Category Archives: Blog

Your blog category

ಹವಾಲ ದಾಳಿ ಬೆನ್ನಲ್ಲೇ ನಡೆಯಿತಾ ಅಮಾನತು? ಇನ್‌ಸ್ಪೆಕ್ಟ‌ರ್ ರವಿ ಸಸ್ಪೆಂಡ್ ಹಿಂದಿನ ರಹಸ್ಯವೇನು? – Kannada News | Bengaluru Police Inspector Ravi Suspended: The reason behind the action is Hawala Seizure or Murder Case Negligence?

ಇನ್‌ಸ್ಪೆಕ್ಟ‌ರ್ ರವಿ ಸಸ್ಪೆಂಡ್ ಹಿಂದಿನ ರಹಸ್ಯವೇನು?

ಬೆಂಗಳೂರು, ಜನವರಿ 21: ತನ್ನ ವ್ಯಾಪ್ತಿಯಲ್ಲಿದ್ದ ಕೊಲೆ ಪ್ರಕರಣವನ್ನು ನಿರ್ಲಕ್ಷಿಸಿದ್ದಕ್ಕೆ ಕರ್ತವ್ಯ ಲೋಪದ ಆರೋಪದ ಮೇಲೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟ‌ರ್ ಎಂ.ಎಸ್.ರವಿ (Inspector Ravi suspended )ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಮಂಗಳವಾರ ಆದೇಶಿಸಿದ್ದರು. ಆದರೆ ಈ ಪ್ರಕರಣವೀಗ ಮಹತ್ವದ ತಿರುವು ಪಡೆದಿದ್ದು, ಹವಾಲ ದಂಧೆಯಲ್ಲಿ ತೊಡಗಿಕೊಂಡವ ಮೇಲೆ ದಾಳಿ ನಡೆಸಿದ ಕಾರಣಕ್ಕೆ ಅಧಿಕಾರಿಯನ್ನು ವಜಾಗೊಳಿಸಲಾಯಿತೇ ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ವರ್ಷದ ಪ್ರಕರಣವನ್ನು ಮುಂದಿಟ್ಟುಕೊಂಡು ಅಮಾನತು

ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಮಲ್ಲತ್ತಹಳ್ಳಿಯಲ್ಲಿ ಅನ್ನಪೂರ್ಣೇಶ್ವರಿನಗರ ನಿವಾಸಿ ದೀಪಕ್ ರಾಜ್ (18) ಎಂಬ ಯುವಕನ ಹತ್ಯೆಯಾಗಿತ್ತು. ಆದರೆ, ಜ್ಞಾನಭಾರತಿ ಠಾಣಾಧಿಕಾರಿ ರವಿ ಈ ಕೇಸ್ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಯಾವುದೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಮಧ್ಯೆ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ ಎಂಬುದು ಗೊತ್ತಾಗಿ, ಮತ್ತೆ ಇದೇ ಠಾಣೆಗೆ ಕೇಸ್​ ವರ್ಗಾವಣೆ ಮಾಡಿದ್ದರು.

ಹೀಗಾಗಿ ಸೆ.13ರಂದು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಹಾಗೂ ಕನಿರ್ಲಕ್ಷ್ಯದ ಆರೋಪದ ಮೇರೆಗೆ ಇನ್ಸ್ಪೆಕ್ಟರ್ ರವಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಡಿಸಿಪಿ ವರದಿ ನೀಡಿದ್ದರು. ಆದರೆ ಅಧಿಕಾರಿಯ ಅಮಾನತಿನ ಹಿಂದೆ ಬೇರೆಯೇ ಕಾರಣವಿದೆಯೇ ಎಂಬ ಅನುಮಾನವೀಗ ಕಾಡುತ್ತಿದೆ.

ತಮ್ಮ ವ್ಯಾಪ್ತಿ ಮೀರಿ ದಾಳಿ ನಡೆಸಿದ್ದ ರವಿ

ಜನವರಿ 15ರ ಮುಂಜಾನೆ ನಾಗರಬಾವಿ ಪ್ರದೇಶದಿಂದ ತಮಿಳುನಾಡಿನತ್ತ ಸಾಗುತ್ತಿದ್ದ ಹವಾಲ ಹಣದ ಕುರಿತು ಖಚಿತ ಮಾಹಿತಿ ಪಡೆದಿದ್ದ ಇನ್ಸ್ಪೆಕ್ಟರ್ ರವಿ ಹಾಗೂ ಅವರ ತಂಡ ಆರೋಪಿಗಳನ್ನು ಚೇಸ್ ಮಾಡಿ ನೈಸ್ ರಸ್ತೆ ಟೋಲ್ ಬಳಿ ಕಾರನ್ನು ತಡೆದಿದ್ದರು. ಈ ವೇಳೆ ಹುಳಿಮಾವು ಠಾಣೆಯ ಪೊಲೀಸರಿಗೆ ಸಹ ಸಹಾಯಕ್ಕಾಗಿ ಮಾಹಿತಿ ನೀಡಲಾಗಿದ್ದು, ಬಳಿಕ ಜಂಟಿಯಾಗಿ ದಾಳಿ ನಡೆಸಲಾಗಿದೆ.

ಪೊಲೀಸರು ತಡೆದ ಹುಂಡೈ ಐ-10 ಕಾರಿನ ಪರಿಶೀಲನೆ ವೇಳೆ ಸುಮಾರು 1 ಕೋಟಿ 5 ಲಕ್ಷ ರೂ. ನಗದು ಹಣ ಪತ್ತೆಯಾಗಿದ್ದು, ಹಣವನ್ನು ಸೀಜ್ ಮಾಡಲಾಗಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾರ್ಥ, ಸಾಂಬಶಿವ ಹಾಗೂ ದಿನೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆದರೆ ಈ ದಾಳಿಯ ಕುರಿತು ನಗರ ಪೊಲೀಸ್ ಆಯುಕ್ತರು ಹಲವಾರು ಪ್ರಶ್ನೆಗಳನ್ನಿಟ್ಟಿದ್ದಾರೆ.

ಇದನ್ನೂ ಓದಿ ಪ್ರೀತಿಸಿ ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು, ಮೂವರು ಪುರುಷರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆಗೈದ ಪತಿ

ಪೊಲೀಸ್ ಆಯುಕ್ತರ ಪ್ರಶ್ನೆಗಳೇನು?

  • ಇನ್ಸ್ಪೆಕ್ಟರ್ ರವಿ ತಮ್ಮ ಪೊಲೀಸ್ ವ್ಯಾಪ್ತಿಯನ್ನು ಮೀರಿ ದಾಳಿ ನಡೆಸಿದ್ದೇಕೆ?
  • ಕಾರಿನಲ್ಲಿ ನಿಜಕ್ಕೂ ಎಷ್ಟು ಹಣ ಇತ್ತು?
  • ಸೀಜ್ ಮಾಡಲಾದ ಹಣದ ಪ್ರಮಾಣದಲ್ಲಿ ವ್ಯತ್ಯಾಸವಿದೆಯೇ?
  • ಪ್ರಕರಣದಲ್ಲಿ ಯಾರಾದರೂ ಪೊಲೀಸ್ ಅಧಿಕಾರಿಗಳ ಭಾಗವಹಿಸುವಿಕೆ ಇದೆಯೇ?

ಈ ಎಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿಗೆ ನಿರ್ದೇಶನ ನೀಡಿದ್ದಾರೆ. ಹವಾಲ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಇನ್ಸ್ಪೆಕ್ಟರ್ ರವಿ ನೀಡಿದ ದೂರಿನ ಆಧಾರದಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣದ ಒಂದು ಭಾಗ ಮಿಸ್ ಆಗಿರುವ ಆರೋಪವೂ ಕೇಳಿಬರುತ್ತಿದೆ. ಇದನ್ನೇ ಮನಸಲ್ಲಿಟ್ಟುಕೊಂಡು, ಕಳೆದ ವರ್ಷದ ಪ್ರಕರಣದ ಸಬೂಬು ಕೊಟ್ಟು ಇನ್ಸ್ಪೆಕ್ಟರ್ ರವಿಯನ್ನು ವಜಾಗೊಳಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶೂಟಿಂಗ್ ವೇಳೆ ಮಾಡಿದ ತಪ್ಪಿನಿಂದ ಈ ಸ್ಥಿತಿಗೆ ಬಂದ ಖ್ಯಾತ ಹಾಸ್ಯನಟ – Kannada News | Rajendran’s Hair Loss Accident: How a Tragedy Shaped His Unique Comedy Career

ತಮಿಳು ನಟ ರಾಜೇಂದ್ರನ್ ಅನಿಕೇರಿಗೆ ಪರಿಚಯ ಇದೆ. ಅವರು ಮೊಟ್ಟ ರಾಜೇಂದ್ರನ್ ಎಂದೇ ಫೇಮಸ್. ಅವರ ಹೆಸರು ಗೊತ್ತಿರದೆ ಇರಬಹುದು, ಆದರೆ ಅವರ ಫೋಟೋ ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಸದಾ ಬೋಳು ತಲೆಯಲ್ಲಿ ಕಾಣಿಸಿಕೊಂಡು ರಾಜೇಂದ್ರನ್ ಪ್ರೇಕ್ಷಕರನ್ನು ನಗಿಸುತ್ತಾರೆ. ಕನ್ನಡದಲ್ಲಿ ಎರಡೇ ಸಿನಿಮಾ ಮಾಡಿರುವ ಅವರು ಪರಭಾಷಿಗರಿಗೆ ಹೆಚ್ಚು ಪರಿಚಿತರು.

ರಾಜೇಂದ್ರನ್ ಅವರು ಪ್ರಸ್ತುತ ತೆಲುಗು ಜೊತೆಗೆ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ನಿಜ ಜೀವನದಲ್ಲಿಯೂ ರಾಜೇಂದ್ರನ್ ಯಾವಾಗಲೂ ಬೋಳಿಸಿಕೊಂಡ ತಲೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ. ಕನಿಷ್ಠ ಅವರಿಗೆ ರೆಪ್ಪೆಗೂದಲುಗಳಿಲ್ಲ. ಒಂದು ಕಾಲದಲ್ಲಿ ದಪ್ಪ ಕೂದಲಿನೊಂದಿಗೆ ನಾಯಕನಾಗಿದ್ದ ರಾಜೇಂದ್ರನ್ ಬೋಳು ತಲೆಯಾಗಿ ಬದಲಾಗುವುದರ ಹಿಂದೆ ಕಣ್ಣೀರಿನ ಕಥೆಯಿದೆ.

ರಾಜೇಂದ್ರನ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಅವರು ಅನೇಕ ಚಿತ್ರಗಳಿಗೆ ಅತ್ಯುತ್ತಮ ಸ್ಟಂಟ್ ಮ್ಯಾನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಅನೇಕ ನಾಯಕರಿಗೆ ಸಾಹಸ ದೃಶ್ಯಗಳನ್ನು (ಸ್ಟಂಟ್ ಡಬಲ್) ಸಹ ಮಾಡಿದ್ದಾರೆ. ರಾಜೇಂದ್ರನ್ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಫೈಟರ್ ಆಗಿ ಕೆಲಸ ಮಾಡಿದ್ದಾರೆ. ಆದರೆ, ಮಲಯಾಳಂ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಾಜೇಂದ್ರನ್ ತಪ್ಪೊಂದನ್ನು ಮಾಡಿದರು. ಅದಕ್ಕಾಗಿಯೇ ಅವರು ಹೀಗೆ ಬದಲಾದರು. ರಾಜೇಂದ್ರ ಸ್ವತಃ ಒಂದು ಸಂದರ್ಭದಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

‘ಮಲಯಾಳಂ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ನಾನು 15 ಅಡಿ ಎತ್ತರದಿಂದ ನೀರಿಗೆ ಬೀಳಬೇಕಾಯಿತು. ನಾನು ಯೋಚಿಸದೆ ಜಿಗಿದಿದ್ದೇನೆ. ಗ್ರಾಮಸ್ಥರು ನನ್ನನ್ನು ನೋಡಿದಾಗ, ‘ಇದೆಲ್ಲ ಕಾರ್ಖಾನೆಗಳಿಂದ ಬರುವ ರಾಸಾಯನಿಕ ನೀರು. ನೀವು ಈ ನೀರಿಗೆ ಏಕೆ ಹಾರಿದ್ದೀರಿ?’ ಎಂದು ಹೇಳಿದರು” ಎಂದು ರಾಜೇಂದ್ರನ್ ಹೇಳಿದರು. ಆ ಕ್ಷಣದಿಂದ, ನನ್ನ ಕೂದಲು ಉದುರಲು ಪ್ರಾರಂಭಿಸಿತು. ಸ್ವಲ್ಪ ಸಮಯದ ನಂತರ, ನಾನು ಸಂಪೂರ್ಣವಾಗಿ ಬೋಳಿಸಿಕೊಂಡೆ. ನನ್ನ ಹುಬ್ಬುಗಳು ಸಹ ಮಾಯವಾದವು. ರಾಸಾಯನಿಕಗಳೊಂದಿಗೆ ಬೆರೆಸಿದ ನೀರು ನನ್ನ ಹೊಟ್ಟೆಗೆ ಹೋದಂತೆ, ನನಗೆ ವಿವಿಧ ಆರೋಗ್ಯ ಸಮಸ್ಯೆಗಳೂ ಬಂದವು. ನನಗೆ ಜೀರ್ಣಕ್ರಿಯೆ ಸಮಸ್ಯೆಗಳೂ ಇದ್ದವು. ಆದರೆ ನಾನು ಈ ಸಮಸ್ಯೆಗಳಿಂದ ನಿಧಾನವಾಗಿ ಚೇತರಿಸಿಕೊಂಡೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ವಿಳಂಬವಾಗುತ್ತಿದೆ ‘ಜನ ನಾಯಗನ್’ ರಿಲೀಸ್; ಚುನಾವಣೆ ಘೋಷಣೆ ಆದರೆ ಸದ್ಯಕ್ಕಿಲ್ಲ ಬಿಡುಗಡೆ

ಅಪಘಾತದ ನಂತರ ತನಗೆ ಖಳನಾಯಕನ ಪಾತ್ರಗಳಲ್ಲ, ಹಾಸ್ಯ ಪಾತ್ರಗಳೇ ಸಿಗುತ್ತಿವೆ ಎಂದು ರಾಜೇಂದ್ರನ್ ಹೇಳುತ್ತಾರೆ. ನಿರ್ದೇಶಕರು ವಿಗ್ ಕೂಡ ಧರಿಸದೆ ಹಾಗೆ ನಟಿಸಲು ಹೇಳುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ತಾನು ಮೈನಸ್ ಎಂದು ಭಾವಿಸಿದ್ದೇ ತನಗೆ ಪ್ಲಸ್ ಆಗಿ ಮಾರ್ಪಟ್ಟಿದೆ ಎಂದು ಸ್ಟಾರ್ ಹಾಸ್ಯನಟ ಸಂತೋಷದಿಂದ ಹೇಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:05 am, Wed, 21 January 26

Source link

Swapna Shastra: ತಾಳಿ ಮುರಿದಂತೆ ಕನಸು ಬಿದ್ದರೆ ಅಪಶಕುನವೇ? ಸ್ವಪ್ನಶಾಸ್ತ್ರ ಹೇಳುವುದೇನು? – Kannada News | Mangalsutra Dream Meaning: Auspicious Taali in Dreams per Swapna Shastra

ಸ್ವಪ್ನ ಶಾಸ್ತ್ರವು ಕನಸುಗಳ ಅರ್ಥವನ್ನು ವಿವರಿಸುವ ಪ್ರಾಚೀನ ಭಾರತೀಯ ಶಾಸ್ತ್ರವಾಗಿದ್ದು, ಕನಸುಗಳು ವ್ಯಕ್ತಿಯ ಭವಿಷ್ಯದಲ್ಲಿ ಸಂಭವಿಸಬಹುದಾದ ಶುಭ–ಅಶುಭ ಘಟನೆಗಳ ಸೂಚನೆಗಳಾಗಿರುತ್ತವೆ ಎಂಬ ನಂಬಿಕೆ ಇದೆ. ಈ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣಿಸುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಅರ್ಥವಿದೆ. ಅದರಂತೆ, ಕನಸಿನಲ್ಲಿ ಮಂಗಳ ಸೂತ್ರವನ್ನು (ತಾಳಿ) ನೋಡುವುದು ಅತ್ಯಂತ ಶುಭ ಸಂಕೇತವೆಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.

ಕನಸಿನಲ್ಲಿ ಮಂಗಳ ಸೂತ್ರವನ್ನು ನೋಡುವುದು ಪತಿಯ ದೀರ್ಘಾಯುಷ್ಯ, ಕುಟುಂಬದಲ್ಲಿ ನೆಮ್ಮದಿ ಹಾಗೂ ದಾಂಪತ್ಯ ಜೀವನದ ಸಂತೋಷವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಮಂಗಳ ಸೂತ್ರವು ವಿವಾಹಿತ ಮಹಿಳೆಯ ಜೀವನದಲ್ಲಿ ಪವಿತ್ರತೆಯ ಹಾಗೂ ಸುಖಸಮೃದ್ಧಿಯ ಸಂಕೇತವಾಗಿರುವುದರಿಂದ, ಅದನ್ನು ಕನಸಿನಲ್ಲಿ ಕಾಣುವುದು ಉತ್ತಮ ಫಲಿತಾಂಶಗಳನ್ನು ತರುತ್ತದೆ ಎಂದು ಸ್ವಪ್ನ ಶಾಸ್ತ್ರ ವಿವರಿಸುತ್ತದೆ.

ಆದರೆ, ಕನಸಿನಲ್ಲಿ ಮಂಗಳ ಸೂತ್ರ ಮುರಿದಂತೆ ಕಾಣಿಸಿದರೆ ಅದನ್ನು ಅಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ತಮ್ಮ ಕನಸಿನಲ್ಲಿ ತಾಳಿ ಮುರಿದು ಹೋದಂತೆ ಕಂಡರೆ ಅದು ಪತಿಯ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳ ಸಂಕೇತವಾಗಿರಬಹುದು ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ. ಈ ರೀತಿಯ ಕನಸು ಗಂಡನ ಆರೋಗ್ಯ, ಉದ್ಯೋಗ ಅಥವಾ ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ತಜ್ಞರ ಅಭಿಪ್ರಾಯದಂತೆ, ಇಂತಹ ಅಶುಭ ಕನಸು ಕಂಡ ಮಹಿಳೆಯರು ಭಯಪಡದೇ ಶಾಂತವಾಗಿ ಶಿವನನ್ನು ಪೂಜಿಸಬೇಕು. ಪತಿಯ ದೀರ್ಘಾಯುಷ್ಯ ಹಾಗೂ ಸಂಕಷ್ಟ ನಿವಾರಣೆಗೆ ಸಂಬಂಧಿಸಿದ ಪೂಜೆ, ವ್ರತ ಮತ್ತು ಪ್ರಾರ್ಥನೆಗಳನ್ನು ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಜೊತೆಗೆ ಮನಸ್ಸಿನಲ್ಲಿ ಧೈರ್ಯ ಮತ್ತು ಸಕಾರಾತ್ಮಕತೆ ಉಳಿಸಿಕೊಂಡು ದೇವರ ಅನುಗ್ರಹವನ್ನು ಬೇಡಿಕೊಳ್ಳುವುದು ಒಳಿತೆಂದು ವಿದ್ವಾಂಸರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಫ್ರಾಂಚೈಸಿಗೆ ಗಡುವು ನೀಡಿದ BCCI

Source link

ಮೈಸೂರು ಹುಡುಗನ ಮದುವೆ ಆಗಿದ್ದ ಈ ನಟಿಗೆ ಈಗ ಪಾಕ್ ಪ್ರಜೆಯ ಮದುವೆ ಆಗೋ ಆಸೆ – Kannada News | Rakhi Sawant’s Love Life Drama: From Mysore Marriage to Pakistani Actor Wish

ರಾಖಿ ಸಾವಂತ್ (Rakhi Sawanth) ಅವರು ಬಾಲಿವುಡ್ ಮಂದಿಗೆ ಮಾತ್ರವಲ್ಲ ಉಳಿದ ಚಿತ್ರರಂಗದವರಿಗೂ ಪರಿಚಿತರು. ಅವರು ಸುದ್ದಿಯಲ್ಲಿರಲು ಸದಾ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅವರು ವಿವಾಹ, ವಿವಾಹೇತರ ಸಂಬಂಧ ಇತ್ಯಾದಿ ವಿಷಯಕ್ಕೆ ಸುದ್ದಿ ಆಗುತ್ತಿದ್ದಾರೆ. ಅವರು ಮೈಸೂರು ಹುಡುಗನ ವಿವಾಹ ಆಗಿದ್ದರು. ಆ ಬಳಿಕ ಇಬ್ಬರೂ ಬೇರೆ ಆದರು. ಈಗ ಅವರಿಗೆ ಪಾಕ್ ಹುಡುಗನ ಮದುವೆ ಆಗೋ ಆಸೆ.

ರಾಖಿ ಸಾವಂತ್ ಅವರು 2019ರಲ್ಲಿ ಭಾರತ ಮೂಲದ ವಿದೇಶಿ ಪ್ರಜೆ ರಿತೇಶ್ ರಾಜ್ ಸಿಂಗ್​​ನ ಮದುವೆ ಆದರು. 2022ರಲ್ಲಿ ಇವರು ಬೇರೆ ಆದರು. ‘ಮದುವೆ ಮಾಡಿ ತಪ್ಪು ಮಾಡಿದೆ’ ಎಂದು ಅವರು ಹೇಳಿದ್ದರು. ನಂತರ 2022ರಲ್ಲಿ ಅವರು ಮತ್ತೆ ಸುದ್ದಿ ಆದರು. ಮೈಸೂರು ಮೂಲದ ಆದಿಲ್ ಖಾನ್ ಜೊತೆ ರಾಖಿ ವಿವಾಹ ಆದರು.

ಮುಸ್ಲಿಂ ಧರ್ಮದ ಪ್ರಕಾರ ರಾಖಿ ವಿವಾಹ ಆದರು. ಮುಸ್ಲಿಂ ಧರ್ಮಕ್ಕೆ ಅವರು ಮತಾಂತರಗೊಂಡರು. ಇಷ್ಟೆಲ್ಲ ಮಾಡಿಯೂ ಇವರ ಸಂಬಂಧ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ. ‘ಆದಿಲ್ ನನಗೆ ಮೋಸ ಮಾಡಿದ, ಆತನಿಗೆ ಅನೈತಿಕ ಸಂಬಂಧ ಇದೆ’ ಎಂದು ರಾಖಿ ಆರೋಪಿಸಿದರು. ಅವರು ನೀಡಿದ ದೂರಿನ ಮೇಲೆ ಆದಿಲ್​​ನ ಮೈಸೂರಿನಲ್ಲಿ ಬಂಧನ ಕೂಡ ಮಾಡಲಾಯಿತು.

2025ರಲ್ಲಿ ರಾಖಿ ಪಾಕ್ ನಟನ ಮೇಲೆ ಆಸಕ್ತಿ ತೋರಿಸಿದ್ದರು. ರಾಖಿ ಅವರು ಪಾಕಿಸ್ತಾನದ ನಟ ಹಾಗೂ ಪೊಲೀಸ್ ಅಧಿಕಾ ದೋಡಿ ಖಾನ್ ಜೊತೆ ಮದುವೆ ಆಗುವ ಇಚ್ಛೆ ತೋರಿದರು. ‘ನನಗೆ ಹಲವು ಪ್ರಪೋಸಲ್‌ಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ನನ್ನ ಹಿಂದಿನ ಮದುವೆಗಳಲ್ಲಿ ನನಗೆ ಹೇಗೆ ಕಿರುಕುಳ ನೀಡಲಾಗಿದೆ ಎಂಬುದನ್ನು ನೋಡಿ, ವಿವರಿಸಿದ್ದರು’ ಎಂದಿದ್ದರು ರಾಖಿ.

ಇದನ್ನೂ ಓದಿ: ‘ಮದುವೆ ಆಗಲ್ಲ’: ರಾಖಿ ಸಾವಂತ್​ಗೆ ಪ್ರಪೋಸ್ ಮಾಡಿ ಉಲ್ಟಾ ಹೊಡೆದ ಪಾಕ್ ಮಾಡೆಲ್

ನಂತರ ದೋಡಿ ಖಾನ್ ಈ ಬಗ್ಗೆ ಸ್ಪಷ್ಟನೆ ನೀಡಿದರು. ‘ನಾನು ರಾಖಿಗೆ ಪ್ರಪೋಸ್ ಮಾಡಿದ್ದು ನಿಜ. ಆದರೆ, ಮದುವೆ ಆಗಲ್ಲ’ ಎಂದಿದ್ದರು. ಈ ವಿಷಯ ಚರ್ಚೆಗೆ ಕಾರಣ ಆಗಿತ್ತು. ಈಗ ರಾಖಿ ಸೈಲೆಂಟ್ ಆಗಿದ್ದಾರೆ. ಈ ಮೊದಲು ಅವರು ಹಿಂದಿ ಬಿಗ್ ಬಾಸ್​​ನಲ್ಲಿ ಸ್ಪರ್ಧೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿಯ ಚಿತ್ತಾರ ಹೇಗಿದೆ ನೋಡಿ! – Kannada News | Dr. Shivakumara Swamiji 7th death Anniversary: Swamiji Portrait Blossoms on Coconut Leaf, Mesmerising Art Goes Viral

ತುಮಕೂರು, ಜನವರಿ 21: ಸಿದ್ಧಗಂಗಾ ಮಠದಲ್ಲಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಜರುಗುತ್ತಿದೆ. ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ಮನು ಅವರು ತೆಂಗಿನ ಗರಿಗಳಿಂದ ರಚಿಸಿದ ಶಿವಕುಮಾರ ಸ್ವಾಮೀಜಿಗಳ ಸುಂದರ ಕಲಾಕೃತಿಯು ಗಮನ ಸೆಳೆದಿದೆ. ಈ ಕಲಾಕೃತಿ, ಸಂಪೂರ್ಣವಾಗಿ ತೆಂಗಿನ ಗರಿಗಳನ್ನು ಬಳಸಿ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಎಂಟು ತೆಂಗಿನ ಗರಿಗಳು ಬಳಕೆಯಾಗಿವೆ. ಕಲಾವಿದ ಮನು ಮತ್ತು ಅವರ ಟೀಮ್ ಗಜಸೇನಾ ಕಲಾವಿದರು ಸತತ 48 ಗಂಟೆಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ರೂಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral Video: ಜಿಂದಾಲ್ ಟವರ್ ಏರಿ 282 ಅಡಿ ಎತ್ತರದಲ್ಲಿ ವ್ಯಕ್ತಿಯ ಅಪಾಯಕಾರಿ ಸಾಹಸ – Kannada News | A Misstep from Disaster: Man Detained After Scaling Jindal Tower Without Safety Gear

ಹರಿಯಾಣ, ಜನವರಿ 21: ವ್ಯಕ್ತಿಯೊಬ್ಬ ಹರಿಯಾಣದ ಹಿಸಾರ್​ನಲ್ಲಿರುವ ಜಿಂದಾಲ್ ಟವರ್ ಏರಿ ಅಪಾಯಕಾರಿ ಸಾಹಸ(Stunt) ಮಾಡಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದ ಮೋನು ಎಂಬ ಯುವಕ 282 ಅಡಿ ಎತ್ತರದ ಟವರ್ ಹತ್ತಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ.
ಅಧಿಕಾರಿಗಳ ಪ್ರಕಾರ, ಜನವರಿ 18 ರ ಭಾನುವಾರದಂದು ಈ ಘಟನೆ ನಡೆದಿದ್ದು, ಮೋನು ಜಿಂದಾಲ್ ಟವರ್ ಪ್ರವೇಶಿಸಲು ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ವೈರಲ್ ಕ್ಲಿಪ್‌ನ ದೃಶ್ಯಗಳು ಆತ ಕಟ್ಟುಗಳ ಮೇಲೆ ಇರಿಸಲಾದ ಗಾಜಿನ ಬಾಟಲಿಗಳ ಮೇಲೆ ಸ್ಟಂಟ್ ಮಾಡಿದ್ದಾರೆ. ಭದ್ರತಾ ಸಾನಗಳಿಲ್ಲದೆ ಕೈಗಳನ್ನು ಬಳಸಿ ಟವರ್​ನ ಹೊರಗಿನ ಚೌಕಟ್ಟಿನಲ್ಲಿ ತಲೆಕೆಳಗಾಗಿ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಅವರು ಬಿಯರ್ ಬಾಟಲಿಗಳು ಮತ್ತು ಕ್ಯಾನ್ ತುಂಬಿದ್ದ ಚೀಲವನ್ನು ಹೊತ್ತುಕೊಂಡು ಮೇಲೆ ಹೋಗಿದ್ದರು. ಅದನ್ನು ಸಾಹಸ ಪ್ರದರ್ಶನದ ಸಮಯದಲ್ಲಿ ಬಳಸಿದ್ದಾರೆ. ನೆಲದಿಂದ ನೂರಾರು ಅಡಿ ಎತ್ತರದಲ್ಲಿ ನಡೆಸಲಾದ ಈ ಅಪಾಯಕಾರಿ ಸಾಹಸ ಜೀವಕ್ಕೆ ಅಪಾಯ ತಂದೊಡ್ಡಬಹುದಿತ್ತು.

ಮತ್ತಷ್ಟು ಓದಿ: ಛೀ.. ಥೂ.. ದೆಹಲಿ ಮೆಟ್ರೋ ಪ್ಲಾಟ್​ಫಾರ್ಮ್​ನಲ್ಲಿ ಮೂತ್ರ ವಿಸರ್ಜಿಸಿ ಸಿಕ್ಕಿಬಿದ್ದ ವ್ಯಕ್ತಿ

ಮೋನು ಕೆಳಗೆ ಇಳಿಯಲು ಪ್ರಾರಂಭಿಸುತ್ತಿದ್ದಂತೆ ಜಿಂದಾಲ್ ಟವರ್ ಭದ್ರತಾ ಸಿಬ್ಬಂದಿ ಚಟುವಟಿಕೆಯನ್ನು ಗಮನಿಸಿ ತಕ್ಷಣ ಮಧ್ಯಪ್ರವೇಶಿಸಿದರು. ಆತನನ್ನು ಬಂಧಿಸಿ ನಂತರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ವಿಚಾರಣೆಯ ಸಮಯದಲ್ಲಿ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಲಿಖಿತ ಕ್ಷಮೆಯಾಚಿಸಿದ್ದಾನೆ ಎಂದು ಟವರ್ ಆಪರೇಟರ್ ಕುಲದೀಪ್ ಸಿಂಗ್ ಹೇಳಿದ್ದಾರೆ.

ವಿಡಿಯೋ

ಅಂತಹ ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಭವಿಷ್ಯದಲ್ಲಿ ಇದೇ ರೀತಿಯ ಉಲ್ಲಂಘನೆಗಳನ್ನು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಒಪಿ ಜಿಂದಾಲ್ ಟವರ್‌ನಲ್ಲಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆಯನ್ನು ಪ್ರಾರಂಭಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾಕಳಿ ಬಳಿ ಸರಣಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೂ ಲೆಕ್ಕಿಸದೆ ಮೂಟೆಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋದ ಜನ! – Kannada News | Makali Accident: Biker Killed in Multi Vehicle Crash as Onions Are Looted, Sparks Public Outrage

ನೆಲಮಂಗಲ, ಜನವರಿ 21: ಬೆಂಗಳೂರು (Bangalore) ಉತ್ತರ ತಾಲೂಕಿನ ಮಾಕಳಿ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬುಧವಾರ ನಡೆದಿದೆ. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಲಾರಿ ಮೊದಲು ಆಟೋಗೆ ಡಿಕ್ಕಿ ಹೊಡೆದು, ಬಳಿಕ ಎದುರಿಗೆ ಬರುತ್ತಿದ್ದ ಬೈಕ್‌ಗಳ ಮೇಲೆ ಬಿದ್ದಿದೆ.

ಲಾರಿ ಬೈಕ್ ಮೇಲೆ ಉರುಳಿದ ಪರಿಣಾಮ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ರಸ್ತೆ ಮೇಲೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ.

ಮೂಟೆಗಳಲ್ಲಿ ಈರುಳ್ಳಿ ತುಂಬ್ಕೊಂಡು ಹೋದ ಜನ

ಅಚ್ಚರಿಯ ಸಂಗತಿ ಎಂದರೆ, ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೂ ಸಹ, ರಸ್ತೆ ಮೇಲೆ ಬಿದ್ದಿದ್ದ ಈರುಳ್ಳಿಯನ್ನು ಹೊತ್ತುಕೊಂಡು ಹೋಗಲು ಜನರು ಮುಗಿಬಿದ್ದರು. ಜನರು ಈರುಳ್ಳಿಗಾಗಿ ಮುಗಿಬಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಮಾನವೀಯತೆ ಮರೆತ ಈ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ: ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​, ನೈಜೀರಿಯಾ ಪ್ರಜೆ ವಶಕ್ಕೆ

ಘಟನೆ ಕುರಿತು ಮಾಹಿತಿ ಪಡೆದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಹಾಗೂ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ವಿಡಿಯೋ & ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಪಾರಿವಾಳವನ್ನು ಕಂಡು ಹಿಡಿಯಬಲ್ಲಿರಾ – Kannada News | Optical Illusion: If you can spot the pigeon in this picture, you are smart

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಒಗಟಿನ ಚಿತ್ರಗಳೇ ಹಾಗೆ, ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಕೆಲವೊಮ್ಮೆ ಈ ಒಗಟಿನ ಚಿತ್ರ ತಲೆಗೆ ಹುಳ ಬಿಡುತ್ತದೆ. ಎಷ್ಟೇ ಹರಸಾಹಸ ಪಟ್ಟರೂ ಉತ್ತರವಂತೂ ದೊರೆಯುವುದೇ ಇಲ್ಲ. ಇದೀಗ ಇಂತಹದ್ದೇ ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಸವಾಲು ಪಾರಿವಾಳವನ್ನು ಕಂಡು ಹಿಡಿಯುವುದು. 15 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯ ಇದೆಯೇ.

ಈ ಚಿತ್ರವು ಏನನ್ನು ಹೇಳುತ್ತದೆ?

ಇಲ್ಯೂಷನ್ ಚಿತ್ರ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರವು ಅದೇ ರೀತಿಯಿದ್ದು, ರಸ್ತೆ ಪಕ್ಕದಲ್ಲಿರುವ ದೊಡ್ಡ ದೊಡ್ಡ ಕಟ್ಟಡಗಳನ್ನು ನೀವು ನೋಡಬಹುದು. ಈ ರಸ್ತೆಯಲ್ಲಿ ಕಾರುಗಳು ಓಡಾಡುತ್ತಿದ್ದು, ಅವುಗಳ ಪಕ್ಕದಲ್ಲಿ ಲೈಟ್ ಕಂಬಗಳಿವೆ. ಇದೆಲ್ಲದರ ನಡುವೆ ಪಾರಿವಾಳವೊಂದಿದೆ. ಈ ಒಗಟು ಬಿಡಿಸಲು ನಿಮಗೆ ಹದಿನೈದು ಸೆಕೆಂಡುಗಳಷ್ಟು ಸಮಯವಿದೆ. ಈ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ರೆ ನಿಮ್ಮ ಸಮಯ ಇದೀಗ ಆರಂಭವಾಗುತ್ತದೆ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು

ಪಾರಿವಾಳ ನಿಮ್ಮ ಕಣ್ಣಿಗೆ ಕಂಡಿತೇ?

ಇದು ಟ್ರಿಕ್ಕಿ ಒಗಟಿನ ಚಿತ್ರವಾಗಿರುವುದರಿಂದ ಇಲ್ಯೂಷನ್ ಚಿತ್ರ ಬಿಡಿಸುವುದು ಕಷ್ಟ. ನೀವು ಈ ಒಗಟನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಬಹುದು. ಸೋತೆ ಎಂದು ಹೆಚ್ಚು ಚಿಂತಿಸಬೇಡಿ. ಈ ಕೆಳಗಿನ ಫೋಟೋವನ್ನು ನೋಡಿ.. ಪಾರಿವಾಳ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ. ನೀವು ಈ ಚಿತ್ರದಲ್ಲಿ ಪಾರಿವಾಳವನ್ನು ನೋಡಿದ್ದೀರಿ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಪತ್ನಿ ಉಷಾ – Kannada News | A Growing White House Family: Usha Vance Shares News of Baby Boy Arriving in July

ಜೆಡಿ ವ್ಯಾನ್ಸ್​-ಉಷಾ ವ್ಯಾನ್ಸ್​Image Credit source: Free Press Journal

ವಾಷಿಂಗ್ಟನ್, ಜನವರಿ 21: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance)ಪತ್ನಿ ಉಷಾ ವ್ಯಾನ್ಸ್​(Usha Vance) ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಉಷಾ ವ್ಯಾನ್ಸ್​ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಗಂಡು ಮಗುವಿನ ಪೋಷಕರಾಗಲಿದ್ದು, ಜುಲೈನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಉಷಾ ಮತ್ತು ಮಗು ಚೆನ್ನಾಗಿದ್ದಾರೆ ಮತ್ತು ಜುಲೈ ಅಂತ್ಯದಲ್ಲಿ ಮಗುವನ್ನು ಸ್ವಾಗತಿಸಲು ನಾವೆಲ್ಲರೂ ಎದುರು ನೋಡುತ್ತಿದ್ದೇವೆ.

ಈ ರೋಮಾಂಚಕಾರಿ ಮತ್ತು ಒತ್ತಡದ ಸಮಯದಲ್ಲಿ, ನಮ್ಮ ಕುಟುಂಬವನ್ನು ಅತ್ಯುತ್ತಮವಾಗಿ ನೋಡಿಕೊಳ್ಳುವ ಮಿಲಿಟರಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ. ಜೆಡಿ ವ್ಯಾನ್ಸ್​ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಮಕ್ಕಳ ಹೆಸರು ಇವಾನ್, ವಿವೇಕ್ ಮತ್ತು ಮಿರಾಬೆಲ್. ಉಷಾಗೆ 40 ವರ್ಷ ವಯಸ್ಸು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 60 ದೇಶಗಳ ಮೇಲೆ ವ್ಯಾಪಕ ಸುಂಕ ವಿಧಿಸಿ ವಿರಾಮಗೊಳಿಸಿದ ನಂತರ ವ್ಯಾನ್ಸ್​ ಭಾರತಕ್ಕೆ ಭೇಟಿ ನೀಡಿದ್ದರು. ಜೆಡಿ ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಆಂಧ್ರದವರು. ಉಷಾ ವ್ಯಾನ್ಸ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಹುಟ್ಟಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಬಿಎ ಪದವಿ ಪಡೆದರು ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್ ಆಗಿದ್ದರು.

ಮತ್ತಷ್ಟು ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗು ಕುಟುಂಬದಿಂದ 4 ದಿನ ಭಾರತ ಪ್ರವಾಸ; ಏನಿದೆ ಅವರ ಅಜೆಂಡಾ?

ಅವರು ಆರಂಭಿಕ ಆಧುನಿಕ ಇತಿಹಾಸದಲ್ಲಿ ಎಂಫಿಲ್ ಪಡೆದರು. ವ್ಯಾನ್ಸ್ ಅವರ ತಾಯಿ ಆಣ್ವಿಕ ಜೀವಶಾಸ್ತ್ರಜ್ಞರಾಗಿದ್ದರೆ, ಅವರ ತಂದೆ ಮೆಕ್ಯಾನಿಕಲ್ ಎಂಜಿನಿಯರ್.

ಉಷಾ ವ್ಯಾನ್ಸ್ ತಂದೆ ಮತ್ತು ಅಜ್ಜ ಇಬ್ಬರೂ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಕೆಲಸ ಮಾಡಿದ್ದರು. ಅವರ ತಂಗಿ ಸ್ಯಾನ್ ಡಿಯಾಗೋದಲ್ಲಿ ಸೆಮಿಕಂಡಕ್ಟರ್ ಕಂಪನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಉಷಾ ವ್ಯಾನ್ಸ್ ಅವರ ಪೋಷಕರು 1970 ರ ದಶಕದ ಉತ್ತರಾರ್ಧದಲ್ಲಿ ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತೆರಳಿದ್ದರು.

ಉಷಾ ವ್ಯಾನ್ಸ್ ಜೆಡಿ ವ್ಯಾನ್ಸ್ ಅವರನ್ನು ಹೇಗೆ ಭೇಟಿಯಾದರು?
ಉಷಾ 2010 ರಲ್ಲಿ ಯೇಲ್ ಕಾನೂನು ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದರು. ಒಂದು ಡೇಟ್ ನಂತರ ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. 2015 ರಲ್ಲಿ, ಉಷಾ ವ್ಯಾನ್ಸ್ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.

ನಂತರ ಅವರು ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೊ ​​ಮತ್ತು ವಾಷಿಂಗ್ಟನ್, ಡಿಸಿಯಲ್ಲಿ ಕಚೇರಿಗಳನ್ನು ಹೊಂದಿರುವ ಕಾನೂನು ಸಂಸ್ಥೆಯಾದ ಯುಎಸ್ ಕಾನೂನು ಸಂಸ್ಥೆ ಮುಂಗರ್, ಟೋಲೆಸ್ ಓಲ್ಸನ್ ಎಲ್ ಎಲ್ ಪಿ ಯಲ್ಲಿ ವಕೀಲರಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link