ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL), ಯುವ ಎಂಜಿನಿಯರ್‌ಗಳಿಗಾಗಿ ಬಂಪರ್ ಉದ್ಯೋಗಾವಕಾಶವನ್ನು ಹೊತ್ತು ತಂದಿದೆ. ‘ಯುವ ವೃತ್ತಿಪರ’ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಗರಿಷ್ಠ 1.40 ಲಕ್ಷ ರೂಪಾಯಿವರೆಗೆ ವೇತನ ಸಿಗಲಿದೆ. ಬಿಇ ಅಥವಾ ಬಿಟೆಕ್ ಮುಗಿಸಿ ಸರ್ಕಾರಿ ವಲಯದಲ್ಲಿ ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇದು ಸುವರ್ಣಾವಕಾಶವಾಗಿದ್ದು, ಆನ್‌ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಪ್ರಮುಖ ವಿವರಗಳು:
- ನೇಮಕಾತಿ ಸಂಸ್ಥೆ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)
- ಹುದ್ದೆಯ ಹೆಸರು: ಯುವ ವೃತ್ತಿಪರರು (Young Professionals)
- ಒಟ್ಟು ಹುದ್ದೆಗಳು: 48
- ಉದ್ಯೋಗ ಸ್ಥಳ: ಪಶ್ಚಿಮ ಬಂಗಾಳದ ದುರ್ಗಾಪುರ ಸ್ಟೀಲ್ ಪ್ಲಾಂಟ್, IISCO ಸ್ಟೀಲ್ ಪ್ಲಾಂಟ್ ಮತ್ತು ಅಲಾಯ್ ಸ್ಟೀಲ್ ಪ್ಲಾಂಟ್‌ಗಳು.
ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ
ಶೈಕ್ಷಣಿಕ ಅರ್ಹತೆಗಳೇನು?
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ BE ಅಥವಾ B.Tech ಪದವಿ ಪಡೆದಿರಬೇಕು. ಪದವಿಯಲ್ಲಿ ಕನಿಷ್ಠ ಶೇ.65 ಅಂಕಗಳನ್ನು ಗಳಿಸಿರುವುದು ಕಡ್ಡಾಯ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದವರು ಅರ್ಹರು. M.Tech ಅಥವಾ MBA ನಂತಹ ಉನ್ನತ ಅಥವಾ ಹೆಚ್ಚುವರಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಅರ್ಹ ಅಭ್ಯರ್ಥಿಗಳನ್ನು ಒಟ್ಟು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:
- ಅರ್ಜಿ ಪರಿಶೀಲನೆ: ಮೊದಲಿಗೆ ಬಂದಂತಹ ಅರ್ಜಿಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ. (ಅಗತ್ಯವಿದ್ದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಅಥವಾ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು).
- ವೈಯಕ್ತಿಕ ಸಂದರ್ಶನ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ತಾಂತ್ರಿಕ ಜ್ಞಾನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಇಂಟರ್ವ್ಯೂ ನಡೆಸಲಾಗುತ್ತದೆ.
- ವೈದ್ಯಕೀಯ ಪರೀಕ್ಷೆ: ಸಂದರ್ಶನದಲ್ಲಿ ಪಾಸಾದವರಿಗೆ ಅಂತಿಮ ಹಂತವಾಗಿ ಮೆಡಿಕಲ್ ಟೆಸ್ಟ್ ಇರಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
