CNG Price Hike: ಪೆಟ್ರೋಲ್, ಡೀಸೆಲ್​ ಆಯ್ತು ಈಗ ಸಿಎನ್​ಜಿ ದರ ಏರಿಕೆ! ವಾಹನ ಸವಾರರಿಗೆ ಶಾಕ್​ – Kannada News | CNG Price Hike: After Petrol and Diesel, CNG Prices Increased Due to Global Crude Turmoil and Supply Disruption

ನವದೆಹಲಿ, ಮೇ 26: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಾಲ್ಕು ಬಾರಿ ಏರಿಕೆಯಾದ ನಂತರ, ಈಗ ಸಿಎನ್‌ಜಿ (CNG) ದರವೂ ಹೆಚ್ಚಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 83 ರೂಪಾಯಿ 9 ಪೈಸೆಗೆ ತಲುಪಿದೆ. ಇದು ಸಿಎನ್‌ಜಿ ಬಳಸುವ ವಾಹನ ಮಾಲೀಕರಿಗೆ ಭಾರಿ ಆಘಾತ ನೀಡಿದೆ. ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಾಲ್ಕು ಬಾರಿ ಏರಿಕೆ ಕಂಡಿದ್ದವು. ಅದರ ಬೆನ್ನಲ್ಲೇ, ಸೋಮವಾರ ಮತ್ತೆ ಪ್ರತಿ ಲೀಟರ್‌ಗೆ 2 ರೂಪಾಯಿ 83 ಪೈಸೆ ಹೆಚ್ಚಳವಾಗಿತ್ತು. ಇದೀಗ ಸಿಎನ್‌ಜಿ ದರ ಏರಿಕೆಯಾಗಿರುವುದು ಇಂಧನ ಬಳಕೆದಾರರಿಗೆ ಮತ್ತೊಂದು ಹೊರೆಯಾಗಿದೆ. ಈ ದರ ಏರಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯ ಏರಿಳಿತಗಳು ಪ್ರಮುಖ ಕಾರಣವಾಗಿವೆ. ಇದರ ಜೊತೆಗೆ, ಯುದ್ಧದ ಕಾರ್ಮೋಡದಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯಗಳು ಉಂಟಾಗಿರುವುದು ಕೂಡ ದರ ಹೆಚ್ಚಳಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *