Category Archives: Blog

Your blog category

Magha Masa: ಮಾಘ ಮಾಸದಲ್ಲಿ ನದಿ ಸ್ನಾನದ ಮಹತ್ವ; ಆಧ್ಯಾತ್ಮಿಕ ಲಾಭ ಮತ್ತು ಆಚರಣೆಯ ವಿಧಾನ – Kannada News | The Spiritual Significance of River Bathing in Magha Masa: Rituals and Benefits

2026ರ ಮಾಘ ಮಾಸವು ಜನವರಿ 19ರ ಸೋಮವಾರದಿಂದ ಪ್ರಾರಂಭವಾಗಿದೆ. ಈ ಮಾಸದಲ್ಲಿ ಮಾಡುವ ಸ್ನಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಏಕೆಂದರೆ ಮಾಘ ಸ್ನಾನವು ಕೇವಲ ದೇಹವನ್ನು ಶುದ್ಧಗೊಳಿಸುವುದಲ್ಲದೆ, ಮನಸ್ಸನ್ನು ಶುದ್ಧಿಪಡಿಸಿ, ಕರ್ಮಗಳನ್ನು ತೊಳೆಯುತ್ತದೆ ಎಂದು ನಂಬಲಾಗಿದೆ. ಮಾಘ ಸ್ನಾನಕ್ಕಾಗಿ ಪವಿತ್ರ ನದಿ ಅಥವಾ ಸಮುದ್ರಗಳಿಗೆ ಹೋಗಬೇಕೇ ಎಂಬ ಪ್ರಶ್ನೆ ಅನೇಕರಿಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಗಂಗಾ ನದಿ, ಪ್ರಯಾಗ, ಹರಿದ್ವಾರ, ವಾರಣಾಸಿ, ನಾಸಿಕ್, ಉಜ್ಜೈನಿ ಮತ್ತು ಕಾವೇರಿ ಮುಂತಾದ ಪವಿತ್ರ ನದಿಗಳಲ್ಲಿ ಮಾಘ ಮಾಸದಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ಮಾಸವು ಸೂರ್ಯಾರಾಧನೆಗೆ ವಿಶೇಷವಾಗಿದ್ದು, ಸೂರ್ಯನಮಸ್ಕಾರಕ್ಕೆ ಹೆಚ್ಚಿನ ಮಹತ್ವವಿದೆ. “ನಮಸ್ಕಾರ ಪ್ರಿಯೋ ಭಾನು” ಎಂಬ ನುಡಿಯಂತೆ ಸೂರ್ಯಾರಾಧನೆಯು ಆರೋಗ್ಯವನ್ನು ಕರುಣಿಸುತ್ತದೆ. ಪ್ರತಿಯೊಬ್ಬರ ಆಸೆಗಳಾದ ಮನೆ ಕಟ್ಟುವಿಕೆ, ಸುಖಮಯ ವೈವಾಹಿಕ ಜೀವನ, ಉತ್ತಮ ಆರೋಗ್ಯ, ವೃತ್ತಿ ಬೆಳವಣಿಗೆ ಮತ್ತು ಮಾನಸಿಕ ಶಾಂತಿಯ ಈಡೇರಿಕೆಗೆ ಮನಸ್ಸು ಶುದ್ಧವಾಗಿರಬೇಕು, ಭಗವಂತನ ಕೃಪೆ ಇರಬೇಕು ಮತ್ತು ಸಮಾಜದ ಸ್ವಾಸ್ಥ್ಯ ಚೆನ್ನಾಗಿರಬೇಕು. ಮಾಘ ಮಾಸವು ಇಂತಹ ಆಸೆಗಳ ಈಡೇರಿಕೆಗೆ ಸೂಕ್ತವಾದ ಕಾಲ.

ಈ ಮಾಸದಲ್ಲಿ ಶಿವ ಮತ್ತು ಕೇಶವರ (ವಿಷ್ಣು) ಅವಿರ್ಭಾವವಿರುತ್ತದೆ. “ಶಿವರೂಪಾಯ ವಿಷ್ಣುವೇ, ವಿಷ್ಣುರೂಪಾಯ ಶಿವ” ಎಂಬ ನಂಬಿಕೆಯಂತೆ ಇಬ್ಬರೂ ಒಂದೇ ಎಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವ ಅಥವಾ ವಿಷ್ಣುವನ್ನು ಪೂಜಿಸುವುದರಿಂದ ಇಬ್ಬರ ಅನುಗ್ರಹವೂ ಲಭಿಸುತ್ತದೆ. ಇದರ ಜೊತೆಗೆ, ತ್ರಿಶಕ್ತಿಗಳಾದ ದುರ್ಗಾದೇವಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯರ ಕೃಪೆಗೂ ಪಾತ್ರರಾಗಲು ಮಾಘ ಮಾಸ ಅತ್ಯಂತ ಶ್ರೇಷ್ಠ. ದೀಪಾರಾಧನೆ ಮತ್ತು ದಾನಗಳಿಗೆ ಈ ಮಾಸದಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಅನ್ನದಾನ, ಉಪ್ಪಿನ ದಾನ, ಬೆಲ್ಲದ ದಾನ ಮತ್ತು ಸಿಹಿ ಪದಾರ್ಥಗಳ ದಾನ ಮಾಡುವುದು ಪುಣ್ಯಕರ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಮಾಘ ಮಾಸದಲ್ಲಿ ಹಲವು ಪವಿತ್ರ ದಿನಗಳು ಬರುತ್ತವೆ. ಚೌತಿಯಂದು ಉಮಾ ಮತ್ತು ಗಣೇಶ ಪೂಜೆ, ಪಂಚಮಿಯಂದು ವಸಂತ ಪಂಚಮಿ ಅಥವಾ ಶ್ರೀ ಪಂಚಮಿ ಆಚರಣೆ (ಸರಸ್ವತಿ ಪೂಜೆ, ವಿದ್ಯಾರ್ಜನೆ, ಲಕ್ಷ್ಮಿ ಅನುಗ್ರಹಕ್ಕೆ) ಪ್ರಮುಖ. ಶುದ್ಧ ಸಪ್ತಮಿಯನ್ನು ಸೂರ್ಯ ಭಗವಾನ್‌ನ ಜನ್ಮದಿನ, ಅಂದರೆ ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಅಷ್ಟಮಿಯನ್ನು ಭೀಷ್ಮಾಷ್ಟಮಿ ಎಂದು, ನವಮಿಯನ್ನು ನಂದಿನಿ ಪೂಜೆಗೆ, ದಶಮಿ ಮತ್ತು ಏಕಾದಶಿಗಳಿಗೂ ಈ ಮಾಸದಲ್ಲಿ ಹೆಚ್ಚಿನ ಮಹತ್ವವಿದೆ.

ಪವಿತ್ರ ಸ್ನಾನ ಮಾಡುವಾಗ “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಎಂಬ ಮಂತ್ರವನ್ನು ಸ್ಮರಿಸುತ್ತಾ ಸಪ್ತ ನದಿಗಳ ಸ್ಮರಣೆ ಮಾಡಬೇಕು. ಬ್ರಾಹ್ಮೀಕ ಮುಹೂರ್ತದಲ್ಲಿ ಸೂರ್ಯಾಭಿಮುಖವಾಗಿ, ಪೂರ್ವ ದಿಕ್ಕಿಗೆ ಕುಳಿತು ಓಂ ನಮೋ ನಾರಾಯಣಾಯ ಎಂಬ ವಿಷ್ಣು ಮಂತ್ರವನ್ನು ಜಪಿಸುವುದರಿಂದ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಷ್ಟ್ರಗೀತೆಗೆ ಅಗೌರವ, ಈ ವರ್ಷವೂ ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ ರವಿ – Kannada News | Tamil Nadu Governor RN Ravi walks out of Assembly again over National Anthem disrespect

ಚೆನ್ನೈ, ಜನವರಿ 20: ತಮಿಳುನಾಡಿನಲ್ಲಿ ವಿಧಾನಸಭಾ ಅಧಿವೇಶನ(Assembly Session) ಶುರುವಾಗಿದೆ. ತಮಿಳು ಗೀತೆಯೊಂದಿಗೆ ಅಧಿವೇಶನ ಆರಂಭಿಸಿದ್ದಾರೆ. ರಾಷ್ಟ್ರಗೀತೆಗೆ ಗೌರವ ಕೊಟ್ಟಿಲ್ಲ ಎನ್ನುವ ಬೇಸರದಲ್ಲಿ ಈ ವರ್ಷವೂ ಕೂಡ ತಮಿಳುನಾಡು ರಾಜ್ಯಪಾಲ್ ಆರ್​ಎನ್​ ರವಿ ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದಿದ್ದಾರೆ. ನನ್ನ ಮೈಕ್  ಸ್ವಿಚ್ ಆಫ್ ಮಾಡಲಾಗಿತ್ತು, ನನ್ನನ್ನು ಅವಮಾನಿಸಲಾಗಿದೆ ಮತ್ತು ನನಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ಹೇಳಿ ಅವರು ಹೊರನಡೆದಿದ್ದಾರೆ.

ಕಳೆದ ವರ್ಷವೂ ಕೂಡ ಇದೇ ರೀತಿಯಾಗಿತ್ತು. ತಮಿಳು ಗೀತೆಯ ನಂತರ ರಾಷ್ಟ್ರಗೀತೆ ಹಾಡಬೇಕೆಂದು ರಾಜ್ಯಪಾಲರು ಒತ್ತಾಯಿಸಿದರು ಮತ್ತು ಸ್ಪೀಕರ್ ಅಪ್ಪಾವು ನಿರಾಕರಿಸಿದಾಗ, ರಾಜ್ಯಪಾಲರು ಆರಂಭಿಕ ಭಾಷಣವನ್ನು ಓದದೆಯೇ ಅಲ್ಲಿಂದ ಹೋಗಿದ್ದಾರೆ.

2024, 2025 ರಲ್ಲೂ ರಾಜ್ಯಪಾಲರು ವಿಧಾನಸಭೆಯನ್ನುದ್ದೇಶಿಸಿ ಭಾಷಣ ಮಾಡಲಿಲ್ಲ. ಕಳೆದ ವರ್ಷ, ತಮ್ಮ ಭಾಷಣದ ಆರಂಭದಲ್ಲಿ ರಾಷ್ಟ್ರಗೀತೆ ಹಾಡದ ಕಾರಣ ಅವರು ವಿಧಾನಸಭೆಯಿಂದ ಹೊರನಡೆದಿದ್ದರು. ತಮಿಳುನಾಡಿನ ಲೋಕ ಭವನವು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, ರಾಜ್ಯಪಾಲ ಆರ್.ಎನ್. ರವಿ ಅವರು ಉದ್ಘಾಟನಾ ಭಾಷಣ ಮಾಡುವ ಮೊದಲು ವಿಧಾನಸಭೆಯಿಂದ ಹೊರನಡೆದ ಕಾರಣಗಳನ್ನು ತಿಳಿಸಿತ್ತು.

ಮತ್ತಷ್ಟು ಓದಿ: ಅಧಿವೇಶನಕ್ಕೂ ಮುನ್ನ ರಾಷ್ಟ್ರಗೀತೆಗೆ ತಮಿಳುನಾಡು ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ ರವಿ

ರಾಜ್ಯಪಾಲರ ಮೈಕ್ ಅನ್ನು ಪದೇ ಪದೇ ಆಫ್ ಮಾಡಲಾಯಿತು, ಮತ್ತು ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ದಲಿತರ ಮೇಲಿನ ದೌರ್ಜನ್ಯಗಳು ಮತ್ತು ದಲಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ತೀವ್ರವಾಗಿ ಹೆಚ್ಚುತ್ತಿವೆ. ಆದಾಗ್ಯೂ, ಭಾಷಣದಲ್ಲಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರಾಷ್ಟ್ರಗೀತೆಯನ್ನು ಮತ್ತೊಮ್ಮೆ ಅವಮಾನಿಸಲಾಗಿದೆ ಮತ್ತು ಮೂಲಭೂತ ಸಾಂವಿಧಾನಿಕ ಕರ್ತವ್ಯವನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮಿಳುನಾಡು ಸ್ಪೀಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ. ತಮಿಳುನಾಡು ವಿಧಾನಸಭೆಯ ಸ್ಪೀಕರ್ ಎಂ. ಅಪ್ಪಾವು ಅವರಿಗೆ ಹುಟ್ಟುಹಬ್ಬದ ಶುಭಾಶಯ, ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಬಿರ್ಲಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದ ಮಾನ ಗುಜರಾತ್​ನಲ್ಲಿ ಹರಾಜಿಗಿಟ್ಟ ಆರ್​ಟಿಒ ಅಧಿಕಾರಿಗಳು! ಕಾಸು ಕೊಟ್ರೆ ವಾಹನ ತಪಾಸಣೆಯೇ ಮಾಡದೆ ಕೊಡ್ತಾರೆ ಎಫ್​ಸಿ – Kannada News | Karnataka RTO Scam Exposed: Fitness Certificates Issued Without Inspection to Gujarat, Maharashtra Vehicles

ಬೆಂಗಳೂರು, ಜನವರಿ 20: ಕರ್ನಾಟಕದ (Karnataka) ಆರ್‌ಟಿಒ ಕಚೇರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಇದೀಗ ಅನುಮಾನ ಬಲವಾಗಿದೆ. ಅರ್ಹವಲ್ಲದಿದ್ದರೂ ಅಕ್ರಮವಾಗಿ ಗುಜರಾತ್ (Gujrat) ಹಾಗೂ ಮಹಾರಾಷ್ಟ್ರದ ವಾಹನಗಳಿಗೆ ಬೆಂಗಳೂರಿನ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಕರ್ನಾಟಕ ಮುಜುಗರಕ್ಕೀಡಾಗುವಂತಾಗಿದೆ. ನಿಯಮಾನುಸಾರ, ಯಾವುದೇ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಮೊದಲು ಆರ್‌ಟಿಒ ಅಧಿಕಾರಿಗಳು ವಾಹನವನ್ನು ಖುದ್ದಾಗಿ ಪರಿಶೀಲಿಸಬೇಕು. ವಾಹನ ರಸ್ತೆ ಮೇಲೆ ಸಂಚರಿಸಲು ಯೋಗ್ಯವಾಗಿದೆಯೇ, ತುರ್ತು ಸಂದರ್ಭಗಳಿಗೆ ಅಗತ್ಯವಾದ ಸುರಕ್ಷತಾ ಸಾಧನಗಳು ಇದೆಯೇ ಎಂಬುದನ್ನು ತಪಾಸಣೆ ಮಾಡುವುದು ಕಡ್ಡಾಯ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಗುಜರಾತ್ ರಾಜ್ಯದಲ್ಲೇ ಇದ್ದ ಬಸ್‌ಗಳಿಗೆ ಬೆಂಗಳೂರಿನಲ್ಲಿ ಎಫ್​ಸಿ ನೀಡಲಾಗಿದೆ ಎಂಬುದು ಬಹಿರಂಗವಾಗಿದೆ.

ಗುಜರಾತ್​ನ 50 ಶಾಲಾ ಬಸ್‌ಗಳಿಗೆ ಅಕ್ರಮವಾಗಿ ಎಫ್​ಸಿ

ಗುಜರಾತ್‌ನಲ್ಲಿ ಇದ್ದ ಸುಮಾರು 50 ಶಾಲಾ ಬಸ್‌ಗಳಿಗೆ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿದೆ. ಈ ಅಕ್ರಮವನ್ನು ಗುಜರಾತ್ ರಾಜ್ಯದ ಸಾರಿಗೆ ಅಧಿಕಾರಿಗಳೇ ಬಯಲಿಗೆಳೆದಿದ್ದಾರೆ. ವಾಹನಗಳು ನಮ್ಮ ರಾಜ್ಯದಲ್ಲಿದ್ದಾಗ, ಕರ್ನಾಟಕದಲ್ಲಿ ಎಫ್​ಸಿ ಹೇಗೆ ನೀಡಲಾಯಿತುಎಂದು ಪ್ರಶ್ನಿಸಿ, ಸಾಕ್ಷ್ಯಾಧಾರಗಳೊಂದಿಗೆ ಕರ್ನಾಟಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಟೋಲ್ ದಾಖಲೆಗಳೇ ಸಾಕ್ಷಿ

2025ರ ಅಕ್ಟೋಬರ್ 8ರಂದು ಒಂದೇ ದಿನ 20 ಗುಜರಾತ್ ವಾಹನಗಳಿಗೆ ‘ಖುದ್ದು ಪರಿಶೀಲನೆ ನಡೆಸಲಾಗಿದೆ’ ಎಂದು ದಾಖಲೆಗಳಲ್ಲಿ ಉಲ್ಲೇಖಿಸಿ ಕೋರಮಂಗಲ ಆರ್​ಟಿಒ ಎಫ್​ಸಿ ನೀಡಿದೆ. ಆದರೆ ಆ ದಿನವೇ, ಆ ವಾಹನಗಳು ಗುಜರಾತ್‌ನ ವಿವಿಧ ಟೋಲ್ ಗೇಟ್‌ಗಳಲ್ಲಿ ಸಂಚರಿಸಿದ್ದವು ಎಂಬುದಕ್ಕೆ ಸಂಬಂಧಿಸಿದ ಟೋಲ್ ದಾಖಲೆಗಳನ್ನು ಗುಜರಾತ್ ಅಧಿಕಾರಿಗಳು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಗುಜರಾತ್ ಸರ್ಕಾರವು ಆ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ರದ್ದುಪಡಿಸಿದೆ.

ಮಹಾರಾಷ್ಟ್ರದ 400 ವಾಹನಗಳಿಗೂ ನೀಡಲಾಗಿತ್ತು ಎಫ್​ಸಿ

ಗುಜರಾತ್​ ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ಸುಮಾರು 400 ವಾಹನಗಳಿಗೂ ಇದೇ ರೀತಿ ಅಕ್ರಮವಾಗಿ ಎಫ್​ಸಿ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ಬಸ್​ಗಳಲ್ಲೂ ವಿಮಾನದ ಗಗನಸಖಿಯರ ರೀತಿ ಸಂದೇಶ! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್​ಗಳಿಗೆ ಹೊಸ ನಿಯಮ

ಇದರೊಂದಿಗೆ, ದೇಶದಲ್ಲಿ ಇತ್ತೀಚೆಗೆ ನಡೆದ ಸಾಲು ಸಾಲು ಬಸ್ ಅಗ್ನಿ ದುರಂತಗಳಿಗೆ ಸಾರಿಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣವೇ ಎಂಬ ಪ್ರಶ್ನೆ ಈಗ ಮೂಡಿದೆ. ಯಾವುದೇ ತಪಾಸಣೆ ಇಲ್ಲದೇ ನೀಡಿದ ಫಿಟ್ನೆಸ್ ಸರ್ಟಿಫಿಕೇಟ್‌ಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದಿಟ್ಟಿವೆಯೇ ಎಂಬುದರ ಕುರಿತು ಗಂಭೀರ ತನಿಖೆ ಅಗತ್ಯವಾಗಿದೆ ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಗುಜರಾತ್ ಅಧಿಕಾರಿಗಳಿಂದ ಸಿಕ್ಕ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ, ಕೋರಮಂಗಲ ಆರ್‌ಟಿಒ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಜೋರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಟ್ರೇಲಿಯಾದ ಬೀಚ್​ನಲ್ಲಿ ಕೆನಡಾ ಯುವತಿಯ ರಕ್ತಸಿಕ್ತ ಶವ ಪತ್ತೆ, ಡಿಂಗೊ ದಾಳಿ ಶಂಕೆ – Kannada News | Canadian Woman Found Dead on Australia Beach: Dingo Attack Suspected

ಮೆಲ್ಬೋರ್ನ್​, ಜನವರಿ 20: ಆಸ್ಟ್ರೇಲಿಯಾದ ಪ್ರಸಿದ್ಧ ಕಡಲತೀರದಲ್ಲಿ 19 ವರ್ಷದ ಕೆನಡಾ ಯುವತಿಯ ರಕ್ತಸಿಕ್ತವಾದ ದೇಹ ಪತ್ತೆಯಾಗಿದ್ದು, ಡಿಂಗೊ( Dingo)( ಆಸ್ಟ್ರೇಲಿಯಾದ ಕಾಡು ನಾಯಿ) ದಾಳಿಗೆ ಬಲಿಯಾಗಿದ್ದಾರಾ ಎನ್ನುವ ಆತಂಕ ಉಂಟಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಕಗರಿಯಾ ಪೂರ್ವ ಕರಾವಳಿಯಲ್ಲಿರುವ ಕಡಲತೀರದಲ್ಲಿ ಮಹೇನೋ ಹಡಗಿನ ಬಳಿ ಸೋಮವಾರ ಬೆಳಗ್ಗೆ ಯುವತಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಆ ಯುವತಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈಜಲು ಹೋಗುತ್ತಿರುವುದಾಗಿ ತನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ತಿಳಿಸಿದ್ದಳು. ಸುಮಾರು 95 ನಿಮಿಷಗಳ ನಂತರ ಬೆಳಗ್ಗೆ 6.35 ಕ್ಕೆ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ತಿಳಿಸಲಾಯಿತು. ವರದಿಗಳ ಪ್ರಕಾರ, ತಮ್ಮ ಎಸ್‌ಯುವಿಯಲ್ಲಿ ಬೀಚ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಯುವಕರು ಶವವನ್ನು ಸುತ್ತುವರೆದಿರುವ ಸುಮಾರು 10 ಡಿಂಗೊಗಳನ್ನು ನೋಡಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ಪಾಲ್ ಅಲ್ಗಿ, ಆಕೆಯ ದೇಹದ ಮೇಲೆ ಡಿಂಗೊಗಳು ಹಲ್ಲೆ ನಡೆಸಿರುವ ಉಗುರಿನ ಗುರುತುಗಳಿವೆ. ಆದರೆ ಸಾವಿನ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ಅವರಿಗಿನ್ನು ಸಾಧ್ಯವಾಗಿಲ್ಲ.

ಮತ್ತಷ್ಟು ಓದಿ: ಪ್ರತಿ ದಿನ 100 ಜೀವಂತ ಕೀಟಗಳನ್ನು ತಿನ್ನುವ ವ್ಯಕ್ತಿ, ಕಾರಣವೇನು ಗೊತ್ತೇ?

ಯುವತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಯೇ ಅಥವಾ ಡಿಂಗೊ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಯೇ ಎಂಬುದನ್ನು ನಾವು ಇನ್ನೂ ದೃಢೀಕರಿಸಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬುಧವಾರ ಹೊರಬರುವ ನಿರೀಕ್ಷೆಯಿದೆ. ಮಹಿಳೆ ಕಳೆದ ಆರು ವಾರಗಳಿಂದ ಕಗರಿ ಬೀಚ್‌ನಲ್ಲಿರುವ ಪ್ರವಾಸಿ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಕೆನಡಾದ ಸ್ನೇಹಿತೆಯೂ ಅಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ನಂತರ ಆಕೆಯ ಸ್ನೇಹಿತೆ ತೀವ್ರ ಆಘಾತಕ್ಕೊಳಗಾಗಿದ್ದು, ಕೌನ್ಸೆಲಿಂಗ್‌ಗೆ ಒಳಗಾಗುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನಡಾದಲ್ಲಿರುವ ಮಹಿಳೆಯ ಕುಟುಂಬವನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಕಗೇರಿ ವಿಶ್ವದ ಅತಿದೊಡ್ಡ ಮರಳು ದ್ವೀಪ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಸುಮಾರು 200 ಡಿಂಗೊಗಳು ಇಲ್ಲಿವೆ. COVID-19 ಸಾಂಕ್ರಾಮಿಕ ರೋಗದಿಂದ ದ್ವೀಪದಲ್ಲಿ ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಮತ್ತು ನಿವಾಸಿಗಳು ಡಿಂಗೊಗಳ ಬಳಿ ಹೋಗಬಾರದು ಮತ್ತು ಮತ್ತು ಅವುಗಳಿಗೆ ಆಹಾರ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ, ಅದೇ ದ್ವೀಪದಲ್ಲಿ ಜಾಗಿಂಗ್ ಮಾಡುತ್ತಿದ್ದ 23 ವರ್ಷದ ಮಹಿಳೆಯ ಮೇಲೆ ಡಿಂಗೊಗಳ ಗುಂಪೊಂದು ದಾಳಿ ಮಾಡಿತ್ತು ಡಿಂಗೊಗಳು ಅವರನ್ನುಅ ಸಮುದ್ರಕ್ಕೆ ಎಳೆದೊಯ್ದವು, ಆದರೆ ಒಬ್ಬ ಪ್ರವಾಸಿ ಹೇಗೋ ಅವರ ಜೀವವನ್ನು ಉಳಿಸಿದ್ದ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್ – Kannada News | Mantralaya Tour from Bengaluru: KSTDC Special Package for Raghavendra Swamy Darshan

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (kstdc) ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಜನರು ಮಂತ್ರಾಲಯಕ್ಕೆ ಹೋಗುವುದು ಹೆಚ್ಚು. ಅದರಲ್ಲೂ ಕರ್ನಾಟಕದ ಜನರಿಗೆ ಇದು ಇನ್ನೂ ವಿಶೇಷವಾಗಿರುತ್ತದೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ ಆರಾಧ್ಯ ದೈವ, ಈ ಕ್ಷೇತ್ರ ಆಂಧ್ರ ಗಡಿಯಲ್ಲಿದ್ದರು. ಹೆಚ್ಚು ಜನ ರಾಜ್ಯದಿಂದಲ್ಲೇ ಹೋಗುತ್ತಾರೆ. ರಾಯರ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಜನ ಇರುತ್ತಾರೆ. ಇದೀಗ ಇಲ್ಲಿ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು kstdc ನೀಡಿದೆ. ಪ್ರತಿ ಬುದ್ಧವಾರ ಮತ್ತು ಶುಕ್ರವಾರ ಈ ಪ್ಯಾಕೇಜ್​ ಇರುತ್ತದೆ. ರಾಘವೇಂದ್ರ ಸ್ವಾಮಿ ಮಠ ಮಾತ್ರವಲ್ಲದೆ. ಇತರ ಸ್ಥಳಗಳಿಗೂ ಇರಲಿ ಕರೆದುಕೊಂಡು ಹೋಗಲಾಗುತ್ತದೆ. ಜತಗೆ ಈ ಎಲ್ಲ ಸೌಲಭ್ಯಗಳು ಇದೆ.

ಪ್ರಯಾಣದ ವಿವರ:

ರಾಘವೇಂದ್ರ ಸ್ವಾಮಿ ದರ್ಶನಕ್ಕೆ ವಿಶೇಷ ಪ್ಯಾಕೇಜ್​​ ಮೂಲಕ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂತ್ರಾಲಯಕ್ಕೆ ತಲುಪಲಿದೆ. ಇದರ ಜತೆಗೆ ಪಂಚಮುಖಿ ಆಂಜನೇಯ ದೇವಸ್ಥಾನ ಕೂಡ ದರ್ಶನ ಮಾಡಬಹುದು. ದೇವರ ದರ್ಶನಕ್ಕೆ ಅನುಕೂಲ ಆಗುವಂತೆ ಈ ದಿನದಂದು ಪ್ಯಾಕೇಜ್​​​​ನ್ನು ಬಿಡುಗಡೆ ಮಾಡಲಾಗಿದೆ.

ದಿನ 1: ರಾತ್ರಿ 8.00 ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ.

ದಿನ 2: ಬೆಳಿಗ್ಗೆ 4.30 – 6.00 ಫ್ರೆಶ್ ಅಪ್

ಬೆಳಿಗ್ಗೆ 6.30 – 10.00 ರಾಘವೇಂದ್ರ ಸ್ವಾಮಿಯ ದರ್ಶನ

ಬೆಳಿಗ್ಗೆ 11.00 – ಮಧ್ಯಾಹ್ನ 12 ಪಂಚಮುಖಿ ಆಂಜನೇಯ ದೇವಸ್ಥಾನ

ಮಧ್ಯಾಹ್ನ 1.00 – 2.00 ದಾರಿಯಲ್ಲಿ ಊಟ

ರಾತ್ರಿ 9.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ

ಇದನ್ನೂ ಓದಿ: KSTDCನಿಂದ ವಿಶೇಷ ಪ್ಯಾಕೇಜ್: 20% ರಿಯಾಯಿತಿ, ಎಲ್ಲಿಗೆಲ್ಲ ಟೂರ್

ಪ್ಯಾಕೇಜ್​​ ದರ ಹೇಗೆ?

ಈ ವಿಶೇಷ ಪ್ಯಾಕೇಜ್​​ನಲ್ಲಿ ಎಲ್ಲ ಸೌಲಭ್ಯಗಳು ಸೇರಿದಂತೆ ಒಬ್ಬರಿಗೆ 2780 ಇರುತ್ತದೆ. ಜತೆಗೆ ಮರುಪಾವತಿ ಸೌಲಭ್ಯ ಕೂಡ ಇದೆ. 48 ಗಂಟೆಗಳ ಮೊದಲು ಟಿಕೆಟ್‌ ರದ್ದು ಮಾಡಿದರೆ – 10%, 24 ಗಂಟೆಗಳ ಮೊದಲು ಟಿಕೆಟ್‌ ರದ್ದು ಮಾಡಿದರೆ – 25% ಕಡಿತಗೊಳಿಸಲಾಗಿದೆ. 24 ಗಂಟೆಗಳ ಒಳಗೆ ಟಿಕೆಟ್‌ ರದ್ದು ಮಾಡಿದರೆ ಯಾವುದೇ ಮರುಪಾವತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್​​ ಸೈಟ್​​​ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಲ್ಯದ ಗೆಳೆಯನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ – Kannada News | Muslim Girl Converts for Love: Safina Becomes Simran, Marries Hindu Friend in Khandwa

ಖಾಂಡ್ವಾ, ಜನವರಿ 20: ಪ್ರೀತಿ(Love)ಯು ಜಾತಿ, ಧರ್ಮ ಎಲ್ಲವನ್ನೂ ಮೀರದ್ದು ಅಂತಾರೆ. ತಮ್ಮ ಪ್ರೀತಿಯನ್ನು ಗೆಲ್ಲಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪ್ರೇಮಿಗಳು ಸಿದ್ಧರಿರುತ್ತಾರೆ. ಯುವತಿ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಲು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಮಹಾದೇವಗಢ ದೇವಸ್ಥಾನವು ಈ ಘಟನೆಗೆ ಸಾಕ್ಷಿಯಾಗಿದೆ. ಅಲ್ಲಿ ನಡೆದ ವಿವಾಹದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆದಿದೆ. ಮುಸ್ಲಿಂ ಯುವತಿಯೊಬ್ಬರು ಸನಾತನ ಧರ್ಮವನ್ನು ಆರಿಸಿಕೊಂಡಿದ್ದಾರೆ. ತಾನು ಇಷ್ಟಪಟ್ಟವನ ಜತೆ ಸಪ್ತಪದಿ ತುಳಿದಿದ್ದಾರೆ. ವೈದಿಕ ವಿಧಿಗಳ ಪ್ರಕಾರ ಹಿಂದೂ ಪುರುಷನನ್ನು ವಿವಾಹವಾದರು. ಮಹಿಳೆ ತಾನು ಸ್ವಯಂಪ್ರೇರಣೆಯಿಂದ ಮತ್ತು ತನ್ನ ನಂಬಿಕೆಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಆ ಯುವತಿಯ ಹೆಸರು ಸಫಿನಾ, ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ನಿವಾಸಿ. ಮಹಾದೇವಗಢಕ್ಕೆ ಬಂದ ನಂತರ, ಅವರು ಮಹಾದೇವಗಢದ ಅಶೋಕ್ ಪಲಿವಾಲ್ ಅವರನ್ನು ಭೇಟಿಯಾದರು. ನಂತರ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಮಾರಂಭವನ್ನು ನಡೆಸಲಾಯಿತು. ಅಲ್ಲಿ ಯುವತಿ ವೇದ ಪಠಣ ಮತ್ತು ಆಚರಣೆಗಳೊಂದಿಗೆ ಸನಾತನ ಧರ್ಮಕ್ಕೆ ಬಂದರು.

ಮತ್ತಷ್ಟು ಓದಿ: ಅನ್ಯಕೋಮಿನ ಯುವಕನೊಂದಿಗೆ 3 ಮಕ್ಕಳ ತಾಯಿ ಲವ್ವಿಡವ್ವಿ: ಖಾಜಾನ ಪ್ರೀತಿಗೆ ಮನಸೋತು ಹೆಣವಾದಳು

ಈ ಸಮಾರಂಭದಲ್ಲಿ, ಸಫೀನಾ ತನ್ನ ಹೆಸರನ್ನು ಸಿಮ್ರನ್ ಎಂದು ಬದಲಾಯಿಸಿಕೊಂಡರು. ಮತಾಂತರಗೊಂಡ ನಂತರ, ಸಿಮ್ರನ್ ತನ್ನ ಬಾಲ್ಯದ ಗೆಳೆಯ ಸಂತ ಕುಮಾರ್ ಠಾಕೂರ್ ಅವರನ್ನು ವಿವಾಹವಾದರು. ವಿವಾಹ ಸಮಾರಂಭವು ಮಹಾದೇವಗಢ ದೇವಾಲಯ ಆವರಣದಲ್ಲಿ ನಡೆಯಿತು. ಅಇಡೀ ಸಮಾರಂಭವು ದೇವಾಲಯ ಸಮಿತಿ ಮತ್ತು ಮಹಾದೇವಗಢ ತಂಡದ ಸಮ್ಮುಖದಲ್ಲಿ ನಡೆಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಯುವತಿ ಸಿಮ್ರನ್, ಸನಾತನ ಧರ್ಮದ ಬಗ್ಗೆ ತನಗೆ ಬಹಳ ಹಿಂದಿನಿಂದಲೂ ವಿಶೇಷವಾದ ನಂಟು ಇದೆ ಎಂದು ಹೇಳಿದರು. ಸಿಮ್ರನ್ ಪ್ರಕಾರ, ಸನಾತನ ಧರ್ಮವು ಮಹಿಳೆಯರಿಗೆ ಗೌರವ ಮತ್ತು ಸಮಾನ ಸ್ಥಾನಮಾನವನ್ನು ನೀಡುತ್ತದೆ, ಇದು ಈ ಧರ್ಮವನ್ನು ಸ್ವೀಕರಿಸಲು ಪ್ರೇರೇಪಿಸಿತು.

ಈ ನಿರ್ಧಾರವು ತನಗೆ ಸುಲಭವಾಗಿರಲಿಲ್ಲ ಎಂದು ಸಿಮ್ರನ್ ಹೇಳಿದ್ದಾರೆ. ಕುಟುಂಬದ ಅಸಮ್ಮತಿಯ ಹೊರತಾಗಿಯೂ, ಅವರು ಹೊಸ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಅಶೋಕ್ ಪಲಿವಾಲ್, ಯುವತಿಯ ಇಚ್ಛೆಯಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸಮಿತಿಯು ನವವಿವಾಹಿತರಿಗೆ ರಾಮಚರಿತಮಾನಸವನ್ನು ನೀಡಿ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸಿತು. ಮಹಾದೇವಗಢಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ನಂಬಿಕೆ ಮತ್ತು ನಿರ್ಧಾರಗಳನ್ನು ಗೌರವಿಸಲಾಗುತ್ತದೆ ಎಂದು ಪಲಿವಾಲ್ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು – Kannada News | Akshay Kumar Security Car Overturns in Mumbai: Actor Helps Injured Auto Driver

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಭದ್ರತೆಗೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕಾರು ಪಲ್ಟಿಯಾಗಿತ್ತು. ಅಕ್ಷಯ್ ಕುಮಾರ್ ವಿಮಾನ ನಿಲ್ದಾಣದಿಂದ ಜುಹುವಿನಲ್ಲಿರುವ ತಮ್ಮ ಬಂಗಲೆಗೆ ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಯ ಕಾರು ಅಪಘಾತಕ್ಕೆ ಒಳಗಾಗಿದೆ. ಈ ಸಮಯದಲ್ಲಿ ಅಕ್ಷಯ್ ಕುಮಾರ್ ಸಹಾಯಕ್ಕೆ ತೆರಳಿದ್ದು ವಿಶೇಷ.

ಅಕ್ಷಯ್ ಹಾಗೂ ಟ್ವಿಂಕಲ್ ವಿದೇಶದ ಪ್ರವಾಸ ಮುಗಿಸಿ ಮುಂಬೈಗೆ ಬಂದರು. ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಮರ್ಸಿಡಿಸ್ ಕಾರು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದೆ. ಆ ಕಾರು ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ಅದರ ನಂತರ, ಈ ಕಾರು ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ, ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೂ ತಾಗಿದೆ ಎಂದು ವರದಿಯಾಗಿದೆ. ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರು ಉರುಳಿ ಬಿದ್ದಿದೆ.

ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆಟೋ ಚಾಲಕನಿಗೆ ತಕ್ಷಣ ಸಹಾಯ ಮಾಡಲಾಯಿತು. ಅಕ್ಷಯ್ ಕುಮಾರ್ ತಮ್ಮ ಭದ್ರತಾ ಸಿಬ್ಬಂದಿಗೆ ಆಟೋ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ನಂತರ, ದೊಡ್ಡ ಜನಸಮೂಹ ಜಮಾಯಿಸಿತು. ಅಪಘಾತದ ನಂತರ ಅನೇಕ ಜನರು ಲೈವ್ ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಪೊಲೀಸರು ಪ್ರಸ್ತುತ ಅಪಘಾತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಗ್ಗೆ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಅಪಘಾತವು ಮರ್ಸಿಡಿಸ್ ಚಾಲಕನ ತಪ್ಪಿನಿಂದಾಗಿ ನಡೆದಿದೆಯೇ ಅಥವಾ ಬೇರೆ ಏನಾದರೂ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಅಥವಾ ಅವರ ತಂಡವು ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಯಾವುದೇ ದೊಡ್ಡ ಹಾನಿಯಾಗಿಲ್ಲವಾದರೂ, ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಮ್ಮ ಹೆಸರು ಬದಲಿಸಿದ್ದೇಕೆ ಅಕ್ಷಯ್ ಕುಮಾರ್? ಕಾರಣ ವಿವರಿಸಿದ ನಟ

ಅಪಘಾತದ ನಂತರ ಅಕ್ಷಯ್ ಕುಮಾರ್ ಸ್ಥಳದಿಂದ ತೆರಳಿದರು. ಅವರ ಭದ್ರತಾ ಸಿಬ್ಬಂದಿ ಅಲ್ಲೇ ಇದ್ದರು. ಆಟೋ ಚಾಲಕ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದಲ್ಲಿ ಯಾರ ತಪ್ಪು ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಅಕ್ಷಯ್ ಕುಮಾರ್ ಟ್ರಿಪ್ ಮುಗಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಈ ಅಪಘಾತದ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Optical Illusion: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು – Kannada News | Optical Illusion: You are smart if you can spot the three people hidden in this picture.

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನವರು ಬಿಡುವಿನ ಸಮಯದಲ್ಲಿ ಇಂತಹ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ನೀವು ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಇದೀಗ ನಿಮಗೊಂದು ಚಾಲೆಂಜ್ ಇದೆ. ದಟ್ಟವಾಗಿ ಹರಡಿಕೊಂಡಿರುವ ಎರಡು ಮರಗಳ ನಡುವೆ ಮೂವರು ವ್ಯಕ್ತಿಗಳು ಅಡಗಿ ಕುಳಿತಿದ್ದಾರೆ.  ಅಂದರೆ ಇಲ್ಲಿ ಮೂರು ಮುಖಗಳಿದ್ದು, ನೀವು 30 ಸೆಕೆಂಡುಗಳಲ್ಲಿ ಈ ಮುಖಗಳನ್ನು ಗುರುತಿಸುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ ಬಂದಿದೆ.

ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ದಟ್ಟವಾಗಿ ಹಬ್ಬಿ ಕೊಂಡಿರುವ ಎರಡು ಮರಗಳನ್ನು ಕಾಣಬಹುದು. ಈ ಮರಗಳು ಎಲೆಗಳು ಮತ್ತು ರೆಂಬೆ ಕೊಂಬೆಗಳಿಂದ ತುಂಬಿಕೊಂಡಿದೆ. ಆದರೆ ಈ ಮರಗಳ ನಡುವೆ ಮೂರು ಮುಖಗಳಿವೆ. ಬಹಳ ಎಚ್ಚರಿಕೆ ನೋಡಿದರೆ ಈ ಮುಖಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇದನ್ನೂ ಓದಿ:ಈ ಚಿತ್ರದಲ್ಲಿರುವ ಅನ್ಯಗ್ರಹ ಜೀವಿಯನ್ನು 15 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ

ಮೂರು ಮುಖಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೂರು ಜನರ ಮುಖಗಳನ್ನು ಕಂಡುಹಿಡಿಯಬೇಕು, ಇದಕ್ಕಿರುವ ಸಮಯಾವಕಾಶ ಮೂವತ್ತು ಸೆಕೆಂಡುಗಳು ಮಾತ್ರ. ಈ ಫೇಸ್‌ಗಳನ್ನು ಕಂಡು ಹಿಡಿಯಲು ಕಷ್ಟ ಪಡುತ್ತಿದ್ದರೆ ಕಣ್ಣು ಅಗಲಿಸಿ ಚಿತ್ರ ನೋಡಿ. ಎಷ್ಟೇ ಸಮಯ ತೆಗೆದುಕೊಂಡರೂ ಒಗಟು ಬಿಡಿಸಲು ಸಾಧ್ಯವಾಗಿಲ್ಲವೇ ಈ ಚಿತ್ರದಲ್ಲಿ ಮೂರು ಜನರ ಮುಖಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:41 am, Tue, 20 January 26

Source link

‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’; ಗಿಲ್ಲಿ ಗೆಲುವಿಗೆ ಮನಸಾರೆ ಹಾರೈಸಿದ ಕಾವ್ಯಾ – Kannada News | Kavya Shaiva Wishes Gilli Nata After Huge Bigg boss Victory

ಬಿಗ್ ಬಾಸ್​ ಅಲ್ಲಿರುವಾಗ ಕಾವ್ಯಾ ಶೈವ ಹಾಗೂ ಗಿಲ್ಲಿ ನಟನ (Gilli Nata) ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಇಬ್ಬರೂ ಒಟ್ಟಿಗೆ ಸ್ಪರ್ಧೆ ಮಾಡಿದ್ದರು. ಕಾವ್ಯಾ ಪರವಾಗಿ ಗಿಲ್ಲಿ ಸದಾ ನಿಲ್ಲುತ್ತಿದ್ದರು. ಕಾವ್ಯಾ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದರೂ ಗಿಲ್ಲಿ ಕೇಳುತ್ತಿರಲಿಲ್ಲ. ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಕಾವ್ಯಾ ಅವರು ಗಿಲ್ಲಿಗೆ ಮನಸಾರೆ ವಿಶ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಸುದೀಪ್ ಅವರು ಗಿಲ್ಲಿ ಕೈ ಎತ್ತಿದ ಫೋಟೋ ಹಾಗೂ ಗಿಲ್ಲಿ ಪಕ್ಕದಲ್ಲಿ ಕುಳಿತ ಫೋಟೋಗಳನ್ನು ಕಾವ್ಯಾ ಹಂಚಿಕೊಂಡಿದ್ದಾರೆ. ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ಕ್ಯಾಪ್ಶನ್ ಮೂಲಕ ಪೋಸ್ಟ್ ಆರಂಭಿಸಿದ್ದಾರೆ. ‘ಹೇ, ಗಿಲ್ಲಿ ಕಂಗ್ರಾಜ್ಯುಲೇಷನ್ ಕಣೋ. ನೀನು ಇದಕ್ಕೆ ಅರ್ಹ’ ಎಂದು ಕಾವ್ಯಾ ಬರೆದಿದ್ದಾರೆ.

‘ಜೀರೋದಿಂದ ಹೀರೋ ಆದೆ. ಇನ್ನೂ ದೂರ ಸಾಗಬೇಕಿದೆ. ಆದಷ್ಟು ಬೇಗ ಆ್ಯಕ್ಷನ್- ಕಟ್ ಹೇಳೊ ಹಾಗಾಗ್ಲಿ. ತುಂಬಾ ತುಂಬಾ ಒಳ್ಳೇದಾಗ್ಲಿ’ ಎಂದು ಕಾವ್ಯಾ ಅವರು ಗಿಲ್ಲಿಗೆ ಮನಸಾರೆ ಹಾರೈಸಿದ್ದಾರೆ.

ಬಿಗ್ ಬಾಸ್ ಮನೆಯ ಒಳಗೆ ಹೋಗುವಾಗ ಕಾವ್ಯಾ ಹಾಗೂ ಗಿಲ್ಲಿ ಜಂಟಿಯಾಗಿ ತೆರಳಿದ್ದರು. ಅಲ್ಲಿಂದ ಅವರ ಪ್ರಯಾಣ ಶುರುವಾಯಿತು. ಜಂಟಿ ಆಟ ಮುಗಿದ ಬಳಿಕವೂ ಕಾವ್ಯಾ ಹಾಗೂ ಗಿಲ್ಲಿ ಒಟ್ಟಿಗೇ ಇರುತ್ತಿದ್ದರು. ನಮ್ಮ ಮಧ್ಯೆ ಇರೋದು ಶುದ್ಧ ಗೆಳೆತನ ಎಂದು ಅವರು ಆಗಾಗ ಸ್ಪಷ್ಟನೆ ಕೊಡುತ್ತಲೇ ಇದ್ದರು.

ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಹೆಚ್ಚುವರಿಯಾಗಿ ಸಿಕ್ತು 20 ಲಕ್ಷ ರೂಪಾಯಿ?

ಇನ್ನು, ಇಬ್ಬರ ಆಪ್ತತೆಯ ಕಾರಣಕ್ಕೆ ಇವರ ಮದುವೆ ವಿಷಯ ಕೂಡ ಚರ್ಚೆ ಆಗುತ್ತಿದೆ. ಇದಕ್ಕೆ ಉತ್ತರಿಸಿದ್ದ ಗಿಲ್ಲಿ ತಂದೆ-ತಾಯಿ, ‘ಗಿಲ್ಲಿಗೆ ಯಾರು ಇಷ್ಟವೋ ಅವರ ಜೊತೆ ಮದುವೆ ಮಾಡಿ ಕೊಡ್ತೀವಿ’ ಎಂದು ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Saina Nehwal: ನಿವೃತ್ತಿ ಘೋಷಿಸಿದ ಸೈನಾ ನೆಹ್ವಾಲ್ – Kannada News | Saina Nehwal announced retirement from Badminton

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಬ್ಯಾಡ್ಮಿಂಟನ್ ಅಂಗಳಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅಲ್ಲದೆ ಇನ್ಮುಂದೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ.

ಸೈನಾ ನೆಹ್ವಾಲ್ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಡಿದ್ದು 2023 ರಲ್ಲಿ. 2023ರ ಸಿಂಗಾಪುರ್ ಓಪನ್ ನಂತರ ಅವರು ಯಾವುದೇ ಅಧಿಕೃತ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಗಾಯದ ಸಮಸ್ಯೆ.

ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಎರಡು ವರ್ಷಗಳಿಂದ ಕಂಬ್ಯಾಕ್ ಮಾಡಲು ಯತ್ನಿಸಿದ್ದರು. ಇದಾಗ್ಯೂ ಸಂಪೂರ್ಣ ಫಿಟ್​​ನೆಸ್ ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷದ ಆರಂಭದಲ್ಲೇ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್​ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ನಿವೃತ್ತಿ ಬಗ್ಗೆ ಸೈನಾ ಹೇಳಿದ್ದೇನು?

ಪಾಡ್‌ಕ್ಯಾಸ್ಟ್​ವೊಂದರಲ್ಲಿ ಮಾತನಾಡಿದ ಸೈನಾ ನೆಹ್ವಾಲ್,  ತನ್ನ ದೇಹವು ಇನ್ನು ಮುಂದೆ ತನ್ನ ಆಟವನ್ನು ಬೆಂಬಲಿಸುವುದಿಲ್ಲ. ಹೀಗಾಗಿ ಬ್ಯಾಡ್ಮಿಂಟನ್​ನಲ್ಲಿ ಇನ್ಮುಂದೆ ಮುಂದುವರೆಯಲು ಸಾಧ್ಯವಿಲ್ಲ. ಮೊಣಕಾಲಿನ ನೋವಿನ ಸಮಸ್ಯೆಯಿರುವ ಕಾರಣ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಏಕೆಂದರೆ ಈ ನೋವಿನೊಂದಿಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ಮುಂದೆ ನಾನು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು 35 ವರ್ಷದ ಸೈನಾ ನೆಹ್ವಾಲ್ ಹೇಳಿದ್ದಾರೆ.

18 ಪದಕಗಳ ರಾಣಿ:

ಸೈನಾ ನೆಹ್ವಾಲ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಲ್ಲದೆ, ಇತರ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ ಒಟ್ಟು 18 ಪದಕಗಳನ್ನು ಗೆದ್ದಿದ್ದಾರೆ.

ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿದ್ದ ಸೈನಾ ನೆಹ್ವಾಲ್, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಮತ್ತು ಉಬರ್ ಕಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಹಾಗೆಯೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳು, ಒಂದು ಬೆಳ್ಳಿ ಪದಕ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ. ಇನ್ನು ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇದರ ಜೊತೆಗೆ  ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಸಹ ಗೆದ್ದಿದ್ದಾರೆ.

ಇದನ್ನೂ ಓದಿ: ಐರ್ಲೆಂಡ್ ಗ್ರೂಪ್ ಬದಲಿಸಿ… ಬಾಂಗ್ಲಾದೇಶ್​ ತಂಡದ ಹೊಸ ಬೇಡಿಕೆ!

ಅಗ್ರಸ್ಥಾನ ಅಲಂಕರಿಸಿದ್ದ ಸೈನಾ:

ಸೈನಾ ನೆಹ್ವಾಲ್ 2015 ರಲ್ಲಿ ವಿಶ್ವದ ನಂ. 1 ಸ್ಥಾನ ಬ್ಯಾಡ್ಮಿಂಟನ್ ತಾರೆಯಾಗಿ ಹೊರಹೊಮ್ಮಿದ್ದರು. ಅಷ್ಟೇ ಅಲ್ಲದೆ 2009 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2010 ರಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇನ್ನು 2010 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಸಹ ಸ್ವೀಕರಿಸಿದ್ದರು. ಇದೀಗ 35ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸುವ ಮೂಲಕ ಸೈನಾ ನೆಹ್ವಾಲ್ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ.

Source link