ಅಭಿಮಾನಿಗಳಿಗೆ ರಸದೌತಣ; ಒಂದೇ ದಿನ ಭಾರತ- ಪಾಕ್ ನಡುವೆ 2 ಪಂದ್ಯಗಳು! ಯಾವಾಗ ಗೊತ್ತಾ? – Kannada News | Double Thrill! India Pak T20 World Cup and Women’s Asia Cup Matches on Feb 15
ಭಾರತ ಹಾಗೂ ಪಾಕಿಸ್ತಾನ (india vs pakistan) ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಹಬ್ಬದಂತಹ ಸಂಭ್ರಮ. ಹೀಗಿರುವಾಗ ಈ ಎರಡೂ ತಂಡಗಳು ಯಾವಾಗ ಕಣಕ್ಕಿಳಿಯುತ್ತವೆ ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಒಂದೇ ದಿನ ಭಾರತ- ಪಾಕ್ ನಡುವೆ ಎರಡೆರಡು ಪಂದ್ಯಗಳು ಎಂದರೆ ಕೇಳಬೇಕೆ. ವಾಸ್ತವವಾಗಿ ಐಸಿಸಿ ಟಿ20 ವಿಶ್ವಕಪ್ 2026 (t20 world cup 2026) ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ…