Category Archives: Blog

Your blog category

200ಕ್ಕೂ ಹೆಚ್ಚು ಪೋಸ್ಟ್‌ ತೆಗೆದು ಹಾಕಿದ ಅರ್ಷದೀಪ್ ಸಿಂಗ್..! – Kannada News | IPL 2026: Arshdeep Singh Removes Over 200 Instagram Posts

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಿಂದ ಪಂಜಾಬ್ ಕಿಂಗ್ಸ್ ಹೊರಬೀಳುತ್ತಿದ್ದಂತೆ ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ತನ್ನ ಇನ್​ಸ್ಟಾಗ್ರಾಮ್ ಖಾತೆಗೆ ಮೇಜರ್ ಸರ್ಜರಿ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 234 ಪೋಸ್ಟ್​ಗಳನ್ನು ಡಿಲೀಟ್ ಅಥವಾ ಆರ್ಕೈವ್ ಮಾಡುವ ಮೂಲಕ ಎಂಬುದೇ ಅಚ್ಚರಿ.

ಇತ್ತ 234 ಪೋಸ್ಟ್‌ಗಳನ್ನು ಡಿಲೀಟ್ ಅಥವಾ ಆರ್ಕೈವ್ ಮಾಡಿರುವ ಕಾರಣ ಅವರ ಪ್ರೊಫೈಲ್‌ನಲ್ಲಿ ಈಗ ಕೇವಲ 44 ಪೋಸ್ಟ್​ಗಳು ಮಾತ್ರ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಅರ್ಷದೀಪ್​ ಸಿಂಗ್ ತಮ್ಮ ಪ್ರೊಫೈಲ್ ಚಿತ್ರವನ್ನು (DP) ಬದಲಾಯಿಸಿದ್ದು, ಬಯೋದಲ್ಲಿದ್ದ ಪ್ರಮುಖ ವಿವರಗಳನ್ನೂ ತೆಗೆದುಹಾಕಿದ್ದಾರೆ.

ಪಂಜಾಬ್ ಕಿಂಗ್ಸ್ ಆಟಗಾರನ ಈ ದಿಢೀರ್ ಬದಲಾವಣೆಗೆ ಏನು ಕಾರಣ ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಇದಾಗ್ಯೂ ಐಪಿಎಲ್ ವೇಳೆ ನಡೆದ ಕೆಲ ಘಟನೆಗಳಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಐಪಿಎಲ್​ ವೇಳೆ ಏನಾಗಿತ್ತು?

ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಕ್ಕೂ ಮುನ್ನ ಮಾಡಿದ ವಿಡಿಯೋದಲ್ಲಿ ತಿಲಕ್ ವರ್ಮಾ ಅವರನ್ನು ಅಂಧೇರಾ ಎಂದು ಕರೆಯುತ್ತಿರುವುದು ಸೆರೆಯಾಗಿತ್ತು. ತಿಲಕ್ ವರ್ಮಾ ಅವರ ಮೈ ಬಣ್ಣವನ್ನು ಪ್ರಸ್ತಾಪಿಸಿ ಮಾಡಲಾಗಿದ್ದ ಈ ವಿಡಿಯೋ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು.

ಹಾಗೆಯೇ ಪಂಜಾಬ್ ಕಿಂಗ್ಸ್ ತಂಡದ ಸಹ-ಆಟಗಾರ ಪ್ರಿಯಾಂಶ್ ಆರ್ಯ ಅವರನ್ನು ಅಣಕಿಸುವಂತೆ ಅವರು ಕೆಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದರ ಜೊತೆಗೆ ಅರ್ಷದೀಪ್ ಸಿಂಗ್ ಹಂಚಿಕೊಂಡ ವಿಡಿಯೋದಲ್ಲಿ ಯುಜ್ವೇಂದ್ರ ಚಹಲ್ ವೇಪ್ ಮಾಡುತ್ತಿರುವುದು ಕೂಡ ಕಂಡು ಬಂದಿತ್ತು. ಹೀಗೆ ಮೈದಾನದಲ್ಲಿನ ಪಂದ್ಯಕ್ಕಿಂತ ಹೆಚ್ಚಾಗಿ ಅರ್ಷದೀಪ್ ಸಿಂಗ್ ತನ್ನ ವಿಡಿಯೋಗಳ ಮೂಲಕ ಸುದ್ದಿಯಲ್ಲಿದ್ದರು.

ಕಳಪೆ ಪ್ರದರ್ಶನ:

ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಅರ್ಷದೀಪ್ ಸಿಂಗ್ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ 14 ಪಂದ್ಯಗಳಿಂದ ಪಡೆದಿರುವುದು ಕೇವಲ 14 ವಿಕೆಟ್​ಗಳು ಮಾತ್ರ. ಅಲ್ಲದೆ ಪ್ರತಿ ಓವರ್​ಗೆ 10 ಕ್ಕಿಂತ ಹೆಚ್ಚಿನ ಸರಾಸರಿಯನ್ನು ರನ್ ಬಿಟ್ಟು ಕೊಟ್ಟಿದ್ದರು.

ಇದನ್ನೂ ಓದಿ: ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!

ಈ ಎಲ್ಲಾ ಕಳಪೆ ಪ್ರದರ್ಶನ ನಡುವೆ ಅರ್ಷದೀಪ್ ಸಿಂಗ್ ಮಾತ್ರ ವಿಡಿಯೋ ಚಿತ್ರೀಕರಣದೊಂದಿಗೆ ಸುದ್ದಿಯಲ್ಲಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡ ಸೋತು ಐಪಿಎಲ್​ನಿಂದ ನಿರ್ಗಮಿಸಿದೆ. ಈ ನಿರ್ಗಮನದೊಂದಿಗೆ ಅರ್ಷದೀಪ್ ಸಿಂಗ್ ಮನೆಗೆ ತೆರಳಿದ್ದಾರೆ. ಅತ್ತ ಮನೆಗೆ ತೆರಳಿದ ಬೆನ್ನಲ್ಲೇ ಅರ್ಷದೀಪ್ ಸಿಂಗ್ ಬರೋಬ್ಬರಿ 234 ವಿಡಿಯೋಗಳನ್ನು ಡಿಲೀಟ್ ಅಥವಾ ಅಥವಾ ಆರ್ಕೈವ್ ಮಾಡಿರುವುದು ವಿಶೇಷ.

Source link

ಕನಿಷ್ಠ ವೇತನದ ಎಫೆಕ್ಟ್​​: ಪ್ಲೇಟ್​​ ಇಡ್ಲಿ ಬೆಲೆ 90 ರೂ, ಬಿರಿಯಾನಿ 500 ರೂ. ತಲುಪುವ ಎಚ್ಚರಿಕೆ ಕೊಟ್ಟ ಹೋಟೆಲ್​​ ಮಾಲಕರು – Kannada News | Minimum Wage Impact: Bengaluru Hotels Warn of Food Price Hike Across Karnataka

ಸಾಂದರ್ಭಿಕ ಚಿತ್ರImage Credit source: amexessentials.com

ಬೆಂಗಳೂರು, ಮೇ 26: ಕಮರ್ಷಿಯಲ್​​ ಎಲ್​​ಪಿಜಿ ಸಿಲಿಂಡರ್​​ಗಳ ಅಭಾವದಿಂದಾಗಿ ತಿಂಡಿ-ತಿನಿಸುಗಳ ಬೆಲೆಯನ್ನು ಈಗಾಗಲೇ ಹೋಟೆಲ್​​ಗಳು ಏರಿಕೆ ಮಾಡಿರೋದು ಗ್ರಾಹಕರ ಕೈ ಸುಡುತ್ತಿದೆ. ಈ ನಡುವೆ ಹೋಟೆಲ್​​ಗಳು ಮತ್ತೊಂದು ಎಚ್ಚರಿಕೆ ನೀಡಿದ್ದು, ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನ ನಿಯಮಗಳಿಂದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (KSHA) ಹೇಳಿದೆ. ಈ ನಿರ್ಧಾರದಿಂದ ಒಂದು ಪ್ಲೇಟ್​​ ಬಿರಿಯಾನಿ ದರ 500 ರೂ. ಆಗಬಹುದು. ಜೊತೆಗೆ ಇಡ್ಲಿ, ಮಸಾಲೆ ದೋಸೆ ಸೇರಿದಂತೆ ಜನಪ್ರಿಯ ಉಪಹಾರಗಳ ಬೆಲೆಯೂ ಭಾರೀ ಏರಿಕೆಯಾಗಬಹುದು ಎಂಬ ಮುನ್ಸೂಚನೆಯನ್ನು ನೀಡಿದೆ. ಇದರಿಂದ ಗ್ರಾಹಕರ ಜೊತೆಗೆ ಸಣ್ಣ ಹೋಟೆಲ್ ಮಾಲೀಕರ ಮೇಲೂ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಂಘ ತಿಳಿಸಿದೆ.

ಕೆಎಸ್​​ಹೆಚ್​​ಎ ಅಧ್ಯಕ್ಷ ಜಿ.ಕೆ. ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು,ಸುಮಾರು ಶೇಕಡಾ 60ರಷ್ಟು ವೇತನ ಹೆಚ್ಚಳದಿಂದ ಈಗಾಗಲೇ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚದ ಒತ್ತಡದಲ್ಲಿರುವ ಆತಿಥ್ಯ ವಲಯಕ್ಕೆ ಭಾರೀ ಹೊಡೆತ ಬೀಳಲಿದೆ. ಪರಿಷ್ಕೃತ ವೇತನದ ಪ್ರಕಾರ, ಕಾರ್ಮಿಕರಿಗೆ 19,300ರಿಂದ ಆರಂಭವಾಗಿ, ಅತ್ಯುನ್ನತ ಕೌಶಲ್ಯ ಹೊಂದಿದ ಕಾರ್ಮಿಕರಿಗೆ 31,100ರವರೆಗೆ ಕನಿಷ್ಠ ವೇತನ ನಿಗದಿಯಾಗಿದೆ. ಈ ವೇತನ ವ್ಯವಸ್ಥೆಯನ್ನು ಈಗಿನ ರೂಪದಲ್ಲೇ ಜಾರಿಗೆ ತಂದರೆ ಉಪಹಾರಗಳ ದರದಲ್ಲಿ ತೀವ್ರ ಏರಿಕೆ ಆಗಲಿದೆ. ಈಗ 50 ರೂ. ಇರುವ ಒಂದು ಪ್ಲೇಟ್​​ ಇಡ್ಲಿ ಬೆಲೆ 80-90ಕ್ಕೆ ಏರಬಹುದು. 80-90 ರೂ. ಇರುವ ಮಸಾಲೆ ದೋಸೆ ದರ 150ಕ್ಕೆ ತಲುಪಬಹುದು ಎಂದು ಅವರು ತಿಳಿಸಿದ್ದಾರೆ. ಅದೇ ರೀತಿ 150-200 ರೂ. ಇರುವ ಶಾಕಾಹಾರಿ ಊಟದ ದರ 250-300ಕ್ಕೆ ಏರಬಹುದು. ಬೆಂಗಳೂರಿನಲ್ಲಿ 300-350 ರೂ.ಗಳಿಗೆ ಸಿಗುತ್ತಿರುವ ಬಿರಿಯಾನಿ ಬೆಲೆ ಸುಮಾರು 500ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಏಳು ಅಭ್ಯಾಸಗಳನ್ನು ಅಳವಡಿಸಿಕೊಂಡು ತನ್ನ ಖರ್ಚು ವೆಚ್ಚಕ್ಕೆ ಬ್ರೇಕ್ ಹಾಕಿದ ಬೆಂಗಳೂರಿಗ

ವಾಣಿಜ್ಯ LPG ಸಿಲಿಂಡರ್ ದರ ಏರಿಕೆಯೂ ಹೋಟೆಲ್​​ಗಳ ಮೇಲೆ ಈಗಾಗಲೇ ಆರ್ಥಿಕ ಹೊರೆ ಹೆಚ್ಚಿಸಿವೆ. ಕೆಲವೇ ತಿಂಗಳಲ್ಲಿ LPG ಸಿಲಿಂಡರ್ ದರ 1,884 ರೂ.ಗಳಿಂದ 3,152ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮತ್ತು ಕಸ ಸಂಗ್ರಹ ಸೆಸ್​​ ಶುಲ್ಕಗಳೂ ಹೋಟೆಲ್ ಉದ್ಯಮಕ್ಕೆ ಹೊರೆ ತಂದಿವೆ ಎಂದರು ತಿಳಿಸಿದ್ದಾರೆ. ಹೋಟೆಲ್‌ಗಳು ಈಗಾಗಲೇ ಕಾರ್ಮಿಕರಿಗೆ ಊಟ, ವಸತಿ, ಯೂನಿಫಾರ್ಮ್ ಸೌಲಭ್ಯ ನೀಡುತ್ತಿರುವುದರಿಂದ ಈ ವಲಯವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:39 am, Tue, 26 May 26

Source link

ಶಿವಣ್ಣನ ಪವರ್​ಫುಲ್ ಕಣ್ಣಿನ ಬಗ್ಗೆ ನಟಿ ಜಾನ್ಹವಿ ಕಪೂರ್ ಹೇಳಿದ್ದೇನು? – Kannada News | Peddi Movie event, Actress Janhvi Kapoor talks about Shiva Rajkumar

ಶಿವರಾಜ್ ಕುಮಾರ್ (Shiva Rajkumar) ಕನ್ನಡ ಚಿತ್ರರಂಗದ ಹಿರಿಯ ನಟ. ಹಲವು ಯಂಗ್ ನಟರು, ನಟನೆ, ಫೈಟ್ಸ್, ಡ್ಯಾನ್ಸು ಎಲ್ಲ ರೀತಿಯಲ್ಲಿಯೂ ತಯಾರಾಗಿ ಚಿತ್ರರಂಗಕ್ಕೆ ಬರುತ್ತಿದ್ದರೂ ಈ ಮೂರೂ ವಿಭಾಗಗಳಲ್ಲಿ ಶಿವಣ್ಣನ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಯಸ್ಸಾದಂತೆ ಶಿವಣ್ಣನ ಖದರ್ ಹೆಚ್ಚಾಗಿದ್ದು, ಕಣ್ಣಿನಲ್ಲೇ ಖದರ್ ತೋರಿಸುತ್ತಾ ತೆರೆಯನ್ನು ಆವರಿಸಿಕೊಳ್ಳುತ್ತಾರೆ. ಇದೀಗ ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಶಿವಣ್ಣನ ಜೊತೆಗೆ ರಾಮ್ ಚರಣ್, ಜಾನ್ಹವಿ ಕಪೂರ್ ಅವರುಗಳು ನಟಿಸಿದ್ದಾರೆ. ನಿನ್ನೆ ‘ಪೆದ್ದಿ’ ಚಿತ್ರತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿತ್ತು. ಈ ವೇಳೆ ನಟಿ ಜಾನ್ಹವಿ ಕಪೂರ್ ಅವರು ಶಿವರಾಜ್ ಕುಮಾರ್ ಅವರ ಬಗ್ಗೆ ತಾವು ಗಮನಿಸಿದ ಅಂಶವನ್ನು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಜಾನ್ಹವಿ ಕಪೂರ್, ‘ಶಿವರಾಜ್ ಕುಮಾರ್ ಅವರು ಹಿರಿಯ ನಟ, ‘ಪೆದ್ದಿ’ಯಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ದರಾದೃಷ್ಟವಷಾತ್ ನನ್ನದು ಅವರೊಟ್ಟಿಗೆ ಕೇವಲ ಒಂದು ಸೀನ್ ಅಷ್ಟೆ ಇತ್ತು. ಅದರೆ ಆ ಒಂದು ಸೀನ್​​ನಲ್ಲೇ ಅವರು ಎಂಥಹಾ ಅದ್ಭುತ ಕಲಾವಿದ ಎಂಬುದನ್ನು ನಾನು ಅರಿತುಕೊಂಡೆ. ಅವರು ಬಹಳ ಗಾಢವಾಗಿ ತಮ್ಮ ನಟನೆ ನೀಡುತ್ತಾರೆ ಅವರ ಕಣ್ಣುಗಳು ಬಹಳ ಪವರ್​ಫುಲ್ ಆಗಿವೆ’ ಎಂದಿದ್ದಾರೆ.

ಇದನ್ನೂ ಓದಿ:ವಿಕಲಚೇತನ ಯುವಕನ ಚಿತ್ರಕಲೆ ಮೆಚ್ಚಿದ ಶಿವರಾಜ್ ಕುಮಾರ್

‘ಪೆದ್ದಿ’ ಸಿನಿಮಾನಲ್ಲಿ ಅವರೊಟ್ಟಿಗೆ ಹೆಚ್ಚು ನಟಿಸಲು ನನಗೆ ಅವಕಾಶ ಸಿಗಲಿಲ್ಲ ಆದರೆ ಮುಂದಿನ ದಿನಗಳಲ್ಲಿ ಅವರಂಥಹಾ ಮಹಾನ್ ನಟನೊಡನೆ ನಟಿಸಲು ಹೆಚ್ಚು ಅವಕಾಶ ಸಿಗಲಿದೆ ಎಂದು ಆಶಿಸುತ್ತೇನೆ’ ಎಂದು ನಟಿ ಜಾನ್ಹವಿ ಕಪೂರ್ ಹೇಳಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ನಟಿ ಜಾನ್ಹವಿ ಕಪೂರ್ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು. ಸಾಕಷ್ಟು ಅಭ್ಯಾಸ ಮಾಡಿ ಕೆಲ ಕನ್ನಡದ ಮಾತುಗಳನ್ನು ನಟಿ ಮಾತನಾಡಿದ್ದು ವಿಶೇಷ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ನಾಯಕ. ಸಿನಿಮಾನಲ್ಲಿ ಅವರು ಕ್ರಿಕೆಟಿಗನಾಗಿ ಮತ್ತು ಕುಸ್ತಿ ಪಟುವಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಶಿವಣ್ಣ ಗೌಡನಾಯ್ಡು ಪಾತ್ರದಲ್ಲಿ ನಟಿಸಿದ್ದು, ರಾಮ್ ಚರಣ್​​ಗೆ ಕುಸ್ತಿ ಹೇಳಿಕೊಡುವ ಪಾತ್ರ ಅವರದ್ದು. ಜಾನ್ಹವಿ ಕಪೂರ್ ನಾಯಕಿ. ಜಗಪತಿ ಬಾಬು, ಬಾಲಿವುಡ್ ನಟ ದಿವ್ಯೇಂದು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ. ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:57 am, Tue, 26 May 26

Source link

Video: ಏಳು ಅಭ್ಯಾಸಗಳನ್ನು ಅಳವಡಿಸಿಕೊಂಡು ತನ್ನ ಖರ್ಚು ವೆಚ್ಚಕ್ಕೆ ಬ್ರೇಕ್ ಹಾಕಿದ ಬೆಂಗಳೂರಿಗ – Kannada News | Bengaluru: A Bengaluru man put a stop to spending by adopting seven habits

ಬೆಂಗಳೂರು, ಮೇ 26: ಬೆಂಗಳೂರು (Bengaluru) ಅಂದ್ರೆ ದುಬಾರಿ. ಇಲ್ಲಿ ಕೈ ತುಂಬಾ ಸಂಬಳ ಇರುವ ಉದ್ಯೋಗವೇನೋ ಸಿಗುತ್ತದೆ. ಆದರೆ ಖರ್ಚು ಅಷ್ಟೇ ಇದೆ ಅನ್ನೋದು ಅನೇಕರ ಅಭಿಪ್ರಾಯ. ಮಾಯಾನಗರದಲ್ಲಿ ತಿಂಗಳ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಉಳಿತಾಯ ಮಾಡುವುದು ಸುಲಭವಲ್ಲ. ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ತನ್ನ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿದ್ದಾರೆ. ಉತ್ತಮ ಅಭ್ಯಾಸಗಳು ಚುರುಕಾದ ಆಯ್ಕೆಗಳಿಂದ ದುಡ್ಡು ಖರ್ಚಾಗುವುದನ್ನು ತಪ್ಪಿಸಿದ್ದಾರೆ. ತಾನು ಅಳವಡಿಸಿಕೊಂಡ ಏಳು ಅಭ್ಯಾಸಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

@bangalore_viral ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಕ್ಷಯ್ ಸಿಎನ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ನ ಶೀರ್ಷಿಕೆಯಲ್ಲಿ “ನನ್ನ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳದೆ ನನ್ನ ಬೆಂಗಳೂರಿನ ಖರ್ಚುಗಳನ್ನು ನಾನು ಹೇಗೆ ಕಡಿಮೆ ಮಾಡಿಕೊಂಡೆ” ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಅಕ್ಷಯ್ ಅವರು, ಹೆಚ್ಚು ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡುವ ಬದಲು ಮೆಟ್ರೋ ಹತ್ತಿರಕ್ಕೆ ಬದಲಾಯಿಸಿದ್ದು ತಾನು ಮಾಡಿದ ದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಬಾಡಿಗೆ ಸ್ವಲ್ಪ ಹೆಚ್ಚೇ ಇದ್ದಂತೆ ಕಂಡಿತು. ಆದರೆ ಅಂತಿಮವಾಗಿ ಇದು ದೈನಂದಿನ ಪ್ರಯಾಣ, ಇಂಧನ ಮತ್ತು ಆಟೋಗಳಲ್ಲಿ ವೆಚ್ಚ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿತು ಎಂದು ಬರೆದಿದ್ದಾರೆ.

ನಾನು ದೈನಂದಿನ ಖರ್ಚುಗಳಿಗೆ ಅನುಕೂಲತೆಯನ್ನು ನೆಪವಾಗಿ ಬಳಸುವುದನ್ನು ನಿಲ್ಲಿಸಿದೆ. ತ್ವರಿತ ವಿತರಣೆಗಳು, ಆಟೋಗಳು, ಚಂದಾದಾರಿಕೆಗಳು ಮತ್ತು ‘ಸಣ್ಣ’ ಆನ್‌ಲೈನ್ ಖರೀದಿಗಳು ಬೆಂಗಳೂರಿನಲ್ಲಿ ನನ್ನ ಅತಿದೊಡ್ಡ ಮಾಸಿಕ ವೆಚ್ಚಗಳಲ್ಲಿ ಒಂದಾದವು. ನಾನು ಯಾದೃಚ್ಛಿಕ ಖರ್ಚು ಮಾಡುವ ಬದಲು ನನ್ನ ವಾರಾಂತ್ಯಗಳನ್ನು ಯೋಜಿಸಲು ಪ್ರಾರಂಭಿಸಿದೆ. ಯೋಜಿತವಲ್ಲದ ಕೆಫೆ ಹಾಪಿಂಗ್, ಪಬ್‌ಗಳು ಮತ್ತು ಹಠಾತ್ ಪ್ರವಾಸಗಳು ಬೆಂಗಳೂರಿನಲ್ಲಿ ಜನರು ಅರಿತುಕೊಳ್ಳುವುದಕ್ಕಿಂತ ವೇಗವಾಗಿ ಉಳಿತಾಯವನ್ನು ಸದ್ದಿಲ್ಲದೆ ನಾಶಮಾಡುತ್ತವೆ ಎಂದು ವಿವರಿಸಿದ್ದಾರೆ.

ನನ್ನ ಸುತ್ತಲಿನ ಎಲ್ಲರೂ ಗ್ಯಾಜೆಟ್‌ಗಳಂತೆ ಇದ್ದ ಕಾರಣ ನಾನು ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡುವುದನ್ನು ನಿಲ್ಲಿಸಿದೆ. ಬೆಂಗಳೂರಿನ ಕೆಲಸದ ಸಂಸ್ಕೃತಿಯು ಸದ್ದಿಲ್ಲದೆ ಅನಗತ್ಯ ಜೀವನಶೈಲಿಯ ಒತ್ತಡವನ್ನು ಸೃಷ್ಟಿಸಬಹುದು. ಬೆಂಗಳೂರಿನ ಜೀವನಶೈಲಿಯ ಪ್ರವೃತ್ತಿಗಳೊಂದಿಗೆ ಮುಂದುವರಿಯಲು ಪ್ರಯತ್ನಿಸುವುದನ್ನು ನಿಲ್ಲಿಸಿದ್ದೇನೆ. ಅನೇಕ ಜನರು ಸಾಮಾಜಿಕವಾಗಿ ನವೀಕೃತವಾಗಿರಲು ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ ಎಂದು ಉಲ್ಲೇಖಿಸಿರುವುದು ಕಾಣಬಹುದು.

ಇನ್ನೊಂದು ಪ್ರಮುಖ ಬದಲಾವಣೆಯೆಂದರೆ, ಪ್ರತಿದಿನ ಹೊರಗೆ ತಿನ್ನುವ ಬದಲು ಕೆಲವೊಮ್ಮೆ ಅಡುಗೆ ಮಾಡುವುದು. ಇದು ನನ್ನ ಆರೋಗ್ಯ ಹಾಗೂ ಉಳಿತಾಯ ಎರಡನ್ನೂ ನಿಜವಾಗಿಯೂ ಬದಲಾಯಿಸಿತು. ಹೆಚ್ಚಿನ ಸಂಬಳ ಮಾತ್ರ ಹಣದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎಂದು ನಾನು ಕಲಿತಿದ್ದೇನೆ. ಬೆಂಗಳೂರಿನಲ್ಲಿ ಉತ್ತಮ ಅಭ್ಯಾಸಗಳು ಹೆಚ್ಚು ಮುಖ್ಯ ಎಂದು ಕಟು ಸತ್ಯವನ್ನು ಹೇಳಿದ್ದಾರೆ.

ಇದನ್ನೂ ಓದಿ: ಆಟೋ ಚಾಲಕಿಯನ್ನು ಶ್ಲಾಘಿಸಿದ ಬೆಂಗಳೂರಿನ ಅಮೆಜಾನ್ ಉದ್ಯೋಗಿ, ಕಾರಣ ಇದೇ ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೇರೆಯವರನ್ನು ನೋಡಿ ಬದುಕುವುದನ್ನು ಬಿಟ್ಟರೆ ಖರ್ಚು ಹಿಡಿತದಲ್ಲಿರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಲೈಫ್ ಸ್ಟೈಲ್ ಬದಲಾಯಿಸಿದರೆ ಖರ್ಚಿಗೆ ಬ್ರೇಕ್ ಹಾಕ್ಬಹುದು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದ್ಮಶ್ರೀ ವಿಜೇತರನ್ನೂ ಬಿಡಲಿಲ್ಲ ಸೈಬರ್ ಕಳ್ಳರು!: ಮಧ್ಯರಾತ್ರಿ ಮೆಸೇಜ್ ಬಂದ ಬೆನ್ನಲ್ಲೇ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಹಣ ಮಾಯಾ – Kannada News | Bengaluru Cybercrime: Padma Shri K. Y. Venkatesh Loses rs.90,000 to Online Scam

ಕೆ. ವೈ. ವೆಂಕಟೇಶ್

ಬೆಂಗಳೂರು, ಮೇ.26: ಸೈಬರ್​​ ವಂಚಕರ ಕೈಚಳಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲು ಸಾಮಾನ್ಯ ಜನರೇ ಇವರ ಟಾರ್ಗೆಟ್​ ಆಗಿತ್ತು. ಆದರೆ ಇದೀಗ ಸೆಲೆಬ್ರಿಟಿಗಳನ್ನು ಬಿಡುತ್ತಿಲ್ಲ. ಈಗ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕೃತರನ್ನೂ ಬಿಡದೆ ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಖ್ಯಾತ ಪ್ಯಾರಾ ಅಥ್ಲೀಟ್ ಕೆ. ವೈ. ವೆಂಕಟೇಶ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಸೈಬರ್ ಖದೀಮರು, ಸುಮಾರು 90 ಸಾವಿರ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ.

ಹುಟ್ಟಿನಿಂದಲೇ ಅಕೊಂಡ್ರೋಪ್ಲಾಸಿಯಾ (Achondroplasia – ಕುಬ್ಜತೆ) ಸಮಸ್ಯೆಯಿಂದ ಬಳಲುತ್ತಿದ್ದರೂ, ಅದನ್ನೇ ಸವಾಲಾಗಿ ಸ್ವೀಕರಿಸಿದ ಕೆ. ವೈ. ವೆಂಕಟೇಶ್ ಅವರು ದೇಶ ಕಂಡ ಅಪರೂಪದ ಪ್ಯಾರಾ ಅಥ್ಲೀಟ್ ಆಗಿದ್ದಾರೆ. 50ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿರುವ ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದೀಗ ಅವರ ಮೇಲೆಯೂ ಈ ವಂಚಕರ ಜಾಲದ ದೃಷ್ಟಿ ಬಿದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 12 ಗಂಟೆಯ ಅವಧಿಯಲ್ಲಿ ಕೆ. ವೈ. ವೆಂಕಟೇಶ್ ಅವರ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಒಟಿಪಿ (OTP) ಸಂದೇಶಗಳು ಬರತೊಡಗಿವೆ. ಅಸಮಯದಲ್ಲಿ ಸತತವಾಗಿ ಒಟಿಪಿ ಬರುತ್ತಿರುವುದನ್ನು ಕಂಡು ಅನುಮಾನಗೊಂಡ ವೆಂಕಟೇಶ್ ಅವರು, ಮಾರನೇ ದಿನ ಬೆಳಗ್ಗೆ ತಕ್ಷಣವೇ ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದಾರೆ.

ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯ ವಿವರಗಳನ್ನು (Account Statement) ಪರಿಶೀಲಿಸಿದಾಗ ವೆಂಕಟೇಶ್ ಅವರಿಗೆ ತೀವ್ರ ಆಘಾತ ಕಾದಿತ್ತು. ಅವರ ಗಮನಕ್ಕೆ ಬಾರದೆಯೇ ಖಾತೆಯಿಂದ ಹಂತ ಹಂತವಾಗಿ ಒಟ್ಟು 90 ಸಾವಿರ ರೂಪಾಯಿ ಹಣ ಕಟ್ ಆಗಿರುವುದು ಪತ್ತೆಯಾಗಿದೆ. ಯಾವುದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ಸಹ ಸೈಬರ್ ಕಳ್ಳರು ಕೆಲವೊಂದು ತಂತ್ರಗಳನ್ನು ಬಳಸಿಕೊಂಡು ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಪೊಲೀಸರನ್ನ ಕಂಡು ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ರೌಡಿ ‘ಸ್ಪಾಟ್ ನಾಗ’; ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಕಿರಾತಕ!

ಈ ಸೈಬರ್ ದರೋಡೆಗೆ ಸಂಬಂಧಿಸಿದಂತೆ ಕೆ. ವೈ. ವೆಂಕಟೇಶ್ ಅವರು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಬ್ಯಾಂಕ್ ಖಾತೆ ಹಾಗೂ ಐಪಿ ಅಡ್ರೆಸ್ ಪತ್ತೆಹಚ್ಚಲು ಸೈಬರ್ ಕ್ರೈಮ್ ವಿಭಾಗದ ನೆರವು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

3 ಗಂಟೆಗಳ ಕಾಲ ಚಿತ್ರಹಿಂಸೆ, ಎಲೆಕ್ಟ್ರಿಕ್ ಶಾಕ್ ಕೊಟ್ಟು, ವಿಷ ಕುಡಿಸಿ, ಪ್ರಿಯಕರನ ಜತೆ ಸೇರಿ ಗಂಡನ ಹತ್ಯೆಗೈದ ಪತ್ನಿ – Kannada News | UP: Husband Tortured, Electrocuted, Poisoned by Wife and Lover for Questioning Affair

ಮೊರಾದಾಬಾದ್, ಮೇ 26: ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿ(Husband)ಯನ್ನು ಪತ್ನಿಯೇ ತನ್ನ ಪ್ರಿಯಕರ ಮತ್ತು ತಂಗಿಯ ಸಹಾಯದಿಂದ ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ(Murder) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ.ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ದುರ್ದೈವಿಯನ್ನು ಪವನ್ ಎಂದು ಗುರುತಿಸಲಾಗಿದೆ. ಪವನ್ ಮತ್ತು ಆಂಚಲ್ (24) ದಂಪತಿಗೆ 6 ವರ್ಷಗಳ ಹಿಂದೆ ಮದುವೆಯಾಗಿದ್ದು, 3 ವರ್ಷದ ಹೆಣ್ಣು ಮಗಳಿದ್ದಾಳೆ. ಆದರೆ, ಆಂಚಲ್‌ಗೆ ಆಕೆಯ ಸ್ವಂತ ಸೋದರಳಿಯ ಅಂಕಿತ್ (21) ಎಂಬಾತನೊಂದಿಗೆ ವಿವಾಹೇತರ ಸಂಬಂಧವಿತ್ತು. ಈ ವಿಷಯ ಪವನ್‌ಗೆ ತಿಳಿದಿದ್ದರಿಂದ ಇಬ್ಬರ ನಡುವೆ ಪ್ರತಿದಿನ ತೀವ್ರ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು. ಇದೇ ಕಾರಣಕ್ಕೆ ಆಂಚಲ್ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಪ್ಲಾನ್ ಮಾಡಿದ್ದಳು.

ಈ ಪಕ್ಕಾ ಸ್ಕೆಚ್‌ಗೆ ಸಹಾಯ ಮಾಡಲು ಆಂಚಲ್ ತಂಗಿ ಶಿಖಾ (18) ನಾಲ್ಕು ದಿನಗಳ ಮೊದಲೇ ಇವರ ಮನೆಗೆ ಬಂದಿದ್ದಳು. ಅಷ್ಟೇ ಅಲ್ಲದೆ ಶಿಖಾ ತನ್ನ ಗೆಳೆಯ ಅಜಯ್ (19) ಎಂಬಾತನನ್ನು ಕೂಡ ಈ ಅಪರಾಧ ಕೃತ್ಯಕ್ಕೆ ಬಳಸಿಕೊಂಡಿದ್ದಳು.

ಮತ್ತಷ್ಟು ಓದಿ: ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾನಕ್ಕೆ ಅಪ್ರಾಪ್ತೆ ಬಲಿ

ನಡೆದಿದ್ದೇನು?
ಕೊಲೆಯ ದಿನದಂದು ಈ ನಾಲ್ವರ ಗ್ಯಾಂಗ್ ಪವನ್‌ಗೆ ಬಲವಂತವಾಗಿ ವಿಷ ಕುಡಿಸಲು ಯತ್ನಿಸಿದೆ. ಪವನ್ ತೀವ್ರವಾಗಿ ಪ್ರತಿರೋಧ ಒಡ್ಡಿದಾಗ, ಆತನನ್ನು ಹಗ್ಗದಿಂದ ಕಟ್ಟಿಹಾಕಿ ಬರ್ಬರವಾಗಿ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೆ ಸುಮಾರು ಮೂರು ಗಂಟೆಗಳ ಕಾಲ ಪವನ್‌ನನ್ನು ಒತ್ತೆಯಾಳಾಗಿ ಇರಿಸಿಕೊಂಡು, ಆತನಿಗೆ ಸತತವಾಗಿ ವಿದ್ಯುತ್ ಆಘಾತಗಳನ್ನು ನೀಡಿದ್ದಾರೆ. ಪವನ್ ತೀವ್ರವಾಗಿ ಜರ್ಜರಿತನಾದಾಗ, ಕೊನೆಗೆ ಆತನಿಗೆ ಬಲವಂತವಾಗಿ ವಿಷ ಪ್ರಾಶನ ಮಾಡಿಸಿದ್ದಾರೆ.

ಪವನ್ ಮೃತಪಟ್ಟ ನಂತರ ಕೊಲೆಯನ್ನು ಮುಚ್ಚಿಹಾಕಲು, ಶವವನ್ನು ಮೆಟ್ಟಿಲುಗಳ ಮೇಲಿಂದ ತಳ್ಳಿ ಹಾಕಿದ್ದಾರೆ. ನಂತರ ನೆರೆಹೊರೆಯವರಿಗೆ ಪವನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸಲು ಕಥೆ ಕಟ್ಟಿದ್ದಾರೆ.

ಪವನ್ ಕುಟುಂಬಸ್ಥರ ಪ್ರಕಾರ, ಆತನಿಗೆ ಮೊದಲೇ ಜೀವ ಬೆದರಿಕೆ ಇತ್ತು. ಮೂರು ತಿಂಗಳ ಹಿಂದೆಯೇ ಪವನ್ ತನ್ನ ಸಹೋದರಿಗೆ ಕರೆ ಮಾಡಿ ತನಗೆ ಏನಾದರೂ ಅಪಾಯ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದನು. ಸದ್ಯ ಪೊಲೀಸರು ಆಂಚಲ್, ಅಂಕಿತ್, ಶಿಖಾ ಮತ್ತು ಅಜಯ್ ನಾಲ್ವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು? – Kannada News | Ram Charan’s New Bodyguard: Meet Kevin Kounta, The MMA Champ Securing Peddi Promotions

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಬುಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ‘ಪೆಡ್ಡಿ’ ಸಿನಿಮಾ  ಜೂನ್ 04 ರಂದು ಬಿಡುಗಡೆಯಾಗಲಿದೆ. ಈ ಹಳ್ಳಿ ಕ್ರೀಡಾ ಆಧಾರಿತ ಅದ್ಭುತ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಸದ್ಯ ದೇಶದಾದ್ಯಂತ ಭರ್ಜರಿಯಾಗಿ ನಡೆಯುತ್ತಿವೆ. ಮುಂಬೈನಲ್ಲಿ ನಡೆದ ಅದ್ಧೂರಿ ಟ್ರೇಲರ್ ಬಿಡುಗಡೆ ಸಮಾರಂಭದ ನಂತರ, ಭೋಪಾಲ್ ಹಾಗೂ ಬೆಂಗಳೂರಿನಲ್ಲೂ ಚಿತ್ರತಂಡ ಪ್ರಚಾರ ಕೈಗೊಂಡಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಮ್ ಚರಣ್ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಆದರೆ, ಈ ಪ್ರಚಾರದ ಈವೆಂಟ್‌ಗಳ ಫೋಟೋ ಮತ್ತು ವಿಡಿಯೋಗಳಲ್ಲಿ ರಾಮ್ ಚರಣ್ ಅವರ ಲುಕ್ ಜೊತೆಗೆ ಎಲ್ಲರ ಗಮನ ಸೆಳೆಯುತ್ತಿರುವುದು ಅವರ ಪಕ್ಕದಲ್ಲೇ ಇರುವ ಒಂದು ಬೃಹತ್ ಕಟೌಟ್‌ನಂತಹ ವ್ಯಕ್ತಿ. ಸೋಷಿಯಲ್ ಮೀಡಿಯಾದಲ್ಲಿ ಬೀಸ್ಟ್ ಎಂದೇ ವೈರಲ್ ಆಗಿರುವ ಈ ವ್ಯಕ್ತಿ, ರಾಮ್ ಚರಣ್ ಅವರ ಹಿಂದೆ ರಕ್ಷಣಾತ್ಮಕ ಗುರಾಣಿಯಂತೆ ನಿಂತು ಭದ್ರತೆ ಒದಗಿಸುತ್ತಿದ್ದಾರೆ. ನೆಟ್ಟಿಗರು ಈತನ ಹಿನ್ನೆಲೆ ಬಗ್ಗೆ ಹುಡುಕಾಡಿದಾಗ ಅತ್ಯಂತ ಕುತೂಹಲಕಾರಿ ವಿಷಯಗಳು ಹೊರಬಂದಿವೆ.

ಈ ಹೊಸ ಬಾಡಿಗಾರ್ಡ್ ಹೆಸರು ಕೆವಿನ್ ಕುಂಟಾ. ಆಫ್ರಿಕಾದ ಗ್ಯಾಂಬಿಯಾ ಮೂಲದ ಕೆವಿನ್, ಪ್ರಸ್ತುತ ಇಟಲಿಯಲ್ಲಿ ವೃತ್ತಿಪರ ಮಿಶ್ರ ಸಮರ ಕಲೆಗಳ (MMA) ಹೋರಾಟಗಾರರಾಗಿದ್ದು, ಅಲ್ಲಿನ ರಾಷ್ಟ್ರೀಯ ಮಿಡಲ್‌ವೇಟ್ ಎಂಎಂಎ ಚಾಂಪಿಯನ್ ಕೂಡ ಆಗಿದ್ದಾರೆ. ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಹಾಗೂ ವಿವಿಐಪಿಗಳಿಗೆ ಅತ್ಯುನ್ನತ ಮಟ್ಟದ ಕ್ಲೋಸ್ ಪ್ರೊಟೆಕ್ಷನ್ ಭದ್ರತೆ ಒದಗಿಸುವಲ್ಲಿ ಇವರು ವಿಶ್ವದಾದ್ಯಂತ ಭಾರಿ ಬೇಡಿಕೆ ಹೊಂದಿದ್ದಾರೆ. ಮುಂಬೈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಮಾಧ್ಯಮಗಳು ಮುಗಿಬಿದ್ದಾಗ, ಕೆವಿನ್ ಜನರ ಗುಂಪನ್ನು ನಿಯಂತ್ರಿಸಿದ ರೀತಿ ಸಿನಿರಂಗದಲ್ಲಿ ದೊಡ್ಡ ಪ್ರಶಂಸೆ ಗಳಿಸಿದೆ.

ಇದನ್ನೂ ಓದಿ: ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ಅಂತರರಾಷ್ಟ್ರೀಯ ಮಟ್ಟದ ಈ ಸ್ಟಾರ್ ಫೈಟರ್‌ನ ಕಟ್ಟುಮಸ್ತಾದ ದೇಹ ಮತ್ತು ಎತ್ತರವನ್ನು ಕಂಡ ಸಿನಿರಸಿಕರು, ಇವರು ರಾಮ್ ಚರಣ್ ಪಕ್ಕದಲ್ಲಿ ನಡೆದು ಬರುತ್ತಿದ್ದರೆ ಯಾವುದೋ ಹಾಲಿವುಡ್ ಆಕ್ಷನ್ ಸಿನಿಮಾದ ದೃಶ್ಯದಂತೆ ಕಾಣುತ್ತದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಹೈ-ಪ್ರೊಫೈಲ್ ಅಂಗರಕ್ಷಕನ ಸಂಬಳ ಕೂಡ ಅಷ್ಟೇ ಭಾರಿ ಪ್ರಮಾಣದಲ್ಲಿದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಸುರಕ್ಷತೆಗಾಗಿ ಕೆವಿನ್ ಕುಂಟಾಗೆ ದಿನಕ್ಕೆ ಬರೋಬ್ಬರಿ 2 ಲಕ್ಷ ರೂಪಾಯಿಗಳವರೆಗೆ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಂಜಾಬ್ ಕಿಂಗ್ಸ್ ಔಟ್: ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಖಡಕ್ ತಿರುಗೇಟು! – Kannada News | Shreyas Iyer’s sister Shresta Iyer hits back at online abuse

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಿಂದ ಪಂಜಾಬ್ ಕಿಂಗ್ಸ್ ತಂಡವು ಕೇವಲ ಒಂದು ಅಂಕದ ಅಂತರದಿಂದ ಹೊರಬಿದ್ದಿದೆ. ಅಂದರೆ ಪ್ಲೇಆಫ್​ಗೇರಿರುವ ರಾಜಸ್ಥಾನ್ ರಾಯಲ್ಸ್ 16 ಅಂಕಗಳಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡ 15 ಅಂಕಗಳೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಹೀಗೆ ಪಂಜಾಬ್ ಕಿಂಗ್ಸ್​ ಹೊರಬಿದ್ದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್​ ಆನ್​ಲೈನ್​ನಲ್ಲಿ ತೀವ್ರ ಕಿರುಕುಳ ಎದುರಿಸಿದ್ದಾರೆ. ತಮ್ಮ ವಿರುದ್ಧ ಹರಿದುಬರುತ್ತಿರುವ ಈ ಅತಿರೇಕಕ್ಕೆ ಖುದ್ದು ಶ್ರೇಷ್ಠಾ ಅಯ್ಯರ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಖಡಕ್ ಆಗಿ ಉತ್ತರ ನೀಡಿದ್ದಾರೆ.

ವಿವಾದಕ್ಕೆ ಕಾರಣವೇನು?

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳಿಗೆ ಒಂದೊಂದು ಅಂಕಗಳನ್ನು ನೀಡಲಾಗಿತ್ತು.

ಇತ್ತ ಪಂದ್ಯ ರದ್ದಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಶ್ರೇಷ್ಠಾ ಅಯ್ಯರ್, “ನಾವು ಪಂಜಾಬಿಗಳು ಹೃದಯವಂತರು, ನಿಮಗೊಂದು ಪಾಯಿಂಟ್ ಬಿಟ್ಟುಕೊಟ್ಟೆವು” ಎಂದು ತಮಾಷೆಯ ರೀಲ್ಸ್​ ಒಂದನ್ನು ಶೇರ್ ಮಾಡಿದ್ದರು.

ಪ್ಲೇಆಫ್​ನಿಂದ ಪಂಜಾಬ್ ಕಿಂಗ್ಸ್ ಔಟ್:

ಮೊದಲು ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡವು ದ್ವಿತೀಯ ಸುತ್ತಿನಲ್ಲಿ ಕೇವಲ 1 ಮ್ಯಾಚ್​ ಮಾತ್ರ ಗೆದ್ದಿದ್ದಾರೆ. ಈ ಮೂಲಕ ಪಡೆದ ಒಟ್ಟು ಅಂಕ 15, ಈ ಹದಿನೈದು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿ ಪಂಜಾಬ್ ಕಿಂಗ್ಸ್ ಹೊರಬಿದ್ದಿದೆ.

ಈ ಹೊರಬೀಳುವಿಕೆಯ ಬೆನ್ನಲ್ಲೇ, ಶ್ರೇಷ್ಠಾ ಅಯ್ಯರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅಂದರೆ ಈ ಹಿಂದೆ “ನಾವು ಪಂಜಾಬಿಗಳು ಹೃದಯವಂತರು, ನಿಮಗೊಂದು ಪಾಯಿಂಟ್ ಬಿಟ್ಟುಕೊಟ್ಟೆವು” ಎಂದು ಕೆಕೆಆರ್ ಅನ್ನು ಟ್ರೋಲ್ ಮಾಡಿದ್ದ ಶ್ರೇಷ್ಠಾ ಅವರನ್ನು ಇದೇ ಒಂದು ಅಂಕದ ವಿಡಿಯೋದೊಂದಿಗೆ ಕಾಲೆಳೆಯುತ್ತಿದ್ದಾರೆ.

ಇದರ ನಡುವೆ ಕೆಲವರು ಶ್ರೇಯಸ್ ಅಯ್ಯರ್ ಅವರ ಸಹೋದರಿಯನ್ನು ನಿಂದಿಸಿ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ಕರ್ಮ ರಿಟರ್ನ್ಸ್, ನನಿಗೆ ಹೀಗೆ ಆಗಬೇಕು, ಯಾವತ್ತೂ ಮೊದಲೇ ಸಂಭ್ರಮಿಸಬೇಡ ಎಂದೆಲ್ಲಾ ಕಿಚಾಯಿಸಿದ್ದಾರೆ.

ಶ್ರೇಷ್ಠಾ ಆಕ್ರೋಶ:

ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ಹಾಗೂ ಆಪ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಟ್ರೋಲ್ ವಿರುದ್ಧ ಪ್ರತಿಕ್ರಿಯಿಸಿರುವ ಶ್ರೇಷ್ಠಾ ಅಯ್ಯರ್, “ಆ ವಿಡಿಯೋ ಕೇವಲ ಒಂದು ತಮಾಷೆಯಾಗಿತ್ತು. ಕ್ರೀಡೆಯನ್ನು ಕ್ರೀಡೆಯಾಗಿ ನೋಡದ, ವಿಷಯಕ್ಕೆ ಸಂಬಂಧವೇ ಇಲ್ಲದ ನನ್ನ ವೃತ್ತಿಜೀವನ ಮತ್ತು ಕುಟುಂಬವನ್ನು ಮಧ್ಯೆ ಎಳೆದು ತರುತ್ತಿರುವ ನಿಮ್ಮ ಬುದ್ಧಿಹೀನ ನಡವಳಿಕೆಯನ್ನು ಕಂಡು ನನಗೆ ಅಯ್ಯೋ ಪಾಪ ಎನಿಸುತ್ತದೆ”.

“ನನ್ನ ಸಹೋದರ ಶ್ರೇಯಸ್ ಅಯ್ಯರ್ ಗೆಲ್ಲಲಿ ಅಥವಾ ಸೋಲಲಿ, ನಾನು ಸದಾ ಅವನ ಪರವಾಗಿ ನಿಲ್ಲುತ್ತೇನೆ. ಅವನ ಸಾಧನೆಯನ್ನು ಸಂಭ್ರಮಿಸುತ್ತೇನೆ. ಕೆಲಸ ಇಲ್ಲದ ನೀವುಗಳು ಹೀಗೆ ಟ್ರೋಲ್ ಮಾಡುತ್ತಿರಿ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದರ ಜೊತೆಗೆ ಈ ಆನ್‌ಲೈನ್ ಟ್ರೋಲ್ ಕೇವಲ ಕಮೆಂಟ್‌ಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ತಿಳಿಸಿರುವ ಶ್ರೇಷ್ಠಾ ಅಯ್ಯರ್, ಟ್ರೋಲರ್‌ಗಳು ನನ್ನ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಫೋನ್ ಮಾಡಿ ನಡುರಾತ್ರಿಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

“ನೀವು ನನ್ನ ಆಪ್ತರಿಗೆ ಮತ್ತು ಕಚೇರಿಗೆ ಫೋನ್ ಮಾಡಿ ತೊಂದರೆ ಕೊಡುತ್ತಿರುವುದು ನಿಮ್ಮ ಸಂಸ್ಕಾರವನ್ನು ತೋರಿಸುತ್ತದೆ. ಕೆಟ್ಟ ಕರ್ಮ ನಿಮಗೂ ಒಂದು ದಿನ ಹಿಂತಿರುಗುತ್ತದೆ” ಎಂದು ಶ್ರೇಷ್ಠಾ ಅಯ್ಯರ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಐಪಿಎಲ್​ಗೆ ಗುಡ್ ಬೈ ಹೇಳಿದ RCB ಮಾಜಿ ಆಟಗಾರ!

ಇದೀಗ ಶ್ರೇಯಸ್ ಅಯ್ಯರ್ ಅವರ ಸಹೋದರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ವೈರಲ್ ಬೆನ್ನಲ್ಲೇ ಶ್ರೇಷ್ಠಾ ಅಯ್ಯರ್​ಗೆ ಪಂಜಾಬ್ ಕಿಂಗ್ಸ್​ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಸೋಷಿಯಲ್ ಮೀಡಿಯಾ ಬುಲ್ಲಿಂಗ್ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.

Source link

Gold Rate: ಚಿನ್ನದ ಬೆಲೆ 45 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 26th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 26: ಚಿನ್ನದ ಬೆಲೆ ಸತತವಾಗಿ ಏರಿಳಿತಗಳನ್ನು ಕಾಣುತ್ತಿದೆ. ನಿನ್ನೆ 30 ರೂ ಹೆಚ್ಚಿದ್ದ ಚಿನ್ನದ ಬೆಲೆ ಇವತ್ತು ಮಂಗಳವಾರ 45 ರೂ ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ (Gold Rates) 49 ರೂಗಳಷ್ಟು ತಗ್ಗಿದೆ. ವಿದೇಶಗಳಲ್ಲೂ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಕಳೆದ ಐದಾರು ದಿನಗಳಿಂದ ಏರಿಳಿತ ಕಾಣದೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,45,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,58,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,45,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,889 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,565 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,917 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,880 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,565 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,565 ರೂ
  • ಚೆನ್ನೈ: 14,730 ರೂ
  • ಮುಂಬೈ: 14,565 ರೂ
  • ದೆಹಲಿ: 14,680 ರೂ
  • ಕೋಲ್ಕತಾ: 14,565 ರೂ
  • ಕೇರಳ: 14,565 ರೂ
  • ಅಹ್ಮದಾಬಾದ್: 14,570 ರೂ
  • ಜೈಪುರ್: 14,580 ರೂ
  • ಲಕ್ನೋ: 14,580 ರೂ
  • ಭುವನೇಶ್ವರ್: 14,565 ರೂ

ಇದನ್ನೂ ಓದಿ: ದಿಲ್ಲಿ ಜಿಮ್ಖಾನಾ ಕ್ಲಬ್​ಗೆ ಬೀಗ? ಹೃದಯಭಾಗದಲ್ಲಿ 27 ಎಕರೆಯಲ್ಲಿರವ ಈ ಕ್ಲಬ್ ಸುತ್ತಮುತ್ತಲ ವಿವಾದಗಳೇನು?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 593 ರಿಂಗಿಟ್ (14,265 ರುಪಾಯಿ)
  • ದುಬೈ: 550.50 ಡಿರಾಮ್ (14,278 ರುಪಾಯಿ)
  • ಅಮೆರಿಕ: 141 ಡಾಲರ್ (14,361 ರುಪಾಯಿ)
  • ಸಿಂಗಾಪುರ: 198 ಸಿಂಗಾಪುರ್ ಡಾಲರ್ (14,783 ರುಪಾಯಿ)
  • ಕತಾರ್: 550.50 ಕತಾರಿ ರಿಯಾಲ್ (14,411 ರೂ)
  • ಸೌದಿ ಅರೇಬಿಯಾ: 567 ಸೌದಿ ರಿಯಾಲ್ (14,418 ರುಪಾಯಿ)
  • ಓಮನ್: 57.70 ಒಮಾನಿ ರಿಯಾಲ್ (14,299 ರುಪಾಯಿ)
  • ಕುವೇತ್: 46.06 ಕುವೇತಿ ದಿನಾರ್ (14,327 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Vasthu Shastra: ಬಾಗಿಲು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ದ ಬರುತ್ತಿದ್ದರೆ ನಿರ್ಲಕ್ಷಿಸಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News | Main Door Sound Vastu Defects: Avoid Financial Hardship and Stress with Easy Remedies

ಮನೆಯ ಮುಖ್ಯ ಬಾಗಿಲು ತೆರೆಯುವಾಗ ಶಬ್ದImage Credit source: Pinterest

ನಿಮ್ಮ ಮನೆಯ ಮುಖ್ಯ ಬಾಗಿಲನ್ನು ತೆರೆಯುವಾಗ ಅಥವಾ ಮುಚ್ಚುವಾಗ ಶಬ್ದ ಬರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹಾಗಿದ್ದರೆ, ಅದನ್ನು ಕೇವಲ ಒಂದು ಸಣ್ಣ ತಾಂತ್ರಿಕ ದೋಷ ಅಥವಾ ರಿಪೇರಿ ಕೆಲಸ ಎಂದು ನಿರ್ಲಕ್ಷಿಸಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ಬಾಗಿಲಿನಿಂದ ಬರುವ ಇಂತಹ ಕರ್ಕಶ ಧ್ವನಿಯು ಒಂದು ಗಂಭೀರವಾದ ವಾಸ್ತು ದೋಷವಾಗಿದೆ. ಇದು ನಿಮ್ಮ ಪ್ರಗತಿಯ ಹಾದಿಯಲ್ಲಿ ದೊಡ್ಡ ಅಡ್ಡಿಯಾಗಬಹುದು.

ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ಬಾಗಿಲಿಗೆ ಅತ್ಯಂತ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಇದು ಕೇವಲ ನಾವು ಮನೆ ಒಳಗೆ ಹೋಗಲು ಮತ್ತು ಹೊರಗೆ ಬರಲು ಇರುವ ದಾರಿಯಷ್ಟೇ ಅಲ್ಲ; ಸುಖ, ಸಮೃದ್ಧಿ, ಸಕಾರಾತ್ಮಕ ಶಕ್ತಿ (Positive Energy) ಮತ್ತು ಲಕ್ಷ್ಮಿ ದೇವಿಯು ಮನೆಗೆ ಪ್ರವೇಶಿಸುವ ಮಹಾದ್ವಾರವಾಗಿದೆ. ಬಾಗಿಲಿನ ಶಬ್ದದ ಹಿಂದಿರುವ ವಾಸ್ತು ದೋಷಗಳು ಮತ್ತು ಅದರ ಪರಿಣಾಮಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ರಾಹು-ಕೇತು ದೋಷ:

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ಬಾಗಿಲಿನಿಂದ ಬರುವ ಕರ್ಕಶ ಅಥವಾ ತೀಕ್ಷ್ಣವಾದ ಧ್ವನಿಯು ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತು ಗ್ರಹಗಳ ಕೆಟ್ಟ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಹಠಾತ್ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ ಅಥವಾ ಅನಗತ್ಯ ಕೋರ್ಟ್-ಕಚೇರಿ, ಕಾನೂನು ವೆಚ್ಚಗಳು ಎದುರಾಗಬಹುದು.

ಆರ್ಥಿಕ ನಷ್ಟ ಮತ್ತು ದಾರಿದ್ರ್ಯ:

ಯಾವ ಮನೆಯ ಮುಖ್ಯ ಬಾಗಿಲು ಇಂತಹ ಶಬ್ದವನ್ನು ಮಾಡುತ್ತದೆಯೋ, ಅಲ್ಲಿ ಹಣವು ನೀರಿನಂತೆ ಖರ್ಚಾಗುತ್ತದೆ ಎಂದು ನಂಬಲಾಗಿದೆ. ಅಂದರೆ ದುಡಿದ ಹಣ ಯಾವುದೋ ಒಂದು ರೂಪದಲ್ಲಿ ಪೋಲಾಗುತ್ತದೆ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ. ಇದು ಕ್ರಮೇಣವಾಗಿ ಮನೆಯಲ್ಲಿ ಬಡತನ ಮತ್ತು ನಿರಾಶೆ ಮೂಡಲು ಮೂಲ ಕಾರಣವಾಗುತ್ತದೆ.

ಇದನ್ನೂ ಓದಿ: ಅಂಗೈಯಲ್ಲಿ ‘M’ ಗುರುತಿದ್ದರೆ ಅದೃಷ್ಟವೇ? ಹಸ್ತಸಾಮುದ್ರಿಕ ಶಾಸ್ತ್ರ ಹೇಳುವುದೇನು?

ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಕಲಹ:

ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಬಾಗಿಲಿನ ಈ ಕರ್ಕಶ ಶಬ್ದವನ್ನು ಕೇಳುವುದರಿಂದ ನಮ್ಮ ಮನಸ್ಸಿನ ಮೇಲೆ ನೇರವಾದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಕುಟುಂಬದ ಸದಸ್ಯರಲ್ಲಿ ಕಿರಿಕಿರಿ ಮತ್ತು ಸಿಟ್ಟನ್ನು ಉಂಟುಮಾಡುತ್ತದೆ. ಇದರಿಂದಾಗಿ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಜಗಳಗಳು ನಡೆದು, ಸದಾ ಮಾನಸಿಕ ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ.

ವಾಸ್ತು ಪರಿಹಾರವೇನು?

  • ನಿಮ್ಮ ಮನೆಯ ಬಾಗಿಲಿನಿಂದ ಇಂತಹ ಶಬ್ದ ಬರುತ್ತಿದ್ದರೆ ತಕ್ಷಣವೇ ಅದಕ್ಕೆ ಎಣ್ಣೆ ಅಥವಾ ಗ್ರೀಸ್ ಹಾಕಿ ಆ ಶಬ್ದವನ್ನು ನಿಲ್ಲಿಸಿ.
  • ಬಾಗಿಲುಗಳು ಯಾವಾಗಲೂ ಸರಾಗವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ತೆರೆಯುವಂತಿರಬೇಕು.
  • ಮುಖ್ಯ ಬಾಗಿಲಿನ ಸುತ್ತಮುತ್ತಲಿನ ಜಾಗವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಬೆಳಕಿನಿಂದ ಕೂಡಿರುವಂತೆ ನೋಡಿಕೊಳ್ಳಿ. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ, ಧನಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link