Category Archives: Blog

Your blog category

ಭಾರತ-ಬ್ರಿಟನ್​ನ 60,000 ಕೋಟಿ ರೂ ಮೌಲ್ಯದ ವ್ಯಾಪಾರ ಒಪ್ಪಂದ ಜುಲೈ 15ಕ್ಕೆ ಜಾರಿ ಸಾಧ್ಯತೆ – Kannada News | India UK Free Trade Agreement to be implemented from 2026 July 15th, says report

ಭಾರತ ಮತ್ತು ಬ್ರಿಟನ್ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಕೀರ್ ಸ್ಟಾರ್ಮರ್ Image Credit source: PTI

ನವದೆಹಲಿ, ಜೂನ್ 17: ಭಾರತ ಮತ್ತು ಬ್ರಿಟನ್ (UK) ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement – FTA) ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಜಿ-7 (G7) ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ, ಈ ಮಹತ್ವದ ಒಪ್ಪಂದವು ಜುಲೈ 15 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಹಲವಾರು ವರ್ಷಗಳ ಮಾತುಕತೆ, ಜಿ -7 ಶೃಂಗಸಭೆಯ ಚರ್ಚೆಗಳು ಮತ್ತು ಎರಡೂ ದೇಶಗಳಲ್ಲಿನ ಸರ್ಕಾರಿ ಬದಲಾವಣೆಗಳ ನಂತರ ಈ 6.5 ಬಿಲಿಯನ್ ಡಾಲರ್ (ಸುಮಾರು ₹60,000 ಕೋಟಿಗೂ ಅಧಿಕ) ಮೌಲ್ಯದ ಈ ಐತಿಹಾಸಿಕ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದೆ. ಆರಂಭಿಕ ಹಂತದಲ್ಲೇ ಇದು 6.5 ಬಿಲಿಯನ್ ಡಾಲರ್ ಮೌಲ್ಯದ ಹೆಚ್ಚುವರಿ ವ್ಯಾಪಾರ ವೃದ್ಧಿಗೆ ಕಾರಣವಾಗಲಿದ್ದು, 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಿದೆ.

ಭಾರತಕ್ಕೆ ಆಗುವ ಪ್ರಮುಖ ಲಾಭಗಳೇನು?

ಈ ಒಪ್ಪಂದದಿಂದಾಗಿ ಭಾರತದ ಪ್ರಮುಖ ರಫ್ತು ವಲಯಗಳಿಗೆ ಭಾರಿ ಉತ್ತೇಜನ ಸಿಗಲಿದೆ. ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಜವಳಿ (Textiles), ಸಿದ್ಧ ಉಡುಪುಗಳು, ಚರ್ಮದ ಉತ್ಪನ್ನಗಳು, ಆಭರಣಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ರಫ್ತು ಸುಂಕ ಭಾರಿ ಪ್ರಮಾಣದಲ್ಲಿ ಕಡಿತಗೊಳ್ಳಲಿದೆ. ಇದರಿಂದ ಭಾರತೀಯ ವಸ್ತುಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬರಲಿದೆ.

ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ

ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ (IT) ಕಂಪನಿಗಳು ಮತ್ತು ವೃತ್ತಿಪರರಿಗೆ (ಎಂಜಿನಿಯರ್‌ಗಳು, ಆರೋಗ್ಯ ಸಿಬ್ಬಂದಿ) ಬ್ರಿಟನ್‌ನಲ್ಲಿ ಸುಲಭವಾಗಿ ಸೇವೆ ಒದಗಿಸಲು ಮತ್ತು ವೀಸಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಈ ಒಪ್ಪಂದ ನೆರವಾಗಲಿದೆ.

ಬ್ರಿಟನ್ (UK) ದೇಶಕ್ಕೆ ಸಿಗುವ ಅನುಕೂಲಗಳೇನು?

ಬ್ರಿಟನ್‌ನಿಂದ ಭಾರತಕ್ಕೆ ಆಮದಾಗುವ ಪ್ರಸಿದ್ಧ ಸ್ಕಾಚ್ ವಿಸ್ಕಿ (Scotch Whisky), ಪ್ರೀಮಿಯಂ ಕಾರುಗಳು ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳ ಮೇಲಿನ ಆಮದು ಸುಂಕವನ್ನು (Import Duties) ಭಾರತವು ಹಂತಹಂತವಾಗಿ ಕಡಿಮೆ ಮಾಡಲಿದೆ.

ಬ್ರಿಟನ್‌ನ ಹಣಕಾಸು ಸೇವೆಗಳು, ಬ್ಯಾಂಕಿಂಗ್ ಮತ್ತು ವಿಮಾ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಹಾದಿ ಸುಗಮವಾಗಲಿದೆ.

ರಾಜತಾಂತ್ರಿಕ ಮಹತ್ವ

ಬ್ರಿಟನ್‌ನಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದೊಂದಿಗೆ ಮಾಡಿಕೊಳ್ಳುತ್ತಿರುವ ಮೊದಲ ಅತಿ ದೊಡ್ಡ ಜಾಗತಿಕ ಒಪ್ಪಂದ ಇದಾಗಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ವೀಸಾ ನಿಯಮಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ (Intellectual Property Rights) ವಿಷಯದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಉಭಯ ನಾಯಕರು ಈ ಮಾತುಕತೆಯ ಮೂಲಕ ಯಶಸ್ವಿಯಾಗಿ ಬಗೆಹರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ

ಉದ್ಯೋಗ ಸೃಷ್ಟಿಯ ನಿರೀಕ್ಷೆ

ಈ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಭಾರತದಲ್ಲಿ ಉತ್ಪಾದನಾ ವಲಯ ಚುರುಕುಗೊಳ್ಳಲಿದ್ದು, ಮುಂದಿನ ಐದು ವರ್ಷಗಳಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದು ಜಾಗತಿಕ ಪೂರೈಕೆ ಸರಪಳಿಯಲ್ಲಿ (Global Supply Chain) ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಮೋಡ ಕವಿದ ವಾತಾವರಣ’: ಹೊಸ ಹೀರೋ ಪರಿಚಯಕ್ಕೆ ಟೀಸರ್ ತೋರಿಸಿದ ಸಿಂಪಲ್ ಸುನಿ – Kannada News | Simple Suni new movie Moda Kavida Vaatavarana hero teaser ft Sheelam M Swamy Moksha Kushal

ನಿರ್ದೇಶಕ ಸಿಂಪಲ್ ಸುನಿ (Simple Suni) ಅವರ ಸಿನಿಮಾಗಳಲ್ಲಿ ಒಂದಲ್ಲಾ ಒಂದು ವಿಶೇಷತೆ ಇದ್ದೇ ಇರುತ್ತದೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇದೆ. ಪ್ರತಿ ಸಿನಿಮಾದಲ್ಲಿ ಸುನಿ ಅವರ ಆ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಸ್ಟಾರ್ ಸಿನಿಮಾ ಆಗಿರಲಿ, ಹೊಸಬರ ಸಿನಿಮಾ ಆಗಿರಲಿ, ಸುನಿ ನಿರ್ದೇಶನದಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ. ಈಗ ಅವರು ‘ಮೋಡ ಕವಿದ ವಾತಾವರಣ’ (Moda Kavida Vaatavarana) ಸಿನಿಮಾದಲ್ಲಿ ಹೊಸ ನಟ ಶೀಲಮ್ ಅವರನ್ನು ಹೀರೋ ಆಗಿ ಲಾಂಚ್ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಯಿತು.

‘ಒಂದು ಸರಳ ಪ್ರೇಮಕಥೆ’, ‘ಗತ ವೈಭವ’ ಸಿನಿಮಾಗಳ ಬಳಿಕ ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಬರುತ್ತಿರುವ ಮತ್ತೊಂದು ಸೊಗಸಾದ ಪ್ರೇಮ ಕಥೆಯ ಚಿತ್ರವೇ ‘ಮೋಡ ಕವಿದ ವಾತಾವರಣ’. ಶೀರ್ಷಿಕೆಯಿಂದಲೇ ಈ ಸಿನಿಮಾ ಗಮನ ಸೆಳೆಯುತ್ತಿದೆ. ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಪ್ರಚಾರದ ಭಾಗವಾಗಿ ಟೀಸರ್ ರಿಲೀಸ್ ಆಗಿದೆ.

ಟೀಸರ್ ಬಿಡುಗಡೆ ಬಳಿಕ ಸುನಿ ಅವರು ಸಿನಿಮಾ ಮತ್ತೆ ಮಾತನಾಡಿದರು. ‘ಮೋಡ ಕವಿದ ವಾತಾವರಣ ನನ್ನ ಜೀವನದ ಸ್ಪೆಷಲ್ ಸಿನಿಮಾ. ನಾನು ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಸಿನಿಮಾ ಚಾಲೆಂಜ್ ಏನೆಂದರೆ ಟ್ರೇಲರ್ ಕಟ್ ಚೆನ್ನಾಗಿ ಮಾಡಲು ಆಗುವುದಿಲ್ಲ. ಚಿತ್ರದ ಅರ್ಧ ಪಾರ್ಟ್ ನಾನು ಚಿತ್ರಮಂದಿರದಲ್ಲೇ ರಿವೀಲ್ ಮಾಡುವುದು. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್​ನಲ್ಲೇ ನೋಡಬೇಕು. ಹೀಗಾಗಿ ಅರ್ಧ ಸಿನಿಮಾದಲ್ಲಿ ಟ್ರೇಲರ್ ಕಟ್ ಮಾಡಿದ್ದೇವೆ’ ಎಂದು ಅವರು ಹೇಳಿದರು.

‘ಮೋಡ ಕವಿದ ವಾತಾವರಣ’ ಸಿನಿಮಾದ ಟೀಸರ್:

ಹೀರೋ ಆಗಿದ್ದಕ್ಕೆ ನಟ ಶೀಲಮ್ ಅವರಿಗೆ ಸಖತ್ ಖುಷಿ ಇದೆ. ಈ ಕುರಿತು ಅವರು ಮಾತನಾಡಿದ್ದಾರೆ. ‘ಎಲ್ಲರೂ ಹೀರೋ ಆಗಲು ಸಾಧ್ಯವಿಲ್ಲ. ಎಷ್ಟೇ ದುಡ್ಡಿದ್ದರೂ, ಎಷ್ಟೇ ನಟನೆ ಗೊತ್ತಿದ್ದರೂ, ನೋಡಲು ಚೆನ್ನಾಗಿದ್ದರೂ ಆಗಲ್ಲ. ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ. ಇದಕ್ಕೆ ಕಾರಣ ಸುನಿ ಸರ್. ನಿರ್ಮಾಪಕ ರಮೇಶ್ ಸರ್ ಈ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಾಕಷ್ಟು ಭಿನ್ನವಾಗಿ ‘ಮೋಡ ಕವಿದ ವಾತಾವರಣ’ ಸಿನಿಮಾದ ಪ್ರಚಾರ ಮಾಡಿದ ಸಿಂಪಲ್ ಸುನಿ

ಜೂನ್ 26ಕ್ಕೆ ‘ಮೋಡ ಕವಿದ ವಾತಾವರಣ’ ಸಿನಿಮಾ ಬಿಡುಗಡೆ ಆಗಲಿದೆ. ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ‘ರಾಮ್‌ ಮೂವೀಸ್’ ಈಗ ಈ ಸಿನಿಮಾವನ್ನು ನಿರ್ಮಿಸಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ, ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಮತ್ತು ಆದಿತ್ಯ ಕಶ್ಯಪ್ ಅವರ ಸಂಕಲನ‌ ಈ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಇದೆ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ – Kannada News | Major Blow! Shreyanka Patil Seriously Injured at 2026 Women’s T20 World Cup

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ವನಿತಾ ಪಡೆಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಸ್ಪಿನ್ನರ್, ಕನ್ನಡತಿ ಶ್ರೇಯಾಂಕ ಪಾಟೀಲ್ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಶ್ರೇಯಾಂಕ ಅವರ ಗಾಯ ಎಷ್ಟು ಗಂಭೀರವಾಗಿದೆಯೆಂದರೆ ಅವರಿಗೆ ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ. ಮೇಲ್ನೋಟಕ್ಕೆ ಶ್ರೇಯಾಂಕ ಅವರ ಗಾಯ ಗಂಭೀರವಾಗಿರುವಂತೆ ಕಾಣುತ್ತಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಕ್ಯಾನ್ನಿಂಗ್ ವರದಿ ಬಂದ ಬಳಿಕವಷ್ಟೇ ಶ್ರೇಯಾಂಕ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಖಚಿತವಾಗಿ ತಿಳಿಯಲಿದೆ.

ಟೀಂ ಇಂಡಿಯಾ ನೀಡಿದ 209 ರನ್​ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡದ ಇನ್ನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲಿ ಈ ದುರಂತ ಸಂಭವಿಸಿತು. ಈ ಪಂದ್ಯದಲ್ಲಿ ಮೊದಲ ಓವರ್ ಬೌಲ್ ಮಾಡಲು ಬಂದ ಶ್ರೇಯಾಂಕ ಪಾಟೀಲ್ ಎಸೆದ ಮೊದಲ ಎಸೆತವನ್ನು ಸ್ಟ್ರೈಕ್‌ನಲ್ಲಿದ್ದ ಮೊಲ್ಕೆನ್‌ಬೋರ್ ಮಿಡ್-ಆನ್ ಕಡೆಗೆ ಆಡಿದರು. ಹೀಗಾಗಿ ಶ್ರೇಯಾಂಕ ಬೌಲಿಂಗ್ ಮಾಡಿದ ಬಳಿಕ ಚೆಂಡನ್ನು ಹಿಡಿಯಲು ಅದರ ಹಿಂದೆ ಓಡಿದರು. ಚೆಂಡಿನ ಬಳಿ ಹೋದ ಶ್ರೇಯಾಂಕ ಅದನ್ನು ತೆಗೆದುಕೊಳ್ಳಲು ಕೆಳಕ್ಕೆ ಬಾಗಿದರು. ಈ ಪ್ರಕ್ರಿಯೆಯಲ್ಲಿ ಶ್ರೇಯಾಂಕ ಸಮತೋಲನ ಕಳೆದುಕೊಂಡರು. ಹೀಗಾಗಿ ಅವರ ಬಲಗಾಲು ತಿರುಚಿತು.

Published On – 10:06 pm, Wed, 17 June 26

Source link

ರೈಸ್ ಪುಲ್ಲಿಂಗ್ ದಂಧೆಕೋರನಿಗೆ ಶಾಕ್: ಕಾರು ಅಡ್ಡಗಟ್ಟಿ ಬರೋಬ್ಬರಿ 1.9 ಕೋಟಿ ರೂ ದರೋಡೆ – Kannada News | Masked Gang Robs 1.09 Crore from Former Rice Pulling Scam Accused in Yelahanka

ದರೋಡೆ ನಡೆದ ಸ್ಥಳ, ಪೊಲೀಸ್ ಠಾಣೆImage Credit source: tv9 kannada

ನೆಲಮಂಗಲ, ಜೂನ್​ 17: ಬೆಂಗಳೂರು ಹೊರವಲಯದಲ್ಲಿ ಸಿನಿಮಾ ಶೈಲಿಯ ದರೋಡೆ (robbery) ಪ್ರಕರಣವೊಂದು ಬೆಳಕಿಗೆ ಬಂದಿದೆ. ಯಲಹಂಕದಿಂದ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿದ 7 ಜನ ಮುಸುಕುದಾರಿಗಳ ಗ್ಯಾಂಗ್, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಬರೋಬ್ಬರಿ 1 ಕೋಟಿ 9 ಲಕ್ಷ ರೂ ನಗ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಉತ್ತರ ತಾಲೂಕಿನ ಕುದರಗೆರೆ ಕಾಲೋನಿಯ ಗಣೇಶ ದೇವಾಲಯದ ಬಳಿ ನಡೆದಿದೆ.

ಮುಖ್ಯಾಂಶಗಳು

  • ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ 1.09 ಕೋಟಿ ಹಣ ದರೋಡೆ
  • ರಾತ್ರಿ 11 ಗಂಟೆಗೆ 7 ಜನ ದುಷ್ಕರ್ಮಿಗಳಿಂದ ಕೃತ್ಯ
  • ಬೆಂಗಳೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಾರು ಅಡ್ಡಗಟ್ಟಿ 7 ಜನ ದುಷ್ಕರ್ಮಿಗಳಿಂದ ದರೋಡೆ

ಆ್ಯಂಟಿಕ್ ವಸ್ತುಗಳ ಮಾರಾಟ ವ್ಯಾಪಾರ ಮಾಡಿಕೊಂಡಿದ್ದ ಶಿವಶಂಕರ್ ಎಂಬಾತನ ಕಾರನ್ನು ಅಡ್ಡಗಟ್ಟಿದ 7 ಜನ ಮುಸುಕುದಾರಿಗಳ ತಂಡ ಶಿವಶಂಕರ್ ಹಾಗೂ ಚಾಲಕನಿಗೆ ಥಳಿಸಿ ಬರೋಬ್ಬರಿ 1 ಕೋಟಿ 9 ಲಕ್ಷ ಹಣವನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಕಳೆದ ಸೋಮವಾರ ರಾತ್ರಿ ಸುಮಾರು 11 ಗಂಟೆಯಲ್ಲಿ ನಡೆದಿದ್ದು, ದರೋಡೆಗೊಳಗಾದ ಹಣ ಶಿವಶಂಕರ್​​​​ನದ್ದೇ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, 6 ಮಂದಿಯ ಬಂಧನ

ಕೋಟ್ಯಂತರ ರೂ ಹಣ ಕಳೆದುಕೊಂಡ ಶಿವಶಂಕರ್ ಹಿನ್ನೆಲೆ ನೋಡುವುದಾದರೆ, ಈ ಹಿಂದೆ ಈತ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿದ್ದ. ಬೆಂಗಳೂರು ನಗರದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕೇಸ್ ದಾಖಲಾಗಿದ್ದು, ಜೈಲಿಗೂ ಹೋಗಿ ಬಂದಿದ್ದಾನೆ. ರೈಸ್ ಪುಲ್ಲಿಂಗ್​​ನಲ್ಲಿ ಹಣ ಕಳೆದುಕೊಂಡಿದ್ದರಿಂದ ಹೊಸ ವ್ಯಾಪಾರ ಮಾಡಲು ಮುಂದಾಗಿದ್ದ ಶಿವಶಂಕರ್ ಇತ್ತೀಚೆಗೆ ಆಂಧ್ರ ಮೂಲದ ಮೊಹಮ್ಮದ್ ಪರ್ವೇಜ್ ಹಾಗೂ ಜಿಪ್ಸನ್, ಹೈದರಾಬಾದ್ ಮೂಲದ ಸಲೀಂ ಪ್ಲ್ಯಾನ್​ ಮಾಡಿದ್ದರು.

1.09 ಕೋಟಿ ರೂ. ದರೋಡೆ

ಸೋಮವಾರ ರಾತ್ರಿ ಸಲೀಂನಿಂದ ಪೀಣ್ಯಾ ಬಳಿ 35 ಲಕ್ಷ ರೂ ಪಡೆದು ತನ್ನ ಮನೆಯಲ್ಲಿ ಇಟ್ಟಿದ್ದ ಶಿವಶಂಕರ್, ಬಳಿಕ ಪರ್ವೇಜ್ ಹಾಗೂ ಜಿಪ್ಸನ್‌ನನ್ನು ಭೇಟಿಯಾಗಲು ಯಲಹಂಕಕ್ಕೆ ತೆರಳಿದ್ದನು. ಅಲ್ಲಿ ಅವರಿಂದ 74 ಲಕ್ಷ ರೂ ಹಣವನ್ನು ಪಡೆದು ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ದರೋಡೆಕೋರರು ಅಟ್ಯಾಕ್ ಮಾಡಿದ್ದಾರೆ. ಕಾರಿನಲ್ಲಿದ್ದ 74 ಲಕ್ಷ ರೂ ದೋಚಿದ್ದಲ್ಲದೆ, ತಮ್ಮೆನಹಳ್ಳಿಯ ಮನೆಯಲ್ಲಿದ್ದ 35 ಲಕ್ಷ ರೂ ಹಣವನ್ನು ತರಿಸಿಕೊಂಡು ಒಟ್ಟು 1.09 ಕೋಟಿ ರೂ. ದೋಚಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ

ಘಟನೆಗೆ ಸಂಬಂಧಿಸಿದಂತೆ ಸದ್ಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಲ್ಲೆ ನಡೆಸಿ ಕೋಟ್ಯಂತರ ಹಣದೊಂದಿಗೆ ಪರಾರಿಯಾಗಿರುವ ಆ 7 ಜನ ಮುಸುಕುದಾರಿ ದರೋಡೆಕೋರರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಮೌಲ್ಯದ ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ! – Kannada News | Masked man steals 10,000 Rs Worth cigarettes and cash in Coimbatore

ಕೊಯಮತ್ತೂರು, ಜೂನ್ 17: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸುಲೂರು ಬಳಿಯ ಚಿಂತಾಮಣಿಪುತೂರ್ ಪ್ರದೇಶದಲ್ಲಿ ತಿರುಚಿ ರಸ್ತೆ ಮತ್ತು ಸೇಲಂ-ಕೊಚ್ಚಿನ್ ಬೈಪಾಸ್ ರಸ್ತೆ ಸಂಧಿಸುವ 4 ಮಾರ್ಗದ ಜಂಕ್ಷನ್ ಇದೆ. ಕಾರ್ತಿಕ್ ಒಡೆತನದ ಬೇಕರಿಯೊಂದು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಯಾವಾಗಲೂ ವಾಹನ ಸಂಚಾರ ಮತ್ತು ಸಾರ್ವಜನಿಕ ಸಂಚಾರದಿಂದ ಕಾರ್ಯನಿರತವಾಗಿರುತ್ತದೆ. ಎಂದಿನಂತೆ, ಈ ಬೇಕರಿಯ ಮಾಲೀಕ ಕಾರ್ತಿಕ್ ನಿನ್ನೆ ರಾತ್ರಿ ಅಂಗಡಿಗೆ ಬೀಗ ಹಾಕಿ ಹೊರಟು ಹೋಗಿದ್ದರು. ಮಧ್ಯರಾತ್ರಿ ಅಲ್ಲಿಗೆ ಬಂದ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಬೇಕರಿಯ ಶಟರ್ ಮುರಿದು ಒಳಗೆ ಪ್ರವೇಶಿಸಿ, ನಂತರ ಪೆಟ್ಟಿಗೆಯನ್ನು ಒಡೆದು ಅಂಗಡಿಯಲ್ಲಿದ್ದ 7,000 ರೂ. ನಗದು ಮತ್ತು 10,000 ರೂ. ಮೌಲ್ಯದ ಸಿಗರೇಟ್ ಪ್ಯಾಕೆಟ್‌ಗಳನ್ನು ಕದ್ದು ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಲಸಿನ ಹಣ್ಣಿನ ಬೀಜಗಳನ್ನು ಎಸೆಯುತ್ತಿದ್ದೀರಾ? ಇದರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ? – Kannada News | From Digestion to Heart Health: Amazing Benefits of Jackfruit Seeds

ಹಲಸಿನ ಹಣ್ಣು (Jackfruit) ರುಚಿ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಹಣ್ಣು ಎಂಬುದು ತಿಳಿದ ವಿಚಾರ. ಆದರೆ ಹೆಚ್ಚಿನವರು ಹಣ್ಣನ್ನು ತಿಂದ ನಂತರ ಅದರ ಬೀಜಗಳನ್ನು ತ್ಯಾಜ್ಯವೆಂದು ಭಾವಿಸಿ ಎಸೆಯುತ್ತಾರೆ. ಇನ್ನು ಕೆಲವರು ಇದರಿಂದ ಕೆಲವು ರೆಸಿಪಿಗಳನ್ನು ತಯಾರಿಸುತ್ತಾರೆ. ಆದರೆ ವಾಸ್ತವದಲ್ಲಿ, ಹಲಸಿನ ಬೀಜಗಳು (Jackfruit Seeds) ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೈಸರ್ಗಿಕ ಸೂಪರ್‌ಫುಡ್‌ಗಳಾಗಿವೆ. ಇವುಗಳಲ್ಲಿ ಫೈಬರ್, ಪ್ರೋಟೀನ್, ಪೊಟ್ಯಾಸಿಯಂ, ಕಬ್ಬಿಣ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹಾಗಾದರೆ ಇದರ ಸೇವನೆಯಿಂದ ಸಿಗುವ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ. ಹಲಸಿನ ಹಣ್ಣನ್ನು ತಿಂದು ಬೀಜ ಎಸೆಯುವ ಮುನ್ನ ಇದು ಎಷ್ಟು ಉಪಯೋಗಕಾರಿ ಎಂಬುದನ್ನು ತಿಳಿದುಕೊಳ್ಳಿ.

ಜೀರ್ಣಕ್ರಿಯೆಗೆ ಉತ್ತಮ

ಹಲಸಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ನಾರು (ಫೈಬರ್) ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಹೃದಯ ಆರೋಗ್ಯಕ್ಕೆ ಸಹಕಾರಿ

ಈ ಬೀಜಗಳಲ್ಲಿ ಇರುವ ಪೊಟ್ಯಾಸಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಿ ಹೃದಯದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಕೂಡ ಕಡಿಮೆಯಾಗಬಹುದು.

ತೂಕ ನಿಯಂತ್ರಣಕ್ಕೆ ನೆರವಾಗುತ್ತದೆ

ಹಲಸಿನ ಬೀಜಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಕಾಲ ಇರುತ್ತದೆ. ಇದರಿಂದ ಅನಗತ್ಯ ತಿಂಡಿ ತಿನ್ನುವುದು ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.

ಇದನ್ನೂ ಓದಿ: ಮಧುಮೇಹಿಗಳೇ ಊಟಕ್ಕೂ ಮುನ್ನ ಒಂದು ನೆಲ್ಲಿಕಾಯಿ ತಿಂದು ನೋಡಿ! ದೇಹದಲ್ಲಾಗುವ ಬದಲಾವಣೆ ನಿಮಗೆ ತಿಳಿಯುತ್ತೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಬ್ಬಿಣ, ಜಿಂಕ್ ಮತ್ತು ಇತರೆ ಖನಿಜಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದರಿಂದ ಋತುಬದ್ಧ ಸೋಂಕುಗಳು ಮತ್ತು ಸಾಮಾನ್ಯ ಅನಾರೋಗ್ಯಗಳಿಂದ ರಕ್ಷಣೆ ಪಡೆಯಬಹುದು.

ಚರ್ಮದ ಆರೋಗ್ಯ ಕಾಪಾಡುತ್ತದೆ

ಹಲಸಿನ ಬೀಜಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಫ್ರೀ ರಾಡಿಕಲ್‌ಗಳ ಹಾನಿಯನ್ನು ಕಡಿಮೆ ಮಾಡುತ್ತವೆ.

ಹೇಗೆ ಸೇವಿಸಬಹುದು?

ಹಲಸಿನ ಬೀಜಗಳನ್ನು ನೀರಿನಲ್ಲಿ ಬೇಯಿಸಿ ತಿನ್ನಬಹುದು ಅಥವಾ ಸ್ವಲ್ಪ ಹುರಿದು ಆರೋಗ್ಯಕರ ಸ್ನ್ಯಾಕ್ ಆಗಿ ಸೇವಿಸಬಹುದು. ಕರಿ, ಸೂಪ್ ಅಥವಾ ಇತರೆ ಅಡುಗೆಗಳಲ್ಲಿ ಕೂಡ ಸೇರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್ 5 ಸ್ಥಾನ ಗೆಲ್ಲಲು ಕಾಂಗ್ರೆಸ್ ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ ಗೊತ್ತಾ? – Kannada News | Karnataka MLC Polls 2026: 8 Candidates, 7 seats, here is Congress Plan winning In Five seats

ಬೆಂಗಳೂರು, (ಜೂನ್ 17): ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ (Legislative Council Election) ರಂಗೇರಿದೆ. ಎಲ್ಲಾ ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಇನ್ನಿಲ್ಲದ ಕಸರತ್ತು ನಡೆಸ್ತಿವೆ. ಅಡ್ಡಮತದಾನ ಭೀತಿ ಹಿನ್ನೆಲೆ ರೆಸಾರ್ಟ್​ ಪಾಲಿಟಿಕ್ಸ್ (Resort Politics)​ ಕೂಡ ಶುರುವಾಗಿದ್ದು, ನಾಳೆ (ಜೂನ್ 18) ನಡೆಯಲಿರುವ ವಿಧಾನ ಪರಿಷತ್​ ಚುನಾವಣೆಯಲ್ಲಿ ಐದು ಸ್ಥಾನ ಗೆಲ್ಲಲು ಕಾಂಗ್ರೆಸ್ (Congress) ಪಕ್ಷ ರಣತಂತ್ರ ಹೂಡಿದೆ.

ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳ ಜೊತೆ ಇನ್ನೊಂದು ಹೆಚ್ಚುವರಿ ಸ್ಥಾನವನ್ನು ಗೆಲ್ಲಲು ಕಸರತ್ತು ನಡೆಸಿದ್ದು, ಇದಕ್ಕೆ ಬೇಕಾದ ಎಲ್ಲಾ ಕಾರ್ಯತಂತ್ರಗಳನ್ನು ಮಾಡಿದೆ. ಕೈ ಶಾಸಕರು ನಾಳೆ (ಜೂನ್ 18) ‌ ನೇರವಾಗಿ ರೆಸಾರ್ಟ್ನಿಂದ ವಿಧಾನಸೌಧಕ್ಕೆ ತೆರಳಿ ಮತದಾನ ಮಾಡಲಿದ್ದಾರೆ. ಇದಕ್ಕೆ ಐವರು ಅಭ್ಯರ್ಥಿಗಳಿಗೆ ಐದು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಯಾವ ಅಭ್ಯರ್ಥಿ ಪರ ಯಾರು ಮತ ಚಲಾವಣೆ ಮಾಡಬೇಕು ಎಂದು ಶಾಸಕರ ವರ್ಗೀಕರಣ ಸಹ ಮಾಡಲಾಗಿದ್ದು, ವರ್ಗೀಕರಣದ ಪ್ರಕಾರವೇ ವಿಧಾನಸೌಧಕ್ಕೆ ಪ್ರತ್ಯೇಕ ಬಸ್ ನಲ್ಲಿ ತೆರಳಲು ಸೂಚನೆ ನೀಡಲಾಗಿದೆ. ಐವರು ಅಭ್ಯರ್ಥಿಗಳಲ್ಲಿ ಮೂರು ಅಭ್ಯರ್ಥಿಗಳಿಗೆ 28 ಮತಗಳು, ಇಬ್ಬರು ಅಭ್ಯರ್ಥಿಗಳಿಗೆ 29 ಮತ ಹಾಕಲು ಸದ್ಯಕ್ಕೆ ನಿರ್ಧರಿಸಲಾಗಿದೆ.ಯಾವುದೇ ಅಭ್ಯರ್ಥಿ ಸೋತರೆ, ಅಡ್ಡ ಮತದಾನ ಮಾಡಿದರೆ ಎಂದು ಸುಲಭವಾಗಿ ಪತ್ತೆ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಊಟವಾದ ಬಳಿಕ ಒಂದು ಚಿಟಿಕೆ ಸೋಂಪು ತಿನ್ನುವ ಅಭ್ಯಾಸ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಿಗೆ ಕಾರಣವಾಗುತ್ತೆ ಗೊತ್ತಾ? – Kannada News | From Digestion to Fresh Breath: Why Fennel Seeds Matter

ಕೆಲವರಿಗೆ ಊಟವಾದ ನಂತರ ಸೋಂಪು (Fennel Seeds) ತಿನ್ನುವ ಅಭ್ಯಾಸವಿರುತ್ತದೆ. ಇದು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ದೊರೆಯುವ ಮಸಾಲೆ ಪದಾರ್ಥಗಳಲ್ಲಿ ಒಂದು. ಆದರೆ ಇದು ಕೇವಲ ಬಾಯಿಗೆ ಸುವಾಸನೆ ನೀಡುವುದಷ್ಟೇ ಅಲ್ಲ, ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಊಟದ ನಂತರ ಸ್ವಲ್ಪ ಸೋಂಪನ್ನು ಜಗಿದು ತಿನ್ನುವ ಅಭ್ಯಾಸ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹೌದು, ಒಂದು ಚಿಕ್ಕ ಅಭ್ಯಾಸ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಯಾಕೆ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಸೋಂಪು ಜೀರ್ಣರಸಗಳು ಮತ್ತು ಎನ್ಜೈಮ್‌ಗಳ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗಲು ನೆರವಾಗುತ್ತದೆ. ಊಟದ ನಂತರ ಸ್ವಲ್ಪ ಸೋಂಪು ತಿನ್ನುವುದು ಜೀರ್ಣಕ್ರಿಯೆಗೆ ಉತ್ತಮ.

ಬಾಯಿಯ ದುರ್ವಾಸನೆ ನಿವಾರಣೆ

ಸೋಂಪಿನಲ್ಲಿರುವ ನೈಸರ್ಗಿಕ ಸುಗಂಧ ತೈಲಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಊಟದ ಬಳಿಕ ಸೋಂಪು ಸೇವಿಸುವುದು ಉಸಿರಾಟವನ್ನು ತಾಜಾವಾಗಿರಿಸುತ್ತದೆ.

ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ಸೋಂಪಿನಲ್ಲಿ ವಿಟಮಿನ್ ಎ ಮತ್ತು ಆಂಟಿಆಕ್ಸಿಡೆಂಟ್‌ಗಳು ಇದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ನಿಯಮಿತ ಸೇವನೆಯಿಂದ ದೃಷ್ಟಿ ಆರೋಗ್ಯಕ್ಕೆ ಲಾಭವಾಗಬಹುದು.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಸೋಂಪಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಫ್ರೀ ರಾಡಿಕಲ್‌ಗಳ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ. ಇದರಿಂದ ಚರ್ಮದ ಆರೋಗ್ಯ ಸುಧಾರಿಸಿ, ಬೇಗ ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಇದನ್ನೂ ಓದಿ: ಮಧುಮೇಹಿಗಳೇ ಊಟಕ್ಕೂ ಮುನ್ನ ಒಂದು ನೆಲ್ಲಿಕಾಯಿ ತಿಂದು ನೋಡಿ! ದೇಹದಲ್ಲಾಗುವ ಬದಲಾವಣೆ ನಿಮಗೆ ತಿಳಿಯುತ್ತೆ

ತೂಕ ನಿಯಂತ್ರಣಕ್ಕೆ ಸಹಕಾರಿ

ಸೋಂಪು ಹಸಿವಿನ ನಿಯಂತ್ರಣಕ್ಕೆ ಸಹಕಾರಿ. ಇದನ್ನು ಜಗಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗಿ ಅನಗತ್ಯ ತಿಂಡಿ ತಿನ್ನುವ ಆಸೆ ಕಡಿಮೆಯಾಗಬಹುದು.

ರಕ್ತದೊತ್ತಡ ನಿಯಂತ್ರಣ

ಸೋಂಪಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.

ಮಾನಸಿಕ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗೆ ಒಳ್ಳೆಯದು

ಸೋಂಪಿನಲ್ಲಿರುವ ಪೋಷಕಾಂಶಗಳು ದೇಹದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು (Metabolism) ಉತ್ತೇಜಿಸಿ ದೇಹವನ್ನು ಚುರುಕಾಗಿರಿಸುತ್ತದೆ.

ಭೋಜನದ ನಂತರ ಒಂದು ಚಿಟಿಕೆ ಸೋಂಪು ತಿನ್ನುವುದು ಸರಳ ಅಭ್ಯಾಸ ಎನಿಸಿದರೂ ಕೂಡ ಆರೋಗ್ಯಕರ ಅಭ್ಯಾಸವಾಗಿದೆ. ಇದು ಜೀರ್ಣಕ್ರಿಯೆ, ಬಾಯಿಯ ಆರೋಗ್ಯ, ಚರ್ಮ, ಹೃದಯ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ಆದರೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ನಾಯಕನಾಗಿ ಚೊಚ್ಚಲ ಏಕದಿನ ಸರಣಿ ಗೆದ್ದ ಶುಭ್​ಮನ್ ಗಿಲ್ – Kannada News | India Dominates Afghanistan: Gill’s Maiden Series Win, 170 Run Victory in Lucknow ODI

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನವನ್ನು 170 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಶುಭ್​ಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆದ್ದ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 402 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 44.3 ಓವರ್​ಗಳಲ್ಲಿ 232 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಗುರ್ನೂರ್ ಬ್ರಾರ್ ಮತ್ತು ಅರ್ಷದೀಪ್ ಸಿಂಗ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಪ್ರಿನ್ಸ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದರು.

Source link

International Picnic Day 2026: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ – Kannada News | International Picnic Day 2026: Why is International Picnic Day celebrated? Here’s the information

ಅಂತಾರಾಷ್ಟ್ರೀಯ ಪಿಕ್ನಿಕ್‌ ದಿನImage Credit source: Pexels

ಪಿಕ್ನಿಕ್‌ (Picnic) ಹೋಗೋದು ಎಂದ್ರೆ ಎಲ್ಲರಿಗೂ ಇಷ್ಟ. ಪಿಕ್ನಿಕ್ ಎಂದರೆ ಸ್ನೇಹಿತರು, ಕುಟುಂಬ ಮತ್ತು ಆಪ್ತರೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗುವುದು ಮತ್ತು  ಪ್ರಕೃತಿಯ ನಡುವೆ ಆನಂದಿಸುವುದು. ಇದೊಂದು ರೀತಿಯಲ್ಲಿ ಸಣ್ಣ ಪ್ರವಾಸವಾಗಿದ್ದು, ಪ್ರೀತಿಪಾತ್ರರೊಂದಿಗೆ ಹೊರಗಡೆ ಹೋಗುವ ಮೂಲಕ ಒಂದೊಳ್ಳೆ ಸಮಯವನ್ನು ಕಳೆಯಬಹುದು. ಅನೇಕರು ತಮ್ಮ ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಸುಂದರ ಪಾರ್ಕ್‌, ಬೀಚ್‌, ವಾಟರ್‌ಫಾಲ್ಸ್‌ನಂತಹ ಸುಂದರ ತಾಣಗಳಿಗೆ  ಊಟ ತಿಂಡಿ, ಹಣ್ಣು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗಿ, ಅದನ್ನು ತಿನ್ನುತ್ತಾ ತಮ್ಮವರೊಂದಿಗೆ ಮೋಜು ಮಾಡುತ್ತಾ ಪಿಕ್ನಿಕ್‌ ಆನಂದಿಸುತ್ತಾರೆ. ಹೀಗೆ ಪಿಕ್ನಿಕ್‌ ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯುವುದರ ಜೊತೆಗೆ ಹೀಗೆ ಹೊರಗಡೆ ಸುತ್ತಾಡಲು ಹೋಗುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೂ ಒಂದು ರೀತಿಯ ಮುದ ಸಿಗುತ್ತದೆ. ಈ ಪಿಕ್ನಿಕ್‌ಗೂ ಒಂದು ದಿನವಿದ್ದು, ಆ ವಿಶೇಷ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ.

ಅಂತಾರಾಷ್ಟ್ರೀಯ ಪಿಕ್ನಿಕ್ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಪ್ರತಿ ವರ್ಷ ಜೂನ್ 18 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪಿಕ್ನಿಕ್ ಎಂಬ ಪದವು ಫ್ರೆಂಚ್ ಪದ ‘ಪಿಕ್-ನಿಕ್’ ನಿಂದ ಬಂದಿದೆ, ಇದರರ್ಥ ಎಲ್ಲರೂ  ಆಹಾರವನ್ನು ಹಂಚಿಕೊಳ್ಳುವ ಸಾಮಾಜಿಕ ಕಾರ್ಯಕ್ರಮ. ಪಿಕ್ನಿಕ್ ದಿನದ ಇತಿಹಾಸ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪಿಕ್ನಿಕ್‌ಗಳು ಒಂದು ರೀತಿಯ ಅನೌಪಚಾರಿಕ ಊಟದ ಕಾರ್ಯಕ್ರವಾಗಿ ಪ್ರಾರಂಭವಾಯಿತು ಎಂದು ನಂಬಲಾಗಿದೆ.

ವರದಿಯ ಪ್ರಕಾರ, 19 ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಪಿಕ್ನಿಕ್‌ಗಳು ಜನಪ್ರಿಯವಾದವು. ನಂತರದ ವರ್ಷಗಳಲ್ಲಿ, ರಾಜಕೀಯ ಪ್ರತಿಭಟನೆಗಳ ಸಮಯದಲ್ಲಿ ಪಿಕ್ನಿಕ್‌ಗಳು ಸಾಮಾನ್ಯ ಸಭೆಯಾದವು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪೋರ್ಚುಗಲ್‌ನಲ್ಲಿ ನಡೆದ ಪಿಕ್ನಿಕ್ ಅನ್ನು ಅತಿದೊಡ್ಡ ಪಿಕ್ನಿಕ್ ಎಂದು ದಾಖಲಿಸಿದೆ. ಆ ಕಾರ್ಯಕ್ರಮದಲ್ಲಿ ಸುಮಾರು 20,000 ಜನರು ಭಾಗವಹಿಸಿದ್ದರು.

ಇದನ್ನೂ ಓದಿ: ಬರಡಾಗುತ್ತಿರುವ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ

ಪಿಕ್ನಿಕ್‌ ಹೋಗುವುದರಿಂದ ಲಭಿಸುವ ಪ್ರಯೋಜನಗಳು:

  • ಬೀಚ್‌, ಫಾಲ್ಸ್‌, ಪಾರ್ಕ್‌ನಂತಹ ಸ್ಥಳಗಳಿಗೆ ಪಿಕ್ನಿಕ್‌ಗೆ ಹೋದಾಗ ದಿನವಿಡೀ ತಾಜಾ ಗಾಳಿಯನ್ನು ಉಸಿರಾಡಲು ನಮಗೆ ಅವಕಾಶ ಸಿಗುತ್ತದೆ. ಇದು ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ. ಮನಸ್ಸನ್ನು ರಿಫ್ರೆಶ್‌ ಮಾಡುತ್ತದೆ.
  • ಆಗಾಗ್ಗೆ ಪಿಕ್ನಿಕ್‌ಗಳಿಗೆ ಹೋಗುವುದರಿಂದ ವಿವಿಧ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಪ್ರಕೃತಿ, ಫ್ರೆಂಡ್ಸ್‌, ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಒತ್ತಡದಿಂದಲೂ ಮುಕ್ತಿ ಪಡೆಯಬಹುದು. ನಿಯಮಿತವಾಗಿ ಪಿಕ್ನಿಕ್‌ಗೆ ಹೋಗುವುದರಿಂದ ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತದೆ.
  • ಇತ್ತೀಚಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡದ ಕಾರಣ ಜನರಿಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಟೈಂ ಸಿಗುತ್ತಿಲ್ಲ. ಹೀಗಿರುವಾಗ ಪಿಕ್ನಿಕ್‌ ಡೇ ಸಂದರ್ಭದಲ್ಲಿ ಒಂದೊಳ್ಳೆ ಸ್ಥಳಕ್ಕೆ ಪಿಕ್ನಿಕ್‌ ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಟೈಮ್‌ ಸ್ಪೆಂಡ್‌ ಮಾಡುವುದರ ಜೊತೆಗೆ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link