Category Archives: Blog

Your blog category

ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು

ಹಂಸಲೇಖ (Hamsalekha) ಮತ್ತು ರವಿಚಂದ್ರನ್ (Ravichandran) ಕನ್ನಡ ಚಿತ್ರರಂಗದ ನಂಬರ್ 1 ‘ಜೋಡಿ’. ಹಲವಾರು ಅತ್ಯದ್ಭುತ ಹಾಡುಗಳನ್ನು ಈ ಜೋಡಿ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇದೀಗ ಈ ಜೋಡಿ ಒಟ್ಟಿಗೆ ಲೈವ್ ಕಾನ್ಸರ್ಟ್ ಮಾಡಲಿದ್ದಾರೆ. ತಮ್ಮ ಜೋಡಿಯಲ್ಲಿ ಬಂದ ಹಾಡುಗಳನ್ನು ಲೈವ್ ಕಾನ್ಸರ್ಟ್​​ನಲ್ಲಿ ಪುನಃ ಸೃಷ್ಟಿಸಲಿದ್ದಾರೆ. ಹಂಸಲೇಖ ಮತ್ತು ರವಿಚಂದ್ರನ್ ಅವರ ಈ ಕಾನ್ಸರ್ಟ್​​ಗೆ ‘ಕ್ರೇಜಿ-ಬ್ರಹ್ಮ’ ಎಂದು ಹೆಸರಿಡಲಾಗಿದೆ. ಇಂದು ಈ ಲೈವ್ ಕಾನ್ಸರ್ಟ್ ಬಗ್ಗೆ ಮಾಹಿತಿ ನೀಡಲೆಂದು ಸುದ್ದಿಗೋಷ್ಠಿ ನಡೆಸಲಾಗಿದ್ದು, ಈ ವೇಳೆ ಹಂಸಲೇಖ ಅವರು ತಮ್ಮ ಮಾಜಿ ‘ಯಜಮಾನ್ರು’ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಮಂತ್ರಾಲಯ ಶ್ರೀಗಳು – Kannada News | Heavy Rain in Mantralaya: Swamiji Arranges Shelter and Aid for Devotees

ರಾಯಚೂರು, ಮೇ 24: ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಇತ್ತ ರಾಯರ ಮಠದ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಭಕ್ತರು ಮಳೆ ಅಬ್ಬರಕ್ಕೆ ಕಂಗಾಲಾಗಿದ್ದರು. ಈ ವೇಳೆ ಮಾಹಿತಿ ತಿಳಿದು ತಡ ರಾತ್ರಿ ಪ್ರಾಂಗಣಕ್ಕೆ ದೌಡಾಯಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರನ್ನು ಭೇಟಿ ಮಾಡಿ ಮಳೆಯಿಂದಾದ ಅಡಚಣೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಳಿಕ ಭಕ್ತರಿಗೆ ಶ್ರೀಮಠದ ಕಲ್ಯಾಣ‌ ಮಂಟಪಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಖುದ್ದು ತಾವೇ ನಿಂತು ಭಕ್ತರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್: ಕಾಂಗ್ರೆಸ್​​ನಲ್ಲಿ ಸಂಚಲನ – Kannada News | Congress High command calls and invite Siddaramaiah And DK Shivakumar On May 26

ಬೆಂಗಳೂರು, (ಮೇ 24): ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್​​​​ಗೆ (DK Shivakumar) ಹೈಕಮಾಂಡ್​ನಿಂದ ಬುಲಾವ್ ಬಂದಿದೆ. ಹೌದು… ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲಗಳನ್ನ
ಕೇರಳದಲ್ಲಿ ಸರ್ಕಾರ ರಚನೆ ನಂತರ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಅದರಂತೆ ಇದೀಗ ರಾಜ್ಯದತ್ತ ಚಿತ್ತ ಹರಿಸಿದ್ದು, ಮಂಗಳವಾರ ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್​​​ನಲ್ಲಿ ಸಂಚಲನ ಮೂಡಿಸಿದೆ.

Source link

Chanakya Niti: ಭಾವನಾತ್ಮಕವಾಗಿ ಗಟ್ಟಿಗೊಳ್ಳಲು ಚಾಣಕ್ಯರು ಹೇಳಿರುವ ಈ ಗುಣಗಳನ್ನು ಬೆಳೆಸಿಕೊಳ್ಳಿ – Kannada News | Chanakya Niti: What should you do to become emotionally stronger?

ಆಚಾರ್ಯ ಚಾಣಕ್ಯರು  (Acharya Chanakya) ನಮ್ಮ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ.  ಶ್ರೀಮಂತಿಕೆಯನ್ನು ಗಳಿಸುವುದು ಹೇಗೆ, ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ಹೇಗೆ ಎಂಬುದು ಮಾತ್ರವಲ್ಲದೆ ಒಬ್ಬ ವ್ಯಕ್ತಿ ಮಾನಸಿಕವಾಗಿ ಬಲಶಾಲಿಯಾಗಲು ಏನೆಲ್ಲಾ ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಹೆಚ್ಚಿನವರು ಶಾರೀರಿಕವಾಗಿ ಬಲಶಾಲಿಗಳಾಗಿದ್ದರು, ಮಾನಸಿಕವಾಗಿ ದುರ್ಬಲರಾಗಿರುತ್ತಾರೆ ಮತ್ತು ಇತರರ ಮಾತನ್ನು ನಂಬಿ ಬಹುಬೇಗನೆ ಮೋಸ ಹೋಗ್ತಾರೆ, ಕಷ್ಟ ಬಂದಾಗ ದೂರ ಓಡಿ ಹೋಗ್ತಾರೆ. ಹೀಗಿರುವಾಗ ಪ್ರತಿಯೊಂದು ವಿಚಾರದಲ್ಲೂ ಮಾನಸಿಕವಾಗಿ ಬಲಶಾಲಿಯಾಗಲು ಚಾಣಕ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅದನ್ನು ಪಾಲಿಸುವ ಮೂಲಕ ನೀವು ಕೂಡ ಭಾವನಾತ್ಮಕವಾಗಿ ಬಲಶಾಲಿಗಳಾಗಿ.

ಭಾವನಾತ್ಮಕವಾಗಿ ಬಲಶಾಲಿಯಾಘಲು ಏನು ಮಾಡಬೇಕು?

ನಿಮ್ಮ ಮನಸ್ಸನ್ನು ನಿಯಂತ್ರಿಸಲು ಕಲಿಯಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ತಮ್ಮ ಮನಸ್ಸನ್ನು ನಿಯಂತ್ರಿಸಲು ಕಲಿಯುವ ಭಾವನಾತ್ಮಕವಾಗಿ ಬಲಶಾಲಿಯಾಗುತ್ತಾರೆ.  ಕೋಪ, ಭಯ ಮತ್ತು ದುಃಖದಂತಹ ಭಾವನೆಗಳು ಸಹಜ, ಆದರೆ ಅವುಗಳಿಗೆ ತಕ್ಷಣ ಪ್ರತಿಕ್ರಿಯಿಸುವುದು ದೊಡ್ಡ ತಪ್ಪು. ಪ್ರತಿಕ್ರಿಯಿಸುವ ಮೊದಲು ವಿರಾಮ ತೆಗೆದುಕೊಂಡು ವಿಷಯಗಳನ್ನು ಸರಿಯಾಗಿ ಯೋಚಿಸುವುದು ಮುಖ್ಯ. ನಿಮ್ಮ ಮನಸ್ಸನ್ನು ಶಾಂತವಾಗಿಡಲು ನೀವು ಕಲಿತಾಗ, ನೀವು ಮಾನಸಿಕವಾಗಿ ಬಲಶಾಲಿಯಾಗುತ್ತೀರಿ ಮತ್ತು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಜನರ ಅನಗತ್ಯ ಅಭಿಪ್ರಾಯಗಳಿಂದ ದೂರವಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ನೀಡಲು ಪ್ರಾರಂಭಿಸಿದರೆ, ಅದು ನಿಮ್ಮ ದೌರ್ಬಲ್ಯದ ಸಂಕೇತ. ನೀವು ಎಲ್ಲರ ಮಾತುಗಳನ್ನು ಕೇಳಿ ನಿಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿದರೆ, ನೀವು ಜೀವನದಲ್ಲಿ ಎಂದಿಗೂ ಬಲಶಾಲಿಯಾಗುವುದಿಲ್ಲ. ನೀವು ಭಾವನಾತ್ಮಕವಾಗಿ ಬಲಶಾಲಿಯಾಗಲು ಬಯಸಿದರೆ, ಯಾವ ಸಲಹೆ ಉಪಯುಕ್ತವಾಗಿದೆ ಮತ್ತು ಯಾವುದು ನಿಮ್ಮನ್ನು ದಾರಿ ತಪ್ಪಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ಸ್ವಾವಲಂಬಿಗಳಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ: ಇತರರ ಮೇಲೆ ಅತಿಯಾಗಿ ಅವಲಂಬಿತರಾಗುವ ವ್ಯಕ್ತಿಗಳು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಾವಲಂಬಿ ವ್ಯಕ್ತಿ ಮಾತ್ರ ನಿಜವಾಗಿಯೂ ಶಕ್ತಿಶಾಲಿ. ನಿಮ್ಮ ಎಲ್ಲಾ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳಲು ಕಲಿಯಿರಿ, ಸಣ್ಣ ಜವಾಬ್ದಾರಿಗಳನ್ನು ಸಹ ನೀವೇ ತೆಗೆದುಕೊಳ್ಳಿ ನೀವು ಇದನ್ನು ಮಾಡಿದಾಗ, ನಿಮ್ಮ ಆತ್ಮವಿಶ್ವಾಸವು ಬೆಳೆಯಲು ಪ್ರಾರಂಭವಾಗುತ್ತದೆ ಮತ್ತು ನೀವು ಅತ್ಯಂತ ಸವಾಲಿನ ಸಂದರ್ಭಗಳನ್ನು ಸಹ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಒಂದು ಸಣ್ಣ ಅಭ್ಯಾಸ ನಿಮ್ಮನ್ನು ಬಡತನದ ಕೂಪಕ್ಕೆ ನೂಕಬಹುದು… ಎಚ್ಚರ!

ವೈಫಲ್ಯವನ್ನು ಪಾಠವಾಗಿ ಸ್ವೀಕರಿಸಿ: ಜೀವನದಲ್ಲಿ ವೈಫಲ್ಯಗಳು ಬರುವುದು ಸಹಜ. ಆದರೆ ನೀವು ಅದನ್ನು ಧೈರ್ಯದಿಂದ ಎದುರಿಸಲು ಕಲಿಯಬೇಕು. ನೀವು ವೈಫಲ್ಯ, ಸೋಲುಗಳನ್ನು ಜೀವನ ಪಾಠವಾಗಿ ಸ್ವೀಕರಿಸಿದರೆ ನೀವು ಬೇಗನೆ ಭಾವನಾತ್ಮಕವಾಗಿ ಬಲಿಷ್ಠ ವ್ಯಕ್ತಿಯಾಗುತ್ತೀರಿ. ಮತ್ತು ಎಂತಹದ್ದೇ ಕಷ್ಟಗಳು ಎದುರಾದರೂ ಅದನ್ನು ಸುಲಭವಾಗಿ ಎದುರಿಸುತ್ತೀರಿ.

ಶಿಸ್ತನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಿ: ನೀವು ಭಾವನಾತ್ಮಕವಾಗಿ ಬಲಶಾಲಿಯಾಗಲು ಬಯಸಿದರೆ, ಶಿಸ್ತು ಅತ್ಯಂತ ಮುಖ್ಯ. ಆಚಾರ್ಯ ಚಾಣಕ್ಯರ ಪ್ರಕಾರ, ಶಿಸ್ತಿನ ವ್ಯಕ್ತಿಯು ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಸತತ 6 ಗೆಲುವು, ಅಗ್ರಸ್ಥಾನ; ಆರ್​ಸಿಬಿಯನ್ನು ಗೇಲಿ ಮಾಡಿ ಹಳಿತಪ್ಪಿದ ಪಂಜಾಬ್ – Kannada News | IPL 2026 Playoffs Confirmed: RCB, GT, SRH, RR in Top 4; PBKS’s Dramatic Exit Revealed

ಐಪಿಎಲ್ 2026 (IPL 2026) ರಲ್ಲಿ ಪ್ಲೇಆಫ್‌ ಆಡುವ 4 ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ವಾಸ್ತವವಾಗಿ ಪ್ಲೇಆಫ್ ಸುತ್ತಿನಲ್ಲಿ 4ನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ಇತ್ತು. ಆ ಮೂರು ತಂಡಗಳಲ್ಲಿ ರಾಜಸ್ಥಾನ್, ಪಂಜಾಬ್ ಹಾಗೂ ಕೋಲ್ಕತ್ತಾ ಸೇರಿದ್ದವು. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಸೋತಿದ್ದರೆ, ಪಂಜಾಬ್ ಹಾಗೂ ಕೋಲ್ಕತ್ತಾಗೆ ಪ್ಲೇಆಫ್‌ ಬಾಗಿಲು ತೆರೆದಿರುತಿತ್ತು. ಅದರಲ್ಲೂ ರಾಜಸ್ಥಾನ್ ಈ ಪಂದ್ಯವನ್ನು ಸೋತಿದ್ದರೆ, ಪಂಜಾಬ್​ಗೆ ಪ್ಲೇಆಫ್ ಟಿಕೆಟ್ ಭಾಗಶಃ ಖಚಿತವಾಗುತಿತ್ತು. ಆದರೆ ಪಂಜಾಬ್ ಹಾಗೂ ಕೆಕೆಆರ್ ಪ್ಲೇಆಫ್‌ ಕನಸಿಗೆ ಕೊಳ್ಳಿ ಇಟ್ಟ ರಾಜಸ್ಥಾನ್ 4ನೇ ತಂಡವಾಗಿ ಪ್ಲೇಆಫ್‌ಗೇರಿತು.

ಮೊದಲಾರ್ಧದಲ್ಲಿ ಅಗ್ರಸ್ಥಾನ

ವಾಸ್ತವವಾಗಿ ಮೊದಲಾರ್ಧದ ಐಪಿಎಲ್ ಮುಗಿಯುವ ಹೊತ್ತಿಗೆ ಪಾಯಿಂಟ್ ಪಟ್ಟಿಯನ್ನು ನೋಡಿದವರೆಲ್ಲ ಪಂಜಾಬ್ ಕಿಂಗ್ಸ್ ಮೊದಲ ತಂಡವಾಗಿ ಪ್ಲೇಆಫ್‌ಗೇರುತ್ತದೆ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದರು. ಇದಕ್ಕೆ ಪೂರಕವಾಗಿ ಪಂಜಾಬ್ ಕೂಡ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಮೊದಲ 6 ಪಂದ್ಯಗಳಲ್ಲಿ ಘಟಾನುಘಟಿ ತಂಡಗಳನ್ನು ಮಣಿಸಿ ಮುನ್ನುಗುತ್ತಿತ್ತು. ಪಂಜಾಬ್ ಮಣಿಸಿದ 6 ತಂಡಗಳಲ್ಲಿ ಗುಜರಾತ್, ಸಿಎಸ್​ಕೆ, ಸನ್‌ರೈಸರ್ಸ್, ಮುಂಬೈ, ಲಕ್ನೋ ಮತ್ತು ಡೆಲ್ಲಿ ತಂಡಗಳು ಸೇರಿದ್ದವು. ಇದರಲ್ಲಿ ಕೆಕೆಆರ್ ತಂಡವು ಸೇರುತಿತ್ತು. ಆದರೆ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಯಿತು. ಆಗ ಪಂಜಾಬ್ ಇದ್ದ ಫಾರ್ಮ್​ ನೋಡಿದರೆ, ಆ ಪಂದ್ಯದಲ್ಲೂ ಪಂಜಾಬ್ ಗೆಲ್ಲುವುದರಲ್ಲಿ ಅನುಮಾನವಿರಲಿಲ್ಲ.

ಹೀಗಾಗಿ ಮೊದಲ 7 ಪಂದ್ಯಗಳಲ್ಲಿ ಪಂಜಾಬ್ 6 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಮೂಲಕ ಒಟ್ಟು 13 ಅಂಕಗಳು ಪಂಜಾಬ್ ಖಾತೆಯಲ್ಲಿದ್ದವು. ಹೀಗಾಗಿ ಉಳಿದಿರುವ 7 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು ಪಂಜಾಬ್ ಸುಲಭವಾಗಿ ಪ್ಲೇಆಫ್‌ಗೇರುತ್ತದೆ ಎಂಬುದು ಖಚಿತವಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿನ ಸೋಲಿನೊಂದಿಗೆ ಆರಂಭವಾದ ಪಂಜಾಬ್ ಪತನ ಇದೀಗ ಅದನ್ನು ಟೂರ್ನಿಯಿಂದಲೇ ಹೊರದಬ್ಬಿದೆ.

ಸತತ 6 ಸೋಲುಗಳು

ವಾಸ್ತವವಾಗಿ ರಾಜಸ್ಥಾನ್ ವಿರುದ್ಧದ ತನ್ನ 8ನೇ ಪಂದ್ಯದಲ್ಲಿ ಪಂಜಾಬ್ 6 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿತ್ತು. ಅದೇ ಪಂದ್ಯದಲ್ಲಿ ಪಂಜಾಬ್, ಆರ್​ಸಿಬಿ ತಂಡವನ್ನು ಗೇಲಿ ಮಾಡಿ ಕೋಟ್ಯಾಂತರ ಅಭಿಮಾನಿಗಳ ಹಿಡಿಶಾಪಕ್ಕೂ ಗುರಿಯಾಯಿತು. ಸತತ ಗೆಲುವುಗಳ ಅಲೆಯಲ್ಲಿ ತೇಲುತ್ತಿದ್ದ ಪಂಜಾಬ್, ಸೋಶಿಯಲ್ ಮೀಡಿಯಾದಲ್ಲಿ ಅನಗತ್ಯ ಪೋಸ್ಟ್​​ವೊಂದನ್ನು ಹಂಚಿಕೊಂಡು ಆರ್​​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದಿನಿಂದ ಆರ್​ಸಿಬಿ ಅಭಿಮಾನಿಗಳು ಕೂಡ ಪಂಜಾಬ್ ತಂಡವನ್ನು ಕಂಡರೆ ಉರಿದು ಬೀಳುತ್ತಿದ್ದರು.

ಆರ್​ಸಿಬಿಯ ಕಾಲೆಳೆದಿದ್ದ ಪಂಜಾಬ್

ಏಪ್ರಿಲ್ 28 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ಮೊದಲ 4.3 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 49 ರನ್ ಕಲೆಹಾಕಿತ್ತು. ಈ ಸ್ಕೋರ್ ಕಾರ್ಡ್​ ಅನ್ನು ಪಂಜಾಬ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಮೂಲಕ ಪಂಜಾಬ್, ಆರ್​ಸಿಬಿ ತಂಡವನ್ನು ಗೇಲಿ ಮಾಡುವ ಕೆಲಸ ಮಾಡಿತ್ತು.

ಐಪಿಎಲ್‌ನಲ್ಲಿ ಆರ್​ಸಿಬಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. 2017 ರಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ 137 ರನ್​ಗಳ ಗುರಿ ಬೆನ್ನಟ್ಟಿದ್ದ ಆರ್​ಸಿಬಿ 49 ರನ್​ಗಳಿಗೆ ಆಲೌಟ್ ಆಗಿ ಅವಮಾನಕರ ಸೋಲಿಗೆ ಕೊರಳೊಡ್ಡಿತ್ತು. ಅಂದಿನ ಕಹಿ ಘಟನೆಯನ್ನು ಆರ್​ಸಿಬಿಗೆ ಮತ್ತೆ ನೆನೆಪಿಸುವ ಕೆಲಸವನ್ನು ಪಂಜಾಬ್ ಮಾಡಿತ್ತು. ಪಂಜಾಬ್​ ಮಾಡಿದ್ದ ಪೋಸ್ಟ್​ ಆರ್​ಸಿಬಿ ಫ್ರಾಂಚೈಸಿ ಹಾಗೂ ಅದರ ಅಭಿಮಾನಿಗಳನ್ನು ಕೆರಳಿಸಿತ್ತು.

IPL 2026: ಪ್ಲೇಆಫ್​ನಲ್ಲಿ 4 ತಂಡಗಳ ಸ್ಥಾನ ಖಚಿತ; ಹೇಗಿರಲಿದೆ ಪ್ಲೇಆಫ್‌ ಸುತ್ತು?

ಕಾಲೆಳೆದ ಬಳಿಕ ಪಂಜಾಬ್​ಗೆ ಸತತ ಸೋಲು

ಕಾಕತಾಳೀಯವೆಂಬಂತೆ ಸುಖಾಸುಮ್ಮನೆ ಆರ್​ಸಿಬಿ ತಂಡವನ್ನು ಕೆಣಕ್ಕಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದ ಪಂಜಾಬ್ ಕಿಂಗ್ಸ್ ಸತತ ಸೋಲುಗಳಿಗೆ ಕೊರಳೊಡ್ಡಬೇಕಾಯಿತು. ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಸೇರಿಂದತೆ ಪಂಜಾಬ್ ಮುಂದಿನ 6 ಪಂದ್ಯಗಳನ್ನು ಸೋತಿತು. ಈ ಸತತ ಸೋಲುಗಳು ಪಂಜಾಬ್ ತಂಡವನ್ನು ಪ್ಲೇಆಫ್‌ ರೇಸ್​ನಿಂದ ಭಾಗಶಃ ಹೊರದಬ್ಬಿದವು. ಆದಾಗ್ಯೂ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದಿದ್ದ ಪಂಜಾಬ್ ಅದೃಷ್ಟದ ಕಡೆಗೆ ಮುಖ ಮಾಡಿ ಕುಳಿತಿತ್ತು. ಆದರೆ ಪಂಜಾಬ್​ಗಿದ್ದ ಕೊನೆಯ ಅವಕಾಶವನ್ನು ಕಿತ್ತುಕೊಂಡ ರಾಜಸ್ಥಾನ್ ಪ್ಲೇಆಫ್‌ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ.

Published On – 10:06 pm, Sun, 24 May 26

Source link

ಭಟ್ಕಳ: ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ – Kannada News | Bhatkal Moori Katte Controversy: Police Attacked After Structure Demolished by Muslim Leaders

ಕಾರವಾರ, ಮೇ 24: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಧಾರ್ಮಿಕ ಮೂರಿಕಟ್ಟೆ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರೀ ವಿವಾದ ಸೃಷ್ಟಿಯಾಗಿದ್ದು, ಮುಸ್ಲಿಂ ಸಂಘಟನೆಯೊಂದರ ಪ್ರಮುಖರು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಉದ್ವಿಗ್ನ ಘಟನೆ ಭಾನುವಾರ ನಡೆದಿದೆ. ಭಟ್ಕಳದ ಜಾಗಟೆ ಕಟ್ಟೆ ಎಂಬಲ್ಲಿದ್ದ ಐತಿಹಾಸಿಕ ಮೂರಿಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಸುಪರ್ದಿಗೆ ಒಳಪಡುವ ಅದೇ ಜಾಗದಲ್ಲಿ ಮುಂಜಾನೆ ಮೂರಿಕಟ್ಟೆಯನ್ನು ಮರು ನಿರ್ಮಾಣ ಮಾಡಿದ್ದರು. ಆದರೆ, ಈ ನಿರ್ಮಾಣಕ್ಕೆ ಸ್ಥಳೀಯ ಮುಸ್ಲಿಂ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು ಹಾಗೂ ಕಟ್ಟೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಪಟ್ಟು ಹಿಡಿದಿದ್ದರು. ಜಾಗಟೆ ಕಟ್ಟೆ ಬಳಿ ಏಕಾಏಕಿ ಜಮಾಯಿಸಿದ ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರ ಗುಂಪು, ಬೆಳಿಗ್ಗೆ ನಿರ್ಮಿಸಲಾಗಿದ್ದ ಮೂರಿಕಟ್ಟೆಯನ್ನು ಒಡೆದು ಹಾಕಿದ್ದಾರೆ. ಈ ವೇಳೆ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವನ್ನು ನಿಯಂತ್ರಿಸಲು ಮುಂದಾದ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್: ಕಾಂಗ್ರೆಸ್​​ನಲ್ಲಿ ಸಂಚಲನ – Kannada News | Congress High command calls and invite Siddaramaiah And DK Shivakumar On May 26

ಬೆಂಗಳೂರು, (ಮೇ 24): ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್​​​​ಗೆ (DK Shivakumar) ಹೈಕಮಾಂಡ್​ನಿಂದ ಬುಲಾವ್ ಬಂದಿದೆ. ಹೌದು… ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲಗಳನ್ನ
ಕೇರಳದಲ್ಲಿ ಸರ್ಕಾರ ರಚನೆ ನಂತರ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಅದರಂತೆ ಇದೀಗ ರಾಜ್ಯದತ್ತ ಚಿತ್ತ ಹರಿಸಿದ್ದು, ಮಂಗಳವಾರ ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್​​​ನಲ್ಲಿ ಸಂಚಲನ ಮೂಡಿಸಿದೆ.

Source link

ಸಂಘಟನೆಯಲ್ಲಿ ಹಿಂದೆ ಇದ್ದೀರಿ: ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸಲಹೆ-ಸೂಚನೆ ನೀಡಿದ ನಿತಿನ್ ನಬಿನ್ – Kannada News | Bjp national president nitin nabin Gives Some suggestion And tips to Karnataka Leaders, here Is Details

ಬೆಂಗಳೂರು, (ಮೇ 24): ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿರುವ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (nitin nabin )ಇಡೀ ದಿನ ವಿವಿಧ ಸಂಘಟನಾ ಸಭೆ ನಡೆಸಿದ್ದಾರೆ. ಸಂಘಟನೆಯ ಕುರಿತು ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಮಾಡಿರುವ ನಬಿನ್, ಸಂಘಟನೆ ಇಲ್ಲದೇ ಮನೆಯಲ್ಲಿ ಕುಳಿತರೆ ಸರ್ಕಾರ ತರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಹೌದು…ಇಂದು (ಮೇ 24)ಭಾನುವಾರ ನಗರದ ಪಕ್ಷದ ಕಚೇರಿಯಲ್ಲಿ ರಾಜ್ಯ ನಾಯಕರ ಜೊತೆ ಸಂಘಟನಾ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಪಠಿಸಿದ್ದು, ಪಶ್ಚಿಮ ಬಂಗಾಳ ಮಾದರಿಯಲ್ಲಿ ಸಂಘಟನೆ, ಹೋರಾಟ ನಡೆಸುವಂತೆ ಸೂಚನೆ ನೀಡಿದ್ದಾರೆ. ನೀವು ಪಕ್ಷ ಸಂಘಟನೆಯಲ್ಲಿ ಬಹಳ ಹಿಂದೆ ಇದ್ದೀರಿ. ಚುನಾವಣೆ ಬಂತು ಅಂತಾ ಬರೀ ಹೇಳಿದರೆ ಸಾಲದು. ಅದಕ್ಕೆ ತಕ್ಕಂತೆ ಸಂಘಟನಾ ಕೆಲಸ ಆಗಬೇಕು. ಈಗಿನ ಪಕ್ಷ ಸಂಘಟನೆ ಇಟ್ಟುಕೊಂಡು ಚುನಾವಣೆ ಗೆಲ್ಲವುದು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗಿ. ಅದಕ್ಕೆ ಬೇಕಾದ ಸಹಕಾರ ಏನಿದೆಯೋ ಅದನ್ನು ನಾವು ಮಾಡುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.

ನಿತಿನ್ ನಬಿನ್ ನೇತೃತ್ವದಲ್ಲಿ ನಡೆದ ಸಂಘಟನಾ ಸಭೆಯಲ್ಲಿ ರಾಜ್ಯದ ನಾಯಕರಿಗೆ ಹತ್ತು ಹಲವು ಸಂದೇಶಗಳನ್ನು ರವಾನಿಸುವ ಸೂಚನೆಗಳನ್ನು ನೀಡಿದ್ದಾರೆ.ರಾಜ್ಯ ಬಿಜೆಪಿ ಸಂಘಟನೆ ಸಂಬಂಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಗ್ರೌಂಡ್ ಮಟ್ಟದಲ್ಲಿ ಹೋರಾಟ ನಡೆಸುವಂತೆ ತಾಕೀತು ಮಾಡಿದ್ದಾರೆ. ಸದ್ಯದ ರಾಜ್ಯ ನಾಯಕರ ಹೋರಾಟ, ಸಂಘಟನೆ ಬಗ್ಗೆ ಪರೋಕ್ಷವಾಗಿ ಅತೃಪ್ತಿ ಹೊರಹಾಕಿದ ನಬಿನ್, ಇನ್ಮುಂದೆ ಶಾಸಕರು, ನಾಯಕರು ತಳಮಟ್ಟಕ್ಕೆ ಹೋಗಿ ಸರ್ಕಾರದ ವೈಫಲ್ಯಗಳ ಬಗ್ಗೆ ಆಂದೋಲನ ನಡೆಸಬೇಕು ಎಂದು ತಾಕೀತು ಮಾಡಿದ್ದಾರೆ.

ಇದನ್ನೂ ನೋಡಿ: ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು

ಸಂಘಟನೆಯಲ್ಲಿ ಹಿಂದೆ ಇದ್ದೀರಿ ಎಂದ ನಿತಿನ್ ನಬಿನ್

ಒಂದೂವರೆ ಗಂಟೆ ಕಾಲ ನಡೆದ ಭಾಷಣ ಮತ್ತು ಸಂವಾದ ರೂಪದ ಸಭೆಯಲ್ಲಿ ಶಾಸಕರು, ರಾಜ್ಯ ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರಲ್ಲಿ ಒಬ್ಬೊಬ್ಬರಿಂದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನಿತಿನ್ ನಬಿನ್ ಪಡೆದುಕೊಂಡಿದ್ದಾರೆ. ಇನ್ನು ಇದೇ ವೇಳೆ ರಾಜ್ಯ ಪದಾಧಿಕಾರಿಗಳಿಗೆ ಒಂದೊಂದು ಜಿಲ್ಲೆಯ ಉಸ್ತುವಾರಿ ಕೊಟ್ಟಿಲ್ಲ ಎಂಬ ಮಾಹಿತಿ ತಿಳಿದು ಅಚ್ಚರಿಗೊಂಡು ಸಭೆಯಲ್ಲಿ ಅಚ್ಚರಿಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಕಡೆ ತಿರುಗಿ ನೋಡಿದ್ದಾರೆ. ಬಳಿಕ ಎಲ್ಲಾ ರಾಜ್ಯ ಪದಾಧಿಕಾರಿಗಳೂ ತಲಾ ಒಂದು ಜಿಲ್ಲೆ ಉಸ್ತುವಾರಿ ನೋಡಬೇಕು ಎಂದು ಸೂಚಿಸಿದ್ದಾರೆ. ಶಾಸಕರು ತಮ್ಮ ಗೆಲುವನ್ನು ಖಾತ್ರಿಪಡಿಸಿಕೊಳ್ಳಲು ಜನರನ್ನು ಸಂಪರ್ಕಿಸುತ್ತಿದ್ದರೆ ಸಾಲದು. ಪಕ್ಷಕ್ಕೆ ನೀವು ಏನು ಮಾಡಿದ್ದೀರಿ? ಸಂಘಟನೆ ಬಲಗೊಳಿಸಲು ಏನು ಮಾಡಿದ್ದೀರಿ ಎನ್ನುವುದು ಮುಖ್ಯ ಎಂದಿದ್ದಾರೆ. ಸಂಘಟನಾ ಸಭೆಯ ಬಳಿಕ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿದ ನಿತಿನ್ ನಬಿನ್ ಸಂಘಟನಾ ವಿಚಾರದಲ್ಲಿ ರಾಜ್ಯ ಬಿಜೆಪಿ ಹಿಂದೆ ಇದೆ ಎಂಬುದನ್ನು ನೇರವಾಗಿ ಹೇಳಿದ್ದಾರೆ.

ಸಭೆಯಲ್ಲಿ ನಿತಿನ್ ನಬಿನ್ ಒತ್ತು ನೀಡಿದ ಅಂಶಗಳು

ಜಿಲ್ಲಾಧ್ಯಕ್ಷರ ಕರ್ತವ್ಯಗಳು, ಶಾಸಕರು ಕೆಲಸ ಮಾಡಬೇಕಾದ ರೀತಿ, ರಾಜ್ಯ ಪದಾಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿ, ಬೂತ್ ಮಟ್ಟದವರೆಗೆ ಪಕ್ಷ ಸಂಘಟಿತವಾಗಿ ಕೆಲಸ ಮಾಡಬೇಕಾದ ರೀತಿ. ಪ್ರಧಾನಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕಾದ ರೀತಿ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಸಂಘಟನೆ ಗೆಲುವಿಗಾಗಿ ದೀರ್ಘ ಕಾಲ ನಡೆಸಿದ ಸಿದ್ಧತೆ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಸರ್ಕಾರದ ಸಾಧನೆ ಮತ್ತು ಸಂಘಟನೆಯ ಜಂಟಿ ಪರಿಣಾಮ.ಪಶ್ಚಿಮ ಬಂಗಾಳದಲ್ಲಿ ಐದು ವರ್ಷಗಳಿಂದ ಸವಾಲುಗಳನ್ನು ಎದುರಿಸಿ ಮಾಡಿದ ಸಂಘಟನೆ. ತಮಿಳುನಾಡು ಮತ್ತು ಕೇರಳದಲ್ಲಿ ಎದುರಿಸಿದ ಸವಾಲುಗಳು. ಕರ್ನಾಟಕದಲ್ಲಿ ಮುಂದಿನ ಕಾರ್ಯ ಯೋಜನೆ. ಇದಿಷ್ಟೇ ಅಲ್ಲದೇ ಎಸ್ ಐಆರ್, ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಟ್ರೆಂಡ್ ಸೇರಿದಂತೆ ಕೆಲವು ಮಹತ್ವದ ಅಂಶಗಳನ್ನು ಕೂಡಾ ಸಭೆಯಲ್ಲಿ ನಿತಿನ್ ನಬಿನ್ ಎಚ್ಚರಿಕೆಯ ರೀತಿಯಲ್ಲೇ ಉಲ್ಲೇಖಿಸಿದ್ದಾರೆ.

ಎಸ್​​​​ಐಆರ್ ಅನ್ನು ಚುನಾವಣೆ ರೀತಿ ಪರಿಗಣಿಸಿ

ಇನ್ನು ಯಲಹಂಕ ಸಮೀಪದ ಸಿಂಗನಾಯಕನಹಳ್ಳಿಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಪ್ರಶಿಕ್ಷಣ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ನಿತಿನ್ ನಬಿನ್, ರಾಜ್ಯ ಬಿಜೆಪಿ ಎಸ್ ಐಆರ್ ನಿರ್ವಹಣಾ ತಂಡದ ಸಭೆಯನ್ನೂ ನಡೆಸಿ ನಿರ್ದೇಶನಗಳನ್ನೂ ನೀಡಿದ್ದಾರೆ.

ಎಸ್​​ಐಆರ್​​ನ್ನು ಚುನಾವಣೆ ರೀತಿಯಲ್ಲಿ ಪರಿಗಣಿಸಿ ಕೆಲಸ ಮಾಡಿ. ಅರ್ಹ ಮತದಾರರು ಡಿಲೀಟ್ ಆಗದಂತೆ, ಅನರ್ಹರು ಮತದಾರರ ಪಟ್ಟಿಯಲ್ಲಿ ಇರದಂತೆ ನಿಗಾವಹಿಸಿ. ಎಸ್​​ಐಆರ್​​ನ್ನು ಚುನಾವಣೆ ರೀತಿಯಾಗಿ ತೆಗೆದುಕೊಂಡು ಕೆಲಸ ಮಾಡಿದರೆ, ಜಿಬಿಎ ಚುನಾವಣೆಯನ್ನು ಗೆಲ್ಲಬಹುದು. ಜಿಬಿಎ ಚುನಾವಣೆ ಗೆದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸುಲಭವಾಗಲಿದೆ. ಈ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು 2028ರ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.

Source link

ಸುಪ್ರೀಂ ಕೋರ್ಟ್ ಹೆಸರಲ್ಲೇ ವಂಚನೆ: ಜೈಲಿನಿಂದ ಎಸ್ಕೇಪ್ ಆಗಿದ್ದ ಕೈದಿಯ ಕಳ್ಳಾಟ 8 ವರ್ಷದ ಬಳಿಕ ಬಯಲು – Kannada News | Parappana Agrahara Jail Escape: Prisoner Used Fake Supreme Court Order, Exposed After 8 Years

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹImage Credit source: thehindu

ಆನೇಕಲ್, ಮೇ 24: ಬೆಂಗಳೂರಿನಲ್ಲಿ (bangaluru) ಹೈ ಸೆಕ್ಯೂರಿಟಿ ಜೈಲು ಎಂದೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ (parappana agrahara jail) ಹೆಸರಾಗಿದೆ. ಹೀಗಿರುವಾಗ ಚಾಲಾಕಿ ಕೈದಿಯೊಬ್ಬ (prisoner) ಜೈಲಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಹೊರಗೆ ಬಂದಿದ್ದ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್​ನ ನಕಲಿ ಆದೇಶ ಸೃಷ್ಟಿ ಮಾಡಿ ಜೈಲಿನಿಂದ ರಿಲೀಸ್ ಆಗಿ ಇದೀಗ ಎಂಟು ವರ್ಷಗಳ ಬಳಿಕ ಆತನ ಕಳ್ಳಾಟ ಬಯಲಾಗಿದೆ. ಸದ್ಯ ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ನಕಲಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಸೃಷ್ಟಿ
  • 8 ವರ್ಷಗಳ ಬಳಿಕ ಕೈದಿಯ ಮಹಾ ವಂಚನೆ ಬಯಲು
  • ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

ನಡೆದಿದ್ದೇನು?

ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಮತ್ತು ಆತನ ಗ್ಯಾಂಗ್ 2001ರಲ್ಲಿ ಭಾರೀ ಮೊತ್ತದ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್, ಶಂಕರ್‌ನನ್ನು ಅಪರಾಧಿ ಎಂದು ಘೋಷಿಸಿ ಐಪಿಸಿ ಸೆಕ್ಷನ್ 364A (ಹಣಕ್ಕಾಗಿ ಅಪಹರಣ) ಮತ್ತು 120B (ಸಂಚು ರೂಪಿಸುವಿಕೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೋರ್ಟ್ ಆದೇಶದಂತೆ ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ.

ಸಿನಿಮೀಯ ಸ್ಕೆಚ್

ಜೈಲಿನಲ್ಲಿದ್ದ ಶಂಕರ್ ಆರ್ಮುಗಮ್ ಹೊರಬರಲು ಮಾಸ್ಟರ್​​ ಪ್ಯಾನ್​​ ಹಾಕಿದ್ದ. ತನಗೆ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ಬಿಂಬಿಸುವ ನಕಲಿ ಆದೇಶ ಪತ್ರವನ್ನು ತಾನೇ ಖುದ್ದು ಸೃಷ್ಟಿಸಿದ್ದ. ಈ ನಕಲಿ ದಾಖಲೆಯನ್ನು ಜೈಲು ಅಧಿಕಾರಿಗಳ ಕೈಗಿಟ್ಟು, ಕೇವಲ 10 ಸಾವಿರ ರೂ ದಂಡ ಪಾವತಿಸಿ, 2018 ನವೆಂಬರ್ 13ರಂದು ರಾಜಾರೋಷವಾಗಿ ಜೈಲಿನಿಂದ ಹೊರಬಂದಿದ್ದ.

ಅನಾಮಧೇಯ ಪತ್ರದಿಂದ ಬಯಲಾದ ಸತ್ಯ

ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಒಂದು ರಹಸ್ಯ ಅನಾಮಧೇಯ ಪತ್ರ ಬಂದಿದೆ. ಆ ಪತ್ರದ ಆಧಾರದ ಮೇಲೆ ಜೈಲು ಇಲಾಖೆ ಆಂತರಿಕ ತನಿಖೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ತನಿಖೆಯಲ್ಲಿ ಶಂಕರ್ ಸಲ್ಲಿಕೆ ಮಾಡಿದ್ದ ಸುಪ್ರೀಂ ಕೋರ್ಟ್ ಆದೇಶ ಸಂಪೂರ್ಣ ನಕಲಿ ಅನ್ನೋದು ಸಾಬೀತಾಗಿದೆ. ಕೇವಲ ಕೈದಿಯೊಬ್ಬನೇ ಇಷ್ಟು ದೊಡ್ಡ ಸಾಹಸ ಮಾಡಲು ಸಾಧ್ಯವಿಲ್ಲ. ಜೈಲಿನ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಅವರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಎಲ್ಲಾ ಆಯಾಮದಲ್ಲೂ ತನಿಖೆ ನಡೆದಿದೆ.

ಇದನ್ನೂ ಓದಿ: ಒಬ್ಬ ಖದೀಮ ಮೂರು ಮಾದರಿಯಲ್ಲಿ ಕಳ್ಳತನ: ಮಲ್ಟಿ ಟ್ಯಾಲೆಂಟೆಡ್ ಕಳ್ಳ ಕೊನೆಗೂ ಅರೆಸ್ಟ್

ಸದ್ಯ ಫೋರ್ಜರಿ ಮತ್ತು ವಂಚನೆ ಅಡಿಯಲ್ಲಿ ಶಂಕರ್ ಆರ್ಮುಗಮ್ ವಿರುದ್ಧ ಹೊಸದಾಗಿ ಪ್ರಕರಣ ದಾಖಲಾಗಿದ್ದು, ದೇಶದ ಕಾನೂನು ವ್ಯವಸ್ಥೆಗೆ ಸವಾಲು ಹಾಕಿದ ಈ ಖತರ್ನಾಕ್ ಕೈದಿ ಹಾಗೂ ಆತನಿಗೆ ಸಾಥ್ ನೀಡಿದವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ? – Kannada News | Manoj Night Shyamalan is Indian origin Hollywood famous director

ಭಾರತೀಯರು (India) ಎಲ್ಲಿಲ್ಲ? ಎಲ್ಲೆಡೆ ಇದ್ದಾರೆ, ಎಲ್ಲ ಕ್ಷೇತ್ರಗಳಲ್ಲಿ, ಎಲ್ಲ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಶೇಷವಾಗಿ ಐಟಿ, ಉದ್ಯಮದ ಕ್ಷೇತ್ರಗಳಲ್ಲಿ ಭಾರತೀಯರು ಹಲವು ದೇಶಗಳಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಆದರೆ ಸಿನಿಮಾ ವಿಷಯವಾಗಿ ವಿಶೇಷವಾಗಿ ಆಸ್ಕರ್​​​ನಲ್ಲಿ ಭಾರತೀಯ ಸಾಧನೆ ತುಸು ಕಡಿಮೆ ಎನ್ನಬಹುದು. ಆದರೆ ಭಾರತೀಯರೊಬ್ಬರು ಹಾಲಿವುಡ್​ನ ಸ್ಟಾರ್ ನಿರ್ದೇಶಕರಾಗಿ ಮಿಂಚುತ್ತಿರುವ ವಿಷಯ ನಿಮಗೆ ಗೊತ್ತೆ? ಈ ಸಿನಿಮಾ ನಿರ್ದೇಶಕನ ಹೆಸರು ನಿಮಗೆ ತಿಳಿಯದೇ ಇರಬಹುದು ಆದರೆ ನೀವು ಸಿನಿಮಾ ಪ್ರೇಮಿ ಆಗಿದ್ದರೆ ಖಂಡಿತ ಈ ವ್ಯಕ್ತಿ ನಿರ್ದೇಶನ ಮಾಡಿರುವ ಕೆಲ ಸಿನಿಮಾಗಳನ್ನಾದರೂ ನೋಡಿಯೇ ಇರುತ್ತೀರಿ.

ಎಂ ನೈಟ್ ಶ್ಯಾಮಲನ್ ಎಂದರೆ ಹೆಚ್ಚು ಜನರಿಗೆ ಗೊತ್ತಾಗದೇ ಇರಬಹುದು ಆದರೆ ‘ದಿ ಸಿಕ್ಸ್ತ್ ಸೆನ್ಸ್’ ಸಿನಿಮಾ ಹೆಸರು ಕೇಳದೇ ಇರುವ ಸಿನಿಮಾ ಪ್ರೇಮಿಗಳು ಕಡಿಮೆ. ಅದ್ಭುತ ಸಸ್ಪೆನ್ಸ್ ಜೊತೆಗೆ ಜೀವನದ ಕುರಿತು ಮಹತ್ವದ ವಿಷಯಗಳನ್ನು ಹೇಳುವ ಆ ಸಿನಿಮಾ ಹಾಲಿವುಡ್​ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ನಿರ್ದೇಶಕನ ಹೆಸರು ಎಂ ನೈಟ್ ಶ್ಯಾಮಲ್, ಈ ವ್ಯಕ್ತಿಯ ಪೂರ್ತಿ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಮೂಲತಃ ಮಲಯಾಳಿ ಆದ ಇವರು ಹಾಲಿವುಡ್​ನ ಸ್ಟಾರ್ ನಿರ್ದೇಶಕರುಗಳಲ್ಲಿ ಒಬ್ಬರು.

1970ರಲ್ಲಿ ಭಾರತದ ಪುದುಚೇರಿಯಲ್ಲಿ ಜನಿಸಿದ ಮನೋಜ್ ಶ್ಯಾಮಲನ್, ನಂತರ ತಮ್ಮ ಕುಟುಂಬದೊಂದಿಗೆ ಅಮೆರಿಕಕ್ಕೆ ತೆರಳಿದರು. ಅವರ ತಂದೆ-ತಾಯಿ ಇಬ್ಬರೂ ವೈದ್ಯರು. ಮೂಲತಃ ಕೇರಳದ ಮಲಯಾಳಿ ಕುಟುಂಬಕ್ಕೆ ಸೇರಿದ ಮನೋಜ್, ಅಮೆರಿಕದಲ್ಲಿ ಬೆಳೆದರೂ, ತಮ್ಮ ಹೆಸರಿನಲ್ಲೇ ಭಾರತೀಯ ಗುರುತನ್ನು ಉಳಿಸಿಕೊಂಡಿದ್ದು ಅವರ ವಿಶೇಷತೆ. ಹಾಲಿವುಡ್‌ನಲ್ಲಿ ಅನೇಕರು ತಮ್ಮ ಮೂಲ ಹೆಸರನ್ನು ಬದಲಾಯಿಸುವಾಗ, ಅವರು ‘ಶ್ಯಾಮಲನ್’ ಎಂಬ ಭಾರತೀಯ ಹೆಸರಿನೊಂದಿಗೆ ಜಾಗತಿಕ ಖ್ಯಾತಿ ಗಳಿಸಿದರು.

ಇದನ್ನೂ ಓದಿ:ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗ ಬಳಿಕ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ ಜಾಹ್ನವಿ

ಮನುಜ್ ಶ್ಯಾಮಲನ್ ಹಾಲಿವುಡ್‌ನಲ್ಲಿ ವಿಭಿನ್ನ ಕಥೆ ಹೇಳುವ ಶೈಲಿಯಿಂದ ಪ್ರಸಿದ್ಧರಾದರು. ರಹಸ್ಯ, ಮನೋವೈಜ್ಞಾನಿಕ ಥ್ರಿಲ್ಲರ್ ಮತ್ತು ಕೊನೆಯಲ್ಲಿ ಅಚ್ಚರಿಯ ತಿರುವು ನೀಡುವ ಚಿತ್ರಗಳು ಅವರ ವಿಶೇಷ ಗುರುತು. ಅವರ ನಿರ್ದೇಶನದ ‘ದಿ ಸಿಕ್ಸ್ತ್ ಸೆನ್ಸ್’ (The Sixth Sense) ಸಿನಿಮಾ ವಿಶ್ವಾದ್ಯಂತ ದೊಡ್ಡ ಯಶಸ್ಸು ಕಂಡಿತು. ಈ ಚಿತ್ರ ಅವರಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು ಹಾಗೂ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆಯುವ ಮಟ್ಟಕ್ಕೆ ಏರಿಸಿತು. ನಂತರ ಅವರು ನಿರ್ದೇಶಿಸಿದ ‘ಸೈನ್ಸ್’ (Signs), ‘ಅನ್​​ಬ್ರೇಕೆಬಲ್’, ‘ಸ್ಪಿಲಿಟ್’ ಮತ್ತು ‘ಗ್ಲಾಸ್’ ಚಿತ್ರಗಳು ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯವಾದವು. ವಿಶೇಷವಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿ, ಜಾಗತಿಕ ಮಟ್ಟದಲ್ಲಿ ದೊಡ್ಡ ಆದಾಯ ಗಳಿಸುವ ನಿರ್ದೇಶಕರಲ್ಲಿ ಅವರು ಒಬ್ಬರು.

ಭಾರತೀಯರು ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ನಟರಾಗಿ ಕಾಣಿಸಿಕೊಂಡಿದ್ದು ಮಾತ್ರ, ಒಂದು ಭಾರತೀಯ ಮೂಲದ ವ್ಯಕ್ತಿ ಸ್ವತಃ ದೊಡ್ಡ ಸ್ಟುಡಿಯೋ ಮಟ್ಟದ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕರಾಗಿ ಬೆಳೆದಿರುವುದು ಅಪರೂಪದ ಸಾಧನೆ. ಶ್ಯಾಮಲನ್ ಆ ಅಡೆತಡೆಯನ್ನು ಮುರಿದವರು. ದಕ್ಷಿಣ ಭಾರತೀಯ ಹಿನ್ನೆಲೆಯ ವ್ಯಕ್ತಿಯಾಗಿ ಹಾಲಿವುಡ್‌ನಂತಹ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿರುವುದು ಅನೇಕ ಯುವ ಭಾರತೀಯರಿಗೆ ಪ್ರೇರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link