Category Archives: Blog

Your blog category

ಭಾರತದ ಮುಂದಿನ ಏಕದಿನ ಸರಣಿ ಯಾವಾಗ? ರೋಹಿತ್, ಕೊಹ್ಲಿ ಆಡ್ತಾರಾ? – Kannada News | India’s 2026 ODI Series Loss and Next Match: Gill’s Team Faces England in July

ಶುಭ್​ಮನ್ ಗಿಲ್ (Shubman Gill) ನಾಯಕತ್ವದ ಟೀಂ ಇಂಡಿಯಾ 2026 ರ ಮೊದಲ ಸರಣಿಯನ್ನು ಸೋತಿದ್ದು, ಸೋಲಿನೊಂದಿಗೆ ವರ್ಷವನ್ನು ಆರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತ್ತಾದರೂ ಆ ನಂತರ ನ್ಯೂಜಿಲೆಂಡ್ ಬಲವಾದ ಪುನರಾಗಮನ ಮಾಡಿ ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾರಂತಹ (Rohit Sharma) ಅನುಭವಿಗಳು ಆಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಈ ಇಬ್ಬರು ದಿಗ್ಗಜರು ಇದೊಂದು ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಸಾಗರವೇ ಹರಿದಿತ್ತು. ಅದರಂತೆ ಕೊಹ್ಲಿ ತಮ್ಮ ಅನುಭವವನ್ನು ಧಾರೆ ಎರೆದರೆ, ರೋಹಿತ್ ಮಾತ್ರ ಸಪ್ಪೆ ಪ್ರದರ್ಶನ ನೀಡಿದರು. ಹೀಗಾಗಿ ತಂಡ ಸರಣಿ ಸೋತಿತ್ತು.

ಮೇಲೆ ಹೇಳಿದಂತೆ ವಿರಾಟ್ ಮತ್ತು ರೋಹಿತ್ ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತರಾಗಿದ್ದಾರೆ. ಆದ್ದರಿಂದ, ಇಬ್ಬರೂ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಾರೆ. ಆದ್ದರಿಂದ ಇವರಿಬ್ಬರು ಯಾವಾಗ ಮತ್ತೆ ಕಣಕ್ಕಿಳಿಯುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಆ ಸರಣಿಯಲ್ಲಾದರೂ ರೋಹಿತ್ ಫಾರ್ಮ್​ಗೆ ಮರಳುತ್ತಾರಾ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಹಾಗಿದ್ದರೆ ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿ ಯಾವಾಗ? ಯಾರ ವಿರುದ್ಧ ಎಂಬುದನ್ನು ನೋಡುವುದಾದರೆ..

ಭಾರತದ ಮುಂದಿನ ಏಕದಿನ ಸರಣಿ ಯಾವಾಗ?

ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿಗಾಗಿ ಭಾರತೀಯ ಅಭಿಮಾನಿಗಳು 1-2 ಅಲ್ಲ, 6 ತಿಂಗಳು ಕಾಯಬೇಕಾಗುತ್ತದೆ. ಟೀಂ ಇಂಡಿಯಾ ಜುಲೈ ತಿಂಗಳಲ್ಲಿ ಏಕದಿನ ಸರಣಿಯನ್ನು ಆಡಲಿದೆ. ಈ ಏಕದಿನ ಸರಣಿಯಲ್ಲಿ ಗಿಲ್ ಪಡೆ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ, ಇಂಗ್ಲೆಂಡ್‌ ಪ್ರವಾಸವನ್ನು ಕೈಗೊಳ್ಳಲಿದೆ.

ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸವು 5 ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಇದರ ನಂತರ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ರೋಹಿತ್ ಮತ್ತು ವಿರಾಟ್ ಇಬ್ಬರೂ ಈ ಸರಣಿಯಲ್ಲಿ ಆಡುವುದು ಖಚಿತ. ಹೀಗಾಗಿ ಅಭಿಮಾನಿಗಳು ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು 6 ತಿಂಗಳು ಕಾಯಬೇಕಾಗುತ್ತದೆ.

IND vs NZ: ವಾರಿಯರ್ ವಿರಾಟ್; ವಿಶ್ವ ದಾಖಲೆಯ ಶತಕ ಸಿಡಿಸಿದ ಕೊಹ್ಲಿ

ಭಾರತದ ಮುಂಬರುವ ಏಕದಿನ ಸರಣಿ ವೇಳಾಪಟ್ಟಿ

  • ಭಾರತ vs ಇಂಗ್ಲೆಂಡ್, ಮೊದಲ ಪಂದ್ಯ, ಜುಲೈ 14, ಬರ್ಮಿಂಗ್ಹ್ಯಾಮ್
  • ಭಾರತ vs ಇಂಗ್ಲೆಂಡ್, 2ನೇ ಪಂದ್ಯ, ಜುಲೈ 16, ಕಾರ್ಡಿಫ್
  • ಭಾರತ vs ಇಂಗ್ಲೆಂಡ್, 3ನೇ ಪಂದ್ಯ, ಜುಲೈ 19, ಲಾರ್ಡ್ಸ್

ಐಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ ರೋಹಿತ್-ವಿರಾಟ್

ಏತನ್ಮಧ್ಯೆ, ರೋಹಿತ್ ಮತ್ತು ವಿರಾಟ್ ಅವರನ್ನು ಟೀಂ ಇಂಡಿಯಾದ ಜೆರ್ಸಿಯಲ್ಲಿ ನೋಡಲು 6 ತಿಂಗಳು ಕಾಯಬೇಕಾಗುತ್ತದೆ. ಆದಾಗ್ಯೂ, ಇಬ್ಬರೂ ಐಪಿಎಲ್ ಪಂದ್ಯಾವಳಿಯಲ್ಲಿ ಮೈದಾನಕ್ಕೆ ಮರಳಲಿದ್ದಾರೆ. ಐಪಿಎಲ್‌ನ 19 ನೇ ಸೀಸನ್ ಮಾರ್ಚ್ ಕೊನೆಯ ವಾರದಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ, ರೋಹಿತ್ ಮುಂಬೈ ಪರ ಮತ್ತು ವಿರಾಟ್ ಆರ್‌ಸಿಬಿ ಪರ ಆಡುವುದನ್ನು ಕಾಣಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Inspiring Story: ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ದೀಪಾ ದೇವರಾಜನ್ – Kannada News | Success story of how Deepa Devarajan made mark in Interior designing field as woman entrepreneur

ದೀಪಾ ದೇವರಾಜನ್ (Deepa Devarajan) ಅವರದ್ದು ಶ್ರೀಮಂತ ಕುಟುಂಬ ಅಥವಾ ಸಿರಿತನದ ಹಿನ್ನೆಲೆಯಲ್ಲ. ಅವರು ಹಿಂದಿ ಮಾತನಾಡುವ, ಪುರುಷ ಪ್ರಾಬಲ್ಯ ಇರುವ ಉದ್ಯಮದಲ್ಲಿ ತನ್ನದೇ ಒಂದು ಸ್ಥಾನವನ್ನು ಪಡೆದುಕೊಂಡಿರುವ ದಕ್ಷಿಣ ಭಾರತೀಯ ಮಹಿಳೆ. ಸಾಧಾರಣ ಸರ್ವಿಸ್ ಕ್ಲಾಸ್ ಹಿನ್ನೆಲೆ ಇರುವ ಕುಟುಂಬದಿಂದ ಬಂದವರಾಗಿದ್ದು, ಇಂಟೀರಿಯರ್ ಡಿಸೈನಿಂಗ್ ಕ್ಷೇತ್ರಕ್ಕೆ ಕಾಲಿಡುವುದು ಅಷ್ಟು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ, ಛಲ, ಪರಿಶ್ರಮ, ಧೈರ್ಯ, ಪ್ಲಾನಿಂಗ್ ಅವರನ್ನು ಈ ಕ್ಷೇತ್ರಕ್ಕೆ ಕಾಲಿಟ್ಟು ಎದ್ದು ನಿಲ್ಲುವಂತೆ ಮಾಡಿವೆ.

ಸೀಮಿತ ಸಂಪನ್ಮೂಲಗಳು, ಆದರೆ ನಿಚ್ಚಳ ಕನಸುಗಳು

ದೀಪಾ ಅವರ ಪ್ರಯಾಣವು ಸಮರ್ಪಕವಾದ ಸಪೋರ್ಟ್ ಸಿಸ್ಟಂ ಇಲ್ಲದೇ ಆರಂಭವಾಯಿತು. ಇಂಟೀರಿಯರ್ ಡಿಸೈನ್​ನಂತಹ ಪ್ರೊಫೆಷನ್ ಅನ್ನು ಪ್ರವೇಶಿಸುವುದು ಬಹಳ ಸವಾಲಿನದ್ದಾಗಿತ್ತು. ಆ ಕೋರ್ಸ್​ಗೆ ದಾಖಲಾಗುವುದೇ ಕಷ್ಟಕರವಾಗಿತ್ತು. ಸಣ್ಣ ಪುಟ್ಟ ಕೆಲಸಗಳ್ನು ಮಾಡುತ್ತಾ ಪ್ರತೀ ಪೈಸೆಯನ್ನೂ ಎಚ್ಚರಿಕೆಯಿಂದ ಉಳಿಸಿ, ಹಣ ಕೂಡಿಟ್ಟು ಅದನ್ನು ಶಿಕ್ಷಣ ಹಾಗೂ ಭವಿಷ್ಯಕ್ಕೆ ಹೂಡಿಕೆ ಮಾಡಿದರು.

ಇದನ್ನೂ ಓದಿ: ಬ್ಯಾಂಕ್ ಸಾಲ ಕೊಡದಾಗ ಮನೆ ಖರ್ಚಿನಲ್ಲಿ ಹಣ ಉಳಿಸಿ ಬ್ಯುಸಿನೆಸ್ ಕಟ್ಟಿ ಯಶಸ್ವಿಯಾದ ಪ್ರತಿಭಾ ಶರ್ಮಾ

ಕಲ್ಚರಲ್ ಸ್ಟೀರಿಯೋಟೈಪ್ಸ್ ಮತ್ತು ಕೌಟುಂಬಿಕ ವಾಸ್ತವ

Purple Dreams ನ ಸಂಸ್ಥಾಪಕಿ ದೀಪಾ, ‘ಆಕಾಶದ ಆಚೆ ಇನ್ನೊಂದು ಆಕಾಶ ಇರಬಹುದು’ ಎಂಬ ಆಲೋಚನೆಯೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಿದ್ದೆ ಎಂದು ಹೇಳುತ್ತಾರೆ. “ಮಗಳೇ, ನಾವು ದಕ್ಷಿಣದವರು, ನೀನು ಯಾವುದೇ ಬ್ಯುಸಿನೆಸ್ ನಡೆಸಲು ಸಾಧ್ಯವಾಗುವುದಿಲ್ಲ. ಮೊದಲು, ನೀನು ಓದಬೇಕು, ನಂತರ ಒಳ್ಳೆಯ ಕೆಲಸ ಗಳಿಸಿ ಹಣ ಸಂಪಾದಿಸಿ, ಮತ್ತು ನಂತರ ಮದುವೆಯಾಗಬೇಕು” ಎಂದು ತನಗೆ ತಾಯಿ ಹೇಳುತ್ತಿದ್ದ ಮಾತುಗಳನ್ನು ದೀಪಾ ದೇವರಾಜನ್ ನೆನಪಿಸಿಕೊಳ್ಳುತ್ತಾರೆ.

ಅವರ ಉದ್ಯಮಶೀಲತೆಗೆ ಬುನಾದಿ ಹಾಕಿದ ಫೈನಾನ್ಷಿಯಲ್ ಪ್ಲಾನಿಂಗ್

ದೀಪಾ ದೇವರಾಜನ್ ಅವರಿಗೆ ಲಾಂಗ್ ಟರ್ಮ್ ಪ್ಲಾನಿಂಗ್ ಮತ್ತು ಡಿಸಿಪ್ಲಿನ್ ಮೇಲೆ ಹೆಚ್ಚು ವಿಶ್ವಾಸ. ಆರ್ಥಿಕ ಸ್ವಾತಂತ್ರ್ಯ ಇದ್ದದ್ದರಿಂದ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ಕ್ರಮೇಣ ಅವರು ತಮ್ಮದೇ ದಾರಿ ಕಂಡುಕೊಳ್ಳುತ್ತಾ ಹೋದರು. ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಜೆಕ್ಟ್​ಗಳಿಗೆ ಇಂಟೀರಿಯರ್ ಡಿಸೈನ್ ಸಲ್ಯೂಶನ್ಸ್ ಒದಗಿಸುವ Purple Dreams ಎನ್ನುವ ತಮ್ಮದೇ ಸಂಸ್ಥೆ ಸ್ಥಾಪಿಸಿದರು. ಇಂದು, ಅವರ ಗುರುತು ಕಠಿಣ ಪರಿಶ್ರಮ, ಸ್ಟ್ರಾಟಿಜಿಕ್ ಇನ್ವೆಸ್ಟ್​ಮೆಂಟ್, ನಿರಂತರ ವೃತ್ತಿಪರ ಕೌಶಲ್ಯವರ್ಧನೆ ಮತ್ತು ಕ್ಲೈಂಟ್ ಅಗತ್ಯಗಳಿಗೆ ಅನುಗುಣವಾಗಿ ಬಜೆಟ್ ಸ್ನೇಹಿ ಪರಿಹಾರಗಳನ್ನು ಒದಗಿಸುವುದು ಇವುಗಳಿಂದ ದೀಪಾ ದೇವರಾಜನ್ ಗುರುತಿಸಲಾಗುತ್ತದೆ. ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಸೈನ್ ನಡುವೆ ಗಾಢ ಸಂಬಂಧ ಇದೆ ಎಂಬುದು ಅವರ ಭಾವನೆ. ಈ ಕನೆಕ್ಷನ್​ನಿಂದಾಗಿ ಅತ್ಯಾಧುನಿಕ ಕಲರ್ ಪ್ಯಾಟರ್ನ್​ಗಳು, ರಿಫೈನ್ಡ್ ಮೆಟೀರಿಯಲ್ ಮತ್ತು ಡೀಟೇಲಿಂಗ್ ಇರುವ ಒಳಾಂಗಣ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ.

ಇದನ್ನೂ ಓದಿ: 9-5 ಸೆಕ್ಯೂರ್ಡ್ ಜಾಬ್ ಬಿಟ್ಟು ಮನಸ್ಸಿನ ಮಾತು ಕೇಳಿ ಹಣ ಮತ್ತು ನೆಮ್ಮದಿ ಕಂಡುಕೊಂಡ ರಿಮ್ಜಿಮ್ ಸೈಕಿಯಾ

ದೀಪಾ ದೇವರಾಜನ್

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (https://scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (https://smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ – Kannada News | Gadag: What Was Discovered on the Fourth Day of Excavations at Lakkundi; Here Are the Details

ಲಕ್ಕುಂಡಿ ಗ್ರಾಮದಲ್ಲಿ 4ನೇ ‌ದಿನದ ಉತ್ಖನನ ಕಾರ್ಯ

ಗದಗ, ಜನವರಿ 19: ಲಕ್ಕುಂಡಿ (Lakkundi) ಶಿಲ್ಪಕಲೆಗಳ, ದೇವಾಲಯಗಳ ಸ್ವರ್ಗ, ಚಿನ್ನದ ನಾಡು. ಇಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಕೋಟೆ ಗೋಡೆಯಲ್ಲಿ ಹುದುಗಿ ಹೋಗಿರುವ ರಾಶಿ ರಾಶಿ ಶಿಲ್ಪಕಲೆಗಳು ಟಿವಿ9 ಕ್ಯಾವೆರಾದಲ್ಲಿ ಸೆರೆಯಾಗಿವೆ. ಈ ನಡುವೆ ಉತ್ಖನ ನಡೆಯುತ್ತಿರುವ ಜಾಗದಲ್ಲಿ ಇಂದು ಕೂಡ ಪುರಾತನ ಶಿಲೆಗಳು ಪತ್ತೆಯಾಗಿವೆ. ಪುರಾತನ ಕಾಲದ ಕೊಡಲಿ, ಗಂಟೆ, ನಾಗರ ಮೂರ್ತಿ, ಶಿವಲಿಂಗದ ಪಾನಿ ಪೀಠ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿದ್ದು, ತೀವ್ರ ಕುತೂಹಲ‌ ಮೂಡಿಸುತ್ತಿದೆ. ಇನ್ನು ಈ ವೇಳೆ ಕಾವಿದಾರಿಯೊಬ್ಬ ಉತ್ಖನನ ಜಾಗಕ್ಕೆ ಎಂಟ್ರಿಕೊಟ್ಟು ವಿಚಿತ್ರವಾಗಿ ವರ್ತಿಸಿದ್ದಾರೆ.

ಇಂದು ಸಿಕ್ಕಿದ್ದೇನು? 

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಇಂದು 4ನೇ ದಿನದ ಉತ್ಖನನ ಕಾರ್ಯ ನಡೆದಿದೆ. ಐತಿಹಾಸಿಕ ದೇವಾಲಯಗಳಿಗೆ ಬಳಸಿದ ಕಲಾಕೃತಿ ಹೊಂದಿರುವ ಶಿಲೆಗಳು ಪತ್ತೆಯಾಗಿದೆ. ಕಲೆಗಳ ಶ್ರೀಮಂತ ನಾಡು ಲಕ್ಕುಂಡಿ ರಾಜ್ಯದ ಜನರ ಕುತೂಹಲ ಹೆಚ್ಚಿಸುತ್ತಿದೆ. ಚಿನ್ನದಲ್ಲಿ‌ ಮಾತ್ರ ಶ್ರೀಮಂತಿಕೆ ಅಲ್ಲ. ಕಲೆಗಳಲ್ಲೂ ಶ್ರೀಮಂತಿಕೆ ಹೊಂದಿದ ನಾಡು ಲಕ್ಕುಂಡಿ ಅನ್ನೋದು ಶಿಲ್ಪಕಲೆಗಳು ಸಾರಿ ಸಾರಿ ಹೇಳುತ್ತಿವೆ.

ಇದನ್ನೂ ಓದಿ: ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ

4ನೇ ದಿನದ ಉತ್ಖನನ ಜಾಗದಲ್ಲಿ ಆಯುಧ ಮಾದರಿಯ ಕಲ್ಲು ಪತ್ತೆಯಾಗಿದೆ. ಇದು ಶಿಲಾಯುಗದಲ್ಲಿ ಬಳಕೆಯಾಗುತ್ತಿದ್ದ ಕೊಡಲೆ ಆಕಾರದ ಶಿಲೆ ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು, ಮುಂದಿನ ಒಂದು ಭಾಗ ಮೊನಚಾಗಿದೆ. ಐತಿಹಾಸಿಕ ದೇವಸ್ಥಾನದ ಸ್ತಂಭದ ಮತ್ತು ವಿತಾನದ (ಛತ್ತು) ಮಧ್ಯದಲ್ಲಿರುವ ಬೋದಿಗೆ ಭಾಗದ ಅವಶೇಷ ಪತ್ತೆ ಆಗಿದೆ. ಇದೆ ವೇಳೆ ಲೋಹದ ಗಂಟೆಯೊಂದು ಪತ್ತೆಯಾಗಿದೆ. ಪುರಾತತ್ವ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ದಿನಗೂಲಿ ಹೆಚ್ಚಿಸುವಂತೆ ಕಾರ್ಮಿಕರ ಆಗ್ರಹ

ಇನ್ನು 4ನೇ ದಿನದ ಉತ್ಖನನ ಕಾರ್ಯ ಇಂದು ತಡವಾಗಿ ಆರಂಭವಾಯಿತು. ಕಾರಣ ಉತ್ಖನನ ಕಾರ್ಮಿಕರು ಸರ್ಕಾರದಿಂದ ಕೊಡುವ ವೇತನ ವಿಚಾರದಲ್ಲಿ ಅಪಸ್ವರ ಎತ್ತಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗಬೇಕಿದ್ದ ಉತ್ಖನ ಕೆಲಸ 45 ನಿಮಿಷ ತಡವಾಗಿದೆ. ಉತ್ಖನನ ಕಾರ್ಮಿಕರು ಹೆಚ್ಚಿನ ವೇತನ ನೀಡುವಂತೆ ಆಗ್ರಹಿಸಿದರು. ದಿನಕ್ಕೆ 374 ರೂ ವೇತನ ನೀಡ್ತಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ದಿನಕ್ಕೆ 4 ಗಂಟೆ ಕೆಲಸ ಮಾಡಿದರೆ 374 ರೂ ನೀಡಲಾಗುತ್ತದೆ. ಆದರೆ ಇಲ್ಲಿ 10 ಗಂಟೆ ವರೆಗೆ ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದು, ಕೇವಲ 374 ರೂ ಸಂಬಳ‌ ಕೊಡುತ್ತಿದ್ದಾರೆ. ನಮಗೆ 600 ರೂ ವೇತನ ನೀಡಬೇಕು ಅಂತ ಆಗ್ರಹಿಸಿದರು.

ಇತರೆ ಕೂಲಿ ಕೆಲಸ, ಜಮೀನು ಕೆಲಸ ಹಾಗೂ ಗಾರಿ ಕೆಲಸಕ್ಕೆ ಹೋದರೆ ಕಡಿಮೆ ಸಮಯ ಹೆಚ್ಚಿನ ವೇತನ ಸಿಗುತ್ತೆ. ಇಲ್ಲಿ ಹೆಚ್ಚು ಸಮಯ ಕೆಲಸ‌ ಮಾಡುತ್ತೇವೆ, ಆದರೆ ಕಡಿಮೆ ಕೂಲಿ ಕೊಡುತ್ತಾರೆ. ಬೇರೆ ಬೇರೆ ಕೆಲಸಕ್ಕೆ ಮಹಿಳೆಯರಿಗೆ 500 ರಿಂದ 600 ರೂ ವೇತನ ಸಿಗುತ್ತೆ. ಪುರುಷ ಕಾರ್ಮಿಕರು 1000 ಸಾವಿರ ರೂ.ವರೆಗೆ ದುಡಿಯುತ್ತೇವೆ. ಇಲ್ಲಿ ಹೆಚ್ಚು ಸಮಯ, ಕಡಿಮೆ ಕೂಲಿ ಕೊಡುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನದ ಚಾಮುಂಡಿ ವಿಗ್ರಹ ಇದೆ ಎಂದ ‘ಬುರುಡೆಬಾಬಾ’!

ಉತ್ಖನನ ಸ್ಥಳಕ್ಕೆ ಸ್ವಯಂ ಘೋಷಿಸಿತ ಹಿಂಬದಿ ನಡೆಯುವ ಸ್ವಾಮೀಜಿ ಆಗಮಿಸಿ, ಚಿತ್ರವಿಚಿತ್ರವಾಗಿ ವರ್ತಿಸಿದರು. ಹೈಡ್ರಾಮಾದಿಂದ ಜನ ಕೂಗಾಡಲು ಶುರುಮಾಡಿದರು. ನಾನು ಶಿವಯ್ಯ ಹಿರೇಮಠ ಎಂಬ ಸ್ವಾಮೀಜಿ. ನಾನೊಬ್ಬ ಪವಾಡ ಪುರುಷ. ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ‌ ಚಿನ್ನದ ಮೂರ್ತಿ, ಕಿರಿಟ ಇದೆ ಎಂದು ಜನರನ್ನ ನಂಬಿಸುವ ಕೆಲಸ ಮಾಡಿದರು. ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ನಡೆಸಿದರು.

ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ: ಗ್ರಾಮಸ್ಥರಿಗೆ ಬೆದರಿ ಓಡಿದ ಸ್ವಯಂಘೋಷಿತ ಪವಾಡ ಪುರುಷ!

ಮೊದ ಮೊದಲು ಸ್ವಾಮಿಜಿಯ ಮಾತುಗಳು, ಅವರ ಆಕ್ಟಿಂಗ್ ಜನರಿಗೆ ತೀವ್ರ ಕುತೂಲ ಮೂಡಿಸಿತ್ತು. ಸ್ವಾಮೀಜಿ ಹೇಳುವುದು ಸುಳ್ಳು ಎಂದು ತಿಳಿದ ಜನರು ತರಾಟೆ ತೆಗೆದುಕೊಂಡರು. ಬಳಿಕ ಉತ್ಖನನ ಸ್ಥಳದಿಂದಲೇ ಓಡಿಸಿದರು. ಸದ್ಯ ಉತ್ಖನನ ಸ್ಥಳದಲ್ಲಿ ಇನ್ನು ಏನೆಲ್ಲಾ ಅವಶೇಷಗಳು ಪತ್ತೆಯಾಗುತ್ತವೆ ಕಾಯ್ದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದ ಆರ್ಥಿಕ ಬೆಳವಣಿಗೆ ಶೇ. 7.3; ಐಎಂಎಫ್ ಮತ್ತು ಮೂಡೀಸ್ ಏಜೆನ್ಸಿ ಅಂದಾಜು – Kannada News | IMF and Moody’s Ratings Agency upgrade India’s GDP growth projection to 7.3pc in 2025 and 26fy

ನವದೆಹಲಿ, ಜನವರಿ 19: 2025ರ ಕ್ಯಾಲಂಡರ್ ವರ್ಷದಲ್ಲಿ, ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕ ಬೆಳವಣಿಗೆ (GDP) ಶೇ. 7.3ರಷ್ಟು ದಾಖಲಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಮೂಡೀಸ್ ಏಜೆನ್ಸಿ ಅಂದಾಜು ಮಾಡಿವೆ. ಈ ಎರಡೂ ಸಂಸ್ಥೆಗಳು ಕೂಡ ತಮ್ಮ ಹಿಂದಿನ ಅಂದಾಜನ್ನು ಪರಿಷ್ಕರಿಸಿದ್ದು, ನಿರೀಕ್ಷೆ ಹೆಚ್ಚಿಸಿವೆ. 2025ರಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು ಎಂದು ಐಎಂಎಫ್ ಹೇಳಿದೆ. 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು ಎಂದು ಮೂಡೀಸ್ ಹೇಳಿದೆ.

ಐಎಂಎಫ್ ತನ್ನ ಹಿಂದಿನ ವರ್ಲ್ಡ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಭಾರತದ ಜಿಡಿಪಿ 2025ರಲ್ಲಿ ಶೇ. 6.7 ಬೆಳೆಯಬಹುದು ಎಂದು ನಿರೀಕ್ಷಿಸಿತ್ತು. ಇದೀಗ 70 ಮೂಲಾಂಕಗಳಷ್ಟು ಹೆಚ್ಚಿನ ಬೆಳವಣಿಗೆಯ ನಿರೀಕ್ಷೆ ಮಾಡಿದೆ. ಪ್ರಸಕ್ತ ಕ್ಯಾಲಂಡರ್ ವರ್ಷದಲ್ಲಿ (2026) ಮತ್ತು ಮುಂದಿ ವರ್ಷದಲ್ಲಿ (2027) ಜಿಡಿಪಿ ಶೇ. 6.4ಕ್ಕೆ ಸೀಮಿತಗೊಳ್ಳಬಹುದು ಎಂದೂ ಐಎಂಎಫ್ ಹೇಳಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್

2025ರ ಕ್ಯಾಲಂಡರ್ ವರ್ಷದ ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಜಿಡಿಪಿ ಬೆಳವಣಿಗೆ ಶೇ. 7.4, ಶೇ. 7.8 ಮತ್ತು ಶೇ. 8.2 ದಾಖಲಾಗಿದೆ. ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಶೇ. 5.8ರಷ್ಟು ಜಿಡಿಪಿ ವೃದ್ಧಿಯಾದರೂ ಸಾಕು ಐಎಂಎಫ್ ಅಂದಾಜಿನಂತೆ 2025ರಲ್ಲಿ ಜಿಡಿಪಿ ದರ ಶೇ. 7.3 ಆಗುತ್ತದೆ. ಕೊನೆಯ ಕ್ವಾರ್ಟರ್​ನಲ್ಲಿ ಭಾರತೀಯ ಕಾರ್ಪೊರೇಟ್ ಕಂಪನಿಗಳು ನಿರೀಕ್ಷೆಗಿಂತ ಉತ್ತಮ ಹಣಕಾಸು ಲಾಭಗಳನ್ನು ತೋರಿದ ಹಿನ್ನೆಲೆಯಲ್ಲಿ ಆರ್ಥಿಕತೆ ಉತ್ತಮವಾಗಿ ಬೆಳೆಯುವ ಸಾಧ್ಯತೆ ಇದೆ ಎಂಬುದು ಐಎಂಎಫ್​ನ ಅಭಿಪ್ರಾಯ.

ಮೂಡೀಸ್ ವರದಿ ಕೂಡ ಆಶಾದಾಯಕ

ಪ್ರಸಕ್ತ ಹಣಕಾಸು ವರ್ಷವಾದ 2025-26ರಲ್ಲಿ ಭಾರತದ ಆರ್ಥಿಕತೆ ಶೇ. 7.3ರಷ್ಟು ಬೆಳೆಯಬಹುದು ಎಂದು ಮೂಡೀಸ್ ರೇಟಿಂಗ್ಸ್ ಏಜೆನ್ಸಿ ಹೇಳಿದೆ. ಉತ್ತಮ ಆರ್ಥಿಕ ಬೆಳವಣಿಗೆಯ ಪರಿಣಾಮವಾಗಿ ಸರಾಸರಿ ಕೌಟುಂಬಿಕ ಆದಾಯವೂ ಹೆಚ್ಚಳವಾಗಬಹುದು. ಇದರಿಂದ ಹೆಚ್ಚೆಚ್ಚು ಆದಾಯವಂತ ಜನರು ವಿಮಾ ರಕ್ಷಣೆಯ ಮೊರೆ ಹೋಗಬಹುದು. ಇದರಿಂದ ಇನ್ಷೂರೆನ್ಸ್ ಸೆಕ್ಟರ್​ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಬಹುದು ಎಂದು ಮೂಡೀಸ್ ರೇಟಿಂಗ್ಸ್ ವರದಿ ಹೇಳಿದೆ.

ಇದನ್ನೂ ಓದಿ: ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?

ಭಾರತೀಯ ಜನಸಾಮಾನ್ಯರ ಆದಾಯ ಸ್ಥಿರವಾಗಿ ಹೆಚ್ಚುತ್ತಿದೆ. ಜನರಿಗೆ ತಮ್ಮ ಆದಾಯದ ರಕ್ಷಣೆ ಎಷ್ಟು ಮುಖ್ಯ ಎಂಬುದು ಅರಿವಿರುವುದರಿಂದ ಇನ್ಷೂರೆನ್ಸ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಣಕಾಸು ವ್ಯವಸ್ಥೆ ಡಿಜಿಟಲೀಕರಣಗೊಂಡಿರುವುದರಿಂದ ಇನ್ಷೂರೆನ್ಸ್ ಉತ್ಪನ್ನಗಳು ಜನರನ್ನು ತಲುಪುವುದು ಸುಲಭವಾಗಿದೆ ಎಂಬಿತ್ಯಾದಿ ಅಂಶಗಳನ್ನು ಮೂಡೀಸ್ ರೇಟಿಂಗ್ಸ್ ಗುರುತಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Nitin Nabin: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ; ನಾಳೆಯೇ ಅಧಿಕಾರ ಸ್ವೀಕಾರ – Kannada News | Nitin Nabin becomes BJP president unopposed replaces JP Nadda

ನವದೆಹಲಿ, ಜನವರಿ 19: ಯಾವುದೇ ಚುನಾವಣೆಯಿಲ್ಲದೆ ನಿತಿನ್ ನಬಿನ್ (Nitin Nabin) ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದ ನಿರ್ಣಯದಲ್ಲಿ ಆಯ್ಕೆ ಮಾಡಲಾಗಿದೆ. ನಿತಿನ್ ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ, ಈ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪಿಸಲಾಗಿಲ್ಲ. ಹೀಗಾಗಿ, ನಿತಿನ್ ನಬಿನ್ ಅವಿರೋಧವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಬಿಜೆಪಿಗೆ ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆಯಾಗಿದೆ.

ಬಿಹಾರದ ಬಿಜೆಪಿ ಹಿರಿಯ ನಾಯಕ ನಿತಿನ್ ನಬಿನ್, ಬಿಹಾರದ ರಾಜಕೀಯದಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಪಾಟ್ನಾದಲ್ಲಿ ಜನಿಸಿದ ಅವರು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಮಗ. ತಮ್ಮ ತಂದೆಯ ಅಕಾಲಿಕ ಮರಣದ ನಂತರ ನಿತಿನ್ ನಬಿನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಆರ್​ಎಸ್​ಎಸ್​ ಹಿನ್ನೆಲೆಯೂ ಇರುವ ಅವರು ಕ್ರಮೇಣ ಪಕ್ಷದೊಳಗೆ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡರು.

ಇದನ್ನೂ ಓದಿ: BJP National President Election Date: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ

ನಿತಿನ್ ನಬಿನ್ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಸ್ತೆ ನಿರ್ಮಾಣ ಮತ್ತು ನಗರಾಭಿವೃದ್ಧಿ ಖಾತೆಗಳನ್ನು ಹೊಂದಿದ್ದರು. ನಂತರ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡ ನಂತ ಆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಹಾರದಲ್ಲಿ ಜೆಡಿಯು ಜೊತೆಗಿನ ಬಿಜೆಪಿಯ ಮೈತ್ರಿಯನ್ನು ಕಾಯ್ದುಕೊಳ್ಳುವಲ್ಲಿಯೂ ನಿತಿನ್ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ. ಬಿಹಾರದಲ್ಲಿ ಎನ್​ಡಿಎ ಅಧಿಕಾರದಲ್ಲಿರಲು ನಿತಿನ್ ಅವರ ಕೊಡುಗೆಯೂ ಅಪಾರ. ಇದರ ಜೊತೆಗೆ ನಿತಿನ್ ನಬಿನ್ ಛತ್ತೀಸ್‌ಗಢದ ಬಿಜೆಪಿಯ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮುಂಬೈ ಕಿರೀಟವನ್ನು ಮುಡಿಗೇರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ; 25 ವರ್ಷಗಳ ಬಳಿಕ ಠಾಕ್ರೆ ಭದ್ರಕೋಟೆ ಪತನ

ಕೇಂದ್ರ ಸಚಿವ ಜೆ.ಪಿ ನಡ್ಡಾ, ಹಿರಿಯ ನಾಯಕರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರೊಂದಿಗೆ ಇಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು. ಈ ಮೂಲಕ ಅವರು ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:07 pm, Mon, 19 January 26

Source link

ವಿಡಿಯೋ ವೈರಲ್​​ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್​​ ಅಜ್ಞಾತ ಸ್ಥಳಕ್ಕೆ: ಕಾನೂನು ಹೋರಾಟದ ಕುರಿತು ಚರ್ಚೆ – Kannada News | Karntaka DGP Ramachandra Rao on Leave After Video Controversy

ಬೆಂಗಳೂರು, ಜನವರಿ 19: ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ 10 ದಿನ ರಜೆ ಹಾಕಿ ಡಿಜಿಪಿ ಡಾ. ರಾಮಚಂದ್ರ ರಾವ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕಾನೂನಾತ್ಮಕ‌ ಹೋರಾಟದ ಕುರಿತು ರಹಸ್ಯ ಸ್ಥಳದಲ್ಲಿ ವಕೀಲರ ತಂಡದ ಜೊತೆ ರಾಮಚಂದ್ರ ರಾವ್ ಚರ್ಚಿಸಲಿದ್ದಾರೆ. ಮತ್ತೊಂದೆಡೆ ಡಿಜಿಪಿಗೆ ಶಾಕ್​​ ಕೊಡುವ ತಯಾರಿಯಲ್ಲಿ ರಾಜ್ಯ ಸರ್ಕಾರ ಇದ್ದು, ಯಾವುದೇ ಕ್ಷಣ ಅಧಿಕಾರಿ ಅಮಾನತು ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ವಿಚಾರಣೆ ಮಾಡಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದರು. ಅದಾದ ಕೆಲವೇ ಹೊತ್ತಲ್ಲಿ ಡಿಜಿಪಿ ರಜೆ ಹಾಕಿ ತೆರಳಿದ್ದಾರೆ. ಇನ್ನು ಘಟನೆ ಬಗ್ಗೆ ಮಾಜಿ ಅಧಿಕಾರಿಗಳಿಂದಲೂ  ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್‌ , ಪ್ರಕರಣದಿಂದ ಪೊಲೀಸ್ ಇಲಾಖೆಗೆ ಮುಜುಗರವಾಗಿದೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​; ಪೊಲೀಸ್​​ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ

ರಾಮಚಂದ್ರ ರಾವ್ ಫಸ್ಟ್​​ ರಿಯಾಕ್ಷನ್​​

ವಿಡಿಯೋ ವೈರಲ್​​ ವಿಚಾರ ಸಂಬಂಧ ಡಿಜಿಪಿ ಡಾ.ರಾಮಚಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದು, ಇದು ಹಳೆಯ ವಿಡಿಯೋ ಎಂದಿದ್ದಾರೆ. ಈ ಕಾಲದಲ್ಲಿ ಏನು ಬೇಕಾದರೂ ಮಾಡುವ ಸಾಧ್ಯತೆ ಇದೆ. ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿದ್ದೆ. ಇದರ ಬಗ್ಗೆ ನಾನು ವಕೀಲರ ಜೊತೆಗೆ ಮಾತನಾಡುತ್ತೇನೆ. ಈ ಬಗ್ಗೆ ತನಿಖೆ ಆಗಬೇಕು ಎಂದು ತಿಳಿಸಿದ್ದಾರೆ. ಘಟನೆ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಲು ಬಂದಿದ್ದೆ ಎಂದು ಪರಮೇಶ್ವರ್‌ ನಿವಾಸದ ಬಳಿ ಡಿಜಿಪಿ ಡಾ.ರಾಮಚಂದ್ರ ರಾವ್ ತಿಳಿಸಿದ್ದರು.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:17 pm, Mon, 19 January 26

Source link

ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಮೆರವಣಿಗೆ: ಮಳವಳ್ಳಿಯಲ್ಲಿ ಜನರ ನಿಯಂತ್ರಿಸಲು ಖಾಕಿ ಹರಸಾಹಸ – Kannada News | Gilli Nata parades In Malavalli after Bigg Boss Kannada 12 Win Police scrambles to control crowd

ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada 12) ಮನೆಯಿಂದ ಹೊರಗೆ ಬಂದರೆ ಹೊತ್ತು ಮೆರೆಸುವುದಾಗಿ ಜನರು ಹೇಳಿದ್ದರು. ಈಗ ಅದರಂತೆಯೇ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಅವರು ಮಳವಳ್ಳಿಗೆ ಬಂದಿದ್ದಾರೆ. ಅವರನ್ನು ನೋಡಲು ಮಳವಳ್ಳಿ (Malavalli) ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಗಿಲ್ಲಿಯ ಮೆರವಣಿಗೆ ಸಾಗಿದೆ. ಗಿಲ್ಲಿ ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಬೇಕು ಎಂಬುದು ಅಭಿಮಾನಿಗಳ ಆಸೆ. ಗಿಲ್ಲಿ (Gilli Nata) ಜೊತೆ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಜನರು ಮುಗಿಬಿದ್ದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಎಲ್ಲೆಲ್ಲೂ ಗಿಲ್ಲಿ ನಟನ ಅಭಿಮಾನಿಗಳೇ ತುಂಬಿಕೊಂಡಿದ್ದಾರೆ. ಮಕ್ಕಳು, ವೃದ್ಧರು, ಯುವಕ-ಯುವತಿಯರು ಗಿಲ್ಲಿಗೆ ಜೈಕಾರ ಕೂಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ವಡೋದರಾದಲ್ಲಿ ಟಾಸ್ ಸೋತ ಆರ್​ಸಿಬಿ; ಪ್ಲೇಯಿಂಗ್ 11 ಹೀಗಿದೆ – Kannada News | WPL 2026: RCB vs Gujarat Giants toss and playing 11 updates

ಮಹಿಳಾ ಪ್ರೀಮಿಯರ್​ ಲೀಗ್​ನ 4ನೇ ಆವೃತ್ತಿಯ 2ನೇ ಹಂತ ಇಂದಿನಿಂದ ವಡೋದರಾದಲ್ಲಿ ಆರಂಭವಾಗುತ್ತಿದೆ. ಮೊದಲ ಹಂತದ 11 ಪಂದ್ಯಗಳು ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದವು. ಈ ಮೈದಾನದಲ್ಲಿ 4 ಪಂದ್ಯಗಳನ್ನು ಆಡಿದ್ದ ಆರ್​ಸಿಬಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಐದನೇ ಪಂದ್ಯವನ್ನು ವಡೋದರಾದಲ್ಲಿ ಆಡುತ್ತಿದೆ. ಆರ್​ಸಿಬಿಗೆ ಇಂದಿನ ಎದುರಾಳಿ ಬಲಿಷ್ಠ ಗುಜರಾತ್ ಜೈಂಟ್ಸ್. ಈ ತಂಡದಲ್ಲಿ ಆರ್​ಸಿಬಿಯ 4 ಮಾಜಿ ಆಟಗಾರ್ತಿಯರಿದ್ದು, ಇದೀಗ ಅವರ ವಿರುದ್ಧ ಆರ್​ಸಿಬಿ ತಂಡ ಸೆಣಸಬೇಕಿದೆ. ಆರ್​ಸಿಬಿ ಇದುವರೆಗೆ ಈ ಆವೃತ್ತಿಯಲ್ಲಿ ಅಜೇಯ ತಂಡವಾಗಿ ಉಳಿದಿದ್ದು, ಇದೀಗ ತನ್ನ ಐದನೇ ಪಂದ್ಯವನ್ನು ಗೆದ್ದು ತನ್ನ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ. ಇತ್ತ ಗುಜರಾತ್ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಟಾಸ್ ಗೆದ್ದ ಗುಜರಾತ್

ಮೇಲೆ ಹೇಳಿದಂತೆ ಈ ಆವೃತ್ತಿಯ 12ನೇ ಪಂದ್ಯ ವಡೋದರಾದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಮೈದಾನದಲ್ಲೂ ಇಬ್ಬನಿ ಪ್ರಮುಖ ಪಾತ್ರವಹಿಸುವುದರಿಂದ ಗುಜರಾತ್ ಈ ನಿರ್ಧಾರ ತೆಗೆದುಕೊಂಡಿದೆ. ಇತ್ತ ಟಾಸ್ ಸೋತಿರುವ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಿದೆ. ಇನ್ನು ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಆರ್​ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಈ ಪಂದ್ಯದಲ್ಲೂ ಆಡಲಿದೆ. ಇತ್ತ ಗುಜರಾತ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯ್ಕ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್,ಪ್ರೇಮಾ ರಾವತ್, ಶ್ರೇಯಾಂಕ ಪಾಟೀಲ್, ಸಯಾಲಿ ಸತ್ಘರೆ, ಲಾರೆನ್ ಬೆಲ್.

ಗುಜರಾತ್ ಜೈಂಟ್ಸ್ ಪ್ಲೇಯಿಂಗ್ XI: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಜಾರ್ಜಿಯಾ ವೇರ್ಹ್ಯಾಮ್, ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವೀ ಗೌತಮ್, ತನುಜಾ ಕನ್ವರ್, ಹ್ಯಾಪಿ ಕುಮಾರಿ, ರೇಣುಕಾ ಸಿಂಗ್ ಠಾಕೂರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:09 pm, Mon, 19 January 26

Source link

ಭಾರತಕ್ಕೆ ಆಗಮಿಸಿದ ಯುಎಇ ಅಧ್ಯಕ್ಷರಿಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ – Kannada News | PM Modi Receives UAE President Mohamed Bin Zayed Al Nahyan At Delhi Airport with Tight Hug

ನವದೆಹಲಿ, ಜನವರಿ 19: ಇಂದು ಭಾರತಕ್ಕೆ ಭೇಟಿ ನೀಡಿದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಅಪ್ಪುಗೆಯ ಮೂಲಕ ಯುಎಇ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಭಾರತೀಯ ಸಾಂಪ್ರದಾಯಿಕ ನೃತ್ಯ, ಡೋಲು ವಾದ್ಯಗಳ ಮೂಲಕ ಯುಎಇ ಅಧ್ಯಕ್ಷರನ್ನು ಸ್ವಾಗತಿಸಲಾಯಿತು.

ಯುಎಇ ಅಧ್ಯಕ್ಷರು ಕೇವಲ 2 ಗಂಟೆಗಳ ಕಾಲ ದೆಹಲಿಯಲ್ಲಿ ಇರಲಿದ್ದು, ನಂತರ ವಾಪಾಸ್ ತೆರಳಲಿದ್ದಾರೆ ಎನ್ನಲಾಗಿದೆ. ಇರಾನ್-ಯುಎಸ್ ಸಂಬಂಧಗಳು ಹದಗೆಟ್ಟಿರುವುದು, ಗಾಜಾದಲ್ಲಿ ನಡೆಯುತ್ತಿರುವ ಅಸ್ಥಿರತೆ, ಸೌದಿ ಅರೇಬಿಯಾ ಮತ್ತು ಯುಎಇ ಒಳಗೊಂಡ ಯೆಮೆನ್‌ನಲ್ಲಿ ಬಗೆಹರಿಯದ ಸಂಘರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಇಂದು ಸಂಜೆ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷರು ದೆಹಲಿಯ ಪ್ರಧಾನಿ ನಿವಾಸದಲ್ಲಿ ವಿಶೇಷವಾದ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯ ಸಮಯದಲ್ಲಿ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಮತ್ತು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮುಂದೆ 10 ಸಾವಿರ ಕಲಾವಿದರಿಂದ ಬಾಗುರುಂಬಾ ನೃತ್ಯ ಪ್ರದರ್ಶನ

ನನ್ನ ಸಹೋದರರಾದ ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರ ಭೇಟಿ ಅವರು ಭಾರತ-ಯುಎಇ ಸ್ನೇಹಕ್ಕೆ ನೀಡುವ ಮಹತ್ವವನ್ನು ತೋರಿಸುತ್ತದೆ. ನಮ್ಮ ಚರ್ಚೆಗಳಿಗಾಗಿ ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಯುಎಇ ಅಧ್ಯಕ್ಷರಾದ ನಂತರ ಅಲ್ ನಹ್ಯಾನ್ ಅವರು ಭಾರತಕ್ಕೆ ನೀಡುತ್ತಿರುವ ಮೂರನೇ ಅಧಿಕೃತ ಭೇಟಿ ಇದಾಗಿದೆ. ಒಟ್ಟಾರೆಯಾಗಿ, ಭಾರತಕ್ಕೆ ಇದು ಅವರ 5ನೇ ಭೇಟಿ. ಇರಾನ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಗಳು 5,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಅಲ್ ನಹ್ಯಾನ್ ಭಾರತಕ್ಕೆ ಇಂದು ಭೇಟಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ಕಿ ತೊಳೆದ ನೀರನ್ನು ವೇಸ್ಟ್‌ ಎಂದು ಚೆಲ್ಲಬೇಡಿ, ಅದನ್ನು ಈ ರೀತಿಯಾಗಿ ಉಪಯೋಗಿಸಿ – Kannada News | Instead of throwing away the rice water, use it this way

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಅನ್ನ ಮಾಡಲಾಗುತ್ತದೆ. ಹೀಗೆ ಅನ್ನ ಮಾಡುವ ಸಂದರ್ಭದಲ್ಲಿ ಅಕ್ಕಿ ತೊಳೆದ ನೀರನ್ನು (Rice Water) ಅನುಪಯುಕ್ತ ಎಂದು ಚೆಲ್ಲುವವರೇ ಹೆಚ್ಚು. ಆದರೆ ನೀರಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಖನಿಜಗಳಿದ್ದು, ಇದು ಚರ್ಮದಿಂದ ಹಿಡಿದು ಕೂದಲಿನವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಇದರ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹಾಗಿದ್ದರೆ ಅಕ್ಕಿ ತೊಳೆದ ನೀರಿನ ಉಪಯೋಗಗಳೇನು, ಅದನ್ನುಬಳಸುವುದೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಅಕ್ಕಿ ತೊಳೆದ ನೀರಿನ ಉಪಯೋಗಗಳೇನು?

ಸಸ್ಯಗಳಿಗೆ ಹಾಕಬಹುದು:  ಅನೇಕ ಜನರು ಅಕ್ಕಿ ತೊಳೆದ ನೀರನ್ನು ಎಸೆದುಬಿಡುತ್ತಾರೆ. ಇದರ ಬದಲು ಇದನ್ನು ಗಿಡಗಳ ಬುಡಗಳಿಗೆ ಹಾಕಬಹುದು. ಇದು ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮತ್ತು ಖನಿಜಗಳು ಸಸ್ಯಗಳ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿವೆ.

ಮನೆ ಶುಚಿಗೊಳಿಸುವಿಕೆಗಾಗಿ: ಅಕ್ಕಿ ನೀರನ್ನು ತಣ್ಣಗಾಗಿಸಿ ಅದನ್ನು ಬಾಟಲಿಗೆ ಹಾಕಿ ಕನ್ನಡಿ ಮತ್ತು ಗಾಜಿನ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಮೊದಲು, ಈ ನೀರನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ ನಂತರ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ಗಾಜಿನ ವಸ್ತುಗಳು ಚೆನ್ನಾಗಿ ಹೊಳೆಯುತ್ತವೆ.

ಪಾತ್ರೆಗಳನ್ನು ಸ್ವಚ್ಛಗೊಳಿಸಲು: ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ ಸಂಗ್ರಹಿಸಿದಂತಹ ಡಬ್ಬಗಳು ಸ್ವಚ್ಛಗೊಳಿಸಿದ ನಂತರವೂ ಅದರಲ್ಲಿ ವಾಸನೆ ಹಾಗೆಯೇ ಉಳಿದು ಬಿಡುತ್ತದೆ. ಈ ವಾಸನೆಯನ್ನು ತೊಡೆದುಹಾಕಲು ಅಕ್ಕಿ ನೀರನ್ನು ಬಳಸಬಹುದು. ಅದಕ್ಕಾಗಿ ವಾಸನೆಯಿರುವ ಪಾತ್ರೆಯೊಳಗೆ ಅಕ್ಕಿ ತೊಳೆದ ನೀರನ್ನು ಹಾಕಿ ಸ್ವಲ್ಪ ಸಮಯದ ಬಳಿಕ ಸ್ವಚ್ಛಗೊಳಿಸಿ. ವಾಸನೆ ಸಂಪೂರ್ಣವಾಗಿ ಹೋಗುತ್ತದೆ. ಜೊತೆಗೆ ಪಾತ್ರೆಗಳ ಜಿಡ್ಡಿನಾಂಶವನ್ನು ಸಹ ಹೋಗಲಾಡಿಸಲುತ್ತದೆ.

ಇದನ್ನೂ ಓದಿ: ಆಹಾರ ಪದಾರ್ಥಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಬಟ್ಟೆ ಸ್ವಚ್ಛಗೊಳಿಸಲು: ಅಕ್ಕಿ ತೊಳೆದ ನೀರಿನಲ್ಲಿ ನೈಸರ್ಗಿಕ ಪಿಷ್ಟವಿರುತ್ತದೆ. ಇದನ್ನು ಕಾಟನ್‌ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.

ಚರ್ಮಕ್ಕೂ ಪ್ರಯೋಜನಕಾರಿ: ಅಕ್ಕಿ ತೊಳೆದ ನೀರನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದು ಮುಖದ ರಂಧ್ರಗಳನ್ನು ಬಿಗಿಗೊಳಿಸಿ, ಚರ್ಮವನ್ನು ಕಾಂತಿಯುತವಾಗಿಸುತ್ತದೆ.

ಕೂದಲಿಗೂ ಪ್ರಯೋಜನಕಾರಿ: ಅಕ್ಕಿ ತೊಳೆದ ನೀರನ್ನು ಕೂದಲಿಗೂ ಬಳಸಬಹುದು. ಇದರಿಂದ ಹೇರ್‌ ವಾಶ್‌ ಮಾಡುವುದರಿಂದ ಕೂದಲು ಉದುರುವಿಕೆಯಿಂದ ಪರಿಹಾರ ಸಿಗುತ್ತದೆ, ಸೀಳು ಕಡಿಮೆಯಾಗುತ್ತದೆ, ಶುಷ್ಕತೆಯೂ ಕಡಿಮೆಯಾಗುತ್ತದೆ. ಅಲ್ಲದೆ ಇದರ ಬಳಕೆಯಿಂದ ಕೂದಲು ವೇಗವಾಗಿ ಬೆಳೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link