Category Archives: Blog

Your blog category

Video: ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿಂದ ಮಹಿಳೆಯನ್ನು ರಕ್ಷಿಸಿದ ಜನ – Kannada News | Seconds from Disaster, Strangers Leap In to Save Woman from Sinking SUV

ವರ್ಜೀನಿಯಾ, ಜನವರಿ 21: ನಿಯಂತ್ರಣ ತಪ್ಪಿ ರಸ್ತೆಯಿಂದ ಸಮುದ್ರಕ್ಕೆ ಕಾರು ಬಿದ್ದಿತ್ತು. ಇನ್ನೇನು ಕಾರು ಮುಳುಗುವುದರಲ್ಲಿತ್ತು, ಅಷ್ಟರೊಳಗೆ ಅಲ್ಲಿದ್ದ ಜನ ಕೂಡಲೇ ನೀರಿಗೆ ಹಾರಿ ಇನ್ನೇನು ಕಾರು ಮುಳುಗುತ್ತಿದೆ ಎನ್ನುವಷ್ಟರಲ್ಲಿ ಕಾರಿನ ಗಾಜು ಒಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಘಟನೆ ವರ್ಜೀನಿಯಾದಲ್ಲಿ ನಡೆದಿದೆ. ಅಲ್ಲಿದ್ದವರ್ಯಾರು ಕೂಡ ಆಕೆಗೆ ಪರಿಚಿತರಲ್ಲ, ಹಾಗೆಂದ ಮಾತ್ರಕ್ಕೆ ಕಾರಿನ ವಿಡಿಯೋ ಮಾಡುತ್ತಲೂ ನಿಂತಿರಲಿಲ್ಲ. ಕೂಡಲೇ ಆಕೆಯನ್ನು ರಕ್ಷಿಸುವುದು ಮೊದ ಕರ್ತವ್ಯವೆಂದು ಅರಿತು ನೀರಿಗೆ ಹಾರಿದ್ದರು. ನೋಡನೋಡುತ್ತಲೇ ಕಾರು ಮುಳುಗಿತ್ತು. ಕೂಡಲೇ ಗಾಜನ್ನು ಒಡೆದು ಮಹಿಳೆಯನ್ನು ಕಾಪಾಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ ಕೆಎಸ್​​​ಆರ್​​ಟಿಸಿ ಬಸ್, ಸಾರಿಗೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ – Kannada News | KSRTC Breakdowns Rise: Chikkamagaluru Incident Highlights Transport Dept’s Challenge

ಚಿಕ್ಕಮಗಳೂರು, ಜ.21: ಸರ್ಕಾರದ ಶಕ್ತಿ ಯೋಜನೆ ಬಂದ ನಂತರ ಈ ಬಸ್​​​ಗಳು ಅಲ್ಲಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸರ್ಕಾರಿ ಬಸ್ಸುಗಳು ರಸ್ತೆ ಮಧ್ಯ ಕೆಟ್ಟು ನಿಂತಿರುವ ವಿಡಿಯೋಗಳು ಕೂಡ ಆಗ್ಗಾಗೆ ವೈರಲ್​​ ಆಗುತ್ತಿದೆ. ಇದೀಗ ಚಿಕ್ಕಮಗಳೂರು ತಾಲೂಕಿನ‌ ಕೈಮರ ಸಮೀಪದಲ್ಲಿ ಇಂತಹದೇ ಘಟನೆಯೊಂದು ನಡೆದಿದೆ. ಕೆಎಸ್​​ಆರ್​​​ಟಿಸಿ ಬಸ್ಸೊಂದು ದಾರಿ ಮಧ್ಯೆದಲ್ಲಿ ನಿಂತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್​​​ನ್ನು ​​ ಸ್ಟಾರ್ಟ್​​ ಮಾಡಲು ಚಾಲಕ, ನಿರ್ವಾಹಕ ತುಂಬಾ ಕಷ್ಟಪಟ್ಟಿದ್ದಾರೆ. ಕೊನೆಗೆ ಪ್ರಯಾಣಿಕರೇ ಇಳಿದು ತಳ್ಳಿದ್ದಾರೆ. ಚಿಕ್ಕಮಗಳೂರು ನಗರದಿಂದ ದೇವೀರಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದ ಈ ಬಸ್​​​​​ ಏಕಾಏಕಿ ದಾರಿ ಮಧ್ಯ ನಿಂತಿದೆ. ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ಟ್​​ ಆಗಿಲ್ಲ. ಕೊನೆಗೆ ಎಲ್ಲರನ್ನು ಬಸ್ಸಿನಿಂದ ಕೇಳಗೆ ಇಳಿಸಿ, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಹಿಂದಕ್ಕೆ ತಳ್ಳಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಸಾರಿಗೆ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯೋ ಬದಲು ಈ ರೀತಿಯಾಗಿ ಪಾತ್ರೆ ಕ್ಲೀನ್‌ ಮಾಡಲು ಉಪಯೋಗಿಸಿ – Kannada News | Use banana peels in this way to remove stubborn dirt from dishes

ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ, ಅಡುಗೆಗೆ ಬಳಸುವ ಪಾತ್ರೆಗಳನ್ನು ಕ್ಲೀನ್‌ ಆಗಿ ಇಟ್ಟುಕೊಳ್ಳುವುದು ಸಹ ಮುಖ್ಯವಾಗಿದೆ. ಪ್ರತಿದಿನ ಅಡುಗೆ ಮಾಡುವ ಕಾರಣ ಎಷ್ಟೇ ಕ್ಲೀನ್‌ ಮಾಡಿದ್ರೂ ಸಹ ಕೆಲವೊಂದು ಪಾತ್ರೆಗಳಲ್ಲಿ ಜಿಡ್ಡು, ಮೊಂಡು ಕಲೆ, ಕಪ್ಪು ಪದರ ಹಾಗೆಯೇ ಉಳಿದು ಬಿಡುತ್ತವೆ. ಇದರಿಂದ ಪಾತ್ರೆಯ ಸೌಂದರ್ಯವೇ ಹಾಳಾಗುತ್ತದೆ ಎಂಬ ಕಾರಣಕ್ಕೆ ಈ ಕಲೆಗಳನ್ನು ತೆಗೆದು ಹಾಕಲು ಹಲವು ಸರ್ಕಸ್‌ಗಳನ್ನು ಮಾಡುತ್ತಾರೆ. ಇದರ ಬದಲು ಬಾಳೆಹಣ್ಣಿನ ಸಿಪ್ಪೆಯನ್ನು (banana peels) ಬಳಸಿ ಬಲು ಸುಲಭವಾಗಿ ಪಾತ್ರೆಗಳ ಮೇಲೆ ಅಂಟಿರುವ ಕಲೆಗಳನ್ನು ತೆಗೆದುಹಾಬಹುದು. ಬಾಳೆ ಹಣ್ಣಿನ ಸಿಪ್ಪೆ ಬಳಸಿ ಯಾವುದೇ ಖರ್ಚಿಲ್ಲದೆ  ಸುಲಭವಾಗಿ ಪಾತ್ರೆಗಳಲ್ಲಿ ಅಂಟಿರುವ ಮೊಂಡುತನದ ಕಲೆಗಳನ್ನು ಹೇಗೆ ತೊಡೆದುಹಾಕುವುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಪಾತ್ರೆಗಳಲ್ಲಿ ಅಂಟಿರುವ ಕೊಳೆಯನ್ನು ಸ್ವಚ್ಛಗೊಳಿಸಲು ಸಹಕಾರಿ ಬಾಳೆಹಣ್ಣಿನ ಸಿಪ್ಪೆ:

ಬಾಳೆಹಣ್ಣಿನ ಸಿಪ್ಪೆಯ ಒಳಗಿನ ಬಿಳಿ ಭಾಗವು ಪೊಟ್ಯಾಸಿಯಮ್ ಮತ್ತು ಕೆಲವು ನೈಸರ್ಗಿಕ ಎಣ್ಣೆಗಳಿಂದ ಸಮೃದ್ಧವಾಗಿದ್ದು, ಇದು ಪಾತ್ರೆಗಳಲ್ಲಿನ ಕೊಳೆಯನ್ನು ತೆಗೆದುಹಾಕಲು ಸಹಕಾರಿ. ನಿಮ್ಮ ಸ್ಟೀಲ್ ಅಥವಾ ನಾನ್-ಸ್ಟಿಕ್ ಪಾತ್ರೆಗಳಲ್ಲಿ ಸುಟ್ಟ, ಮೊಂಡುತನದ ಕಲೆಗಳಿದ್ದರೆ, ಅದನ್ನು ತೆಗೆದು ಹಾಕಲು,  ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಪಾತ್ರೆಯ ಮೇಲೆ  ಉಜ್ಜಿ 10 ರಿಂದ 15 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸೌಮ್ಯವಾದ ಸ್ಕ್ರಬ್ಬರ್‌ನಿಂದ ಸ್ವಚ್ಛಗೊಳಿಸಿ. ಇದಲ್ಲದೆ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಸ್ವಲ್ಪ ಟೂತ್‌ಪೇಸ್ಟ್‌ ಹಚ್ಚಿ ಪಾತ್ರೆಯ ಮೇಲೆ ಸ್ಕ್ರಬ್‌ ಮಾಡಬಹುದು.

ಬಾಳೆಹಣ್ಣಿನ ಸಿಪ್ಪೆಯ ಇತರೆ ಉಪಯೋಗಗಳು:

ಸಸ್ಯಗಳಿಗೆ ನೈಸರ್ಗಿಕ ಗೊಬ್ಬರ: ಬಾಳೆಹಣ್ಣಿನ ಸಿಪ್ಪೆಗಳು ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಣ್ಣಿನಲ್ಲಿ ಹೂತುಹಾಕಿ, ಅಥವಾ ನೀರಿನಲ್ಲಿ ಕುದಿಸಿ ನಂತರ ಈ ನೀರನ್ನು ಗಿಡಗಳಿಗೆ ಹಾಕಿ.  ಇದು ನಿಮ್ಮ ಸಸ್ಯಗಳನ್ನು ಹಸಿರಾಗಿಡಲು ಸಹಾಯ ಮಾಡುತ್ತದೆ.

ಶೂಗಳು, ಚರ್ಮದ ವಸ್ತುಗಳಿಗೆ ಹೊಳಪು ನೀಡುತ್ತದೆ: ಚರ್ಮದ ಶೂಗಳು, ಪರ್ಸ್‌ಗಳು ಅಥವಾ ಬೆಲ್ಟ್‌ಗಳು ಕಾಲಾನಂತರದಲ್ಲಿ ಹೊಳಪನ್ನು ಕಳೆದುಕೊಳ್ಳಬಹುದು. ಹಾಗಿರುವಾಗ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ನಿಮ್ಮ ಶೂಗಳ ಮೇಲೆ ಉಜ್ಜಿ ನಂತರ ಒಣ ಬಟ್ಟೆಯಿಂದ ಪಾಲಿಶ್ ಮಾಡಿ. ಇದು ಚರ್ಮದ ವಸ್ತುಗಳಿಗೆ ನೈಸರ್ಗಿಕ ಹೊಳಪನ್ನು ತಂದು ಕೊಡುತ್ತದೆ.

ಇದನ್ನೂ ಓದಿ: ಅಕ್ಕಿ ತೊಳೆದ ನೀರನ್ನು ವೇಸ್ಟ್‌ ಎಂದು ಚೆಲ್ಲಬೇಡಿ, ಅದನ್ನು ರೀತಿಯಾಗಿ ಉಪಯೋಗಿಸಿ

ಚರ್ಮದ ಆರೈಕೆಗೆ ಸಹಕಾರಿ: ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಪೋಷಿಸುತ್ತದೆ. ಸಿಪ್ಪೆಯ ಒಳಭಾಗವನ್ನು ಮೊಡವೆ ಅಥವಾ ಒಣ ಚರ್ಮದ ಮೇಲೆ ನಿಧಾನವಾಗಿ ಉಜ್ಜಿ 10 ನಿಮಿಷಗಳ ನಂತರ ತೊಳೆಯಿರಿ. ಇದರ ನಿಯಮಿತ ಬಳಕೆಯು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.

ಬೆಳ್ಳಿ ಮತ್ತು ಉಕ್ಕಿನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು: ಬೆಳ್ಳಿ ಪಾತ್ರೆಗಳು ಮಸುಕಾಗಿದ್ದರೆ ಅಥವಾ ಉಕ್ಕಿನ ಪಾತ್ರೆಗಳು ಹೊಳಪು ಕಳೆದುಕೊಂಡಿದ್ದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಪಾತ್ರೆಗಳಿಗೆ ಉಜ್ಜಿ ನಂತರ ನೀರಿನಿಂದ ತೊಳೆಯಿರಿ, ಇದು ಮರಳಿ ಹೊಳಪನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DHFWS Mysuru Recruitment 2026: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ – Kannada News | DHFWS Mysuru Recruitment 2026: Apply for Medical and Nursing Officer Posts Online

ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದು, ವಿವಿಧ ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳು ಜನವರಿ 27ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10, 12ನೇ ತರಗತಿ, ಡಿಪ್ಲೊಮಾ, GNM, ANM, MPW, DMLT, MLT, B.Sc, BDS, ಪದವಿ, D.Ch, DA, MBBS, MPH, DNB, MD ಸೇರಿದಂತೆ ಸಂಬಂಧಿತ ಶೈಕ್ಷಣಿಕ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು. ಹುದ್ದೆಯ ಪ್ರಕಾರ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಮಾನದಂಡಗಳು ವಿಭಿನ್ನವಾಗಿರುವುದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಪರಿಶೀಲಿಸುವುದು ಅಗತ್ಯವಾಗಿದೆ.

ಅರ್ಜಿಯನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು DHFWS ಮೈಸೂರು ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ, ತಮ್ಮ ಅರ್ಹತೆಗಳು ನಿಗದಿತ ಮಾನದಂಡಗಳಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆನ್‌ಲೈನ್ ಅರ್ಜಿ ಪ್ರಕ್ರಿಯೆಗೆ ಮುನ್ನ ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜೊತೆಗೆ ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್ ಮತ್ತು ಅನುಭವ ಪ್ರಮಾಣಪತ್ರಗಳು (ಅನ್ವಯಿಸಿದಲ್ಲಿ) ಮುಂತಾದ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸುವುದು ಒಳಿತು.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಅರ್ಹ ಅಭ್ಯರ್ಥಿಗಳು DHFWS ಮೈಸೂರು ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳ ನೇಮಕಾತಿಗೆ ನೀಡಲಾಗಿರುವ ಅಧಿಕೃತ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ, ಅಗತ್ಯ ಪ್ರಮಾಣಪತ್ರಗಳ ಸ್ಕ್ಯಾನ್ ಪ್ರತಿಗಳನ್ನು ಇತ್ತೀಚಿನ ಛಾಯಾಚಿತ್ರದೊಂದಿಗೆ ಅಪ್‌ಲೋಡ್ ಮಾಡಬೇಕು. ವರ್ಗದ ಪ್ರಕಾರ ಅರ್ಜಿ ಶುಲ್ಕ ಅನ್ವಯಿಸಿದಲ್ಲಿ ಅದನ್ನು ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳು ಸಲ್ಲಿಸು (Submit) ಬಟನ್ ಮೇಲೆ ಕ್ಲಿಕ್ ಮಾಡಬೇಕು. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯ ಪ್ರಿಂಟ್​ ಕಾಪಿ ತೆಗೆದಿಟ್ಟುಕೊಳ್ಳಿ. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ ಅಭ್ಯರ್ಥಿಗಳು DHFWS ಮೈಸೂರು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಡುಪಿಯಲ್ಲಿ ರೋಬೋಸಾಫ್ಟ್ ಝಗಮಗಿಸುವ ಬ್ಯುಲ್ಡಿಂಗ್ ಕಟ್ಟಿದ್ದರ ಹಿಂದಿನ ರಸವತ್ತಾದ ಕಥೆ ಕೇಳಿ – Kannada News | Rohith Bhat of Robosoft explains how difficult it was to retain employees for his company

ಉಡುಪಿ, ಜನವರಿ 21: ಸಣ್ಣ ಪಟ್ಟಣಗಳಲ್ಲಿ ಓದಿದವರು ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಇಚ್ಛೆ ಹೊಂದಿರುತ್ತಾರೆ. ಅವರ ಮನೆಯವರೂ ಕೂಡ ತನ್ನ ಮಗ ಅಥವಾ ಮಗಳು ಬೆಂಗಳೂರಿನಂತಹ ನಗರಗಳಲ್ಲಿ ದೊಡ್ಡ ಬ್ಯುಲ್ಡಿಂಗ್​ಗಳಲ್ಲಿ ಕೆಲಸಕ್ಕೆ ಹೋಗಲಿ ಎಂದು ಬಯಸುತ್ತಾರೆ. ಸಣ್ಣ ಪಟ್ಟಣಗಳಲ್ಲಿ ಒಳ್ಳೆಯ ಸಂಬಳ ಕೊಟ್ಟರೂ ಜನರು ಕೆಲಸಕ್ಕೆ ಹೋಗಲು ಹಿಂಜರಿಯುತ್ತಾರೆ. ರೋಬೋಸಾಫ್ಟ್ (Robosoft) ಎನ್ನುವ ಐಟಿ ಸರ್ವಿಸ್ ಕಂಪನಿಯ ಸಂಸ್ಥಾಪಕ ರೋಹಿತ್ ಭಟ್ (Rohith Bhat) ಅವರು ತಮ್ಮ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ. ವಸಂತ್ ಶೆಟ್ಟಿ ಅವರ ‘ಮುಂದೆ ಬನ್ನಿ’ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ರೋಹಿತ್ ಭಟ್ ಅವರು, ಉದ್ಯೋಗಿಗಳನ್ನು ತಮ್ಮ ಕಂಪನಿಯ ಕೆಲಸಕ್ಕೆ ಸೆಳೆಯಲು ಮಾಡಿದ ತಂತ್ರಗಳನ್ನು ವಿವರಿಸಿದ್ದಾರೆ.

ರೋಬೋಸಾಫ್ಟ್ ಕಂಪನಿ ಈಗ ಉಡುಪಿಯ ಹೆದ್ದಾರಿಯಲ್ಲೇ ಭವ್ಯವಾದ ಕಟ್ಟಡ ಹೊಂದಿದೆ. ಆರಂಭದಲ್ಲಿ ಸಣ್ಣ ಬ್ಯುಲ್ಡಿಂಗ್​ನಲ್ಲಿ ಕಚೇರಿ ಹೊಂದಿತ್ತು. ಕಂಪನಿಯಲ್ಲಿ ಉತ್ತಮ ಸಂಬಳ ಕೊಟ್ಟರೂ ಪ್ರತಿಭಾನ್ವಿತರೆನಿಸಿದ ಉದ್ಯೋಗಿಗಳು ಕೆಲಸ ಬಿಟ್ಟು ಹೋಗುತ್ತಿದ್ದರಂತೆ. ಅವರನ್ನು ರಿಟೆನ್ಷನ್ ಮಾಡುವುದು ಬಹಳ ಕಷ್ಟವಾಗಿತ್ತಂತೆ.

ಕಟ್ಟಡ ಎದ್ದುಕಾಣುತ್ತಿಲ್ಲ ಎನ್ನುವುದು ಸಮಸ್ಯೆ…

‘ಒಂದು ಹುಡುಗಿ ತಾನು ಕೆಲಸಕ್ಕೆ ಬರುವುದಿಲ್ಲ ಎಂದು ಒಂದು ದಿನ ಹೇಳಿತು. ಯಾಕೆ ಅಂತ ಕೇಳಿದೆ. ಮನೆಯವರಿಗೆ ಈ ಕೆಲಸದ ಸ್ಥಳ ಇಷ್ಟವಾಗಿಲ್ಲ. ಗ್ಲಾಸ್ ಬ್ಯುಲ್ಡಿಂಗ್ ಇಲ್ಲ. ಅಲ್ಲಿ ಮಾಡೋದು ಬೇಡ ಅಂತಾರೆ ಅಂತ ಆ ಹುಡುಗಿ ಹೇಳಿತು’ ಎಂದು ರೋಹಿತ್ ಭಟ್ ಹೇಳುತ್ತಾರೆ.

ಬಹಳ ಜನರು ಇದೇ ಕಾರಣಕ್ಕೆ ಕೆಲಸ ಬಿಟ್ಟು ಹೋಗುತ್ತಿದ್ದರಂತೆ. ರೋಹಿತ್ ಭಟ್ ಆಗಲೇ ಒಂದು ನಿರ್ಧಾರಕ್ಕೆ ಬಂದರಂತೆ. ಉಡುಪಿಯಲ್ಲಿ ಎದ್ದು ಕಾಣುವ ರೀತಿಯ ಬ್ಯುಲ್ಡಿಂಗ್ ಕಟ್ಟಲು ನಿರ್ಧರಿಸುತ್ತಾರೆ. ಹೆದ್ದಾರಿಯಲ್ಲೇ ಆಗಬೇಕು, ಒರೇಕಲ್ ರೀತಿಯ ಗ್ಲಾಸ್ ಬ್ಯುಲ್ಡಿಂಗೇ ಆಗಬೇಕು ಎಂದು ಹೇಳಿ ಪಕ್ಕಾ ಎಂಎನ್​ಸಿ ಐಟಿ ಕಂಪನಿಯ ಬ್ಯುಲ್ಡಿಂಗ್ ರೀತಿಯದ್ದೇ ಕಟ್ಟಡ ಕಟ್ಟಲಾಯಿತು.

ವಿದೇಶಗಳಿಗೆ ಪ್ರಾಜೆಕ್ಟ್ ಮೇಲೆ ಹೋದಾಗ ಜಾಹೀರಾತು…

ರೋಹಿತ್ ಭಟ್ ತಮ್ಮ ಕಂಪನಿಯ ಬ್ರ್ಯಾಂಡ್ ಬೆಳೆಸಲು ಬೇರೆ ರೀತಿಯ ಪ್ರಯೋಗಗಳನ್ನು ಮಾಡಿದರು. ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಬೇರೆ ದೇಶಗಳಿಗೆ ಕೆಲಸದ ಮೇಲೆ ಹೋದಾಗ ಪತ್ರಿಕೆಗಳಲ್ಲಿ ಶುಭ ಹಾರೈಕೆಯ ಮೆಸೇಜ್​ಗಳನ್ನು ಹಾಕಿಸುವುದು ಇತ್ಯಾದಿ ಮಾಡಿದರು. ಆಗ ಜನರಿಗೆ ರೋಬೋಸಾಫ್ಟ್​ನಲ್ಲಿ ಕೆಲಸ ಮಾಡಿದರೆ ವಿದೇಶಕ್ಕೆ ಹೋಗಬಹುದು ಎನ್ನುವ ಇಮೇಜ್ ಮೂಡುತ್ತಿತ್ತು.

ಹೊಸ ಬ್ಯುಲ್ಡಿಂಗ್​ನಿಂದ ರೋಬೋಸಾಫ್ಟ್​ಗೆ ಹಲವು ಅನುಕೂಲಗಳು

ಗ್ಲಾಸ್ ಬ್ಯುಲ್ಡಿಂಗ್ ಕಟ್ಟಿದ್ದು ರೋಬೋಸಾಫ್ಟ್ ಕಂಪನಿಗೆ ಹಲವು ರೀತಿಯ ಪ್ರಯೋಜನಗಳಾಗಿವೆ. ಉದ್ಯೋಗಿಗಳನ್ನು ಸೆಳಯಲು ಸಾಧ್ಯವಾಗಿದೆ. ಕ್ಲೈಂಟ್​ಗಳನ್ನು ಆಕರ್ಷಿಸಲು ಸಾಧ್ಯವಾಗಿದೆ. ವಸಂತ್ ಶೆಟ್ಟಿ ಅವರ ಪೋಡ್​ಕ್ಯಾಸ್ಟ್​ನಲ್ಲಿ ಇಂಥ ಕೆಲ ವಿಚಾರಗಳನ್ನು ರೋಬೋಸಾಫ್ಟ್​ನ ರೋಹಿತ್ ಭಟ್ ಹಂಚಿಕೊಂಡಿದ್ದಾರೆ. ಈ ಸಣ್ಣ ತುಣುಕಿನ ವಿಡಿಯೋ ಲಿಂಕ್ ಈ ಕೆಳಕಂಡಂತಿದೆ.

ಪೋಡ್​ಕ್ಯಾಸ್ಟ್​ನ ಪೂರ್ಣ ವಿಡಿಯೋ ಇಲ್ಲಿದೆ:

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮದ್ವೆಗೂ ಮುಂಚೆ ಪ್ರಗ್ನೆಂಟ್, ಹುಟ್ಟಿದಾಕ್ಷಣ ಹಸುಗೂಸು ಸಾವು:ಸಾವಿನ ಸುತ್ತ ಅನುಮಾನದ ಹುತ್ತ – Kannada News | Staff nurse pregnant Before marriage, A Baby Suspected death after delivery at Hassan

ಚಿಕ್ಕಮಗಳೂರು, (ಜನವರಿ 21): ಮದುವೆಗೂ (Marriage)  ಮುನ್ನವೇ ಸ್ಟಾಫ್​​ ನರ್ಸ್​ವೊಬ್ಬರು (staff nurse) ತಾಯಿ ಆಗಿದ್ದಾರೆ. ಆದ್ರೆ, ಹರಿಗೆ ಆದ ಒಂದೇ ನಿಮಿಷದಲ್ಲಿ ಹಸುಗೂಸು ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹೌದು… ಚಿಕ್ಕಮಗಳೂರಿನ (Chikkamagaluru) ತರೀಕೆರೆಯ ಬಾವಿಕೆರೆ ಗ್ರಾಮದ ಸ್ಟಾಫ್ ನರ್ಸ್ ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ, ಮಗು ಮೃತಪಟ್ಟಿದ್ದು, ಸಮಾಜದ ಗೌರವಕ್ಕೆ ಅಂಜಿ ಕುಟುಂಬಸ್ಥರೇ ಹಸುಗೂಸನ್ನು ಕೊಲೆ ಮಾಡಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಈ ಸಂಬಂಧ ಲಕ್ಕವಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡ ನರ್ಸ್

ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದು, ಕುಟುಂಬದ ಗೌರವದ ದೃಷ್ಟಿಯಿಂದ ಈ ವಿಷಯವನ್ನು ಗುಟ್ಟಾಗಿಡಲಾಗಿತ್ತು. ಆದ್ರೆ, ಕಳೆದ 15 ದಿನಗಳ ಹಿಂದೆ ಮನೆಯಲ್ಲೇ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋದರೆ ವಿಷಯ ಜಗಜ್ಜಾಹೀರಾಗುತ್ತದೆ ಎಂಬ ಭಯಕ್ಕೆ ನರ್ಸ್ ಆಗಿದ್ದ ಯುವತಿ, ತನ್ನ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಆದ್ರೆ,  ಹುಟ್ಟಿದ ಒಂದೇ ನಿಮಿಷದಲ್ಲೇ ಮಗು ಸಾವನ್ನಪ್ಪಿದೆ. ಹೀಗಾಗಿ ಮರ್ಯಾದೆ ಹೆದರಿ ಮಗುವನ್ನು ಕುಟುಂಬಸ್ಥರೇ ಉಸಿರುಗಟ್ಟಿಸಿ ಕೊಂದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿ: ಉಪನ್ಯಾಸಕನೊಂದಿಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ, ಮಗಳಿಗಾಗಿ ಕಣ್ಣೀರು ಹಾಕಿದ ಹೆತ್ತವರು

ಮಗುವಿನ ಸಾವು ಬಯಲಿಗೆ ಬಂದಿದ್ಹೇಗೆ?

ಇನ್ನು ಮಗು ಸಾವನ್ನಪ್ಪಿದ ಬಳಿಕ ಮೃತದೇವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಹೋಗಿ, ಜನವಸತಿ ಇಲ್ಲದ ತಿಪ್ಪೆಯ ಗುಂಡಿಯೊಂದರಲ್ಲಿ ಹೂತು ಬಂದಿದ್ದಾರೆ. ಆದ್ರೆ, ಇದನ್ನು ತಿಪ್ಪೆ ಗುಂಡಿಯ ಪಕ್ಕದ ಮನೆಯ ಯುವಕ ನೋಡಿದ್ದು, ಏನೋ ಹೂತು ಹಾಕಿರುವ ಬಗ್ಗೆ ಯುವಕನಿಗೆ ಅನುಮಾನ ಮೂಡಿದೆ. ಬಳಿಕ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಮೇರೆಗೆ ಕೂಡಲೇ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ತಿಪ್ಪೆಯಲ್ಲಿ ಹೂತಿದ್ದ ಮಗುವಿನ ಮೃತದೇಹ ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವ ಪೊಲೀಸರು

ಸದ್ಯ ಪೊಲೀಸರು ಹಸುಗೂಸಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು,ಮರಣೋತ್ತರ ಪರೀಕ್ಷೆ ವರದಿ ಬಳಿಕ ಮಗು ಸಹಜವಾಗಿಯೇ ಉಸಿರುಗಟ್ಟಿ ಸಾವನ್ನಪ್ಪಿದೆಯೋ ಅಥವಾ ಕುಟುಂಬಸ್ಥರೇ ಉಸಿರುಗಟ್ಟಿಸಿ ಕೊಂದಿದ್ದಾರೋ ಎನ್ನುವುದು ಗೊತ್ತಾಗಲಿದೆ. ಹೀಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ.

ಇನ್ನು ಅನುಮಾಸ್ಪದ ಸಾವು ಎಂದು ಪ್ರಕರಣ ದಾಖಲಸಿಕೊಂಡಿರುವ ಪೊಲೀಸರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಆದ್ರೆ, ಇದುವರೆಗೂ ಯಾರನ್ನೂ ಬಂಧನ ಮಾಡಿಲ್ಲ. ಒಂದು ವೇಳೆ ವರದಿಯಲ್ಲಿ ಮಗುವನ್ನು ಕೊಲೆ ಮಾಡಲಾಗಿದೆ ಎಂದು ದೃಢವಾದರೆ ಕುಟುಂಬಸ್ಥರನ್ನು ಬಂಧಿಸಲಿದ್ದಾರೆ.

ಒಟ್ಟಿನಲ್ಲಿ ಮದುವೆಗೂ ಮುನ್ನವೇ ನರ್ಸ್ ತಾಯಿ ಆಗಿದ್ದು, ಅನಾಯಾಸವಾಗಿ ಕಣ್ಣು ಬಿಟ್ಟು ಪ್ರಪಂಚವನ್ನು ನೋಡುವ ಮೊದಲೇ ಮಗು ಮೃತಪಟ್ಟಿದ್ದು ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

“ನನಗೆ ಸಿದ್ಧರಾಮಯ್ಯ ಗೊತ್ತು, ಅವರ ಮಗ ಯತೀಂದ್ರ ಗೊತ್ತು”: ಕುಟುಂಬವೊಂದಕ್ಕೆ ಕೈ ಮುಖಂಡನಿಂದ ಜೀವ ಬೆದರಿಕೆ – Kannada News | Karnataka Congress Leaders: Officials, Citizens Face Intimidation in CM’s Area

ಕುಟುಂಬವೊಂದಕ್ಕೆ ಕೈ ಮುಖಂಡನಿಂದ ಜೀವ ಬೆದರಿಕೆ

ಮೈಸೂರು, ಜ.21: ಕಾಂಗ್ರೆಸ್​​ ಮುಖಂಡರು ದಬ್ಬಾಳಿಕೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ವೈರಲ್​ ಆಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ವರುಣದಲ್ಲಿ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣವೊಂದು ನಡೆದಿತ್ತು. ಇದೀಗ ಮತ್ತೊಂದು ಪ್ರಕರಣ ಸಿಎಂ ಸಿದ್ಧರಾಮಯ್ಯ (Congress leader threats) ಕ್ಷೇತ್ರದಲ್ಲೇ ನಡೆದಿದೆ. ವರುಣ ಕ್ಷೇತ್ರದ ಕಾಂಗ್ರೆಸ್​ ಮುಖಂಡ ಕುಟುಂಬವೊಂದಕ್ಕೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲೆ ವರುಣ ವ್ಯಾಪ್ತಿಯ ಹೆಬ್ಯಾ ಗ್ರಾಮದ ಅಮಿತಾಬ್ ಎಂಬುವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಮುಖಂಡ ರಾಜು ಎಂಬುವವರು ಜಮೀನು ವಿಚಾರಕ್ಕೆ ಅಮಿತಾಬ್ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜು ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಮೀನು ವಿಚಾರಕ್ಕಾಗಿ ರಾಜು ಅಮಿತಾಬ್ ಅವರ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಜತೆಗೆ ಹಲ್ಲೆ ನಡೆಸಲು ಕೂಡ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ನಮಗೆ ಸಿದ್ದರಾಮಯ್ಯ ಗೊತ್ತು, ಯತೀಂದ್ರ ಗೊತ್ತು ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಮನೆಯ ಮೇಲೆ ಕಲ್ಲು ತೋರಾಟ ಕೂಡ ಮಾಡಿದ್ದಾರೆ ಎಂದು ಅಮಿತಾಬ್ ಕುಟುಂಬ ದೂರಿನಲ್ಲಿ ಹೇಳಿದ್ದಾರೆ.

ನಾವು ಹೇಳಿದವರಿಗೆ ಜಾಗ ಕೊಡಬೇಕು , ಒಂದು ವೇಳೆ ಕೊಡಲಿ ಎಂದರೆ ಕಥೆ ಬೇರೆಯಾಗುತ್ತದೆ. ನಾನು ಯಾರು ಗೊತ್ತಾ?, ನನಗೆ ಸಿಎಂ ಸಿದ್ಧರಾಮಯ್ಯ ಕೂಡ ಗೊತ್ತು, ಅವರ ಮಗ ಯತೀಂದ್ರ ಸಹ ಗೊತ್ತು. ಮನೆಯೊಳಗೆ ಬಂದು ನಮ್ಮ ಮೇಲೆ ಕೈ ಮಾಡಿದ್ದಾರೆ. ರಾತ್ರಿ ಹೊತ್ತು ಜೀವ ಭಯದಲ್ಲೇ ಕಳೆಯುತ್ತಿದ್ದೇವೆ. ಮನೆಗೆ ಕಲ್ಲು ಕೂಡ ಹೊಡೆದಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಮಿತಾಬ್ ಹೇಳಿದ್ದಾರೆ.

ಇದನ್ನೂ ಓದಿ: ‘ಇಲ್ಲೇ ನಿನ್ನ ಹೆಣ ಬೀಳತ್ತೆ!’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ!

ಸಿಎಂ ಕ್ಷೇತ್ರದಲ್ಲಿ ಮಹಿಳಾ ಸರ್ಕಾರಿ ಅಧಿಕಾರಿ ಅವಾಚ್ಯ ಶಬ್ಧಗಳಿಂದ ನಿಂದನೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಇತ್ತೀಚೆಗೆ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಅವರಿಗೆ ಜಿ.ಎಂ. ಪುಟ್ಟಸ್ವಾಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು. ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತಿಸುವ ಮತ್ತು ಸ್ವಾಧೀನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಸೇರಿ ಜಮೀನು ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಅಧಿಕಾರಿಗಳ ಮೇಲೆ ಆಕ್ರೋಶಗೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅಶ್ಲಿಲ ಪದಗಳಿಂದ ನಿಂದಿಸಿ ಕಾಂಗ್ರೆಸ್ ಮುಖಂಡ

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಹಾಗೂ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದರು. ನಡು ರಸ್ತೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಕೋಪಗೊಂಡು, ದೂರವಾಣಿ ಕರೆ ಮೂಲಕ ಅವ್ಯಾಚ್ಚ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿದ್ದರು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್​​ ಮುಖಂಡರು ಸರ್ಕಾರಿ ಅಧಿಕಾರಿಗಳ ಮೇಲೆ ಹಾಗೂ ಸಾಮಾನ್ಯರ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಅಧಿಕಾರಿಗಳು ಕೂಡ ಭಯದ ವಾತಾವರಣದಲ್ಲೇ ಕೆಲಸ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:41 pm, Wed, 21 January 26

Source link

ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್ – Kannada News | Bigg Boss Kannada 12: Sooraj talks about criticism against Gilli

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಗಿದಿದೆ. ಗಿಲ್ಲಿ ಶೋ ಗೆದ್ದು ವಿನ್ನರ್ ಎನಿಸಿಕೊಂಡಿದ್ದಾರೆ. ಆದರೆ ಗಿಲ್ಲಿ ಗೆದ್ದಿರುವುದು ಕೆಲವರಿಗೆ ಅರಗಿಸಿಕೊಳ್ಳಲಾಗಿಲ್ಲ. ಶೋ ಮುಗಿದ ಬಳಿಕ ಅಶ್ವಿನಿ ಅವರು ಗಿಲ್ಲಿಯ ಗೆಲುವನ್ನೇ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ತಾನು ಬಡವನಂತೆ ನಾಟಕ ಮಾಡಿದ್ದಾನೆ, ಆದರೆ ಆತ ಬಡವ ಅಲ್ಲ ಎಂಬಿತ್ಯಾದಿ ಟೀಕೆಗಳನ್ನು ಮಾಡಿದ್ದಾರೆ. ಇದೀಗ ಅದೇ ಸೀಸನ್​​ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹೋಗಿ ಚೆನ್ನಾಗಿಯೇ ಆಟ ಆಡಿದ ಸೂರಜ್ ಅವರು ಈ ವಿವಾದದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದು, ಗಿಲ್ಲಿಯ ಬಗ್ಗೆ, ಆತನ ಹಿನ್ನೆಲೆ ಬಗ್ಗೆ ಬರುತ್ತಿರುವ ಟೀಕೆ, ಮೂದಲಿಕೆಗಳಿಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ICC ODI Rankings: ವಾರದೊಳಗೆ ಅಗ್ರಸ್ಥಾನ ಕಳೆದುಕೊಂಡ ವಿರಾಟ್ ಕೊಹ್ಲಿ

Source link

IND vs SA: ದಕ್ಷಿಣ ಆಫ್ರಿಕಾಕ್ಕೆ ಹಾರಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ – Kannada News | BCCI Unveils India Women’s SA Tour 2026: 5 Match T20 Series Details

2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup 2026) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯಾವಳಿ ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭವಾಗಲಿದೆ. ಹೀಗಾಗಿ ಎಲ್ಲರ ಕಣ್ಣುಗಳು ಪ್ರಸ್ತುತ ಈ ಟಿ20 ವಿಶ್ವಕಪ್ ಮೇಲಿವೆ. ಟೀಂ ಇಂಡಿಯಾ ಕೂಡ ಅದಕ್ಕಾಗಿ ತಯಾರಿ ನಡೆಸುತ್ತಿದೆ. ಆದಾಗ್ಯೂ, ಈ ವರ್ಷ ಮತ್ತೊಂದು ಟಿ20 ವಿಶ್ವಕಪ್ ನಿಗದಿಯಾಗಿದ್ದು, ಭಾರತ ತಂಡವು ಪ್ರಶಸ್ತಿ ಸ್ಪರ್ಧಿಯಾಗಿ ಆ ಪಂದ್ಯಾವಳಿಯನ್ನು ಪ್ರವೇಶಿಸಲಿದೆ. ಹರ್ಮನ್​ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡವು ಶೀಘ್ರದಲ್ಲೇ 2026 ರ ಮಹಿಳಾ ಟಿ20 ವಿಶ್ವಕಪ್ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ಅದರ ಭಾಗವಾಗಿ ಭಾರತ ಮಹಿಳಾ ಪಡೆ ಏಪ್ರಿಲ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ 3 ದೊಡ್ಡ ಸರಣಿಗಳು

ಭಾರತ ಮಹಿಳಾ ತಂಡವು ಏಪ್ರಿಲ್ 2026 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದ್ದು, ಇದೀಗ ಬಿಸಿಸಿಐ ಕೂಡ ಈ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡೂ ತಂಡಗಳು ಏಪ್ರಿಲ್ 17 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಕಳೆದ ವರ್ಷ ಏಕದಿನ ವಿಶ್ವಕಪ್ ಗೆದ್ದ ನಂತರ ಇದು ಭಾರತದ ಮೂರನೇ ಸರಣಿಯಾಗಿದೆ. ಟೀಂ ಇಂಡಿಯಾ ಡಿಸೆಂಬರ್ 2025 ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಇದೀಗ ನಡೆಯುತ್ತಿರುವ ಡಬ್ಲ್ಯುಪಿಎಲ್ ಬಳಿಕ ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು, ಅಲ್ಲಿ ಮೂರು ಸ್ವರೂಪಗಳ ಸರಣಿಯನ್ನು ಆಡಲಿದೆ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಕೈಗೊಳ್ಳಲಿದೆ. ಇದೀಗ ಈ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಎಲ್ಲಾ ಐದು ಪಂದ್ಯಗಳು ದಕ್ಷಿಣ ಆಫ್ರಿಕಾದ ಮೂರು ವಿಭಿನ್ನ ಸ್ಥಳಗಳಲ್ಲಿ ನಡೆಯಲಿವೆ. ಎರಡು ಪಂದ್ಯಗಳು ಡರ್ಬನ್‌ನಲ್ಲಿ, ಎರಡು ಪಂದ್ಯಗಳು ಜೋಹಾನ್ಸ್‌ಬರ್ಗ್‌ನಲ್ಲಿ ಮತ್ತು ಒಂದು ಪಂದ್ಯ ಬೆನೋನಿಯಲ್ಲಿ ನಡೆಯಲಿದೆ. ಈ ಪ್ರವಾಸದ ನಂತರ, ಟೀಂ ಇಂಡಿಯಾ ಮೇ ಅಂತ್ಯದಲ್ಲಿ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದಾಗ್ಯೂ, ವಿಶ್ವಕಪ್‌ಗೆ ಮೊದಲು ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ವಿಶ್ವಕಪ್ ಜೂನ್ 12 ರಂದು ಆರಂಭವಾಗಲಿದೆ.

ಆಫ್ರಿಕಾ ಪ್ರವಾಸದ ವೇಳಾಪಟ್ಟಿ

  1. ಏಪ್ರಿಲ್ 17 – ಮೊದಲ ಟಿ20, ಡರ್ಬನ್
  2. ಏಪ್ರಿಲ್ 19 – ಎರಡನೇ ಟಿ20, ಡರ್ಬನ್
  3. ಏಪ್ರಿಲ್ 22 – 3ನೇ ಟಿ20, ಜೋಹಾನ್ಸ್‌ಬರ್ಗ್
  4. ಏಪ್ರಿಲ್ 25 – 4ನೇ ಟಿ20, ಜೋಹಾನ್ಸ್‌ಬರ್ಗ್
  5. ಏಪ್ರಿಲ್ 27 – ಐದನೇ ಟಿ20, ಬೆನೋನಿ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:53 pm, Wed, 21 January 26

Source link