Category Archives: Blog

Your blog category

Horoscope Today 20 January : ಇಂದು ಈ ರಾಶಿಯವರು ತಮ್ಮನ್ನು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳುವರು – Kannada News | Shalivahana Shaka 1948 Rashiphala: Detailed Daily Horoscope and Zodiac Predictions for Tuesday

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ ಮಂಗಳವಾರ ಗೌರವದ ಚಿಂತೆ, ಆರೋಗ್ಯ ಸುಧಾರಣೆ, ದುರಸ್ತಿ, ಅಧಿಕ ಶ್ರಮ, ಹೂಡಿಕೆ, ಅನಿರೀಕ್ಷಿತ ವಾರ್ತೆ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಸಿದ್ಧಿ, ಕರಣ : ಕೌಲವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 16 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15-26 – 16:51, ಯಮಗಂಡ ಕಾಲ 09:45 – 11:10, ಗುಳಿಕ ಕಾಲ 12:35 – 14:01

ಮೇಷ ರಾಶಿ :

ಗಂಭೀರ ವ್ಯಕ್ತಿತ್ವದಿಂದ ತಮಾಷೆಯನ್ನು ನಿರೀಕ್ಷಿಸಲಾಗದು. ಉತ್ತಮ ವ್ಯಕ್ತಿಗಳನ್ನು ಸಂಪಾದಿಸಲು ನೀವು ಸೋಲುವಿರಿ. ಆದಾಯದ ಕಡೆಗೆ ವಿಶೇಷಗಮನವು ಇರಲಿದೆ. ಇತರರ ಧಾರ್ಮಿಕ ನಂಬಿಕೆಯನ್ನು ನೀವು ಘಾಸಿಮಾಡುವಿರಿ. ಅನಂತರದ ಹತಾಶೆಯಿಂದ ಕಷ್ಟವಾದೀತು. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು. ನೀವು ಸ್ವತಂತ್ರವಾಗಿದ್ದರೂ ಬೆರೆಯಲು ಮನಸ್ಸಾಗದು. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಇರಲಿದೆ.

ವೃಷಭ ರಾಶಿ :

ಸಮರ್ಪಕ ಉತ್ತರದಿಂದ ಸಂತೋಷವಾಗಬಹುದು. ಖಾಲಿಯಾಗಿ ಇರುವ ಬದಲು ಏನನ್ನಾದರೂ ಮಾಡಿ. ಭವಿಷ್ಯಕ್ಕೆ ಉಪಯೋಗವಾಗಬಹುದು. ಉತ್ಕಟವೂ ಯೋಗ್ಯವೂ ಆದ ಇಚ್ಛೆಯು ಪೂರ್ಣವಾಗುವುದು. ಸಂಬಂಧಗಳಲ್ಲಿ ಒಡಕು ಬರಬಹುದು. ಮನಸ್ಸಿಗೆ ಭಾರವಾದ ವಿಚಾರವನ್ನು ನೀವು ಹೇಗಾದರೂ ಮಾಡಿ ತಲೆಯಿಂದ ತೆಗೆಯಿರಿ. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಆಹಾರದಿಂದ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ.

ಮಿಥುನ ರಾಶಿ :

ಇಂದು ಸಂಗಾತಿಯ ಜೊತೆ ಕಾಲ ಕಳೆಯಲು ಯೋಜನೆ ಬೇಕು. ತಾಳ್ಮೆಯಿಂದ ಬರುವ ಆಪತ್ತಿಗೆ ಮಾರ್ಗವೂ ಇದೆ. ಚಿತ್ತಚಾಂಚಲ್ಯವು ಕಾರ್ಯದ ಗತಿಯನ್ನು ತಗ್ಗಿಸೀತು. ಕಾರ್ಯದ ನಿರುತ್ಸಾಹವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಲ್ಲಿ ಏಕಾಗ್ರತೆಯ ಕೊರತೆ ಇರಲಿದ್ದು ಧ್ಯಾನ, ಯೋಗಾಭ್ಯಾಸವನ್ನು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಸ್ವಲ್ಪಮಟ್ಟಿನ ಲಾಭವಾಗುವುದು.

ಕರ್ಕಾಟಕ ರಾಶಿ :

ಮೃದು ಮಾತಿನಿಂದ ಕಾರ್ಯವಾಗದು. ಮೇಲಧಿಕಾರಿಗಳಿಗೆ ನೀವು ವರದಿಯನ್ನು ನೀಡಬೇಕಾಗುವುದು. ಹಳೆಯದನ್ನು ನೀವು ನೆನೆದು ಸಂಕಟಪಡುವಿರಿ. ವಿನಾಕಾರಣ ಮಿತ್ರರನ್ನು ದೂರ ಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ನೀವೇ ಪ್ರಶಂಸೆ ಮಾಡಿಕೊಳ್ಳುವಿರಿ. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಹೂಡಿಕೆಯನ್ನು ಮಾಡಲು ಎಲ್ಲರಿಂದ ಮಾಹಿತಿಯನ್ನು ಸಂಗ್ರಹಿಸುವಿರಿ.

ಸಿಂಹ ರಾಶಿ :

ಸೇವೆಯಿಂದ ನಿವೃತ್ತಿಯು ಬೇಸರ ತರಿಸುವುದು. ಪರರ ಗುಣದಲ್ಲಿ ಅಸೂಯೆ ಇಟ್ಟುಕೊಳ್ಳುವಿರಿ. ಸಂಗಾತಿಯ ಪ್ರೀತಿಗೆ ನೀವು ಸೋಲಬಹುದು. ಎಷ್ಟೋದಿನಗಳಿಂದ ಬಯಸಿದ್ದ ವಸ್ತುವನ್ನು ನೀವು ಅನಾಯಾಸವಾಗಿ ಯಾರಿಂದಲೋ ಪಡೆಯುವುರಿ. ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರಲು ನೋಡುವಿರಿ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು.

ಕನ್ಯಾ ರಾಶಿ :

ವ್ಯಾಪಾರದ ವಿಚಾರದಲ್ಲಿ ಮನೆಯವರ ಜೊತೆ ಜಗಳ ಮಾಡಿಕೊಳ್ಳುವಿರಿ. ನಿಮಗೆ ದ್ವಂದ್ವಗಳು ಒಂದು ಸರಿಯಾದ ನಿರ್ಧಾರಕ್ಕೆ ಬರಲು ಅನುಕೂಲ ಮಾಡಿಕೊಡುವುದಿಲ್ಲ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕತ್ತಲೆಯಲ್ಲಿ ಗುದ್ದಾಟ ಮಾಡಿ ಆಯಾಸ ಮಾಡಿಕೊಳ್ಳುವಿರಿ. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಅದು ಕನ್ನಡಿಯ ಗಾಜಿನಂತೆ. ಎಷ್ಟೇ ಕೂಡಿಸಿದರೂ ಬಿರುಕು ಎದ್ದು ತೋರುವುದು.

ತುಲಾ ರಾಶಿ :

ನಿಮ್ಮ ಹೊಂದಿಕೊಳ್ಳುವ ಗುಣವನ್ನು ಎಲ್ಲರೂ ಶ್ಲಾಘಿಸುವರು. ಕೃತಘ್ನರಾಗಿ ಮೆರೆಯುವುದು ಬೇಡ. ಜಾರಿ ಬೀಳಲು ಹೆಚ್ಚು ಸಮಯ ಬೇಡ. ಕೊಟ್ಟ ಹಣವು ಮರಳಿ ನಿಮ್ಮ ಸಂಪತ್ತು ಹೆಚ್ಚಾಗಬಹುದು. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು. ಪ್ರೀತಿಯು ನಿಮಗಾಗದವರ ಮೂಲಕ ಎಲ್ಲರಿಗೂ ತಿಳಿಯುವುದು. ಇದರಿಂದ ನಿಮಗೆ ಬಹಳ ಮುಜುಗರವಾಗಬಹುದು.

ವೃಶ್ಚಿಕ ರಾಶಿ :

ಕಾರ್ಯಕ್ಕೆ ಹೊರಡುವ ಮೊದಲೇ ತನ್ನ್ನಿಂದ ಏನೂ ಆಗದು ಎಂಬ ಭಾವವನ್ನು ಮೊದಲು ತಲೆಯಿಂದ ತೆಗೆದುಹಾಕಬೇಕು. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಮನೆಯಲ್ಲಿ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು. ಹಳೆಯ ವಸ್ತುಗಳು ನಿಮಗೆ ಭಾರವಾದೀತು. ತಾಳ್ಮೆಯನ್ನು ಕಳೆದುಕೊಂಡು ಎಲ್ಲರೆದುರು ಸಣ್ಣವರಾಗಬೇಕಾದೀತು. ಕಠೋರ ಮಾತುಗಳು ನಿಮ್ಮರಿಗೆ ಇಷ್ಟವಾಗದು. ನಿಮ್ಮ ಬಗ್ಗೆ ಸಲ್ಲದ್ದನ್ನು ಹೇಳಬಹುದು.

ಧನು ರಾಶಿ :

ಈ ದಿನವನ್ನು ಬಹಳ ಆನಂದದಿಂದ ಕಳೆಯುವಿರಿ. ಏಕೆಂದರೆ ನೀವು ಇಂದು ಸಕಾರಾತ್ಮಕ ಚಿಂತನೆಯಲ್ಲಿ ಇರುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಅಪಮಾನವಾಗಬಹುದು. ಮನೆಯಲ್ಲಿರುವ ಮಕ್ಕಳ ಜೊತೆ ಸ್ವಲ್ಪ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ತಂದೆಯ ಜೊತೆಗಿನ ಮನಸ್ತಾಪವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ಎಲ್ಲದಕ್ಕೂ ಮುನ್ನುಗಬೇಕೆನ್ನುವ ನಿಮ್ಮ ಯೋಚನೆ ಬದಲಾಗುವುದು. ಭೂಮಿಯ ಬಗ್ಗೆ ಆಸಕ್ತಿಯು ಕಡಿಮೆಯಾಗಲಿದೆ.

ಮಕರ ರಾಶಿ :

ಕಿಟಕಿ ಮುಚ್ಚಿದೆ ಎಂದ ಮಾತ್ರಕ್ಕೆ ದ್ವಾರವೂ ಮುಚ್ಚಿರುತ್ತದೆ ಎಂದು ತಿಳಿದುಕೊಳ್ಳುವುದು ಮೂರ್ಖತನ. ಹಣಕಾಸು ಲಾಭಗಳು ನಿಮ್ಮ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಇಂದು ಕುಟುಂಬದಲ್ಲಿ ಸಂತೋಷವನ್ನು ತುಂಬುವಿರಿ. ಒಬ್ಬರಾದರೂ ತಾಳ್ಮೆಯಿಂದ ಇರಬೇಕಾದೀತು. ನಿಮ್ಮ ಕನಸನ್ನು ಪೂರ್ಣ ಮಾಡಿಕೊಳ್ಳುತ್ತಿರುವುದು ನಿಮಗೆ ಖುಷಿಯಾಗಲಿದೆ. ಭೋಜನವನ್ನು ಸಮಯ ಮೀರಿ ಮಾಡುವುದು ಬೇಡ. ನಿಮ್ಮ ಬದಲಾವಣೆಯು ಪೂರ್ಣ ಸತ್ಯವಾಗಿರದು. ಬಂಧುವರ್ಗದಿಂದ ಸೇವೆಯಾಗಬಹುದು.

ಇದನ್ನೂ ಓದಿ: ಜನವರಿ ತಿಂಗಳ ಮೂರನೇ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ

ಕುಂಭ ರಾಶಿ :

ನೀವು ಯಾರನ್ನಾದರೂ ಅಳೆಯುವ ಮೊದಲು ಅವರೇ ನಿಮ್ಮ ಬಗ್ಗೆ ಎಲ್ಲವನ್ನೂ ಹೇಳಬಹುದು. ಇನ್ನೊಬ್ಬರ ನಿರ್ಧಾರಗಳನ್ನು ನಿಯಂತ್ರಿಸುವ ಮೂಲಕ ನೀವು ಎಂದಿಗೂ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುವುದಿಲ್ಲ. ವೃತ್ತಿ ಜೀವನದಲ್ಲಿ ಗೌರವವನ್ನು ಪಡೆಯಬೇಕು ಎನಿಸುವುದು. ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ನಿಮ್ಮ ಕಣ್ಣಿಗೆ ಬೀಳಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಒಂದು ಕಡೆ ಬಾಗಲು ಮುಚ್ಚಿದರೆ ಇನ್ಮೊಂದು ಕಡೆ ಕಿಟಕಿ ತೆರುವುದು.

ಮೀನ ರಾಶಿ :

ವ್ಯವಹಾರದ ಹಿನ್ನಡೆಯಿಂದ ಹತಾಶೆಯಾಗುವ ಸಾಧ್ಯತೆ ಇದೆ. ನಿಜವಾದ ಸ್ನೇಹಿತ ನಿಮ್ಮ ಅಗತ್ಯದ ಸಮಯದಲ್ಲಿ ಜೊತೆಯಾಗುವರು. ಅಂತಹವರನ್ನು ಕಳೆದುಕೊಂಡು ಅನಂತರ ಸಂಕಟಪಡುವಿರಿ. ವ್ಯವಹಾರದಲ್ಲಿ ಹಣಕಾಸಿನ ಸ್ಥಿರತೆಗಾಗಿ ಇಂದು ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಿ ಸಂತಸದ ವಾತಾವರಣ ನೀರ್ಮಾನವಾಗಲಿದೆ. ಚರಾಸ್ತಿಗೆ ಸಂಬಂಧಿಸಿದ ಶುಭ ಸುದ್ದಿ ಕೇಳುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಸತತ 5ನೇ ಗೆಲುವು; ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್​ಸಿಬಿ – Kannada News | RCB Secures Playoff Spot with Dominant Win Over Gujarat Giants in Vadodara

ವಡೋದರಾದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸತತ ಗೆಲುವಿನ ಮೂಲಕ ಪ್ಲೇಆಫ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಗುಜರಾತ್​ ಜೈಂಟ್ಸ್​ನ ತವರು ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ತಂಡದಿಂದ ಹೋರಾಟದ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಏಕೆಂದರೆ ಈ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗುಜರಾತ್ ಸೇಡು ತೀರಿಸಿಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆರ್​ಸಿಬಿ ಸಾಂಘಿಕ ದಾಳಿಗೆ ತತ್ತರಿಸಿದ ಗುಜರಾತ್ ಬರೋಬ್ಬರಿ 61 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್​ಗಳು: ತನಿಖೆ ವೇಳೆ ಕಳ್ಳಾಟ ಬಯಲು – Kannada News | BMTC Conductors UPI Scam: Shakti Scheme Misused, Personal Accounts Swelled by Lakhs

ಬೆಂಗಳೂರು, ಜನವರಿ 19: ‘ಶಕ್ತಿ’ ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದರೆ, ಇತ್ತ ಬಿಎಂಟಿಸಿಯ (BMTC) ಕೆಲ ಕಿಲಾಡಿ ಕಂಡಕ್ಟರ್​ಗಳು (Conductor) ಮಾತ್ರ, ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡಿ ನಿಗಮಕ್ಕೆ ಸೇರಬೇಕಿದ್ದ, ಲಕ್ಷ ಲಕ್ಷ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ.

ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಕರಿಗೆ ಸಹಾಯವಾಗಲಿ ಎಂದು ಬಿಎಂಟಿಸಿ ನಿಗಮ ಯುಪಿಐ ಸ್ಕ್ಯಾನರ್ ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್​ಗಳು ಬಿಎಂಟಿಸಿ ಬಸ್​ನಲ್ಲಿರುವ ಯುಪಿಐ ಸ್ಕ್ಯಾನರ್​ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್​ಗಳನ್ನು ನೀಡಿ, ತಮ್ಮ ಬ್ಯಾಂಕ್ ಅಕೌಂಟ್​ಗೆ ಲಕ್ಷಾಂತರ ರೂ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕನ್ನಡ ಬಾರದವರಿಗೆ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದಾರಂತೆ.

ಇದನ್ನೂ ಓದಿ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ: ಮೂರು ಸಾವಿರ ಬಸ್​​ ಮಾರ್ಗಗಳ ವೇಳಾಪಟ್ಟಿ ಪರಿಷ್ಕರಣೆ

ಇನ್ನು ತನಿಖೆಯಲ್ಲಿ ಈ ಕಂಡಕ್ಟರ್​ಗಳ ಕಳ್ಳಾಟ ಕೂಡ ಬಯಲಾಗಿದೆ. ಪ್ರತಿಯೊಬ್ಬರ ಅಕೌಂಟ್​ನಲ್ಲೂ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ. ಶಕ್ತಿ ಯೋಜನೆಯ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಲಾಗಿದೆ. ಇಂಗ್ಲಿಷ್​ನಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ನಾರ್ತ್, ಸೌತ್ ಇಂಡಿಯನ್ಸ್​ಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುತ್ತಿದ್ದಾರೆ.

ಈ ಕಿಲಾಡಿ ಕಂಡಕ್ಟರ್​ಗಳು ಡಿಪೋದಿಂದ ಬಸ್​ಗಳು ಹೊರಗೆ ಬರ್ತಿದ್ದಂತೆ, ಬಿಎಂಟಿಸಿ ಬಸ್​ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್​ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರಂತೆ. ಪ್ರಯಾಣಿಕರು ಯುಪಿಐ ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕಂಡಕ್ಟರ್​ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್​ನಲ್ಲಿರುವ ಸ್ವಂತ ಖಾತೆಯ ಸ್ಕ್ಯಾನರ್​ಗಳನ್ನು ನೀಡಿ ಪ್ರಯಾಣಿಕರಿಂದ ತಮ್ಮ ಅಕೌಂಟ್​ಗೆ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್​ಗಳು ಸಿಕ್ಕಿಬಿದ್ದಿದ್ದಾರೆ.

ಪ್ರಯಾಣಿಕರು ಹೇಳಿದ್ದಿಷ್ಟು

ಹೀಗೆ ಸಿಕ್ಕಿಬಿದ್ದ ಪ್ರತಿಯೊಬ್ಬ ಕಂಡಕ್ಟರ್​ ಅಕೌಂಟ್​ನಲ್ಲಿ 50 ಸಾವಿರ ರೂ. ಯುಪಿಐ ಮಾಡಿಸಿಕೊಂಡಿರುವುದು ಬಯಲಾಗಿದೆ. ಈಗಾಗಲೇ ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳು ಈ ಬಗ್ಗೆ ಬಿಎಂಟಿಸಿ ಎಂಡಿ ಶಿವಕುಮಾರ್​​ಗೆ ವರದಿ ಸಲ್ಲಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಪ್ರಯಾಣಿಕ ಮಂಜುನಾಥ್, ಇಂತಹವರನ್ನು ಮೊದಲು ಕೆಲಸದಿಂದ ಕಿತ್ತು ಮನೆಗೆ ಕಳಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು

ಶಕ್ತಿ ಯೋಜನೆಯ ಟಿಕೆಟ್​ಗಳನ್ನು ಹೊರ ರಾಜ್ಯದವರಿಗೆ ನೀಡುತ್ತಿರುವುದು, ನಿಗಮದ ಸ್ಕ್ಯಾನರ್​ಗಳನ್ನು ಕಿತ್ತು ತಮ್ಮ ಸ್ವಂತ ಯುಪಿಐ ಸ್ಕ್ಯಾನರ್​ಗಳನ್ನು ನೀಡಿ ಹಣ ಹಾಕಿಸಿಕೊಳ್ಳುತ್ತಿರುವ ಕಂಡಕ್ಟರ್​ಗಳ ವಿರುದ್ಧ ಬಿಎಂಟಿಸಿ ನಿಗಮ ಕಠಿಣ ಕ್ರಮಕೈಗೊಳ್ಳದಿದ್ದರೆ, ಇವರಿಂದ ಮತ್ತಷ್ಟು ಕಂಡಕ್ಟರ್​​ಗಳು ಈ ದಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್ ಮುಗಿದರೂ ಗಿಲ್ಲಿನ ಕೆಣಕಿದ ಅಶ್ವಿನಿ ಗೌಡ; ಖಡಕ್ ತಿರುಗೇಟು ಕೊಟ್ಟ ಪಳಾರ್ – Kannada News | BBK 12 Winner Gilli Nata gives counter reaction to Ashwini Gowda after Bigg Boss Kannada show

ಗಿಲ್ಲಿ ನಟ ಅವರ ಗೆಲುವಿನ ಬಳಿಕ ಅಶ್ವಿನಿ ಗೌಡ (Ashwini Gowda) ಅವರು ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. ಗಿಲ್ಲಿ ನಟ ಬಡವನ ರೀತಿ ನಟಿಸಿದ್ದರು ಎಂಬ ಅರ್ಥದಲ್ಲಿ ಅಶ್ವಿನಿ ಮಾತಾಡಿದ್ದಾರೆ. ಆ ಮೂಲಕ ಬಿಗ್ ಬಾಸ್ (BBK 12) ಮುಗಿದ ಮೇಲೂ ಅವರು ಕೆಣಕಿದ್ದಾರೆ. ಅಶ್ವಿನಿ ಗೌಡ ಅವರ ಈ ಹೇಳಿಕೆಗೆ ಗಿಲ್ಲಿ ನಟ ಖಡಕ್ ತಿರುಗೇಟು ನೀಡಿದ್ದಾರೆ. ‘ಮೇಡಂ ಏನು ಹೇಳಿದ್ದಾರೋ ನಾನು ನೋಡಿಲ್ಲ. ಒಂದು ವೇಳೆ ಅವರು ಹೇಳಿದ್ದರೆ, ನಾನು ಬಡವ ಅಂತ ಯಾವತ್ತೂ ಹೇಳಿಕೊಂಡಿಲ್ಲ. ನಾನು ಬನಿಯನ್ ಹಾಕಿಕೊಂಡಿದ್ದಕ್ಕೆ ಬಡವ ಅಂತ ಹೇಳೋಕೆ ಆಗಲ್ಲ. ಶ್ರೀಮಂತರು ಬನಿಯನ್, ನೈಟ್ ಪ್ಯಾಂಟ್, ಚಡ್ಡಿ ಹಾಕಲ್ವಾ? ಮೇಡಂ ಮಾತಿನ ಭರದಲ್ಲಿ ಆ ರೀತಿ ಹೇಳಿರಬಹುದು’ ಎಂದು ಬಿಗ್ ಬಾಸ್ ಮನೆಯೊಳಗಿನ ರೀತಿಯೇ ಗಿಲ್ಲಿ ನಟ (Gilli Nata) ಅವರು ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಊರಿಗೆ ಬಂದರೂ ಮನೆಗೆ ಹೋಗದೇ ವಾಪಸ್ ಬೆಂಗಳೂರಿಗೆ ತೆರಳಿದ ಗಿಲ್ಲಿ ನಟ – Kannada News | Bigg Boss Kannada Season 12 Winner Gilli Nata unable to enter home due to huge crowd

‘ಬಿಗ್ ಬಾಸ್ ಕನ್ನಡ’ ವಿಜೇತ (Bigg Boss Kannada 12 Winner) ಗಿಲ್ಲಿ ನಟ ಅವರ ಬಗ್ಗೆಯೇ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಗೆದ್ದಿರುವ ಅವರು ಮಂಡ್ಯ, ಮದ್ದೂರು, ಮಳವಳ್ಳಿ ಮುಂತಾದೆಡೆ ಮೆರವಣಿಗೆಯಲ್ಲಿ ಭಾಗಿ ಆಗಿದ್ದಾರೆ. ಗಿಲ್ಲಿ ಹೋದಲ್ಲೆಲ್ಲ ಅವರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಗಿಲ್ಲಿ ನಟನನ್ನು ನೋಡಲು ಬಂದಿದ್ದಾರೆ. ಗಿಲ್ಲಿ ನಟ (Gilli Nata) ಅವರು ಸ್ವಗ್ರಾಮವಾದ ದಡದಪುರಕ್ಕೆ ಹೋಗಿದ್ದಾರೆ. ಆದರೆ ಸ್ವಂತ ಮನೆಗೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ! ಹಾಗಾಗಿ ಅವರು ಕೂಡಲೇ ವಾಪಸ್ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದ್ದಾರೆ.

ಇಂದು (ಜನವರಿ 19) ಸಂಜೆ ವೇಳೆಗೆ ಗಿಲ್ಲಿ ನಟ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ತಲುಪಿದರು. ಸ್ವಗ್ರಾಮಕ್ಕೆ ಗಿಲ್ಲಿ ನಟರಾಜ್ ಬರುತ್ತಿದ್ದಂತೆಯೇ ಗ್ರಾಮಸ್ಥರಿಂದ ಸಂಭ್ರಮ ಜೋರಾಯಿತು. ದಡದಪುರ ಗ್ರಾಮದಲ್ಲಿ ಟ್ರೋಫಿ ಜೊತೆ ಗಿಲ್ಲಿ ನಟ ಮೆರವಣಿಗೆ ಮಾಡಿದರು. ಬಸವೇಶ್ವರ ದೇಗುಲದವರೆಗೆ ಗಿಲ್ಲಿ ನಟನ ಮೆರವಣಿಗೆ ನಡೆಯಿತು. ಗ್ರಾಮಸ್ಥರು ಗಿಲ್ಲಿ ಗಿಲ್ಲಿ ಎಂದು ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮೂರಿನ ಹುಡುಗನಿಗೆ ಮಹಿಳೆಯರು ಆರತಿ ಬೆಳಗಿದರು.

ಗಿಲ್ಲಿ ಮನೆ ಬಳಿ ನೂರಾರು ಅಭಿಮಾನಿಗಳು ನೆರೆದಿದ್ದರು. ಮಗನ ಆಗಮನಕ್ಕಾಗಿ ಮನೆ ಮುಂದೆ ಸಗಣಿ ಸಾರಿಸಿ, ರಂಗೋಲಿ ಹಾಕಲಾಗಿತ್ತು. ಕೈಯಲ್ಲಿ ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡು ಬಂದಿದ್ದ ಅಭಿಮಾನಿಗಳು ಕೂಡ ಅಲ್ಲಿ ಜಮಾಯಿಸಿದ್ದರು. ಸ್ವಗ್ರಾಮದ ಮನೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣದಿಂದ ಗಿಲ್ಲಿ ನಟ ಅವರು ಊರಿಗೆ ಬಂದರೂ ಮನೆಗೆ ಬಾರದೇ ವಾಪಸ್ ಬೆಂಗಳೂರಿಗೆ ತೆರಳುವಂತಾಯಿತು.

ಅದಕ್ಕೂ ಮುನ್ನ ಮಳವಳ್ಳಿಯ ಪ್ರಮುಖ ರಸ್ತೆಗಳಲ್ಲಿ ಗಿಲ್ಲಿಯ ಮೆರವಣಿಗೆ ನಡೆಯಿತು. ದಂಡಿನಮಾರಮ್ಮನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಹೊರಟಿತು. ಬಿಗ್​ಬಾಸ್ ರಿಯಾಲಿಟಿ ಶೋಗೆ ಹೋಗುವಾಗಲೂ ಗಿಲ್ಲಿ ನಟ ಅವರು ಇಲ್ಲಿ ಪೂಜೆ ಮಾಡಿಸಿದ್ದರು. ಆದ್ದರಿಂದ ಈಗ ಬಿಗ್​ಬಾಸ್ ಟ್ರೋಫಿ ಜೊತೆ ಬಂದು ದಂಡಿನಮಾರಮ್ಮನ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಮೆರವಣಿಗೆ: ಮಳವಳ್ಳಿಯಲ್ಲಿ ಜನರ ನಿಯಂತ್ರಿಸಲು ಖಾಕಿ ಹರಸಾಹಸ

ಮದ್ದೂರು, ಕೆ.ಎಂ.ದೊಡ್ಡಿ ಸೇರಿ ಹಲವು ಊರುಗಳಲ್ಲಿ ತೆರೆದ ವಾಹನದಲ್ಲಿ ನೂರಾರು ಅಭಿಮಾನಿಗಳ ಜೊತೆ ಗಿಲ್ಲಿ ನಟ ಮೆರವಣಿಗೆಯಲ್ಲಿ ಪಾಲ್ಗೊಂಡರು. ದೇವಸ್ಥಾನದಿಂದ ದಡದಪುರದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ವೇಳೆ ಗಿಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಜಿಪಿಯ ರಾಸಲೀಲೆ ಪ್ರಕರಣ: ರಾಮಚಂದ್ರ ರಾವ್​​ ಮೇಲಿವೆ ಹಲವು ಆರೋಪಗಳು – Kannada News | DGP’s Private Video Goes Viral: Multiple Allegations Surface Against Ramachandra Rao

ಬೆಂಗಳೂರು, ಜನವರಿ 19: ಡಿಜಿಪಿ ರಾಮಚಂದ್ರ ರಾವ್​​ (DGP Ramachandra rao) ಕಚೇರಿಯಲ್ಲಿಯೇ, ಅದು ಸಮವಸ್ತ್ರದಲ್ಲಿಯೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ರಾಸಲೀಲೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಆ ಮೂಲಕ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ರಾಮಚಂದ್ರ ರಾವ್ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್​​ ಸೇರಿದಂತೆ ಹಲವು ಕೇಸ್​ಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ.

ಡಿಜಿಪಿ ರಾಮಚಂದ್ರ ರಾವ್​​ ಮೇಲಿರುವ ಆರೋಪಗಳು ಯಾವವು?

ಸದ್ಯ ರಾಮಚಂದ್ರ ರಾವ್ ಕಥೆ, ಬೇಲಿಯೇ ಎದ್ದು ಹೊಲ ಮೆಯ್ದಂತೆ ಆಗಿದೆ. ಇವರ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. 2014ರಲ್ಲಿ ಮೈಸೂರಿನ ಇಲವಾಲದಲ್ಲಿ ನಡೆದಿದ್ದ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರ ರಾವ್ ಹಣವನ್ನು ದುರ್ಬಳಕೆ ಆರೋಪ ಕೇಳಿಬಂದಿತ್ತು. ಬಸ್​ನಲ್ಲಿ ಸಾಗಿಸಲಾಗುತ್ತಿದ್ದ 2 ಕೋಟಿಗೂ ಅಧಿಕ ಹಣ ರಾಬರಿ ಮಾಡಲಾಗಿತ್ತು. ಈ ರಾಮಚಂದ್ರ ರಾವ್ ದಕ್ಷಿಣ ವಲಯದ ಐಜಿಪಿ ಆಗಿದ್ದರು. ರಿಕವರಿ ಮಾಡಲಾಗಿದ್ದ ಹಣ ದುರ್ಬಳಕೆ ‌ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್​ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆ ಅವರ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.

ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​: ಪೊಲೀಸ್​​ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ

2017ರಲ್ಲಿ ರಾಮಚಂದ್ರ ರಾವ್ ಬೆಳಗಾವಿ ಉತ್ತರ ವಲಯದ ಐಜಿಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ, 2017ರ ನವೆಂಬರ್ 30ರಂದು ನಡೆದ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಸಂಶಯಾಸ್ಪದ ಪೊಲೀಸ್ ಎನ್‌ಕೌಂಟರ್ ಮತ್ತು ಗಂಗಾಧರ ಚಡಚಣ ಸಂಶಯಾಸ್ಪದ ಕೊಲೆ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಹೆಸರು ಕೇಳಿಬಂದಿತ್ತು. ಈ ಎರಡೂ ಪ್ರಕರಣಗಳನ್ನು ನಂತರ ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಅಂದಿನ ಸಿಐಡಿ ಎಸ್ಪಿ ಆನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ, ಈ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಪಾತ್ರ ಇಲ್ಲ ಎಂಬುವುದು ಸಾಬೀತಾಗಿತ್ತು. ಬಳಿಕ ಕಲಬುರಗಿ ಐಜಿಯಾಗಿದ್ದಾಗಲೂ ಮತ್ತೊಂದು ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ

2024ರಲ್ಲಿ ಮಗನ ಹೆಸರಲ್ಲಿ ಬಿಟ್ ಕಾಯಿನ್​ನಲ್ಲಿ ಹೂಡಿಕೆ ಆರೋಪ ಕೇಳಿಬಂದಿತ್ತು. ಇನ್ನು ಇತ್ತೀಚೆಗೆ ಮಗಳು ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್​​ಗೆ ಎಸ್ಕಾರ್ಟ್ ಕೊಟ್ಟ ಆರೋಪದಲ್ಲೂ ರಾಮಚಂದ್ರ ರಾವ್​ ಸಸ್ಪೆಂಡ್​​ ಆಗಿದ್ದರು. ಹೀಗೆ ರಾಮಚಂದ್ರ ರಾವ್​​ ತಮ್ಮ ಅಧಿಕಾರದಲ್ಲಿರುವಾಗಲೇ ಸಾಕಷ್ಟು ಆರೋಪಗಳನ್ನು ಮೈಮೇಲೆ ಎಳೆದುಕೊಂಡಿದ್ದರು.

ವರದಿ: ವಿಕಾಸ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.   

Source link

ನೊಯ್ಡಾ ಟೆಕ್ಕಿ ಸಾವಿನ ಬಗ್ಗೆ ಎಸ್​ಐಟಿ ತನಿಖೆಗೆ ಆದೇಶಿಸಿದ ಸಿಎಂ ಯೋಗಿ ಆದಿತ್ಯನಾಥ್ – Kannada News | Uttar Pradesh CM Yogi Adityanath Orders SIT Probe Into Noida Techie Death Noida CEO Removed

ನೊಯ್ಡಾ, ಡಿಸೆಂಬರ್ 19: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರು ನೊಯ್ಡಾ ಟೆಕ್ಕಿಯ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಈ ವಿಷಯದ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಮೀರತ್ ವಿಭಾಗೀಯ ಆಯುಕ್ತರು ಈ SIT ನೇತೃತ್ವ ವಹಿಸಲಿದ್ದಾರೆ. ಮೀರತ್ ವಲಯದ ಹೆಚ್ಚುವರಿ ಮಹಾನಿರ್ದೇಶಕರು (ADG) ಮತ್ತು ಲೋಕೋಪಯೋಗಿ ಇಲಾಖೆಯ (PWD) ಮುಖ್ಯ ಎಂಜಿನಿಯರ್ ಕೂಡ ಈ ತಂಡದಲ್ಲಿರಲಿದ್ದಾರೆ. 5 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಂಡಕ್ಕೆ ಸೂಚಿಸಲಾಗಿದೆ. ಇದಲ್ಲದೆ, ಐಎಎಸ್ ಅಧಿಕಾರಿ ಲೋಕೇಶ್ ಎಂ ಅವರನ್ನು ನೊಯ್ಡಾ ಪ್ರಾಧಿಕಾರದ ಸಿಇಒ ಸ್ಥಾನದಿಂದ ವಜಾಗೊಳಿಸಲಾಗಿದೆ.

ಗ್ರೇಟರ್ ನೊಯ್ಡಾದಲ್ಲಿ ನೀರು ತುಂಬಿದ ಗುಂಡಿಗೆ ಕಾರು ಬಿದ್ದು 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನೊಳಗೆ ಸಿಲುಕಿದ್ದ ಅವರು ತನ್ನ ಪ್ರಾಣ ಉಳಿಸಿಕೊಳ್ಳಲು ಕಾರಿನ ಬಾಗಿಲು ತೆರೆದು ಕಾರಿನ ಮೇಲೆ ಕುಳಿತಿದ್ದರು. ಮೊಬೈಲ್ ಟಾರ್ಚ್ ಬೀಸುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದರು. ಕೊನೆಗೆ ತನ್ನ ತಂದೆಗೆ ಫೋನ್ ಮಾಡಿ ತಾನು ಬಿದ್ದಿರುವ ವಿಷಯ ತಿಳಿಸಿದ್ದರು. ಆದರೆ, ಮೈ ಕೊರೆಯುತ್ತಿದ್ದ ನೀರಿನಲ್ಲಿ ಕಾರು ಮುಳುಗಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.

ಪೊಲೀಸರು ಹಲವಾರು ಗಂಟೆಗಳ ಕಾಲ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಅವರ ದೇಹವನ್ನು ಹೊರಗೆ ತೆಗೆಯಲಾಯಿತು. ಈ ವೇಳೆ ಡೆಲಿವರಿ ಬಾಯ್ ಒಬ್ಬರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅವರನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಅಪ್ಪಾ ನನಗೆ ಸಾಯಲು ಇಷ್ಟವಿಲ್ಲ, ಬದುಕಬೇಕು, ನೀರಿನ ಹೊಂಡಕ್ಕೆ ಬಿದ್ದು ಕರೆ ಮಾಡಿದ್ದ ಟೆಕ್ಕಿ, ಕೊನೆಗೂ ಪ್ರಾಣ ಉಳೀಲಿಲ್ಲ

ಮುಂಜಾನೆ ದಟ್ಟವಾದ ಮಂಜಿನ ನಡುವೆ ಮೆಹ್ತಾ ಅವರ ಕಾರು ನಿಯಂತ್ರಣ ತಪ್ಪಿ ಸೆಕ್ಟರ್ 150ರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಗಾಗಿ ಅಗೆದ 20 ಅಡಿಗಳಿಗಿಂತ ಹೆಚ್ಚು ಆಳದ ಗುಂಡಿಗೆ ಬಿದ್ದಿತ್ತು. ಅವರು ಸಾವನ್ನಪ್ಪಿದ ಗುಂಡಿ ನೀರಿನಿಂದ ತುಂಬಿತ್ತು. ತಕ್ಷಣ ಅವರು ತಮ್ಮ ತಂದೆಗೆ ಫೋನ್ ಮಾಡಿ ತಾನು ನೀರಿನ ಗುಂಡಿಗೆ ಬಿದ್ದಿದ್ದೇನೆಂದು ತಿಳಿಸಿ ಹೇಗಾದರೂ ನನ್ನನ್ನು ಬದುಕಿಸಿ ಎಂದು ಗೋಗರೆದಿದ್ದರು. ಅವರು ಮನೆಯಿಂದ ಆ ಸ್ಥಳಕ್ಕೆ ಬರುವಷ್ಟರಲ್ಲಿ ಅವರ ಮಗ ಪ್ರಾಣ ಬಿಟ್ಟಾಗಿತ್ತು.

27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ತಮ್ಮ ಮನೆಯಿಂದ ಕೆಲವೇ ನಿಮಿಷಗಳ ದೂರದಲ್ಲಿದ್ದಾಗ ಈ ದುರಂತ ಸಂಭವಿಸಿತ್ತು. ಅವರ ಎಸ್‌ಯುವಿ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು, ಕಟ್ಟಡ ನಿರ್ಮಾಣಕ್ಕೆ ಅಗೆದ ಆಳವಾದ, ನೀರಿನಿಂದ ತುಂಬಿದ ಗುಂಡಿಗೆ ಬಿದ್ದಿತು. ದಟ್ಟವಾದ ಮಂಜು ಕವಿದಿದ್ದರಿಂದ ಅವರಿಗೆ ರಸ್ತೆ ಸರಿಯಾಗಿ ಕಾಣದೆ ಈ ದುರಂತ ಸಂಭವಿಸಿತ್ತು. ಈ ಸ್ಥಳದಲ್ಲಿ ಯಾವುದೇ ಬ್ಯಾರಿಕೇಡ್‌ಗಳು, ಪ್ರತಿಫಲಕಗಳು ಅಥವಾ ಎಚ್ಚರಿಕೆ ದೀಪಗಳು ಇರಲಿಲ್ಲ. ಅನೇಕ ಬಾರಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವರ ಬುಡಕ್ಕೆ ಅಬಕಾರಿ ಡಿಸಿ ಲಂಚ ಪ್ರಕರಣ: ಆರ್​​ಬಿ ತಿಮ್ಮಾಪುರಗೆ ಸಂಕಷ್ಟ – Kannada News | Excise DC bribe Case: Complaint registered In lokayukta Against Minister RB Timmapur

ಬೆಂಗಳೂರು, (ಜನವರಿ 19): ಅಬಕಾರಿ ಡಿಸಿ ಲೋಕಾ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವ ಆರ್​​ಬಿ ತಿಮ್ಮಾಪುರ ಅವರಿಗೂ ಸಂಕಷ್ಟ ಎದುರಾಗಿದೆ. ಲಂಚದ ಬಹುಪಾಲು ಹಣವನ್ನ ಮಿನಿಸ್ಟರ್‌ಗೆ ಕೊಡಬೇಕು ಎನ್ನುವ ಅಬಕಾರಿ ಡಿಸಿಯ (Excise DC) ಆಡಿಯೊ ಆಧಾರದ ಮೇಲೆ ಆರ್.ಬಿ ತಿಮ್ಮಾಪುರ್ (RB Timmapur) ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಹೀಗಾಗಿ ಅಬಕಾರಿ ಲೈಸೆನ್ಸ್ ಗಾಗಿ ಕೋಟಿ ಕೋಟಿ ರೂಪಾಯಿ ಲಂಚ ಕೇಳಿದ್ದ ಅಬಕಾರಿ ಡಿಸಿ ಪ್ರಕರಣ ಇದೀಗ ಸಚಿವರ ಬುಡಕ್ಕೂ ಬಂದಿದೆ.

ಬ್ಯಾಟರಾಯನಪುರ ಕಚೇರಿಯಲ್ಲಿ 25 ಲಕ್ಷ ರೂ.‌ ಲಂಚ ಸ್ವೀಕರಿಸುವ ಕೆಲವೇ ನಿಮಿಷಗಳ ಮುಂಚೆ ದೂರುದಾರ ಲಕ್ಷ್ಮೀನಾರಾಯಣ ಮತ್ತು ಡಿಸಿ ಜಗದೀಶ್ ನಾಯ್ಕ್ ಲೈಸೆನ್ಸ್ ಡೀಲಿಂಗ್ ಮಾತಾಡಿದ್ದರು. ಈ ವೇಳೆ ಡಿಸಿ ಜಗದೀಶ್ ಲಂಚದ ಹಣವನ್ನ ಕೆಲವು ಅಧಿಕಾರಿಗಳ ಜೊತೆ ಸಚಿವರಿಗೂ ಕೊಡಬೇಕು ಎಂದಿದ್ದರು. ಇದೆಲ್ಲವನ್ನ ದೂರುದಾರರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಇದೀಗ ಈ ಆಡಿಯೋ ಆಧಾರದ ಮೇಲೆ ಸಚಿವರ ವಿರುದ್ಧವೇ ಲಕ್ಷ್ಮೀನಾರಾಯಣ ದೂರು ನೀಡಿದ್ದಾರೆ.

ಇದನ್ನೂ ನೋಡಿ: 25 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಸಿಕ್ಕಿದ್ದ ಅಬಕಾರಿ ಉಪ ಆಯುಕ್ತ

ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್-7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಆರೋಪಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಅಬಕಾರಿ ಸಚಿವ ಆರ್​ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ತಮ್ಮ ಮೇಲಿನ ಆರೋಪ ಅಲ್ಲಗೆಳೆದ ಸಚಿವ

ಇನ್ನು ಅಬಕಾರಿ ಇಲಾಖೆ ಲಂಚ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ ತಿಮ್ಮಾಪುರ್,
ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಇದು ನನ್ನ ವಿರುದ್ಧದ ಕುತಂತ್ರ. ನನ್ನ ತೇಜೋವಧೆ ಮಾಡುವ ಕೆಲಸ, ನಾನು ಕಾನೂನು ಹೋರಾಟ ಮಾಡುತ್ತೇನೆ. ಯಾರೋ ಹೇಳಿದಾಕ್ಷಣ ನನ್ನ ಪಾತ್ರ ಇದೆ ಅಂತಾನಾ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಲೋಕಾಯುಕ್ತ ಎಸ್ ಪಿ ಶಿವಪ್ರಕಾಶ್ ದೇವರಾಜ್ ಗೆ ದೂರುದಾರ ಲಕ್ಷ್ಮೀನಾರಾಯಣ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಲೋಕಾಯುಕ್ತರು ಮಂತ್ರಿ ವಿರುದ್ಧ ಅದ್ಯಾವ ರೀತಿ ತನಿಖೆ ನಡೆಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9. ಬೆಂಗಳೂರು

Source link

WPL 2026: ಬೆತ್ ಮೂನಿ, ಸೋಫಿ ಡಿವೈನ್ ವಿಕೆಟ್ ಉರುಳಿಸಿದ ಸಯಾಲಿ ಸತ್ಘರೆ – Kannada News | WPL: RCB Sets 177 Target vs GG; Sayali Satghare Delivers Early Blows

ಮಹಿಳಾ ಪ್ರೀಮಿಯರ್​ ಲೀಗ್​ನ 12ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವೆ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಎರಡನೇ ಓವರ್​ನಲ್ಲೇ ಎರಡು ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎಂದಿನಂತೆ ಆರ್​ಸಿಬಿ ಪರ ಲಾರೆನ್ ಬೆಲ್ ಮೊದಲ ಓವರ್​ ಬೌಲ್ ಮಾಡಿದರು. ಈ ಓವರ್​ನಲ್ಲಿ ಗುಜರಾತ್ ಕೇವಲ 3 ರನ್ ಕಲೆಹಾಕಿತ್ತು. ಹೀಗಾಗಿ ಎರಡನೇ ಓವರ್​ನಲ್ಲಿ ರನ್ ಕಲೆಹಾಕಲೇಬೇಕಾದ ಒತ್ತಡದಲ್ಲಿದ್ದ ಗುಜರಾತ್ ಓಪನರ್ ಬೆತ್ ಮೂನಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಓವರ್​ನ ಮೊದಲ ಎಸೆತದಲ್ಲೇ ಕ್ಲಿನ್ ಬೌಲ್ಡ್ ಆದರು. ನಂತರ ಸ್ಟ್ರೈಕ್​ಗೆ ಬಂದ ಮತ್ತೊಬ್ಬ ಓಪನರ್ ಸೋಫಿ ಡಿವೈನ್ ಕೂಡ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಮೂನಿ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಡಿವೈನ್​ಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಎರಡೂ ವಿಕೆಟ್​ಗಳು ಭಾರತೀಯ ಬೌಲರ್ ಸಯಾಲಿ ಸತ್ಘರೆಗೆ ಬಿದ್ದವು.

Source link

Video: ಹೆಣ್ಮಕ್ಕಳಿಗೆ ಬೆಂಗಳೂರಿನ ಈ ಪ್ರದೇಶ ಸೇಫ್ ಅಲ್ಲ; ಮಹಿಳೆ ಹೀಗೆನ್ನಲು ಕಾರಣ ಇದೇ ನೋಡಿ – Kannada News | Bengaluru: A woman claiming that Bengaluru’s outskirts feel unsafe at night

ಬೆಂಗಳೂರು, ಜನವರಿ 19: ಬಸ್ಸಿನಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಹೆಣ್ಣು ಮಕ್ಕಳಿಗೆ ಹಾಡುಹಗಲಲ್ಲೇ ಅಹಿತಕರ ಅನುಭವವಾಗಿರಬಹುದು. ಆದರೆ ಬೆಂಗಳೂರಿನ (Bengaluru) ಹೊರವಲಯದಲ್ಲಿರಾತ್ರಿ ಓಡಾಡುತ್ತಿದ್ದ ಮಹಿಳೆಗೆ , ಹೆಣ್ಣು ಮಕ್ಕಳಿಗೆ ಈ ಸ್ಥಳ ಸೇಫ್ ಅಲ್ಲ ಎಂದೆನಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಜಿಮ್‌ನಿಂದ ಹಿಂತಿರುಗುವ ವೇಳೆ ವಿಡಿಯೋ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

ದಿಯಪ್ಪರ್‌ಗರ್ಲಿ (@theyappergirlie) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೂ ಬೆಂಗಳೂರಿನ ಹೊರವಲಯದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಜಿಮ್‌ನಿಂದ ಹಿಂತಿರುಗಿದಾಗ ಬೀದಿ ದೀಪಗಳಿಲ್ಲದ ಈ ಪ್ರದೇಶವನ್ನು ನೋಡಿ ಶಾಕ್ ಆಗಿದ್ದಾರೆ. ಇಲ್ಲಿ ನಿಶ್ಯಬ್ದ ಮತ್ತು ಕತ್ತಲೆ ಮಾತ್ರ ಎಂದು ತನ್ನ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ನಾನು ಈ ಸ್ಥಳದಿಂದ ದೂರ ಹೋಗಲು ಬಯಸುತ್ತೇನೆ. ಬೀದಿ ದೀಪಗಳಿಲ್ಲದ ಈ ಸ್ಥಳ ತುಂಬಾ ಅಪಾಯಕಾರಿ ಎಂದೆನಿಸುತ್ತಿದೆ. ಹೆಣ್ಣು ಮಕ್ಕಳೇ ನೀವು ಹೊರವಲಯಕ್ಕೆ ಬರಲು ಬಯಸಿದರೆ, ದಯವಿಟ್ಟು ಎರಡು ಬಾರಿ ಯೋಚಿಸಿ. ನಗರದ ಭಾಗವು ತುಂಬಾ ಚೆನ್ನಾಗಿದೆ. ಆದರೆ ಹೊರವಲಯ ಖಂಡಿತ ಸೇಫ್ ಇಲ್ಲ ಎಂದು ಹೇಳಿರುವುದನ್ನು ನೋಡಬಹುದು.

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬ್ಲೂಆರ್‌ನ ಹೊರವಲಯಗಳು ಹಗಲು ಹೊತ್ತಿನಲ್ಲಿಯೂ ಅಪಾಯಕಾರಿ ಎನಿಸುತ್ತಿದ್ದವು, ಆ ಪ್ರದೇಶಗಳನ್ನು ಹಾದುಹೋಗುವಾಗ ನಿಮ್ಮ ಕ್ಯಾಮೆರಾವನ್ನು ಆನ್‌ನಲ್ಲಿ ಇರಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇವತ್ತು ಬೆಂಗಳೂರಿನಲ್ಲಿ ಎಲ್ಲೇ ಹೋದರೂ ರಾತ್ರಿ 9 ಗಂಟೆಯ ನಂತರ ನಿಮಗೆ ಹಾಗೆಯೇ ಅನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ ಸಂಪಾದಿಸುವ ಮಹಿಳೆ

ಇನ್ನೊಬ್ಬರು, ನಗರದ ಬಗ್ಗೆ ಇಲ್ಲಸಲ್ಲದನ್ನು ಹೇಳುವುದನ್ನು ನಿಲ್ಲಿಸಿ. ನಾನು 13 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇನೆ ಮತ್ತು ಕಳೆದ ವರ್ಷದಿಂದ ನಾವು ಹೊರವಲಯಕ್ಕೆ ಸ್ಥಳಾಂತರಗೊಂಡಿದ್ದೇವೆ. ನನ್ನನ್ನು ನಂಬಿರಿ, ಇದು ಇತರ ಸ್ಥಳಗಳಿಗಿಂತ ತುಂಬಾ ಉತ್ತಮವಾಗಿದೆ. ನೀವು ಹೊರವಲಯದ ಯಾವ ಸ್ಥಳದಲ್ಲಿದ್ದೀರಿ ಎಂದು ನನಗೆ ಖಚಿತವಿಲ್ಲ. ಆದರೆ ನಾವು ನಗರ ಮಿತಿಯ ಹೊರವಲಯದಲ್ಲಿದ್ದೇವೆ, ಈ ಸ್ಥಳ ಅದ್ಭುತವಾಗಿದೆ. ಹೊಂದಿಕೊಳ್ಳಲು ಪ್ರಯತ್ನಿಸಿ ಮತ್ತು ದೂರು ನೀಡುವುದನ್ನು ನಿಲ್ಲಿಸಿ. ನೀವು ಇನ್ನೂ ಅಸುರಕ್ಷಿತರಾಗಿದ್ದರೆ ಪೆಪ್ಪರ್ ಸ್ಪ್ರೇ ಅನ್ನು ಕೈಯಲ್ಲಿ ಇಟ್ಟುಕೊಳ್ಳಿ. ನೀವು ಇಲ್ಲಿ ಅಸುರಕ್ಷಿತರೆಂದು ಭಾವಿಸಿದರೆ, ಇತರ ಎಲ್ಲಾ ನಗರದ ಹೊರವಲಯಗಳು ಒಂದೇ ಆಗಿರುತ್ತವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:08 pm, Mon, 19 January 26

Source link