ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್ನಲ್ಲಿ ಕಳ್ಳತನ – Kannada News | Former Driver Uses Duplicate Key to Rob Gold Worth ₹8 Lakh from Ex Employer’s House
ಬೆಂಗಳೂರು, ಮೇ 26: ಮಾಜಿ ಚಾಲಕನೊಬ್ಬ ಡುಪ್ಲಿಕೇಟ್ ಕೀ ಬಳಸಿ ತನ್ನ ಹಳೆ ಮಾಲೀಕರ ಮನೆಗೆ ನುಗ್ಗಿ, 8 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 146 ಗ್ರಾಂ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರಿನ (Bengaluru) ನಾಗರಭಾವಿಯಲ್ಲಿ ನಡೆದಿದೆ. ಆರೋಪಿ ಯೋಗೇಶ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಕಾಶ್ ಎ. ಎಂಬುವವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಯೋಗೇಶ್ ಎಂಬಾತ ಸುಮಾರು ಒಂದು ವರ್ಷ ಅವರ ವೈಯಕ್ತಿಕ ಕಾರು ಚಾಲಕರಾಗಿ ಕೆಲಸ ಮಾಡಿ, ಎರಡು ತಿಂಗಳ ಹಿಂದೆ ಕೆಲಸ…