ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಮನೆ ಊಟ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ಕಾನೂನಿನ ತೊಡಕು ಉಂಟಾಗುತ್ತಿದೆ. ಪವಿತ್ರಾ ಗೌಡ (Pavithra Gowda) ಅವರು ಗಂಭೀರವಾದ ಕೊಲೆ ಪ್ರಕರಣದಲ್ಲಿ ಸಿಲುಕುಕೊಂಡಿರುವುದರಿಂದ ಅವರಿಗೆ ಜೈಲಿನಲ್ಲಿ ನಿಯಮಗಳು ಕಠಿಣ ಆಗಿವೆ. ಕೊನೇ ಪಕ್ಷ ವಾರಕ್ಕೆ ಒಮ್ಮೆಯಾದರೂ ಮನೆ ಊಟ ಪಡೆಯಲು ಕೂಡ ಅವರು ಕಷ್ಟಪಡುವಂತಾಗಿದೆ.
ಈ ಮೊದಲು ಪವಿತ್ರಾ ಗೌಡ ಅವರಿಗೆ ಮನೆ ಊಟ ನೀಡುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಜೈಲಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವಿಷಯದಲ್ಲಿ ಕೋರ್ಟ್ ತನ್ನದೇ ತೀರ್ಪನ್ನು ಮಾರ್ಪಾಡು ಮಾಡಿತ್ತು. ವಾರದಲ್ಲಿ ಒಮ್ಮೆ ಮಾತ್ರ ಊಟ ನೀಡಲು ಅವಕಾಶ ನೀಡಿತ್ತು. ಆದರೆ ಈಗ ಆ ಆದೇಶವನ್ನು ಕೂಡ ಪ್ರಶ್ನಿಸಿ ರಿಟ್ ಅರ್ಜಿ ಹಾಕಲಾಗಿದೆ.
ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ಗೆ ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ನೀಡಿರುವ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ರಿಟ್ ಅರ್ಜಿ ಸಲ್ಲಿಸಿದೆ. ಕೊಲೆ ಕೇಸಿನ ಯಾವುದೇ ಆರೋಪಿಗಳಿಗೆ ಮನೆ ಊಟ ನೀಡುವ ಸೌಲಭ್ಯವಿಲ್ಲ. ಕೋರ್ಟ್ ಆದೇಶ ಪಾಲಿಸಿದರೆ ಇತರೆ ಆರೋಪಿಗಳೂ ಕೇಳುತ್ತಾರೆ ಎಂಬ ಕಾರಣದಿಂದ ಸರ್ಕಾರ ರಿಟ್ ಅರ್ಜಿ ಸಲ್ಲಿಕೆ ಮಾಡಿದೆ.
ಜೈಲಿನ ಊಟಕ್ಕೆ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) 4 ಸ್ಟಾರ್ ನೀಡಿದೆ. ಆದ್ದರಿಂದ ಜೈಲಿನ ಊಟದ ಗುಣಮಟ್ಟದ ಬಗ್ಗೆ ಬೇರೆ ಕೈದಿಗಳು ಆಕ್ಷೇಪ ಎತ್ತಿಲ್ಲ. ಹೀಗಾಗಿ 57ನೇ ಸಿಸಿಹೆಚ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ರಾಜ್ಯ ಸರ್ಕಾರ ಮನವಿ ಮಾಡಿದೆ.
ಪವಿತ್ರಾ ಗೌಡ ಅವರು ಜೈಲಿನ ಊಟದ ಬಗ್ಗೆ ತಕರಾರು ಎತ್ತಿದ್ದರು. ಜೈಲೂಟದಿಂದ ಚರ್ಮರೋಗ ಉಂಟಾಗಿದೆ. ಮೈಮೇಲೆ ಗುಳ್ಳೆಗಳು ಆಗುತ್ತಿವೆ ಎಂದು ಅವರು ವಾದ ಮಂಡಿಸಿದ್ದರು. ಜೈಲೂಟದಿಂದ ಫುಡ್‌ಪಾಯಿಸನ್ ಕೂಡ ಆಗುತ್ತಿದೆ ಎಂದು ನ್ಯಾಯಾಲಯದ ಎದುರು ಪವಿತ್ರಾ ಗೌಡ ಅವರು ಹೇಳಿದ್ದರು. ಅವರ ವಾದ ಆಲಿಸಿದ ಬಳಿಕ ವಾರಕ್ಕೊಮ್ಮೆ ಮನೆ ಊಟಕ್ಕೆ ಕೋರ್ಟ್ ಆದೇಶಿಸಿತ್ತು.
ನವದೆಹಲಿ, ಜನವರಿ 19: 2 ಗಂಟೆಗಳ ಭಾರತದ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮರದ ಕೆತ್ತನೆಯ ಉಯ್ಯಾಲೆ ಮತ್ತು ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡರು. ಬಳಿಕ ಅವರು ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸವಾದಲ್ಲಿ ಸಭೆ ನಡೆಸಿದರು. ತಮ್ಮ ಅತಿ ಸಣ್ಣ ಭೇಟಿಯನ್ನು ಮುಗಿಸಿಕೊಂಡು ವಾಪಾಸ್ ಹೊರಟ ಯುಎಇ ಅಧ್ಯಕ್ಷರಿಗೆ ವಿಶೇಷವಾದ ಉಡುಗೊರೆ ನೀಡಲಾಯಿತು.
ಗುಜರಾತಿನ ಕರಕುಶಲಕರ್ಮಿಗಳು ಕೆತ್ತಿದ ಮರದ ಉಯ್ಯಾಲೆಯನ್ನು ಯುಎಇ ಅಧ್ಯಕ್ಷರಿಗೆ ನೀಡಲಾಯಿತು. ಅದನ್ನು ಹೂವಿನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳೊಂದಿಗೆ ಕೈಯಿಂದ ಕೆತ್ತಲಾಗಿದೆ. ಗುಜರಾತಿ ಸಂಸ್ಕೃತಿಯಲ್ಲಿ ತಲೆಮಾರುಗಳಾದ್ಯಂತ ಒಗ್ಗಟ್ಟು ಮತ್ತು ಬಾಂಧವ್ಯವನ್ನು ಪ್ರತಿನಿಧಿಸುವ ಈ ಉಯ್ಯಾಲೆಯ ಜೊತೆಗೆ ಕಾಶ್ಮೀರದ ಪಶ್ಮಿನಾ ಶಾಲನ್ನು ಸಹ ಉಡುಗೊರೆಯಾಗಿ ನೀಡಲಾಯಿತು. ಈ ಶಾಲನ್ನು ತುಂಬಾ ಉತ್ತಮವಾದ ಉಣ್ಣೆಯನ್ನು ಬಳಸಿ ಕೈಯಿಂದ ನೇಯಲಾಗಿದ್ದು, ಇದು ಮೃದು ಮತ್ತು ಬೆಚ್ಚಗಿರುತ್ತದೆ ಇದನ್ನು ತೆಲಂಗಾಣದಲ್ಲಿ ತಯಾರಿಸಲಾದ ಅಲಂಕಾರಿಕ ಬೆಳ್ಳಿ ಪೆಟ್ಟಿಗೆಯಲ್ಲಿ ಇರಿಸಿ ನೀಡಲಾಗಿದೆ. ಇದು ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಧ್ಯಪ್ರದೇಶ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಕೂಚ್ ಬೆಹಾರ್ ಟ್ರೋಫಿ (Cooch Behar Trophy) ಫೈನಲ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಲ್ಸಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪಂದ್ಯದಲ್ಲಿ ಗುಜರಾತ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸುವಲ್ಲಿ ಮಧ್ಯಪ್ರದೇಶ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 216 ರನ್ ಕಲೆಹಾಕಿತು. ಉತ್ತರವಾಗಿ ಮಧ್ಯಪ್ರದೇಶ ತಂಡವು 178 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಇತ್ತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಗುಜರಾತ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 133 ರನ್‌ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ತಂಡವು 4 ವಿಕೆಟ್‌ಗಳಿಗೆ 176 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಮಧ್ಯಪ್ರದೇಶದ ಗೆಲುವಿನ ನಾಯಕ ಆಲ್‌ರೌಂಡರ್ ಯಶವರ್ಧನ್ ಸಿಂಗ್ ಚೌಹಾಣ್, ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದರು.
ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಯಶವರ್ಧನ್
ಯಶವರ್ಧನ್ ಸಿಂಗ್ ಚೌಹಾಣ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಲ್ಲದೇ, ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಯಶವರ್ಧನ್ ಎಂಟು ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದರು, ಇದರಲ್ಲಿ ಐದು ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಇದಲ್ಲದೆ, ಅವರು ಎಂಟು ಪಂದ್ಯಗಳಲ್ಲಿ 42.31 ಸರಾಸರಿಯಲ್ಲಿ 550 ರನ್ ಕೂಡ ಕಲೆಹಾಕಿದರು ಇದರಲ್ಲಿ ಎರಡು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ.
ಪ್ರತಿಭಾವಂತ ಯಶವರ್ಧನ್
ಯಶವರ್ಧನ್ ಸಿಂಗ್ ಚಂಬಲ್ ಮೂಲದವರಾಗಿದ್ದು, ಮಧ್ಯಪ್ರದೇಶದ ಮುಂದಿನ ಸೂಪರ್ ಸ್ಟಾರ್ ಎಂದು ಹೇಳಲಾಗುತ್ತಿದೆ. 2023 ರಲ್ಲಿ, ಅವರು 15 ವರ್ಷದೊಳಗಿನವರ ಪಂದ್ಯದಲ್ಲಿ 39 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಿತ ತ್ರಿಶತಕ ಬಾರಿಸಿದ್ದರು. ಇದಲ್ಲದೆ, 13 ನೇ ವಯಸ್ಸಿನಲ್ಲಿ, ಅವರು ಇಂದೋರ್ ವಿರುದ್ಧ 391 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದು ಮಾತ್ರವಲ್ಲದೆ 425 ರನ್‌ಗಳ ಇನ್ನಿಂಗ್ಸ್‌ಗಳನ್ನು ಸಹ ಆಡಿದ್ದಾರೆ.
Madhya Pradesh beat Gujarat by 6 wickets to clinch their maiden Under-19 Cooch Behar 🏆 title. The star of the tournament for Madhya Pradesh was Chambal boy Yashwardhan Chouhanz who took 57 wickets & scored 550 runs in the Championship 👏 👏 👏 pic.twitter.com/cWbgNsJzY8
ಗುಜರಾತ್‌ನ ಮಲಯ್ ಶಾ ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, 716 ರನ್ ಕಲೆಹಾಕಿದ್ದಾರೆ. ಈ ಆಟಗಾರ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಉತ್ತರಾಖಂಡದ ಆದಿತ್ಯ ನೈಥಾನಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅದು ನಿತ್ಯ ಯುವಕರು ಆಟವಾಡುವ, ಹಿರಿಯರು ವಾಕಿಂಗ್ ಮಾಡುವ ಮೈದಾನ. ಆದರೆ ಆ ಮೈದಾನಕ್ಕೆ ಕಳೆದ ಮೂರು ದಿನಗಳಿಂದ ಜನರ ಬದಲಿಗೆ ಜಾನುವಾರುಗಳು ಎಂಟ್ರಿಕೊಟ್ಟಿವೆ. ಏಕೆಂದರೆ ರಾಜ್ಯ ಮಟ್ಟದ ಹೆಚ್ಚು ಹಾಲು ಕರೆಯುವ ಹಸುಗಳ ಸ್ಪರ್ಧೆ ನಡೆಯುತ್ತಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬಂದ ಜಾನುವಾರುಗಳು ನೋಡುಗರನ್ನ ನಿಬ್ಬೆರಗಾಗುವಂತೆ ಮಾಡಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಗೋಪಾಲಕರ ಸಂಘದ ವತಿಯಿಂದ ಕಳೆದ ಮೂರು ದಿನಗಳಿಂದ ರಾಜ್ಯ ಮಟ್ಟದ ಹೆಚ್ಚು ಹಾಲು ಕರೆಯುವ ಹಸುಗಳ ಸ್ಪರ್ಧೆ ಹಾಗೂ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಸ್ವಯಂ ಪ್ರೇರಿತವಾಗಿ ತಮ್ಮ ಹಸುಗಳೊಂದಿಗೆ ಸ್ಪರ್ಧೆಗೆ ಆಗಮಿಸಿದ್ದರು. ಜೊತೆಗೆ ರೈತರೆಲ್ಲಾ ಮೈದಾನದಲ್ಲೇ ಹಸುಗಳನ್ನ ಮೇಯಿಸುತ್ತಾ ಕಾಲ ಕಳೆದಿದ್ದು, ಸಂಜೆ ವೇಳೆ ಜಡ್ಜ್ಗಳ ಮುಂದೆಯೇ ಪ್ರತಿ ಹಸುವಿನಿಂದ ಕರೆದ ಲೀಟರ್ ಗಟ್ಟಲೆ ಹಾಲು ಅಳತೆ ಮಾಡಿದರು.
ಹಾಲು ಕರೆಯುವ ಸ್ಪರ್ಧೆಗಾಗಿ ವಿವಿಧ ಮೂಲೆಗಳಿಂದ ಬಂದ ರೈತರಿಗೆ ಉಳಿದುಕೊಳ್ಳಲು ಹಾಗೂ ಹಸುವಿಗೆ ಮೇವಿನ ವ್ಯವಸ್ಥೆ ಮಾಡಿದ್ದು, ನೂರಾರು ಜನರು ವಿವಿಧ ತಳಿಗಳ ಹಸುಗಳನ್ನ ನೋಡಿ ಸಂತಸಪಟ್ಟರು. ರೈತರು ಸ್ಥಳೀಯರ ಮುಂದೆಯೇ ಕರೆದ ಹಾಲನ್ನ ಕ್ಯಾನ್ಗಳಿಗೆ ಹಾಕಿ ಅಳತೆ ಮಾಡಿದ್ದು, ಒಂದೊಂದು ಹಸು 20 ರಿಂದ 25 ಲೀಟರ್ವರೆಗೂ ಹಾಲು ಕರೆಯುವ ಮೂಲಕ ನೋಡುಗರು ಬೆರಗಾದರು.
ಇನ್ನು ಮೊದಲ ಬಹುಮಾನ ಗೆದ್ದ ಹೆಚ್ಚು ಹಾಲು ಕರೆದ ರೈತರಿಗೆ ಒಂದೂವರೆ ಲಕ್ಷ ರೂ ಹಣ ಹಾಗೂ ಟ್ರೋಫಿ, ಎರಡನೇ ಬಹುಮಾನವಾಗಿ ಒಂದು ಲಕ್ಷ ರೂ ಹಣ ಮತ್ತು ಮೂರನೇ ಬಹುಮಾನವಾಗಿ 75 ಸಾವಿರ ರೂ ಹಣವನ್ನ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ನೀಡುವ ಮೂಲಕ ರೈತರನ್ನ ಪ್ರೋತ್ಸಾಹಿಸಿದರು. ವಿನೂತನ ಸ್ಪರ್ಧೆ ಕಂಡು ಜನರು ನಿಬ್ಬೆರಗಾದರು.
ಮಧ್ಯಪ್ರದೇಶ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಕೂಚ್ ಬೆಹಾರ್ ಟ್ರೋಫಿ (Cooch Behar Trophy) ಫೈನಲ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಲ್ಸಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪಂದ್ಯದಲ್ಲಿ ಗುಜರಾತ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸುವಲ್ಲಿ ಮಧ್ಯಪ್ರದೇಶ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 216 ರನ್ ಕಲೆಹಾಕಿತು. ಉತ್ತರವಾಗಿ ಮಧ್ಯಪ್ರದೇಶ ತಂಡವು 178 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಇತ್ತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಗುಜರಾತ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 133 ರನ್‌ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ತಂಡವು 4 ವಿಕೆಟ್‌ಗಳಿಗೆ 176 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಮಧ್ಯಪ್ರದೇಶದ ಗೆಲುವಿನ ನಾಯಕ ಆಲ್‌ರೌಂಡರ್ ಯಶವರ್ಧನ್ ಸಿಂಗ್ ಚೌಹಾಣ್, ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದರು.
ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಯಶವರ್ಧನ್
ಯಶವರ್ಧನ್ ಸಿಂಗ್ ಚೌಹಾಣ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಲ್ಲದೇ, ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಯಶವರ್ಧನ್ ಎಂಟು ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದರು, ಇದರಲ್ಲಿ ಐದು ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಇದಲ್ಲದೆ, ಅವರು ಎಂಟು ಪಂದ್ಯಗಳಲ್ಲಿ 42.31 ಸರಾಸರಿಯಲ್ಲಿ 550 ರನ್ ಕೂಡ ಕಲೆಹಾಕಿದರು ಇದರಲ್ಲಿ ಎರಡು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ.
ಪ್ರತಿಭಾವಂತ ಯಶವರ್ಧನ್
ಯಶವರ್ಧನ್ ಸಿಂಗ್ ಚಂಬಲ್ ಮೂಲದವರಾಗಿದ್ದು, ಮಧ್ಯಪ್ರದೇಶದ ಮುಂದಿನ ಸೂಪರ್ ಸ್ಟಾರ್ ಎಂದು ಹೇಳಲಾಗುತ್ತಿದೆ. 2023 ರಲ್ಲಿ, ಅವರು 15 ವರ್ಷದೊಳಗಿನವರ ಪಂದ್ಯದಲ್ಲಿ 39 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಿತ ತ್ರಿಶತಕ ಬಾರಿಸಿದ್ದರು. ಇದಲ್ಲದೆ, 13 ನೇ ವಯಸ್ಸಿನಲ್ಲಿ, ಅವರು ಇಂದೋರ್ ವಿರುದ್ಧ 391 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದು ಮಾತ್ರವಲ್ಲದೆ 425 ರನ್‌ಗಳ ಇನ್ನಿಂಗ್ಸ್‌ಗಳನ್ನು ಸಹ ಆಡಿದ್ದಾರೆ.
Madhya Pradesh beat Gujarat by 6 wickets to clinch their maiden Under-19 Cooch Behar 🏆 title. The star of the tournament for Madhya Pradesh was Chambal boy Yashwardhan Chouhanz who took 57 wickets & scored 550 runs in the Championship 👏 👏 👏 pic.twitter.com/cWbgNsJzY8
ಗುಜರಾತ್‌ನ ಮಲಯ್ ಶಾ ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, 716 ರನ್ ಕಲೆಹಾಕಿದ್ದಾರೆ. ಈ ಆಟಗಾರ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಉತ್ತರಾಖಂಡದ ಆದಿತ್ಯ ನೈಥಾನಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಜನವರಿ 19): ಎಸ್ಎಸ್ಎಲ್ಸಿಪೂರಕ ಪರೀಕ್ಷೆಯ (sslc preparatory exam) ಪ್ರಶ್ನಿ ಪತ್ರಿಕೆ ಸೋರಿಕೆ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆ (Karnataka Education Department) ಎಚ್ಚೆತ್ತುಕೊಂಡಿದ್ದು, ಮುಖ್ಯ ಪರೀಕ್ಷೆಗೆ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧಿಸಲಾಗಿದೆ. ಇದೀಗ ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಲ್ಲದೇ 2 ಹಾಗೂ 3ನೇ ಪರೀಕ್ಷೆ ಆಯುಕ್ತರ ನೇತೃತ್ವದಲ್ಲಿ ನಡೆಯಲಿವೆ.
ಹೊಸ ಮಾರ್ಗಸೂಚಿಯಲ್ಲೇನಿದೆ?
ಈ ಹಿಂದಿನ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಮಂಡಳಿ ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ನಡೆಸಲಾಗಿತ್ತು. ಆದ್ರೆ, ಇದೀಗ ಹೊಸ ಗೈಡ್ಲೈನ್ಸ್ ಪ್ರಕಾರ 2 ಹಾಗೂ 3ನೇ ಪರೀಕ್ಷೆ ಆಯುಕ್ತರ ನೇತೃತ್ವದಲ್ಲಿ ನಡೆಯಲಿದ್ದು, ಡಿಡಿಪಿಐ ಹಾಗೂ ಬಿಇಒಗಳಿಗೆ ಪರೀಕ್ಷೆಯ ಜವಾಬ್ದಾರಿ ನೀಡಲಾಗಿದೆ.
ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮೊಬೈಲ್ ತರುವಂತಿಲ್ಲ. ಜೊತೆಗೆ ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ. ಇನ್ನು ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯಹಾರ ನಡೆಸದಂತೆ ಖಡಕ್ ಸೂಚನೆ ನೀಡಲಾಗಿದ್ದು,
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಪ್ರಶ್ನೆಪತ್ರಿಕೆ ಮುಖ್ಯೋಪಾಧ್ಯಾಯರೇ ಡೌನ್ಲೋಡ್ ಮಾಡಬೇಕು. ಜೊತೆಗೆ ಪ್ರಶ್ನೆಪತ್ರಿಕೆ ಗೌಪ್ಯತೆ ಕಾಪಾಡಬೇಕು ಹಾಗೇ ಪ್ರಾಂಶುಪಾಲರು ಸಹ ಪರೀಕ್ಷಾ ಕೇಂದ್ರಗಳಿಗೆ ಭೇಟಿ ಪರಿಶೀಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲಿ ಖಡಕ್ ಆಗಿ ತಿಳಿಸಲಾಗಿದೆ.
ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯವನ್ನು ಹಲವು ಶಾಲೆಗಳು ಎಸಗಿವೆ. ಆದರೆ ಇದುವರೆಗೆ ಆರು ಶಿಕ್ಷಕರು ಮಾತ್ರ ಪತ್ತೆಯಾಗಿದ್ದಾರೆ. ಪರೀಕ್ಷೆಗೂ ಮೂರು ಗಂಟೆಗಳಿಗೂ ಮುನ್ನ ಪ್ರಶ್ನೆ ಪತ್ರಿಕೆಗಳ ಫೋಟೋ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು.
ಪ್ರಶ್ನೆ ಪತ್ರಿಕೆ ಮಾರಾಟಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್ 32’ ಹಾಗೂ ‘ಡೆಲ್ಟಾ ಹ್ಯಾಕರ್’ ಸೇರಿದಂತೆ 8ಕ್ಕೂ ಅಧಿಕ ಖಾತೆಗಳನ್ನು ತೆರೆದಿದ್ದರು. ಅಲ್ಲದೆ ಟೆಲಿಗ್ರಾಂ ಹಾಗೂ ವಾಟ್ಸಪ್‌ನಲ್ಲಿ ಗ್ರೂಪ್ ರಚಿಸಿಕೊಂಡು ಸಹ ಕೆಲವರು ಮಾರಾಟ ಮಾಡಿದ್ದರು. ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮಾಹಿತಿ ಆಧರಿಸಿ ರಾಮನಗರ, ಉಡುಪಿ, ಶಿವಮೊಗ್ಗ ಹಾಗೂ ತುಮಕೂರು ಸೇರಿದಂತೆ 10 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಟೈಪ್ 1 ಡಯಾಬಿಟಿಸ್ (Type-1 Diabetes) ಒಂದು ಸ್ವಯಂ ನಿರೋಧಕ (ಆಟೊಇಮ್ಯೂನ್) ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಮಕ್ಕಳು, ಹದಿಹರೆಯದವರು ಮತ್ತು ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ಜನರು ಇದರ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ತಕ್ಷಣ ಚಿಕಿತ್ಸೆ ನೀಡಿದರೆ ಅದನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಪ್ರಮುಖ ಹಂತವೆಂದರೆ ಜೀವನಶೈಲಿಯ ಬದಲಾವಣೆ. ಉದಾಹರಣೆಗೆ ಪ್ರತಿದಿನ ಯೋಗಾಭ್ಯಾಸ ಮಾಡುವುದು ಮತ್ತು ಸರಿಯಾದ ಆಹಾರ ಕ್ರಮ ಅನುಸರಿಸುವುದು. ಟೈಪ್ 1 ಡಯಾಬಿಟಿಸ್ ಅನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುವ ಕೆಲವು ಮಾರ್ಗಗಳನ್ನು ಬಾಬಾ ರಾಮದೇವ್ ವಿವರಿಸಿದ್ದಾರೆ.
ಟೈಪ್ 1 ಡಯಾಬಿಟಿಸ್ನ ಲಕ್ಷಣಗಳಲ್ಲಿ ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಆಗಾಗ್ಗೆ ಆಯಾಸ ಮತ್ತು ದೃಷ್ಟಿ ಮಂದವಾಗುವುದು ಸೇರಿವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಮಧುಮೇಹವು ಯಾವುದೇ ಚಿಕಿತ್ಸೆ ಇಲ್ಲದ ಸಮಸ್ಯೆಯಾಗಿದೆ. ಇದನ್ನು ಪೂರ್ಣ ಗುಣಮುಖಗೊಳಿಸಲು ಔಷಧಗಳಿಲ್ಲ. ಆದರೆ, ಅದನ್ನು ತಗ್ಗಿಸಲು ಸಾಧ್ಯ. ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಡಬಹುದು.
ಮಧುಮೇಹ ಬರಲು ಏನು ಕಾರಣಗಳು?
ಮಧುಮೇಹಕ್ಕೆ ಮೂರು ಪ್ರಮುಖ ಕಾರಣಗಳಿವೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಮೊದಲನೆಯದು ಮೇದೋಜ್ಜೀರಕ ಗ್ರಂಥಿಗೆ (ಪ್ಯಾಂಕ್ರಿಯಾಸ್) ಹಾನಿಯಾಗುವುದು. ಇದು ಇನ್ಸುಲಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಸಿಂಥೆಟಿಕ್ ಔಷಧಗಳು ಇದರಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ಅದರಲ್ಲೂ ಮಕ್ಕಳಿಗೆ ಈ ಔಷಧಗಳಿಂದ ಹೆಚ್ಚಿನ ದುಷ್ಪರಿಣಾಮ ಇರುತ್ತದೆ. ಇದಲ್ಲದೆ, ವಿವಿಧ ರೀತಿಯ ಮಾಲಿನ್ಯ, ಕಳಪೆ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿ ಕೂಡ ಇಂದಿನ ಮಧುಮೇಹಕ್ಕೆ ಪ್ರಮುಖ ಕಾರಣಗಳಾಗಿವೆ.
ನಿಮ್ಮ ಆಹಾರದಲ್ಲಿ ಟೊಮೆಟೊ, ಟೊಮೆಟೊ ರಸ, ಸೌತೆಕಾಯಿ ಮತ್ತು ಹಾಗಲಕಾಯಿಯನ್ನು ಸೇರಿಸಿಕೊಳ್ಳಲು ಬಾಬಾ ರಾಮದೇವ್ ಸಲಹೆ ನೀಡುತ್ತಾರೆ. ಸೋರೆಕಾಯಿ, ಬ್ರೊಕೊಲಿ (ಹೂಕೋಸು), ಬೆಂಡೇಕಾಯಿ, ಟಿಂಡಾ, ಪಾಲಕ್ ಮತ್ತು ಬೀನ್ಸ್ ಕೂಡ ಆರೋಗ್ಯಕರ ತರಕಾರಿಗಳಾಗಿವೆ. ನಿಮ್ಮ ಆಹಾರವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಡಯಾಬಿಟಿಸ್ ಇದ್ದರೆ, ಸರಳ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಮಿತಿಗೊಳಿಸಿ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ದೂರವಿರಿಸಿ. ನಿಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳು, ಧಾನ್ಯಗಳು, ಲೀನ್ ಪ್ರೋಟೀನ್, ಹೆಲ್ತಿ ಫ್ಯಾಟ್ಸ್ ಮತ್ತು ಕಾಳು ಇತ್ಯಾದಿ ಸೇರಿಸಿ. ಸಂಸ್ಕರಿಸಿದ ಆಹಾರಗಳು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್ಗಳನ್ನು ತಪ್ಪಿಸಿ.
ಈ ಥೆರಪಿ ಪ್ರಯತ್ನಿಸಿ
ಡಯಾಬಿಟಿಸ್ ಹಿಮ್ಮೆಟ್ಟಿಸಲು ಬಾಬಾ ರಾಮದೇವ್ ಒಂದು ಸರಳ ಚಿಕಿತ್ಸೆಯನ್ನು ಸೂಚಿಸಿದ್ದಾರೆ. ಇದರಲ್ಲಿ ಬೇವು ಮತ್ತು ಹಾಗಲಕಾಯಿಯನ್ನು ರುಬ್ಬುವುದು, ಅವುಗಳನ್ನು ಒಂದು ಚಪ್ಪಟೆ ತಳವಿರುವ ಪಾತ್ರೆಯಲ್ಲಿ ಇರಿಸಿ ಮತ್ತು ಪ್ರತಿದಿನ ಕೆಲವು ನಿಮಿಷಗಳ ಕಾಲ ಅದರ ಮೇಲೆ ನಡೆದಾಡಬೇಕು.
ಬಾಬಾ ರಾಮದೇವ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್
ಯಾವ ಯೋಗಾಸನಗಳು ಪರಿಣಾಮಕಾರಿ?
ಡಯಾಬಿಟಿಸ್ ಹಿಮ್ಮೆಟ್ಟಿಸಲು ಬಾಬಾ ರಾಮದೇವ್ ಕೆಲ ಯೋಗಾಸನಗಳನ್ನು ಸೂಚಿಸುತ್ತಾರೆ. ಮಂಡೂಕಾಸನ, ಯೋಗ ಮುದ್ರಾಸನ, ಪವನ ಮುಕ್ತಾಸನ, ಉತ್ಥಾನ ಪಾದಾಸನ, ವಜ್ರಾಸನ ಮತ್ತು ವಕ್ರಾಸನದಂತಹ ಐದರಿಂದ ಹತ್ತು ಆಸನಗಳನ್ನು ಅಭ್ಯಾಸ ಮಾಡಬೇಕು. ಇವು ಬಹಳ ಪ್ರಯೋಜನಕಾರಿ. ಅನಾರೋಗ್ಯದಿಂದ ಬಳಲುತ್ತಿರುವವರೂ ಸಹ ಯೋಗವನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಬಾಬಾ ಸಲಹೆ ನೀಡುತ್ತಾರೆ.
ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಭಾರತ ಮತ್ತು ವಿದೇಶಗಳಲ್ಲಿ ದೊಡ್ಡ ಯೋಗ ಶಿಬಿರಗಳನ್ನು ಆಯೋಜಿಸುತ್ತಾರೆ ಮತ್ತು ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ಆರೋಗ್ಯಕರ ಜೀವನದ ಬಗ್ಗೆ ಶಿಕ್ಷಣ ನೀಡುತ್ತಿರುತ್ತಾರೆ. ವೇದ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ ಮತ್ತು ನೈಸರ್ಗಿಕ ಪದಾರ್ಥಗಳಿಗೆ ಹೆಚ್ಚಿನ ಮೌಲ್ಯವಿದೆ. ಈಗ, ವಿದೇಶಿಯರು ಸಹ ಈ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಭಾರತೀಯರು ಈ ಪ್ರಾಚೀನ ವಿದ್ಯೆ ಮತ್ತು ಆರೋಗ್ಯ ಪದ್ಧತಿಯನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೇ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ನಾವೆಲ್ಲರೂ ಯೋಗ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರದತ್ತ ಗಮನ ಹರಿಸಬೇಕು.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಅಬುಧಾಬಿ, ಜನವರಿ 19: ಯುಎಇಯ ಫ್ರಂಟ್ಲೈನ್ ಆರೋಗ್ಯ ಕಾರ್ಯಕರ್ತರು ಮೊದಲ ಬಾರಿಗೆ ಸರ್ಪ್ರೈಸ್ ರೂಪದಲ್ಲಿ 37 ಕೋಟಿ ರೂ. ಮೌಲ್ಯದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ. ಬುರ್ಜೀಲ್ ಹೋಲ್ಡಿಂಗ್ಸ್ ಅಧ್ಯಕ್ಷ ಮತ್ತು ಸಿಇಒ ಡಾ. ಶಂಶೀರ್ ವಯಾಲಿಲ್ ಘೋಷಿಸಿದ ಈ ನಿಧಿಯು ಸುಮಾರು 10,000 ಫ್ರಂಟ್ಲೈನ್ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಸುಮಾರು ಶೇ. 85ರಷ್ಟು ನರ್ಸಿಂಗ್, ಅಲೈಡ್ ಹೆಲ್ತ್, ರೋಗಿಗಳ ಆರೈಕೆ, ಕಾರ್ಯಾಚರಣೆಗಳು ಮತ್ತು ಬೆಂಬಲ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ.
ಗುಂಪು ಮಟ್ಟದ ನಾಯಕತ್ವ ಭಾಷಣಕ್ಕಾಗಿ ಅಬುಧಾಬಿಯ ಎತಿಹಾದ್ ಅರೆನಾದಲ್ಲಿ 8,500ಕ್ಕೂ ಹೆಚ್ಚು ಉದ್ಯೋಗಿಗಳು ಒಟ್ಟುಗೂಡಿದ್ದರು. ಬುರ್ಜೀಲ್ ಹೋಲ್ಡಿಂಗ್ಸ್‌ನ ಅಧ್ಯಕ್ಷ ಮತ್ತು ಸಿಇಒ ಡಾ. ಶಂಶೀರ್ ವೇಲಿಲ್ ಅವರು ಭಾಷಣ ಮಾಡಿದರು. ಇದು ಅಬುಧಾಬಿಯ ಸಿಇಒ ನೇತೃತ್ವದ ಆರೋಗ್ಯ ಕ್ಷೇತ್ರದ ಅತಿದೊಡ್ಡ ಉದ್ಯೋಗಿ ಸಭೆಗಳಲ್ಲಿ ಒಂದಾಗಿದೆ.
ಯುಎಇಯ ಫ್ರಂಟ್ಲೈನ್ ಆರೋಗ್ಯ ರಕ್ಷಣಾ ಕಾರ್ಯಕರ್ತರು ಮೊದಲ ಬಾರಿಗೆ 15 ಮಿಲಿಯನ್ ದಿರ್ಹಮ್‌ಗಳ (37 ಕೋಟಿ ರೂ.) ಮೌಲ್ಯದ ಅಚ್ಚರಿಯ ಟೌನ್ ಹಾಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಸುಮಾರು 10,000 ಮುಂಚೂಣಿಯ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡಲಿದೆ. ಬುರ್ಜೀಲ್ ಹೋಲ್ಡಿಂಗ್ಸ್ ಅಧ್ಯಕ್ಷ ಮತ್ತು ಸಿಇಒ ಡಾ. ಶಂಶೀರ್ ವಯಾಲಿಲ್ ಅವರು ಇಷ್ಟು ದೊಡ್ಡ ಮೊತ್ತದ ನಿಧಿಯನ್ನು ಘೋಷಿಸುತ್ತಿದ್ದಾರೆ. ಯುಎಇಯಲ್ಲಿ ಮೆನಾದಲ್ಲಿ ಪ್ರಮುಖ ಸೂಪರ್-ಸ್ಪೆಷಾಲಿಟಿ ಆರೋಗ್ಯ ಸೇವಾ ಪೂರೈಕೆದಾರ ಬುರ್ಜೀಲ್ ಹೋಲ್ಡಿಂಗ್ಸ್ ನಡೆಸಿದ ಮೊದಲ ಲೀಡರ್ಶಿಪ್ ಭಾಷಣದಲ್ಲಿ ಸಾವಿರಾರು ಮುಂಚೂಣಿಯ ಆರೋಗ್ಯ ರಕ್ಷಣಾ ಕಾರ್ಯಕರ್ತರು 37 ಕೋಟಿ ರೂ. ಆರ್ಥಿಕ ಸಹಾಯ ಪಡೆದರು.
ಫ್ರಂಟ್ಲೈನ್ ಆರೋಗ್ಯ ರಕ್ಷಣಾ ಕಾರ್ಯಕರ್ತರು ಗುಂಪಿನ ಹೊಸದಾಗಿ ಪ್ರಾರಂಭಿಸಲಾದ ಬುರ್ಜೀಲ್‌ಪ್ರೌಡ್ ಗುರುತಿಸುವಿಕೆ ಉಪಕ್ರಮದಲ್ಲಿ ತಮ್ಮ ಸೇರ್ಪಡೆಯನ್ನು ದೃಢೀಕರಿಸುವ SMS ನೋಟಿಫಿಕೇಷನ್ ಸ್ವೀಕರಿಸಲು ಪ್ರಾರಂಭಿಸಿದಾಗ ಅಲ್ಲಿ ಸೇರಿದ್ದ ಉದ್ಯೋಗಿಗಳು ಭಾವುಕರಾದರು. ಈ ಉಪಕ್ರಮದ ಮೊದಲ ಹಂತದಿಂದ ಸುಮಾರು 10,000 ಫ್ರಂಟ್ಲೈನ್ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.
ಈ ಘೋಷಣೆಯ ನಂತರ ಡಾ. ಶಂಶೀರ್ ಅವರಿಗೆ ಭಾರೀ ಚಪ್ಪಾಳೆಯ ಮೂಲಕ ಉದ್ಯೋಗಿಗಳು ಧನ್ಯವಾದ ತಿಳಿಸಿದರು. ಇದೊಂದು ಭಾವನಾತ್ಮಕ ಮತ್ತು ಅಪರೂಪದ ಕ್ಷಣವಾಗಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದಾವಣಗೆರೆ, (ಜನವರಿ 19): ದಾವಣಗೆರೆ ತಾಲೂಕಿನ ಆನಗೋಡು ಬಳಿಯಿರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ (indira Priyadarshini zoo )ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲದೆ ಇಡೀ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸದ್ಯ ಮೃಗಾಲಯದಲ್ಲಿ ಇರುವ ಇತರೆ ಜಿಂಕೆಗಳಿಗೂ ಸೋಂಕು ಹರಡದಂತೆ ತಡೆಯಲು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಜಿಂಕೆಗಳ ಮೇಲೆ ಅಧಿಕಾರಿಗಳು, ವೈದ್ಯರು ನಿಗಾವಹಿಸಿದ್ದಾರೆ.
ಕರೋನಾ ರೀತಿಯ ಮಾರಣಾಂತಿಕ ರೋಗ
ಇದೇ ಜನವರಿ 16ರಂದು ಒಂದು ಚುಕ್ಕೆ ಜಿಂಕೆ ಸಾವನ್ನಪ್ಪಿತ್ತು. ನಂತರ ಜ. 17 ರಂದು ಮತ್ತೆರಡು ಜಿಂಕೆಗಳು ಮೃತಪಟ್ಟಿದ್ದವು. ಹಾಗೂ ಜ.18 ರಂದು ಮತ್ತೊಂದು ಜಿಂಕೆ ಮೃತಪಟ್ಟಿರುವುದು ಕಂಡುಬಂದಿದೆ. ಕರೋನಾ ರೀತಿಯಲ್ಲಿ ಮಾರಣಾಂತಿಕ ರೋಗ ಹರಡಿದ್ದು.ಇಡಿ ಪಾರ್ಕ ಕ್ವಾರಟೈನ್ ಮಾಡಲಾಗಿದೆ. ಇನ್ನು ಮೇಲಿಂದ ಮೇಲೆ ಜಿಂಕೆ ಸಾವನ್ನಪ್ಪಿತ್ತಿರುವುದರಿಂದ ತಕ್ಷಣವೇ ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಸದಸ್ಯರು ಮೃಗಾಲಯಕ್ಕೆ ದೌಡಾಯಿಸಿದ್ದಾರೆ. ಪ್ರಾಥಮಿಕವಾಗಿ ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗವಿರಬಹುದು ಶಂಕೆ ವ್ಯಕ್ತವಾಗಿದೆ. ಸದ್ಯ ಜಿಂಕೆಗಳ ಸರಣಿ ಸಾವಿಗೆ ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಜಿಂಕೆಗಳು ಇದೇ ಸಾಂಕ್ರಾಮಿಕ ಕಾಯಿಲೆಯಿಂದ ಸಾವನ್ನಪ್ಪಿದ್ದವು. ಈಗ ಇಂದಿರಾ ಪ್ರಿಯದರ್ಶಿನಿ ಜಿಂಕೆಗಳ ಸಾವಿನಲ್ಲೂ ಸಾಮ್ಯತೆ ಕಂಡುಬಂದಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಶಾಸಕ ಕೆಎಸ್ ಬಸವಂತಪ್ಪ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ಆಹಾರ ನೀಡುತ್ತಿಲ್ಲ. ಮೇಲಾಗಿ ದಾವಣಗೆರೆಯಲ್ಲಿ ಇದೊಂದು ಮೃಗಾಲಯ ಬಿಟ್ಟರೇ ಬೇರೆ ಪ್ರವಾಸಿ ಸ್ಥಳಗಳು ಸಹ ಇಲ್ಲ. ಇಲ್ಲಿನ ಪ್ರಾಣಿಗಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಬೇಕಾದ ತಜ್ಞರನ್ನ ತಕ್ಷಣಕ್ಕೆ ಕರೆಸಿ ಇನ್ನಷ್ಟು ಜಿಂಕೆಗಳು ಸಾವನ್ನಪ್ಪದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಮೃಗಾಲಯದಲ್ಲಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಇದರಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳಿವೆ. ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಮೊದಲು ಸರಿಯಾಗಿ ನಿದ್ರೆ ಮಾಡಬೇಕು. ರಾತ್ರಿ ನಿದ್ರೆ ಸರಿಯಾಗಿ ಆಗದೆಯೇ ಪದೇ ಪದೇ ಎಚ್ಚರವಾಗುತ್ತಿದ್ದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಹೌದು, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯ ಪ್ರಕಾರ, ರಾತ್ರಿ ನಿದ್ರೆಯಲ್ಲಿ ಆಗಾಗ ಎಚ್ಚರಗೊಂಡು ಸರಿಯಾಗಿ ನಿದ್ರೆ ಆಗದಿದ್ದರೆ ಅದು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅನೇಕ ರೀತಿಯ ಅಪಾಯಕಾರಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ, ವ್ಯಕ್ತಿಯು ರಾತ್ರಿ ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಮಾಡಬೇಕು ಇಲ್ಲವಾದಲ್ಲಿ ಇದು ಆರೋಗ್ಯವನ್ನು ಹದಗೆಡಿಸುತ್ತದೆ. ನಿಮಗೂ ನಿದ್ದೆ (Sleep) ಮಾಡುವಾಗ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಪ್ಪದೆ ಈ ಸ್ಟೋರಿ ಓದಿ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿದ್ರೆ ಸರಿಯಾಗಿ ಆಗದಿದ್ದವರು ಅಧಿಕ ರಕ್ತದೊತ್ತಡದಂತಹ ಅಪಾಯವನ್ನು ಹೊಂದಿರುತ್ತಾರೆ. ನಿದ್ರೆ ಸರಿಯಾಗಿ ಆಗದಿದ್ದಾಗ ದೇಹಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳುವುದಕ್ಕೆ ಸರಿಯಾದ ಅವಕಾಶ ಸಿಗುವುದಿಲ್ಲ, ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಇದು ಮೆದುಳಿನ ಮೇಲೂ ಪರಿಣಾಮ ಬೀರುತ್ತವೆ ಎಂದು ಸಂಶೋಧನೆಯು ಬಹಿರಂಗಗೊಂಡಿದೆ.
ನಿದ್ರೆಯಲ್ಲಾಗುವ ಅಡಚಣೆ ಹೃದಯಕ್ಕೆ ಹೇಗೆ ಅಪಾಯಕಾರಿಯಾಗುತ್ತದೆ?
ರಾತ್ರಿ ಚೆನ್ನಾಗಿ ನಿದ್ರೆ ಮಾಡುವ ಸಮಯದಲ್ಲಿ, ಹೃದಯವು ವಿಶ್ರಾಂತಿ ಪಡೆಯುತ್ತದೆ ಮತ್ತು ರಕ್ತದೊತ್ತಡವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಆದರೆ ನಿದ್ರೆಗೆ ಪದೇ ಪದೇ ಅಡ್ಡಿಯಾದಾಗ, ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ಉರಿಯೂತಕ್ಕೆ ಕಾರಣವಾಗಬಹುದು, ಅಷ್ಟೇ ಅಲ್ಲ, ಹೃದಯಾಘಾತದ ಅಪಾಯವನ್ನು ಕೂಡ ಹೆಚ್ಚಿಸುತ್ತದೆ. ಪ್ರತಿದಿನ ರಾತ್ರಿ 2 ರಿಂದ 3 ಬಾರಿ ಎಚ್ಚರಗೊಳ್ಳುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವು 30% ವರೆಗೆ ಹೆಚ್ಚಾಗಿರುತ್ತದೆ. ಈ ರೀತಿ ಪದೇ ಪದೇ ನಿದ್ರೆಯಿಂದ ಎಚ್ಚರಗೊಳ್ಳುವುದಕ್ಕೆ ಕಾರಣ ನಿಮ್ಮ ಮೆದುಳು. ನೀವು ನಿದ್ರೆ ಮಾಡಿದ ಮೇಲೆಯೂ ಅದು ಹೆಚ್ಚು ಸಕ್ರಿಯವಾಗಿದೆ ಎಂದರ್ಥ. ಅಂದರೆ ನೀವು ಯಾವುದೋ ವಿಷಯದ ಬಗ್ಗೆ ಅತಿಯಾಗಿ ಯೋಚಿಸುತ್ತಿರಬಹುದು ಅಥವಾ ಮಾನಸಿಕ ಒತ್ತಡದಿಂದ ಬಳಲುತ್ತಿರಬಹುದು. ಮಾನಸಿಕ ಒತ್ತಡವಿದ್ದರೆ, ಅದು ಹೃದಯದ ಮೇಲೂ ಪರಿಣಾಮ ಬೀರುತ್ತದೆ, ಏಕೆಂದರೆ ಮಾನಸಿಕ ಒತ್ತಡವು ಹೃದಯಾಘಾತಕ್ಕೆ ಸಾಮಾನ್ಯ ಕಾರಣವಾಗಿದೆ. ಆದ್ದರಿಂದ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ, ಮತ್ತು ರಾತ್ರಿ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವ ಸಮಸ್ಯೆ ಇದ್ದರೆ, ತಪ್ಪದೆ ವೈದ್ಯರ ಸಂಪರ್ಕ ಮಾಡಿ.