Category Archives: Blog

Your blog category

ಮಿಂಚಿದ ಯಶವರ್ಧನ್; ಕೂಚ್ ಬೆಹಾರ್ ಟ್ರೋಫಿ ಗೆದ್ದ ಮಧ್ಯಪ್ರದೇಶ – Kannada News | Cooch Behar Trophy: Madhya Pradesh Crowned Champions, Yashvardhan Singh Chauhan Shines

ಮಧ್ಯಪ್ರದೇಶ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಕೂಚ್ ಬೆಹಾರ್ ಟ್ರೋಫಿ (Cooch Behar Trophy) ಫೈನಲ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಲ್ಸಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪಂದ್ಯದಲ್ಲಿ ಗುಜರಾತ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸುವಲ್ಲಿ ಮಧ್ಯಪ್ರದೇಶ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 216 ರನ್ ಕಲೆಹಾಕಿತು. ಉತ್ತರವಾಗಿ ಮಧ್ಯಪ್ರದೇಶ ತಂಡವು 178 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಇತ್ತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಗುಜರಾತ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 133 ರನ್‌ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ತಂಡವು 4 ವಿಕೆಟ್‌ಗಳಿಗೆ 176 ರನ್‌ ಕಲೆಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಮಧ್ಯಪ್ರದೇಶದ ಗೆಲುವಿನ ನಾಯಕ ಆಲ್‌ರೌಂಡರ್ ಯಶವರ್ಧನ್ ಸಿಂಗ್ ಚೌಹಾಣ್, ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದರು.

ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಯಶವರ್ಧನ್

ಯಶವರ್ಧನ್ ಸಿಂಗ್ ಚೌಹಾಣ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಲ್ಲದೇ, ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಯಶವರ್ಧನ್ ಎಂಟು ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದರು, ಇದರಲ್ಲಿ ಐದು ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಇದಲ್ಲದೆ, ಅವರು ಎಂಟು ಪಂದ್ಯಗಳಲ್ಲಿ 42.31 ಸರಾಸರಿಯಲ್ಲಿ 550 ರನ್‌ ಕೂಡ ಕಲೆಹಾಕಿದರು ಇದರಲ್ಲಿ ಎರಡು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ.

ಪ್ರತಿಭಾವಂತ ಯಶವರ್ಧನ್

ಯಶವರ್ಧನ್ ಸಿಂಗ್ ಚಂಬಲ್ ಮೂಲದವರಾಗಿದ್ದು, ಮಧ್ಯಪ್ರದೇಶದ ಮುಂದಿನ ಸೂಪರ್ ಸ್ಟಾರ್ ಎಂದು ಹೇಳಲಾಗುತ್ತಿದೆ. 2023 ರಲ್ಲಿ, ಅವರು 15 ವರ್ಷದೊಳಗಿನವರ ಪಂದ್ಯದಲ್ಲಿ 39 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಿತ ತ್ರಿಶತಕ ಬಾರಿಸಿದ್ದರು. ಇದಲ್ಲದೆ, 13 ನೇ ವಯಸ್ಸಿನಲ್ಲಿ, ಅವರು ಇಂದೋರ್ ವಿರುದ್ಧ 391 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದು ಮಾತ್ರವಲ್ಲದೆ 425 ರನ್‌ಗಳ ಇನ್ನಿಂಗ್ಸ್‌ಗಳನ್ನು ಸಹ ಆಡಿದ್ದಾರೆ.

ಟೂರ್ನಿಯಲ್ಲಿ ಮಿಂಚಿದವರಿವರು

ಗುಜರಾತ್‌ನ ಮಲಯ್ ಶಾ ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, 716 ರನ್ ಕಲೆಹಾಕಿದ್ದಾರೆ. ಈ ಆಟಗಾರ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಉತ್ತರಾಖಂಡದ ಆದಿತ್ಯ ನೈಥಾನಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ಪರೀಕ್ಷೆಗೆ ಹೊಸ ಗೈಡ್​ಲೈನ್ಸ್ ಪ್ರಕಟ: ವಿದ್ಯಾರ್ಥಿ, ಶಿಕ್ಷಕರಿಗೆ ಖಡಕ್ ಸೂಚನೆ – Kannada News | Karnataka Education Department Releases New guidelines for SSLC Exams

ಬೆಂಗಳೂರು, (ಜನವರಿ 19): ಎಸ್ಎಸ್ಎಲ್​ಸಿ ಪೂರಕ ಪರೀಕ್ಷೆಯ (sslc preparatory exam) ಪ್ರಶ್ನಿ ಪತ್ರಿಕೆ ಸೋರಿಕೆ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆ (Karnataka Education Department) ಎಚ್ಚೆತ್ತುಕೊಂಡಿದ್ದು,  ಮುಖ್ಯ ಪರೀಕ್ಷೆಗೆ ಹೊಸ ಗೈಡ್​ಲೈನ್ಸ್ ಬಿಡುಗಡೆ ಮಾಡಿದೆ. ಎಸ್ಎಸ್ಎಲ್​ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧಿಸಲಾಗಿದೆ. ಇದೀಗ ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಲ್ಲದೇ 2 ಹಾಗೂ 3ನೇ ಪರೀಕ್ಷೆ ಆಯುಕ್ತರ ನೇತೃತ್ವದಲ್ಲಿ ನಡೆಯಲಿವೆ.

ಹೊಸ ಮಾರ್ಗಸೂಚಿಯಲ್ಲೇನಿದೆ?

ಈ ಹಿಂದಿನ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಮಂಡಳಿ ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ನಡೆಸಲಾಗಿತ್ತು. ಆದ್ರೆ, ಇದೀಗ ಹೊಸ ಗೈಡ್​​ಲೈನ್ಸ್​ ಪ್ರಕಾರ 2 ಹಾಗೂ 3ನೇ ಪರೀಕ್ಷೆ ಆಯುಕ್ತರ ನೇತೃತ್ವದಲ್ಲಿ ನಡೆಯಲಿದ್ದು, ಡಿಡಿಪಿಐ ಹಾಗೂ ಬಿಇಒಗಳಿಗೆ ಪರೀಕ್ಷೆಯ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್

ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮೊಬೈಲ್​ ತರುವಂತಿಲ್ಲ. ಜೊತೆಗೆ ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ. ಇನ್ನು ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯಹಾರ ನಡೆಸದಂತೆ ಖಡಕ್ ಸೂಚನೆ ನೀಡಲಾಗಿದ್ದು,
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಪ್ರಶ್ನೆಪತ್ರಿಕೆ ಮುಖ್ಯೋಪಾಧ್ಯಾಯರೇ ಡೌನ್​ಲೋಡ್ ಮಾಡಬೇಕು. ಜೊತೆಗೆ ಪ್ರಶ್ನೆಪತ್ರಿಕೆ ಗೌಪ್ಯತೆ ಕಾಪಾಡಬೇಕು ಹಾಗೇ ಪ್ರಾಂಶುಪಾಲರು ಸಹ ಪರೀಕ್ಷಾ ಕೇಂದ್ರಗಳಿಗೆ ಭೇಟಿ ಪರಿಶೀಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲಿ ಖಡಕ್ ಆಗಿ ತಿಳಿಸಲಾಗಿದೆ.

ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯವನ್ನು ಹಲವು ಶಾಲೆಗಳು ಎಸಗಿವೆ. ಆದರೆ ಇದುವರೆಗೆ ಆರು ಶಿಕ್ಷಕರು ಮಾತ್ರ ಪತ್ತೆಯಾಗಿದ್ದಾರೆ. ಪರೀಕ್ಷೆಗೂ ಮೂರು ಗಂಟೆಗಳಿಗೂ ಮುನ್ನ ಪ್ರಶ್ನೆ ಪತ್ರಿಕೆಗಳ ಫೋಟೋ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು.

ಇದನ್ನೂ ಓದಿ: SSLC, 2nd PUC Exam 2026 TimeTable: ಎಸ್​ಎಸ್​ಎಲ್​​ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಪ್ರಶ್ನೆ ಪತ್ರಿಕೆ ಮಾರಾಟಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್‌ 32’ ಹಾಗೂ ‘ಡೆಲ್ಟಾ ಹ್ಯಾಕರ್‌’ ಸೇರಿದಂತೆ 8ಕ್ಕೂ ಅಧಿಕ ಖಾತೆಗಳನ್ನು ತೆರೆದಿದ್ದರು. ಅಲ್ಲದೆ ಟೆಲಿಗ್ರಾಂ ಹಾಗೂ ವಾಟ್ಸಪ್‌ನಲ್ಲಿ ಗ್ರೂಪ್ ರಚಿಸಿಕೊಂಡು ಸಹ ಕೆಲವರು ಮಾರಾಟ ಮಾಡಿದ್ದರು. ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮಾಹಿತಿ ಆಧರಿಸಿ ರಾಮನಗರ, ಉಡುಪಿ, ಶಿವಮೊಗ್ಗ ಹಾಗೂ ತುಮಕೂರು ಸೇರಿದಂತೆ 10 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೈಪ್-1 ಡಯಾಬಿಟಿಸ್ ಏನು? ಇದನ್ನು ನಿಯಂತ್ರಿಸುವ ಆಹಾರಕ್ರಮ ಮತ್ತು ಯೋಗಕ್ರಮಗಳೇನು? ಇಲ್ಲಿದೆ ಬಾಬಾ ರಾಮದೇವ್ ಸಲಹೆ – Kannada News | Type 1 Diabetes, Baba Ramdev suggests foods and yogasanas to reverse the lifestyle disease

ಟೈಪ್ 1 ಡಯಾಬಿಟಿಸ್ (Type-1 Diabetes) ಒಂದು ಸ್ವಯಂ ನಿರೋಧಕ (ಆಟೊಇಮ್ಯೂನ್) ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಮಕ್ಕಳು, ಹದಿಹರೆಯದವರು ಮತ್ತು ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ಜನರು ಇದರ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ತಕ್ಷಣ ಚಿಕಿತ್ಸೆ ನೀಡಿದರೆ ಅದನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಪ್ರಮುಖ ಹಂತವೆಂದರೆ ಜೀವನಶೈಲಿಯ ಬದಲಾವಣೆ. ಉದಾಹರಣೆಗೆ ಪ್ರತಿದಿನ ಯೋಗಾಭ್ಯಾಸ ಮಾಡುವುದು ಮತ್ತು ಸರಿಯಾದ ಆಹಾರ ಕ್ರಮ ಅನುಸರಿಸುವುದು. ಟೈಪ್ 1 ಡಯಾಬಿಟಿಸ್ ಅನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುವ ಕೆಲವು ಮಾರ್ಗಗಳನ್ನು ಬಾಬಾ ರಾಮದೇವ್ ವಿವರಿಸಿದ್ದಾರೆ.

ಟೈಪ್ 1 ಡಯಾಬಿಟಿಸ್​ನ ಲಕ್ಷಣಗಳಲ್ಲಿ ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಆಗಾಗ್ಗೆ ಆಯಾಸ ಮತ್ತು ದೃಷ್ಟಿ ಮಂದವಾಗುವುದು ಸೇರಿವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಮಧುಮೇಹವು ಯಾವುದೇ ಚಿಕಿತ್ಸೆ ಇಲ್ಲದ ಸಮಸ್ಯೆಯಾಗಿದೆ. ಇದನ್ನು ಪೂರ್ಣ ಗುಣಮುಖಗೊಳಿಸಲು ಔಷಧಗಳಿಲ್ಲ. ಆದರೆ, ಅದನ್ನು ತಗ್ಗಿಸಲು ಸಾಧ್ಯ. ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಡಬಹುದು.

ಮಧುಮೇಹ ಬರಲು ಏನು ಕಾರಣಗಳು?

ಮಧುಮೇಹಕ್ಕೆ ಮೂರು ಪ್ರಮುಖ ಕಾರಣಗಳಿವೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಮೊದಲನೆಯದು ಮೇದೋಜ್ಜೀರಕ ಗ್ರಂಥಿಗೆ (ಪ್ಯಾಂಕ್ರಿಯಾಸ್) ಹಾನಿಯಾಗುವುದು. ಇದು ಇನ್ಸುಲಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಸಿಂಥೆಟಿಕ್ ಔಷಧಗಳು ಇದರಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ಅದರಲ್ಲೂ ಮಕ್ಕಳಿಗೆ ಈ ಔಷಧಗಳಿಂದ ಹೆಚ್ಚಿನ ದುಷ್ಪರಿಣಾಮ ಇರುತ್ತದೆ. ಇದಲ್ಲದೆ, ವಿವಿಧ ರೀತಿಯ ಮಾಲಿನ್ಯ, ಕಳಪೆ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿ ಕೂಡ ಇಂದಿನ ಮಧುಮೇಹಕ್ಕೆ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: ಫೈಬರ್ ಸೇರಿ ಹೇರಳ ಪೌಷ್ಟಿಕಾಂಶಗಳಿರುವ ಸೋರೆಕಾಯಿಯಿಂದ ಪ್ರಯೋಜನಗಳೇನು? ಬಾಬಾ ರಾಮದೇವ್ ಮಾಹಿತಿ

ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಸೇರಿಸಿ

ನಿಮ್ಮ ಆಹಾರದಲ್ಲಿ ಟೊಮೆಟೊ, ಟೊಮೆಟೊ ರಸ, ಸೌತೆಕಾಯಿ ಮತ್ತು ಹಾಗಲಕಾಯಿಯನ್ನು ಸೇರಿಸಿಕೊಳ್ಳಲು ಬಾಬಾ ರಾಮದೇವ್ ಸಲಹೆ ನೀಡುತ್ತಾರೆ. ಸೋರೆಕಾಯಿ, ಬ್ರೊಕೊಲಿ (ಹೂಕೋಸು), ಬೆಂಡೇಕಾಯಿ, ಟಿಂಡಾ, ಪಾಲಕ್ ಮತ್ತು ಬೀನ್ಸ್ ಕೂಡ ಆರೋಗ್ಯಕರ ತರಕಾರಿಗಳಾಗಿವೆ. ನಿಮ್ಮ ಆಹಾರವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಡಯಾಬಿಟಿಸ್ ಇದ್ದರೆ, ಸರಳ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಮಿತಿಗೊಳಿಸಿ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ದೂರವಿರಿಸಿ. ನಿಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳು, ಧಾನ್ಯಗಳು, ಲೀನ್ ಪ್ರೋಟೀನ್, ಹೆಲ್ತಿ ಫ್ಯಾಟ್ಸ್ ಮತ್ತು ಕಾಳು ಇತ್ಯಾದಿ ಸೇರಿಸಿ. ಸಂಸ್ಕರಿಸಿದ ಆಹಾರಗಳು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್​ಗಳನ್ನು ತಪ್ಪಿಸಿ.

ಈ ಥೆರಪಿ ಪ್ರಯತ್ನಿಸಿ

ಡಯಾಬಿಟಿಸ್ ಹಿಮ್ಮೆಟ್ಟಿಸಲು ಬಾಬಾ ರಾಮದೇವ್ ಒಂದು ಸರಳ ಚಿಕಿತ್ಸೆಯನ್ನು ಸೂಚಿಸಿದ್ದಾರೆ. ಇದರಲ್ಲಿ ಬೇವು ಮತ್ತು ಹಾಗಲಕಾಯಿಯನ್ನು ರುಬ್ಬುವುದು, ಅವುಗಳನ್ನು ಒಂದು ಚಪ್ಪಟೆ ತಳವಿರುವ ಪಾತ್ರೆಯಲ್ಲಿ ಇರಿಸಿ ಮತ್ತು ಪ್ರತಿದಿನ ಕೆಲವು ನಿಮಿಷಗಳ ಕಾಲ ಅದರ ಮೇಲೆ ನಡೆದಾಡಬೇಕು.

ಬಾಬಾ ರಾಮದೇವ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್

ಯಾವ ಯೋಗಾಸನಗಳು ಪರಿಣಾಮಕಾರಿ?

ಡಯಾಬಿಟಿಸ್ ಹಿಮ್ಮೆಟ್ಟಿಸಲು ಬಾಬಾ ರಾಮದೇವ್ ಕೆಲ ಯೋಗಾಸನಗಳನ್ನು ಸೂಚಿಸುತ್ತಾರೆ. ಮಂಡೂಕಾಸನ, ಯೋಗ ಮುದ್ರಾಸನ, ಪವನ ಮುಕ್ತಾಸನ, ಉತ್ಥಾನ ಪಾದಾಸನ, ವಜ್ರಾಸನ ಮತ್ತು ವಕ್ರಾಸನದಂತಹ ಐದರಿಂದ ಹತ್ತು ಆಸನಗಳನ್ನು ಅಭ್ಯಾಸ ಮಾಡಬೇಕು. ಇವು ಬಹಳ ಪ್ರಯೋಜನಕಾರಿ. ಅನಾರೋಗ್ಯದಿಂದ ಬಳಲುತ್ತಿರುವವರೂ ಸಹ ಯೋಗವನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಬಾಬಾ ಸಲಹೆ ನೀಡುತ್ತಾರೆ.

ಇದನ್ನೂ ಓದಿ: ರಕ್ತಹೀನತೆ ನಿವಾರಿಸುವ, ಮೈ ಬೆಚ್ಚಗಾಗಿಸುವ ನೈಸರ್ಗಿಕ ವಿಧಾನಗಳು: ಬಾಬಾ ರಾಮದೇವ್ ಶಿಫಾರಸು

ಎಲ್ಲಾ ವಯಸ್ಸಿನಲ್ಲೂ ಯೋಗ ಅತ್ಯಗತ್ಯ

ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಭಾರತ ಮತ್ತು ವಿದೇಶಗಳಲ್ಲಿ ದೊಡ್ಡ ಯೋಗ ಶಿಬಿರಗಳನ್ನು ಆಯೋಜಿಸುತ್ತಾರೆ ಮತ್ತು ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ಆರೋಗ್ಯಕರ ಜೀವನದ ಬಗ್ಗೆ ಶಿಕ್ಷಣ ನೀಡುತ್ತಿರುತ್ತಾರೆ. ವೇದ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ ಮತ್ತು ನೈಸರ್ಗಿಕ ಪದಾರ್ಥಗಳಿಗೆ ಹೆಚ್ಚಿನ ಮೌಲ್ಯವಿದೆ. ಈಗ, ವಿದೇಶಿಯರು ಸಹ ಈ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಭಾರತೀಯರು ಈ ಪ್ರಾಚೀನ ವಿದ್ಯೆ ಮತ್ತು ಆರೋಗ್ಯ ಪದ್ಧತಿಯನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೇ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ನಾವೆಲ್ಲರೂ ಯೋಗ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರದತ್ತ ಗಮನ ಹರಿಸಬೇಕು.

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುಎಇಯ ಫ್ರಂಟ್​​ಲೈನ್ ಆರೋಗ್ಯ ಕಾರ್ಯಕರ್ತರಿಗೆ ಶುಭ ಸುದ್ದಿ; 37 ಕೋಟಿ ರೂ. ಆರ್ಥಿಕ ನಿಧಿ ಘೋಷಿಸಿದ ಬುರ್ಜೀಲ್ ಹೋಲ್ಡಿಂಗ್ಸ್ – Kannada News | Burjeel Holdings Chairman Dr Shamsheer Vayalil announces Rs 37 crore Fund for UAE Frontline Healthcare Workers

ಅಬುಧಾಬಿ, ಜನವರಿ 19: ಯುಎಇಯ ಫ್ರಂಟ್​​ಲೈನ್ ಆರೋಗ್ಯ ಕಾರ್ಯಕರ್ತರು ಮೊದಲ ಬಾರಿಗೆ ಸರ್​​ಪ್ರೈಸ್​ ರೂಪದಲ್ಲಿ 37 ಕೋಟಿ ರೂ. ಮೌಲ್ಯದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ. ಬುರ್ಜೀಲ್ ಹೋಲ್ಡಿಂಗ್ಸ್ ಅಧ್ಯಕ್ಷ ಮತ್ತು ಸಿಇಒ ಡಾ. ಶಂಶೀರ್ ವಯಾಲಿಲ್ ಘೋಷಿಸಿದ ಈ ನಿಧಿಯು ಸುಮಾರು 10,000 ಫ್ರಂಟ್​​ಲೈನ್ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಸುಮಾರು ಶೇ. 85ರಷ್ಟು ನರ್ಸಿಂಗ್, ಅಲೈಡ್ ಹೆಲ್ತ್, ರೋಗಿಗಳ ಆರೈಕೆ, ಕಾರ್ಯಾಚರಣೆಗಳು ಮತ್ತು ಬೆಂಬಲ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ.

ಗುಂಪು ಮಟ್ಟದ ನಾಯಕತ್ವ ಭಾಷಣಕ್ಕಾಗಿ ಅಬುಧಾಬಿಯ ಎತಿಹಾದ್ ಅರೆನಾದಲ್ಲಿ 8,500ಕ್ಕೂ ಹೆಚ್ಚು ಉದ್ಯೋಗಿಗಳು ಒಟ್ಟುಗೂಡಿದ್ದರು. ಬುರ್ಜೀಲ್ ಹೋಲ್ಡಿಂಗ್ಸ್‌ನ ಅಧ್ಯಕ್ಷ ಮತ್ತು ಸಿಇಒ ಡಾ. ಶಂಶೀರ್ ವೇಲಿಲ್ ಅವರು ಭಾಷಣ ಮಾಡಿದರು. ಇದು ಅಬುಧಾಬಿಯ ಸಿಇಒ ನೇತೃತ್ವದ ಆರೋಗ್ಯ ಕ್ಷೇತ್ರದ ಅತಿದೊಡ್ಡ ಉದ್ಯೋಗಿ ಸಭೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಅಬುಧಾಬಿ ಬಿಎಪಿಎಸ್ ದೇವಾಲಯ ಏಕತೆಯ ಸಂಕೇತ; ಯುಎಇ ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರರಿಂದ ಶ್ಲಾಘನೆ

ಯುಎಇಯ ಫ್ರಂಟ್​​ಲೈನ್ ಆರೋಗ್ಯ ರಕ್ಷಣಾ ಕಾರ್ಯಕರ್ತರು ಮೊದಲ ಬಾರಿಗೆ 15 ಮಿಲಿಯನ್ ದಿರ್ಹಮ್‌ಗಳ (37 ಕೋಟಿ ರೂ.) ಮೌಲ್ಯದ ಅಚ್ಚರಿಯ ಟೌನ್ ಹಾಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಸುಮಾರು 10,000 ಮುಂಚೂಣಿಯ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡಲಿದೆ. ಬುರ್ಜೀಲ್ ಹೋಲ್ಡಿಂಗ್ಸ್ ಅಧ್ಯಕ್ಷ ಮತ್ತು ಸಿಇಒ ಡಾ. ಶಂಶೀರ್ ವಯಾಲಿಲ್ ಅವರು ಇಷ್ಟು ದೊಡ್ಡ ಮೊತ್ತದ ನಿಧಿಯನ್ನು ಘೋಷಿಸುತ್ತಿದ್ದಾರೆ. ಯುಎಇಯಲ್ಲಿ ಮೆನಾದಲ್ಲಿ ಪ್ರಮುಖ ಸೂಪರ್-ಸ್ಪೆಷಾಲಿಟಿ ಆರೋಗ್ಯ ಸೇವಾ ಪೂರೈಕೆದಾರ ಬುರ್ಜೀಲ್ ಹೋಲ್ಡಿಂಗ್ಸ್ ನಡೆಸಿದ ಮೊದಲ ಲೀಡರ್​​ಶಿಪ್ ಭಾಷಣದಲ್ಲಿ ಸಾವಿರಾರು ಮುಂಚೂಣಿಯ ಆರೋಗ್ಯ ರಕ್ಷಣಾ ಕಾರ್ಯಕರ್ತರು 37 ಕೋಟಿ ರೂ. ಆರ್ಥಿಕ ಸಹಾಯ ಪಡೆದರು.

ಇದನ್ನೂ ಓದಿ: ಅಬುಧಾಬಿ: ನನಗೆ ಭಾರತ ಇಷ್ಟ, ಮೋದಿಯನ್ನು ನೋಡಲು ಗಾಲಿಕುರ್ಚಿಯಲ್ಲಿ ಬಂದ ಹಿರಿಯ ಮಹಿಳೆ

ಫ್ರಂಟ್​​ಲೈನ್ ಆರೋಗ್ಯ ರಕ್ಷಣಾ ಕಾರ್ಯಕರ್ತರು ಗುಂಪಿನ ಹೊಸದಾಗಿ ಪ್ರಾರಂಭಿಸಲಾದ ಬುರ್ಜೀಲ್‌ಪ್ರೌಡ್ ಗುರುತಿಸುವಿಕೆ ಉಪಕ್ರಮದಲ್ಲಿ ತಮ್ಮ ಸೇರ್ಪಡೆಯನ್ನು ದೃಢೀಕರಿಸುವ SMS ನೋಟಿಫಿಕೇಷನ್​ ಸ್ವೀಕರಿಸಲು ಪ್ರಾರಂಭಿಸಿದಾಗ ಅಲ್ಲಿ ಸೇರಿದ್ದ ಉದ್ಯೋಗಿಗಳು ಭಾವುಕರಾದರು. ಈ ಉಪಕ್ರಮದ ಮೊದಲ ಹಂತದಿಂದ ಸುಮಾರು 10,000 ಫ್ರಂಟ್​​ಲೈನ್ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.

ಈ ಘೋಷಣೆಯ ನಂತರ ಡಾ. ಶಂಶೀರ್ ಅವರಿಗೆ ಭಾರೀ ಚಪ್ಪಾಳೆಯ ಮೂಲಕ ಉದ್ಯೋಗಿಗಳು ಧನ್ಯವಾದ ತಿಳಿಸಿದರು. ಇದೊಂದು ಭಾವನಾತ್ಮಕ ಮತ್ತು ಅಪರೂಪದ ಕ್ಷಣವಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 8:27 pm, Mon, 19 January 26

Source link

ಕರೋನಾ ರೀತಿಯ ಮಾರಣಾಂತಿಕ ರೋಗ: ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಬಂದ್ – Kannada News | Anagodu indira Priyadarshini zoo Closed for four Deer Death from hemorrhagic septicemia virus

ದಾವಣಗೆರೆ, (ಜನವರಿ 19):  ದಾವಣಗೆರೆ ತಾಲೂಕಿನ ಆನಗೋಡು ಬಳಿಯಿರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ (indira Priyadarshini zoo )ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲದೆ ಇಡೀ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸದ್ಯ ಮೃಗಾಲಯದಲ್ಲಿ ಇರುವ ಇತರೆ ಜಿಂಕೆಗಳಿಗೂ ಸೋಂಕು ಹರಡದಂತೆ ತಡೆಯಲು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.‌ ಉಳಿದ ಜಿಂಕೆಗಳ ಮೇಲೆ ಅಧಿಕಾರಿಗಳು, ವೈದ್ಯರು ನಿಗಾವಹಿಸಿದ್ದಾರೆ.

ಕರೋನಾ ರೀತಿಯ ಮಾರಣಾಂತಿಕ ರೋಗ

ಇದೇ ಜನವರಿ 16ರಂದು ಒಂದು ಚುಕ್ಕೆ ಜಿಂಕೆ ಸಾವನ್ನಪ್ಪಿತ್ತು. ನಂತರ ಜ. 17 ರಂದು ಮತ್ತೆರಡು ಜಿಂಕೆಗಳು ಮೃತಪಟ್ಟಿದ್ದವು. ಹಾಗೂ ಜ.18 ರಂದು ಮತ್ತೊಂದು ಜಿಂಕೆ ಮೃತಪಟ್ಟಿರುವುದು ಕಂಡುಬಂದಿದೆ. ಕರೋನಾ ರೀತಿಯಲ್ಲಿ ಮಾರಣಾಂತಿಕ ರೋಗ ಹರಡಿದ್ದು.ಇಡಿ ಪಾರ್ಕ ಕ್ವಾರಟೈನ್ ಮಾಡಲಾಗಿದೆ. ಇನ್ನು ಮೇಲಿಂದ ಮೇಲೆ ಜಿಂಕೆ ಸಾವನ್ನಪ್ಪಿತ್ತಿರುವುದರಿಂದ ತಕ್ಷಣವೇ ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಸದಸ್ಯರು ಮೃಗಾಲಯಕ್ಕೆ ದೌಡಾಯಿಸಿದ್ದಾರೆ. ಪ್ರಾಥಮಿಕವಾಗಿ ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗವಿರಬಹುದು ಶಂಕೆ ವ್ಯಕ್ತವಾಗಿದೆ. ಸದ್ಯ ಜಿಂಕೆಗಳ ಸರಣಿ ಸಾವಿಗೆ ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ.​

ಇದನ್ನೂ ಓದಿ: ದಾವಣಗೆರೆ ಕಿರು ಮೃಗಾಲಯದಲ್ಲಿ 4 ಚುಕ್ಕೆ ಜಿಂಕೆಗಳು ಸಾವು: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಜಿಂಕೆಗಳು ಇದೇ ಸಾಂಕ್ರಾಮಿಕ ಕಾಯಿಲೆಯಿಂದ ಸಾವನ್ನಪ್ಪಿದ್ದವು. ಈಗ ಇಂದಿರಾ ಪ್ರಿಯದರ್ಶಿನಿ ಜಿಂಕೆಗಳ ಸಾವಿನಲ್ಲೂ ಸಾಮ್ಯತೆ ಕಂಡುಬಂದಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಶಾಸಕ ಕೆಎಸ್ ಬಸವಂತಪ್ಪ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ಆಹಾರ ನೀಡುತ್ತಿಲ್ಲ. ಮೇಲಾಗಿ ದಾವಣಗೆರೆಯಲ್ಲಿ ಇದೊಂದು ಮೃಗಾಲಯ ಬಿಟ್ಟರೇ ಬೇರೆ ಪ್ರವಾಸಿ ಸ್ಥಳಗಳು ಸಹ ಇಲ್ಲ. ಇಲ್ಲಿನ ಪ್ರಾಣಿಗಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಬೇಕಾದ ತಜ್ಞರನ್ನ ತಕ್ಷಣಕ್ಕೆ ಕರೆಸಿ ಇನ್ನಷ್ಟು ಜಿಂಕೆಗಳು ಸಾವನ್ನಪ್ಪದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

​ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ​ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಮೃಗಾಲಯದಲ್ಲಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಇದರಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳಿವೆ. ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | Frequent Night Waking: Heart & Brain Risks

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಮೊದಲು ಸರಿಯಾಗಿ ನಿದ್ರೆ ಮಾಡಬೇಕು. ರಾತ್ರಿ ನಿದ್ರೆ ಸರಿಯಾಗಿ ಆಗದೆಯೇ ಪದೇ ಪದೇ ಎಚ್ಚರವಾಗುತ್ತಿದ್ದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಹೌದು, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯ ಪ್ರಕಾರ, ರಾತ್ರಿ ನಿದ್ರೆಯಲ್ಲಿ ಆಗಾಗ ಎಚ್ಚರಗೊಂಡು ಸರಿಯಾಗಿ ನಿದ್ರೆ ಆಗದಿದ್ದರೆ ಅದು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅನೇಕ ರೀತಿಯ ಅಪಾಯಕಾರಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ, ವ್ಯಕ್ತಿಯು ರಾತ್ರಿ ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಮಾಡಬೇಕು ಇಲ್ಲವಾದಲ್ಲಿ ಇದು ಆರೋಗ್ಯವನ್ನು ಹದಗೆಡಿಸುತ್ತದೆ. ನಿಮಗೂ ನಿದ್ದೆ (Sleep) ಮಾಡುವಾಗ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಪ್ಪದೆ ಈ ಸ್ಟೋರಿ ಓದಿ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿದ್ರೆ ಸರಿಯಾಗಿ ಆಗದಿದ್ದವರು ಅಧಿಕ ರಕ್ತದೊತ್ತಡದಂತಹ ಅಪಾಯವನ್ನು ಹೊಂದಿರುತ್ತಾರೆ. ನಿದ್ರೆ ಸರಿಯಾಗಿ ಆಗದಿದ್ದಾಗ ದೇಹಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳುವುದಕ್ಕೆ ಸರಿಯಾದ ಅವಕಾಶ ಸಿಗುವುದಿಲ್ಲ, ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಇದು ಮೆದುಳಿನ ಮೇಲೂ ಪರಿಣಾಮ ಬೀರುತ್ತವೆ ಎಂದು ಸಂಶೋಧನೆಯು ಬಹಿರಂಗಗೊಂಡಿದೆ.

ನಿದ್ರೆಯಲ್ಲಾಗುವ ಅಡಚಣೆ ಹೃದಯಕ್ಕೆ ಹೇಗೆ ಅಪಾಯಕಾರಿಯಾಗುತ್ತದೆ?

ರಾತ್ರಿ ಚೆನ್ನಾಗಿ ನಿದ್ರೆ ಮಾಡುವ ಸಮಯದಲ್ಲಿ, ಹೃದಯವು ವಿಶ್ರಾಂತಿ ಪಡೆಯುತ್ತದೆ ಮತ್ತು ರಕ್ತದೊತ್ತಡವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಆದರೆ ನಿದ್ರೆಗೆ ಪದೇ ಪದೇ ಅಡ್ಡಿಯಾದಾಗ, ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ಉರಿಯೂತಕ್ಕೆ ಕಾರಣವಾಗಬಹುದು, ಅಷ್ಟೇ ಅಲ್ಲ, ಹೃದಯಾಘಾತದ ಅಪಾಯವನ್ನು ಕೂಡ ಹೆಚ್ಚಿಸುತ್ತದೆ. ಪ್ರತಿದಿನ ರಾತ್ರಿ 2 ರಿಂದ 3 ಬಾರಿ ಎಚ್ಚರಗೊಳ್ಳುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವು 30% ವರೆಗೆ ಹೆಚ್ಚಾಗಿರುತ್ತದೆ. ಈ ರೀತಿ ಪದೇ ಪದೇ ನಿದ್ರೆಯಿಂದ ಎಚ್ಚರಗೊಳ್ಳುವುದಕ್ಕೆ ಕಾರಣ ನಿಮ್ಮ ಮೆದುಳು. ನೀವು ನಿದ್ರೆ ಮಾಡಿದ ಮೇಲೆಯೂ ಅದು ಹೆಚ್ಚು ಸಕ್ರಿಯವಾಗಿದೆ ಎಂದರ್ಥ. ಅಂದರೆ ನೀವು ಯಾವುದೋ ವಿಷಯದ ಬಗ್ಗೆ ಅತಿಯಾಗಿ ಯೋಚಿಸುತ್ತಿರಬಹುದು ಅಥವಾ ಮಾನಸಿಕ ಒತ್ತಡದಿಂದ ಬಳಲುತ್ತಿರಬಹುದು. ಮಾನಸಿಕ ಒತ್ತಡವಿದ್ದರೆ, ಅದು ಹೃದಯದ ಮೇಲೂ ಪರಿಣಾಮ ಬೀರುತ್ತದೆ, ಏಕೆಂದರೆ ಮಾನಸಿಕ ಒತ್ತಡವು ಹೃದಯಾಘಾತಕ್ಕೆ ಸಾಮಾನ್ಯ ಕಾರಣವಾಗಿದೆ. ಆದ್ದರಿಂದ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ, ಮತ್ತು ರಾತ್ರಿ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವ ಸಮಸ್ಯೆ ಇದ್ದರೆ, ತಪ್ಪದೆ ವೈದ್ಯರ ಸಂಪರ್ಕ ಮಾಡಿ.

ಇದನ್ನೂ ಓದಿ: ಒತ್ತಡದಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ತಿಳಿದ್ರೆ ಶಾಕ್ ಆಗ್ತೀರಾ!

ಈ ರೀತಿ ಸಮಸ್ಯೆ ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತೆ?

  • ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಬಳಲುತ್ತಿರುವವರು.
  • ಮಾನಸಿಕ ಒತ್ತಡದಲ್ಲಿರುವವರು.
  • ರಾತ್ರಿ ಮೊಬೈಲ್ ಫೋನ್ ಬಳಸುವವರು ಅಥವಾ ಟಿವಿ ನೋಡುವವರು.

ಈ ಅಪಾಯವನ್ನು ತಡೆಗಟ್ಟಲು ಏನು ಮಾಡಬಹುದು?

  • ಮಲಗುವ ಮೊದಲು ಮೊಬೈಲ್ ಮತ್ತು ಟಿವಿಗಳಿಂದ ದೂರವಿರಿ.
  • ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
  • ರಾತ್ರಿಯಲ್ಲಿ ಚಹಾ ಅಥವಾ ಕಾಫಿ ಕುಡಿಯಬೇಡಿ.
  • ಮಾನಸಿಕ ಒತ್ತಡವನ್ನು ತಪ್ಪಿಸಿ.
  • ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಚಾಣಕ್ಯರ ಈ ಮೂರು ಸಲಹೆಗಳನ್ನು ಅನುಸರಿಸಿದರೆ ಯಶಸ್ಸು ನಿಮ್ಮದಾಗುತ್ತದೆ – Kannada News | Chanakya Niti: Follow these advice of Chanakya to achieve success

ಪ್ರತಿಯೊಬ್ಬರಿಗೂ ಸಹ ಜೀವನದಲ್ಲಿ ಯಶಸ್ಸನ್ನು (success) ಸಾಧಿಸುವ ಬಯಕೆ ಇದ್ದೇ ಇರುತ್ತದೆ. ಇದಕ್ಕಾಗಿ ಸಾಕಷ್ಟು ಪರಿಶ್ರಮವನ್ನು ಸಹ ಪಡುತ್ತಾರೆ. ಕೆಲವರು ಸ್ವಲ್ಪ ಕಠಿಣ ಪರಿಶ್ರಮದಿಂದ ಬೇಗನೆ ಯಶಸ್ಸನ್ನು ಸಾಧಿಸುತ್ತಾರೆ, ಆದರೆ ಇನ್ನೂ ಕೆಲವರು ಎಷ್ಟೇ ಪ್ರಯತ್ನಪಟ್ಟರೂ ವಿಫಲರಾಗುತ್ತಾರೆ. ಇದೇ ರೀತಿ ನಿಮಗೂ ಸಹ ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಲಭಿಸುತ್ತಿಲ್ವಾ, ಹಾಗಿದ್ರೆ ಅಂತಹ ಸಂದರ್ಭಗಳಲ್ಲಿ, ನಿಮ್ಮ ಗುರಿಗಳನ್ನು ಸಾಧಿಸಲು ವಿದ್ವಾಂಸ ಆಚಾರ್ಯ ಚಾಣಕ್ಯರ ಚಾಣಕ್ಯರ ಸಲಹೆಗಳನ್ನು ಪಾಲಿಸಿ. ಅದರಲ್ಲೂ ಚಾಣಕ್ಯರು ತಿಳಿಸಿಕೊಟ್ಟಿರುವ ಈ ಮೂರು ಸಲಹೆಗಳನ್ನು ಪಾಲಿಸಿದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ.

ಯಶಸ್ಸನ್ನು ಸಾಧಿಸಲು ಚಾಣಕ್ಯರ ಈ ಸಲಹೆ ಅನುಸರಿಸಿ:

ನಿಮ್ಮನ್ನು ನಿಯಂತ್ರಿಸಲು ಕಲಿಯಿರಿ: ಚಾಣಕ್ಯರು ಸ್ವಯಂ ಶಿಸ್ತು ವೈಯಕ್ತಿಕ ಬೆಳವಣಿಗೆಯ ಅಡಿಪಾಯ ಎಂದು ಒತ್ತಿ ಹೇಳಿದ್ದಾರೆ. ಯಾವುದೇ ವಿಷಯದಲ್ಲಿ ಆತುರ ಪಡದೆ ಸ್ವಯಂ ನಿಯಂತ್ರಣ ಮತ್ತು ದೀರ್ಘಕಾಲೀನ ಗುರಿಗಳ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯವು ಯಶಸ್ಸಿಗೆ ಕಾರಣವಾಗುತ್ತದೆ. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬಲ್ಲ ಯಾವುದೇ ವ್ಯಕ್ತಿಯು ಏನನ್ನಾದರೂ ಸಾಧಿಸಬಹುದು ಮತ್ತು ಆತ ಯಾವುದೇ ಕೆಲಸವನ್ನು ಕೈಗೊಂಡಿದ್ದರೂ, ಅದನ್ನು ಆತ ಪೂರ್ಣಗೊಳಿಸುತ್ತಾನೆ. ಈ ಸ್ವಭಾವವೇ ಯಶಸ್ಸು ಹಾಗೂ ಶ್ರೀಮಂತಿಕೆಯ ಮೆಟ್ಟಿಲು.

ಅದೃಷ್ಟವನ್ನು ಅವಲಂಬಿಸುವುದನ್ನು ತಪ್ಪಿಸಿ: ಯಾವುದೇ ವ್ಯಕ್ತಿ ಯಶಸ್ವಿಯಾಗಲು ಸಂಪೂರ್ಣವಾಗಿ ಅದೃಷ್ಟವನ್ನು ಅವಲಂಬಿಸಬಾರದು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಅದೃಷ್ಟವನ್ನು ಅವಲಂಬಿಸುವ ಬದಲು ಪ್ರತಿಯೊಂದು ಸಂದರ್ಭದಲ್ಲೂ ಕಷ್ಟಪಟ್ಟು, ಯುಕ್ತಿಯಿಂದ  ಕೆಲಸ ಮಾಡುವತ್ತ ಗಮನ ಹರಿಸಬೇಕು. ಯಶಸ್ಸಿಗಾಗಿ ನಿರಂತರ ಪ್ರಯತ್ನ ಮಾಡಬೇಕು. ಈ ರೀತಿ ಇದ್ದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಇಷ್ಟವಾಗುವುದೇ ಗುಣಗಳಿರುವ ಪುರುಷರಂತೆ

ನಿಮ್ಮ ದೌರ್ಬಲ್ಯಗಳನ್ನು ಹೇಳಬೇಡಿ: ಯಾವುದೇ ಸಂದರ್ಭದಲ್ಲೂ ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯ ಅಥವಾ ದೌರ್ಬಲ್ಯಗಳನ್ನು ಇನ್ನೊಬ್ಬರಿಗೆ ಬಹಿರಂಗಪಡಿಸಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.  ಹೀಗೆ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸುವುದರಿಂದ ವಿರೋಧಿಗಳು ಹೆಚ್ಚಾಗುತ್ತಾರೆ ಜೊತೆಗೆ ಕೆಲವರು ಇದರ ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಇದು ಖಂಡಿತವಾಗಿಯೂ ನಿಮ್ಮ ಯಶಸ್ಸಿಗೆ ಮುಳ್ಳಾಗುತ್ತದೆ.

ಇದಲ್ಲದೆ, ಆಚಾರ್ಯ ಚಾಣಕ್ಯರು  ಹಣಕಾಸಿನ ನಷ್ಟಗಳನ್ನು ಬಹಿರಂಗಪಡಿಸಬಾರದು, ವೈಯಕ್ತಿಕ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸಹ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಮುಂದಿನ ಏಕದಿನ ಸರಣಿ ಯಾವಾಗ? ರೋಹಿತ್, ಕೊಹ್ಲಿ ಆಡ್ತಾರಾ? – Kannada News | India’s 2026 ODI Series Loss and Next Match: Gill’s Team Faces England in July

ಶುಭ್​ಮನ್ ಗಿಲ್ (Shubman Gill) ನಾಯಕತ್ವದ ಟೀಂ ಇಂಡಿಯಾ 2026 ರ ಮೊದಲ ಸರಣಿಯನ್ನು ಸೋತಿದ್ದು, ಸೋಲಿನೊಂದಿಗೆ ವರ್ಷವನ್ನು ಆರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತ್ತಾದರೂ ಆ ನಂತರ ನ್ಯೂಜಿಲೆಂಡ್ ಬಲವಾದ ಪುನರಾಗಮನ ಮಾಡಿ ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾರಂತಹ (Rohit Sharma) ಅನುಭವಿಗಳು ಆಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಈ ಇಬ್ಬರು ದಿಗ್ಗಜರು ಇದೊಂದು ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಸಾಗರವೇ ಹರಿದಿತ್ತು. ಅದರಂತೆ ಕೊಹ್ಲಿ ತಮ್ಮ ಅನುಭವವನ್ನು ಧಾರೆ ಎರೆದರೆ, ರೋಹಿತ್ ಮಾತ್ರ ಸಪ್ಪೆ ಪ್ರದರ್ಶನ ನೀಡಿದರು. ಹೀಗಾಗಿ ತಂಡ ಸರಣಿ ಸೋತಿತ್ತು.

ಮೇಲೆ ಹೇಳಿದಂತೆ ವಿರಾಟ್ ಮತ್ತು ರೋಹಿತ್ ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತರಾಗಿದ್ದಾರೆ. ಆದ್ದರಿಂದ, ಇಬ್ಬರೂ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಾರೆ. ಆದ್ದರಿಂದ ಇವರಿಬ್ಬರು ಯಾವಾಗ ಮತ್ತೆ ಕಣಕ್ಕಿಳಿಯುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಆ ಸರಣಿಯಲ್ಲಾದರೂ ರೋಹಿತ್ ಫಾರ್ಮ್​ಗೆ ಮರಳುತ್ತಾರಾ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಹಾಗಿದ್ದರೆ ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿ ಯಾವಾಗ? ಯಾರ ವಿರುದ್ಧ ಎಂಬುದನ್ನು ನೋಡುವುದಾದರೆ..

ಭಾರತದ ಮುಂದಿನ ಏಕದಿನ ಸರಣಿ ಯಾವಾಗ?

ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿಗಾಗಿ ಭಾರತೀಯ ಅಭಿಮಾನಿಗಳು 1-2 ಅಲ್ಲ, 6 ತಿಂಗಳು ಕಾಯಬೇಕಾಗುತ್ತದೆ. ಟೀಂ ಇಂಡಿಯಾ ಜುಲೈ ತಿಂಗಳಲ್ಲಿ ಏಕದಿನ ಸರಣಿಯನ್ನು ಆಡಲಿದೆ. ಈ ಏಕದಿನ ಸರಣಿಯಲ್ಲಿ ಗಿಲ್ ಪಡೆ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ, ಇಂಗ್ಲೆಂಡ್‌ ಪ್ರವಾಸವನ್ನು ಕೈಗೊಳ್ಳಲಿದೆ.

ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸವು 5 ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಇದರ ನಂತರ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ರೋಹಿತ್ ಮತ್ತು ವಿರಾಟ್ ಇಬ್ಬರೂ ಈ ಸರಣಿಯಲ್ಲಿ ಆಡುವುದು ಖಚಿತ. ಹೀಗಾಗಿ ಅಭಿಮಾನಿಗಳು ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು 6 ತಿಂಗಳು ಕಾಯಬೇಕಾಗುತ್ತದೆ.

IND vs NZ: ವಾರಿಯರ್ ವಿರಾಟ್; ವಿಶ್ವ ದಾಖಲೆಯ ಶತಕ ಸಿಡಿಸಿದ ಕೊಹ್ಲಿ

ಭಾರತದ ಮುಂಬರುವ ಏಕದಿನ ಸರಣಿ ವೇಳಾಪಟ್ಟಿ

  • ಭಾರತ vs ಇಂಗ್ಲೆಂಡ್, ಮೊದಲ ಪಂದ್ಯ, ಜುಲೈ 14, ಬರ್ಮಿಂಗ್ಹ್ಯಾಮ್
  • ಭಾರತ vs ಇಂಗ್ಲೆಂಡ್, 2ನೇ ಪಂದ್ಯ, ಜುಲೈ 16, ಕಾರ್ಡಿಫ್
  • ಭಾರತ vs ಇಂಗ್ಲೆಂಡ್, 3ನೇ ಪಂದ್ಯ, ಜುಲೈ 19, ಲಾರ್ಡ್ಸ್

ಐಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ ರೋಹಿತ್-ವಿರಾಟ್

ಏತನ್ಮಧ್ಯೆ, ರೋಹಿತ್ ಮತ್ತು ವಿರಾಟ್ ಅವರನ್ನು ಟೀಂ ಇಂಡಿಯಾದ ಜೆರ್ಸಿಯಲ್ಲಿ ನೋಡಲು 6 ತಿಂಗಳು ಕಾಯಬೇಕಾಗುತ್ತದೆ. ಆದಾಗ್ಯೂ, ಇಬ್ಬರೂ ಐಪಿಎಲ್ ಪಂದ್ಯಾವಳಿಯಲ್ಲಿ ಮೈದಾನಕ್ಕೆ ಮರಳಲಿದ್ದಾರೆ. ಐಪಿಎಲ್‌ನ 19 ನೇ ಸೀಸನ್ ಮಾರ್ಚ್ ಕೊನೆಯ ವಾರದಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ, ರೋಹಿತ್ ಮುಂಬೈ ಪರ ಮತ್ತು ವಿರಾಟ್ ಆರ್‌ಸಿಬಿ ಪರ ಆಡುವುದನ್ನು ಕಾಣಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Inspiring Story: ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ದೀಪಾ ದೇವರಾಜನ್ – Kannada News | Success story of how Deepa Devarajan made mark in Interior designing field as woman entrepreneur

ದೀಪಾ ದೇವರಾಜನ್ (Deepa Devarajan) ಅವರದ್ದು ಶ್ರೀಮಂತ ಕುಟುಂಬ ಅಥವಾ ಸಿರಿತನದ ಹಿನ್ನೆಲೆಯಲ್ಲ. ಅವರು ಹಿಂದಿ ಮಾತನಾಡುವ, ಪುರುಷ ಪ್ರಾಬಲ್ಯ ಇರುವ ಉದ್ಯಮದಲ್ಲಿ ತನ್ನದೇ ಒಂದು ಸ್ಥಾನವನ್ನು ಪಡೆದುಕೊಂಡಿರುವ ದಕ್ಷಿಣ ಭಾರತೀಯ ಮಹಿಳೆ. ಸಾಧಾರಣ ಸರ್ವಿಸ್ ಕ್ಲಾಸ್ ಹಿನ್ನೆಲೆ ಇರುವ ಕುಟುಂಬದಿಂದ ಬಂದವರಾಗಿದ್ದು, ಇಂಟೀರಿಯರ್ ಡಿಸೈನಿಂಗ್ ಕ್ಷೇತ್ರಕ್ಕೆ ಕಾಲಿಡುವುದು ಅಷ್ಟು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ, ಛಲ, ಪರಿಶ್ರಮ, ಧೈರ್ಯ, ಪ್ಲಾನಿಂಗ್ ಅವರನ್ನು ಈ ಕ್ಷೇತ್ರಕ್ಕೆ ಕಾಲಿಟ್ಟು ಎದ್ದು ನಿಲ್ಲುವಂತೆ ಮಾಡಿವೆ.

ಸೀಮಿತ ಸಂಪನ್ಮೂಲಗಳು, ಆದರೆ ನಿಚ್ಚಳ ಕನಸುಗಳು

ದೀಪಾ ಅವರ ಪ್ರಯಾಣವು ಸಮರ್ಪಕವಾದ ಸಪೋರ್ಟ್ ಸಿಸ್ಟಂ ಇಲ್ಲದೇ ಆರಂಭವಾಯಿತು. ಇಂಟೀರಿಯರ್ ಡಿಸೈನ್​ನಂತಹ ಪ್ರೊಫೆಷನ್ ಅನ್ನು ಪ್ರವೇಶಿಸುವುದು ಬಹಳ ಸವಾಲಿನದ್ದಾಗಿತ್ತು. ಆ ಕೋರ್ಸ್​ಗೆ ದಾಖಲಾಗುವುದೇ ಕಷ್ಟಕರವಾಗಿತ್ತು. ಸಣ್ಣ ಪುಟ್ಟ ಕೆಲಸಗಳ್ನು ಮಾಡುತ್ತಾ ಪ್ರತೀ ಪೈಸೆಯನ್ನೂ ಎಚ್ಚರಿಕೆಯಿಂದ ಉಳಿಸಿ, ಹಣ ಕೂಡಿಟ್ಟು ಅದನ್ನು ಶಿಕ್ಷಣ ಹಾಗೂ ಭವಿಷ್ಯಕ್ಕೆ ಹೂಡಿಕೆ ಮಾಡಿದರು.

ಇದನ್ನೂ ಓದಿ: ಬ್ಯಾಂಕ್ ಸಾಲ ಕೊಡದಾಗ ಮನೆ ಖರ್ಚಿನಲ್ಲಿ ಹಣ ಉಳಿಸಿ ಬ್ಯುಸಿನೆಸ್ ಕಟ್ಟಿ ಯಶಸ್ವಿಯಾದ ಪ್ರತಿಭಾ ಶರ್ಮಾ

ಕಲ್ಚರಲ್ ಸ್ಟೀರಿಯೋಟೈಪ್ಸ್ ಮತ್ತು ಕೌಟುಂಬಿಕ ವಾಸ್ತವ

Purple Dreams ನ ಸಂಸ್ಥಾಪಕಿ ದೀಪಾ, ‘ಆಕಾಶದ ಆಚೆ ಇನ್ನೊಂದು ಆಕಾಶ ಇರಬಹುದು’ ಎಂಬ ಆಲೋಚನೆಯೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಿದ್ದೆ ಎಂದು ಹೇಳುತ್ತಾರೆ. “ಮಗಳೇ, ನಾವು ದಕ್ಷಿಣದವರು, ನೀನು ಯಾವುದೇ ಬ್ಯುಸಿನೆಸ್ ನಡೆಸಲು ಸಾಧ್ಯವಾಗುವುದಿಲ್ಲ. ಮೊದಲು, ನೀನು ಓದಬೇಕು, ನಂತರ ಒಳ್ಳೆಯ ಕೆಲಸ ಗಳಿಸಿ ಹಣ ಸಂಪಾದಿಸಿ, ಮತ್ತು ನಂತರ ಮದುವೆಯಾಗಬೇಕು” ಎಂದು ತನಗೆ ತಾಯಿ ಹೇಳುತ್ತಿದ್ದ ಮಾತುಗಳನ್ನು ದೀಪಾ ದೇವರಾಜನ್ ನೆನಪಿಸಿಕೊಳ್ಳುತ್ತಾರೆ.

ಅವರ ಉದ್ಯಮಶೀಲತೆಗೆ ಬುನಾದಿ ಹಾಕಿದ ಫೈನಾನ್ಷಿಯಲ್ ಪ್ಲಾನಿಂಗ್

ದೀಪಾ ದೇವರಾಜನ್ ಅವರಿಗೆ ಲಾಂಗ್ ಟರ್ಮ್ ಪ್ಲಾನಿಂಗ್ ಮತ್ತು ಡಿಸಿಪ್ಲಿನ್ ಮೇಲೆ ಹೆಚ್ಚು ವಿಶ್ವಾಸ. ಆರ್ಥಿಕ ಸ್ವಾತಂತ್ರ್ಯ ಇದ್ದದ್ದರಿಂದ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ಕ್ರಮೇಣ ಅವರು ತಮ್ಮದೇ ದಾರಿ ಕಂಡುಕೊಳ್ಳುತ್ತಾ ಹೋದರು. ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಜೆಕ್ಟ್​ಗಳಿಗೆ ಇಂಟೀರಿಯರ್ ಡಿಸೈನ್ ಸಲ್ಯೂಶನ್ಸ್ ಒದಗಿಸುವ Purple Dreams ಎನ್ನುವ ತಮ್ಮದೇ ಸಂಸ್ಥೆ ಸ್ಥಾಪಿಸಿದರು. ಇಂದು, ಅವರ ಗುರುತು ಕಠಿಣ ಪರಿಶ್ರಮ, ಸ್ಟ್ರಾಟಿಜಿಕ್ ಇನ್ವೆಸ್ಟ್​ಮೆಂಟ್, ನಿರಂತರ ವೃತ್ತಿಪರ ಕೌಶಲ್ಯವರ್ಧನೆ ಮತ್ತು ಕ್ಲೈಂಟ್ ಅಗತ್ಯಗಳಿಗೆ ಅನುಗುಣವಾಗಿ ಬಜೆಟ್ ಸ್ನೇಹಿ ಪರಿಹಾರಗಳನ್ನು ಒದಗಿಸುವುದು ಇವುಗಳಿಂದ ದೀಪಾ ದೇವರಾಜನ್ ಗುರುತಿಸಲಾಗುತ್ತದೆ. ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಸೈನ್ ನಡುವೆ ಗಾಢ ಸಂಬಂಧ ಇದೆ ಎಂಬುದು ಅವರ ಭಾವನೆ. ಈ ಕನೆಕ್ಷನ್​ನಿಂದಾಗಿ ಅತ್ಯಾಧುನಿಕ ಕಲರ್ ಪ್ಯಾಟರ್ನ್​ಗಳು, ರಿಫೈನ್ಡ್ ಮೆಟೀರಿಯಲ್ ಮತ್ತು ಡೀಟೇಲಿಂಗ್ ಇರುವ ಒಳಾಂಗಣ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ.

ಇದನ್ನೂ ಓದಿ: 9-5 ಸೆಕ್ಯೂರ್ಡ್ ಜಾಬ್ ಬಿಟ್ಟು ಮನಸ್ಸಿನ ಮಾತು ಕೇಳಿ ಹಣ ಮತ್ತು ನೆಮ್ಮದಿ ಕಂಡುಕೊಂಡ ರಿಮ್ಜಿಮ್ ಸೈಕಿಯಾ

ದೀಪಾ ದೇವರಾಜನ್

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (https://scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (https://smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ – Kannada News | Gadag: What Was Discovered on the Fourth Day of Excavations at Lakkundi; Here Are the Details

ಲಕ್ಕುಂಡಿ ಗ್ರಾಮದಲ್ಲಿ 4ನೇ ‌ದಿನದ ಉತ್ಖನನ ಕಾರ್ಯ

ಗದಗ, ಜನವರಿ 19: ಲಕ್ಕುಂಡಿ (Lakkundi) ಶಿಲ್ಪಕಲೆಗಳ, ದೇವಾಲಯಗಳ ಸ್ವರ್ಗ, ಚಿನ್ನದ ನಾಡು. ಇಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಕೋಟೆ ಗೋಡೆಯಲ್ಲಿ ಹುದುಗಿ ಹೋಗಿರುವ ರಾಶಿ ರಾಶಿ ಶಿಲ್ಪಕಲೆಗಳು ಟಿವಿ9 ಕ್ಯಾವೆರಾದಲ್ಲಿ ಸೆರೆಯಾಗಿವೆ. ಈ ನಡುವೆ ಉತ್ಖನ ನಡೆಯುತ್ತಿರುವ ಜಾಗದಲ್ಲಿ ಇಂದು ಕೂಡ ಪುರಾತನ ಶಿಲೆಗಳು ಪತ್ತೆಯಾಗಿವೆ. ಪುರಾತನ ಕಾಲದ ಕೊಡಲಿ, ಗಂಟೆ, ನಾಗರ ಮೂರ್ತಿ, ಶಿವಲಿಂಗದ ಪಾನಿ ಪೀಠ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿದ್ದು, ತೀವ್ರ ಕುತೂಹಲ‌ ಮೂಡಿಸುತ್ತಿದೆ. ಇನ್ನು ಈ ವೇಳೆ ಕಾವಿದಾರಿಯೊಬ್ಬ ಉತ್ಖನನ ಜಾಗಕ್ಕೆ ಎಂಟ್ರಿಕೊಟ್ಟು ವಿಚಿತ್ರವಾಗಿ ವರ್ತಿಸಿದ್ದಾರೆ.

ಇಂದು ಸಿಕ್ಕಿದ್ದೇನು? 

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಇಂದು 4ನೇ ದಿನದ ಉತ್ಖನನ ಕಾರ್ಯ ನಡೆದಿದೆ. ಐತಿಹಾಸಿಕ ದೇವಾಲಯಗಳಿಗೆ ಬಳಸಿದ ಕಲಾಕೃತಿ ಹೊಂದಿರುವ ಶಿಲೆಗಳು ಪತ್ತೆಯಾಗಿದೆ. ಕಲೆಗಳ ಶ್ರೀಮಂತ ನಾಡು ಲಕ್ಕುಂಡಿ ರಾಜ್ಯದ ಜನರ ಕುತೂಹಲ ಹೆಚ್ಚಿಸುತ್ತಿದೆ. ಚಿನ್ನದಲ್ಲಿ‌ ಮಾತ್ರ ಶ್ರೀಮಂತಿಕೆ ಅಲ್ಲ. ಕಲೆಗಳಲ್ಲೂ ಶ್ರೀಮಂತಿಕೆ ಹೊಂದಿದ ನಾಡು ಲಕ್ಕುಂಡಿ ಅನ್ನೋದು ಶಿಲ್ಪಕಲೆಗಳು ಸಾರಿ ಸಾರಿ ಹೇಳುತ್ತಿವೆ.

ಇದನ್ನೂ ಓದಿ: ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ

4ನೇ ದಿನದ ಉತ್ಖನನ ಜಾಗದಲ್ಲಿ ಆಯುಧ ಮಾದರಿಯ ಕಲ್ಲು ಪತ್ತೆಯಾಗಿದೆ. ಇದು ಶಿಲಾಯುಗದಲ್ಲಿ ಬಳಕೆಯಾಗುತ್ತಿದ್ದ ಕೊಡಲೆ ಆಕಾರದ ಶಿಲೆ ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು, ಮುಂದಿನ ಒಂದು ಭಾಗ ಮೊನಚಾಗಿದೆ. ಐತಿಹಾಸಿಕ ದೇವಸ್ಥಾನದ ಸ್ತಂಭದ ಮತ್ತು ವಿತಾನದ (ಛತ್ತು) ಮಧ್ಯದಲ್ಲಿರುವ ಬೋದಿಗೆ ಭಾಗದ ಅವಶೇಷ ಪತ್ತೆ ಆಗಿದೆ. ಇದೆ ವೇಳೆ ಲೋಹದ ಗಂಟೆಯೊಂದು ಪತ್ತೆಯಾಗಿದೆ. ಪುರಾತತ್ವ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ದಿನಗೂಲಿ ಹೆಚ್ಚಿಸುವಂತೆ ಕಾರ್ಮಿಕರ ಆಗ್ರಹ

ಇನ್ನು 4ನೇ ದಿನದ ಉತ್ಖನನ ಕಾರ್ಯ ಇಂದು ತಡವಾಗಿ ಆರಂಭವಾಯಿತು. ಕಾರಣ ಉತ್ಖನನ ಕಾರ್ಮಿಕರು ಸರ್ಕಾರದಿಂದ ಕೊಡುವ ವೇತನ ವಿಚಾರದಲ್ಲಿ ಅಪಸ್ವರ ಎತ್ತಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗಬೇಕಿದ್ದ ಉತ್ಖನ ಕೆಲಸ 45 ನಿಮಿಷ ತಡವಾಗಿದೆ. ಉತ್ಖನನ ಕಾರ್ಮಿಕರು ಹೆಚ್ಚಿನ ವೇತನ ನೀಡುವಂತೆ ಆಗ್ರಹಿಸಿದರು. ದಿನಕ್ಕೆ 374 ರೂ ವೇತನ ನೀಡ್ತಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ದಿನಕ್ಕೆ 4 ಗಂಟೆ ಕೆಲಸ ಮಾಡಿದರೆ 374 ರೂ ನೀಡಲಾಗುತ್ತದೆ. ಆದರೆ ಇಲ್ಲಿ 10 ಗಂಟೆ ವರೆಗೆ ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದು, ಕೇವಲ 374 ರೂ ಸಂಬಳ‌ ಕೊಡುತ್ತಿದ್ದಾರೆ. ನಮಗೆ 600 ರೂ ವೇತನ ನೀಡಬೇಕು ಅಂತ ಆಗ್ರಹಿಸಿದರು.

ಇತರೆ ಕೂಲಿ ಕೆಲಸ, ಜಮೀನು ಕೆಲಸ ಹಾಗೂ ಗಾರಿ ಕೆಲಸಕ್ಕೆ ಹೋದರೆ ಕಡಿಮೆ ಸಮಯ ಹೆಚ್ಚಿನ ವೇತನ ಸಿಗುತ್ತೆ. ಇಲ್ಲಿ ಹೆಚ್ಚು ಸಮಯ ಕೆಲಸ‌ ಮಾಡುತ್ತೇವೆ, ಆದರೆ ಕಡಿಮೆ ಕೂಲಿ ಕೊಡುತ್ತಾರೆ. ಬೇರೆ ಬೇರೆ ಕೆಲಸಕ್ಕೆ ಮಹಿಳೆಯರಿಗೆ 500 ರಿಂದ 600 ರೂ ವೇತನ ಸಿಗುತ್ತೆ. ಪುರುಷ ಕಾರ್ಮಿಕರು 1000 ಸಾವಿರ ರೂ.ವರೆಗೆ ದುಡಿಯುತ್ತೇವೆ. ಇಲ್ಲಿ ಹೆಚ್ಚು ಸಮಯ, ಕಡಿಮೆ ಕೂಲಿ ಕೊಡುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನದ ಚಾಮುಂಡಿ ವಿಗ್ರಹ ಇದೆ ಎಂದ ‘ಬುರುಡೆಬಾಬಾ’!

ಉತ್ಖನನ ಸ್ಥಳಕ್ಕೆ ಸ್ವಯಂ ಘೋಷಿಸಿತ ಹಿಂಬದಿ ನಡೆಯುವ ಸ್ವಾಮೀಜಿ ಆಗಮಿಸಿ, ಚಿತ್ರವಿಚಿತ್ರವಾಗಿ ವರ್ತಿಸಿದರು. ಹೈಡ್ರಾಮಾದಿಂದ ಜನ ಕೂಗಾಡಲು ಶುರುಮಾಡಿದರು. ನಾನು ಶಿವಯ್ಯ ಹಿರೇಮಠ ಎಂಬ ಸ್ವಾಮೀಜಿ. ನಾನೊಬ್ಬ ಪವಾಡ ಪುರುಷ. ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ‌ ಚಿನ್ನದ ಮೂರ್ತಿ, ಕಿರಿಟ ಇದೆ ಎಂದು ಜನರನ್ನ ನಂಬಿಸುವ ಕೆಲಸ ಮಾಡಿದರು. ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ನಡೆಸಿದರು.

ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ: ಗ್ರಾಮಸ್ಥರಿಗೆ ಬೆದರಿ ಓಡಿದ ಸ್ವಯಂಘೋಷಿತ ಪವಾಡ ಪುರುಷ!

ಮೊದ ಮೊದಲು ಸ್ವಾಮಿಜಿಯ ಮಾತುಗಳು, ಅವರ ಆಕ್ಟಿಂಗ್ ಜನರಿಗೆ ತೀವ್ರ ಕುತೂಲ ಮೂಡಿಸಿತ್ತು. ಸ್ವಾಮೀಜಿ ಹೇಳುವುದು ಸುಳ್ಳು ಎಂದು ತಿಳಿದ ಜನರು ತರಾಟೆ ತೆಗೆದುಕೊಂಡರು. ಬಳಿಕ ಉತ್ಖನನ ಸ್ಥಳದಿಂದಲೇ ಓಡಿಸಿದರು. ಸದ್ಯ ಉತ್ಖನನ ಸ್ಥಳದಲ್ಲಿ ಇನ್ನು ಏನೆಲ್ಲಾ ಅವಶೇಷಗಳು ಪತ್ತೆಯಾಗುತ್ತವೆ ಕಾಯ್ದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link