ರನ್ನರ್ ಅಪ್ ಆದರೂ ಕಡಿಮೆಯಲ್ಲ ಕರಾವಳಿ ಚಿನಕುರಳಿಯ ಸಾಧನೆ – Kannada News | Bigg Boss Kannada 12: Rakshita Shetty became first Runner Up
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಮುಗಿದಿದೆ. ಸುದೀಪ್ ಅವರು ಈ ಸೀಸನ್ನ ವಿನ್ನರ್ನ ಘೋಷಣೆ ಮಾಡಿದ್ದಾರೆ. ಬಹುತೇಕರು ಮೊದಲೇ ಊಹಿಸಿದ್ದಂತೆ ಗಿಲ್ಲಿ ನಟ ಅವರು 12ನೇ ಸೀಸನ್ನ ವಿನ್ನರ್ ಆಗಿದ್ದಾರೆ. ತಮ್ಮ ಹಾಸ್ಯದಿಂದ ಅವರು ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಬಿಗ್ಬಾಸ್ 12ರ ಮನೆಗೆ ಒಟ್ಟು 24 ಮಂದಿ ಬಂದಿದ್ದರು. ಅವರಲ್ಲಿ ಬಹುತೇಕರು ನಟರು, ಆದರೆ ನಟನೆಯ ಸಣ್ಣ ಹಿನ್ನೆಲೆಯೂ ಇಲ್ಲದೆ, ಉಡುಪಿಯ ಹಳ್ಳಿಯೊಂದರಲ್ಲಿ ತಮಗೆ ತೋಚಿದಂತೆ ಅಡುಗೆ ವಿಡಿಯೋಗಳ ಮಾಡುತ್ತಿದ್ದ ಕನ್ನಡ ಭಾಷೆಯೂ…