Category Archives: Blog

Your blog category

ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ದಿಢೀರ್​​ ಸಭೆಯ ಕಾರಣ ಇನ್ನೂ ನಿಗೂಢ – Kannada News | High Command’s Sudden Meeting With DK Shivakumar, Siddaramaiah Sparks Speculation in Karnataka Congress

ನವದೆಹಲಿ/ ಬೆಂಗಳೂರು, ಮೇ 26: ಕಾಂಗ್ರೆಸ್ ಹೈಕಮಾಂಡ್‌ ನಾಯಕರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್​​ ಗಾಂಧಿ,  ವೇಣುಗೋಪಾಲ್, ಮತ್ತು ಸುರ್ಜೆವಾಲ ಸೇರಿದಂತೆ ಹಿರಿಯ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದು, ಸಭೆಯ ಅಜೆಂಡಾ ಗೌಪ್ಯವಾಗಿಯೇ ಉಳಿದಿದೆ. ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಕೂಡ ಚರ್ಚೆಯ ಮುಖ್ಯ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ವರದಿಯಾಗಿದ್ದು, ಹೈಕಮಾಂಡ್​​ ಕೂಡ ಈ ವಿಚಾರದಲ್ಲಿ ರಹಸ್ಯ ಕಾದುಕೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು: ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ! – Kannada News | Bengaluru Drug Racket: CCB Seizes Hydro Ganja Worth Rs 3 Crore Hidden in Snacks Boxes Sent via Foreign Post Office

ಬೆಂಗಳೂರು ಹೈಡ್ರೋ ಗಾಂಜಾ ಜಪ್ತಿImage Credit source: tv9

ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಿದೇಶಿ ಮೂಲದ ಹೈಟೆಕ್ ಮಾದಕ ವಸ್ತುಗಳ ಜಾಲವನ್ನು ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ಮತ್ತೊಮ್ಮೆ ಯಶಸ್ವಿಯಾಗಿ ಭೇದಿಸಿದ್ದಾರೆ. ಅಮೆರಿಕ ಮತ್ತು ಥಾಯ್ಲೆಂಡ್‌ನಿಂದ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್‌ಗೆ (Foreign Post Office) ಪಾರ್ಸೆಲ್ ಮೂಲಕ ಬಂದಿದ್ದ ಭಾರಿ ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾಮಾನ್ಯ ತಿಂಡಿ ತಿನಿಸುಗಳ ‘ಸ್ನಾಕ್ಸ್ ಬಾಕ್ಸ್’ ಒಳಗಡೆ ಅತ್ಯಂತ ಚಾಣಾಕ್ಷತನದಿಂದ ಮುಚ್ಚಿಡಲಾಗಿದ್ದ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು (Hydro Ganja) ಜಪ್ತಿ ಮಾಡಲಾಗಿದೆ.

ಮುಖ್ಯಾಂಶಗಳು

  • ಸ್ನಾಕ್ಸ್ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಅಮೆರಿಕ ಹಾಗೂ ಥಾಯ್ಲೆಂಡ್​​ನಿಂದ ಕಳುಹಿಸಲಾಗಿದ್ದ ಹೈಟೆಕ್ ಮಾದಕ ವಸ್ತು ಜಪ್ತಿ.
  • ಅಂಚೆ ಕಚೇರಿ ಸಿಬ್ಬಂದಿ ನೀಡಿದ ನಿಖರವಾದ ಅನುಮಾನಾಸ್ಪದ ಮಾಹಿತಿ ಆಧರಿಸಿ ಸಿಸಿಬಿ ನಡೆಸಿದ ಕ್ಷಿಪ್ರ ದಾಳಿ.
  • ಐಷಾರಾಮಿ ಪಾರ್ಟಿ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಅಂಚೆ ಮೂಲಕ ಡ್ರಗ್ಸ್ ಸಾಗಾಟ.

ಅಂಚೆ ಇಲಾಖೆಯೇ ಜಾಲದ ಪ್ರಮುಖ ಟಾರ್ಗೆಟ್

ವಿದೇಶಿ ಪೋಸ್ಟ್ ಆಫೀಸ್‌ನಲ್ಲಿದ್ದ ಕೆಲವು ಪಾರ್ಸೆಲ್‌ಗಳ ಮೇಲೆ ಅನುಮಾನ ಗೊಂಡ ಅಂಚೆ ಕಚೇರಿ ಸಿಬ್ಬಂದಿ ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಸಿಬಿ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಸೆಲ್ ಓಪನ್ ಮಾಡಿದಾಗ ಹೈಡ್ರೋ ಗಾಂಜಾ ಪತ್ತೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಅಂಚೆ ಇಲಾಖೆ ಮತ್ತು ಕಸ್ಟಮ್ಸ್ ಕಣ್ಣು ತಪ್ಪಿಸಿ ಇಂತಹ ಐಷಾರಾಮಿ ಡ್ರಗ್ಸ್ ತರಿಸುವ ಜಾಲ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಈ ಹಿಂದೆ ಕೂಡ ಸಿಸಿಬಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಅಂಚೆ ಕಚೇರಿಗಳ ಮೇಲೆ ಜಂಟಿ ದಾಳಿ ನಡೆಸಿ ನೆದರ್‌ಲ್ಯಾಂಡ್ಸ್, ಯುಎಸ್ ಮತ್ತು ಯುಕೆ ಮೂಲದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ವಿವಿಧ ಐಷಾರಾಮಿ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ

ಅಷ್ಟೇ ಅಲ್ಲದೆ, ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ಜಪ್ತಿ ಮಾಡಿ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟಲಾಗಿತ್ತು. ಸದ್ಯ ಈ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪಾರ್ಸೆಲ್ ಯಾರ ಹೆಸರಿಗೆ ಬುಕ್ ಆಗಿತ್ತು ಮತ್ತು ಬೆಂಗಳೂರಿನಲ್ಲಿ ಇದರ ಅಂತಿಮ ರಿಸೀವರ್ಸ್ ಯಾರು ಎಂಬ ಜಾಲದ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:24 pm, Tue, 26 May 26

Source link

ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು – Kannada News | FII Exit from India: Why Foreign Investors are Leaving & When They’ll Return

ಗ್ಲೋಬ್​ನಲ್ಲಿ ಭಾರತImage Credit source: Getty Images

ನವದೆಹಲಿ, ಮೇ 26: ಭಾರತದ ಮಾರುಕಟ್ಟೆಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಕಳೆದ ಒಂದು-ಒಂದೂವರೆ ವರ್ಷದಿಂದ ಸಾಲು ಸಾಲಾಗಿ ನಿರ್ಗಮಿಸುತ್ತಿದ್ದಾರೆ. ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಈ ವಿದೇಶೀ ಹೂಡಿಕೆಗಳ ಹೊರಹರಿವು ಯಾಕಾಗಿ ಆಗುತ್ತಿದೆ? ಮತ್ತೆ ಮರಳಿ ಬರುವ ಸಾಧ್ಯತೆ ಇದೆಯಾ? ಯೆಸ್ ಸೆಕ್ಯೂರಿಟೀಸ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮರ್ ಕೆ ಅಂಬಾನಿ (Amar K Ambani) ಅವರು ಈ ವಿಚಾರದ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದ್ದು, ಅವರ ಪ್ರಕಾರ ಜಾಗತಿಕ ಮತ್ತು ದೇಶೀಯ ಆರ್ಥಿಕ ಬದಲಾವಣೆಗಳಿಂದಾಗಿ ವಿದೇಶಿ ಬಂಡವಾಳವು ಭಾರತದಿಂದ ಬೇರೆಡೆಗೆ ಹರಿಯುತ್ತಿದೆಯಂತೆ. ಹಾಗೆಯೇ, ಈ ವಿದೇಶೀ ಹೂಡಿಕೆಗಳು ತತ್​ಕ್ಷಣಕ್ಕೆ ಭಾರತಕ್ಕೆ ಮರಳಿ ಬರುವ ಸಾಧ್ಯತೆ ಇಲ್ಲ ಎಂದೂ ಹೇಳಿದ್ದಾರೆ. ಆ ಹೂಡಿಕೆಗಳು ಮರಳಿ ಬರಬೇಕೆಂದರೆ ಪೂರಕವಾಗಿರುವ ಮೂರು ರೀತಿಯ ಸನ್ನಿವೇಶಗಳು ಇರಬೇಕಾಗುತ್ತದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಅವರು ಭಾರತದಿಂದ ಎಫ್​ಐಐಗಳು ದೂರ ಉಳಿಯಲು ಏನು ಕಾರಣ ಮತ್ತು ಅವು ಮರಳಿ ಬರಬೇಕಾದರೆ ಯಾವ ಸ್ಥಿತಿ ಇರಬೇಕು ಎಂಬುದನ್ನು ವಿಶ್ಲೇಷಿಸಿದ್ದಾರೆ.

FIIಗಳು ಭಾರತದಿಂದ ದೂರ ಉಳಿಯಲು ಮುಖ್ಯ ಕಾರಣಗಳು

  • ದೀರ್ಘಾವಧಿಯ ಹಿಂಜರಿತ: FIIಗಳ ಈ ನಿರಾಸಕ್ತಿ ಕೇವಲ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಲೆಯ ಬಳಿಕ ಶುರುವಾಗಿದ್ದಲ್ಲ. ಇದು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಲೇ ಆರಂಭವಾಗಿದೆ. 2003 ರಿಂದ 2008 ರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಹರಿದುಬಂದ ಒಟ್ಟು ಮಾರುಕಟ್ಟೆ ಬಂಡವಾಳದ (Market Cap) ಶೇಕಡಾವಾರು ಪ್ರಮಾಣದಷ್ಟು ದೊಡ್ಡ ಹಣ ಆ ನಂತರದ ವರ್ಷಗಳಲ್ಲಿ ಬಂದಿಲ್ಲ.
  • ಡಾಲರ್ ಎದುರು ದುರ್ಬಲ ಲಾಭ: ವಿದೇಶಿ ಹೂಡಿಕೆದಾರರಿಗೆ ಡಾಲರ್ ರೂಪದಲ್ಲಿ ಭಾರತದಿಂದ ಸಿಗುತ್ತಿರುವ ಆದಾಯವು ತುಂಬಾ ಸಾಧಾರಣವಾಗಿದೆ. ಜೊತೆಗೆ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು ಅವರಿಗೆ ನಷ್ಟ ಉಂಟುಮಾಡುತ್ತಿದೆ. ಇದೇ ಸಮಯದಲ್ಲಿ ಅಮೆರಿಕದ ಪ್ರಮುಖ 7 ತಂತ್ರಜ್ಞಾನ ಕಂಪನಿಗಳು (Magnificent Seven) ಜಾಗತಿಕವಾಗಿ ಭಾರಿ ಲಾಭ ತಂದುಕೊಟ್ಟಿವೆ.
  • AI ಕ್ರಾಂತಿಯ ಕೊರತೆ: ಜಾಗತಿಕ ಹೂಡಿಕೆ ನಿಧಿಗಳು ಭಾರತವನ್ನು “ಹಳೆಯ ಆರ್ಥಿಕತೆ” (Old Economy) ಹೊಂದಿರುವ ಮಾರುಕಟ್ಟೆಯಾಗಿ ನೋಡುತ್ತಿವೆ. ಅಮೆರಿಕ, ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಇರುವಂತೆ ಹೂಡಿಕೆಗೆ ಪೂರಕವಾದ ಪ್ರಮುಖ AI ಆಧಾರಿತ ಕಂಪನಿಗಳು ಭಾರತದಲ್ಲಿ ಹೆಚ್ಚಾಗಿ ಇಲ್ಲ. ಹಾಗಾಗಿ ಜಾಗತಿಕ ಹಣ ಆ ದೇಶಗಳತ್ತ ಮುಖ ಮಾಡಿದೆ.
  • ತೆರಿಗೆ ನೀತಿಗಳ ಬದಲಾವಣೆ: ಭಾರತದಲ್ಲಿ ಎಫ್ ಆಂಡ್ ಒ (F&O) ಮೇಲಿನ ತೆರಿಗೆ, ಗಾರ್ (GAAR) ನಿಯಮಗಳು ಮತ್ತು ಮಾರಿಷಸ್ ಮೂಲದ ಹೂಡಿಕೆದಾರರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿಗಳನ್ನು ರದ್ದುಗೊಳಿಸಿರುವುದು ವಿದೇಶಿ ಹೂಡಿಕೆದಾರರಿಗೆ ಭಾರತದ ಮೇಲಿನ ಆಕರ್ಷಣೆ ತಗ್ಗಿಸಿದೆ ಎಂದು ಅಮರ್ ಕೆ. ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

FIIಗಳು ಮರಳಿ ಬರಲು ಬೇಕು ಈ 3 ಟ್ರಿಗರ್ಸ್ (ಪ್ರಚೋದಕಗಳು)

ಅಮರ್ ಅಂಬಾನಿ ಅವರ ಪ್ರಕಾರ, ವಿದೇಶಿ ಹೂಡಿಕೆದಾರರು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಮರಳಿ ಬರಬೇಕಾದರೆ ಈ ಮೂರು ಸನ್ನಿವೇಶಗಳಲ್ಲಿ ಯಾವುದಾದರೂ ಒಂದು ಸಂಭವಿಸಬೇಕು:

  1. ಷೇರುಗಳ ಮೌಲ್ಯ ಅತ್ಯಂತ ಅಗ್ಗವಾದಾಗ: ಭಾರತೀಯ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಅಥವಾ ಮೌಲ್ಯಮಾಪನವು ತೀರಾ ತಳಮಟ್ಟಕ್ಕೆ ಇಳಿದು, ಹೂಡಿಕೆಗೆ ಅತ್ಯಂತ ಆಕರ್ಷಣೀಯ ಎನಿಸಿದಾಗ ಮಾತ್ರ (Valuations hit rock bottom) ಅವರು ಬರುತ್ತಾರೆ.
  2. ಐಪಿಒ (IPO) ಮಾರುಕಟ್ಟೆ ಭರ್ಜರಿಯಾಗಿ ಚೇತರಿಸಿಕೊಂಡಾಗ: ಮಾರುಕಟ್ಟೆಯಲ್ಲಿ ಹೊಸ ಮತ್ತು ದೊಡ್ಡ ಕಂಪನಿಗಳ ಐಪಿಒ ಚಟುವಟಿಕೆಗಳು ವ್ಯಾಪಕವಾಗಿ ಹೆಚ್ಚಾದಾಗ ವಿದೇಶಿ ಬಂಡವಾಳ ಹರಿದುಬರಬಹುದು.
  3. ಜಾಗತಿಕ ಮಾರುಕಟ್ಟೆಗಳು ಅತಿ ಬಳಕೆಯಾದಾಗ: ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಅಪಾಯಕಾರಿ ಎನಿಸಿದಾಗ, ತಮ್ಮ ಹೂಡಿಕೆಯನ್ನು ವೈವಿಧ್ಯಮಯಗೊಳಿಸಲು (Diversification) ಭಾರತ ಅವರಿಗೆ ಸುರಕ್ಷಿತ ಆಯ್ಕೆಯಾಗಿ ಕಾಣಿಸಬಹುದು.

ಇದನ್ನೂ ಓದಿ: ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್​ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ

ಇತರ ಪ್ರಮುಖ ಆರ್ಥಿಕ ಮುನ್ಸೂಚನೆಗಳು

ಯೆಸ್ ಸೆಕ್ಯೂರಿಟೀಸ್​ನ ಕಾರ್ಯವಾಹಕ ನಿರ್ದೇಶಕರಾದ ಅಮರ್ ಅಂಬಾನಿ ಅವರು ಇತರ ಕೆಲ ಆರ್ಥಿಕ ಮುನ್ಸೂಚನೆಗಳನ್ನು ನೀಡಿದ್ದಾರೆ. ಕಾರ್ಪೊರೇಟ್ ಗಳಿಕೆಯ ಕುಸಿತ, ಹಣದುಬ್ಬರ ಏರಿಕೆ; ಜಾಗತಿಕ ಮಾರುಕಟ್ಟೆ ಅಲುಗಾಟವು ಭಾರತೀಯ ಮಾರುಕಟ್ಟೆಯ ಮುನ್ನಡೆಗೆ ಅಡ್ಡಗಾಲಾಗಿದೆ ಎನ್ನುತ್ತಾರೆ. ಖಾಸಗಿ ವಲಯದ ಉದ್ಯಮಗಳ ಸಾಮರ್ಥ್ಯ ಬಳಕೆ ಸದ್ಯ ಶೇ. 74-75ರಷ್ಟಿದ್ದು ಅದು ಶೇ. 80 ದಾಟಿದಾರ ಹೊಸ ಹೂಡಿಕೆಗಳು ಬರಬಹುದು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್​​ – Kannada News | Karnataka MLC Elections: Date Announced for 7 Council Seats; Voting on June 18, Results on Same Day

ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ

ಬೆಂಗಳೂರು, ಮೇ 26: ರಾಜ್ಯಸಭಾ ಚುನಾವಣೆಯ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನಪರಿಷತ್ ಎಲೆಕ್ಷನ್​​ಗೂ ದಿನಾಂಕ ಪ್ರಕಟಗೊಂಡಿದೆ. ಜೂನ್ 26ರಂದು ತೆರವಾಗಲಿರುವ ಪರಿಷತ್​​ನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್​​ನ 3, ಬಿಜೆಪಿಯ 3 ಮತ್ತು ಜೆಡಿಎಸ್​​ನ ಒಂದು ಸದಸ್ಯರ ಅವಧಿ ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳು ಅಲರ್ಟ್​​ ಆಗಿದ್ದು, ಸ್ಥಾನ ಗಿಟ್ಟಿಸಲು ಕಾರ್ಯಕತಂತ್ರ ಶುರುಮಾಡಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕದ ವಿಧಾನಪರಿಷತ್​​ ಚುನಾವಣೆಗೆ ದಿನಾಂಕ ಘೋಷಣೆ
  • ಜೂನ್ 26ರಂದು ತೆರವಾಗಲಿರುವ ಪರಿಷತ್​​ನ 7 ಸ್ಥಾನಗಳಿಗೆ ಎಲೆಕ್ಷನ್​​
  • ಜೂನ್ 18ರಂದು 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ

ವೇಳಾಪಟ್ಟಿ

ಚುನಾವಣೆ ಅಧಿಸೂಚನೆ: ಜೂನ್​​ 01

ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಜೂನ್​​ 08

ನಾಮಪತ್ರ ಪರಿಶೀಲನೆ: ಜೂನ್​​ 09

ನಾಮಪತ್ರ ಹಿಂಪಡೆಯಲು ಕೊನೇ ದಿನ: ಜೂನ್​​ 11

ಮತದಾನ: ಜೂನ್​​ 18

ಫಲಿತಾಂಶ: ಜೂನ್​​ 18

ಇದನ್ನೂ ಓದಿ: ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ; ಬೆಂಗಳೂರಿನಲ್ಲಿ ಜಮೀರ್ ಸಿಎಂ ಆಗಲಿ ಎಂದ ಸ್ವಾಮೀಜಿಯ ವಿಡಿಯೋ ವೈರಲ್!

ಯಾವೆಲ್ಲ ಸದಸ್ಯರ ಅವಧಿ ಮುಕ್ತಾಯ?

ಬಿ.ಕೆ. ಹರಿಪ್ರಸಾದ್​​, ನಾಸೀರ್​​ ಅಹ್ಮದ್​​, ತಿಪ್ಪಣ್ಣ, ಪ್ರತಾಪ್​​ ಸಿಂಹ ನಾಯಕ್​​, ಎನ್​​. ನಾಗರಾಜು (ಎಂಟಿಬಿ), ಸುನಿಲ್​​ ವಲ್ಯಾಪುರ ಮತ್ತು ಗೋವಿಂದರಾಜು ಅವರ ಅಧಿಕಾರ ಅವಧಿಯು ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಇನ್ನು ವಿಧಾನ ಸಭೆಯ ಹಾಲಿ ಬಲಾಬಲವನ್ನು ಗಮನಿಸಿದರೆ ತೆರವಾಗಲಿರುವ 7 ಸ್ಥಾನಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್​​ ಮತ್ತು 2 ಸ್ಥಾನಗಳು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಆ ಮೂಲಕ ಕಾಂಗ್ರೆಸ್​​ 2 ಸ್ಥಾನಗಳನ್ನು ಹೆಚ್ಚಿಸಿಕೊಂಡರೆ, ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್​​ ತಲಾ 1 ಸ್ಥಾನಗಳನ್ನು ಕಳೆದುಕೊಳ್ಳುವ ಲೆಕ್ಕಾಚಾರ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅಪ್ಪ-ಮಗನ ನಂಬಿ ಕೆಟ್ಟೆ’ 29 ಕೋಟಿ ನಷ್ಟ ಎಂದ ನಿರ್ಮಾಪಕ – Kannada News | Producer Vashu Bhagnani allegation on Varun Dhawan and David Dhawan

ಬಾಲಿವುಡ್ (Bollywood)​​ ನಲ್ಲಿ ಅಪ್ಪ-ಮಕ್ಕಳ ಜೋಡಿ ಹಲವು ಇವೆ. ನಿರ್ದೇಶಕರಾಗಿರುವ ಹಲವರು ತಮ್ಮ ಮಕ್ಕಳನ್ನು ನಟರನ್ನಾಗಿ ಲಾಂಚ್ ಮಾಡಿದ್ದಾರೆ. ಕೆಲವರು ಗೆದ್ದರೆ, ಕೆಲವರು ಸೋತಿದ್ದಾರೆ. ಇನ್ನು ಕೆಲವರು ಆರಕ್ಕೇರದೆ, ಮೂರಕ್ಕಿಳಿಯದೇ ನಿಂತಿದ್ದಾರೆ. ಅವರಲ್ಲಿ ಪ್ರಮುಖವಾದ ನಟ ವರುಣ್ ಧವನ್. ಬಾಲಿವುಡ್​ನ ಈ ನಟ ಆರಕ್ಕೇರದೆ-ಮೂರಕ್ಕಿಳಿಯದೆ ನಿಂತಿದ್ದಾರೆ. ಇದೀಗ ಬಾಲಿವುಡ್​ನ ಹಿರಿಯ ನಿರ್ಮಾಪಕರೊಬ್ಬರು, ವರುಣ್ ಧವನ್ ಮತ್ತು ಅವರ ತಂದೆ ಡೇವಿಡ್ ಧವನ್ ಅವರನ್ನು ಟೀಕಿಸಿದ್ದು, ‘ಅಪ್ಪ-ಮಗನ ನಂಬಿ ಕೆಟ್ಟೆ’ ಎಂದಿದ್ದಾರೆ.

ವರುಣ್ ಧವನ್ ಅವರ ತಂದೆ ಡೇವಿಡ್ ಧವನ್ ಬಾಲಿವುಡ್​ನ ಸೂಪರ್ ಹಿಟ್ ನಿರ್ದೇಶಕರಾಗಿದ್ದವರು. ಹಲವು ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾಗಳನ್ನು 90-2000 ದಶಕದಲ್ಲಿ ಅವರು ನೀಡಿದ್ದಾರೆ. ಇದೀಗ ಮಗ ವರುಣ್ ಧವನ್ ಅವರನ್ನು ಹಾಕಿಕೊಂಡು ಸಾಲು-ಸಾಲು ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲೂ 90ರ ದಶಕದಲ್ಲಿ ತಾವೇ ನಿರ್ದೇಶಿಸಿದ ಸಿನಿಮಾಗಳ ಸೀಕ್ವೆಲ್ ಅನ್ನು ಈಗ ಪುತ್ರ ವರುಣ್ ಧವನ್ ಅನ್ನು ನಾಯಕನನ್ನಾಗಿ ಹಾಕಿಕೊಂಡು ಮಾಡುತ್ತಿದ್ದು, ಅವು ಬಾಕ್ಸ್ ಆಫೀಸ್​​ನಲ್ಲಿ ಫೇಲ್ ಆಗುತ್ತಿವೆ.

90ರ ದಶಕದಲ್ಲಿ ವರುಣ್ ಧವನ್ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ವಾಶು ಭಗ್ನಾನಿ ಇದೀಗ ಡೇವಿಡ್ ಧವನ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಅಪ್ಪ ಮಗ (ವರುಣ್-ಡೇವಿಡ್) ಅನ್ನು ನಂಬಿ ಕೆಟ್ಟೆ ಎಂದಿದ್ದಾರೆ. ‘ಕೂಲಿ ನಂಬರ್ 1’ ಸಿನಿಮಾ ಮಾಡಲು ತಾವು ಡೇವಿಡ್ ಧವನ್​​ಗೆ 70 ಕೋಟಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಅಲ್ಲದೆ ಆ ಸಿನಿಮಾದಿಂದ ತಾವು 27 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾಗಿಯೂ ಹೇಳಿದ್ದಾರೆ ನಿರ್ಮಾಪಕ.

ಇದನ್ನೂ ಓದಿ:ಸೆಲೆಬ್ರಿಟಿಗಳ ಅಹಂಕಾರಕ್ಕೆ ತೆರೆ ಹಾಕಲು ನಿರ್ಧರಿಸಿದ ಬಾಲಿವುಡ್​ನ ಖ್ಯಾತ ಹೇರ್​​​ಸ್ಟೈಲಿಸ್ಟ್

ಕೂಲಿ ಸಿನಿಮಾದ ಫ್ಲಾಪ್ ಬಳಿಕ ವಾಶು ಭಗ್ನಾನಿ ಬಳಿ ಮಾತನಾಡಿದ್ದ ಡೇವಿಡ್ ಧವನ್, ‘ಮನಿಮಗೆ ಆಗಿರುವ ನಷ್ಟವನ್ನು ಮುಂದೊಂದು ದಿನ ಸರಿದೂಗಿಸಿ ಕೊಡುತ್ತೇನೆ ಎಂದಿದ್ದರು. ‘ನಾವು ಬೀವಿ ನಂಬರ್ 1 ಸಿನಿಮಾವನ್ನು ಮತ್ತೆ ಮಾಡೋಣ ಎಂದಿದ್ದರಂತೆ. ಸರಿ ಎಂದಿದ್ದ ಭಗ್ನಾನಿ, ಚಿತ್ರಕತೆಗೆ ಕಾಯುತ್ತಿದ್ದರಂತೆ. ಆದರೆ ಡೇವಿಡ್ ಧವನ್ ಅಷ್ಟರಲ್ಲಿ ಟಿಪ್ಸ್ ಜೊತೆ ಸೇರಿಕೊಂಡು ಹೊಸ ಸಿನಿಮಾ ಮಾಡಿದ್ದು ಮಾತ್ರವಲ್ಲದೆ ತಮ್ಮ ಸಿನಿಮಾ ಆಗಿದ್ದ ‘ಬೀವಿ ನಂಬರ್ 1’ ಹಾಡನ್ನು ಆ ಸಿನಿಮಾನಲ್ಲಿ ಬಳಸಿದ್ದಾರೆ, ಅದಕ್ಕೆ ನನ್ನ ಅನುಮತಿಯನ್ನೂ ಸಹ ಪಡೆದಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.

ವರುಣ್ ಧವನ್ ನಟನೆಯ ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದು, ಆ ಸಿನಿಮಾನಲ್ಲಿ ‘ಚುನರಿ ಚುನರಿ’ ಹೆಸರಿನ ಹಾಡನ್ನು ಬಳಸಿಕೊಂಡಿದ್ದಾರೆ. ಇದೀಗ ಭಗ್ನಾನಿ ಅವರು ಸಿನಿಮಾ ವಿರುದ್ಧ ದೂರು ದಾಖಲಿಸಿದ್ದಾರೆ. ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾನಲ್ಲಿ ವರುಣ್ ಧವನ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:17 pm, Tue, 26 May 26

Source link

ಕೋಲಾರ: ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಅಕ್ರಮ ಬಯಲು, ಹಣ ಪಡೆದು ಮಾಸ್ ಕಾಪಿಗೆ ಬಿಟ್ಟ ಇನ್ವಿಜಿಲೇಟರ್‌ಗಳ ವಿಡಿಯೋ ವೈರಲ್! – Kannada News | KSOU Exam Scam Exposed in Kolar: Invigilators Caught on Camera Taking Bribes for Mass Copying in Degree Exams

ಕೋಲಾರ, ಮೇ 26: ಕೋಲಾರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ಭಾರಿ ಪರೀಕ್ಷಾ ಅಕ್ರಮವೊಂದು ಬಯಲಿಗೆ ಬಂದಿದೆ. ಕೋಲಾರದ ಟಮಕಾ ಬಳಿಯಿರುವ ಮುಕ್ತ ವಿವಿಯ ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ ಬಿಎ, ಬಿಕಾಂ, ಬಿಸ್ಸಿ ಮತ್ತು ಬಿಬಿಎ ಸೇರಿದಂತೆ ಪ್ರಮುಖ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ನಕಲು ಮಾಡಲು ಮುಕ್ತ ಅವಕಾಶ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ.

ಖಾಸಗಿಯಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಇಲ್ಲಿನ ಪರೀಕ್ಷಾ ಮೇಲ್ವಿಚಾರಕರು (ಇನ್ವಿಜಿಲೇಟರ್‌ಗಳು) ಭಾರಿ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಮತ್ತು ಪುಸ್ತಕಗಳನ್ನು ಕೊಂಡೊಯ್ಯಲು ಒಂದು ಪೇಪರ್​​ಗೆ 1,000 ದಿಂದ 1,500 ರೂಪಾಯಿಗಳವರೆಗೆ ದರ ನಿಗದಿ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಯಾವುದೇ ಭಯವಿಲ್ಲದೆ ಮಾಸ್ ಕಾಪಿ ಮಾಡಲು ಇನ್ವಿಜಿಲೇಟರ್‌ಗಳೇ ಖುದ್ದಾಗಿ ಸಹಕರಿಸುತ್ತಿದ್ದಾರೆ. ಸದ್ಯ ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳಿಂದ ಇನ್ವಿಜಿಲೇಟರ್‌ಗಳಾದ ವಿನೋದ್ ಸಿಂಗ್, ರಾಜೇಂದ್ರ, ಪುನಿತ್ ಮತ್ತು ನಂದಿನಿ ಎಂಬುವವರು ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿರುವುದು ಎನ್ನಲಾದ ವಿಡಿಯೋ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಫ್ರಾನ್ಸ್​ನಲ್ಲಿ ಬಿಸಿಲ ತಾಪ , ರೈಲಿನಲ್ಲಿ ಕೂರಲಾರದೆ ಹೊರ ಬಂದ ಪ್ರಯಾಣಿಕರು – Kannada News | Heatwave Chaos in France Leaves Paris Nice Train Passengers Stranded for Hours

ಪ್ಯಾರಿಸ್, ಮೇ 26: ಫ್ರಾನ್ಸ್​​ನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ತಾಪ ಹೆಚ್ಚಾಗಿದೆ. ಯುರೋಪ್‌ನಲ್ಲಿ ಆವರಿಸಿರುವ ತೀವ್ರ ಬಿಸಿಗಾಳಿಯ ಭೀಕರತೆಗೆ ಫ್ರಾನ್ಸ್‌ನ ಪ್ಯಾರಿಸ್‌ನಿಂದ ನೈಸ್ ನಗರಕ್ಕೆ ಸಂಚರಿಸುತ್ತಿದ್ದ ರೈಲಿನ ನೂರಾರು ಪ್ರಯಾಣಿಕರು ತೀವ್ರವಾಗಿ ಕಂಗಾಲಾದ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದ ನಿಂತ ರೈಲು ಎಸಿಯೂ ಇಲ್ಲದೆ ರೈಲಿನಲ್ಲೂ ಕೂರಲಾರದೆ ಪ್ರಯಾಣಿಕರು ಕೆಳಗಿಳಿದು ಬಂದಿರುವ ವಿಡಿಯೋ ವೈರಲ್ ಆಗಿದೆ.

ದುರದೃಷ್ಟವಶಾತ್, ಆ ರೈಲಿನ ಬೋಗಿಗಳಲ್ಲಿ ಹವಾನಿಯಂತ್ರಣ (Air-Condition) ವ್ಯವಸ್ಥೆ ಇರಲಿಲ್ಲ. ಧಗಧಗಿಸುವ ಸೂರ್ಯನ ತಾಪಕ್ಕೆ ರೈಲಿನ ಒಳಗಿನ ತಾಪಮಾನವು ಅಪಾಯಕಾರಿ ಮಟ್ಟಕ್ಕೆ ಏರತೊಡಗಿತು. ಬೋಗಿಗಳ ಒಳಗೆ ಉಸಿರಾಡಲು ಗಾಳಿ ಸಿಗದೆ ಸಣ್ಣ ಮಕ್ಕಳು ಮತ್ತು ವೃದ್ಧರು ಸೇರಿದಂತೆ ಇಡೀ ಪ್ರಯಾಣಿಕರು ನರಕಯಾತನೆ ಅನುಭವಿಸಿದರು.

ಕೊನೆಗೆ ಉಸಿರುಗಟ್ಟುವ ವಾತಾವರಣದಿಂದ ಪಾರಾಗಲು ಮತ್ತು ಕೇವಲ ಉಸಿರಾಡುವ ಶುದ್ಧ ಗಾಳಿಗಾಗಿ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದು ಹಳಿಗಳ ಪಕ್ಕದಲ್ಲಿ ಆಶ್ರಯ ಪಡೆಯಬೇಕಾಯಿತು. ತೀವ್ರ ಹವಾಮಾನದ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಮುನ್ನೆಚ್ಚರಿಕೆ ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್ಯಕ್ಕೆ ಇದು ಗುಡ್​​ ನ್ಯೂಸ್​​: ಮಹತ್ವದ ಸಿದ್ಧತೆ ನಡೆಸುತ್ತಿರುವ ಡಿಕೆ ಶಿವಕುಮಾರ್

ಬೆಂಗಳೂರು, ಮೇ,26: ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನವದೆಹಲಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಕರ್ನಾಟಕದ ಜನತೆಗೆ ಸಿಕ್ಕ ಜಯ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರತಿಯು ತಮಗೆ ಕ್ಷಣಮಾತ್ರದಲ್ಲಿ ದೊರೆತಿದ್ದು, ಮೂವರು ನ್ಯಾಯಾಧೀಶರ ಪೀಠವು ಈ ಅರ್ಜಿಯನ್ನು ಪರಿಶೀಲಿಸಿ ತಿರಸ್ಕರಿಸಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ತೀರ್ಪು ಕರ್ನಾಟಕದ ಪಾಲಿಗೆ ಶುಭಸುದ್ದಿಯಾಗಿದ್ದು, ರಾಜ್ಯದ ಪರವಾಗಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಕರ್ನಾಟಕದ ಪರವಾಗಿಯೇ ಇತ್ತು. ಇದೀಗ ತಮಿಳುನಾಡಿನ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವುದರಿಂದ, ಮೇಕೆದಾಟು ಯೋಜನೆಯನ್ನು ಮುಂದುವರಿಸಲು ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಿದೆ. ನಾವು ಈಗಾಗಲೇ ಹೊಸ ಡಿಪಿಆರ್ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಅವರು ವಿವರಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ: ಬೆಂಗಳೂರಿನಲ್ಲಿ ಜಮೀರ್ ಸಿಎಂ ಆಗಲಿ ಎಂದ ಸ್ವಾಮೀಜಿಯ ವಿಡಿಯೋ ವೈರಲ್!

ಬೆಂಗಳೂರು, ಮೇ 26: ಕರ್ನಾಟಕ ಕಾಂಗ್ರೆಸ್​​ನಲ್ಲಿ ಮತ್ತೆ ಕುರ್ಚಿ ಕದನ ತಾರಕಕ್ಕೇರುತ್ತಿದೆ. ಸಿಎಂ ಸಿದ್ದರಾಮಯ್ಯ ಹಲವು ಮಂದಿ ಸಚಿವರೊಂದಿಗೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಸಹ ಉನ್ನತ ಮಟ್ಟದ ನಾಯಕರ ಜತೆ ಚರ್ಚೆ ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರಿಂದ ಹೈವೋಲ್ಟೇಜ್ ಸಭೆ ನಡೆಯುತ್ತಿದೆ. ಅತ್ತ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯದ ಪಟ್ಟದ ಪಗಡೆಯಾಟ ಜೋರಾಗಿದ್ದರೆ ಇತ್ತ ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಸಿಎಂ ಆಗಲಿ ಎಂಬ ಕೂಗು ಕೇಳಿಬಂದಿದೆ. ಎರಡು ವಾರಗಳ ಹಿಂದೆ ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರ ಸಭೆಯ ವೇಳೆ ಮಹೇಶ್ವರಾನಂದ ಸ್ವಾಮೀಜಿ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿಯಾಗಿದ್ದರು. ಇದೇ ವೇಳೆ, ಬಹಿರಂಗವಾಗಿ ಜಮೀರ್ ಅವರನ್ನು ಬೆಂಬಲಿಸಿದ್ದರು. ಜಮೀರ್ ಅಹ್ಮದ್ ಖಾನ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಸ್ವಾಮೀಜಿ ಹೇಳಿದ್ದರು. ಇದೀಗ ಆ ವಿಡಿಯೋ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರರಂಗದ ಕಷ್ಟಕ್ಕೆ ಸ್ಪಂದಿಸಿದ ದಳಪತಿ ವಿಜಯ್; ದೊಡ್ಡ ನಿರ್ಧಾರ ತೆಗೆದುಕೊಂಡ ಸಿಎಂ – Kannada News | TN CM Vijay Boosts Film Industry: 5 Shows Daily for New Movies – A Game Changer

ಸಿನಿಮಾ ಹಿನ್ನೆಲೆಯಿಂದ ಬಂದು ಮುಖ್ಯಮಂತ್ರಿಯಾದವರು ಚಿತ್ರರಂಗದ ಕಷ್ಟ-ನಷ್ಟಗಳನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಅನೇಕರ ನಂಬಿಕೆ. ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ನಿರ್ಧಾರ ಈ ನಂಬಿಕೆಯನ್ನು ನಿಜ ಮಾಡಿದೆ. ಚಿತ್ರರಂಗ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಅರಿತಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಮಾಜಿ ನಟ ವಿಜಯ್ ಅವರು, ಚಿತ್ರಮಂದಿರಗಳ ಮಾಲೀಕರು ಮತ್ತು ಪ್ರೇಕ್ಷಕರಿಗೆ ಭರ್ಜರಿ ಕೊಡುಗೆಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಡುಗಡೆಯಾಗುವ ಯಾವುದೇ ಹೊಸ ತಮಿಳು ಸಿನಿಮಾಗಳಿಗೆ ಮೊದಲ 7 ದಿನಗಳವರೆಗೆ ದಿನಕ್ಕೆ 5 ಶೋಗಳನ್ನು ನಡೆಸಲು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ತಮಿಳುನಾಡು ಸರ್ಕಾರ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಮೇ 16ರಂದು ತಮಿಳು ಚಿತ್ರರಂಗದ ವಿವಿಧ ಒಕ್ಕೂಟಗಳ ಪದಾಧಿಕಾರಿಗಳು ಮತ್ತು ಚಿತ್ರಮಂದಿರಗಳ ಮಾಲೀಕರ ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದರು. ಚಿತ್ರಮಂದಿರಗಳ ಆದಾಯ ಹೆಚ್ಚಿಸಲು ಮತ್ತು ಚಿತ್ರರಂಗವನ್ನು ನಷ್ಟದಿಂದ ರಕ್ಷಿಸಲು ದಿನಕ್ಕೆ 5 ಪ್ರದರ್ಶನಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ವಿಜಯ್ ಕೂಡ ಸಿನಿಮಾ ಹಿನ್ನೆಲೆಯವರೇ ಆಗಿರುವುದರಿಂದ, ಸಿನಿಮಾ ನಿರ್ಮಾಪಕರು ಹಾಗೂ ಥಿಯೇಟರ್ ಮಾಲೀಕರ ಪ್ರಾಯೋಗಿಕ ಕಷ್ಟಗಳನ್ನು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ, ಸಿಎಂ ವಿಜಯ್, ಈ ಬೇಡಿಕೆ ನ್ಯಾಯಯುತವಾಗಿದೆ ಎಂದು ಪರಿಗಣಿಸಿ ತಕ್ಷಣವೇ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಹಳೆಯ ನಿಯಮ ಏನಾಗಿತ್ತು?

1957ರ ತಮಿಳುನಾಡು ಸಿನಿಮಾಸ್ (ರೆಗ್ಯುಲೇಶನ್) ನಿಯಮಾವಳಿಗಳ ಪ್ರಕಾರ, ರಾಜ್ಯದ ಚಿತ್ರಮಂದಿರಗಳಲ್ಲಿ ದಿನಕ್ಕೆ ಕೇವಲ 4 ಪ್ರದರ್ಶನಗಳನ್ನು ನೀಡಲು ಮಾತ್ರ ಅವಕಾಶವಿತ್ತು. ಹಬ್ಬದ ದಿನಗಳಲ್ಲಿ ಅಥವಾ ಸಾರ್ವಜನಿಕ ರಜಾದಿನಗಳಲ್ಲಿ 5ನೇ ವಿಶೇಷ ಪ್ರದರ್ಶನವನ್ನು ಪ್ರದರ್ಶಿಸಲು ಅವಕಾಶವಿತ್ತಾದರೂ, ಅದಕ್ಕಾಗಿ ಚಿತ್ರಮಂದಿರಗಳ ಮಾಲೀಕರು ಅಥವಾ ಚಿತ್ರದ ನಿರ್ಮಾಪಕರು ಆಯಾ ಜಿಲ್ಲಾಧಿಕಾರಿಗಳಿಂದ ಅಥವಾ ಚೆನ್ನೈನಲ್ಲಿ ಸಿಟಿ ಪೊಲೀಸ್ ಕಮಿಷನರ್ ಅವರಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾಗಿತ್ತು. ಸರ್ಕಾರ ಕೂಡ ಪ್ರತಿ ಬಾರಿಯೂ ವಿಶೇಷ ಆದೇಶವನ್ನು ಹೊರಡಿಸಬೇಕಾಗಿತ್ತು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತಲ್ಲದೆ, ಸಿನಿಮಾಗಳ ಮುಂಗಡ ಬುಕಿಂಗ್ ಪ್ರಕ್ರಿಯೆಗೂ ತಡವಾಗುವಂತೆ ಮಾಡುತ್ತಿತ್ತು.

ಇದನ್ನೂ ಓದಿ: ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ

ಮುಖ್ಯಮಂತ್ರಿ ವಿಜಯ್ ಅವರ ಹೊಸ ಆದೇಶದ ಪ್ರಕಾರ, ಇನ್ಮುಂದೆ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ವಾರ (7 ದಿನಗಳು) ಐದು ಪ್ರದರ್ಶನಗಳನ್ನು ಯಾವುದೇ ಅನುಮಪತಿ ಪಡೆಯದೆ ನಡೆಸಬಹುದು. ಬೇರೆ ಭಾಷೆಯಿಂದ ಡಬ್ ಆದ ಚಿತ್ರಗಳು, ಮರು-ಬಿಡುಗಡೆಯಾಗುವ ಸಿನಿಮಾಗಳಿಗೂ ಈ ವಿನಾಯಿತಿ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link