Headlines

ಅಕ್ಕಿ ತೊಳೆದ ನೀರನ್ನು ವೇಸ್ಟ್‌ ಎಂದು ಚೆಲ್ಲಬೇಡಿ, ಅದನ್ನು ಈ ರೀತಿಯಾಗಿ ಉಪಯೋಗಿಸಿ – Kannada News | Instead of throwing away the rice water, use it this way

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಅನ್ನ ಮಾಡಲಾಗುತ್ತದೆ. ಹೀಗೆ ಅನ್ನ ಮಾಡುವ ಸಂದರ್ಭದಲ್ಲಿ ಅಕ್ಕಿ ತೊಳೆದ ನೀರನ್ನು (Rice Water) ಅನುಪಯುಕ್ತ ಎಂದು ಚೆಲ್ಲುವವರೇ ಹೆಚ್ಚು. ಆದರೆ ನೀರಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಖನಿಜಗಳಿದ್ದು, ಇದು ಚರ್ಮದಿಂದ ಹಿಡಿದು ಕೂದಲಿನವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಇದರ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹಾಗಿದ್ದರೆ ಅಕ್ಕಿ ತೊಳೆದ ನೀರಿನ ಉಪಯೋಗಗಳೇನು, ಅದನ್ನುಬಳಸುವುದೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ. ಅಕ್ಕಿ ತೊಳೆದ ನೀರಿನ ಉಪಯೋಗಗಳೇನು? ಸಸ್ಯಗಳಿಗೆ ಹಾಕಬಹುದು:  ಅನೇಕ ಜನರು ಅಕ್ಕಿ…

Read More

ಅಭಿಮಾನಿಗಳಿಗೆ ರಸದೌತಣ; ಒಂದೇ ದಿನ ಭಾರತ- ಪಾಕ್ ನಡುವೆ 2 ಪಂದ್ಯಗಳು! ಯಾವಾಗ ಗೊತ್ತಾ? – Kannada News | Double Thrill! India Pak T20 World Cup and Women’s Asia Cup Matches on Feb 15

ಭಾರತ ಹಾಗೂ ಪಾಕಿಸ್ತಾನ (india vs pakistan) ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಹಬ್ಬದಂತಹ ಸಂಭ್ರಮ. ಹೀಗಿರುವಾಗ ಈ ಎರಡೂ ತಂಡಗಳು ಯಾವಾಗ ಕಣಕ್ಕಿಳಿಯುತ್ತವೆ ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಒಂದೇ ದಿನ ಭಾರತ- ಪಾಕ್ ನಡುವೆ ಎರಡೆರಡು ಪಂದ್ಯಗಳು ಎಂದರೆ ಕೇಳಬೇಕೆ. ವಾಸ್ತವವಾಗಿ ಐಸಿಸಿ ಟಿ20 ವಿಶ್ವಕಪ್ 2026 (t20 world cup 2026) ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ…

Read More

ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು – Kannada News | Kolar: Black Magic Priest Brutally Murdered After Amavasya Puja in Malur

ಕೋಲಾರ, ಜನವರಿ 19: ಅವರು ಊರಿನಲ್ಲಿ ಕಾಳಿ ದೇವಿಯ ದೇವಾಲಯ ನಿರ್ಮಾಣ ಮಾಡಿಕೊಂಡು ಆರಾಧನೆ ಮಾಡಿಕೊಂಡಿದ್ದರು. ದೇವಾಲಯಕ್ಕೆ ಬರುವ ಜನರಿಗೆ ದೆವ್ವ, ಗಾಳಿ ಬಿಡಿಸುವ ಕೆಲಸವೂ ಮಾಡುತ್ತಿದ್ದರು. ಹೀಗೆ ಮಾಟ-ಮಂತ್ರ ಮಾಡಿಕೊಂಡಿದ್ದ ಪೂಜಾರಿ (priest) ನಿನ್ನೆ ಪುಷ್ಯ ಅಮಾವಾಸ್ಯೆ ಹಿನ್ನೆಲೆ ಪೂಜೆ ಮುಗಿಸಿಕೊಂಡು ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಬರ್ಬರವಾಗಿ ಹತ್ಯೆ (murder) ಮಾಡಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನ ಹರಳೇರಿ ಬಳಿ ಘಟನೆ ನಡೆದಿದೆ. ಆಂಜಿ ಅಲಿಯಾಸ್​ ಆಂಜಿನಪ್ಪ(45) ಕೊಲೆಯಾದ ಪೂಜಾರಿ. ಘಟಣಾ ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು…

Read More

ಕಳಪೆ ಕಾಮಗಾರಿ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್​​, ಹಲ್ಲೆ: ನಕಲಿ ಪತ್ರಕರ್ತರು ಅಂದರ್​ – Kannada News | Three Arrested in Chamarajanagar for Posing as Journalists, Extorting and Assaulting a Man Over Road Work

ಚಾಮರಾಜನಗರ, ಜನವರಿ 19: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಪತ್ರಕರ್ತ ಎಂಬ ಹಣೆ ಪಟ್ಟಿ ಹೊತ್ತು ರಸ್ತೆ ಕಾಮಗಾರಿ ಸಂಬಂಧ ಮೇಸ್ತ್ರಿ ಬಳಿ ಲಕ್ಷಾಂತರ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಘಟನೆ ಯಳಂದೂರು ತಾಲೂಕಿನ ವೈ ಕೆ ಮೊಳೆ ಬಳಿ ನಡೆದಿದೆ. ಹಣ ಕೊಡಲು ಒಪ್ಪದ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಏನು? ಯಳಂದೂರಿನಿಂದ ಬಿ.ಆರ್. ಹಿಲ್ಸ್ ನಡುವೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು,…

Read More

ಪಾಕಿಸ್ತಾನದ ಭಯೋತ್ಪಾದನೆಗೆ ಬೆಂಬಲಿಸಬೇಡಿ; ಪೋಲೆಂಡ್ ಉಪ ಪ್ರಧಾನಿ ಜೊತೆ ಎಸ್. ಜೈಶಂಕರ್ ಚರ್ಚೆ – Kannada News | Minister S Jaishankar told Polish Foreign Minister Dont fuel terrorism in our neighbourhood

ನವದೆಹಲಿ, ಜನವರಿ 19: ಪೋಲೆಂಡ್ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ರಾಡೋಸ್ಲಾ ಸಿಕೋರ್ಸ್ಕಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar), ಪೋಲೆಂಡ್ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಯಾವುದೇ ನೇರ ಅಥವಾ ಪರೋಕ್ಷ ಬೆಂಬಲವನ್ನು ನೀಡದಂತೆ ಮನವಿ ಮಾಡಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೋಲೆಂಡ್ ಸಚಿವ ರಾಡೋಸ್ಲಾ ಸಿಕೋರ್ಸ್ಕಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಸಮಸ್ಯೆಯ ಬಗ್ಗೆ ಮಾತನಾಡಿದ್ದರು….

Read More

IND vs NZ: ಕಿವೀಸ್ ವಿರುದ್ಧ ಹೀನಾಯ ಸೋಲು; ಏಕದಿನ ತಂಡದಿಂದ ಮೂವರಿಗೆ ಗೇಟ್​ಪಾಸ್ – Kannada News | Team India’s ODI Defeat to New Zealand: Jadeja, Krishna, Reddy’s Future Uncertain

ರವೀಂದ್ರ ಜಡೇಜಾ: ಈ ಪಟ್ಟಿಯಲ್ಲಿ ಮೊದಲ ಹೆಸರು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರದು. ಏಕದಿನ ಪಂದ್ಯಗಳಲ್ಲಿ, ಜಡೇಜಾ ತಮ್ಮ ಬೌಲಿಂಗ್ ಅಥವಾ ಬ್ಯಾಟಿಂಗ್‌ನಿಂದ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಜಡೇಜಾ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್ ಕೂಡ ರನ್ ಗಳಿಸುವಲ್ಲಿ ವಿಫಲವಾಯಿತು. ಕಳೆದ ವರ್ಷ, ಜಡೇಜಾ ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, ಕೇವಲ 106 ರನ್ ಗಳಿಸಿದ್ದರು. ಇದರ ಜೊತೆಗೆ ಕೇವಲ 10 ವಿಕೆಟ್‌ಗಳನ್ನು…

Read More

ಭಯ ಜಾಸ್ತಿ ಆಗಿದೆ: ಜನರ ಪ್ರೀತಿ ನೋಡಿ ಬೆಚ್ಚಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ – Kannada News | Bigg Boss Kannada Season 12 Winner Gilli Nata mesmerized by fans love

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಗಿಲ್ಲಿ ನಟ ಅವರು ಹುಟ್ಟೂರಿಗೆ ಮರಳಿದ್ದಾರೆ. ಅವರ ಸ್ವಾಗತಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಅದರಿಂದಾಗಿ ರಸ್ತೆಗಳು ಜಾಮ್ ಆಗಿವೆ. ಅಷ್ಟರಮಟ್ಟಿಗೆ ಕ್ರೇಜ್ ಹೆಚ್ಚಿದೆ. ಈ ವೇಳೆ ಕಿಕ್ಕಿರಿದು ಸೇರಿದ ಜನರ ನಡುವೆ ಟಿವಿ9 ಜೊತೆ ಗಿಲ್ಲಿ ನಟ (Gilli Nata) ಅವರು ಮಾತನಾಡಿದ್ದಾರೆ. ಹುಟ್ಟೂರಿನಲ್ಲಿ ತಮಗೆ ಸಿಗುತ್ತಿರುವ ಪ್ರೀತಿಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ನಾನು…

Read More

ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ – Kannada News | Karnataka DGP Ramachandra rao Reacts about His obscene Viral video

ಬೆಂಗಳೂರು (ಜನವರಿ 19): ಐಜಿಪಿ ರಾಮಚಂದ್ರ ರಾವ್  (DGP Ramachandra rao) ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸ ಸಲ್ಲಾಪ ನಡೆಸಿದ್ದು, ಸದ್ಯ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಇನ್ನು ತಮ್ಮ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಮಚಂದ್ರ ಅವರು ಗೃಹ ಸಚಿವ ಪರಮೇಶ್ವರ್ ಭೇಟಿಗೆ ದೌಡಾಯಿಸಿದ್ದಾರೆ. ಆದ್ರೆ, ಪರಮೇಶ್ವರ್ ಭೇಟಿಗೆ ನಿರಾಕರಿಸಿದ್ದು ಸಪ್ಪೆ ಮುಖದಲ್ಲಿ ರಾಮಚಂದ್ರ ವಾಪಸ್ ಆಗಿದ್ದಾರೆ. ಇನ್ನು ಇದೇ ಡಿಜಿಪಿ ರಾಮಚಂದ್ರ ವೇಳೆ ಮಾಧ್ಯಮಗಳಿಗೆ ಪ್ರತಿಯಿಸಿದ್ದು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಇದು ನನ್ನ ತೇಜೋವಧೆ…

Read More

ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ – Kannada News | Lakkundi Excavation: Ancient Relic Found at Gadag Kote Veerabhadreshwara Temple Site

ಗದಗ, ಜನವರಿ 19: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ 4ನೇ ‌ದಿನದ ಉತ್ಖನನ ಕಾರ್ಯ ವೇಳೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮತ್ತೊಂದು ಪುರಾತನ ಶಿಲೆ ಪತ್ತೆ ಆಗಿದೆ. ಐತಿಹಾಸಿಕ ದೇವಸ್ಥಾನ ಸ್ತಂಭದ ಮತ್ತು ವಿತಾನದ (ಛತ್ತು) ಮಧ್ಯದಲ್ಲಿರುವ ಬೋದಿಗೆ (ಕಂಬದ ಮೇಲ್ಭಾಗದಲ್ಲಿರುವ ಒಂದು ಭಾಗ) ಅವಶೇಷ ಪತ್ತೆ ಆಗಿದೆ. ಸದ್ಯ ಪತ್ತೆಯಾಗಿರುವ ವಿಶೇಷ ಅವಶೇಷಗಳು ಮತ್ತಷ್ಟು ಕುತೂಹಲ‌ ಮೂಡಿಸಿವೆ. ವಿಡಿಯೋ ನೋಡಿ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More

ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಯುವತಿಗೆ 1.7 ಕೋಟಿ ರೂ. ವಂಚಿಸಿದ ವ್ಯಕ್ತಿ – Kannada News | Beware Matrimonial Apps: Bangalore Woman and Family Defrauded of 1.7 Cr

ಬೆಂಗಳೂರು, ಜ.19: ಮ್ಯಾಟ್ರಿಮೋನಿದಂತಹ ಆ್ಯಪ್​​ಗಳನ್ನು (Matrimonial scam )ಬಳಸುವ ಮುನ್ನ ಎಚ್ಚರವಾಗಿರಬೇಕು. ಇಂತಹ ಆ್ಯಪ್​​ಗಳಿಂದ ಮೋಸ ಹೋಗುತ್ತಿರುವ ಪ್ರಕರಣಗಳು ಆಗ್ಗಾಗೆ ಬಹಿರಂಗ ಆಗುತ್ತಿದೆ. ಇದೀಗ ಬೆಂಗಳೂರಿನ ನವ್ಯಾ ಎಂಬ ಯುವತಿಯಿಂದ ಈ ಆ್ಯಪ್​​ ಮೂಲಕ ಉದ್ಯಮಿ ಎಂದು ಹೇಳಿಕೊಂಡ ಲಕ್ಷ ಲಕ್ಷ ಹಣವನ್ನು ದೋಚಿದ್ದಾನೆ. ಬೆಂಗಳೂರಿನ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿರುವ ನವ್ಯಾ ಅವರನ್ನು ಉದ್ಯಮಿ ಎಂದು ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಇತ ಮಾತ್ರವಲ್ಲದೆ  ಮನೆಯವರು ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು NDTV ವರದಿ…

Read More