ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ – Kannada News | Gadag: What Was Discovered on the Fourth Day of Excavations at Lakkundi; Here Are the Details
ಲಕ್ಕುಂಡಿ ಗ್ರಾಮದಲ್ಲಿ 4ನೇ ದಿನದ ಉತ್ಖನನ ಕಾರ್ಯ ಗದಗ, ಜನವರಿ 19: ಲಕ್ಕುಂಡಿ (Lakkundi) ಶಿಲ್ಪಕಲೆಗಳ, ದೇವಾಲಯಗಳ ಸ್ವರ್ಗ, ಚಿನ್ನದ ನಾಡು. ಇಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಕೋಟೆ ಗೋಡೆಯಲ್ಲಿ ಹುದುಗಿ ಹೋಗಿರುವ ರಾಶಿ ರಾಶಿ ಶಿಲ್ಪಕಲೆಗಳು ಟಿವಿ9 ಕ್ಯಾವೆರಾದಲ್ಲಿ ಸೆರೆಯಾಗಿವೆ. ಈ ನಡುವೆ ಉತ್ಖನ ನಡೆಯುತ್ತಿರುವ ಜಾಗದಲ್ಲಿ ಇಂದು ಕೂಡ ಪುರಾತನ ಶಿಲೆಗಳು ಪತ್ತೆಯಾಗಿವೆ. ಪುರಾತನ ಕಾಲದ ಕೊಡಲಿ, ಗಂಟೆ, ನಾಗರ ಮೂರ್ತಿ, ಶಿವಲಿಂಗದ ಪಾನಿ ಪೀಠ ಸೇರಿದಂತೆ ಹಲವು…