Category Archives: Blog

Your blog category

ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ಮುಖ್ಯ ಅತಿಥಿಗಳ್ಯಾರು? – Kannada News | Republic Day Delhi 2026: Parade, Chief Guests and Celebrations on Kartavya Path

ನವದೆಹಲಿ, ಜನವರಿ 19: ಪ್ರತಿ ವರ್ಷವೂ ಭಾರತದಲ್ಲಿ ಗಣರಾಜ್ಯೋತ್ಸವ(Republic Day)ವನ್ನು ಅತ್ಯಂತ ಅರ್ಥಪೂರ್ಣವಾಗಿ  ಆಚರಿಸಲಾಗುತ್ತದೆ. ಏಕೆಂದರೆ ಅಂದು ಭಾರತವು ಪೂರ್ಣ ಪ್ರಮಾಣದ ಗಣರಾಜ್ಯವಾದ ದಿನ. ಈ ವರ್ಷ ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ವಂದೇ ಮಾತರಂ ಥೀಂನಲ್ಲೇ ಇರಲಿವೆ. ಕರ್ತವ್ಯಪಥದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಶಕ್ತಿಯನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಲಿವೆ. ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಸ್ತಬ್ಧಚಿತ್ರಗಳು, ಆಕರ್ಷಕ ಜಾನಪದ ನೃತ್ಯಗಳು ಕೂಡಾ ಇರಲಿದೆ. ಭಾರತದ ಶಕ್ತಿ ಮತ್ತು ವೈವಿಧ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಲು ಇದು ಒಂದು ಅವಕಾಶ. ಈ ಕಾರ್ಯಕ್ರಮವನ್ನು ವೀಕ್ಷಿಸಲು ದೇಶದ ನಾಗರಿಕರು ಸೇರುವುದಲ್ಲದೆ, ಪ್ರತಿ ವರ್ಷ ಮುಖ್ಯ ಅತಿಥಿಯನ್ನು ಮೆರವಣಿಗೆಗೆ ಆಹ್ವಾನಿಸಲಾಗುತ್ತದೆ.

ಈ ವರ್ಷದ ಮುಖ್ಯ ಅತಿಥಿಗಳ್ಯಾರು?
ಈ ವರ್ಷ, ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯ ಆಯ್ಕೆಗಾಗಿ ಭಾರತದ ವಿದೇಶಾಂಗ ಸಚಿವಾಲಯವು ಸಂಭಾವ್ಯ ದೇಶಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಆಹ್ವಾನವಿರುವ ದೇಶಗಳ ಪ್ರಮುಖ ನಾಯಕರನ್ನು ಆಹ್ವಾನಿಸಲು ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಮತ್ತಷ್ಟು ಓದಿ: ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ

ವಿದೇಶಾಂಗ ಸಚಿವಾಲಯ ಸಿದ್ಧಪಡಿಸಿದ ಪಟ್ಟಿಯನ್ನು ರಾಷ್ಟ್ರಪತಿ ಭವನ ಮತ್ತು ಪ್ರಧಾನ ಮಂತ್ರಿ ಕಚೇರಿ ಅನುಮೋದಿಸಿದೆ. ಈ ಪ್ರಕ್ರಿಯೆಯು ಆಯ್ದ ದೇಶಗಳೊಂದಿಗೆ ಭಾರತದ ಸಂಬಂಧಗಳು ರಾಜಕೀಯ ಮತ್ತು ವ್ಯವಹಾರ ದೃಷ್ಟಿಕೋನಗಳಿಂದ ಬಲವಾಗಿರುವುದನ್ನು ಖಚಿತಪಡಿಸುತ್ತದೆ. ತನಿಖೆಯ ಸಮಯದಲ್ಲಿ, ಈ ಪಟ್ಟಿಯಲ್ಲಿ ನೀಡಲಾದ ಹೆಸರುಗಳು ನಿಜವಾಗಿಯೂ ಆಹ್ವಾನಕ್ಕೆ ಅರ್ಹವಾಗಿವೆಯೇ ಎಂದು ಪರಿಶೀಲಿಸಲಾಗುತ್ತದೆ.

ಮುಖ್ಯ ಅತಿಥಿಯನ್ನು ಕರ್ತವ್ಯ ಪಥದಲ್ಲಿ ಪ್ರಮುಖ ಸ್ಥಳದಲ್ಲಿ ಕುಳಿತುಕೊಳ್ಳಲು ಆಹ್ವಾನಿಸಲಾಗುತ್ತದೆ. ಅವರು ಮೆರವಣಿಗೆಯ ಆರಂಭದಲ್ಲಿ ಭಾರತೀಯ ರಾಷ್ಟ್ರಪತಿಗಳೊಂದಿಗೆ ಕುಳಿತು ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಇಂಡೋನೇಷ್ಯಾದ ಅಧ್ಯಕ್ಷರನ್ನು ಅದರ ಮೊದಲ ಗಣರಾಜ್ಯೋತ್ಸವದಂದು ಭಾರತದ ಮುಖ್ಯ ಅತಿಥಿಯನ್ನಾಗಿ ಮಾಡಲಾಯಿತು. 2025 ರ ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಭಾರತದ ಮುಖ್ಯ ಅತಿಥಿಯನ್ನಾಗಿ ಮಾಡಲಾಯಿತು.

ವಂದೇ ಮಾತರಂ ಶೀರ್ಷಿಕೆಯಲ್ಲಿ 6 ರಾಜ್ಯಗಳು ಸ್ತಬ್ಧಚಿತ್ರಗಳ ಬೆರವಣಿಗೆ ನಡೆಸಲಿದೆ. ಸರ್ಕಾರವು ರಸಪ್ರಶ್ನೆಯನ್ನು ಕೂಡ ಆಯೋಜಿಸಿದೆ. ದೆಹಲಿ ಮೆಟ್ರೋ ಬೆಳಗ್ಗೆ 3 ಗಂಟೆಯಿಂದಲೇ ಸೇವೆಯನ್ನು ಆರಂಭಿಸಲಿದೆ. ಟಿಕೆಟ್​​ನಲ್ಲಿ ನಮ್ಮ ಮೆಟ್ರೋ ಕ್ಯೂಆರ್​ ಕೋಡ್ ಕೂಡಾ ಇರಲಿದೆ. ಎನ್​ಸಿಸಿ ವಾಲಂಟಿಯರ್ಸ್​ ಅಲ್ಲಿರಲಿದ್ದಾರೆ. 10 ಸಾವಿರ ಮಂದಿ ವಿಶೇಷ ಅತಿಥಿಗಳಿರಲಿದ್ದಾರೆ. ನವೋದ್ಯಮಿಗಳು, ವಿಜ್ಞಾನಿಗಳು, ರೈತರು ಮತ್ತು ಸಮುದಾಯ ಮುಖಂಡರು ಸೇರಿದಂತೆ ವಿವಿಧ ವಲಯಗಳ ಸುಮಾರು 10,000 ವಿಶೇಷ ಅತಿಥಿಗಳು ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಂದ ಒಟ್ಟು 30 ಟ್ಯಾಬ್ಲೋಗಳು ಕರ್ತವ್ಯ ಪಥದಲ್ಲಿ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ವಿಷಯಗಳನ್ನು ಪ್ರದರ್ಶಿಸಲಿವೆ. ಅತಿಥಿಗಳ ಚಲನವಲನಗಳನ್ನು ಸುಗಮಗೊಳಿಸಲು, ರಕ್ಷಣಾ ಸಚಿವಾಲಯ ಮತ್ತು ದೆಹಲಿ ಪೊಲೀಸರು ವಿವರವಾದ ಮಾರ್ಗ ಯೋಜನೆಗಳು, ಪಾರ್ಕಿಂಗ್ ವ್ಯವಸ್ಥೆಗಳು ಮತ್ತು ಆವರಣದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

ಸ್ಕೂಲ್ ಬ್ಯಾಂಡ್ ಸ್ಪರ್ಧೆ
33 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 763 ಶಾಲೆಗಳ ಬ್ಯಾಂಡ್​ ಆಗಮಿಸಲಿದ್ದು, 18 ಸಾವಿರ ವಿದ್ಯಾರ್ಥಿಗಳು ಅದರಲ್ಲಿರಲಿದ್ದಾರೆ.

ಮೆರವಣಿಗೆ ನಡೆಯುವ ಆವರಣದೊಳಗೆ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸಾಧನಗಳು (ಮೊಬೈಲ್ ಫೋನ್‌ಗಳನ್ನು ಹೊರತುಪಡಿಸಿ), ಚೂಪಾದ ವಸ್ತುಗಳು, ಸುಡುವ ವಸ್ತುಗಳು ಮತ್ತು ಇತರ ನಿಷೇಧಿತ ವಸ್ತುಗಳನ್ನು ಪೊಲೀಸರು ನಿಷೇಧಿಸಿದ್ದಾರೆ. ನಾಗರಿಕರು ಜಾಗರೂಕರಾಗಿರಲು ಮತ್ತು 112 ಗೆ ಕರೆ ಮಾಡುವ ಮೂಲಕ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

ಭಾರತ್ ಪರ್ವ

ಮೆರವಣಿಗೆಗೆ ಪೂರಕವಾಗಿ, ಭಾರತ್ ಪರ್ವ ಸಾಂಸ್ಕೃತಿಕ ಉತ್ಸವವು ಜನವರಿ 26 ರಿಂದ 31 ರವರೆಗೆ ಕೆಂಪು ಕೋಟೆಯಲ್ಲಿ ನಡೆಯಲಿದ್ದು, ಪ್ರಾದೇಶಿಕ ಕಲೆ, ಕರಕುಶಲ ವಸ್ತುಗಳು ಮತ್ತು ಪಾಕಪದ್ಧತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಶಾಲಾ ಬ್ಯಾಂಡ್ ಸ್ಪರ್ಧೆಗಳು ಮತ್ತು ಪ್ರಾಜೆಕ್ಟ್ ವೀರ್ ಗಾಥಾ ಸೇರಿದಂತೆ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳು ದೇಶಭಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬರೋಬ್ಬರಿ 1000 ವಿಕೆಟ್; ಇತಿಹಾಸ ನಿರ್ಮಿಸಿದ ಲಂಕಾ ಸ್ಪಿನ್ನರ್ – Kannada News | Malinda Pushpakumara: Sri Lankan Spinner Joins Elite 1000 First Class Wicket Club

ಶ್ರೀಲಂಕಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ (1374 ವಿಕೆಟ್‌ಗಳು), ರಂಗನ ಹೆರಾತ್ (1080 ವಿಕೆಟ್‌ಗಳು) ಮತ್ತು ದಿನುಕಾ ಹೆಟ್ಟಿಯಾರಾಚಿ (1001 ವಿಕೆಟ್‌ಗಳು) ಮಾತ್ರ ಇದ್ದರು. ಆದರೆ ಈಗ ಮಲಿಂದಾ ಪುಷ್ಪಕುಮಾರ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಇನ್ನು ಜಾಗತಿಕವಾಗಿ, ಪುಷ್ಪಕುಮಾರ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 218 ನೇ ಆಟಗಾರ ಎನಿಸಿಕೊಂಡಿದ್ದಾರೆ.

Source link

ಇಂದೋರ್​ನ ಈ ಕೋಟ್ಯಧಿಪತಿ ಭಿಕ್ಷುಕನ ಬಳಿಯಿದೆ 3 ಮನೆ, ಕಾರುಗಳು! – Kannada News | Indore’s crorepati beggar Mangilal owns 3 homes, cars, part time moneylending

ನವದೆಹಲಿ, ಜನವರಿ 19: ಇಂದೋರ್ ನಗರವನ್ನು ಭಿಕ್ಷುಕ (Beggar) ಮುಕ್ತಗೊಳಿಸಲು ನಡೆಯುತ್ತಿರುವ ಅಭಿಯಾನದ ವೇಳೆ ಅನಿರೀಕ್ಷಿತ ವಿಷಯವೊಂದು ಹೊರಬಿದ್ದಿದೆ. ಬೀದಿಗಳಲ್ಲಿ ಭಿಕ್ಷೆ ಬೇಡುವ ಅಂಗವಿಕಲ ವ್ಯಕ್ತಿಯೊಬ್ಬರು ಕೋಟ್ಯಾಧಿಪತಿ ಎಂಬ ವಿಷಯ ಬಯಲಾಗಿದೆ. ಮಧ್ಯಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ತಂಡದಿಂದ ಗುರುತಿಸಲ್ಪಟ್ಟ ನಂತರ ಸಾಕಷ್ಟು ಗಮನ ಸೆಳೆದಿರುವ ಭಿಕ್ಷುಕರೊಬ್ಬರು ಪ್ರತಿದಿನ 500ರಿಂದ 1,000 ರೂ. ವರೆಗೆ ನಡುವೆ ಗಳಿಸುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಪ್ರಾರಂಭಿಸಲಾದ ಇಂದೋರ್ ಭಿಕ್ಷುಕ ನಿರ್ಮೂಲನಾ ಅಭಿಯಾನದಲ್ಲಿ, ಮಧ್ಯಪ್ರದೇಶ ಸರ್ಕಾರವು ಭಿಕ್ಷಾಟನೆಯ ಮೂಲಕ ಕೋಟಿಗಟ್ಟಲೆ ಸಂಪತ್ತನ್ನು ಸಂಗ್ರಹಿಸಿರುವ ಭಿಕ್ಷುಕರನ್ನು ಪತ್ತೆಹಚ್ಚಿದೆ. ಇವ ಹೆಸರು ಮಂಗಿಲಾಲ್. ಮಂಗಿಲಾಲ್ ನಗರದ ವಿವಿಧ ಭಾಗಗಳಲ್ಲಿ 3 ಮನೆಗಳನ್ನು ಹೊಂದಿದ್ದಾರೆ ಮತ್ತು ಅಗತ್ಯವಿರುವ ಜನರಿಗೆ ಸಾಲಗಳನ್ನು ಸಹ ನೀಡುತ್ತಾರೆ ಎಂದು ಸರ್ಕಾರಕ್ಕೆ ತಿಳಿದುಬಂದಿದೆ.

ಇದನ್ನೂ ಓದಿ: Viral: ಪತಿ ಹಾಗೂ ತನ್ನ ಆರು ಮಂದಿ ಮಕ್ಕಳನ್ನು ತೊರೆದು ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ

ಇವರು ರಾಜ್ಯ ಸರ್ಕಾರ ಮತ್ತು ರೆಡ್ ಕ್ರಾಸ್‌ನ ಜಂಟಿ ಉಪಕ್ರಮದ ಭಾಗವಾಗಿ ಅಂಗವಿಕಲರಿಗೆ ನೀಡಲಾಗುವ ಒಂದು ಬೆಡ್ ರೂಂ ಮನೆಯ ಫಲಾನುಭವಿಯೂ ಆಗಿದ್ದಾರೆ. ಈಗಾಗಲೇ ಮನೆ ಹೊಂದಿದ್ದರೂ ಸಹ PMAY ಯೋಜನೆಯಡಿ ಮನೆ ಪಡೆಯಲು ಅವರನ್ನು ಜಿಲ್ಲಾಧಿಕಾರಿಗಳ ಮುಂದೆ ಹಾಜರುಪಡಿಸಲಾಗುವುದು. ಇಷ್ಟೆಲ್ಲ ಶ್ರೀಮಂತಿಕೆಯಿದ್ದರೂ ಅವರು ಭಿಕ್ಷೆ ಬೇಡುವುದನ್ನು ನಿಲ್ಲಿಸಿಲ್ಲ. ಇಂದಿಗೂ ಇಂದೋರ್‌ನ ಬೀದಿಗಳಲ್ಲಿ ನಿಯಮಿತವಾಗಿ ಭಿಕ್ಷೆ ಬೇಡುತ್ತಾರೆ. ಈ ಮಂಗಿಲಾಲ್ 3 ಆಟೋಗಳನ್ನು ಹೊಂದಿದ್ದಾರೆ. ಅದನ್ನು ಅವರು ಬಾಡಿಗೆಗೆ ನೀಡುತ್ತಾರೆ. ಇದರ ಜೊತೆಗೆ, ಅವರು ಮಾರುತಿ ಸುಜುಕಿ ಡಿಜೈರ್ ಕಾರನ್ನು ಹೊಂದಿದ್ದು, ಅದನ್ನು ಬಾಡಿಗೆಗೆ ನೀಡುತ್ತಾರೆ. ಇಂದೋರ್‌ನ ಭಗತ್ ಸಿಂಗ್ ನಗರ, ಶಿವನಗರ ಮತ್ತು ಆಳ್ವಾಸ್‌ನಲ್ಲಿ 3 ಅಂತಸ್ತಿನ ಕಟ್ಟಡವನ್ನು ಕೂಡ ಹೊಂದಿದ್ದಾರೆ.

ಇದನ್ನೂ ಓದಿ: ಸಾವನ್ನಪ್ಪಿದ ಭಿಕ್ಷುಕನ ಬ್ಯಾಗ್​​ನಲ್ಲಿತ್ತು 4.5 ಲಕ್ಷ ರೂ. ವಿದೇಶಿ ಕರೆನ್ಸಿ

ಕಾರುಗಳು ಮತ್ತು ಆಟೋಗಳನ್ನು ಬಾಡಿಗೆಗೆ ನೀಡುವುದರ ಜೊತೆಗೆ, ಮಂಗಿಲಾಲ್ ಇಂದೋರ್‌ನ ಸರಾಫಾ ಬಜಾರ್ ಪ್ರದೇಶದ ಜನರಿಗೆ ಹೆಚ್ಚಿನ ಬಡ್ಡಿಗೆ ಹಣವನ್ನೂ ನೀಡುತ್ತಾರೆ. ಇಂದೋರ್ ತನ್ನ ಬೀದಿಗಳನ್ನು ಭಿಕ್ಷುಕ ಮುಕ್ತಗೊಳಿಸುವ ನಿಟ್ಟಿನಲ್ಲಿ ಫೆಬ್ರವರಿ 2024 ರಿಂದ ಕೆಲಸ ಮಾಡುತ್ತಿದೆ. ಕೇವಲ ಎರಡು ವರ್ಷಗಳಲ್ಲಿ 6,500ಕ್ಕೂ ಹೆಚ್ಚು ಭಿಕ್ಷುಕರನ್ನು ಗುರುತಿಸಲಾಗಿದೆ ಮತ್ತು ಅಭಿಯಾನ ಪ್ರಾರಂಭವಾದಾಗಿನಿಂದ ಸುಮಾರು 5,000 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿ ನಟ ವಿನ್ನರ್: ಅಶ್ವಿನಿ ಗೌಡ ಮೊದಲ ಪ್ರತಿಕ್ರಿಯೆ; ನಿರಾಸೆ ವ್ಯಕ್ತಪಡಿಸಿದ ಛಲಗಾರ್ತಿ – Kannada News | I am disappointed Says Ashwini Gowda after Gilli Nata won Bigg Boss Kannada Season 12

ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದರು. 2ನೇ ರನ್ನರ್ ಅಪ್ ಆಗಿ ಅವರು ಹೊರಹೊಮ್ಮಿದರು. ಟಾಪ್ 2 ಸ್ಪರ್ಧಿಗಳಲ್ಲಿ ತಾವು ಕೂಡ ಒಬ್ಬರಾಗಿರುತ್ತೇನೆ ಎಂದು ಅಶ್ವಿನಿ ಗೌಡ ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗಿಲ್ಲಿ ನಟ (Gilli Nata) ಅವರು ವಿನ್ನರ್ ಆದರು. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಅಶ್ವಿನಿ ಗೌಡ (Ashwini Gowda) ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

‘ಒಂದು ಕಡೆ ಖುಷಿ ಇದೆ. ಇನ್ನೊಂದು ಕಡೆ ಬಹಳ ಬೇಜಾರು ಇದೆ. ಟಾಪ್ 2 ಫೈನಲಿಸ್ಟ್​​ಗಳಲ್ಲಿ ನಾನು ಕೂಡ ಇರುತ್ತೇನೆ ಎಂಬ ಕಾತರ, ಆಸೆ ಇತ್ತು. ಖಂಡಿತವಾಗಿಯೂ ನನಗೆ ನಿರಾಸೆ ಆಯಿತು. ಈ ಹಿಂದೆ ನಾನು ಬಿಗ್ ಬಾಸ್ ಶೋ ನೋಡಿರಲಿಲ್ಲ. ಹೇಗಿರುತ್ತೆ ನೋಡೋಣ ಅಂತ ಹೋದೆ. ಅಲ್ಲಿ ಹೋದಾಗ ನಾನು ಕಲಾವಿದೆ ಆಗಿರಲಿಲ್ಲ, ಹೋರಾಟಗಾರ್ತಿ ಆಗಿರಲಿಲ್ಲ. ನನ್ನ ವ್ಯಕ್ತಿತ್ವ ಹೇಗಿದೆಯೋ ಹಾಗೆಯೇ ಇದ್ದೆ’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.

‘ಮನೆಯಲ್ಲಿ ನಾವು ಸಹಜವಾಗಿ ಹೇಗೆ ಇರುತ್ತೇವೋ ಬಿಗ್ ಬಾಸ್ ಮನೆಯಲ್ಲೂ ನಾನು ಹಾಗೆಯೇ ಇದ್ದೆ. ಓಡಾಡಿಕೊಂಡು ಇರುತ್ತೇನೆ, ಎಲ್ಲರ ಜೊತೆ ಚೆನ್ನಾಗಿ ಇರುತ್ತೇವೆ. ಕೊಟ್ಟ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತೇವೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಇದ್ದವರು ತುಂಬಾ ಜನ ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಂಡು ಅರಮನೆ ತುಂಬಾ ಓಡಾಡುತ್ತಿದ್ದರು. ಆದರೆ ನಾನು ನೈಜವಾಗಿದ್ದೆ. ಒಳ್ಳೆಯದು ಮಾಡಿದ್ದೇನೋ, ಕೆಟ್ಟದ್ದು ಮಾಡಿದ್ದೇನೋ ಗೊತ್ತಿಲ್ಲ. ಅಶ್ವಿನಿ ಆಗಿ ಜೀವಿಸಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

‘ನಾನು ಮತ್ತು ಗಿಲ್ಲಿ ಹಾವು-ಮುಂಗುಸಿ ರೀತಿ ಇದ್ವಿ. ಟಾಮ್ ಆ್ಯಂಡ್ ಜೆರಿ ಥರ ಇತ್ತು. ಹೊರಗಡೆ ಕೂಡ ಇದೇ ರೀತಿ ಇದೆ ಎಂದು ನಮಗೆ ಊಹೆ ಇರಲಿಲ್ಲ. ಬಿಗ್ ಬಾಸ್ ನೋಡಿಕೊಂಡು ಹೋಗಿದ್ದರೆ ಒಂದು ಐಡಿಯಾ ಇರುತ್ತಿತ್ತೇನೋ. ಯಾವುದೂ ಗೊತ್ತಿಲ್ಲದೆ ನಾನು ಬಿಗ್ ಬಾಸ್ ಮನೆಗೆ ಹೋದೆ. ಗಿಲ್ಲಿ ಜೊತೆ ಆದ ಜಗಳ ಮುನಿಸು ಎಲ್ಲವೂ ಸತ್ಯ. ಮುಖವಾಡ ಹಾಕಿಕೊಂಡು ಆಟ ಆಡಿಲ್ಲ’ ಎಂದಿದ್ದಾರೆ ಅಶ್ವಿನಿ ಗೌಡ.

ಇದನ್ನು ಓದಿ: ಗಿಲ್ಲಿ ನಟ ಕೇಳಿದ್ದಕ್ಕಿಂತ ಡಬಲ್ ಪ್ರೀತಿ ನೀಡಿದ ಫ್ಯಾನ್ಸ್: 2 ಮಿಲಿಯನ್ ಗ್ಯಾರಂಟಿ

‘ಮುಂದೆ ಕ್ಯಾಮೆರಾ ಇದೆ ಅಂತ ನಾವು ನಾಟಕ ಮಾಡಬಾರದು. ಅನಿಸಿದ್ದನ್ನು ಮಾಡಬೇಕು. ಹೆಣ್ಮಕ್ಕು ನನ್ನನ್ನು ಆ ಮಟ್ಟಕ್ಕೆ ಪ್ರೀತಿಸಿದ್ದಾರೆ ಎಂದಾಗ ನನಗೆ ತುಂಬಾ ಖುಷಿ ಆಯಿತು. ಹೊರಗೆ ಬಂದಾಗಲೇ ನಮಗೆ ಎಲ್ಲವೂ ಗೊತ್ತಾಗೋದು. ಜನರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದಕ್ಕಿಂತ ಕಪ್ ಇನ್ನೊಂದು ಬೇಕಾ ಅಂತ ನನ್ನ ಕಾಡುತ್ತದೆ’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​: ಪೊಲೀಸ್​​ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ – Kannada News | Private Video of DGP, Senior IPS Officer Ramachandra Rao Goes Viral

ಕೆ. ರಾಮಚಂದ್ರ ರಾವ್

ಬೆಂಗಳೂರು, ಜನವರಿ 19: ಹಿರಿಯ ಪೊಲೀಸ್​​ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​ ಆಗಿದೆ. ಮಹಿಳೆಯೋರ್ವರ ಜೊತೆ ಡಿಜಿಪಿ ಇರುವ ಖಾಸಗಿ ವಿಡಿಯೋ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದು, ವಿಡಿಯೋದಲ್ಲಿರೋದು 1 ವರ್ಷದ ಹಿಂದೆ ಸೆರೆಯಾಗಿದ್ದ ದೃಶ್ಯಗಳು ಎಂಬುದು ಗೊತ್ತಾಗಿವೆ. ಸದ್ಯ ಡಿಸಿಆರ್​ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ.

ಸಮವಸ್ತ್ರದಲ್ಲೇ ಸರಸ!

ಕಚೇರಿಯಲ್ಲಿ ಕುಳಿತು ಪೊಲೀಸ್​ ಯೂನಿಫಾರಂನಲ್ಲಿಯೇ ರಾಮಚಂದ್ರರಾವ್​​ ಮುತ್ತಿಟ್ಟಿರುವ ಹಸಿಬಿಸಿ ದೃಶ್ಯಗಳು ವೈರಲ್​​ ಆದ ವಿಡಿಯೋದಲ್ಲಿವೆ. ಚೇರ್ ಮೇಲೆ ಕುಳಿತು ಮಹಿಳೆಯನ್ನ ಅಪ್ಪಿಕೊಂಡು IPS ಅಧಿಕಾರಿ ಸರಸ ನಡೆಸಿದ್ದು, ಇದು ರನ್ಯಾರಾವ್​ ಪ್ರಕರಣಕ್ಕಿಂತ ಮೊದಲು ನಡೆದಿರುವ ಘಟನೆ ಎಂಬ ಮಾಹಿತಿ ಸಿಕ್ಕಿದೆ. ಅತ್ತ ಮಗಳು ರನ್ಯಾರಾವ್​ ಚಿನ್ನ ಕಳ್ಳಸಾಗಾಣಿಕೆ ಕೇಸ್​​ನಕಲ್ಲಿ ಸಿಕ್ಕಿ ಒದ್ದಾಡುತ್ತಿದ್ದರೆ ಇತ್ತ ಮಲತಂದೆಯ ರಾಸಲೀಲೆಯ ವಿಡಿಯೋ ವೈರಲ್​​ ಆಗಿರೋದು ಜನ ಹುಬ್ಬೇರುವಂತೆ ಮಾಡಿದೆ.

ಇದನ್ನೂ ಓದಿ: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ; ವ್ಯಕ್ತಿ ವಂಚನೆ ಕಂಡು ಯುವತಿ ಕಕ್ಕಾಬಿಕ್ಕಿ

ಈ ಹಿಂದೆ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದ ಪ್ರಕರಣ ಸಂಬಂಧ ನಟಿ ರನ್ಯಾ ರಾವ್ ಬಂಧನ ಬೆನ್ನಲ್ಲೇ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರೂ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ನಟಿ ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆಗೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿತ್ತು. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆಗೆ ಸೂಚಿಸಲಾಗಿತ್ತು.

ಯಾರು ಈ ರಾಮಚಂದ್ರ ರಾವ್​​?

ಕೆ. ರಾಮಚಂದ್ರ ರಾವ್ ಕರ್ನಾಟಕ ಕೇಡರ್​​​ನ ಐಪಿಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಇವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಡಿಜಿಪಿ ಮತ್ತು ಅಧ್ಯಕ್ಷ ಮತ್ತು ಎಂಡಿ ಆಗಿ ಬಡ್ತಿ ನೀಡಲಾಗಿತ್ತು. ಬಳಿಕ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಕಗೊಂಡಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇವರ ಮಲಮಗಳು ರನ್ಯಾ ರಾವ್ ಭಾಗಿ ಪ್ರಕರಣ ಸಂಬಂಧ ಪೊಲೀಸರ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಮಾರ್ಚ್ 2025ರಲ್ಲಿ ಇವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:21 pm, Mon, 19 January 26

Source link

ಮೈಸೂರಿನ ಹೋಟೆಲ್​ನಲ್ಲಿ ಸರ್ಕಾರಿ ಅಧಿಕಾರಿ ಶವ ಪತ್ತೆ: RFO ಸಾವಿನ ಸುತ್ತ ಅನುಮಾನದ ಹುತ್ತ – Kannada News | Mysuru: T Narasipura RFO Kantaraj Chauhan Dies in Mysuru Hotel; Police Probe Underway

ಮೈಸೂರು, ಜನವರಿ 19: ನಗದರ ಖಾಸಗಿ ಹೋಟೆಲ್​​ವೊಂದರಲ್ಲಿ ಆರ್​ಎಫ್​ಒ (RFO) ಶವವಾಗಿ ಪತ್ತೆ ಆಗಿರುವಂತಹ ಘಟನೆ ಮೈಸೂರು (Mysuru) ಕೇಂದ್ರ ಬಸ್​ ನಿಲ್ದಾಣದ ಬಳಿಯಿರುವ ಹೋಟೆಲ್​​ನಲ್ಲಿ ನಡೆದಿದೆ. ಟಿ ನರಸೀಪುರ ಆರ್​ಎಫ್​ಒ ಕಾಂತರಾಜ್ ಚೌಹಾಣ್​​ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಘಟನಾ ಸ್ಥಳಕ್ಕೆ ಲಷ್ಕರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದದ್ದೇನು?

RFO ಕಾಂತರಾಜ್ ಚೌಹಾಣ್​​​ ಅವರು 15 ದಿನದ ಹಿಂದೆಯಷ್ಟೇ ನರಸೀಪುರಕ್ಕೆ ವರ್ಗವಾಗಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಸ್ನೇಹಿತ ಮಲ್ಲನಗೌಡ ಪಾಟೀಲ್ ಜೊತೆಗೆ ನಿನ್ನೆ ಮಧ್ಯಾಹ್ನ ಮಲ್ಲನಗೌಡ ರೂಮ್​ ಬುಕ್ ಮಾಡಿದ್ದರು. ಆದರೆ ಏಕಾಏಕಿ ಮೃತಪಟ್ಟಿದ್ದಾರೆ. ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪದ ಕುಮಾರನ್ ಜ್ಯುವೆಲರ್ಸ್​ ಹಿಂಭಾಗದ ಕಾರಿಡಾರ್​ನಲ್ಲಿ ಕಾಂತರಾಜ್ ಚೌಹಾಣ್​​​ ಶವ‌ ಬಿದ್ದಿತ್ತು. ಇನ್ನು ಇತ್ತ ಕಾಂತರಾಜ್ ಸ್ನೇಹಿತ ಮಲ್ಲನಗೌಡ ಪಾಟೀಲ್ ನಾಪತ್ತೆಯಾಗಿದ್ದಾರೆ.

ಪಾರ್ಕಿಂಗ್​ನಲ್ಲಿ ಮಲಗಿದ್ದ ಯುವಕರಿಬ್ಬರ ಮೇಲೆ ಹರಿದ ಕಾರು

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯಲ್ಲಿ ಪಾರ್ಕಿಂಗ್​ನಲ್ಲಿ ಮಲಗಿದ್ದ ಯುವಕರಿಬ್ಬರ ಮೇಲೆ ಕಾರು ಹರಿದು ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವಂತಹ ಘಟನೆ ನಡೆದಿದೆ. ಪ್ರದೀಪ್​​​ ಮೃತ ವ್ಯಕ್ತಿ, ರವಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು

ರವಿ ಸುತ್ತೂರು ಜಾತ್ರೆಯಲ್ಲಿ ಪಾರ್ಕಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಪ್ರದೀಪ್ ನಾಟಕ ನೋಡಲು ಸುತ್ತೂರಿಗೆ ಆಗಮಿಸಿದ್ದ. ತಡವಾದ ಹಿನ್ನೆಲೆ ರಾತ್ರಿ ಇಬ್ಬರು ಪಾರ್ಕಿಂಗ್​ನಲ್ಲೇ ಮಲಗಿದ್ದಾರೆ. ಚಾಲಕ ಮಧ್ಯರಾತ್ರಿ ಕಾರು ತೆಗೆಯುವಾಗ ಗಮನಿಸದ ದುರಂತ ಸಂಭವಿಸಿದೆ. ಬದನವಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳ್ಳದಲ್ಲಿ ಈಜಲು ಹೋಗಿ ಮುಳುಗಿ ಬಾಲಕ ಸಾವು

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸಿದ್ಧಾರ್ಥ್(10) ಮೃತ ಬಾಲಕ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಿಚ್ಚ ಸುದೀಪ್ ಅವರ ಈ ಸೂಪರ್ ಜಾಕೆಟ್ ಉಡುಗೊರೆಯಾಗಿ ಸಿಕ್ಕಿದ್ದು ಯಾರಿಗೆ? – Kannada News | Kichcha Sudeep Gave His Bigg Boss Finale Jacket To Dhanush

ಕಿಚ್ಚ ಸುದೀಪ್ ಅವರು ಹೋಸ್ಟ್ ಮಾಡುವಾಗ ಪ್ರತಿ ಬಾರಿ ಹೊಸ ಹೊಸ ರೀತಿಯ ಜಾಕೆಟ್ ಹಾಕಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿಯ ಬಿಗ್ ಬಾಸ್ ಫಿನಾಲೆ ದಿನ ಅವರು ಸಖತ್ ಆಗಿರೋ ಜಾಕೆಟ್ ಹಾಕಿ ಕಾಣಿಸಿಕೊಂಡಿದ್ದರು.

Source link

ಗಿಲ್ಲಿ, ಕಾವ್ಯ ಒಪ್ಪಿದ್ರೆ ಮದುವೆ ಫಿಕ್ಸ್​​​, ಬಿಗ್​​​ಬಾಸ್​​​ ವಿನ್ನರ್ ತಂದೆ ಹೇಳಿದ್ದೇನು? – Kannada News | Bigg Boss Winner Gillis Father: “Well Marry Whichever Girl He Approves

ಬಿಗ್ ಬಾಸ್ ಕನ್ನಡ 12 ವಿಜೇತ ಗಿಲ್ಲಿಯ ತಂದೆ ಮಗನ ಗೆಲುವಿನ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಮಗನ ಯಶಸ್ಸು ತನಗೆ ಕನಸಿನಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಮಧ್ಯಾಹ್ನ ನಡೆಯಲಿರುವ ಮೆರವಣಿಗೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದು, ಆರು ತಿಂಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಮಗನಿಗಾಗಿ ಬರುವುದಾಗಿ ಹೇಳಿದ್ದಾರೆ. ಗಿಲ್ಲಿಯ ಮದುವೆಯ ಬಗ್ಗೆ ಕೇಳಿದಾಗ, ಅದು ಗಿಲ್ಲಿಯ ವೈಯಕ್ತಿಕ ಆಯ್ಕೆ ಎಂದು ತಂದೆ ಸ್ಪಷ್ಟಪಡಿಸಿದ್ದಾರೆ. ಗಿಲ್ಲಿ ಇಷ್ಟಪಟ್ಟ ಹುಡುಗಿಯನ್ನೇ ಮದುವೆ ಮಾಡುತ್ತೇವೆ, ಅದಕ್ಕೆ ಬಲವಂತ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಬಿಗ್​​ ಬಾಸ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಅಭಿಮಾನಿ ಕೊಟ್ಟ ರಾಯರ ಫೋಟೊ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ! ಶುರುವಾಯ್ತು ಚರ್ಚೆ – Kannada News | CM Siddaramaiah Refuses Fan’s Mantralayam Raghavendra Swamy Photo, Sparks Political Row, Watch Video

ಬೆಂಗಳೂರು, ಜನವರಿ 19: ಅಭಿಮಾನಿಯೊಬ್ಬರು ಕೊಟ್ಟ ರಾಘವೇಂದ್ರ ಸ್ವಾಮಿಗಳ ಫೋಟೊ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದು, ವಾಪಸ್ ನೀಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ ಬೆಂಗಳೂರಿನಲ್ಲಿ ಸಿಎಂ ಕಾರಿನಲ್ಲಿ ಬರುತ್ತಿದ್ದಂತೆಯೇ ಕೆಲವು ಮಂದಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅವರಿಗೆ ಮನವಿ ಪತ್ರ ಕೊಡಲು ಮುಂದಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋ ಸಿಎಂಗೆ ಕೊಟ್ಟಿದ್ದಾರೆ. ತಕ್ಷಣವೇ ಅದನ್ನು ಆತನಿಗೆ ವಾಪಸ್ ಕೊಟ್ಟ ಸಿಎಂ ಆತನನ್ನು ದುರುಗುಟ್ಟಿ ನೋಡಿದ್ದಾರೆ. ಇದೇ ವೇಳೆ, ಚಾಣಕ್ಯನ ಕುರಿತಾದ ಪುಸ್ತಕವನ್ನು ಅಭಿಮಾನಿಯೊಬ್ಬ ಕೊಟ್ಟಿದ್ದು, ಅದನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಕುಂಕುಮ, ಪೇಟ ತಿರಸ್ಕರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿ ಇದೀಗ ರಾಯರ ಫೋಟೊ ತಿರಸ್ಕರಿಸಿದ್ದೂ ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ಹಿಂದೂ ದೇವರನ್ನು ಕಂಡರೆ ಆಗಿ ಬರಲ್ಲ. ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೇ ಆಗಿ ಬರುವುದಿಲ್ಲ. ಅವರಿಗೆ ಟೋಪಿ ಕಂಡರೆ ಮಾತ್ರ ಖುಷಿಯಾಗುತ್ತದೆ. ಟಿಪ್ಪು ಜಯಂತಿ ಮಾಡಿದರು, ಆಗ ಕೋಮು ಗಲಭೆಗಳು ಆದವು. ಕೋಗಿಲು ಲೇಔಟ್​​​ನ ಮುಸ್ಲಿಮರಿಗೆ ಮನೆಗಳು ಕೊಡುವುದು ಇತ್ಯಾದಿ ಅದು ಅವರ ನಿರಂತರ ಪ್ರಕ್ರಿಯೆ ಎಂದು ಕಿಡಿಕಾರಿದರು.

ಹಿಂದೂಗಳು ಕೂಡ ಎಚ್ಚರಿಕೆಯಿಂದ ಇರಬೇಕು. ಬಹುಸಂಖ್ಯಾತ ಹಿಂದೂಗಳು ಸಿದ್ದರಾಮಯ್ಯಗೆ ಪಾಠ ಕಲಿಸಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಯಾರು ಏನೇ ನೀಡಿದರೂ ಸ್ವೀಕರಿಸುವುದು ಸೌಜನ್ಯತೆಯ ನಡೆ. ಪ್ರೀತಿಯಿಂದ ಕೊಟ್ಟರೇ ಅವರ ನಂಬಿಕೆ ಭಾವನೆಗೆ ಗೌರವ ನೀಡಬೇಕು. ಜನರ ಭಾವನೆಗಳನ್ನು ಗೌರವಿಸುವ ಜವಾಬ್ದಾರಿ ಜನಪ್ರತಿನಿಧಿಗೆ ಇರುತ್ತದೆ. ಯಾವುದೇ , ಧರ್ಮ, ಏನೇ ಇದ್ದರೂ ಭಾವನೆಗಳನ್ನು ಗೌರವಿಸಬೇಕು. ವ್ಯಕ್ತಿ ತಂದುಕೊಟ್ಟಿದ್ದನ್ನು ಸ್ವೀಕಾರ ಮಾಡುವುದು ಸೌಜನ್ಯತೆ ನಡವಳಿಕೆ. ಸಿದ್ದರಾಮಯ್ಯನವರಂತಹ ನಾಯಕರಿಂದ ಇಂತಹ ನಡೆ ನಿರೀಕ್ಷಿಸಿರಲಿಲ್ಲ. ಸಿದ್ದರಾಮಯ್ಯ ಹೀಗೆ ನಡೆದುಕೊಂಡಿದ್ದರೆ ಅದನ್ನು ಖಂಡಿಸುತ್ತೇನೆ ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಬಿಎ ಚುನಾವಣೆಗೆ ಇವಿಎಂ ಬದಲಿಗೆ ಮತಪತ್ರ: ಪರ-ವಿರೋಧ ಚರ್ಚೆಗೆ ಕಾರಣವಾದ ಆಯೋಗದ ನಿರ್ಧಾರ – Kannada News | Election Commission to Use Ballot Papers for GBA Elections, Sparks Debate

ಬೆಂಗಳೂರು, ಜನವರಿ 19: ಚುನಾವಣಾ ಆಯೋಗವು ಜಿಬಿಎ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸಲು ನಿರ್ಧರಿಸಿದೆ. ಮೇ 25ರ ನಂತರ ನಡೆಯಲಿರುವ ಈ ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಗೆ ಚುನಾವಣಾ ಆಯೋಗವು ತನ್ನದೇ ಆದ ಕಾರಣಗಳನ್ನು ನೀಡಿದ್ದು, ಬ್ಯಾಲೆಟ್ ಪೇಪರ್‌ಗಳನ್ನು ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಎಲ್ಲಿಯೂ ಹೇಳಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೆ, ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಮತಪತ್ರಗಳ ಬಳಕೆ ತಮ್ಮ ನಿರ್ಧಾರ ಎಂದು ತಿಳಿಸಿದೆ. ಆದಾಗ್ಯೂ ಈ ಕ್ರಮವು ಹೊಸ ಚರ್ಚೆಗೆ ಕಾರಣವಾಗಿದೆ. ಇವಿಎಂ ವ್ಯವಸ್ಥೆಯ ಮೇಲೆ ಸಾರ್ವಜನಿಕರಲ್ಲಿ ಮೂಡಿರುವ ನಂಬಿಕೆಗೆ ಇದು ಧಕ್ಕೆ ತರುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಪಕ್ಷವು ಇವಿಎಂ ಕುರಿತು ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದು, ಈ ನಿರ್ಧಾರವು ಅದಕ್ಕೆ ಪುಷ್ಟಿ ನೀಡಿದಂತಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಹಿಂದಿನ ಬಿಬಿಎಂಪಿ ಚುನಾವಣೆಗಳಲ್ಲಿ ಇವಿಎಂ ಬಳಸಲಾಗಿತ್ತು ಎಂಬ ಅಂಶವೂ ಇಲ್ಲಿ ಗಮನಾರ್ಹ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link