Category Archives: Blog

Your blog category

ಟ್ರಂಪ್​ಗೆ ಒಂದಲ್ಲಾ ಎಂಟು ನೊಬೆಲ್ ಪುರಸ್ಕಾರಗಳು ಬೇಕಿತ್ತಂತೆ, ಅಮೆರಿಕ ಅಧ್ಯಕ್ಷ ಹೇಳಿದ್ದೇನು? – Kannada News | Trump’s Nobel Prize Claim: Why He Believes He Deserves Eight Awards

ಡೊನಾಲ್ಡ್​ ಟ್ರಂಪ್ Image Credit source: The Financial Express

ವಾಷಿಂಗ್ಟನ್, ಜನವರಿ 21: ಕಳೆದ ವರ್ಷ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಮ್ಮೆ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಎಂಟು ಯುದ್ಧಗಳನ್ನು ತಡೆಗಟ್ಟುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಆದ್ದರಿಂದ ಅವರು ಪ್ರತಿ ಯುದ್ಧಕ್ಕೆ ಒಂದರಂತೆ ಒಟ್ಟು ಎಂಟು ನೊಬೆಲ್ ಪುರಸ್ಕಾರಗಳನ್ನು ಪಡೆಯಬೇಕಾಗಿತ್ತು.

ನಾರ್ವೆ ಸರ್ಕಾರ ಉದ್ದೇಶಪೂರ್ವಕವಾಗಿ ತಮಗೆ ಪ್ರಶಸ್ತಿಯನ್ನು ನೀಡಿಲ್ಲ ಎಂದು ಟ್ರಂಪ್ ಆರೋಪಿಸಿದ್ದಾರೆ. ಆದಾಗ್ಯೂ, ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರೆ ಸರ್ಕಾರಕ್ಕೆ ನೊಬೆಲ್ ಪ್ರಶಸ್ತಿ ನೀಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರನ್ನು ಟ್ರಂಪ್ ಹೊಗಳಿದರು.

ಅವರು ತಮಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಸ್ತಾಂತರ ಮಾಡಿದರು, ಮಚಾದೊ ಅವರು ಪ್ರಶಸ್ತಿಗೆ ಅರ್ಹರು ಎಂದು ಟ್ರಂಪ್ ನಂಬಿದ್ದರು ಎಂದು ಹೇಳಿದರು. ಮಾರಿಯಾ ಮಾಡಿದ್ದಕ್ಕೆ ನನಗೆ ತುಂಬಾ ಗೌರವವಿದೆ, ನೊಬೆಲ್ ಪ್ರಶಸ್ತಿಯನ್ನು ನನಗೆ ನೀಡಬೇಕಿತ್ತು, ಅವಳಿಗೆ ಅಲ್ಲ ಎಂದು ಅವರು ಹೇಳಿದರು ಎಂದು ಟ್ರಂಪ್ ಹೇಳಿದರು.

ಮತ್ತಷ್ಟು ಓದಿ: ಶಾಂತಿ ಪುರಸ್ಕಾರ ಇಲ್ಲ, ಶಾಂತಿ ನನ್ನ ಜವಾಬ್ದಾರಿಯಲ್ಲ ಎನ್ನುತ್ತಾ ಗಾಜಾ ಶಾಂತಿ ಮಂಡಳಿ ತೆರೆದ ಟ್ರಂಪ್, 2 ದಿನಗಳಲ್ಲಿ ಕೊಟ್ಟ ಹೇಳಿಕೆಗಳೇನು?

ಏತನ್ಮಧ್ಯೆ, ಮಚಾದೊ ಅವರ ನಡೆಯನ್ನು ಅನುಸರಿಸಿ, ನೊಬೆಲ್ ಪ್ರತಿಷ್ಠಾನವು ನೊಬೆಲ್ ಪ್ರಶಸ್ತಿ ವಿಜೇತರು ಈ ಗೌರವವನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಪ್ರಶಸ್ತಿ ವಿಜೇತರು ಪ್ರಶಸ್ತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಮತ್ತು ಘೋಷಣೆಯ ನಂತರ ಅದನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಪ್ರತಿಷ್ಠಾನವು ಹೇಳಿಕೆ ನೀಡಿದೆ.

ಎಂಟು ಯುದ್ಧಗಳನ್ನು ತಡೆಗಟ್ಟಿದ್ದಕ್ಕಾಗಿ ನಿಮ್ಮ ದೇಶವು ನನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದ ಕಾರಣ, ಇನ್ನು ಮುಂದೆ ಶಾಂತಿಯ ಮೇಲೆ ಮಾತ್ರ ಗಮನಹರಿಸುವ ಯಾವುದೇ ಬಾಧ್ಯತೆಯಿಲ್ಲ. ಶಾಂತಿ ಯಾವಾಗಲೂ ನನ್ನ ಪ್ರಮುಖ ಆದ್ಯತೆಯಾಗಿರುತ್ತದೆ, ಆದರೆ ನಾನು ಈಗ ಅಮೆರಿಕಕ್ಕೆ ಯಾವುದು ಒಳ್ಳೆಯದು ಮತ್ತು ಸರಿಯಾದದ್ದೋ ಅದರ ಮೇಲೆ ಕೇಂದ್ರೀಕರಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಳಂಬವಾಗುತ್ತಿದೆ ‘ಜನ ನಾಯಗನ್’ ರಿಲೀಸ್; ಚುನಾವಣೆ ಘೋಷಣೆ ಆದರೆ ಸದ್ಯಕ್ಕಿಲ್ಲ ಬಿಡುಗಡೆ – Kannada News | Jana Nayagan Censor Controversy: Vijay Film Release Faces Delays and Court Battle

ದಳಪತಿ ವಿಜಯ್ ನಟನೆಯ, ಕೆವಿಎನ್ ನಿರ್ಮಾಣದ ‘ಜನ ನಾಯಗನ್’ (Jana Nayagan) ಚಿತ್ರದ ರಿಲೀಸ್ ದಿನಾಂಕ ಇನ್ನೂ ಅಧಿಕೃತವಾಗಿಲ್ಲ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಸಮಸ್ಯೆ ಆಗಿದೆ. ಸಿನಿಮಾಗೆ ‘ಯು/ಎ 16+’ ಸರ್ಟಿಫಿಕೇಟ್ ನೀಡಲು ನಿರ್ಧರಿಸಿದ್ದ ಸೆನ್ಸಾರ್ ಮಂಡಳಿ, ನಂತರ ಈ ಬಗ್ಗೆ ಅಪಸ್ವರ ತೆಗೆದಿತ್ತು. ಹೀಗಾಗಿ, ಸೆನ್ಸಾರ್ ಪತ್ರವನ್ನು ನೀಡದೇ ಸತಾಯಿಸುತ್ತಿದೆ. ಈ ವಿಷಯದಲ್ಲಿ ಕೆವಿಎನ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್​​ನಲ್ಲಿಯೂ ಸಿನಿಮಾಗೆ ಹಿನ್ನಡೆ ಆಗುತ್ತಿದ್ದು, ರಿಲೀಸ್ ದಿನಾಂಕ ಇನ್ನೂ ಸ್ಪಷ್ಟವಾಗುತ್ತಿಲ್ಲ.

ಮದ್ರಾಸ್ ಹೈಕೋರ್ಟ್​​ನ ಸಿನಿಮಾಗೆ ‘ಯುಎ’ 16+ ಸರ್ಟಿಫಿಕೇಟ್ ನೀಡಲು ಆದೇಶಿಸಿತ್ತು. ನಂತರ ಸಂಜೆ ವೇಳೆಗೆ ತೀರ್ಪನ್ನು ಬದಲಿಸಿದ್ದ ಕೋರ್ಟ್, ತನ್ನದೇ ಆದೇಶಕ್ಕೆ ತಡೆ ನೀಡಿತ್ತು. ಈಗ ಮದ್ರಾಸ್ ಹೈಕೋರ್ಟ್​​ನ ಡಿವಿಷನ್ ಬೆಂಚ್ ಮಂಗಳವಾರ (ಜನವರಿ 20) ಈ ಪ್ರಕರಣದ ವಿಚಾರಣೆ ನಡೆಸಿದೆ. ಆದರೆ ಯಾವುದೇ ತೀರ್ಪು ಹೊರ ಬಿದ್ದಿಲ್ಲ.

ಸೆನ್ಸಾರ್ ಮಂಡಳಿ ಪರವಾಗಿ ಹಾಜರಾದ ವಕೀಲರು ಸಿನಿಮಾ ತಂಡದ್ದೇ ತಪ್ಪಿದೆ ಎಂಬರ್ಥದಲ್ಲಿ ವಾದಿಸಿದರು. ಜನವರಿ 6ರಂದು ಸಿನಿಮಾನ ಪುನರ್​ವಿಮರ್ಶೆ ಸಮಿತಿಗೆ ಕಳಿಸುವುದಾಗಿ ತಂಡಕ್ಕೆ ತಿಳಿಸಲಾಯಿತು. ಆದರೆ, ತಂಡದವರು ಇದನ್ನು ಪ್ರಶ್ನೆ ಮಾಡಿರಲಿಲ್ಲ ಎಂದು ವಕೀಲರು ವಾದಿಸಿದರು. ‘ಓರ್ವ ನೀಡಿದ ದೂರಿನಿಂದ ಪ್ರಕರಣವನ್ನು ಇಷ್ಟರ ಮಟ್ಟಿಗೆ ಎಳೆದುಕೊಂಡು ಹೋಗಲಾಗುತ್ತಿದೆ. ದೂರುದಾರ ಪ್ರಶ್ನೆ ಮಾಡಿದ ದೃಶ್ಯವನ್ನು ಈಗಾಗಲೇ ತೆಗೆದುಹಾಕಿದ್ದೇವೆ’ ಎಂದು ಕೋರ್ಟ್​​ಗೆ ತಂಡ ಮಾಹಿತಿ ನೀಡಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​​ನಲ್ಲಿ ‘ಜನ ನಾಯಗನ್’ಗೆ ಹಿನ್ನಡೆ, ಚೆಂಡು ಮತ್ತೆ ಹೈಕೋರ್ಟ್ ಅಂಗಳಕ್ಕೆ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿ 5ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಸಿನಿಮಾಗೆ ಪ್ರಮಾಣಪತ್ರ ಸಿಕ್ಕಿದ್ದರೆ ಜನವರಿ 26ರಂದು ಚಿತ್ರ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ದಳಪತಿ ವಿಜಯ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದಕ್ಕಾಗಿ, ಪಕ್ಷ ಸ್ಥಾಪನೆ ಮಾಡಿದ್ದಾರೆ. ಒಂದೊಮ್ಮೆ ತಮಿಳುನಾಡು ಚುನಾವಣಾ ದಿನಾಂಕ ಘೋಷಣೆ ಆದರೆ, ತಂಡಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಆಗ ರಿಲೀಸ್ ಮತ್ತಷ್ಟು ಮುಂದಕ್ಕೆ ಹೋಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:44 am, Wed, 21 January 26

Source link

ಚಿನ್ನ ಸ್ಮಗ್ಲಿಂಗ್ ಮಾತ್ರವಲ್ಲ, ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ ಕಳ್ಳಸಾಗಣೆಯಾಗುತ್ತಿದೆ ಡೀಸೆಲ್! ಬೃಹತ್ ಜಾಲ ಪತ್ತೆ – Kannada News | Diesel Smuggling from Gulf to Karnataka: Belagavi Police Bust Massive Petroleum Smuggling Racket

ಬೆಳಗಾವಿ, ಜನವರಿ 21: ಚಿನ್ನ ಕಳ್ಳಸಾಗಣೆ (Gold smuggling) ಮಾದರಿಯಲ್ಲೇ ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ (Karnataka) ಡೀಸೆಲ್ ಕಳ್ಳಸಾಗಣೆ (Diesel smuggling) ಮಾಡುತ್ತಿರುವ ಭಾರೀ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟ ಉಂಟುಮಾಡುತ್ತಿದ್ದ ಈ ಅಕ್ರಮವನ್ನು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್‌ ಮೇಲೆ ಮಾಳಮಾರುತಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾಗ ಡೀಸೆಲ್ ಕಳ್ಳಸಾಗಣೆ ಬೆಳಕಿಗೆ ಬಂದಿದೆ.

ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ಅವರ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಯಾವುದೇ ದಾಖಲೆಯಿಲ್ಲದೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿರುವುದು ಪತ್ತೆಯಾಗಿದೆ.

17 ಲಕ್ಷ ರೂ. ಮೌಲ್ಯದ ಡೀಸೆಲ್ ಜಪ್ತಿ

ದಾಳಿಯ ವೇಳೆ ಸುಮಾರು 17 ಲಕ್ಷ ರೂ. ಮೌಲ್ಯದ 17 ಸಾವಿರ ಲೀಟರ್ ಡೀಸೆಲ್ ಹಾಗೂ ಟ್ಯಾಂಕರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತನಿಖೆ ವೇಳೆ, ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತ ಎಂಬಾತನ ಪಾತ್ರ ಬೆಳಕಿಗೆ ಬಂದಿದ್ದು, ಇದು ದೊಡ್ಡ ಮಟ್ಟದ ಸ್ಮಗ್ಲಿಂಗ್ ಜಾಲವಾಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಲ್ಫ್ ದೇಶಗಳಿಂದ ಅಕ್ರಮವಾಗಿ ತೈಲ ಉತ್ಪನ್ನಗಳನ್ನು ಭಾರತಕ್ಕೆ ತರಲಾಗುತ್ತಿದ್ದು, ಈ ಜಾಲದಲ್ಲಿ ಮಹಾರಾಷ್ಟ್ರ ಹಾಗೂ ರಾಜಸ್ಥಾನದ ಖದೀಮರು ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇಷ್ಟು ವರ್ಷಗಳ ಕಾಲ ಈ ತೈಲ ಕಳ್ಳಸಾಗಣೆ ದಂಧೆ ನಡೆಯುತ್ತಿದ್ದರೂ ಯಾರಿಗೂ ಗೊತ್ತಾಗಿರಲಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.

ಗಲ್ಫ್ ದೇಶಗಳಿಂದ ಹಡಗುಗಳ ಮೂಲಕ ಡೀಸೆಲ್ ಕಳ್ಳಸಾಗಣೆ

ಮೂಲಗಳ ಮಾಹಿತಿ ಪ್ರಕಾರ, ಗಲ್ಫ್ ದೇಶಗಳಿಂದ ಹಡಗುಗಳ ಮೂಲಕ ತೈಲ ನಿಗಮಗಳಿಗೆ ಪೆಟ್ರೋಲಿಯಂ ಉತ್ಪನ್ನಗಳು ಸಾಗಾಟವಾಗುತ್ತಿತ್ತು. ಕೆಲ ಹಡಗು ಮಾಲೀಕರು ಈ ಅಕ್ರಮ ಜಾಲದೊಂದಿಗೆ ಶಾಮೀಲಾಗಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಗಲ್ಫ್ ದೇಶಗಳ ತೈಲ ಉತ್ಪಾದಕರೊಂದಿಗೆ ಸ್ಮಗ್ಲರ್‌ಗಳು ನೇರ ಸಂಪರ್ಕ ಹೊಂದಿರುವ ಅನುಮಾನವೂ ವ್ಯಕ್ತವಾಗಿದೆ.

ಅರ್ಧ ದರಕ್ಕೆ ಡೀಸೆಲ್ ಮಾರಾಟ!

ಅಕ್ರಮವಾಗಿ ತರಲಾಗುತ್ತಿರುವ ಈ ಡೀಸೆಲ್ ಅನ್ನು ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಡೀಸೆಲ್ ಬಂಕ್‌ಗಳಿಗೆ ಸರಬರಾಜು ಮಾಡಿರುವ ಸಾಧ್ಯತೆಯಿದೆ. ತನಿಖೆಯಿಂದಷ್ಟೇ ಈ ತೈಲ ಕಳ್ಳರ ಕರಾಮತ್ತುಗಳು ಹೊರಬೀಳಬೇಕಿದೆ.

ಇದನ್ನೂ ಓದಿ: ರನ್ಯಾ ಚಿನ್ನ ಸ್ಮಗ್ಲಿಂಗ್ ಪ್ರಕರಣ: ಸಚಿವರ ನಂಟಿನ ರಹಸ್ಯದ ಬಗ್ಗೆ ಯತ್ನಾಳ್ ಸ್ಫೋಟಕ ಸುಳಿವು

ಸದ್ಯ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸಲು ನಿರ್ಧರಿಸಿದ್ದು, ವಿಶೇಷ ತಂಡಗಳನ್ನು ಮುಂಬೈ ಹಾಗೂ ರಾಜಸ್ಥಾನಕ್ಕೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಪ್ರಕರಣದ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರೋಬ್ಬರಿ ೩೭ ಸಿಕ್ಸ್… ಫಿನ್ ಅಲೆನ್ ಆರ್ಭಟ – Kannada News | Finn Allen creates new record in BBL 15

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ (BBL 15) ನ್ಯೂಝಿಲೆಂಡ್ ಬ್ಯಾಟರ್ ಫಿನ್ ಅಲೆನ್ (Finn Allen) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಸಿಕ್ಸರ್ ಗಳ ಸುರಿಮಳೆಯೊಂದಿಗೆ ಎಂಬುದು ವಿಶೇಷ.

Source link

ಮೈಸೂರು ರೇಷ್ಮೆ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಜಿಐ ಟ್ಯಾಗ್ ಇರುವ ಸೀರೆ ಖರೀದಿಗೆ ಸೂರ್ಯೋದಯಕ್ಕೂ ಮುನ್ನ ಮಹಿಳೆಯರ ಸರದಿ ಸಾಲು! – Kannada News | Mysore Silk Saree Craze: Women Queue for Hours at KSIC Showrooms to buy GI tagged sarees

ಜಿಐ ಟ್ಯಾಗ್ ಹೊಂದಿರುವ ಸೀರೆ ಖರೀದಿಗೆ ಸೂರ್ಯೋದಯಕ್ಕೂ ಮುನ್ನ ಮಹಿಳೆಯರ ಸರತಿ ಸಾಲು!

ಬೆಂಗಳೂರು, ಜನವರಿ 21: ಸೀರೆ ಎಂದರೆ ಸಾಕು ಮಹಿಳೆಯರು ಮುಗಿಬೀಳುತ್ತಾರೆ. ಅಂತೆಯೇ ಅಪಾರ ಬೇಡಿಕೆಯುಳ್ಳ ಶುದ್ಧ ಮೈಸೂರು ರೇಷ್ಮೆ ಸೀರೆಗಳನ್ನು (Mysore Silk Saree) ಖರೀದಿಸಲು ನಗರದ ರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್‌ (KSIC) ಶೋರೂಮ್‌ಗಳ ಮುಂದೆ ಮಹಿಳೆಯರು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಶೋ ರೂಮ್ ತೆರೆಯುವ ಸಮಯ 10 ಗಂಟೆಯಾದರೂ ಬೆಳಗಿನ 4 ಗಂಟೆಯಿಂದಲೇ ಹಾಜರಾಗುತ್ತಿರುವ ಮಹಿಳೆಯರು, ಟೋಕನ್ ತೆಗದುಕೊಂಡು ಕಾದು ಕೂರುತ್ತಿದ್ದಾರೆ.

ಬೆಳಗಿನ ಜಾವವೇ ಹೋಗಿ ನಿಂತರೂ ಒಬ್ಬರಿಗೆ ಒಂದೇ ಸೀರೆ?

23,000 ರೂ. ರಿಂದ 2.5 ಲಕ್ಷ ರೂ.ನವರೆಗೆ ಬೆಲೆ ಹೊಂದಿರುವ ಮೈಸೂರು ರೇಷ್ಮೆ ಸೀರೆಗಳು ದುಬಾರಿಯಾದರೂ ಅವುಗಳ ಗುಣಮಟ್ಟ, ಶುದ್ಧತೆ ಮತ್ತು ಪಾರಂಪರಿಕ ಮೌಲ್ಯಕ್ಕಾಗಿ ಹೆಚ್ಚು ಬೇಡಿಕೆ ಹೊಂದಿವೆ. ಜಿಐ ಟ್ಯಾಗ್ (Geographical Indication Tag) ಪಡೆದಿರುವ ಮೈಸೂರು ರೇಷ್ಮೆಯನ್ನು ಉತ್ಪಾದಿಸುವ ಏಕೈಕ ಅಧಿಕೃತ ಸಂಸ್ಥೆಯಾದ KSIC ನಲ್ಲಿ 2025ರಲ್ಲಿ ಸರಬರಾಜು ಕೊರತೆ ಮುಂದುವರಿದಿದ್ದು, 2026ರಲ್ಲಿಯೂ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ.

ಸಂಸ್ಥೆಯಲ್ಲಿನ ನಿಪುಣ ನೇಕಾರರು ಮತ್ತು ಕೈಗಾರರು ಸಂಖ್ಯೆ ಕಡಿಮೆ ಇರುವುದರ ಜೊತೆಗೆ ಒಬ್ಬ ನೇಕಾರನಿಗೆ ಕನಿಷ್ಠ ಮೂಲಭೂತ ತರಬೇತಿಗೇ 6–7 ತಿಂಗಳು ವ್ಯಯಿಸಬೇಕಾಗುತ್ತಿದೆ. ಇದರಿಂದ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಮದುವೆ , ವರಲಕ್ಷ್ಮೀ ಪೂಜೆ, ಗೌರಿ ಗಣೇಶ ಹಬ್ಬ ಮತ್ತು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಸೀರೆಗಳ ಬೇಡಿಕೆ ಮತ್ತಷ್ಟು ಹೆಚ್ಚಾಗಿರುವುದರಿಂದ ಶೋರೂಮ್‌ಗಳಲ್ಲಿ ಸೀರೆಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗುತ್ತಿವೆ. ಹೀಗಾಗಿ ಬೆಳಗಿನ ಜಾವವೇ ಶೋ ರೂಮ್ ಮುಂದೆ ಹೋಗಿ ನಿಂತರೂ ಒಬ್ಬ ಗ್ರಾಹಕನಿಗೆ ಒಂದೇ ಸೀರೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ ಮೈಸೂರು ರೇಷ್ಮೆ ಸೀರೆಯ ಇತಿಹಾಸವೇನು? ಮೈಸೂರಿಗೆ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಪರಿಚಯಿಸಿದ್ದು ಯಾರು?

ಈ ಬಗ್ಗೆ ಬೆಂಗಳೂರಿಗರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಶೋ ರೂಮ್ ಮುಂದೆ ಮಹಿಳೆಯರ ಸರದಿ ಸಾಲಿನ ದೃಶ್ಯವನ್ನು ಹಂಚಿಕೊಂಡಿದ್ದು, ವೀಡಿಯೋ ಇಲ್ಲಿದೆ.

ಪರಂಪರೆಯ ಸಂಕೇತವಾಗಿರುವ ಮೈಸೂರು ಸಿಲ್ಕ್ ಸ್ಯಾರಿ

KSIC ಸೀರೆಗಳಿಗೆ ವಿಶಿಷ್ಟ ಕೋಡ್ ಹಾಗೂ ಹೋಲೋಗ್ರಾಂ ಅಳವಡಿಸಲಾಗಿದ್ದು, ಶೇ100 ಶುದ್ಧ ಚಿನ್ನದ ಜರಿ ಬಳಸಲಾಗುತ್ತದೆ. ಖಾಸಗಿ ವಲಯದಲ್ಲಿ ನಕಲಿ ಹಾಗೂ ಕೃತಕ ರೇಷ್ಮೆ ಮಾರಾಟದ ಆರೋಪಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, KSIC ಉತ್ಪನ್ನಗಳ ಶುದ್ಧತೆ ಗ್ರಾಹಕರ ಭರವಸೆಯನ್ನು ಇನ್ನೂ ಉಳಿಸಿಕೊಂಡಿದೆ. ಮೈಸೂರು ರೇಷ್ಮೆ ಸೀರೆ ಇಂದಿಗೂ ಮಹಿಳೆಯರ ಮನದಲ್ಲಿ ಪರಂಪರೆಯ ಸಂಕೇತವಾಗಿ ಉಳಿದಿದೆ. ಹೀಗಾಗಿ ಬೆಲೆಯೆಷ್ಟೇ ಇದ್ದರೂ ಸೀರೆಯನ್ನು ಖರೀದಿಸಲು ಇಂದಿಗೂ ಮಹಿಳೆಯರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

Source link

ಅಮಿತಾಭ್ ಬಚ್ಚನ್ ಮನೆಯಲ್ಲಿದೆ ಚಿನ್ನದ ಟಾಯ್ಲೆಟ್ – Kannada News | Amitabh Bachchan’s Golden Toilet: Vijay Varma’s Viral Selfie Sparks Luxury Debate

ಭಾರತದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಚಿನ್ನದ ಟಾಯ್ಲೆಟ್ ಇರುವ ವಿಷಯ ಇತ್ತೀಚೆಗೆ ಸುದ್ದಿ ಆಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರ ಮನೆಯಲ್ಲೂ ಇದೇ ರೀತಿಯ ಟಾಯ್ಲೆಟ್ ಇದೆಯಂತೆ. ವೈರಲ್ ಆಗಿರುವ ಫೋಟೋ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆಯನ್ನು ಸೃಷ್ಟಿಸಿದೆ. ಈ ಫೋಟೋದಲ್ಲಿ ಬಿಗ್ ಬಿ ಅವರ ಮನೆಯ ಸ್ನಾನಗೃಹದಲ್ಲಿರುವ ಚಿನ್ನದ ಕಮೋಡ್ ಸ್ಪಷ್ಟವಾಗಿ ಗೋಚರಿಸುತ್ತದೆ. ಫೋಟೋವನ್ನು ನೋಡಿದ ನಂತರ ಅನೇಕರು ಅಚ್ಚರಿ ಹೊರಹಾಕಿದ್ದಾರೆ.

ನಟ ವಿಜಯ್ ವರ್ಮಾ ಅವರ ಥ್ರೋಬ್ಯಾಕ್ ಪೋಸ್ಟ್‌ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ಚರ್ಚೆ ಆರಂಭವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ಟ್ರೆಂಡಿಂಗ್ ಆಗಿರುವ ‘2026 ಈಸ್ ದಿ ನ್ಯೂ 2016’ ಎಂಬ ಟ್ರೆಂಡ್‌ನ ಭಾಗವಾಗಿದ್ದಾರೆ ವಿಜಯ್. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2016 ರ ನೆನಪುಗಳನ್ನು ಮರಳಿ ತರುವ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವಿಜಯ್ ಅವರ ವೃತ್ತಿಜೀವನದ ಪ್ರಮುಖ ಕ್ಷಣಗಳನ್ನು ತೋರಿಸುತ್ತದೆ. ಒಂದು ವಿಶೇಷ ಸೆಲ್ಫಿ ಎಲ್ಲರ ಗಮನ ಸೆಳೆಯುತ್ತಿದೆ.

ವಿಜಯ್ ವರ್ಮಾ ಹಂಚಿಕೊಂಡ ಈ ಸೆಲ್ಫಿ ನೇರವಾಗಿ ಅಮಿತಾಭ್ ಬಚ್ಚನ್ ಅವರ ಮನೆಯ ಸ್ನಾನಗೃಹದಲ್ಲಿ ತೆಗೆದುಕೊಳ್ಳಲಾಗಿದೆ. ಈ ಫೋಟೋದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಅಲ್ಲಿ ಕಂಡುಬರುವ ಚಿನ್ನದ ಬಣ್ಣದ ಶೌಚಾಲಯ.
ಕೆಲವರು, ‘ವಾವ್! ಗೋಲ್ಡನ್ ಟಾಯ್ಲೆಟ್!’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ವಿಜಯ್ ಇಷ್ಟೊಂದು ಐಷಾರಾಮಿ ಟಾಯ್ಲೆಟ್ ನೋಡಿದ್ದು ಇದೇ ಮೊದಲು ಮತ್ತು ತಕ್ಷಣ ಸೆಲ್ಫಿ ತೆಗೆದುಕೊಂಡಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಸಹೋದರ ಏನು ಮಾಡ್ತಿದ್ದಾರೆ ಗೊತ್ತಾ?

ಈ ಫೋಟೋ ಜೊತೆಗೆ ವಿಜಯ್ ವರ್ಮಾ ಭಾವನಾತ್ಮಕ ಶೀರ್ಷಿಕೆಯನ್ನೂ ಬರೆದಿದ್ದಾರೆ. ಅದರಲ್ಲಿ ಅವರು, ‘2016 ನನಗೆ ವಿಶೇಷ ವರ್ಷವಾಗಿತ್ತು. ‘ಪಿಂಕ್’ ನಂತಹ ಚಿತ್ರಗಳಲ್ಲಿ ಬಿಗ್ ಬಿ ಮತ್ತು ಶೂಜಿತ್ ದಾ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದೆ. ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಚಿನ್ನದ ಶೌಚಾಲಯದೊಂದಿಗೆ ಸೆಲ್ಫಿ ತೆಗೆದುಕೊಂಡೆ. ಸಂಜಯ್ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರನ್ನು ಭೇಟಿಯಾದೆ. ನನ್ನ ಇಷ್ಟದ ಇರ್ಫಾನ್ ಖಾನ್ ಅವರನ್ನು ಭೇಟಿಯಾದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಸೂರತ್​ನಲ್ಲಿ ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್ – Kannada News | Before the First Drop: Rs 21 Crore Surat Water Tank Crashes Ahead of Launch

ಸೂರತ್, ಜನವರಿ 21: ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದಿದೆ. ಸೂರತ್ ಜಿಲ್ಲೆಯ 33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಹೊಂದಿರುವ ಯೋಜನೆಗೆ ದೊಡ್ಡ ಹಿನ್ನಡೆಯಾಗಿದೆ. ಈ ಘಟನೆ ಭ್ರಷ್ಟಾಚಾರ ವಿವಾದಕ್ಕೆ ನಾಂದಿ ಹಾಡಿದ್ದು, ನೀರಿನ ಟ್ಯಾಂಕ್ ನಿರ್ಮಿಸಲು ಬಳಸಿದ ನಿರ್ಮಾಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಜನವರಿ 19 ರಂದು ಪ್ರಾಯೋಗಿಕ ಚಾಲನೆಯ ಸಮಯದಲ್ಲಿ 11 ಲಕ್ಷ ಲೀಟರ್ ಸಾಮರ್ಥ್ಯದ 15 ಮೀಟರ್ ಎತ್ತರದ ನೀರಿನ ಟ್ಯಾಂಕ್ ಕುಸಿದು ಬಿದ್ದಿದ್ದು, ಆ ಪ್ರದೇಶದಲ್ಲಿ ಭೀತಿ ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.ಅಧಿಕಾರಿಗಳ ಪ್ರಕಾರ, ಸುಮಾರು ಮಧ್ಯಾಹ್ನ 12 ಗಂಟೆಗೆ ಪರೀಕ್ಷೆಗಾಗಿ ಸುಮಾರು 9 ಲಕ್ಷ ಲೀಟರ್ ನೀರನ್ನು ಟ್ಯಾಂಕ್‌ಗೆ ತುಂಬಿಸಲಾಯಿತು, ಆಗ ಇದ್ದಕ್ಕಿದ್ದಂತೆ ಟ್ಯಾಂಕ್ ಕುಸಿದಿದೆ. ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶ್ರೇಯಸ್ ಅಯ್ಯರ್​ಗೆ ಇಲ್ಲ ಚಾನ್ಸ್: 3ನೇ ಕ್ರಮಾಂಕಕ್ಕೆ ಎಡಗೈ ದಾಂಡಿಗ ಫಿಕ್ಸ್

Source link

ಬಿಗ್ ಬಾಸ್ ಮುಗೀತಿದ್ದಂತೆ ಸುದೀಪ್​​ಗೆ ಶಾಕ್; ವಂಚನೆ ಆರೋಪದಡಿ ದೂರು ದಾಖಲು

ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12 ಅನ್ನು ಕಿಚ್ಚ ಸುದೀಪ್ ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಶಾಕ್ ಎದುರಾಗಿದೆ. ಕಿಚ್ಚ ಸುದೀಪ್ ನಿರ್ಮಾಣದ ‘ವಾರಸ್ದಾರ’ ಧಾರಾವಾಹಿ ವಿಷಯವಾಗಿ ನಡೆದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಕಿಚ್ಚ ಸುದೀಪ್, ಚಕ್ರವರ್ತಿ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಹಣ ಕೊಡೋದಾಗಿ ನಂಬಿಸಿ ಕೇಸ್ ಹಿಂಪಡೆದುಕೊಳ್ಳುವಂತೆ ಸುದೀಪ್-ಚಕ್ರವರ್ತಿ ಚಂದ್ರಚೂಡ್ ಮಾಡಿದ್ದರಂತೆ. ಆ ಬಳಿಕ ಹಣ ಕೊಡದೆ ವಂಚಿಸಿದ್ದಾರೆ ಎನ್ನಲಾಗಿದೆ.

10 ವರ್ಷಗಳ ಹಿಂದಿನ ಪ್ರಕರಣ

2016ರಲ್ಲಿ ‘ವಾರಸ್ದಾರ’ ಧಾರಾವಾಹಿ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ವಾರಸ್ದಾರ’ ಧಾರಾವಾಹಿ ಶೂಟಿಂಗ್​ಗೆ ದೀಪಕ್ ಮಯೂರ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಧಾರಾವಾಹಿ ಶೂಟಿಂಗ್ ವೇಳೆ ತಮ್ಮ ಕಾಫಿ ತೋಟಕ್ಕೆ ಹಾನಿ ಆಗಿದೆ, ತೋಟದಲ್ಲಿದ್ದ ಮರ, ಗಿಡಗಳನ್ನು ಕಡಿಯಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಲ್ಲದೆ ಮನೆಗೆ ಬಾಡಿಗೆ ನೀಡುವುದಾಗಿ ಹೇಳಿದ್ದ ಸುದೀಪ್ ಬಾಡಿಗೆ ಹಣದಲ್ಲಿ ಸಹ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮನೆ ಮಾಲೀಕ ದೀಪಕ್ ಆರೋಪಿಸಿದ್ದರು. ಎರಡು ವರ್ಷದ ಬಳಿಕ ದೀಪಕ್ ಕೋರ್ಟ್ ಮೆಟ್ಟಿಲೇರಿದರು.

ಹಣ ನೀಡೋ ಭರವಸೆ

95 ಲಕ್ಷ ಹಣ ಪರಿಹಾರ ನೀಡುವಂತೆ ದೀಪಕ್ ಕೇಸ್ ಹಾಕಿದ್ದರು. 2023ರಲ್ಲಿ ಎನ್ ಕುಮಾರ್ ಎಂಬುವವರು ದೀಪಕ್​​ಗೆ ಕರೆ ಮಾಡಿ ನಮಗೂ ಹಣ ನೀಡದೆ ಸುದೀಪ್ ಅವರಿಂದ ವಂಚನೆ ಆಗಿದೆ ಎಂದಿದ್ದರು. ಆ ಬಳಿಕ ದೀಪಕ್ ಚಕ್ರವರ್ತಿ ಚಂದ್ರಚೂಡ್​ಗೆ ಕರೆ ಮಾಡಿದ್ದರು. ಈ ವೇಳೆ ಚೆನ್ನೈಗೆ ಬರುವಂತೆ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರಂತೆ.

ಕೇಸ್ ವಾಪಸ್ ಪಡೆದರೆ 60 ಲಕ್ಷ ನೀಡುವುದಾಗಿ ಸುದೀಪ್ ಭರವಸೆ ನೀಡಿದ್ದರು ಎಂಬುದು ದೀಪಕ್ ಮಾತು. ಕೇಸ್ ವಾಪಸ್ ಪಡೆಯುವ ಮುನ್ನ ಚಕ್ರವರ್ತಿ 10 ಲಕ್ಷದ‌ ರೂಪಾಯಿ ಚೆಕ್ ನೀಡಿದ್ದರಂತೆ. ಈ ವಿಶ್ವಾಸದಲ್ಲಿ ದೀಪಕ್ ಕೇಸ್ ಹಿಂಪಡೆದಿದ್ದರು.

ಇದನ್ನೂ ಓದಿ: ಬಿಗ್ ಬಾಸ್: ಯೂಟ್ಯೂಬ್ ಹಣದಿಂದಲೇ ಮುಂಬೈನಲ್ಲಿ ಮನೆ ಖರೀದಿಸಿದ ರಕ್ಷಿತಾ ಶೆಟ್ಟಿ

ಆದರೆ, ಕೇಸ್ ಹಿಂಪಡೆಯುತ್ತಿದ್ದಂತೆ ಚಕ್ರವರ್ತಿ ಅವರು ದೀಪಕ್ ನಂಬರ್​​ನ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಸುದೀಪ್ ಪರವಾಗಿ ದೀಪಕ್ ಮಾತನಾಡಿರುವ ವಿಡಿಯೋಗಳು ಚಕ್ರವರ್ತಿ ಬಳಿ ಇವೆಯಂತೆ. ಇದನ್ನು ಒತ್ತಾಯಪೂರ್ವಕವಾಗಿ ಪಡೆದಿರುವ ಆರೋಪ ದೀಪಕ್​ ಮಾಡಿದ್ದಾರೆ. ಈಗ ಬೆಂಗಳೂರು ಕಮಿಷನ್ ಕಚೇರಿಯಲ್ಲಿ ದೀಪಕ್ ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Sunita Williams: ತಿಂಗಳುಗಟ್ಟಲೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿ ವಾಪಸಾಗಿದ್ದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ನಿವೃತ್ತಿ – Kannada News | From Spacewalks to Sign Off: Sunita Williams Ends a 27Year NASA Journey After Historic ISS Ordeal

ಕೇಪ್ ಕೆನವೆರಲ್, ಜನವರಿ 21: ಗಗನಯಾತ್ರಿಯಾಗಿ ಯಶಸ್ಸು ಕಂಡಿದ್ದ ಸುನೀತಾ ವಿಲಿಯಮ್ಸ್(Sunita Williams) ನಾಸಾದಿಂದ ನಿವೃತ್ತಿ ಹೊಂದಿದ್ದಾರೆ. ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೆಲಸದ ನಿಮಿತ್ತ ಹೋಗಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​, ಯಾರೂ ನಿರೀಕ್ಷೆ ಮಾಡದಂತೆ ಅಲ್ಲಿಯೇ ಸಿಲುಕಬೇಕಾಯಿತು. ಹೋಗಿದ್ದು ಕೇವಲ ಒಂದು ವಾರದ ಕೆಲಸಕ್ಕಾಗಿ ಆದರೆ, ಒಂದೇ ಒಂದು ಮಿಸ್ಟೇಕ್​ ಅವರಿಬ್ಬರನ್ನು 9 ತಿಂಗಳು ಅಲ್ಲಿಯೇ ಸಿಲುಕಿಸಿತ್ತು. ಡಿಸೆಂಬರ್ 31ರಂದು ಸಿನೀತಾ ವಿಲಿಯಮ್ಸ್​ ನಿವೃತ್ತಿ ಹೊಂದಿದ್ದಾರೆ.

ಅವರು ಹೋಗಿದ್ದ ಸ್ಟಾರ್​ಲೈನರ್​ ಕ್ಯಾಪ್ಸುಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಾಪಸ್​ ಬರಲು ಸಾಧ್ಯವಾಗಲಿಲ್ಲ.​ ಸಾಕಷ್ಟು ಬಾರಿ ಪ್ರಯತ್ನಿಸಿದ್ರೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇತ್ತು. ಇತ್ತ ಭೂಮಿಗೆ ಬರುವ ಆಸೆ ಅನೇಕ ಬಾರಿ ನಿರಾಸೆಯಾಗಿ, ಗಗನಯಾತ್ರಿಗಳ ನಿರೀಕ್ಷೆ ಹೆಚ್ಚಾಗುತ್ತಲೇ ಇತ್ತು. ಕೊನೆಗೂ ಭೂಮಿಗೆ ಬಂದಿಳಿದಿದ್ದರು.

ಸುನಿತಾ ವಿಲಿಯಮ್ಸ್​ ಭಾರತಕ್ಕೆ ಭೇಟಿ ನೀಡಿದ್ದಾರೆ. ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಅವರು 286 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರಬೇಕಾಯಿತು. ಭಾರತದ ಜನರು ಸಹ ಅವರ ಸುರಕ್ಷಿತ ಮರಳುವಿಕೆಗಾಗಿ ಪ್ರಾರ್ಥಿಸುತ್ತಿದ್ದರು. ಈ ಬಗ್ಗೆ, ಭಾರತದ ಜನರಿಗೆ ಧನ್ಯವಾದ ಹೇಳಲು ಅವರು ಇಲ್ಲಿಗೆ ಬಂದಿರುವುದಾಗಿ ಹೇಳಿದರು.

ಮತ್ತಷ್ಟು ಓದಿ: ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್, ಕ್ಯಾಪ್ಸುಲ್​​ನಿಂದ ಹೊರಬರುತ್ತಿರುವ ವಿಡಿಯೋ

ಸುನೀತಾ ವಿಲಿಯಮ್ಸ್ ಭಾರತೀಯ ಮೂಲದ ಒಬ್ಬ ಅಮೆರಿಕನ್ ಗಗನಯಾತ್ರಿ, ಅವರು ಬಾಹ್ಯಾಕಾಶ ಪ್ರಯಾಣದಲ್ಲಿ ತಮ್ಮ ಹೊಸ ಸಾಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸೆಪ್ಟೆಂಬರ್ 19, 1965 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಭಾರತದ ಗುಜರಾತ್‌ನ ನರಶಸ್ತ್ರಚಿಕಿತ್ಸಕ ದೀಪಕ್ ಪಾಂಡ್ಯ ಮತ್ತು ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಗಳಿಗೆ ಜನಿಸಿದರು.

ವಿಲಿಯಮ್ಸ್​ ಶಿಕ್ಷಣ
ವಿಲಿಯಮ್ಸ್ ಮ್ಯಾಸಚೂಸೆಟ್ಸ್‌ನ ನೀಡ್‌ಹ್ಯಾಮ್‌ನಲ್ಲಿ ಬೆಳೆದರು ಮತ್ತು ನೀಡ್‌ಹ್ಯಾಮ್ ಅನ್ನು ತಮ್ಮ ಮನೆಯಾಗಿ ನೋಡುತ್ತಾರೆ. ಅವರು ನೀಡ್‌ಹ್ಯಾಮ್ ಹೈಸ್ಕೂಲ್‌ನಲ್ಲಿ ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಮಾಡಿದರು ಮತ್ತು 1983 ರಲ್ಲಿ ಅಲ್ಲಿಂದ ಪದವಿ ಪಡೆದರು. ಅವರು 1987 ರಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಭೌತ ವಿಜ್ಞಾನದಲ್ಲಿ ವಿಜ್ಞಾನ ಪದವಿ ಪಡೆದರು. 1995 ರಲ್ಲಿ, ಅವರು ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನೌಕಾಪಡೆ ಮತ್ತು ನಾಸಾದಲ್ಲಿ ವೃತ್ತಿಜೀವನ
ವಿಲಿಯಮ್ಸ್ ಯುಎಸ್ ನೌಕಾಪಡೆಯ ಅಧಿಕಾರಿಯಾಗಿ ತಮ್ಮ ಕೆಲಸವನ್ನು ಆರಂಭಿಸಿದರು, 1987 ರಲ್ಲಿ ನಿಯೋಜನೆಗೊಂಡರು. ಅವರು 1989 ರ ಹೊತ್ತಿಗೆ ಹೆಲಿಕಾಪ್ಟರ್ ಪೈಲಟ್ ಆದರು ಮತ್ತು 1992 ರಲ್ಲಿ ಚಂಡಮಾರುತ ಆಂಡ್ರ್ಯೂ ನಂತರ ವಿಪತ್ತು ಪರಿಹಾರ ಕಾರ್ಯಾಚರಣೆಗಳಂತಹ ವಿವಿಧ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು.

ಅವರು 30 ವರ್ಷಗಳ ವೃತ್ತಿಜೀವನದಲ್ಲಿ 30ಕ್ಕೂ ಹೆಚ್ಚು ವಿವಿಧ ರೀತಿಯ ವಿಮಾನಗಳಲ್ಲಿ 3,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ಪೈಲಟ್ ಆಗಿ ವ್ಯಾಪಕ ಅನುಭವ ಹೊಂದಿದ್ದಾರೆ. ನೌಕಾಪಡೆಯಿಂದ ನಿವೃತ್ತರಾದ ನಂತರ, ಸುನೀತಾ 1998 ಜೂನ್ ತಿಂಗಳಲ್ಲಿ ನಾಸಾ ಗಗನಯಾತ್ರಿಯಾಗಿ ಆಯ್ಕೆಯಾದರು.

ವಿಲಿಯಮ್ಸ್ 1998 ರಲ್ಲಿ ನಾಸಾಗೆ ಸೇರಿದರು, ದೀರ್ಘ ಮತ್ತು ವಿಶಿಷ್ಟ ಗಗನಯಾತ್ರಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2006 ರಲ್ಲಿ ತಮ್ಮ ಮೊದಲ ಬಾಹ್ಯಾಕಾಶ ನಡಿಗೆಯನ್ನು ನಡೆಸಿದ ಎಕ್ಸ್‌ಪೆಡಿಶನ್ಸ್ 14 ಮತ್ತು 15 ಸೇರಿದಂತೆ ಕೆಲವು ಹೆಗ್ಗುರುತು ಕಾರ್ಯಾಚರಣೆಗಳಲ್ಲಿ ಅವಿಭಾಜ್ಯ ಅಂಗವಾಗಿದ್ದಾರೆ. ಮುಖ್ಯವಾಗಿ, ಏಪ್ರಿಲ್ 16, 2007 ರಂದು ಅವರು ಬಾಹ್ಯಾಕಾಶದಲ್ಲಿ ಮ್ಯಾರಥಾನ್ ಓಡಿದ ಮೊದಲಿಗರು, ಐಎಸ್‌ಎಸ್ ಟ್ರೆಡ್‌ಮಿಲ್‌ನಲ್ಲಿ 4 ಗಂಟೆ 24 ನಿಮಿಷಗಳಲ್ಲಿ ಬೋಸ್ಟನ್ ಮ್ಯಾರಥಾನ್ ಅನ್ನು ಓಡಿದರು.

ಇತ್ತೀಚಿನ ಮಿಷನ್
ವಿಲಿಯಮ್ಸ್ ಜೂನ್ 5, 2024 ರಂದು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ಪರೀಕ್ಷಾ ಹಾರಾಟದಲ್ಲಿ ಅವರ ಮತ್ತೊಂದು ಪಯಣ ಪ್ರಾರಂಭವಾಯಿತು.ಹೀಲಿಯಂ ಸೋರಿಕೆ ಮತ್ತು ಅಸಮರ್ಪಕ ಪ್ರೊಪಲ್ಷನ್ ವ್ಯವಸ್ಥೆಗಳಂತಹ ಬಾಹ್ಯಾಕಾಶ ನೌಕೆಯ ಸಮಸ್ಯೆಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಅವರ ಸಮಯವನ್ನು ಮೂಲ ಎಂಟು ದಿನಗಳಿಂದ ಒಂಬತ್ತು ತಿಂಗಳುಗಳಿಗಿಂತ ಹೆಚ್ಚು ಕಾಲ ವಿಸ್ತರಿಸಿತು.

ಮಾರ್ಚ್ 18, 2025 ರಂದು, ವಿಲಿಯಮ್ಸ್ ಮತ್ತು ವಿಲ್ಮೋರ್ ISS ನಿಂದ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹೊರಟರು, ಭೂಮಿಗೆ ತಮ್ಮ 17 ಗಂಟೆಗಳ ಪ್ರಯಾಣವನ್ನು ಪ್ರಾರಂಭಿಸಿದರು. ಬಾಹ್ಯಾಕಾಶ ನೌಕೆ ಮಾರ್ಚ್ 19, 2025 ರಂದು ಭಾರತೀಯ ಕಾಲಮಾನ ಬೆಳಗ್ಗೆ 3.27 ಕ್ಕೆ ಅಟ್ಲಾಂಟಿಕ್ ಮಹಾಸಾಗರದಲ್ಲಿ ಅಪ್ಪಳಿಸಿತು. ವಿಲಿಯಮ್ಸ್ ಅವರೊಂದಿಗೆ ಸಹ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ಮನೆಗೆ ಪ್ರಯಾಣ ಬೆಳೆಸಿದರು.

ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ದೀರ್ಘಕಾಲ ಇರುವುದು, ಗಗನಯಾತ್ರಿಗಳು ದೀರ್ಘಕಾಲದವರೆಗೆ ಸೂಕ್ಷ್ಮ ಗುರುತ್ವಾಕರ್ಷಣೆಗೆ ಒಡ್ಡಿಕೊಂಡಾಗ ಉಂಟಾಗುವ ತೊಡಕುಗಳನ್ನು ಒತ್ತಿಹೇಳುತ್ತದೆ. ಮೂಳೆ ನಷ್ಟ, ದೃಷ್ಟಿ ಅಡಚಣೆಗಳು ಮತ್ತು ವಿಕಿರಣಕ್ಕೆ ಹೆಚ್ಚಿನ ಒಡ್ಡಿಕೊಳ್ಳುವಿಕೆ ಇವೆಲ್ಲವೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಇದೆಷ್ಟೇ ಅಪಾಯಗಳಿದ್ದರೂ ಕೂಡ ಎಲ್ಲವನ್ನೂ ಮೀರಿ ಹೋಗಿದ್ದಾರೆ.

ಕಲ್ಪನಾ ಚಾವ್ಲಾ ತಾಯಿ ಭೇಟಿ

ಭಾರತಕ್ಕೆ ಆಗಮಿಸಿರುವ ಸುನೀತಾ ವಿಲಿಯಮ್ಸ್​, ಕಲ್ಪನಾ ಚಾವ್ಲಾ ಅವರ ತಾಯಿಯನ್ನು ಭೇಟಿಯಾಗಿದ್ದಾರೆ. ಫೆಬ್ರವರಿ 2003 ರಲ್ಲಿ ಭೂಮಿಗೆ ಹಿಂದಿರುಗುವಾಗ ಬಾಹ್ಯಾಕಾಶ ನೌಕೆ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಛಿದ್ರವಾಗಿ ಸಾವನ್ನಪ್ಪಿದ ಏಳು ಸಿಬ್ಬಂದಿಗಳಲ್ಲಿ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಅವರು ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮೂಲದ ಮಹಿಳೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link