Category Archives: Blog

Your blog category

ಏನಿದು ಅಬ್ರಹಾಂ ಒಪ್ಪಂದ? ಇದಕ್ಕೆ ಸಹಿ ಹಾಕಿದರೆ ಪಾಕಿಸ್ತಾನದ ಪಾಸ್​ಪೋರ್ಟ್ ಏಕೆ ಬದಲಾಗುತ್ತದೆ? – Kannada News | Why Pakistan should Need New Passports If The Country Signs Abraham Accords after Donald Trumps pressure

ಇಸ್ಲಮಾಬಾದ್, ಮೇ 26: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಇಚ್ಛೆಯಂತೆ ಪಾಕಿಸ್ತಾನವು ಇಸ್ರೇಲ್ ಜೊತೆ ಸಂಬಂಧವನ್ನು ಸುಧಾರಿಸುವ ‘ಅಬ್ರಹಾಂ ಒಪ್ಪಂದಕ್ಕೆ’ (Abraham Accords) ಸಹಿ ಹಾಕಿದರೆ ಪಾಕಿಸ್ತಾನದ ಪ್ರಜೆಗಳಿಗೆ ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾಗುತ್ತದೆ ಎಂಬ ಚರ್ಚೆ ಅಂತಾರಾಷ್ಟ್ರೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪಾಕಿಸ್ತಾನದ ಪಾಸ್‌ಪೋರ್ಟ್‌ನಲ್ಲಿರುವ ಇಸ್ರೇಲ್ ವಿರೋಧಿ ನಿಯಮ ಮತ್ತು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿರುವ ಇತ್ತೀಚಿನ ಹೇಳಿಕೆಯೇ ಇದಕ್ಕೆ ಕಾರಣ.

ಪ್ರಮುಖ ಮುಖ್ಯಾಂಶಗಳು:

  • ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನಕ್ಕೆ ಟ್ರಂಪ್ ಒತ್ತಡ
  •  ಅಬ್ರಹಾಂ ಒಪ್ಪಂದದ ಮಹತ್ವವೇನು?
  • ಈ ಒಪ್ಪಂದದಿಂದ ಪಾಕ್ ಮೇಲಾಗುವ ಪರಿಣಾಮವೇನು?

ಇರಾನ್ ದೇಶದೊಂದಿಗೆ ನಡೆಯುತ್ತಿರುವ ಪ್ರಾದೇಶಿಕ ಶಾಂತಿ ಮಾತುಕತೆಗಳ ಭಾಗವಾಗಿ ಪಾಕಿಸ್ತಾನ, ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಸೇರಿದಂತೆ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆಗಿನ ‘ಅಬ್ರಹಾಂ ಒಪ್ಪಂದ’ಕ್ಕೆ ತಕ್ಷಣವೇ ಸಹಿ ಹಾಕಬೇಕು ಎಂದು ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಕರೆ ನೀಡಿದ್ದರು. ಆದರೆ, ಟ್ರಂಪ್ ಅವರ ಈ ಆಫರ್ ಅನ್ನು ತಕ್ಷಣವೇ ತಿರಸ್ಕರಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, “ನಮ್ಮ ಮೂಲಭೂತ ಸಿದ್ಧಾಂತಗಳಿಗೆ ಧಕ್ಕೆ ತರುವ ಇಂತಹ ಯಾವುದೇ ಒಪ್ಪಂದಕ್ಕೆ ಪಾಕಿಸ್ತಾನ ಸಹಿ ಹಾಕುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮಾರ್ಗ ತೆರೆಯುವ ಸುಳಿವು ನೀಡಿದ ಟ್ರಂಪ್

ಪಾಕಿಸ್ತಾನಿಗಳಿಗೆ ಹೊಸ ಪಾಸ್‌ಪೋರ್ಟ್ ಏಕೆ ಬೇಕಾಗುತ್ತದೆ?:
ಇಷ್ಟಾದರೂ ಒಂದು ವೇಳೆ ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕಿಸ್ತಾನವು ಇಸ್ರೇಲ್ ಅನ್ನು ಒಪ್ಪಿಕೊಂಡರೆ ಅಲ್ಲಿನ ಇಡೀ ದೇಶದ ಪಾಸ್‌ಪೋರ್ಟ್ ವ್ಯವಸ್ಥೆಯನ್ನೇ ಬದಲಾಯಿಸಬೇಕಾಗುತ್ತದೆ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ…

ಸಾಂಪ್ರದಾಯಿಕವಾಗಿ ಪಾಕಿಸ್ತಾನದ ಪಾಸ್‌ಪೋರ್ಟ್‌ಗಳ ಮುಖಪುಟ ಅಥವಾ ಒಳಗಿನ ಪುಟದಲ್ಲಿ ಅತ್ಯಂತ ಸ್ಪಷ್ಟವಾಗಿ “ಈ ಪಾಸ್‌ಪೋರ್ಟ್ ಇಸ್ರೇಲ್ ಹೊರತುಪಡಿಸಿ ಪ್ರಪಂಚದ ಎಲ್ಲಾ ದೇಶಗಳಿಗೆ ಮಾನ್ಯವಾಗಿದೆ” (This passport is valid for all countries of the world except Israel) ಎಂದು ಮುದ್ರಿಸಲಾಗಿರುತ್ತದೆ. ಜಗತ್ತಿನಲ್ಲೇ ತನ್ನ ಪಾಸ್‌ಪೋರ್ಟ್‌ನಲ್ಲಿ ಇಸ್ರೇಲ್ ದೇಶದ ಹೆಸರನ್ನು ಈ ರೀತಿ ಬರೆದು, ಅದನ್ನು ಬಹಿಷ್ಕರಿಸಿರುವ ಏಕೈಕ ದೇಶ ಪಾಕಿಸ್ತಾನವಾಗಿದೆ.

ಒಂದು ವೇಳೆ ಅಬ್ರಹಾಂ ಒಪ್ಪಂದಕ್ಕೆ ಪಾಕಿಸ್ತಾನ ಸಹಿ ಹಾಕಿದರೆ, ಇಸ್ರೇಲ್‌ನ ಸಾರ್ವಭೌಮತ್ವವನ್ನು ಒಪ್ಪಿಕೊಂಡಂತಾಗುತ್ತದೆ ಮತ್ತು ಪಾಕಿಸ್ತಾನಿಗಳು ಇಸ್ರೇಲ್‌ಗೆ ಪ್ರಯಾಣಿಸಲು ಅವಕಾಶ ನೀಡಬೇಕಾಗುತ್ತದೆ. ಆಗ ಇಡೀ ದೇಶದ ಕೋಟ್ಯಂತರ ನಾಗರಿಕರ ಹಳೆಯ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿ, ಇಸ್ರೇಲ್ ಹೆಸರಿನ ನಿರ್ಬಂಧವನ್ನು ತೆಗೆದುಹಾಕಿರುವ ಹೊಸ ಮಾದರಿಯ ಪಾಸ್‌ಪೋರ್ಟ್‌ಗಳನ್ನು ವಿತರಿಸಬೇಕಾಗುತ್ತದೆ. ಪಾಕಿಸ್ತಾನಕ್ಕೆ ಇದು ಕೇವಲ ಪೇಪರ್ ಮೇಲಿನ ಬದಲಾವಣೆಯಲ್ಲ. ಇದು ದೇಶದ ಅಸ್ತಿತ್ವ ಮತ್ತು ಸಿದ್ಧಾಂತದ ವಿಷಯವಾಗಿದೆ.

“ಒಂದು ದಿನವೂ ನಂಬಲು ಸಾಧ್ಯವಿಲ್ಲದ ಇಸ್ರೇಲ್ ಜನರೊಂದಿಗೆ ನಾವು ಹೇಗೆ ಒಟ್ಟಿಗೆ ಇರಲು ಸಾಧ್ಯ? ನಮ್ಮ ಪಾಸ್‌ಪೋರ್ಟ್ ನೀತಿಯೇ ಇಸ್ರೇಲ್ ವಿರುದ್ಧದ ನಮ್ಮ ಸಾಂಸ್ಥಿಕ ನಿಲುವನ್ನು ಜಗತ್ತಿಗೆ ಸಾರುತ್ತದೆ” ಎಂದು ಪಾಕ್ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ

ಪಾಕಿಸ್ತಾನವು ಆರಂಭದಿಂದಲೂ ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರ ರಚನೆಯಾಗುವವರೆಗೆ ಇಸ್ರೇಲ್ ಅನ್ನು ದೇಶ ಎಂದು ಒಪ್ಪಿಕೊಳ್ಳುವುದಿಲ್ಲ ಎಂಬ ಕಠಿಣ ನಿಲುವನ್ನು ಹೊಂದಿದೆ. ಪ್ರಸ್ತುತ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜನಸಾಮಾನ್ಯರಲ್ಲಿ ಇಸ್ರೇಲ್ ವಿರುದ್ಧ ಭಾರಿ ಆಕ್ರೋಶವಿದೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ಜೊತೆ ಕೈಜೋಡಿಸಲು ಮುಂದಾದರೆ ಪಾಕಿಸ್ತಾನದಲ್ಲಿ ತೀವ್ರ ಸಾರ್ವಜನಿಕ ಪ್ರತಿಭಟನೆಗಳು ಮತ್ತು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಭೀತಿಯಿದೆ.

ಏನಿದು ಅಬ್ರಹಾಂ ಒಪ್ಪಂದ?:

ಅಬ್ರಹಾಂ ಒಪ್ಪಂದ (Abraham Accords) ಎನ್ನುವುದು ಇಸ್ರೇಲ್ ಮತ್ತು ವಿವಿಧ ಅರಬ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಲು ಮತ್ತು ಶಾಂತಿಯನ್ನು ಸ್ಥಾಪಿಸಲು ಸಹಿ ಮಾಡಲಾದ ಐತಿಹಾಸಿಕ ಶಾಂತಿ ಒಪ್ಪಂದಗಳಾಗಿವೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದಕ್ಕೆ 2020ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಶ್ವೇತಭವನದಲ್ಲಿ ಸಹಿ ಹಾಕಲಾಯಿತು. ಕಳೆದ ಹಲವು ದಶಕಗಳಿಂದ ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಇದ್ದ ದ್ವೇಷ ಮತ್ತು ರಾಜತಾಂತ್ರಿಕ ಬಹಿಷ್ಕಾರವನ್ನು ಕೊನೆಗೊಳಿಸುವಲ್ಲಿ ಇದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.

ಯಹೂದಿ ಧರ್ಮ (Judaism) ಮತ್ತು ಇಸ್ಲಾಂ ಧರ್ಮ (Islam) ಎರಡಕ್ಕೂ ಮೂಲ ಪುರುಷ ಅಥವಾ ಪಿತಾಮಹರಾಗಿರುವ ‘ಅಬ್ರಹಾಂ’ ಅವರ ಹೆಸರನ್ನು ಈ ಒಪ್ಪಂದಕ್ಕೆ ಇಡಲಾಗಿದೆ. ಉಭಯ ಧರ್ಮಗಳ ಮತ್ತು ಜನಾಂಗಗಳ ನಡುವಿನ ಸಾಮಾನ್ಯ ಆಧ್ಯಾತ್ಮಿಕ ಹಿನ್ನೆಲೆಯನ್ನು ನೆನಪಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮೊದಲು ಒಪ್ಪಂದಕ್ಕೆ ಸಹಿ ಹಾಕಿದ ಅರಬ್ ರಾಷ್ಟ್ರಗಳೆಂದರೆ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬಹ್ರೇನ್, ಮೊರಾಕೊ ಮತ್ತು ಸುಡಾನ್.

ಅಬ್ರಹಾಂ ಒಪ್ಪಂದದ ಅಡಿಯಲ್ಲಿ ಅರಬ್ ದೇಶಗಳು ಇಸ್ರೇಲ್ ಅನ್ನು ಅಧಿಕೃತವಾಗಿ ಒಂದು ಸಾರ್ವಭೌಮ ದೇಶ ಎಂದು ಮಾನ್ಯ ಮಾಡಿದವು. ಉಭಯ ದೇಶಗಳಲ್ಲಿ ಪರಸ್ಪರ ರಾಯಭಾರ ಕಚೇರಿಗಳನ್ನು ತೆರೆಯಲಾಯಿತು. ಇಸ್ರೇಲ್ ಮತ್ತು ಯುಎಇ (UAE) ನಡುವೆ ನೇರ ವಿಮಾನಯಾನ ಸೇವೆಗಳು ಆರಂಭವಾದವು. ತಂತ್ರಜ್ಞಾನ, ಪ್ರವಾಸೋದ್ಯಮ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಬಿಲಿಯನ್​ಗಟ್ಟಲೆ ಡಾಲರ್ ಹೂಡಿಕೆ ಹಾಗೂ ವ್ಯಾಪಾರ ಒಪ್ಪಂದಗಳು ನಡೆದವು. ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಹಿರಿಯ ಸಲಹೆಗಾರರಾಗಿದ್ದ ಜ್ಯಾರೆಡ್ ಕುಶ್ನರ್ ಈ ಒಪ್ಪಂದವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ರಾಜತಾಂತ್ರಿಕ ಪಾತ್ರ ವಹಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹಸಚಿವಾಲಯದಿಂದ ಬ್ರೇಕ್​​: ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ – Kannada News | Setback for Karnataka Government: Home Ministry Halts Hate Speech Bill, Cites Existing BNS Provisions

ರಾಜ್ಯ ಸರ್ಕಾರಕ್ಕೆ ಹಿನ್ನಡೆImage Credit source: Tv9 Kannada

ನವದೆಹಲಿ/ಬೆಂಗಳೂರು, ಮೇ 26: ಕರ್ನಾಟಕದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಅಮಿತ್​​ ಶಾ ನೇತೃತ್ವದ ಗೃಹ ಸಚಿವಾಲಯವು ಬ್ರೇಕ್​​ ಹಾಕಿದ್ದು, ಈಗಿರುವ ಕಾನೂನು ವ್ಯವಸ್ಥೆಯೇ ಸಾಕಷ್ಟು ಸಮರ್ಪಕವಾಗಿದೆ. ಆ ಕಾರಣಕ್ಕೆ ಹೊಸ ಕಾನೂನು ಅಗತ್ಯವಿಲ್ಲದಿರಬಹುದು ಎಂದು ಹೇಳಿದೆ. ಈ ಕುರಿತ ತನ್ನ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಇದೇ ವರ್ಷ ಫೆಬ್ರವರಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಸೂದೆಗೆ ಅನುಮೋದನೆ ನೀಡಲು ನಿರಾಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಗಾಗಿ ಮಸೂದೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಕಠಿಣ ನಿಯಮಗಳನ್ನು ಒಳಗೊಂಡಿದ್ದ ಈ ಮಸೂದೆ ಪ್ರಕಾರ, ದ್ವೇಷ ಅಪರಾಧ ಅಥವಾ ದ್ವೇಷ ಭಾಷಣ ಮಾಡಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸುವ ಅವಕಾಶವಿತ್ತು. ಮರು ಅಪರಾಧಕ್ಕೆ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು 1 ಲಕ್ಷದ ವರೆಗೆ ದಂಡ ವಿಧಿಸುವ ಬಗ್ಗೆಯೂ ಮಸೂದೆಯಲ್ಲಿ ಸೇರಿಸಲಾಗಿತ್ತು.

ಇದನ್ನೂ ಓದಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? ಇಲ್ಲಿದೆ ಮಾಹಿತಿ

ಗೃಹ ಸಚಿವಾಲಯ ಹೇಳಿದ್ದೇನು?

ಮೇ 12ರಂದು ಕಳುಹಿಸಿದ ಪತ್ರದಲ್ಲಿ ಗೃಹ ಸಚಿವಾಲಯ, ಮಸೂದೆಯಲ್ಲಿ ಪರಿಹರಿಸಲು ಯತ್ನಿಸಿರುವ ವಿಷಯಗಳು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಇತರ ಕಾನೂನುಗಳಲ್ಲೇ ಇವೆ. ಹೀಗಾಗಿ ಪ್ರತ್ಯೇಕವಾಗಿ ರಾಜ್ಯಗಳು ಕಾನೂನು ಜಾರಿ ಮಾಡುವುದರಿಂದ ಪುನರಾವರ್ತನೆ ಮತ್ತು ಏಕರೂಪತೆಯ ಕೊರತೆ ಉಂಟಾಗಬಹುದು ಎಂದು ತಿಳಿಸಿದೆ.

2025ರ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸಲಾಗಿತ್ತು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್​​ ಹೆಚ್ಚಿನ ಚರ್ಚೆಗೆ ಅಥವಾ ಸದನ ಸಮಿತಿಗೆ ಒಪ್ಪದ ಹಿನ್ನೆಲೆ ವಿರೋಧ ಪಕ್ಷ ಬಿಜೆಪಿ ವಾಕೌಟ್ ನಡೆಸಿತ್ತು. ಜನವರಿಯಲ್ಲಿ ರಾಜ್ಯಪಾಲ ಗೆಹ್ಲೋಟ್ ಕೂಡ ಮಸೂದೆಯನ್ನು ಹಿಂದಿರುಗಿಸಿ, ಇದು ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಚರ್ಚೆಗಳ ಮೇಲೆ ಗಂಭೀರ  ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:22 pm, Tue, 26 May 26

Source link

IPL 2026: ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ- ಗುಜರಾತ್ ದಾಖಲೆ ಹೇಗಿದೆ? ಯಾರದ್ದು ಮೇಲುಗೈ? – Kannada News | IPL 2026 Qualifier 1: RCB vs GT Dharamsala Preview, Head to Head Records and Key Stats

ಐಪಿಎಲ್ 2026 ರ ಕ್ವಾಲಿಫೈಯರ್ 1 (Qualifier 1 IPL 2026) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ಮೇ 26 ರಂದು ಅಂದರೆ ಇಂದು ನಡೆಯುತ್ತಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಸೋತ ತಂಡ ಮತ್ತೊಂದು ಅವಕಾಶವೆಂಬಂತೆ ಕ್ವಾಲಿಫೈಯರ್ 2 ಆಡಲಿದೆ. ಇನ್ನು ಕ್ವಾಲಿಫೈಯರ್ 1 ರಲ್ಲಿ ಮುಖಾಮುಖಿಯಾಗಲಿರುವ ಆರ್‌ಸಿಬಿ ಮತ್ತು ಗುಜರಾತ್ ಎರಡೂ ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಆದ್ದರಿಂದ ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಎರಡೂ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ.

ಐಪಿಎಲ್‌ನಲ್ಲಿ ಮುಖಾಮುಖಿ ದಾಖಲೆ

ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಒಟ್ಟು ಎಂಟು ಬಾರಿ ಮುಖಾಮುಖಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ಪೈಕಿ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಇತ್ತ ಗುಜರಾತ್ ಟೈಟಾನ್ಸ್ ನಾಲ್ಕರಲ್ಲಿ ಗೆದ್ದಿದೆ. ಐಪಿಎಲ್ 2026 ರ ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಜಿಟಿ ವಿರುದ್ಧ ಐದು ವಿಕೆಟ್‌ಗಳಿಂದ ಜಯಗಳಿಸಿತ್ತು. ಆದಾಗ್ಯೂ, ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಆರ್‌ಸಿಬಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ತಮ್ಮ ಮೊದಲ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಕ್ವಾಲಿಫೈಯರ್​ನಲ್ಲಿ ಉಭಯ ತಂಡಗಳ ದಾಖಲೆ

ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ತಂಡವು ಈ ಹಿಂದೆ ಮೂರು ಬಾರಿ ಮೊದಲ ಕ್ವಾಲಿಫೈಯರ್‌ನಲ್ಲಿ ಆಡಿದ್ದು, ಎರಡು ಬಾರಿ ಗೆದ್ದು ಒಮ್ಮೆ ಸೋತಿದೆ. ಐಪಿಎಲ್ 2025 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಫೈನಲ್‌ಗೇರಿತ್ತು. ಹಾಗೆಉಏ 2016 ರಲ್ಲಿ, ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿದ್ದರೆ, 2011 ರಲ್ಲಿ, ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತ್ತು.

ಇತ್ತ ಗುಜರಾತ್ ಟೈಟಾನ್ಸ್ ಮೊದಲ ಕ್ವಾಲಿಫೈಯರ್‌ನಲ್ಲಿ ಮಿಶ್ರ ದಾಖಲೆಯನ್ನು ಹೊಂದಿದೆ. ಗುಜರಾತ್ ಇದುವರೆಗೆ ಎರಡು ಬಾರಿ ಮೊದಲ ಕ್ವಾಲಿಫೈಯರ್‌ ಆಡಿದೆ. ಇದರಲ್ಲಿ ಒಂದರಲ್ಲಿ ಗೆದ್ದು, ಒಂದರಲ್ಲಿ ಸೋತಿದೆ. 2022 ರಲ್ಲಿ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಜಿಟಿ ಮೊದಲ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಆದರೆ 2023 ರಲ್ಲಿ, ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತಿತ್ತು.

IPL 2026: ಕಳೆದ 5 ಆವೃತ್ತಿಗಳ ಫಲಿತಾಂಶ; ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್

ಧರ್ಮಶಾಲಾದಲ್ಲಿ ಜಿಟಿ ಆಡಿಲ್ಲ

ಕ್ವಾಲಿಫೈಯರ್ 1 ರಲ್ಲಿ ಆರ್​ಸಿಬಿ ಕೊಂಚ ಮೇಲುಗೈ ಸಾಧಿಸಿದೆ. ಏಕೆಂದರೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಈ ಮೈದಾನದ ಪರಿಚಯವಿಲ್ಲ. 2022 ರಲ್ಲಿ ಐಪಿಎಲ್‌ಗೆ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ಧರ್ಮಶಾಲಾದಲ್ಲಿ ಪಂದ್ಯ ಆಡುತ್ತಿರುವುದು ಇದೇ ಮೊದಲು. ಏತನ್ಮಧ್ಯೆ, ಆರ್‌ಸಿಬಿ ಈಗಾಗಲೇ ಐಪಿಎಲ್ 2026 ರಲ್ಲಿ ಇಲ್ಲಿ ಒಂದು ಪಂದ್ಯವನ್ನು ಆಡಿದ್ದು, ಅದನ್ನು ಗೆದ್ದಿದೆ. ಆ ಪಂದ್ಯದಲ್ಲಿ, ಆರ್‌ಸಿಬಿ 222 ರನ್ ಗಳಿಸಿ ಪಂಜಾಬ್ ಕಿಂಗ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SAIL Recruitment 2026: ಬಿಇ, ಬಿಟೆಕ್ ಓದಿದವರಿಗೆ ಭರ್ಜರಿ ಉದ್ಯೋಗಾವಕಾಶ; 1.40 ಲಕ್ಷದವರೆಗೆ ಮಾಸಿಕ ವೇತನ! – Kannada News | SAIL Young Professionals Recruitment 2026: Apply for 48 BE/B.Tech Engineer Jobs

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL), ಯುವ ಎಂಜಿನಿಯರ್‌ಗಳಿಗಾಗಿ ಬಂಪರ್ ಉದ್ಯೋಗಾವಕಾಶವನ್ನು ಹೊತ್ತು ತಂದಿದೆ. ‘ಯುವ ವೃತ್ತಿಪರ’ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಗರಿಷ್ಠ 1.40 ಲಕ್ಷ ರೂಪಾಯಿವರೆಗೆ ವೇತನ ಸಿಗಲಿದೆ. ಬಿಇ ಅಥವಾ ಬಿಟೆಕ್ ಮುಗಿಸಿ ಸರ್ಕಾರಿ ವಲಯದಲ್ಲಿ ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇದು ಸುವರ್ಣಾವಕಾಶವಾಗಿದ್ದು, ಆನ್‌ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಪ್ರಮುಖ ವಿವರಗಳು:

  • ನೇಮಕಾತಿ ಸಂಸ್ಥೆ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)
  • ಹುದ್ದೆಯ ಹೆಸರು: ಯುವ ವೃತ್ತಿಪರರು (Young Professionals)
  • ಒಟ್ಟು ಹುದ್ದೆಗಳು: 48
  • ಉದ್ಯೋಗ ಸ್ಥಳ: ಪಶ್ಚಿಮ ಬಂಗಾಳದ ದುರ್ಗಾಪುರ ಸ್ಟೀಲ್ ಪ್ಲಾಂಟ್, IISCO ಸ್ಟೀಲ್ ಪ್ಲಾಂಟ್ ಮತ್ತು ಅಲಾಯ್ ಸ್ಟೀಲ್ ಪ್ಲಾಂಟ್‌ಗಳು.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಶೈಕ್ಷಣಿಕ ಅರ್ಹತೆಗಳೇನು?

ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ BE ಅಥವಾ B.Tech ಪದವಿ ಪಡೆದಿರಬೇಕು. ಪದವಿಯಲ್ಲಿ ಕನಿಷ್ಠ ಶೇ.65 ಅಂಕಗಳನ್ನು ಗಳಿಸಿರುವುದು ಕಡ್ಡಾಯ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದವರು ಅರ್ಹರು. M.Tech ಅಥವಾ MBA ನಂತಹ ಉನ್ನತ ಅಥವಾ ಹೆಚ್ಚುವರಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅರ್ಹ ಅಭ್ಯರ್ಥಿಗಳನ್ನು ಒಟ್ಟು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:

  • ಅರ್ಜಿ ಪರಿಶೀಲನೆ: ಮೊದಲಿಗೆ ಬಂದಂತಹ ಅರ್ಜಿಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ. (ಅಗತ್ಯವಿದ್ದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಅಥವಾ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು).
  • ವೈಯಕ್ತಿಕ ಸಂದರ್ಶನ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ತಾಂತ್ರಿಕ ಜ್ಞಾನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಇಂಟರ್ವ್ಯೂ ನಡೆಸಲಾಗುತ್ತದೆ.
  • ವೈದ್ಯಕೀಯ ಪರೀಕ್ಷೆ: ಸಂದರ್ಶನದಲ್ಲಿ ಪಾಸಾದವರಿಗೆ ಅಂತಿಮ ಹಂತವಾಗಿ ಮೆಡಿಕಲ್ ಟೆಸ್ಟ್ ಇರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನ – Kannada News | Former Driver Uses Duplicate Key to Rob Gold Worth ₹8 Lakh from Ex Employer’s House

ಬೆಂಗಳೂರು, ಮೇ 26: ಮಾಜಿ ಚಾಲಕನೊಬ್ಬ ಡುಪ್ಲಿಕೇಟ್ ಕೀ ಬಳಸಿ ತನ್ನ ಹಳೆ ಮಾಲೀಕರ ಮನೆಗೆ ನುಗ್ಗಿ, 8 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 146 ಗ್ರಾಂ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರಿನ (Bengaluru) ನಾಗರಭಾವಿಯಲ್ಲಿ ನಡೆದಿದೆ. ಆರೋಪಿ ಯೋಗೇಶ್​​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಕಾಶ್ ಎ. ಎಂಬುವವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಯೋಗೇಶ್ ಎಂಬಾತ ಸುಮಾರು ಒಂದು ವರ್ಷ ಅವರ ವೈಯಕ್ತಿಕ ಕಾರು ಚಾಲಕರಾಗಿ ಕೆಲಸ ಮಾಡಿ, ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಎನ್ನಲಾಗಿದೆ.

ಏಪ್ರಿಲ್ 25ರಿಂದ ಕುಟುಂಬದವರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಹೀಗಿದ್ದರೂ ಮನೆಯ ಬಾಗಿಲು ಅಥವಾ ಕಿಡಕಿಗಳು ಸೇರಿ ಎಲ್ಲವೂ ಯಥಾಸ್ಥಿತಿಯಲ್ಲಿದ್ದರೂ ಕಳ್ಳತನ ನಡೆದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ನಡುವೆ ಮೇ 23ರಂದು ಸಂಜೆ ಸುಮಾರು 4.30ರ ವೇಳೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ; ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್!

ಆರೋಪಿ ಯಾರೆಂಬುದು ಗೊತ್ತಾಗಿದ್ದೇಗೆ?

ಪ್ರಕಾಶ್ ಅವರ ಪತ್ನಿ ಮತ್ತು ಕಿರಿಯ ಪುತ್ರಿ ದಂತ ಚಿಕಿತ್ಸೆಗೆ ತೆರಳಿದ್ದ ವೇಳೆ, ಮನೆಯಲ್ಲಿ ಒಬ್ಬಳೇ ಇದ್ದ ಹಿರಿಯ ಪುತ್ರಿಗೆ ಮಾಸ್ಟರ್ ಬೆಡ್‌ರೂಮ್​​ ಕಡೆಯಿಂದ ಶಬ್ದ ಕೇಳಿಸಿದೆ. ಹೀಗಾಗಿ ಅನುಮಾನಗೊಂಡು ಆಕೆ ಹೋಗಿ ನೋಡಿದಾಗ ಯೋಗೇಶ್ ಮನೆಯ ಮುಖ್ಯ ಬಾಗಿಲಿನ ಡುಪ್ಲಿಕೇಟ್ ಕೀ ಬಳಸಿ ಒಳನುಗ್ಗಿ, ಚಿನ್ನಾಭರಣಗಳಿದ್ದ ಡ್ರಾಯರ್ ತೆರೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಪ್ರಕಾಶ್ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಯೋಗೇಶ್ ಹೇಳಿದ್ದಾನೆ. ಕುಟುಂಬದವರು ಮನೆಗೆ ಬಂದು ವಿಚಾರಿಸಿದಾಗ ಆತ ಮೌನವಾಗಿದ್ದ. ಆದರೆ ಪೊಲೀಸರಿಗೆ ಕರೆ ಮಾಡುವುದಾಗಿ ಪ್ರಕಾಶ್ ಹೇಳುತ್ತಿದ್ದಂತೆ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕುಟುಂಬದವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯೋಗೇಶ್ ಡುಪ್ಲಿಕೇಟ್ ಕೀ ಬಳಸಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ದೃಶ್ಯಗಳು ಪತ್ತೆಯಾಗಿವೆ. ಕಳುವಾದ ಚಿನ್ನಾಭರಣಗಳಲ್ಲಿ 24 ಗ್ರಾಂ ಹಾರ, 6 ಗ್ರಾಂ ಉಂಗುರ, 24 ಗ್ರಾಂ ಬಳೆಗಳು, 12 ಗ್ರಾಂ ಚಿನ್ನದ ನಾಣ್ಯ, 16 ಗ್ರಾಂ ಸರ ಹಾಗೂ 64 ಗ್ರಾಂ ಮಾಂಗಲ್ಯ ಸರ ಸೇರಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:48 pm, Tue, 26 May 26

Source link

ದಿಲ್ಲಿಯಲ್ಲಿ ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್​​​​​​ಸೈಡ್ ಡಿಟೇಲ್ಸ್ – Kannada News | Karnataka Leadership Row: Rahul Gandhi And Others High command Leaders Meeting With CM Siddaramaiah, Here Is EXCLUSIVE report

ನವದೆಹಲಿ, (ಮೇ 26): ಕರ್ನಾಟಕ (karnataka) ರಾಜಕೀಯದ  ಅತ್ಯಂತ ದೊಡ್ಡ ಕುತೂಹಲಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ (Congress High command )ಅಂಗಳದಲ್ಲಿ ಮುಖ್ಯಮಂತ್ರಿ ಕುರ್ಚಿಯ ‘ಫೈನಲ್ ಫೈಟ್’ ಆರಂಭವಾಗಿದ್ದು, ಇಡೀ ರಾಜ್ಯದ ಕಣ್ಣು ಈಗ ದೆಹಲಿಯತ್ತ ನೆಟ್ಟಿದೆ. ದೆಹಲಿಯ ಇಂದಿರಾ ಭವನದಲ್ಲಿ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಪ್ರತ್ಯೇಕ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ಉಭಯ ನಾಯಕರ ಸಭೆ ನಡೆದಿದ್ದು, ಈ ವೇಳೆ ಗಂಭೀರ ಚರ್ಚೆಯಾಗಿವೆ. ಇನ್ನು ಸಾಧಕ-ಬಾಧಕಗಳ ಬಗ್ಗೆಯೂ ಸಹ ಸಿದ್ದರಾಮಯ್ಯನವರು ರಾಹುಲ್ ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಸಭೆ ಬಳಿಕ ಇದೀಗ ಮತ್ತೊಂದು ಮೀಟಿಂಗ್ ಆರಂಭವಾಗಿದೆ. ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ವೇಣುಗೋಪಾಲ್,ಸುರ್ಜವಾಲಾ ಸಭೆ ನಡೆಸಿದ್ದು, ಇದಾದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಧು ನಕಲಿ ಆದ್ರೆ ದ್ರೋಹ ಮಾತ್ರ ನಿಜ, 42 ಕುಟುಂಬಗಳಿಗೆ ದ್ರೋಹ ಬಗೆದ ಮಹಿಳೆಯರು – Kannada News | MP Marriage Scam: 42 Families Cheated by Fake Brides, Lakhs Lost in Wedding Fraud

ಭೋಪಾಲ್, ಮೇ 26: ಮದುವೆ(Marriage) ಎಂಬ ಪವಿತ್ರ ಬಂಧನವನ್ನೇ ಬಂಡವಾಳ ಮಾಡಿಕೊಂಡು ಅಮಾಯಕರ ಭಾವನೆಗಳೊಂದಿಗೆ ಆಟವಾಡಿದ ವಂಚಕ ಚಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಮದುವೆ ಹೆಸರಿನಲ್ಲಿ 42 ಕುಟುಂಬಗಳಿಗೆ ಮಹಿಳೆಯರು ಮೋಸ ಮಾಡಿದ್ದರು ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ.
ಮಧ್ಯಪ್ರದೇಶದ ವಿವಿಧ ಜಿಲ್ಲೆಗಳ ಬರೋಬ್ಬರಿ 42 ಟುಂಬಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಮದುವೆಯ ದಿರಿಸು ಧರಿಸಿ ಸಂಭ್ರಮದಿಂದ ಮಂಟಪಕ್ಕೆ ಬಂದ ವರರು ಕಾಯುತ್ತಲೇ ನಿಂತರೂ, ವಧುಗಳು ಮಾತ್ರ ಬರಲೇ ಇಲ್ಲ, ವು ಮೋಸ ಹೋಗಿರುವುದನ್ನು ಅರಿತ ಕುಟುಂಬಗಳು ಕಣ್ಣೀರು ಹಾಕುತ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿವೆ.

ಭಾವನೆಗಳೊಂದಿಗೆ ಚೆಲ್ಲಾಟ: ವಂಚಕರ ಪಕ್ಕಾ ಸ್ಕೆಚ್
ಆರೋಪಿಗಳು ಸೂಕ್ತ ವಧುಗಳನ್ನು ಹುಡುಕಲು ಕಷ್ಟಪಡುತ್ತಿದ್ದ ಗಂಡು ಮಕ್ಕಳ ಕುಟುಂಬಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದ್ದರು. ಅವರ ಭಾವನಾತ್ಮಕ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡ ಖದೀಮರು, ಸಾಮಾಜಿಕ ಮಾಧ್ಯಮಗಳಿಂದ (Social Media) ಡೌನ್‌ಲೋಡ್ ಮಾಡಿದ ಸುಂದರ ಯುವತಿಯರು ಹಾಗೂ ಮಾಡೆಲ್‌ಗಳ  ಫೋಟೊಗಳನ್ನು ಮೊಬೈಲ್‌ನಲ್ಲಿ ತೋರಿಸಿ ನಂಬಿಸಿದ್ದರು.

ಈ ಹುಡುಗಿಯರೆಲ್ಲಾ ಇಂದೋರ್‌ನ ಅನಾಥಾಶ್ರಮದವರಾಗಿದ್ದು, ಇವರೊಂದಿಗೆ ಸರಿಯಾದ ವ್ಯವಸ್ಥೆಗಳ ಮೂಲಕ ಮೇ 25 ರಂದು ದೇವಾಸ್‌ನಲ್ಲಿ ಮದುವೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಪ್ರತಿ ಕುಟುಂಬದಿಂದ 12,000 ರೂ. ನಿಂದ ಹಿಡಿದು 25,000 ರೂ. ವರೆಗೆ ಹಣ ವಸೂಲಿ ಮಾಡಿದ್ದರು. ಒಟ್ಟಾರೆ ಈ ಜಾಲವು 10 ಲಕ್ಷಕ್ಕೂ ಅಧಿಕ ಮೊತ್ತವನ್ನು ಲೂಟಿ ಮಾಡಿದೆ ಎಂದು ಅಂದಾಜಿಸಲಾಗಿದೆ.

ಸಂಘಟಕರ ಸೂಚನೆಯಂತೆ ಮೇ 24 ರಂದು ಮುಂಜಾನೆ 8 ಗಂಟೆಯಿಂದಲೇ ಹಲವಾರು ಜಿಲ್ಲೆಗಳಿಂದ ವರರು ಮತ್ತು ಅವರ ಸಂಬಂಧಿಕರು ಅತ್ಯಂತ ಸಂಭ್ರಮದಿಂದ ಸಿದ್ಧರಾಗಿ ದೇವಾಸ್‌ನ ರಾಧಾಗಂಜ್‌ನಲ್ಲಿರುವ ಕ್ಲಬ್ ಮೈದಾನಕ್ಕೆ ತಲುಪಿದ್ದರು. ಆದರೆ ಅಲ್ಲಿಗೆ ಹೋದಾಗ ಅವರಿಗೆ ಕಾದಿದ್ದು ಭಾರಿ ಆಘಾತ, ಅಲ್ಲಿ ಯಾವುದೇ ವಿವಾಹ ಮಂಟಪವಾಗಲಿ, ಮದುವೆಯ ಸಿದ್ಧತೆಯಾಗಲಿ ಇರಲಿಲ್ಲ. ಮುಖ್ಯವಾಗಿ ಮದುವೆಯಾಗಬೇಕಾದ ವಧುಗಳ ಸುಳಿವೇ ಇರಲಿಲ್ಲ.

ಮತ್ತಷ್ಟು ಓದಿ: ಗಂಡ ವಿದೇಶದಲ್ಲಿ, ಪತ್ನಿ ಪ್ರಿಯಕರನ ತೋಳಿನಲ್ಲಿ, ಇಬ್ಬರಿಗೂ ಮದುವೆ ಮಾಡಿಸಿದ ಅತ್ತೆ-ಮಾವ

ಅಲ್ಲಿ ಸಿಕ್ಕ ಸಂಘಟಕರಾದ ಮುಖೇಶ್ ಬೈರಾಗಿ ಮತ್ತು ಆತನ ಪತ್ನಿ ಸುನೀತಾ, ವಧುಗಳು ಇಂದೋರ್‌ನಿಂದ ಹೊರಟಿದ್ದಾರೆ, ದಾರಿಯಲ್ಲಿದ್ದಾರೆ ಎಂದು ಮುಂಜಾನೆಯಿಂದ ರಾತ್ರಿಯವರೆಗೆ ನೆಪಗಳನ್ನು ಹೇಳುತ್ತಾ ಕಾಲಹರಣ ಮಾಡಿದ್ದಾರೆ. ರಾತ್ರಿ 10 ಗಂಟೆಯಾದರೂ ಯಾರೂ ಬರದಿದ್ದಾಗ ತಾವು ಸಂಪೂರ್ಣವಾಗಿ ಮೋಸ ಹೋಗಿರುವುದು ವರನ ಕಡೆಯವರಿಗೆ ಸ್ಪಷ್ಟವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೈವೀರ್ ಭಡೋರಿಯಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಪ್ರೀತಿ ಕಟಾರೆ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ವಂಚನೆಗೆ ಒಳಗಾದ ಅಭಿಷೇಕ್ ಎಂಬುವವರ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿಗಳಾದ ಮುಖೇಶ್ ಬೈರಾಗಿ ಮತ್ತು ಆತನ ಪತ್ನಿ ಸುನೀತಾ ಬೈರಾಗಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ವಿಚಾರಣೆ ವೇಳೆ ಮುಖೇಶ್, ಇಂದೋರ್‌ನಲ್ಲಿರುವ ತನ್ನ ಅಣ್ಣ ದಿನೇಶ್ ದಾಸ್ ಬೈರಾಗಿ ಹುಡುಗಿಯರ ಫೋಟೋ ಮತ್ತು ಫೋನ್ ನಂಬರ್ ನೀಡಿದ್ದಾಗಿ ಹಾಗೂ ಮಾವ ನರಸಿಂಗ್ ದಾಸ್ ಬೈರಾಗಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ಲಾನ್ ಉಲ್ಟಾ ಹೊಡೆಯುತ್ತಿದ್ದಂತೆ ದಿನೇಶ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.

ಸೊಸೆಯಂದಿರನ್ನು ಮನೆಗೆ ಕರೆದೊಯ್ಯುವ ಭಾರಿ ಆಶಯದೊಂದಿಗೆ ಮದುವೆಯ ಬಟ್ಟೆ ಧರಿಸಿ ಬಂದಿದ್ದ 42 ಕುಟುಂಬಗಳ ಆಸೆಗಳು ಕ್ಷಣಾರ್ಧದಲ್ಲಿ ನುಚ್ಚುನೂರಾಗಿವೆ. ಅವರ ದಿನವು ಮಂಗಳ ವಾದ್ಯಗಳೊಂದಿಗೆ ಮುಕ್ತಾಯವಾಗುವ ಬದಲಿಗೆ ಪೊಲೀಸ್ ಠಾಣೆಯ ದೂರುಗಳೊಂದಿಗೆ ಕೊನೆಗೊಂಡಿದೆ. ಸದ್ಯ ತಲೆಮರೆಸಿಕೊಂಡಿರುವ ದಿನೇಶ್ ಮತ್ತು ನರಸಿಂಗ್ ದಾಸ್ ಪತ್ತೆಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದು, ಆರೋಪಿಗಳ ಪತ್ತೆಗೆ ವಿದಿಶಾ ಜಿಲ್ಲೆಗೆ ವಿಶೇಷ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:48 pm, Tue, 26 May 26

Source link

ಹೊಸ ಹೇರ್​​ಸ್ಟೈಲ್​​ನಲ್ಲಿ ಮಿಂಚಿದ ಮೌನ ಗುಡ್ಡೆಮನೆ; ಇಲ್ಲಿವೆ ಸುಂದರ ಫೋಟೋಸ್ – Kannada News | Mouna Guddemane’s Viral New Short Hairstyle: Kannada Actress Stuns Fans on Instagram

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More

Source link

5G Network Slicing: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ? – Kannada News | Airtel 5G Network Slicing India: Benefits, Drawbacks & Net Neutrality Debate

ಮೊಬೈಲ್ ಬಳಸುತ್ತಿರುವವರುImage Credit source: Getty Images

ನವದೆಹಲಿ, ಮೇ 26: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಇತ್ತೀಚೆಗೆ ಅತ್ಯಂತ ದೊಡ್ಡ ತಾಂತ್ರಿಕ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಭಾರತದಲ್ಲಿ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್ ಕಮರ್ಷಿಯಲ್ ಅಡಿ ಇಟ್ಟಿದೆ. ಇನ್ಮುಂದೆ, ಪ್ರೀಮಿಯಮ್ ಬಳಕೆದಾರರಿಗೆ ಸುಗಮ ವೇಗ, ಸಾಮಾನ್ಯ ಬಳಕೆದಾರರಿಗೆ ಮಂದಗತಿಯ ವೇಗದ ಸೇವೆ ಸಿಗುವ ಕಾಲ ಬಂದಂತಿದೆ. ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ (Bharti Airtel) ತನ್ನ ಗ್ರಾಹಕರಿಗಾಗಿ ದೇಶದಲ್ಲೇ ಮೊದಲ ಬಾರಿಗೆ 5G ನೆಟ್‌ವರ್ಕ್ ಸ್ಲೈಸಿಂಗ್ (Network Slicing) ತಂತ್ರಜ್ಞಾನ ಆಧಾರಿತ ‘ಪ್ರಯಾರಿಟಿ ಪೋಸ್ಟ್‌ಪೇಯ್ಡ್ (Priority Postpaid)’ ಸೇವೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಕೇವಲ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಬದಲಾಗಿ, ನೆಟ್‌ವರ್ಕ್ ಅನುಭವವನ್ನೇ ಸಂಪೂರ್ಣವಾಗಿ ಬದಲಾಯಿಸುವ ತಂತ್ರಜ್ಞಾನವಾಗಿದೆ. ಅದೇ ವೇಳೆ, ಸಾಮಾನ್ಯ ಗ್ರಾಹಕರು ಉತ್ತಮ ಇಂಟರ್ನೆಟ್ ಸರ್ವಿಸ್ ಪಡೆಯಲು ಹೆಚ್ಚಿನ ಹಣ ತೆರಬೇಕಾಗಬಹುದು.

ಏರ್ಟೆಲ್​ನ ಈ ನಡೆಯನ್ನು ಭಾರತದ ಸೆಲೂಲಾರ್ ಆಪರೇಟರ್ಸ್ ಅಸೋಷಿಯೇಶನ್​ನ ಮಹಾನಿರ್ದೇಶಕ ಡಾ. ಎಸ್.ಪಿ. ಕೋಚರ್ (Dr. S.P. Kochar) ಸ್ವಾಗತಿಸಿದ್ದಾರೆ. ಅಮೆರಿಕ, ಸಿಂಗಾಪುರ, ಚೀನಾ ಹಾಗು ಕೆಲ ಐರೋಪ್ಯ ದೇಶಗಳಲ್ಲಿ ಇರುವ 5ಜಿ ನೆಟ್ವರ್ಕ್ ಸ್ಲೈಸಿಂಗ್ ತಂತ್ರಜ್ಞಾನವನ್ನು ನಮ್ಮದೇ ಒಂದು ಕಂಪನಿ ಭಾರತಕ್ಕೆ ತಂದಿರುವುದು ಖುಷಿ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ. ಏರ್​ಟೆಲ್​ನ ಪ್ರಯಾರಿಟಿ ಪೋಸ್ಟ್​ಪೇಡ್ ಪ್ಲಾನ್​ಗಳು ವೈಯಕ್ತಿಕ ಗ್ರಾಹಕರಾದರೆ ತಿಂಗಳಿಗೆ 449 ರೂನಿಂದ ಆರಂಭವಾಗುತ್ತದೆ.

ನೆಟ್‌ವರ್ಕ್ ಸ್ಲೈಸಿಂಗ್ ಎಂದರೇನು?

ಒಂದೇ ದೊಡ್ಡ ಹೆದ್ದಾರಿಯಲ್ಲಿ ಬಸ್, ಬೈಕ್, ಆಂಬ್ಯುಲೆನ್ಸ್ ಎಲ್ಲವೂ ಒಟ್ಟಿಗೆ ಚಲಿಸಿದಾಗ ಟ್ರಾಫಿಕ್ ಜಾಮ್ ಆಗುತ್ತದೆ. ಆದರೆ ಅದೇ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ ಅಥವಾ ವಿವಿಐಪಿ ವಾಹನಗಳಿಗಾಗಿ ಒಂದು ವಿಶೇಷ ‘ಮೀಸಲು ಲೇನ್’ (Dedicated Lane) ನಿರ್ಮಿಸಿದರೆ ಹೇಗಿರುತ್ತದೆಯೋ, ಹಾಗೆಯೇ 5G ನೆಟ್‌ವರ್ಕ್ ಸ್ಲೈಸಿಂಗ್ ಕೆಲಸ ಮಾಡುತ್ತದೆ.

ಇದು ಒಂದೇ ಭೌತಿಕ 5G ನೆಟ್‌ವರ್ಕ್ ಮೂಲಸೌಕರ್ಯದೊಳಗೆ ತಂತ್ರಜ್ಞಾನದ ಮೂಲಕ ಹಲವು ಸ್ವತಂತ್ರ, ವರ್ಚುವಲ್ (Virtual) ನೆಟ್‌ವರ್ಕ್ ಪದರಗಳನ್ನು (Slices) ಸೃಷ್ಟಿಸುತ್ತದೆ. ಕ್ರಿಕೆಟ್ ಸ್ಟೇಡಿಯಂ ಅಥವಾ ಜನನಿಬಿಡ ಮಾರುಕಟ್ಟೆಯಂತಹ ಟ್ರಾಫಿಕ್ ಹೆಚ್ಚಿರುವ ಜಾಗದಲ್ಲೂ ಪ್ರಯಾರಿಟಿ ಗ್ರಾಹಕರಿಗೆ ಯಾವುದೇ ಅಡ್ಡಿಯಿಲ್ಲದ ಇಂಟರ್ನೆಟ್ ಸಿಗುವಂತೆ ಇದು ಮಾಡುತ್ತದೆ.

ಇದನ್ನೂ ಓದಿ: ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು

ನೆಟ್‌ವರ್ಕ್ ಸ್ಲೈಸಿಂಗ್‌ನ ಅನುಕೂಲಗಳು

  • ಸ್ಥಿರ ಹಾಗೂ ಅಡೆತಡೆಯಿಲ್ಲದ ಕನೆಕ್ಟಿವಿಟಿ: ಹಬ್ಬಗಳು, ಸಾರ್ವಜನಿಕ ಸಭೆಗಳು ಅಥವಾ ಕನ್ಸರ್ಟ್‌ಗಳಂತಹ ಅತಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸಾಮಾನ್ಯ ನೆಟ್‌ವರ್ಕ್ ಜಾಮ್ ಆದರೂ, ಈ ಸ್ಲೈಸಿಂಗ್ ಪಡೆದ ಗ್ರಾಹಕರಿಗೆ ನಿರಂತರ ಹೈ-ಸ್ಪೀಡ್ ಇಂಟರ್ನೆಟ್ ಸಿಗುತ್ತದೆ. ಆಫೀಸ್ ಕಾಲ್‌ಗಳು ಅಥವಾ ತುರ್ತು ಡಿಜಿಟಲ್ ಪೇಮೆಂಟ್‌ಗಳು ಸುಲಭವಾಗಿ ಆಗುತ್ತವೆ.
  • ವಿವಿಧ ಅಗತ್ಯಗಳಿಗೆ ತಕ್ಕಂತೆ ನೆಟ್‌ವರ್ಕ್: ವಿಡಿಯೋ ಸ್ಟ್ರೀಮಿಂಗ್‌ಗೆ ಹೆಚ್ಚಿನ ಬ್ಯಾಂಡ್‌ವಿಡ್ತ್ ಬೇಕು, ಆನ್‌ಲೈನ್ ಗೇಮಿಂಗ್‌ಗೆ ಕಡಿಮೆ ಲ್ಯಾಟೆನ್ಸಿ (Latency – ಡೇಟಾ ತಲುಪಲು ತೆಗೆದುಕೊಳ್ಳುವ ಸಮಯ) ಬೇಕು. ನೆಟ್‌ವರ್ಕ್ ಸ್ಲೈಸಿಂಗ್ ಆಯಾ ಅಗತ್ಯಕ್ಕೆ ತಕ್ಕಂತೆ ನೆಟ್‌ವರ್ಕ್ ಅನ್ನು ಪ್ರತ್ಯೇಕವಾಗಿ ಹೊಂದಿಸಬಲ್ಲದು.
  • ಉದ್ಯಮಗಳಿಗೆ ವರದಾನ (Enterprise Use): ಭವಿಷ್ಯದಲ್ಲಿ ಆಸ್ಪತ್ರೆಗಳು (ದೂರಸ್ಥ ಶಸ್ತ್ರಚಿಕಿತ್ಸೆ), ಸ್ವಯಂಚಾಲಿತ ವಾಹನಗಳು (Autonomous Vehicles) ಮತ್ತು ಕೈಗಾರಿಕೆಗಳ ಸ್ಮಾರ್ಟ್ ಯಂತ್ರೋಪಕರಣಗಳಿಗೆ ಅತ್ಯಂತ ಸುರಕ್ಷಿತ ಹಾಗೂ ಮೀಸಲಾದ ನೆಟ್‌ವರ್ಕ್ ಒದಗಿಸಲು ಇದು ಸಹಕಾರಿ.

ನೆಟ್ವರ್ಕ್ ಸ್ಲೈಸಿಂಗ್​ನಿಂದ ಅನಾನುಕೂಲಗಳು

  • ನೆಟ್ ನ್ಯೂಟ್ರಾಲಿಟಿ (Net Neutrality) ವಿವಾದ: ಇದು ಪ್ರಸ್ತುತ ಟೆಲಿಕಾಂ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಂಟರ್ನೆಟ್‌ನಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು ನೆಟ್ ನ್ಯೂಟ್ರಾಲಿಟಿ ನಿಯಮ. ಆದರೆ ಹಣ ನೀಡುವ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಪ್ರತ್ಯೇಕ ‘ವೇಗದ ಲೇನ್’ ನೀಡುವುದರಿಂದ ಸಾಮಾನ್ಯ ಅಥವಾ ಪ್ರಿಪೇಯ್ಡ್ ಗ್ರಾಹಕರಿಗೆ ಅನ್ಯಾಯವಾಗಬಹುದು ಎಂಬ ಆತಂಕ ತಜ್ಞರಲ್ಲಿದೆ. ಆದರೆ ಏರ್‌ಟೆಲ್ ಸಂಸ್ಥೆಯು ತಾವು ಯಾವುದೇ ನಿರ್ದಿಷ್ಟ ಆ್ಯಪ್‌ಗಳಿಗೆ ಆದ್ಯತೆ ನೀಡುತ್ತಿಲ್ಲ, ಕೇವಲ ನೆಟ್‌ವರ್ಕ್ ಸಾಮರ್ಥ್ಯ ನಿರ್ವಹಣೆ ಮಾಡುತ್ತಿರುವುದರಿಂದ ಇದು ನೆಟ್ ನ್ಯೂಟ್ರಾಲಿಟಿ ನಿಯಮ ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
  • ಬೆಲೆ ಏರಿಕೆಯ ಹೊರೆ: ಸಾಮಾನ್ಯ ಗ್ರಾಹಕರು ಈ ವಿಶೇಷ ಸೇವೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ನೀಡಿ ಪ್ರೀಮಿಯಂ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ಖರೀದಿಸಬೇಕಾಗುತ್ತದೆ.
  • ಸಾಮಾನ್ಯ ಗ್ರಾಹಕರ ನೆಟ್‌ವರ್ಕ್ ಕುಸಿತದ ಭೀತಿ: ಲಭ್ಯವಿರುವ ಸ್ಪೆಕ್ಟ್ರಮ್ ಲಿಮಿಟೆಡ್ ಆಗಿರುವುದರಿಂದ, ಪ್ರೀಮಿಯಂ ಗ್ರಾಹಕರಿಗೆ ಹೆಚ್ಚಿನ ನೆಟ್‌ವರ್ಕ್ ಹಂಚಿಕೆ ಮಾಡಿದಾಗ ಸಾಮಾನ್ಯ ಪ್ರಿಪೇಯ್ಡ್ ಗ್ರಾಹಕರ ಇಂಟರ್ನೆಟ್ ವೇಗ ಕುಸಿಯುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

ಜಾಗತಿಕ ಮಾರುಕಟ್ಟೆಯೊಂದಿಗೆ ಹೋಲಿಕೆ

ಭಾರತದಲ್ಲಿ ಏರ್‌ಟೆಲ್ ಈಗಷ್ಟೇ ಈ ತಂತ್ರಜ್ಞಾನವನ್ನು ವಾಣಿಜ್ಯಿಕವಾಗಿ ಸಾರ್ವಜನಿಕರಿಗೆ ಪರಿಚಯಿಸುತ್ತಿದೆ. ಆದರೆ ಜಾಗತಿಕವಾಗಿ ಈ ತಂತ್ರಜ್ಞಾನ ಈಗಾಗಲೇ ಮುಂಚೂಣಿಯಲ್ಲಿದೆ. ಆದರೆ, ಅಮೆರಿಕ, ಸಿಂಗಾಪುರ, ಬ್ರಿಟನ್, ಚೀನಾ ಮೊದಲಾದ ದೇಶಗಳಲ್ಲಿ ಟೆಲಿಕಾಂ ಕಂಪನಿಗಳು ಉದ್ಯಮಗಳು ಹಾಗೂ ಸಾರ್ವಜನಿಕ ವಲಯಗಳಿಗೆ ಈ ಸ್ಲೈಸಿಂಗ್ ಸರ್ವಿಸ್ ನೀಡುತ್ತಿವೆ. ಭಾರತದಲ್ಲಿ ವಿಸ್ತೃತವಾಗಿ ನೀಡಲಾಗುತ್ತಿದೆ.

ಜಾಗತಿಕವಾಗಿ ನೆಟ್ ನ್ಯೂಟ್ರಾಲಿಟಿ ನಿಯಮಗಳನ್ನು ಈ ತಂತ್ರಜ್ಞಾನಕ್ಕೆ ಪೂರಕವಾಗಿ ಮಾರ್ಪಡಿಸಲಾಗಿದೆ ಅಥವಾ ವಿಶೇಷ ವಿನಾಯಿತಿ ನೀಡಲಾಗಿದೆ. ಭಾರತದಲ್ಲಿ TRAI ಮತ್ತು ದೂರಸಂಪರ್ಕ ಇಲಾಖೆ (DoT) ಈ ವ್ಯವಸ್ಥೆಯು ಸಾಮಾನ್ಯ ಗ್ರಾಹಕರ ಇಂಟರ್ನೆಟ್ ಅನುಭವವನ್ನು ಕೆಡಿಸುತ್ತಿದೆಯೇ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ: ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ – Kannada News | Karnataka education Department issues guidelines Over School reopen From June 1st

ಬೆಂಗಳೂರು (ಮೇ.26): ಬೇಸಿಗೆ ರಜೆ (Summer Holidays) ಅಂತ್ಯವಾಗಲಿದ್ದು, ಜೂನ್ 1ರಿಂದ ಕರ್ನಾಟಕದಾದ್ಯಂತ ಶಾಲೆಗಳು (Schools) ಆರಂಭವಾಗಲಿವೆ. ಇನ್ನು ಮಕ್ಕಳು (Students) ಸಹ ಬೇಸಿಗೆ ರಜೆ ಮುಗಿಸಿ ಶಾಲೆಗೆ ತೆರಳಲು ತಯಾರಿ ಮಾಡಿಕೊಂಡಿದ್ದಾರೆ. ಇನ್ನು ಶಾಲೆ ಆರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ಮಾರ್ಗಸೂಚಿ (Education Department Guidelines) ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯಗೊಳಿಸಿದೆ. ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಶಾಲೆ ಆರಂಭಕ್ಕೆ ಕೌಂಟ್ ಡೌನ್
  • ಶಾಲೆಗಳ ಆಂಭಕ್ಕೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟ
  • ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟ
  • ಶಾಲಾ ಕಟ್ಟಡಗಳ ಸುರಕ್ಷತೆಗೆ ಆದ್ಯತೆ ಕೊಡಲು ಒತ್ತು

ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ

ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದ್ದು, ಶಾಲಾ ಕಟ್ಟಡಗಳ ಸುರಕ್ಷತೆಗೆ ಆದ್ಯತೆ ಕೊಡಲು ಒತ್ತು ನೀಡಲಾಗಿದೆ. ಶಾಲಾ ಕಟ್ಟಡಗಳು, ಶೌಚಾಲಯಗಳು ಅಥವಾ ಅಡುಗೆ ಕೋಣೆಗಳು ಶಿಥಿಲಗೊಂಡಿದ್ರೆ, ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ದುರಸ್ತಿ ಅಥವಾ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಶಾಲೆ ಕಟ್ಟಡದ ಸುರಕ್ಷತೆಗೆ ಕ್ರಮ ವಹಿಸಲು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಮಕ್ಕಳೇ ಮುಗಿಯಿತು ಸಮ್ಮರ್ ಹಾಲಿಡೇಸ್ ಮಜಾ!: ಮೇ 29 ರಿಂದಲೇ ಸ್ಕೂಲ್ ಬೆಲ್ ರೆಡಿ; ಈ ಬಾರಿ ಸಿಗಲಿದೆ ಭರ್ಜರಿ ದಸರಾ ರಜೆ!

ಮಾರ್ಗಸೂಚಿಯ ಪ್ರಮುಖಾಂಶಗಳು

  • ಶಾಲಾ ಕಟ್ಟಡಗಳು, ಶೌಚಾಲಯಗಳು ಅಥವಾ ಅಡುಗೆ ಕೋಣೆಗಳು ಶಿಥಿಲಗೊಂಡಿದ್ದರೆ ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ದುರಸ್ತಿ ಅಥವಾ ತೆರವುಗೊಳಿಸಬೇಕು.
  • 6 ರಿಂದ 14 ವರ್ಷದ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು.
  • ಉರ್ದು-ಇಂಗ್ಲೀಷ್ ದ್ವಿಭಾಷಾ ಮಾಧ್ಯಮವೂ ಸಹ ಈ ವರ್ಷವೇ ಆರಂಭ
  • ದ್ವಿಭಾಷಾ ಶಿಕ್ಷಣಕ್ಕೆ ಇಲಾಖೆಯಿಂದ ಪೂರ್ವಾನುಮತಿ ಪಡೆದಿರುವ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚನೆ.
  • ಮೇ 28 ಶಾಲೆಗಳ ಸಂಪೂರ್ಣ ಸ್ವಚ್ಛತೆ, ಕುಡಿಯುವ ನೀರು ಮತ್ತು ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ.
  • ಮೇ 29 ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.
  • ಜೂನ್ 1 ರಂದು ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳ ದಾಖಲಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭ.
  • ಜೂನ್ 30 – ದಾಖಲಾತಿ ಆಂದೋಲನ ಮುಕ್ತಾಯ.
  • ವಿದ್ಯಾರ್ಥಿಗಳು & ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ.

ಕರ್ನಾಕಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link