ವಿದ್ಯುತ್ ಉಪಯೋಗಿಸಲು ಇನ್ನೋವೇಟಿವ್ ಮಾರ್ಗಗಳನ್ನು ಅನುಸರಿಸಲಾಗುವುದು.

5. ಎನರ್ಜಿ ಲೇಯರ್: ಎಐ ಇನ್​ಫ್ರಾಸ್ಟ್ರಕ್ಚರ್ ಸಮರ್ಪಕವಾಗಿರಬೇಕು. ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಬೇಕು. ಡಾಟಾ ಸೆಂಟರ್ ಹೆಚ್ಚಬೇಕು. ರಿನಿವಬಲ್ ಎನರ್ಜಿ ಹೆಚ್ಚಬೇಕು. ನ್ಯೂಕ್ಲಿಯಾರ್ ಎನರ್ಜಿ ಅಳವಡಿಸಬೇಕು. ಸಣ್ಣ ಸಣ್ಣ ಮಾಡ್ಯುಲಾರ್ ಮತ್ತು ಮೈಕ್ರೋ ರಿಯಾಕ್ಟರ್​ಗಳ ನಿರ್ಮಾಣ, ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್​ಶಿಪ್, ವಿದೇಶೀ ಹೂಡಿಕೆ ಇತ್ಯಾದಿಗೆ ಅನುವು ಮಾಡಿಕೊಡಬಲ್ಲ ಶಾಂತಿ ಕಾಯ್ದೆ ಜಾರಿ ಮಾಡಲಾಗುತ್ತಿದೆ.

ಅಶ್ವಿನಿ ವೈಷ್ಣವ್ ಅವರೊಂದಿಗಿನ ಸಂವಾದದ ವಿಡಿಯೋ ಲಿಂಕ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link