ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ: ಫಿಲ್ಮಿ ಸ್ಟೈಲ್ನಲ್ಲಿ ಖಾಕಿ ರೇಡ್ ; ಇಬ್ಬರು ಅರೆಸ್ಟ್ – Kannada News | Mangaluru Drug Bust: Film Style Operation Seizes 106 kg of Ganja; Two Peddlers Arrested
ಮಂಗಳೂರು, ಜನವರಿ 20: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಡ್ರಗ್ಸ್ ದಂಧೆಕೋರರ ಹುಟ್ಟಡಗಿಸುತ್ತಿದ್ದು, ಒಂದೊಂದೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಮಂಗಳೂರು ಸಿಸಿಬಿ, 4 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಉಗಾಂಡ ಮೂಲದ ಮಹಿಳೆಯನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಆ ಬೆನ್ನಲ್ಲೇ ಇದೀಗ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಸೀಜ್ ಮಾಡಿದೆ. ಸುಮಾರು…