Category Archives: Blog

Your blog category

ಅಕ್ರಮ ಸಂಬಂಧವಿದೆಯೆಂಬ ಶಂಕೆ, ಪತಿ ಮಲಗಿರುವಾಗ ಖಾಸಗಿ ಅಂಗ ಕತ್ತರಿಸಿದ ಪತ್ನಿ – Kannada News | Woman Arrested After Violent Domestic Attack in Chhattisgarh

ಬಿಲಾಸ್‌ಪುರ, ಮೇ 26: ವಿವಾಹೇತರ ಸಂಬಂಧದ ಶಂಕೆಯಲ್ಲಿ ಪತ್ನಿಯೊಬ್ಬಳು ಗಾಢ ನಿದ್ದೆಯಲ್ಲಿದ್ದ ಪತಿ(husband)ಯ ಮೇಲೆ ಕತ್ತಿಯಿಂದ ಭೀಕರವಾಗಿ ಹಲ್ಲೆ ನಡೆಸಿ, ಅವರ ಖಾಸಗಿ ಅಂಗವನ್ನೇ ಕತ್ತರಿಸಿರುವ ಅತ್ಯಂತ ಆಘಾತಕಾರಿ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿರುವ ರಾಜೇಶ್ ಕೌಶಿಕ್ ಎಂಬುವವರೇ ಈ ಭೀಕರ ದಾಳಿಗೆ ಒಳಗಾದ ದುರ್ದೈವಿ. ಸದ್ಯ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಸ್ಥಳೀಯ ಸರ್ಕಾರಿ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಾಜೇಶ್ ಕೌಶಿಕ್ ಮತ್ತು ಆತನ ಪತ್ನಿ ದ್ರೌಪದಿ ಬಾಯಿ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು. ರಾಜೇಶ್‌ಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ದ್ರೌಪದಿ ಅನುಮಾನಿಸುತ್ತಿದ್ದಳು. ಘಟನೆ ನಡೆದ ರಾತ್ರಿ ಕೂಡ ಇಬ್ಬರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ಆದರೆ, ತಡರಾತ್ರಿ ಪತಿ ರಾಜೇಶ್ ಗಾಢ ನಿದ್ದೆಯಲ್ಲಿದ್ದಾಗ, ದ್ರೌಪತಿ ಕತ್ತಿಯಿಂದ ಆತನ ಖಾಸಗಿ ಭಾಗಗಳನ್ನು ಕತ್ತರಿಸಿ ಕ್ರೂರತೆ ಮೆರೆದಿದ್ದಾಳೆ.

ಮತ್ತಷ್ಟು ಓದಿ: ಸಣ್ಣದೊಂದು ವಿವಾದ, ಕೋಪದ ಭರದಲ್ಲಿ ಟಿವಿಯನ್ನೇ ಎತ್ತಿ ಪತ್ನಿ ತಲೆಗೆ ಹೊಡೆದ ಪತಿ, ಆಕೆ ಸ್ಥಳದಲ್ಲೇ ಸಾವು

ದಾಳಿಯ ಭೀಕರತೆಗೆ ತತ್ತರಿಸಿದ ರಾಜೇಶ್ ತೀವ್ರ ರಕ್ತಸ್ರಾವದ ನಡುವೆಯೂ ಕಿರುಚುತ್ತಾ ಕೋಣೆಯಿಂದ ಹೊರಗೆ ಓಡಿಬಂದಿದ್ದಾರೆ. ತಂದೆಯ ಕಿರುಚಾಟ ಕೇಳಿ ಎಚ್ಚರಗೊಂಡ ಅಪ್ರಾಪ್ತ ಮಗ ತಕ್ಷಣವೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಕುಟುಂಬಸ್ಥರು ರಾಜೇಶ್ ಮತ್ತು ಆತನ ಕತ್ತರಿಸಿದ ದೇಹದ ಭಾಗವನ್ನು ಹಿಡಿದುಕೊಂಡು ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆ ದ್ರೌಪದಿ ಬಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಅನೈತಿಕ ಸಂಬಂಧದ ಅನುಮಾನ ಮತ್ತು ನಿರಂತರ ಕೌಟುಂಬಿಕ ಕಲಹವೇ ಈ ಘೋರ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಪೊಲೀಸರು ಮಹಿಳೆಯ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಐಪಿಎಲ್​ಗೆ ಗುಡ್ ಬೈ ಹೇಳಿದ RCB ಮಾಜಿ ಆಟಗಾರ! – Kannada News | Murugan Ashwin announces retirement from IPL

ತಮಿಳುನಾಡು ಮೂಲದ ಕ್ರಿಕೆಟಿಗ ಮುರುಗನ್ ಅಶ್ವಿನ್ ಅವರು ಎಲ್ಲಾ ಮಾದರಿಯ ದೇಶಿ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ  ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಅಶ್ವಿನ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ 10 ವರ್ಷಗಳ ವೃತ್ತಿಪರ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ.

ಈ ನಿವೃತ್ತಿಯ ಘೋಷಣೆಯೊಂದಿಗೆ ಇದು ಕ್ರಿಕೆಟ್‌ನಿಂದ ಸಂಪೂರ್ಣ ವಿದಾಯವಲ್ಲ ಎಂದು ಸ್ಪಷ್ಟಪಡಿಸಿರುವ ಮುರುಗನ್ ಅಶ್ವಿನ್, ಮುಂಬರುವ ದಿನಗಳಲ್ಲಿ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ವಿದೇಶಿ ಲೀಗ್ ಹಾಗೂ ನಿವೃತ್ತ ಆಟಗಾರರ ಲೀಗ್​ಗಳಲ್ಲಿ ಕಣಕ್ಕಿಳಿಯುವ ಯೋಜನೆ ಹಾಕಿಕೊಂಡಿದ್ದಾರೆ.

ಮೂವರು ನಾಯಕರುಗಳಿಗೆ ಧನ್ಯವಾದ:

ಮುರುಗನ್ ಅಶ್ವಿನ್ ಐಪಿಎಲ್​ನಲ್ಲಿ ಮೂವರು ದಿಗ್ಗಜರ ನಾಯಕತ್ವದಲ್ಲಿ ಆಡಿದ ಕೆಲವೇ ಕೆಲವು ಆಟಗಾರರಲ್ಲಿ ಇಬ್ಬರು. ಇದೀಗ ಈ ಮೂವರಿಗೆ, ಅಂದರೆ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಕೃತಜ್ಞತೆಗಳ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  • ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮುರುಗನ್ ಅಶ್ವಿನ್ ರೈಸಿಂಗ್ ಪುಣೆ ಜೈಂಟ್ಸ್ ಪರ ಕಣಕ್ಕಿಳಿದಿದ್ದರು.
  • ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು
  • ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದರು.

6 ತಂಡಗಳ ಪರ ಕಣಕ್ಕಿಳಿದಿದ್ದ ಮುರುಗನ್:

ಮುರುಗನ್ ಅಶ್ವಿನ್  2016 ರಿಂದ 2023 ರವರೆಗೆ ಅವರು ಒಟ್ಟು 6 ವಿಭಿನ್ನ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಆ ತಂಡಗಳಾವುವು ಎಂದರೆ…

  • ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ (RPS)
  • ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್- DC)
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
  • ಪಂಜಾಬ್ ಕಿಂಗ್ಸ್​ (PBKS)
  • ಮುಂಬೈ ಇಂಡಿಯನ್ಸ್ (MI)
  • ರಾಜಸ್ಥಾನ್ ರಾಯಲ್ಸ್​ (RR)

ಆರ್​ಸಿಬಿ ಮಾಜಿ ಆಟಗಾರ:

2018 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಮುರುಗನ್ ಅಶ್ವಿನ್ ಆರ್​ಸಿಬಿ ಪರ 2 ಪಂದ್ಯಗಳನ್ನಾಡಿದ್ದರು. ಈ ವೇಳೆ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಐಪಿಎಲ್ ವೃತ್ತಿ ಜೀವನ:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಟ್ಟು 44 ಪಂದ್ಯಗಳನ್ನಾಡಿರುವ ಮುರುಗನ್ ಅಶ್ವಿನ್ ಒಟ್ಟು 35 ಪಂದ್ಯಗಳನ್ನು ಪಡದಿದ್ದಾರೆ. ಈ ವೇಳೆ 21 ರನ್​ಗಳಿಗೆ ಮೂರು ವಿಕೆಟ್ ಕಬಳಿಸಿರುವುದು ಅವರ ಶ್ರೇಷ್ಠ ಪ್ರದರ್ಶನ.

ಹಾಗೆಯೇ ದೇಶೀಯ ಅಂಗಳದಲ್ಲಿ ತಮಿಳುನಾಡು ಪರ ಕಣಕ್ಕಿಳಿಯುವ ಮೂಲಕ ಕೆರಿಯರ್ ಆರಂಭಿಸಿದ್ದ ಮುರುಗನ್, ಆ ಬಳಿಕ ಚಂಡೀಗಢ್ ಹಾಗೂ ಜಮ್ಮು ಕಾಶ್ಮೀರ ತಂಡಗಳನ್ನು ಪ್ರತಿನಿಧಿಸಿದ್ದರು. ಈ ವೇಳೆ ಒಟ್ಟು 117 ಟಿ20 ಪಂದ್ಯಗಳನ್ನಾಡಿರುವ ಅವರು 115 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಲಿಸ್ಟ್​-ಎ ಕ್ರಿಕೆಟ್​ನಲ್ಲಿ 34 ಮ್ಯಾಚ್​ಗಳನ್ನಾಡಿರುವ ಮುರುಗನ್ 35 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: 07:07: CSK ತಂಡಕ್ಕೆ ಹಾರ್ದಿಕ್ ಪಾಂಡ್ಯ?

ಇದೀಗ ತಮ್ಮ 35ನೇ ವಯಸ್ಸಿಗೆ ದೇಶೀಯ ಕ್ರಿಕೆಟ್​ ಹಾಗೂ ಐಪಿಎಲ್​​ಗೆ ಗುಡ್ ಬೈ ಹೇಳಿರುವ ಮುರುಗನ್ ಅಶ್ವಿನ್ ಮುಂಬರುವ ದಿನಗಳಲ್ಲಿ ವಿದೇಶಿ ಲೀಗ್​ಗಳಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.

Published On – 10:32 am, Tue, 26 May 26

Source link

ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ರಾಮ್ ಚರಣ್​, ಶಿವರಾಜ್​​ ಕುಮಾರ್, ಜಾನ್ವಿ ಕಪೂರ್ ಮೊದಲಾದವರು ನಟಿಸಿರುವ ‘ಪೆದ್ದಿ’ ಸಿನಿಮಾ ಜೂನ್ 4ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಈವೆಂಟ್ ಬೆಂಗಳೂರಿನಲ್ಲಿ ನಡೆಯಿತು. ಈ ವೇಳೆ ಶಿವಣ್ಣ ಅವರು ವೇದಿಕೆ ಮೇಲೆ ರಾಮ್ ಚರಣ್ ಅವರ ಬಗ್ಗೆ ಮಾತನಾಡಿದರು. ರಾಮ್ ಚರಣ್ ಹಾಗೂ ಚಿಕ್ಕಪ್ಪ ಪವನ್ ಕಲ್ಯಾಣ್ ಬಾಂಡಿಂಗ್ ಅವರಿಗೆ ಇಷ್ಟ ಆಗಿದೆ. ವೇದಿಕೆ ಮೇಲೆಯೇ ಈ ಬಗ್ಗೆ ಶಿವಣ್ಣ ಮಾತನಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐದು ತಿಂಗಳಲ್ಲಿ ಎರಡನೇ ಬಾರಿಗೆ ರಾಮ್ ರಹೀಮ್​ಗೆ ಪೆರೋಲ್, 30 ದಿನಗಳ ಕಾಲ ಜೈಲಿನಿಂದ ಬಿಡುಗಡೆ – Kannada News | Ram Rahim Gets 30 Day Parole Again: Dera Chief Released from Jail for Second Time in 5 Months

ನವದೆಹಲಿ, ಮೇ 26 ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್(Gurmeet Ram Rahim Singh)ಗೆ ಮತ್ತೊಮ್ಮೆ ಪೆರೋಲ್ ಮಂಜೂರು ಮಾಡಲಾಗಿದೆ. ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಮ್ ರಹೀಮ್ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಬಾರಿ ಅವರಿಗೆ 30 ದಿನಗಳ ಪೆರೋಲ್ ನೀಡಲಾಗಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಗುರ್ಮೀತ್ ರಾಮ್ ರಹೀಮ್ ಬಿಗಿ ಭದ್ರತೆಯಲ್ಲಿ ಸಿರ್ಸಾ ಆಶ್ರಮಕ್ಕೆ ತೆರಳಿದರು.

ಈ ವರ್ಷ ಇದು ಅವರ ಎರಡನೇ ಪೆರೋಲ್ ಆಗಿದೆ. ಅವರು ಈ ಹಿಂದೆ 15 ಬಾರಿ ಪೆರೋಲ್ ಮತ್ತು ಫರ್ಲೋ ಪಡೆದಿದ್ದಾರೆ ಮತ್ತು ಇದು ಅವರ ಶಿಕ್ಷೆಯ ಅವಧಿಯಲ್ಲಿ 16 ನೇ ಪೆರೋಲ್ ಆಗಿದೆ. ಇಲ್ಲಿಯವರೆಗೆ, ರಾಮ್ ರಹೀಮ್ ತಮ್ಮ 3,193 ದಿನಗಳ ಶಿಕ್ಷೆಯಲ್ಲಿ 406 ದಿನಗಳನ್ನು ರೋಹ್ಟಕ್ ನ ಸುನಾರಿಯಾ ಜೈಲಿನ ಗೋಡೆಗಳ ಹೊರಗೆ ಕಳೆದಿದ್ದಾರೆ.

ರಾಮ್ ರಹೀಮ್ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. 2017 ರಲ್ಲಿ, ವಿಶೇಷ ಸಿಬಿಐ ನ್ಯಾಯಾಲಯವು ಇಬ್ಬರು ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಆತನನ್ನು ದೋಷಿ ಎಂದು ಘೋಷಿಸಿತು. ನಂತರ ಎರಡು ಕೊಲೆ ಪ್ರಕರಣಗಳಲ್ಲಿ ಆತನನ್ನು ದೋಷಿ ಎಂದು ಘೋಷಿಸಲಾಯಿತು. 2019 ರಲ್ಲಿ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2021 ರಲ್ಲಿ, ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಆತನನ್ನು ದೋಷಿ ಎಂದು ಘೋಷಿಸಲಾಯಿತು. ಆದಾಗ್ಯೂ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2024 ರಲ್ಲಿ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಮತ್ತು 2026 ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಆತನನ್ನು ಖುಲಾಸೆಗೊಳಿಸಿತು.

30 ದಿನಗಳ ಪೆರೋಲ್‌ನೊಂದಿಗೆ, ಡೇರಾ ಮುಖ್ಯಸ್ಥರು 2026 ರ 10 ವಾರಗಳ ಪೆರೋಲ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ, ಇದು ಹರಿಯಾಣ ಉತ್ತಮ ನಡವಳಿಕೆ ಕೈದಿಗಳ (ತಾತ್ಕಾಲಿಕ ಬಿಡುಗಡೆ) ಕಾಯ್ದೆ, 2022 ರ ಅಡಿಯಲ್ಲಿ ಅಗತ್ಯವಿದೆ. ಇದಕ್ಕೂ ಮೊದಲು, ಅವರಿಗೆ ಜನವರಿಯಲ್ಲಿ 40 ದಿನಗಳ ಪೆರೋಲ್ ನೀಡಲಾಯಿತು. ಈ ಕಾನೂನು ಜನವರಿಯಿಂದ ಡಿಸೆಂಬರ್ ವರೆಗೆ ಒಟ್ಟು 10 ವಾರಗಳ ಪೆರೋಲ್‌ಗೆ ಅರ್ಹತೆ ನೀಡುತ್ತದೆ, ಇದನ್ನು ಎರಡು ಭಾಗಗಳಲ್ಲಿ ಪಡೆಯಬಹುದು. ಕಾನೂನು ಮೂರು ವಾರಗಳ ಫರ್ಲೋ (ತಾತ್ಕಾಲಿಕ ಬಿಡುಗಡೆ) ಗೆ ಸಹ ಅವಕಾಶ ನೀಡುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾಯಿ ಕಡಿತವನ್ನು ಲೈಟಾಗಿ ತಗೋಬೇಡಿ, ನಿಮಗೂ ಈ ಪರಿಸ್ಥಿತಿ ಬರಬಹುದು ಎಚ್ಚರ!: ರೇಬಿಸ್ ಲಸಿಕೆ ನಿರ್ಲಕ್ಷಿಸಿದಕ್ಕೆ ಹೋಯಿತು ಯುವಕನ ಪ್ರಾಣ – Kannada News | Dog Bite Warning: Don’t Neglect Rabies Vaccine – Bagalakote Tragedy Highlights Risk

ಬಾಗಲಕೋಟೆ, ಮೇ.26: ಹುಚ್ಚು ನಾಯಿ ಕಚ್ಚಿದ ನಂತರ ಸಕಾಲದಲ್ಲಿ ರೇಬಿಸ್ ನಿರೋಧಕ ಲಸಿಕೆ (Rabies Vaccine) ಹಾಕಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ, ಯುವಕನೊಬ್ಬ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ (22) ಎಂದು ಗುರುತಿಸಲಾಗಿದೆ. ನಾಯಿ ಕಚ್ಚಿದ ನಂತರ ಅದಕ್ಕೆ ಬೇಕಾದ ಚಿಕಿತ್ಸೆಗಳನ್ನು ಪಡೆಯುವುದು ಕಡ್ಡಾಯ. ಒಂದು ವೇಳೆ ಚಿಕಿತ್ಸೆ ಪಡೆಯದಿದ್ದರೆ ಸಾವು ಖಂಡಿತ.

ಮೂಲಗಳ ಪ್ರಕಾರ, ಕಳೆದ ಮಾರ್ಚ್ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದಲ್ಲಿ ನಡೆದಿದ್ದ ‘ಮನ್ನಿಕೇರಿ ಚಂದ್ರಾದೇವಿ ಜಾತ್ರೆ’ಗೆ ಪ್ರದೀಪ್ ತೆರಳಿದ್ದನು. ಈ ಸಂದರ್ಭದಲ್ಲಿ ಆತನಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಆದರೆ, ಪ್ರದೀಪ್ ಇದನ್ನು ಗಂಭೀರವಾಗಿ ಪರಿಗಣಿಸದೆ, ಆಸ್ಪತ್ರೆಗೆ ತೆರಳಿ ಸೂಕ್ತವಾದ ಲಸಿಕೆಗಳನ್ನು ಹಾಕಿಸಿಕೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದನು ಎನ್ನಲಾಗಿದೆ.

ನಾಯಿ ಕಚ್ಚಿದ ಎರಡು ತಿಂಗಳ ಬಳಿಕ, ಅಂದರೆ ಒಂದು ವಾರದ ಹಿಂದೆ ಪ್ರದೀಪ್ ದೇಹದಲ್ಲಿ ರೇಬಿಸ್ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣ ಆತನನ್ನು ನಿಡಗುಂದಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಬಾಗಲಕೋಟೆಯ ಕೆರೂಡಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿಂದ ನಿನ್ನೆ (ಮೇ 25) ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ರೇಬಿಸ್ ವೈರಸ್ ಇಡೀ ದೇಹವನ್ನು ಆವರಿಸಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಇದನ್ನು ಓದಿ: ಪೊಲೀಸರನ್ನ ಕಂಡು ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ರೌಡಿ ‘ಸ್ಪಾಟ್ ನಾಗ’; ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಕಿರಾತಕ!

ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ನಾಯಿ ಕಡಿತಕ್ಕೊಳಗಾದ ತಕ್ಷಣವೇ ಲಸಿಕೆ ಪಡೆಯುವುದು ಎಷ್ಟು ಕಡ್ಡಾಯ ಎಂಬುದಕ್ಕೆ ಈ ದುರಂತ ಸಾಕ್ಷಿಯಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಕೂಡ ಆಗ್ಗಾಗೆ ಎಚ್ಚರಿಕೆಯನ್ನು ಹಾಗೂ ಜಾಗೃತಿಯನ್ನು ಮೂಡಿಸುತ್ತಿದೆ. ಅದರೂ ಇಂತಹ ನಿರ್ಲಕ್ಷ್ಯ ಸಾವಿಗೆ ಕಾರಣವಾಗಬಹುದು.

ರಾಜ್ಯದ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸದ್ಯಕ್ಕಂತೂ ಸೆಟ್ಟೇರಲ್ಲ ಮಹೇಶ್​ ಬಾಬು-ಪ್ರಶಾಂತ್ ನೀಲ್ ಸಿನಿಮಾ; ಇಲ್ಲಿದೆ ಕಾರಣಗಳ ಪಟ್ಟಿ – Kannada News | Mahesh Babu and Prashanth Neel Movie: Why the Dream Project Faces Long Delays

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಮತ್ತು ಸ್ಯಾಂಡಲ್‌ವುಡ್ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾಗಾಗಿ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರಾಗನ್’ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾದ ಬೆನ್ನಲ್ಲೇ ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕೆ ಬಂದಿದೆ. ಮಹೇಶ್ ಬಾಬು ಅವರು ತಮ್ಮ ಮುಂಬರುವ ‘ವಾರಣಾಸಿ’ ಚಿತ್ರವನ್ನು ಮುಗಿಸಿದ ನಂತರ ಪ್ರಶಾಂತ್ ನೀಲ್ ಜೊತೆ ಬಿಗ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ.ಆದರೆ, ಪ್ರ್ಯಾಕ್ಟಿಕಲ್ ಆಗಿ ನೋಡಿದರೆ ಅದು ಸದ್ಯಕ್ಕೆ ಸಂಭವಿಸುವುದಿಲ್ಲ.

ಮಹೇಶ್ ಬಾಬು ತಮ್ಮ ಕ್ಲಾಸ್ ಮತ್ತು ಮಾಸ್ ನಟನೆಯ ಮೂಲಕ ಸೌತ್ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ಇತ್ತ ಪ್ರಶಾಂತ್ ನೀಲ್ ಕೂಡ ‘ಕೆಜಿಎಫ್’ ಮತ್ತು ‘ಸಲಾರ್’ ಚಿತ್ರಗಳ ಭರ್ಜರಿ ಯಶಸ್ಸಿನ ಮೂಲಕ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದವರು. ಹೀಗಾಗಿ, ಸದಾ ವಿಭಿನ್ನ ಆಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಇವರಿಬ್ಬರು ಒಂದೇ ವೇದಿಕೆಗೆ ಬಂದರೆ ಆ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ಕೂಡ ‘ಡ್ರಾಗನ್’ ಸಿನಿಮಾ ನಂತರ ತಾವು ಸದ್ಯಕ್ಕೆ ತಮ್ಮ ಎಂದಿನ ಡಾರ್ಕ್ ಶೇಡ್ ಆಕ್ಷನ್ ಶೈಲಿಯ ಸಿನಿಮಾಗಳಿಗೆ ಬ್ರೇಕ್ ನೀಡಲಿದ್ದೇನೆ ಎಂದು ಸುಳಿವು ನೀಡಿದ್ದರು. ಇದು ಮಹೇಶ್ ಬಾಬು ಅವರೊಂದಿಗಿನ ಕ್ಲಾಸ್-ಮಾಸ್ ಸಿನಿಮಾದ ಮುನ್ಸೂಚನೆ ಎಂದೇ ಭಾವಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಈ ಕಾಂಬಿನೇಷನ್ ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ಸಿನಿಮಾ ತಡವಾಗಲು ಅಸಲಿ ಕಾರಣಗಳು ಇಲ್ಲಿವೆ:

ಪ್ರಶಾಂತ್ ನೀಲ್ ಬಿಡುವಿಲ್ಲದ ಶೆಡ್ಯೂಲ್:

ಪ್ರಶಾಂತ್ ನೀಲ್ ಸದ್ಯ ‘ಡ್ರಾಗನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಮೂಡಿಬರುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಅವರು ಬಹುನಿರೀಕ್ಷಿತ ‘ಸಲಾರ್ 2’ ಚಿತ್ರದ ಕೆಲಸಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ಈ ಸೀಕ್ವೆಲ್ ಮೇಲೆ ಹಿಮಾಲಯದಷ್ಟು ನಿರೀಕ್ಷೆ ಇರುವುದರಿಂದ, ನೀಲ್ ಅವರು ಮತ್ತೊಂದು ಪ್ರಾಜೆಕ್ಟ್‌ಗಾಗಿ ಇದನ್ನು ಮುಂದೂಡುವ ಸಾಧ್ಯತೆ ತೀರಾ ಕಡಿಮೆ.

ಮಹೇಶ್ ಬಾಬು ಅವರ ಮುಂದಿನ ಲೈನ್‌ಅಪ್:

ಮಹೇಶ್ ಬಾಬು ಅವರ ಕಾಲ್‌ಶೀಟ್ ಕೂಡ ಮುಂದಿನ ಕೆಲವು ವರ್ಷಗಳವರೆಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಸದ್ಯದ ಪ್ರಾಜೆಕ್ಟ್‌ಗಳನ್ನು ಮುಗಿಸಿದ ನಂತರ ಅವರು ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿಯಿದೆ. ಒಂದು ವೇಳೆ ಈ ಪ್ಲಾನ್ ಗ್ರೀನ್ ಸಿಗ್ನಲ್ ಪಡೆದರೆ ಮಹೇಶ್ ಬಾಬು ಅವರ ಮುಂದಿನ ಮೂರ್ನಾಲ್ಕು ವರ್ಷಗಳ ಲೈನ್‌ಅಪ್ ಲಾಕ್ ಆಗಲಿದೆ.

ಈ ಎಲ್ಲಾ ಪ್ರಮುಖ ಕಾರಣಗಳಿಂದಾಗಿ ಮಹೇಶ್ ಬಾಬು ಹಾಗೂ ಪ್ರಶಾಂತ್ ನೀಲ್ ಅವರ ಸಿನಿಮಾ ಕೇವಲ ಗಾಸಿಪ್ ಅಥವಾ ಕಲ್ಪನೆಯಾಗಿಯೇ ಉಳಿಯುವಂತಿದೆ. ತೆರೆಮರೆಯಲ್ಲಿ ಇವರಿಬ್ಬರ ನಡುವೆ ಕಥೆಯ ಚರ್ಚೆಗಳು ನಡೆಯುತ್ತಿದ್ದರೂ ಸಹ, ಈ ಚಿತ್ರ ಅಧಿಕೃತವಾಗಿ ಸೆಟ್ಟೇರಲು ಇನ್ನು ಸಾಕಷ್ಟು ಸಮಯ ಕಾಯಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೇಸಿಗೆ ವಿಶೇಷ ರೈಲುಗಳ ಸಂಚಾರ ಒಂದು ತಿಂಗಳು ವಿಸ್ತರಣೆ! ಇಲ್ಲಿದೆ ಪೂರ್ಣ ವಿವರ – Kannada News | Good News for Rail Passengers: SWR Extends Summer Special Trains Until June End; Check Route and Train List Here

ಸಾಂದರ್ಭಿಕ ಚಿತ್ರImage Credit source: South Western Railway

ಬೆಂಗಳೂರು, ಮೇ 26: ಬೇಸಿಗೆಯ ರಜೆ ಮುಗಿಸಿ ಊರುಗಳಿಗೆ ಹಾಗೂ ಕೆಲಸದ ಸ್ಥಳಗಳಿಗೆ ಮರಳುವ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾರ್ವಜನಿಕರ ದಟ್ಟಣೆ ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸದ್ಯ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬೇಸಿಗೆ ವಿಶೇಷ ರೈಲುಗಳ (Summer Special Trains) ಅವಧಿಯನ್ನು ಜೂನ್ ತಿಂಗಳ ಕೊನೆಯ ವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ಈ ಎಲ್ಲಾ ವಿಶೇಷ ರೈಲುಗಳು ಈಗ ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ನಿಲುಗಡೆ (Stoppages) ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ (Composition) ಸಂಚರಿಸಲಿವೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಖ್ಯಾಂಶಗಳು

  • ಹುಬ್ಬಳ್ಳಿ, ಬೆಂಗಳೂರು ಮಾರ್ಗದ ಪ್ರಮುಖ ವಿಶೇಷ ರೈಲುಗಳ ಸಂಚಾರ ಜೂನ್ ಅಂತ್ಯದವರೆಗೆ ವಿಸ್ತರಣೆ.
  • ಸದ್ಯ ಇರುವ ಹಳೆಯ ರೈಲು ಸಮಯ, ನಿಲುಗಡೆ ಹಾಗೂ ಬೋಗಿಗಳ ವ್ಯವಸ್ಥೆಯಲ್ಲೇ ಮುಂದುವರಿಕೆ.
  • ತಾಂತ್ರಿಕ ಕಾಮಗಾರಿ ಹಿನ್ನೆಲೆ ಕೆಲವು ನಿರ್ದಿಷ್ಟ ದಿನಗಳಂದು ಮಾತ್ರ ರೈಲು ಸೇವೆ ರದ್ದು.

ರೈಲುಗಳ ವಿಸ್ತರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಹುಬ್ಬಳ್ಳಿ-ರಾಮೇಶ್ವರಂ ಭಾನುವಾರದ ವಿಶೇಷ ರೈಲು (07355) ಜೂನ್ 7 ರಿಂದ 28 ರವರೆಗೆ ಹಾಗೂ ರಾಮೇಶ್ವರಂ-ಹುಬ್ಬಳ್ಳಿ ಸೋಮವಾರದ ರೈಲು (07356) ಜೂನ್ 8 ರಿಂದ 29 ರವರೆಗೆ ವಿಸ್ತರಣೆಗೊಂಡಿದೆ. ಅದೇ ರೀತಿ ಹುಬ್ಬಳ್ಳಿ-ಕೊಲ್ಲಂ ಭಾನುವಾರದ ರೈಲು (07313) ಮೇ 31 ರಿಂದ ಜೂನ್ 21 ರವರೆಗೆ ಮತ್ತು ಕೊಲ್ಲಂ-ಹುಬ್ಬಳ್ಳಿ ಸೋಮವಾರದ ರೈಲು (07314) ಜೂನ್ 1 ರಿಂದ ಜೂನ್ 22 ರವರೆಗೆ ಸಂಚರಿಸಲಿವೆ. ಆದರೆ, ಇಂಜಿನಿಯರಿಂಗ್ ಕಾಮಗಾರಿಗಳ ಕಾರಣದಿಂದಾಗಿ ಹುಬ್ಬಳ್ಳಿ-ಕೊಲ್ಲಂ ರೈಲು ಜೂನ್ 7 ರಂದು ಮತ್ತು ಕೊಲ್ಲಂ-ಹುಬ್ಬಳ್ಳಿ ರೈಲು ಜೂನ್ 8 ರಂದು ರದ್ದಾಗಲಿವೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ

ಮತ್ತೊಂದೆಡೆ, ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣದಿಂದ ತಿರುವನಂತಪುರಂ ಸೆಂಟ್ರಲ್ ನಡುವೆ ಸಂಚರಿಸುವ ಪ್ರಮುಖ ವೀಕ್ಲಿ ಸ್ಪೆಷಲ್ ಟ್ರೈನ್​ಗಳಾದ 06523/06524 (ಸೋಮವಾರ/ಮಂಗಳವಾರ) ಮತ್ತು 06547/06548 (ಬುಧವಾರ/ಗುರುವಾರ) ರೈಲುಗಳ ಸೇವೆಯನ್ನು ಜೂನ್ ನಾಲ್ಕನೇ ವಾರದವರೆಗೆ ವಿಸ್ತರಿಸಲಾಗಿದೆ. ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಶುಕ್ರವಾರದ ರೈಲು (06555) ಜೂನ್ 19 ರಿಂದ 26 ರವರೆಗೆ ಹಾಗೂ ತಿರುವನಂತಪುರಂ-ಎಸ್‌ಎಂವಿಟಿ ಬೆಂಗಳೂರು ಭಾನುವಾರದ ರೈಲು (06556) ಜೂನ್ 21 ರಿಂದ ಜೂನ್ 28 ರವರೆಗೆ ವಿಸ್ತರಣೆಯಾಗಿದೆ.

ಇದನ್ನೂ ಓದಿ: ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ!

ಈ ರೈಲುಗಳ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ವಿವರಗಳನ್ನು ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ (www.enquiry.indianrail.gov.in) ಅಥವಾ NTES ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Padma Awards 2026: ಧರ್ಮೇಂದ್ರ, ಅಲ್ಕಾ, ಮಮ್ಮುಟ್ಟಿ ಸೇರಿ 131 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಧಾನ – Kannada News | President Murmu Presents 131 Padma Awards 2026: Full List and Key Highlights

ದ್ರೌಪದಿ ಮುರ್ಮುImage Credit source: Screen shot from Video

ನವದೆಹಲಿ, ಮೇ 26: ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಮತ್ತು ಅತ್ಯುತ್ತಮ ಕೊಡುಗೆ ನೀಡಿದ ದೇಶದ ಮಹಾನ್ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದಲ್ಲಿ ‘ಪದ್ಮ ಪ್ರಶಸ್ತಿ'(Padma Awards)ಗಳನ್ನು ಪ್ರದಾನ ಮಾಡಲಾಗಿದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಇಂದು ಅಧಿಕೃತವಾಗಿ ವಿತರಿಸಲಾಗುತ್ತಿದೆ.

ಪ್ರಶಸ್ತಿಗಳ ವಿವರ ಹೀಗಿದೆ:
ಈ ವರ್ಷ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಲಾಗಿದ್ದು, ಅವುಗಳ ವರ್ಗೀಕರಣ ಈ ಕೆಳಗಿನಂತಿದೆ:

ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ): 05

ಪದ್ಮಭೂಷಣ (ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ): 13

ಪದ್ಮಶ್ರೀ (ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ): 113

ಸಾಧಕರ ಪಟ್ಟಿಯ ವಿಶೇಷತೆಗಳು:
ಮಹಿಳಾ ಶಕ್ತಿ: ಈ ಬಾರಿಯ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಒಟ್ಟು 19 ಮಹಿಳೆಯರು ಸ್ಥಾನ ಪಡೆದಿದ್ದಾರೆ.

ವಿದೇಶಿ ಸಾಧಕರು: ಜಾಗತಿಕ ಮಟ್ಟದಲ್ಲಿ ಭಾರತದ ಹೆಗ್ಗಳಿಕೆ ಪಾತ್ರರಾದ ಆರು ವಿದೇಶಿಯರು, ಅನಿವಾಸಿ ಭಾರತೀಯರು (NRI), ಭಾರತೀಯ ಮೂಲದ ವ್ಯಕ್ತಿಗಳು (PIO) ಮತ್ತು ಒಸಿಐ (OCI) ಕಾರ್ಡ್ ಹೊಂದಿರುವ ಸಾಧಕರನ್ನು ಸಹ ಗೌರವಿಸಲಾಗುತ್ತಿದೆ.

ಮರಣೋತ್ತರ ಗೌರವ: ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ 16 ಸಾಧಕರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಯಾವ ಕ್ಷೇತ್ರಗಳಿಗೆ ಪ್ರಶಸ್ತಿ?
ಕಲೆ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಸಾಮಾಜಿಕ ಕಾರ್ಯ, ಕ್ರೀಡೆ, ವ್ಯವಹಾರ, ಕೈಗಾರಿಕೆ ಮತ್ತು ನಾಗರಿಕ ಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ದೇಶದ ಪ್ರಗತಿಗೆ ಶ್ರಮಿಸಿದ ಗಣ್ಯರನ್ನು ಗುರುತಿಸಿ ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅವರ ಪತ್ನಿ ಹೇಮಾ ಮಾಲಿನಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಸೇರಿದಂತೆ 13 ಮಂದಿ ಇತರ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರು.

ಮತ್ತಷ್ಟು ಓದಿ: ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ; ಭಾವುಕರಾದ ಹೇಮಾ ಮಾಲಿನಿ ಮಗಳು

ಪದ್ಮ ವಿಭೂಷಣ ಪ್ರಶಸ್ತಿಗಳು ಸಂದಿದ್ಯಾರಿಗೆ?
ಧರ್ಮೇಂದ್ರ ಸಿಂಗ್ ಡಿಯೋಲ್, ಕೆ ಟಿ ಥಾಮಸ್, ಎನ್ ರಾಜಮ್, ಪಿ ನಾರಾಯಣನ್, ವಿ.ಎಸ್. ಅಚ್ಯುತಾನಂದನ್ ಅವರಿಗೆ ನೀಡಲಾಗಿದೆ.

ಪದ್ಮಭೂಷಣ
ಅಲ್ಕಾ ಯಾಜ್ಞಿಕ್, ಭಗತ್ ಸಿಂಗ್ ಕೋಶ್ಯಾರಿ, ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ, ಮಮ್ಮುಟ್ಟಿ, ಡಾ. ನೋರಿ ದತ್ತಾತ್ರೇಯುಡು, ಪಿಯೂಷ್ ಪಾಂಡೆ, ಎಸ್ ಕೆ ಎಂ ಮೈಲಾನಂದನ್, ಶತಾವಧಾನಿ ಆರ್ ಗಣೇಶ್, ಶಿಬು ಸೊರೆನ್, ಉದಯ್ ಕೊಟಕ್, ವಿ. ಕೆ. ಮಲ್ಹೋತ್ರಾ, ವೆಲ್ಲಪ್ಪಳ್ಳಿ ನಟೇಶನ್, ವಿಜಯ್ ಅಮೃತರಾಜ್ ಪ್ರಶಸ್ತಿಗಳು ಸಂದಿವೆ.

ಪದ್ಮಶ್ರೀ ಪ್ರಶಸ್ತಿ
ಎ ಇ ಮುತ್ತುನಾಯಗಂ, ಅನಿಲ್ ಕುಮಾರ್ ರಸ್ತೋಗಿ, ಅಂಕೇ ಗೌಡ ಎಂ., ಅರ್ಮಿಡಾ ಫೆರ್ನಾಂಡಿಸ್, ಅರವಿಂದ್ ವೈದ್ಯ, ಅಶೋಕ್ ಖಾಡೆ, ಅಶೋಕ್ ಕುಮಾರ್ ಸಿಂಗ್, ಅಶೋಕ್ ಕುಮಾರ್ ಹಲ್ದಾರ್, ಬಲದೇವ್ ಸಿಂಗ್, ಭಗವಾನ್‌ದಾಸ್ ರಾಯ್ಕ್ವಾರ್, ಭರತ್ ಸಿಂಗ್ ಭಾರ್ತಿ, ಭಿಕ್ಲ್ಯಾ ಲಡ್ಕ್ಯಾ ಧಿಂಡಾ, ವಿಶ್ವ ಬಂಧು (ಮರಣೋತ್ತರ), ಬ್ರಿಜ್ ಲಾಲ್ ಭಟ್, ಬುದ್ಧ ರಶ್ಮಿ ಮಣಿ, ಡಾ. ಬುಧಾರಿ ತಾತಿ, ಚಂದ್ರಮೌಳಿ ಗಡ್ಡಮನುಗು, ಚರಣ್ ಹೆಂಬ್ರಾಮ್, ಚಿರಂಜಿ ಲಾಲ್ ಯಾದವ್ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ.

ದೀಪಿಕಾ ರೆಡ್ಡಿ, ಧಾರ್ಮಿಕಲಾಲ್ ಚುನ್ನಿಲಾಲ್ ಪಾಂಡ್ಯ,ಗಡ್ಡೆ ಬಾಬು ರಾಜೇಂದ್ರ ಪ್ರಸಾದ್, ಗಫ್ರುದ್ದೀನ್ ಮೇವಾತಿ ಜೋಗಿ, ಗಂಭೀರ್ ಸಿಂಗ್ ಯೋನ್ಜೋನ್, ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ), ಗಾಯತ್ರಿ ಬಾಲಸುಬ್ರಮಣ್ಯಂ ಮತ್ತು ರಂಜನಿ ಬಾಲಸುಬ್ರಮಣ್ಯಂ, ಗೋಪಾಲ್ ಜಿ ತ್ರಿವೇದಿ, ಗುಡೂರು ವೆಂಕಟ ರಾವ್, ಹೆಚ್ ವಿ ಹಂಡೆ, ಹೆಲಿ ಯುದ್ಧ, ಹರಿ ಮಾಧಬ್ ಮುಖೋಪಾಧ್ಯಾಯ, ಹರಿಚರಣ್ ಸೈಕಿಯಾ ಅವರಿಗೆ ಪ್ರಶಸ್ತಿ ಲಭಿಸಿದೆ.

ಹರ್ಮನ್ಪ್ರೀತ್ ಕೌರ್ ಭುಲ್ಲರ್, ಇಂದರ್ಜಿತ್ ಸಿಂಗ್ ಸಿಧು, ಜನಾರ್ದನ ಬಾಪುರಾವ್ ಬೋಥೆ, ಜೋಗೇಶ್ ದೇವೂರಿ, ಜುಜಾರ್ ನಿವಾಸಿಗಳು, ಜ್ಯೋತಿಷ್ ದೇಬನಾಥ್, ಕೆ ಪಳನಿವೇಲ್, ಕೆ ರಾಮಸಾಮಿ, ಕೆ ವಿಜಯ್ ಕುಮಾರ್, ಕವೀಂದ್ರ ಪುರಕಾಯಸ್ಥ, ಕೈಲಾಶ್ ಚಂದ್ರ ಪಂತ್, ಕಲಾಮಂಡಲಂ ವಿಮಲಾ ಮೆನನ್, ಕೇವಲ್ ಕೃಷ್ಣ ಥಕ್ರಾಲ್, ಖೇಮ್ ರಾಜ್ ಸುಂದರಿಯಲ್, ಕೊಲ್ಲಕಲ್ ದೇವಕಿ ಅಮ್ಮ ಜಿ, ಕೃಷ್ಣಮೂರ್ತಿ ಬಾಲಸುಬ್ರಮಣ್ಯಂ, ಕುಮಾರ್ ಬೋಸ್, ಕುಮಾರಸಾಮಿ ತಂಗರಾಜ್, ಲಾರ್ಸ್-ಕ್ರಿಶ್ಚಿಯನ್ ಕೋಚ್, ಲ್ಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ, ಮಾಧವನ್ ರಂಗನಾಥನ್, ಮಗಂತಿ ಮುರಳಿ ಮೋಹನ್, ಮಹೇಂದ್ರ ಕುಮಾರ್ ಮಿಶ್ರಾ, ಮಹೇಂದ್ರ ನಾಥ್ ರೈ, ಮಾಮಿದಲ ಜಗದೇಶ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಮಂಗಳಾ ಕಪೂರ್, ಮೀರ್ ಹಾಜಿಭಾಯಿ ಕಸಂಬಾಹಿ, ಮೋಹನ್ ನಗರ, ನಾರಾಯಣ್ ವ್ಯಾಸ್, ನರೇಶ್ ಚಂದ್ರ ದೇವ್ ವರ್ಮಾ, ನೀಲೇಶ್ ವಿನೋದಚಂದ್ರ ಮಂಡಲವಾಲ, ನೂರುದ್ದೀನ್ ಅಹ್ಮದ್, ಒತ್ತುವರ್ ತಿರುತ್ತಣಿ ಸ್ವಾಮಿನಾಥನ್, ಡಾ. ಪದ್ಮಾ ಗುರ್ಮೆತ್, ಪಾಲಕೊಂಡ ವಿಜಯ್ ಆನಂದ್ ರೆಡ್ಡಿ, ಪೋಖಿಲಾ ಲೆಕ್ತೇಪಿ, ಡಾ.ಪ್ರಭಾಕರ ಬಸವಪ್ರಭು ಕೋರೆ, ಪ್ರತೀಕ್ ಶರ್ಮಾ, ಪ್ರವೀಣ್ ಕುಮಾರ್, ಪ್ರೇಮ್ ಲಾಲ್ ಗೌತಮ್, ಪ್ರೊಸೇನ್‌ಜಿತ್ ಚಟರ್ಜಿ, ಡಾ. ಪುಣ್ಣಿಯಮೂರ್ತಿ ನಟೇಶನ್, ಆರ್. ಕೃಷ್ಣನ್ (ಮರಣೋತ್ತರ), ಆರ್‌ವಿಎಸ್ ಮಣಿ, ರಬಿಲಾಲ್ ತುಡು, ರಘುಪತ್ ಸಿಂಗ್ (ಮರಣೋತ್ತರ), ರಘುವೀರ್ ತುಕಾರಾಂ ಖೇಡ್ಕರ್, ರಾಜಸ್ಥಪತಿ ಕಲಿಯಪ್ಪ ಗೌಂಡರ್, ರಾಜೇಂದ್ರ ಪ್ರಸಾದ್, ರಾಮ್ ರೆಡ್ಡಿ ಮಾಮಿಡಿ (ಮರಣೋತ್ತರ), ರಾಮಮೂರ್ತಿ ಶ್ರೀಧರ್, ರಾಮಚಂದ್ರ ಗೋಡಬೋಲೆ ಮತ್ತು ಸುನೀತಾ ಗೋಡಬೋಲೆ, ರತಿಲಾಲ್ ಬೋರಿಸಾಗರ್, ರೋಹಿತ್ ಶರ್ಮಾ, ಎಸ್ ಜಿ ಸುಶೀಲಮ್ಮ, ಸಾಂಗ್ಯುಸಾಂಗ್ ಎಸ್ ಪೊಂಗೆನರ್,ಸಂತ ನಿರಂಜನ್ ದಾಸ್, ಶರತ್ ಕುಮಾರ್ ಪಾತ್ರ, ಸರೋಜ್ ಮಂಡಲ್, ಸತೀಶ್ ಶಾ (ಮರಣೋತ್ತರ), ಸತ್ಯನಾರಾಯಣ್ ನುವಾಲ್, ಸವಿತಾ ಪುನಿಯಾ ಅವರಿಗೆ ನೀಡಲಾಗಿದೆ.

ಪ್ರೊ. ಶಫಿ ಶೌಕ್, ಶಶಿ ಶೇಖರ್ ವೆಂಪತಿ, ಶ್ರೀರಂಗ ದೇವ್‌ಬಾ ಲಾಡ್, ಶುಭಾ ವೆಂಕಟೇಶ್ ಅಯ್ಯಂಗಾರ್, ಶ್ಯಾಮ್ ಸುಂದರ್, ಸೀಮಾಂಚಲ್ ಪಾತ್ರಗಳು, ಶಿವಶಂಕರ್, ಡಾ. ಸುರೇಶ್ ಹನಗವಾಡಿ, ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್, ಟಿ.ಟಿ. ಜಗನ್ನಾಥನ್ (ಮರಣೋತ್ತರ), ತಗಾ ರಾಮ್ ಭಿಲ್, ತರುಣ್ ಭಟ್ಟಾಚಾರ್ಯ, ಟೆಕಿ ಗುಬಿನ್,ತಿರುವರೂರು ಭಕ್ತವತ್ಸಲಂ, ತೃಪ್ತಿ ಮುಖರ್ಜಿ, ವೀಳಿನಾಥನ್ ಕಾಮಕೋಟಿ, ವೇಂಪತಿ ಕುಟುಂಬ ಶಾಸ್ತ್ರಿ, ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ಮರಣೋತ್ತರ), ಯುಮ್ನಮ್ ಜತ್ರಾ ಸಿಂಗ್ (ಮರಣೋತ್ತರ) ಅವರಿಗೆ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vastu Guide: ಮನೆಗೆ ಯಾವ ಬಣ್ಣದ ಶಿವಲಿಂಗ ಶ್ರೇಷ್ಠ? ಖರೀದಿಸುವ ಮುನ್ನ ತಪ್ಪದೇ ಈ ವಾಸ್ತು ನಿಯಮ ತಿಳಿಯಿರಿ – Kannada News | Black vs. White Shiva Linga at Home: Vastu Guide for Peace and Prosperity

ಕಪ್ಪು ಶಿವಲಿಂಗ ಉತ್ತಮವೇ ಅಥವಾ ಬಿಳಿImage Credit source: Ai generated

ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ಮತ್ತು ಶಿವಲಿಂಗ ಪೂಜೆಗೆ ಅತ್ಯಂತ ವಿಶೇಷವಾದ ಮಹತ್ವವಿದೆ. ಶಿವಲಿಂಗವನ್ನು ಬ್ರಹ್ಮಾಂಡ, ಅಗಾಧ ಶಕ್ತಿ ಮತ್ತು ಆಧ್ಯಾತ್ಮಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಮನೆಯ ದೇವರ ಕೋಣೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಬಯಸುತ್ತಾರೆ.

ಆದರೆ, ಮಾರುಕಟ್ಟೆಯಿಂದ ಶಿವಲಿಂಗವನ್ನು ಖರೀದಿಸುವಾಗ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುವ ದೊಡ್ಡ ಪ್ರಶ್ನೆಯೆಂದರೆ—ಮನೆಗೆ ಕಪ್ಪು ಶಿವಲಿಂಗ ಒಳ್ಳೆಯದೇ ಅಥವಾ ಬಿಳಿ ಶಿವಲಿಂಗವೇ? ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಎರಡೂ ಬಣ್ಣದ ಶಿವಲಿಂಗಗಳು ತಮ್ಮದೇ ಆದ ವಿಶಿಷ್ಟ ಪ್ರಭಾವ ಮತ್ತು ಮಹತ್ವವನ್ನು ಹೊಂದಿವೆ. ಮನೆಯಲ್ಲಿ ಸುಖ-ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸಬೇಕಾದರೆ, ಸರಿಯಾದ ನಿಯಮಗಳ ಅರಿವಿನೊಂದಿಗೆ ಶಿವಲಿಂಗವನ್ನು ಇಡುವುದು ಮುಖ್ಯವಾಗಿದೆ. ಮನೆಗೆ ಯಾವ ಶಿವಲಿಂಗವು ಉತ್ತಮ ಆಯ್ಕೆಯಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಪ್ಪು ಶಿವಲಿಂಗ:

ಕಪ್ಪು ಶಿವಲಿಂಗಗಳನ್ನು ಸಾಮಾನ್ಯವಾಗಿ ನರ್ಮದಾ ನದಿಯಲ್ಲಿ ಸಿಗುವ ವಿಶೇಷ ಕಲ್ಲುಗಳಿಂದ ತಯಾರಿಸಲಾಗುತ್ತದೆ. ಇದನ್ನು ನರ್ಮದೇಶ್ವರ ಶಿವಲಿಂಗ ಎಂದೂ ಕರೆಯುತ್ತಾರೆ. ಈ ಶಿವಲಿಂಗವನ್ನು ಶಕ್ತಿ, ತಪಸ್ಸು ಮತ್ತು ಗಾಂಭೀರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಪ್ಪು ಶಿವಲಿಂಗ ಇಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಮನೆಯ ಆಧ್ಯಾತ್ಮಿಕ ವಾತಾವರಣವನ್ನು ಬಲಪಡಿಸುತ್ತದೆ. ಮನಸ್ಸಿಗೆ ಸ್ಥಿರತೆಯನ್ನು ನೀಡುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಪ್ಪು ಶಿವಲಿಂಗ ಇಡುವ ಮುನ್ನ ಗಮನಿಸಬೇಕಾದ ಅಂಶ:

ಧಾರ್ಮಿಕ ವಿದ್ವಾಂಸರ ಪ್ರಕಾರ, ಕಪ್ಪು ಶಿವಲಿಂಗದ ಪೂಜೆ ಮತ್ತು ಆರೈಕೆಯಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾವುದೇ ನಿಯಮ ಉಲ್ಲಂಘನೆಯಾಗಬಾರದು ಎಂಬ ಕಾರಣಕ್ಕೆ, ಅನೇಕ ಜನರು ಕಪ್ಪು ಶಿವಲಿಂಗವನ್ನು ಮನೆಯಲ್ಲಿಡುವ ಬದಲು ದೇವಾಲಯಗಳಲ್ಲಿ ಪ್ರತಿಷ್ಠಾಪಿಸುವುದೇ ಹೆಚ್ಚು ಸೂಕ್ತವೆಂದು ಭಾವಿಸುತ್ತಾರೆ.

ಇದನ್ನೂ ಓದಿ: ಅಂಗೈಯಲ್ಲಿ ‘M’ ಗುರುತಿದ್ದರೆ ಅದೃಷ್ಟವೇ? ಹಸ್ತಸಾಮುದ್ರಿಕ ಶಾಸ್ತ್ರ ಹೇಳುವುದೇನು?

ಬಿಳಿ ಶಿವಲಿಂಗ:

ಬಿಳಿ ಶಿವಲಿಂಗಗಳನ್ನು ಸಾಮಾನ್ಯವಾಗಿ ಅಮೃತಶಿಲೆ (ಮಾರ್ಬಲ್) ಅಥವಾ ಬಿಳಿ ಬಣ್ಣದ ವಿಶೇಷ ಕಲ್ಲುಗಳಿಂದ ತಯಾರಿಸಲಾಗುತ್ತದೆ. ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಬಿಳಿ ಬಣ್ಣವು ಶಾಂತಿ, ಸೌಮ್ಯತೆ ಮತ್ತು ಅತ್ಯಂತ ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಮನೆಯಲ್ಲಿ ಬಿಳಿ ಶಿವಲಿಂಗ ಇಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಕುಟುಂಬದಲ್ಲಿ ಶಾಂತಿ ಮತ್ತು ಪರಸ್ಪರ ಸಾಮರಸ್ಯವನ್ನು ಹೆಚ್ಚಿಸಲು ಇದು ಅತ್ಯುತ್ತಮ ಎನ್ನಲಾಗುತ್ತದೆ. ಮನೆಯಲ್ಲಿರುವ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಲು ಬಿಳಿ ಶಿವಲಿಂಗ ಸಹಾಯ ಮಾಡುತ್ತದೆ. ವ್ಯವಹಾರ ಅಥವಾ ಉದ್ಯೋಗದಲ್ಲಿ ಪ್ರಗತಿ ಬಯಸುವವರಿಗೆ ಬಿಳಿ ಶಿವಲಿಂಗದ ಪೂಜೆ ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಕಪ್ಪು ಶಿವಲಿಂಗಕ್ಕೆ ಹೋಲಿಸಿದರೆ ಇದರ ಪೂಜಾ ನಿಯಮಗಳು ಸ್ವಲ್ಪ ಸೌಮ್ಯವಾಗಿದ್ದು, ಗೃಹಸ್ಥರು (ಸಂಸಾರಿಗಳು) ಮನೆಯಲ್ಲಿಟ್ಟು ಪೂಜಿಸಲು ಇದು ಹೆಚ್ಚು ಪ್ರಶಸ್ತವಾಗಿದೆ.

ಶಿವಲಿಂಗವನ್ನು ಖರೀದಿಸುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ವಾಸ್ತು ನಿಯಮಗಳು:

  • ಗಾತ್ರದ ನಿಯಮ (Size): ಮನೆಯ ದೇವರ ಕೋಣೆಯಲ್ಲಿಡುವ ಶಿವಲಿಂಗವು ಅತಿಯಾಗಿ ದೊಡ್ಡದಾಗಿರಬಾರದು. ವಾಸ್ತು ಪ್ರಕಾರ, ಮನೆಯಲ್ಲಿಡುವ ಶಿವಲಿಂಗದ ಗಾತ್ರವು ನಮ್ಮ ಹೆಬ್ಬೆರಳಿನ ಉದ್ದಕ್ಕಿಂತ (ಗರಿಷ್ಠ 2 ರಿಂದ 3 ಇಂಚು) ಹೆಚ್ಚಿರಬಾರದು. ದೊಡ್ಡ ಶಿವಲಿಂಗಗಳನ್ನು ಕೇವಲ ಸಾರ್ವಜನಿಕ ದೇವಸ್ಥಾನಗಳಲ್ಲೇ ಪ್ರತಿಷ್ಠಾಪಿಸಬೇಕು.
  • ಪ್ರಾಣ ಪ್ರತಿಷ್ಠಾಪನೆ: ಮನೆಯಲ್ಲಿಡುವ ಶಿವಲಿಂಗಕ್ಕೆ ಯಾವುದೇ ಭಾರಿ ಪ್ರಾಣ-ಪ್ರತಿಷ್ಠಾಪನೆಯ ಅಗತ್ಯವಿರುವುದಿಲ್ಲ. ಆದರೆ, ದಿನನಿತ್ಯದ ಜಲಾಭಿಷೇಕ ಮತ್ತು ಶುದ್ಧತೆ ಅತ್ಯಗತ್ಯ.
  • ಒಂದೇ ಶಿವಲಿಂಗ: ಮನೆಯ ದೇವರ ಕೋಣೆಯಲ್ಲಿ ಕೇವಲ ಒಂದು ಶಿವಲಿಂಗವನ್ನು ಮಾತ್ರ ಇಡಬೇಕು. ಒಂದಕ್ಕಿಂತ ಹೆಚ್ಚು ಶಿವಲಿಂಗಗಳನ್ನು ಒಟ್ಟಿಗೆ ಇಟ್ಟು ಪೂಜಿಸಬಾರದು.
  • ದಿಕ್ಕು (Direction): ಶಿವಲಿಂಗವನ್ನು ಇಡುವಾಗ ಅದರ ಜಲಧಾರೆ (ನೀರು ಹರಿದು ಹೋಗುವ ಭಾಗ) ಯಾವಾಗಲೂ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿರುವಂತೆ ಇಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪದ್ಮಶ್ರೀ’ ಪ್ರಶಸ್ತಿ ಸ್ವೀಕರಿಸಿದ ಹರ್ಮನ್‌ಪ್ರೀತ್ ಕೌರ್ – Kannada News | Harmanpreet Kaur receives Padma Shri Award

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೇ 25, 2026 ರಂದು ನಡೆದ ನಾಗರಿಕ ಹೂಡಿಕೆ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರ್ಮನ್‌ಪ್ರೀತ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಭಾರತೀಯ ಮಹಿಳಾ ಕ್ರಿಕೆಟ್‌ಗೆ ಅವರು ನೀಡಿದ ಅಪ್ರತಿಮ ಕೊಡುಗೆ ಮತ್ತು ಅವರ ನೇತೃತ್ವದಲ್ಲಿ ಭಾರತ ತಂಡ ಸಾಧಿಸಿದ ಐತಿಹಾಸಿಕ ಯಶಸ್ಸನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.

ಈ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಹರ್ಮನ್​ಪ್ರೀತ್ ಕೌರ್ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಟಿ20 ಸರಣಿಯು ಮೇ 28 ರಿಂದ ಶುರುವಾಗಲಿದ್ದು, ಈ ಸರಣಿಗಾಗಿ ಅವರು ಲಂಡನ್​ಗೆ ತೆರಳಿದ್ದಾರೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಈ ವಿಶ್ವಕಪ್ ಜೂನ್ 12 ರಿಂದ ಶುರುವಾಗಲಿದೆ.

 

Source link