TV9 ಬಿಗ್ ಇಂಪ್ಯಾಕ್ಟ್: ಮುಚ್ಚಿದ್ದ ಕಾಳಜಿ ಕೇಂದ್ರ 24 ಗಂಟೆಯಲ್ಲೇ ರೀ-ಓಪನ್! – Kannada News | Gadag Flood Victims Get Aid as Admin Reopens Care Center After TV9 News Report
ಗದಗ, ಮೇ.23: ಗದಗ ನಗರದ ಗಂಗಿಮಡಿ ಭಾಗದ ಸಂತ್ರಸ್ತರ ಪರವಾಗಿ ಟಿವಿ೯ (TV9) ಸುದ್ದಿ ಸಂಸ್ಥೆ ಬಿತ್ತರಿಸಿದ ವಿಸ್ತೃತ ವರದಿಗೆ ಕೊನೆಗೂ ಭರ್ಜರಿ ಜಯ ಸಿಕ್ಕಿದೆ. ನಿನ್ನೆ ಮಧ್ಯಾಹ್ನ ಸಂತ್ರಸ್ತರನ್ನು ಹೊರಹಾಕಿ ದಿಢೀರನೆ ಬಂದ್ ಮಾಡಲಾಗಿದ್ದ ಕಾಳಜಿ ಕೇಂದ್ರವನ್ನು, ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತವು ಇಂದು ಮಧ್ಯಾಹ್ನವೇ ಪುನರಾರಂಭಿಸಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಸಂತ್ರಸ್ತರು, “ಟಿವಿ9 ವರದಿಯಿಂದಲೇ ಇಂದು ನಮ್ಮ ಹೊಟ್ಟೆಗೆ ಅನ್ನ ಮತ್ತು ತಲೆಗೊಂದು ಆಸರೆ ಸಿಕ್ಕಿದೆ” ಎಂದು ಭಾವುಕರಾಗಿ…