Category Archives: Blog

Your blog category

ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗ ಬಳಿಕ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ ಜಾಹ್ನವಿ

ಬೆಂಗಳೂರು, (ಮೇ 24): ಕನ್ನಡ ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿರೂಪಕಿ ಜಾಹ್ನವಿ ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು… ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗದಿಂದ ಇದೀಗ ಜಾಹ್ನವಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಿಗ್ ಬಾಸ್ ರಿಯಾಲಿ ಶೋಗಳಿಂದ ಜನಪ್ರಿಯತೆ ಗಳಿಸಿರುವ ಜಾಹ್ನವಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇಂದು (ಮೇ 24) ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಾಹ್ನವಿ ಅಧಿಕೃತವಾಗಿ ಜೆಡಿಎಸ್​ ಸೇರ್ಪಡೆಯಾದರು.ಈ ಮೂಲಕ ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗದಿಂದ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

Source link

ದೇಹದಲ್ಲಿ ಈ ರೀತಿ ಬದಲಾವಣೆ ಕಂಡು ಬಂದ್ರೆ ತಡಮಾಡದೆಯೇ ವೈದ್ಯರನ್ನು ಭೇಟಿ ಮಾಡಿ – Kannada News | Ebola Virus Symptoms: Early Warning Signs & Expert Prevention Tips From WHO

ಇತ್ತೀಚಿನ ದಿನಗಳಲ್ಲಿ ಇಬೋಲಾ (Ebola) ವೈರಸ್‌ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಇದು ಅತ್ಯಂತ ಅಪಾಯಕಾರಿ ವೈರಲ್ ಸೋಂಕುಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆರಂಭದಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳಂತೆ ಕಾಣುವ ಕಾರಣ, ಅನೇಕರು ಇದನ್ನು ನಿರ್ಲಕ್ಷಿಸುವ ಸಾಧ್ಯತೆ ಇದೆ. ಆದರೆ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಈ ಸೋಂಕು ಗಂಭೀರ ರೂಪ ಪಡೆಯಬಹುದು. ತಜ್ಞರ ಪ್ರಕಾರ, ಇಬೋಲಾ ವೈರಸ್‌ನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ. ಇಲ್ಲವಾದಲ್ಲಿ ಇದು ಪ್ರಾಣಕ್ಕೆ ಅಪಾಯಕಾರಿಯಾಗಿಬಹುದು.

ಇಬೋಲಾ ವೈರಸ್‌ನ ಆರಂಭಿಕ ಲಕ್ಷಣಗಳು?

ಗೋರಖ್‌ಪುರದ ರೀಜೆನ್ಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ತಜ್ಞ ಡಾ. ವಿಜಯ್ ಕುಮಾರ್ ಶರ್ಮಾ ಅವರ ಪ್ರಕಾರ, ಇಬೋಲಾ ವೈರಸ್‌ನ ಆರಂಭಿಕ ಲಕ್ಷಣಗಳು ಸಾಮಾನ್ಯ ವೈರಲ್ ಜ್ವರದಂತೆಯೇ ಕಾಣುತ್ತವೆ. ಆದರೆ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುವುದು, ತೀವ್ರ ತಲೆನೋವು, ದೇಹ ಮತ್ತು ಸ್ನಾಯು ನೋವು, ಅತಿಯಾದ ಆಯಾಸ ಮತ್ತು ದುರ್ಬಲತೆ, ಗಂಟಲು ನೋವು, ವಾಂತಿ ಮತ್ತು ಅತಿಸಾರ, ಹೊಟ್ಟೆ ನೋವು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಸೋಂಕು ಗಂಭೀರ ಹಂತಕ್ಕೆ ತಲುಪಿದರೆ ಕೆಲವರಲ್ಲಿ ದೇಹದ ಒಳಭಾಗ ಅಥವಾ ಹೊರಭಾಗದಲ್ಲಿ ರಕ್ತಸ್ರಾವ (Bleeding) ಕೂಡ ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅಗತ್ಯ.

ಇಬೋಲಾ ವೈರಸ್ ಹೇಗೆ ಹರಡುತ್ತದೆ?

ಇಬೋಲಾ ವೈರಸ್ ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ನೇರ ಸಂಪರ್ಕದ ಮೂಲಕ ಹರಡಬಹುದು. ಸೋಂಕಿತ ವ್ಯಕ್ತಿಯನ್ನು ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ನೋಡಿಕೊಳ್ಳುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ಕಾಂಗೋ, ಉಗಾಂಡಾದಲ್ಲಿ ಎಬೋಲಾ ರುದ್ರನರ್ತನ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಯಾಣಿಕರಿಗೆ ಮಹತ್ವದ ಸೂಚನೆ

ಇಬೋಲಾ ವೈರಸ್‌ನಿಂದ ಹೇಗೆ ರಕ್ಷಿಸಿಕೊಳ್ಳಬೇಕು?

  • ಸೋಂಕಿತ ವ್ಯಕ್ತಿಯಿಂದ ದೂರವಿರಿ
  • ಮಾಸ್ಕ್, ಗ್ಲೌವ್ಸ್ ಮತ್ತು ಸುರಕ್ಷತಾ ಸಾಧನಗಳನ್ನು ಬಳಸಿ
  • ಕೈಗಳನ್ನು ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ತೊಳೆಯಿರಿ
  • ಸ್ಯಾನಿಟೈಸರ್ ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ
  • ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ
  • ವಿದೇಶಗಳಿಂದ ಬಂದವರು ವಿಶೇಷ ಎಚ್ಚರಿಕೆ ವಹಿಸಬೇಕು

ಇಬೋಲಾ ಸೋಂಕು ಪ್ರಕರಣಗಳು ಕಂಡುಬಂದಿರುವ ದೇಶಗಳಿಂದ ಬಂದಿರುವವರು ತಮ್ಮ ಆರೋಗ್ಯದ ಮೇಲೆ ವಿಶೇಷ ಗಮನಹರಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಜ್ವರ, ದೌರ್ಬಲ್ಯ ಅಥವಾ ಇತರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ತಜ್ಞರ ಅಭಿಪ್ರಾಯದಂತೆ, ಭಯಪಡುವುದಕ್ಕಿಂತ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅತ್ಯಂತ ಮುಖ್ಯ. ಸಮಯಕ್ಕೆ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಜೀವ ಉಳಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಕೆಕೆಆರ್​ ತೊರೆದ 18 ಕೋಟಿಯ ಬೌಲರ್ – Kannada News | IPL 2026: KKR’s Do or Die vs DC; matheesha pathirana Injured, Luvnith Sisodia Joins Squad

ಐಪಿಎಲ್ 2026 (IPL 2026) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಿದೆ. ಲೀಗ್ ಹಂತದಲ್ಲಿ ಅಂತಿಮ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿರುವ ಕೆಕೆಆರ್ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕು. ಆಗ ಮಾತ್ರ ಪ್ಲೇಆಫ್​ಗೇರುವ ಅವಕಾಶ ಹೊಂದಿರುತ್ತದೆ. ಹೀಗಿರುವಾಗ ಕೆಕೆಆರ್ ಬಲಿಷ್ಠ ಪ್ಲೇಯಿಂಗ್ 11 ಕಟ್ಟಿಕೊಂಡು ಕಣಕ್ಕಿಳಿಯಬೇಕಾಗುತ್ತದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ವೇಗಿ ಮಥಿಶಾ ಪತಿರಾನ ಮಂಡಿರಜ್ಜು ಗಾಯದಿಂದಾಗಿ ತಂಡದಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಬದಲಿ ಆಟಗಾರನಾಗಿ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲುವ್ನಿತ್ ಸಿಸೋಡಿಯಾ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.

ಕೆಕೆಆರ್ ತೊರೆದ ಮಥಿಶಾ ಪತಿರಾನ

ಇತ್ತೀಚೆಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಮಥಿಶಾ ಪತಿರಾನ ಗಾಯಗೊಂಡಿದ್ದರು. ಕೇವಲ 1.2 ಓವರ್ ಬೌಲಿಂಗ್ ಮಾಡಿದ ನಂತರ ಅವರು ಮೈದಾನದಿಂದ ಹೊರನಡೆಯಬೇಕಾಯಿತು. ಇದು ಕೊಲ್ಕತ್ತಾ ಪರ ಪತಿರಾನ ಅವರ ಚೊಚ್ಚಲ ಪಂದ್ಯವೂ ಆಗಿತ್ತು. ಆದಾಗ್ಯೂ, ಮೊದಲನೇ ಪಂದ್ಯದಲ್ಲೇ ಮತ್ತೆ ಗಾಯಕ್ಕೆ ತುತ್ತಾದ ಪತಿರಾನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯವನ್ನು ಆಡದೆ ತಂಡದಿಂದ ಹೊರಬಿದ್ದಿದ್ದಾರೆ.

ಕಳೆದ ಹರಾಜಿನಲ್ಲಿ ಕೆಕೆಆರ್, ಮಥಿಶಾ ಪತಿರಾನಗೆ 18 ಕೋಟಿ ನೀಡಿ ತಂಡಕ್ಕೆ ಖರೀದಿ ಮಾಡಿತ್ತು. ತಂಡವು ಡೆತ್ ಓವರ್‌ಗಳಲ್ಲಿ ಅವರನ್ನು ಮಾರಕ ಅಸ್ತ್ರವಾಗಿ ಬಳಸಲು ಬಯಸಿತ್ತು. ಆದರೆ ಗಾಯದಿಂದಾಗಿ ಪತಿರಾನ ಇಡೀ ಆವೃತ್ತಿಯಲ್ಲಿ ಒಂದು ಪಂದ್ಯಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್ ಸಮಯದಲ್ಲಿ ಉಂಟಾದ ಎಡಗಾಲಿನ ಗಾಯದಿಂದ ಪತಿರಾನ ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಇದರ ಪರಿಣಾಮವಾಗಿ, ಮಥಿಶಾ ಪತಿರಾನ ಐಪಿಎಲ್ 2026 ರ ಆರಂಭದಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ಪಡೆಯಲು ಸಾಧ್ಯವಾಗಲಿಲ್ಲ. ಆ ನಂತರ ಎನ್​ಒಸಿ ಪಡೆದು ತಂಡ ಸೇರಿಕೊಂಡಿದ್ದ ಪತಿರಾನ ಒಂದು ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ.

MI vs RR IPL 2026 Live Score: ಮುಂಬೈ 4ನೇ ವಿಕೆಟ್ ಪತನ

ಸಿಸೋಡಿಯಾಗೆ ಅವಕಾಶ

ಲುವ್ನಿತ್ ಸಿಸೋಡಿಯಾ ಎಡಗೈ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದು, ಅವರು ಕರ್ನಾಟಕ ಪರ 15 ಟಿ20 ಪಂದ್ಯಗಳನ್ನು ಆಡಿದ್ದಾರೆ, ಆದರೆ ಇನ್ನೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿಲ್ಲ. ಪತಿರಾನ ಸ್ಥಾನದಲ್ಲಿ ಅವರನ್ನು ಸೇರಿಸಿಕೊಳ್ಳುವುದು ಒಂದೇ ರೀತಿಯ ಬದಲಿಯಲ್ಲ, ಏಕೆಂದರೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವೇಗದ ಬೌಲರ್ ಅನ್ನು ಬದಲಾಯಿಸುತ್ತಿದ್ದಾರೆ. ಸಿಸೋಡಿಯಾ ಈ ಹಿಂದೆ ಆರ್‌ಸಿಬಿ ಮತ್ತು ಕೆಕೆಆರ್ ಎರಡೂ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕದಲ್ಲಿ ಮುಂದಿನ 7 ದಿನ ಮಳೆ ಅಬ್ಬರ; ಬೆಂಗಳೂರಿಗೂ ಮಳೆ ಎಚ್ಚರಿಕೆ! – Kannada News | Karnataka Weather Forecast: Heavy Rain Likely Across State for Next 7 Days, Bengaluru on Alert

ಬೆಂಗಳೂರು, ಮೇ 24: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ (Rain) ಚುರುಕುಗೊಂಡಿದೆ. ಮುಂದಿನ ಏಳು ದಿನಗಳ ಕಾಲ ಕರ್ನಾಟಕದಲ್ಲಿ ಗುಡುಗು, ಬಿರುಗಾಳಿ ಸಹಿತ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿವೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕು
  • ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
  • ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಮೋಡಗಳು ದಟ್ಟವಾಗುವ ಸಾಧ್ಯತೆಯಿದ್ದು, ನಗರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಮಳೆಯ ಸಮಯದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮುಂದಿನ ಎರಡು ದಿನಗಳ ಕಾಲ ನಗರದ ಗರಿಷ್ಠ ಉಷ್ಣಾಂಶ 32°C ಹಾಗೂ ಕನಿಷ್ಠ ಉಷ್ಣಾಂಶ 22°C ಆಸುಪಾಸಿನಲ್ಲಿ ಇರಲಿದೆ ಎಂದು ತಿಳಿಸಲಾಗಿದೆ.

KSNDMC ಟ್ವೀಟ್​​

ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಹಸಿರು ಅಲರ್ಟ್ ಘೋಷಿಸಲಾಗಿದೆ. ಮೇ 25ರಂದು ಉತ್ತರ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಮೇ 26 ಮತ್ತು 27 ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಮೇ 28 ಮತ್ತು 30ರಂದು ಯಾವುದೇ ಮಳೆಯ ಮುನ್ಸೂಚನೆ ಇಲ್ಲ.

ಇದನ್ನೂ ಓದಿ: Karnataka Weather Forecast: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು, ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರಬೇಕು ಮತ್ತು ಸಿಡಿಲು ಬಡಿಯುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಮೇ 30ರವರಗೆ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮೇ 25ರಂದು ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆ ಸುರಿಯುವ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 26 ಮತ್ತು ಮೇ 27ರಂದು ಮಳೆಯ ಆರ್ಭಟ ಮುಂದುವರಿಯಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ಮೇ 28ರಿಂದ ಮೇ 30ರವರೆಗೆ ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು? – Kannada News | UK bound flight Jet2 pilot has heart attack in mid air what happens next?

ನವದೆಹಲಿ, ಮೇ 24: ಸ್ಪೇನ್‌ನ ಟೆನೆರೈಫ್‌ನಿಂದ ಯುಕೆಯ ಬರ್ಮಿಂಗ್ಹ್ಯಾಮ್‌ಗೆ ಹೊರಟಿದ್ದ 220 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೆಟ್2 ಫ್ಲೈಟ್ LS1266, 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಆ ವಿಮಾನದ ಪೈಲಟ್​​ಗೆ ಹೃದಯಾಘಾತವಾಗಿದೆ (Heart Attack). ಇದರಿಂದಾಗಿ ವಿಮಾನವನ್ನು ಪೋರ್ಚುಗಲ್‌ನ ಪೋರ್ಟೊ ವಿಮಾನ ನಿಲ್ದಾಣಕ್ಕೆ ತಿರುಗಿಸಬೇಕಾಯಿತು. ಸಹ ಪೈಲಟ್ ಸಕಾಲಿಕವಾಗಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವು ವೇಗವಾಗಿ ಇಳಿಯಿತು.

ಇದು ವಿಮಾನದಲ್ಲಿ ಅವ್ಯವಸ್ಥೆ ಮತ್ತು ಭೀತಿಯನ್ನು ಉಂಟುಮಾಡಿತು. ಈ ವಿಮಾನದಲ್ಲಿ ಒಟ್ಟು 220 ಪ್ರಯಾಣಿಕರಿದ್ದರು. ಪೈಲಟ್‌ನ ಆರೋಗ್ಯ ಹದಗೆಟ್ಟಿದ್ದರಿಂದ ಕ್ಯಾಬಿನ್ ಸಿಬ್ಬಂದಿ ತೀವ್ರ ಚಿಂತಿತರಾದರು. ಅವರು ಕಣ್ಣೀರು ಸುರಿಸುತ್ತಾ ಪ್ರಯಾಣಿಕರ ನಡುವೆ ಓಡಿಹೋದರು. ಪ್ರಯಾಣಿಕರಲ್ಲಿ ಯಾರಾದರೂ ವೈದ್ಯಕೀಯ ತರಬೇತಿಯನ್ನು ಹೊಂದಿದ್ದಾರೆಯೇ ಅಥವಾ ವೈದ್ಯರೇ ಎಂದು ಮೈಕ್​ನಲ್ಲಿ ಕೇಳಲಾಯಿತು. ವಿಮಾನದಲ್ಲಿನ ಲೈಟ್​​ಗಳು ಮಿನುಗಿದವು. ಇದರಿಂದ ಸಿಬ್ಬಂದಿ ಆತಂಕಕ್ಕೊಳಗಾದರು. ನಿದ್ರಿಸುತ್ತಿದ್ದ ಪ್ರಯಾಣಿಕರು ಎಚ್ಚರಗೊಂಡು ಆತಂಕಕ್ಕೊಳಗಾದರು.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಪೈಲಟ್ ಅನಾರೋಗ್ಯಕ್ಕೆ ಒಳಗಾದ ನಂತರ ಸಹ-ಪೈಲಟ್ ತಕ್ಷಣ ಪ್ರತಿಕ್ರಿಯಿಸಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ಪೋರ್ಚುಗಲ್‌ನ ಪೋರ್ಟೊಗೆ ತಿರುಗಿಸಲಾಯಿತು. ವಿಮಾನವು ತುಂಬಾ ವೇಗವಾಗಿ ಇಳಿಯುತ್ತಿದ್ದಂತೆ, ಒಳಗಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ಸಹ-ಪೈಲಟ್ ತ್ವರಿತವಾಗಿ ಪೋರ್ಟೊ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ರನ್‌ವೇಯಲ್ಲಿ ಸಿದ್ಧವಾಗಿದ್ದ ತುರ್ತು ವೈದ್ಯಕೀಯ ಸಿಬ್ಬಂದಿ ತಕ್ಷಣ ವಿಮಾನವನ್ನು ಹತ್ತಿ, ಪೈಲಟ್‌ಗೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದರು.

ಇದನ್ನೂ ಓದಿ: ಹೃದಯಾಘಾತವಾದಾಗ ಮೊದಲು 10ನಿಮಿಷದಲ್ಲಿ ಏನು ಮಾಡಬೇಕು?

ವಿಮಾನ ಸುರಕ್ಷಿತವಾಗಿ ಇಳಿದರೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ. ಪ್ರಯಾಣಿಕರಿಗೆ ಇಳಿದ ನಂತರ 1 ಗಂಟೆಗೂ ಹೆಚ್ಚು ಕಾಲ ವಿಮಾನದಿಂದ ಇಳಿಯಲು ಅವಕಾಶ ನೀಡಲಿಲ್ಲ, ಸರಿಯಾದ ವಸತಿ ಸೌಲಭ್ಯಗಳನ್ನು ಒದಗಿಸಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯಿಸಿದ ಜೆಟ್2 ಏರ್ಲೈನ್ಸ್, ಪೈಲಟ್ ಅನಾರೋಗ್ಯದಿಂದಾಗಿ ವಿಮಾನವನ್ನು ಬೇರೆಡೆಗೆ ತಿರುಗಿಸಬೇಕಾಯಿತು ಮತ್ತು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಮಾನದ ವಿಳಂಬಕ್ಕೆ ಕ್ಷಮೆಯಾಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್ – Kannada News | Smart Investment for Beginners: Build Long Term Wealth & Financial Security

ಹಣ ಗಳಿಸುವುದು ಎಷ್ಟು ಮುಖ್ಯವೋ, ಗಳಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ (Investment) ಮಾಡಿ ಅದರಿಂದ ಸಂಪತ್ತನ್ನು ಬೆಳೆಸುವುದು ಮತ್ತು ರಕ್ಷಿಸುವುದು ಅಷ್ಟೇ ಮುಖ್ಯ. ಹೂಡಿಕೆ ಜಗತ್ತಿಗೆ ಹೊಸದಾಗಿ ಕಾಲಿಡುತ್ತಿರುವವರಿಗಾಗಿ (Beginners), ದೀರ್ಘಾವಧಿಯಲ್ಲಿ ಆರ್ಥಿಕ ಭದ್ರತೆ ಪಡೆಯಲು ಸಹಾಯ ಮಾಡುವ ಕೆಲವು ಸರಳ ಮತ್ತು ಪ್ರಮುಖ ಆರ್ಥಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ನೀವು ಒಂದು ಅಥವಾ ಎರಡು ವರ್ಷದವರೆಗೆ ಮಾತ್ರ ಹೂಡಿಕೆ ಮಾಡಿ, ಹಣ ವಿತ್​ಡ್ರಾ ಮಾಡಿಕೊಳ್ಳುತ್ತೇನೆ ಎಂದಿದ್ದರೆ ಆರ್​ಡಿಯಲ್ಲೋ, ಎಫ್​ಡಿಯಲ್ಲೋ ಅಥವಾ ಕೆಲ ಪೋಸ್ಟ್ ಆಫೀಸ್ ಸ್ಕೀಮ್​ಗಳನ್ನೂ ಬಳಸಬಹುದು. ದೀರ್ಘಾವಧಿ ಹೂಡಿಕೆಯಿಂದ ಮಾತ್ರ ಸಂಪತ್ತು ಅಚ್ಚರಿ ರೀತಿಯಲ್ಲಿ ಬೆಳೆಯುತ್ತೆ. ಆ ನಿಟ್ಟಿನಲ್ಲಿ ಒಂದಷ್ಟು ಟಿಪ್ಸ್ ಇಲ್ಲಿದೆ:

ಬೇಗ ಹೂಡಿಕೆ ಆರಂಭಿಸಿ

ಹೂಡಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು. ಕಡಿಮೆ ವಯಸ್ಸಿನಲ್ಲಿ ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡಲು ಆರಂಭಿಸಿದರೂ, ದೀರ್ಘಾವಧಿಯಲ್ಲಿ ಅದು ಚಕ್ರ ಬಡ್ಡಿಯ (Power of Compounding) ಬಲದಿಂದಾಗಿ ದೊಡ್ಡ ಮೊತ್ತದ ಸಂಪತ್ತಾಗಿ ಬೆಳೆಯುತ್ತದೆ. ತಡವಾಗಿ ದೊಡ್ಡ ಮೊತ್ತ ಹೂಡುವುದಕ್ಕಿಂತ, ಬೇಗನೆ ಸಣ್ಣ ಮೊತ್ತ ಹೂಡುವುದು ಹೆಚ್ಚು ಲಾಭದಾಯಕ.

ಬಜೆಟ್ ತಯಾರಿ ಮತ್ತು ಉಳಿತಾಯ

ಹೂಡಿಕೆ ಮಾಡುವ ಮುನ್ನ ನಿಮ್ಮ ಆದಾಯ ಮತ್ತು ಖರ್ಚುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಪ್ರತಿ ತಿಂಗಳು ಸಂಬಳ ಬಂದ ತಕ್ಷಣ ಮೊದಲು ಹೂಡಿಕೆಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು (ಉದಾಹರಣೆಗೆ 20%) ಪಕ್ಕಕ್ಕೆ ಎತ್ತಿಡಬೇಕು. ಆ ನಂತರ ಉಳಿದ ಹಣದಲ್ಲಿ ತಿಂಗಳ ಖರ್ಚುಗಳನ್ನು ನಿಭಾಯಿಸುವ ಅಭ್ಯಾಸ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ

ತುರ್ತು ನಿಧಿ ಸ್ಥಾಪನೆ

ಯಾವುದೇ ಹೂಡಿಕೆ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ಕನಿಷ್ಠ 3 ರಿಂದ 6 ತಿಂಗಳ ಖರ್ಚಿಗೆ ಆಗುವಷ್ಟು ಹಣವನ್ನು ತುರ್ತು ನಿಧಿಯಾಗಿ (Emergency Fund) ಬ್ಯಾಂಕ್ ಖಾತೆಯಲ್ಲಿ ಅಥವಾ ಸುಲಭವಾಗಿ ಹಿಂಪಡೆಯಬಹುದಾದ ಲಿಕ್ವಿಡ್ ಫಂಡ್‌ಗಳಲ್ಲಿ ಇಡಬೇಕು. ಇದು ಕೆಲಸ ಕಳೆದುಕೊಂಡಾಗ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಾಗ ನಿಮ್ಮ ದೀರ್ಘಾವಧಿಯ ಹೂಡಿಕೆಗೆ ಧಕ್ಕೆ ಬರದಂತೆ ರಕ್ಷಿಸುತ್ತದೆ.

ಹೂಡಿಕೆಯಲ್ಲಿ ವೈವಿಧ್ಯತೆ

“ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ” ಎಂಬ ಗಾದೆಯಂತೆ, ನಿಮ್ಮ ಸಂಪೂರ್ಣ ಹಣವನ್ನು ಒಂದೇ ಕಡೆ ಹೂಡಿಕೆ ಮಾಡಬಾರದು. ನಿಮ್ಮ ರಿಸ್ಕ್ (Risk Appetite) ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ಷೇರು ಮಾರುಕಟ್ಟೆ (Stocks), ಮ್ಯೂಚುಯಲ್ ಫಂಡ್‌ಗಳು, ಸ್ಥಿರ ಠೇವಣಿ (FD), ಚಿನ್ನ (Gold) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಗಳ ನಡುವೆ ಹಂಚಿ ಹೂಡಿಕೆ (Diversification) ಮಾಡಬೇಕು. ಇದರಿಂದ ನಷ್ಟದ ಸಾಧ್ಯತೆ ಕಡಿಮೆಯಾಗುತ್ತದೆ.

ಸ್ಥಿರತೆ ಮತ್ತು ಶಿಸ್ತು

ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ಹೆದರದೆ, ಶಿಸ್ತಿನಿಂದ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕು. ಮ್ಯೂಚುಯಲ್ ಫಂಡ್‌ಗಳಲ್ಲಿ ಎಸ್‌ಐಪಿ (SIP – Systematic Investment Plan) ಮೂಲಕ ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡುವುದು ಹೊಸಬರಿಗೆ ಅತ್ಯುತ್ತಮ ಅಭ್ಯಾಸವಾಗಿದೆ. ಇದು ಮಾರುಕಟ್ಟೆಯ ಏರಿಳಿತದ ರಿಸ್ಕ್ ಅನ್ನು ಸರಿದೂಗಿಸುತ್ತದೆ (Rupee Cost Averaging).

ಇದನ್ನೂ ಓದಿ: ಅಗ್ಗದ ಇಂಧನ ಮತ್ತು ಸ್ಥಿರ ಪೂರೈಕೆ ಇವತ್ತು ಜಗತ್ತಿಗೆ ಅವಶ್ಯಕ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್, ರುಬಿಯೋ ಹೇಳಿಕೆ

ಅನಗತ್ಯ ಸಾಲಗಳಿಂದ ದೂರವಿರಿ

ಕ್ರೆಡಿಟ್ ಕಾರ್ಡ್ ಸಾಲಗಳು ಮತ್ತು ಹೆಚ್ಚಿನ ಬಡ್ಡಿಯ ವೈಯಕ್ತಿಕ ಸಾಲಗಳು (Personal Loans) ನಿಮ್ಮ ಸಂಪತ್ತನ್ನು ಕರಗಿಸುತ್ತವೆ. ಹೂಡಿಕೆಯಿಂದ ಬರುವ ಲಾಭಕ್ಕಿಂತ ಈ ಸಾಲಗಳ ಬಡ್ಡಿಯೇ ಹೆಚ್ಚಿರುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಇಂತಹ ದುಬಾರಿ ಸಾಲಗಳನ್ನು (Bad Debts) ತೀರಿಸುವುದು ಜಾಣತನ.

ಶ್ರೀಮಂತರಾಗುವುದು ಒಂದೇ ದಿನದ ಪವಾಡವಲ್ಲ, ಅದೊಂದು ನಿರಂತರ ಪ್ರಕ್ರಿಯೆ. ತಾಳ್ಮೆ, ಶಿಸ್ತು ಮತ್ತು ನಿಯಮಿತ ಹೂಡಿಕೆಯ ಅಭ್ಯಾಸಗಳು ಮಾತ್ರ ನಿಮ್ಮನ್ನು ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಸ್ವತಂತ್ರರನ್ನಾಗಿ (Financial Freedom) ಮಾಡಬಲ್ಲವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

MI vs RR: ಮೊದಲ ಓವರ್​ನಲ್ಲಿ ಸಿಕ್ಸರ್; ರೋಹಿತ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್ – Kannada News | Yashasvi Jaiswal Shatters Rohit Sharma’s Record Amidst Intense IPL 2026 Playoff Battle

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More

Source link

ಹಾಂಟಾ ವೈರಸ್ ಯಾರಿಗೆ ಹೆಚ್ಚು ಅಪಾಯಕಾರಿ ಗೊತ್ತಾ? ತಜ್ಞರು ಹೇಳಿರುವ ಈ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ – Kannada News | How To Prevent Hantavirus: CDC Backed Guide For Campers, Farmers & Homeowners

ಇತ್ತೀಚಿನ ದಿನಗಳಲ್ಲಿ ಹಾಂಟಾ ವೈರಸ್ (Hantavirus) ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಈ ವೈರಸ್ ಸೋಂಕಿತ ಇಲಿ ಮತ್ತು ಅವುಗಳ ಮಲ, ಮೂತ್ರ ಅಥವಾ ಲಾಲಾರಸ ಸಂಪರ್ಕದಿಂದ ಮನುಷ್ಯರಿಗೆ ಹರಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆರಂಭದಲ್ಲಿ ಸಾಮಾನ್ಯ ಜ್ವರದಂತೆ ಕಾಣುವ ಈ ಸೋಂಕು, ನಂತರ ಗಂಭೀರ ಶ್ವಾಸಕೋಶ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಗೋರಖ್‌ಪುರದ ರೀಜೆನ್ಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ತಜ್ಞ ಡಾ. ವಿಜಯ್ ಕುಮಾರ್ ಶರ್ಮಾ ಅವರು ಹೇಳುವ ಪ್ರಕಾರ, ಸ್ವಚ್ಛತೆ ಕಡಿಮೆ ಇರುವ ಸ್ಥಳಗಳಲ್ಲಿ ಹಾಂಟಾ ವೈರಸ್ ಹರಡುವ ಅಪಾಯ ಹೆಚ್ಚು. ವಿಶೇಷವಾಗಿ ಧೂಳು, ಕಸ ಮತ್ತು ಮುಚ್ಚಿಟ್ಟಿರುವ ಕೊಠಡಿಗಳಲ್ಲಿ ವೈರಸ್ ಕಣಗಳು ಗಾಳಿಯಲ್ಲಿ ಬೆರೆತು ಉಸಿರಾಟದ ಮೂಲಕ ದೇಹಕ್ಕೆ ಪ್ರವೇಶಿಸಬಹುದು.

ಯಾರು ಹೆಚ್ಚಿನ ಅಪಾಯದಲ್ಲಿದ್ದಾರೆ?

ತಜ್ಞರ ಪ್ರಕಾರ, ಗೋದಾಮು, ಹಳೆಯ ಸ್ಟೋರ್ ರೂಂ, ಬೇಸ್‌ಮೆಂಟ್, ಕೃಷಿ ಪ್ರದೇಶಗಳು ಮತ್ತು ದೀರ್ಘಕಾಲ ಸ್ವಚ್ಛಗೊಳಿಸದ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಅಪಾಯ ಹೆಚ್ಚು. ವಿಶೇಷವಾಗಿ ರೈತರು, ಸ್ವಚ್ಛತಾ ಸಿಬ್ಬಂದಿ, ಇಲಿಗಳ ಸಂಪರ್ಕ ಹೆಚ್ಚಿರುವವರು, ಮುಚ್ಚಿದ ಕೊಠಡಿಗಳನ್ನು ಸ್ವಚ್ಛಗೊಳಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಹಾಂಟಾ ವೈರಸ್‌ನ ಆರಂಭಿಕ ಲಕ್ಷಣಗಳು ಯಾವುವು?

  • ಹೆಚ್ಚು ಜ್ವರ
  • ದೇಹ ಮತ್ತು ಸ್ನಾಯು ನೋವು
  • ತಲೆನೋವು
  • ದುರ್ಬಲತೆ ಮತ್ತು ಆಯಾಸ
  • ಉಸಿರಾಟದ ತೊಂದರೆ
  • ಎದೆ ಬಿಗಿತ
  • ಶ್ವಾಸಕೋಶದ ಸೋಂಕು

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ

ಹಾಂಟಾ ವೈರಸ್‌ನಿಂದ ಹೇಗೆ ರಕ್ಷಿಸಿಕೊಳ್ಳಬೇಕು?

  • ಹಾಂಟಾ ವೈರಸ್ ತಡೆಯಲು ಸ್ವಚ್ಛತೆ ಅತ್ಯಂತ ಮುಖ್ಯ.
  • ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ.
  • ಇಲಿಗಳು ಮನೆಗೆ ಪ್ರವೇಶಿಸದಂತೆ ಕ್ರಮ ತೆಗೆದುಕೊಳ್ಳಿ.
  • ಧೂಳು ತುಂಬಿರುವ ಸ್ಥಳಗಳನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಮತ್ತು ಗ್ಲೌವ್ಸ್ ಧರಿಸಿ.
  • ಧೂಳನ್ನು ನೇರವಾಗಿ ಮುಖಕ್ಕೆ ಬರುವಂತೆ ಗುಡಿಸಬೇಡಿ.
  • ಮೊದಲು ಕೀಟಾಣುನಾಶಕ ಸಿಂಪಡಿಸಿ ಬಳಿಕ ಸ್ವಚ್ಛಗೊಳಿಸಿ.

ತಜ್ಞರ ಪ್ರಕಾರ, ಎಚ್ಚರಿಕೆ ಮತ್ತು ಸ್ವಚ್ಛತೆ ಪಾಲಿಸಿದರೆ ಹಾಂಟಾ ವೈರಸ್ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ತನ್ನನ್ನು ಕಾಳಜಿ ಮಾಡುವ ಜೀವಕೆ ಮುತ್ತು ನೀಡಿದ ಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌ – Kannada News | A calf that kissed a woman who cared for it

ಮನುಷ್ಯನಿಗೆ ಹೋಲಿಸಿದರೆ ಒಳ್ಳೆಯ ಗುಣ, ಮಾನವೀಯತೆ, ಸಹಾಯ ಮನೋಭಾವ ಇವೆಲ್ಲವೂ ತುಸು ಹೆಚ್ಚೇ ಪ್ರಾಣಿಗಳಲ್ಲಿದೆ. ಇದಕ್ಕೆ ನಿದರ್ಶನದಂತಿರುವ ಸಾಕಷ್ಟು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ (social media) ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಮನೆಯೊಡತಿಯೊಂದಿಗೆ ಪುಟಾಣಿ ಕರು (calf) ನಡೆದುಕೊಂಡ ರೀತಿ ನೋಡಿದ್ರೆ ನೀವು ಶಾಕ್ ಆಗ್ತೀರಾ. ತನ್ನನ್ನು ಕಾಳಜಿ ಮಾಡುವ ಮನೆಯೊಡತಿಗೆ ಮುತ್ತು ನೀಡಿ ಕರುವೊಂದು ತನ್ನ ಪ್ರೀತಿಯನ್ನು ತೋರ್ಪಡಿಸಿದ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.

Mr. Udburu ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆ ಒಡತಿಯೂ ಕರುವಿನ ಮುಂದೆ ಮುತ್ತು ಕೊಡು ಎಂದು ಕೇಳುತ್ತಿರುವುದನ್ನು ಕಾಣಬಹುದು. ತನ್ನನ್ನು ಕಾಳಜಿ ಮಾಡುವ ಜೀವ ಹೀಗೆನ್ನುತ್ತಿದ್ದಂತೆ ಕರು ಮುತ್ತನ್ನು ನೀಡಿ ಪ್ರೀತಿ ತೋರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಾರದರೇನಂತೆ ತಾಯಿ ಪ್ರೀತಿ ಒಂದೇ ಎಂದರೆ, ಮತ್ತೊಬ್ಬರು, ಮನುಷ್ಯನಿಗೆ ಪ್ರೀತಿ ಕೊಡೋದಕ್ಕಿಂತ ಈ ಮೂಕ ಪ್ರಾಣಿಗಳಿಗೆ ಪ್ರೀತಿ ಕೊಟ್ಟರೆ ನೆಮ್ಮದಿ ಅನ್ಸುತ್ತೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಾತು ಬರುವ ಮನುಷ್ಯರಿಗಿಂತ ಮೂಕ ಪ್ರಾಣಿಗಳೇ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆನ್ನಿಗೆ ಚೂರಿ ಹಾಕಿದವರನ್ನು ಮತ್ತೆ ನಂಬುವುದಿಲ್ಲ; ಕಾಂಗ್ರೆಸ್ ವಿರುದ್ಧ ಉದಯನಿಧಿ ಸ್ಟಾಲಿನ್ ಆಕ್ರೋಶ – Kannada News | Won’t trust them again; Udhayanidhi Stalin lashes out at Congress for supporting TVK

ಚೆನ್ನೈ, ಮೇ 24: ತಮಿಳುನಾಡಿನ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಬೆಳವಣಿಗೆಯೊಂದರಲ್ಲಿ ಡಿಎಂಕೆ (DMK) ಯುವ ಘಟಕದ ಮುಖ್ಯಸ್ಥ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು, “ಕಾಂಗ್ರೆಸ್ ನಮ್ಮ ಬೆನ್ನಿಗೆ ಚೂರಿ ಹಾಕಿದೆ, ಇನ್ಮುಂದೆ ಅವರನ್ನು ಎಂದಿಗೂ ನಂಬುವುದಿಲ್ಲ” ಎಂದು ಹೇಳಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

  • ಟಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿಗೆ ಡಿಎಂಕೆ ಆಕ್ರೋಶ
  • ಬೆನ್ನಿಗೆ ಚೂರಿ ಇರಿದಿದೆ ಎಂದ ಉದಯನಿಧಿ ಸ್ಟಾಲಿನ್
  • ಸಿಎಂ ವಿಜಯ್ ವಿರುದ್ಧವೂ ಅಸಮಾಧಾನ

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಫಲಿತಾಂಶ ಪ್ರಕಟವಾಗಿ ವಿಜಯ್ ಅವರ ಟಿವಿಕೆ (TVK) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ, ಕಾಂಗ್ರೆಸ್ ತಕ್ಷಣವೇ ಡಿಎಂಕೆ ಜೊತೆಗಿನ ಮೈತ್ರಿಯನ್ನು ಮುರಿದು ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿತು. ಕಾಂಗ್ರೆಸ್‌ನ ಈ ಹಠಾತ್ ನಿರ್ಧಾರ ಡಿಎಂಕೆ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿನ್ನು ವಿಜಯ್​​ vs ಉದಯನಿಧಿ: ವಿಪಕ್ಷ ನಾಯಕನಾಗಿ ಮಾಜಿ ಡಿಸಿಎಂ ಆಯ್ಕೆ

ಇಂದು ನಡೆದ ಡಿಎಂಕೆ ಯುವ ಘಟಕದ ಸಭೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್ ಕಾಂಗ್ರೆಸ್ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. “ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ನಮ್ಮ (ಡಿಎಂಕೆ) ಹೆಗಲ ಮೇಲೆ ಕುಳಿತು ರಾಜಕೀಯ ಲಾಭ ಪಡೆದುಕೊಂಡಿತು. ಆದರೆ ಇಂದು ಅವರು ನಮಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ದ್ರೋಹವನ್ನು ಯಾರೂ ಮರೆಯಬಾರದು. ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅನ್ನು ನಂಬಬೇಡಿ, ಅವರನ್ನು ನಮ್ಮ ಹತ್ತಿರವೂ ಸೇರಿಸಬೇಡಿ” ಎಂದು ಕಿಡಿಕಾರಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕಾರ್ಯತಂತ್ರದಿಂದಾಗಿ ದೇಶದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ ಎಂದು ನಾನು ಭಾವಿಸಿದ್ದೆ. ಆದರೆ ಅದು ನಿಜವಲ್ಲ. ದೇಶದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ನಿಷ್ಕ್ರಿಯತೆ ಮತ್ತು ಇಂತಹ ದ್ರೋಹದ ರಾಜಕಾರಣವೇ ಪ್ರಮುಖ ಕಾರಣ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಉದಯನಿಧಿ ಸ್ಟಾಲಿನ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೇವಲ ಫೋಟೊಗಾಗಿ ತಿಲಕವೇ? ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ನಡೆಗೆ ಭಾರಿ ಆಕ್ಷೇಪ

“ತಮಿಳುನಾಡಿನಲ್ಲಿ ಜಾತ್ಯತೀತತೆಯನ್ನು ಉಳಿಸಲು ಮತ್ತು ಬಿಜೆಪಿಯನ್ನು ದೂರವಿಡಲು ಡಿಎಂಕೆ ಕಾರ್ಯಕರ್ತರು ರಕ್ತ ಮತ್ತು ಬೆವರಿನ ಜಲ ಹರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಅಸ್ತಿತ್ವವೇ ಇಲ್ಲದ ಕಾಂಗ್ರೆಸ್ ಕೇವಲ ಡಿಎಂಕೆ ಬೆಂಬಲದಿಂದಾಗಿ 5 ಸೀಟು ಗೆದ್ದಿತು. ಆದರೆ ಗೆದ್ದ ತಕ್ಷಣ, ಸೌಜನ್ಯಕ್ಕೂ ನಮಗೆ ತಿಳಿಸದೇ ಅಧಿಕಾರದಾಸೆಗೆ ಓಡಿಹೋಗಿದ್ದಾರೆ. ಕಾಂಗ್ರೆಸ್‌ಗೆ ಕನಿಷ್ಠ ಕೃತಜ್ಞತೆಯೂ ಇಲ್ಲ” ಎಂದು ಉದಯನಿಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ವಿಜಯ್ ಅವರ ಸರ್ಕಾರದ ಮೇಲೂ ಉದಯನಿಧಿ ದಾಳಿ ಮುಂದುವರಿಸಿದ್ದಾರೆ. ತಂಜಾವೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿವಿಕೆ ಸರ್ಕಾರದ ಅಸಲಿ ಮುಖ ಕೇವಲ ಹತ್ತು ದಿನಗಳಲ್ಲಿ ಜನರಿಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link