Category Archives: Blog

Your blog category

ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು – Kannada News | Belagavi Police Operation: Workers Cleared of Illegal Bangladeshi Status Post Document Scan

ಬೆಳಗಾವಿ ಅಕ್ರಮ ವಲಸಿಗರು ಪರಿಶೀಲನೆ ಮಾಡುತ್ತಿರುವ ಪೊಲೀಸರು Image Credit source: Tv9 kannada

ಬೆಳಗಾವಿ,ಮೇ,23: ಕುಂದಾನಗರಿ ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಬಂದಿದ್ದಾರೆ ಎಂಬ ತೀವ್ರ ಆರೋಪ ಮತ್ತು ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆತಂದ ಡಿಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ, ಅವರ ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದೆ.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ನೇತೃತ್ವದ ತಂಡವು, “ಹುಬ್ಬಳ್ಳಿಯಲ್ಲೂ ಕೆಲವರ ತಪಾಸಣೆಯಾಗಿದ್ದು, ಮೂರು ಬಸ್‌ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನಗರಕ್ಕೆ ಬಂದಿದ್ದಾರೆ” ಎಂದು ಅನುಮಾನ ವ್ಯಕ್ತಪಡಿಸಿ ತಪಾಸಣೆಗೆ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಆದ ಪೊಲೀಸರು ತಕ್ಷಣವೇ ಎಲ್ಲರನ್ನೂ ಮಾಳಮಾರುತಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ವಶಕ್ಕೆ ಒಳಗಾದವರು, “ನಾವು ಬಾಂಗ್ಲಾದೇಶದವರಲ್ಲ, ಪಶ್ಚಿಮ ಬಂಗಾಳ ಮೂಲದವರು. ಶಹಾಪುರದಲ್ಲಿ ಅಕ್ಕಸಾಲಿಗರಾಗಿ (ಬಂಗಾರದ ಕೆಲಸ) ಕೆಲಸ ಮಾಡುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮತದಾನ ಇದ್ದಿದ್ದರಿಂದ ಊರಿಗೆ ಹೋಗಿದ್ದೆವು, ಈಗ ವಾಪಸ್ ಕೆಲಸಕ್ಕೆ ಬಂದಿದ್ದೇವೆ” ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು

ಡಿಸಿಪಿ ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರ ಮೊಬೈಲ್ ಸಂಖ್ಯೆಗಳು, ಆಧಾರ್ ಕಾರ್ಡ್‌ಗಳು ಮತ್ತು ವೋಟರ್ ಐಡಿಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲವೂ ಅಸಲಿ ದಾಖಲೆಗಳೆಂದು ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ಸುರಕ್ಷತೆಗಾಗಿ ಎಲ್ಲರ ಹೆಬ್ಬೆರಳ ಗುರುತುಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಯಾವುದೇ ಅಧಿಕೃತ ತಾಂತ್ರಿಕ ದೋಷ ಕಂಡುಬರದ ಕಾರಣ, ವಿಚಾರಣೆಯ ನಂತರ ಆ ಎಲ್ಲಾ ಕಾರ್ಮಿಕರನ್ನು ಅವರವರ ನಿವಾಸ ಹಾಗೂ ಕೆಲಸದ ಸ್ಥಳಗಳಿಗೆ ವಾಪಸ್ ಕಳುಹಿಸಿಕೊಡಲಾಗಿದೆ. ನಕಲಿ ದಾಖಲೆಗಳಿವೆಯೇ ಎಂಬ ಬಗ್ಗೆ ಆಂತರಿಕ ಪರಿಶೀಲನೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Admissions Open: IIIT ಬೆಂಗಳೂರು ಬಿ.ಟೆಕ್ ಪ್ರವೇಶಾತಿ ಆರಂಭ: ಜೂನ್ 8ರೊಳಗೆ ಅರ್ಜಿ ಸಲ್ಲಿಸಿ – Kannada News | IIIT Bangalore Admissions 2026 27 Open: Apply for B.Tech & Integrated M.Tech Now!

IIIT ಬೆಂಗಳೂರು ಬಿ.ಟೆಕ್ ಪ್ರವೇಶಾತಿ ಆರಂಭImage Credit source: Pinterest

ಬೆಂಗಳೂರು: ದೇಶದ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT) ಬೆಂಗಳೂರು, 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಬಿ.ಟೆಕ್ (B.Tech) ಮತ್ತು ಇಂಟಿಗ್ರೇಟೆಡ್ ಎಂ.ಟೆಕ್ (Integrated M.Tech) ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಈ ಸಂಸ್ಥೆಯ ಸೀಟು ಹಂಚಿಕೆಯು JoSAA (ಜೋಸಾ) ಕೌನ್ಸೆಲಿಂಗ್ ಮೂಲಕ ನಡೆಯುವುದಿಲ್ಲ. ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕವೇ ನೇರವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಲಭ್ಯವಿರುವ ಪ್ರಮುಖ ಕೋರ್ಸ್‌ಗಳು:

ಈ ಶೈಕ್ಷಣಿಕ ವರ್ಷದಲ್ಲಿ IIIT ಬೆಂಗಳೂರು ಜಾಗತಿಕ ಬೇಡಿಕೆಗೆ ತಕ್ಕMultiplier ಸುಧಾರಿತ ತಂತ್ರಜ್ಞಾನದ ಕೋರ್ಸ್‌ಗಳನ್ನು ನೀಡುತ್ತಿದೆ:

ಬಿ.ಟೆಕ್ ಕಾರ್ಯಕ್ರಮಗಳು (4 ವರ್ಷ):

  • ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (CSE)
  • ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ (ECE)
  • ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ (AI & DS)

ಇಂಟಿಗ್ರೇಟೆಡ್ ಎಂ.ಟೆಕ್ ಕಾರ್ಯಕ್ರಮಗಳು (5 ವರ್ಷ):

  • ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (CSE)
  • ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ (ECE)

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಆಯ್ಕೆ ಪ್ರಕ್ರಿಯೆ ಹೇಗೆ? (Eligibility Criteria)

  • JEE ಮೇನ್ ರ‍್ಯಾಂಕ್ ಆಧಾರ: ಅಭ್ಯರ್ಥಿಗಳು JEE Main 2026 ಅಥವಾ JEE Advanced 2026 ಪರೀಕ್ಷೆಯಲ್ಲಿ ಪಡೆದಿರುವ ಅಖಿಲ ಭಾರತ ರ‍್ಯಾಂಕಿಂಗ್ (All India Rank) ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಸೀಟು ಹಂಚಿಕೆ ಮಾಡಲಾಗುತ್ತದೆ. ಹೈಯರ್ ರ‍್ಯಾಂಕ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರಲಿದೆ.

  • ಒಲಿಂಪಿಯಾಡ್ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ: 2025 ಅಥವಾ 2026 ರಲ್ಲಿ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ ತರಬೇತಿ ಶಿಬಿರ (IMOTC) ಅಥವಾ ಅಂತರರಾಷ್ಟ್ರೀಯ ಮಾಹಿತಿ ಒಲಿಂಪಿಯಾಡ್ ತರಬೇತಿ ಶಿಬಿರಕ್ಕೆ (IOITC) ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆಯಲ್ಲಿ ವಿಶೇಷ ಪರಿಗಣನೆ ಮತ್ತು ಸವಲತ್ತುಗಳನ್ನು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಕ್ಷಿಣದ ಇಬ್ಬರೂ ಸೂಪರ್​​ ಸ್ಟಾರ್​ಗಳು ಒಂದೇ ಸಿನಿಮಾದಲ್ಲಿ; ನಡೆದಿದೆ ದೊಡ್ಡ ಯೋಜನೆ – Kannada News | Balakrishna and Mohanlal to Team Up? Vivek Athreya Planning a Massive South Multi starrer

ತೆಲುಗು ಚಿತ್ರರಂಗದ ನಿರ್ದೇಶಕ ವಿವೇಕ್ ಆತ್ರೇಯ ಈಗ ದಕ್ಷಿಣ ಭಾರತದ ಇಬ್ಬರು ದಗ್ಗಜ ನಟರನ್ನು ಒಂದೇ ಪರದೆಯ ಮೇಲೆ ತರಲು ಭಾರಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಹೌದು, ನಂದಮೂರಿ ಬಾಲಕೃಷ್ಣ (Balayya) ಅವರ ಮುಂದಿನ ಚಿತ್ರಕ್ಕಾಗಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರನ್ನು ಕರೆತರಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಸುದ್ದಿ ಈಗ ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ.

‘ಸರಿಪೋದಾ ಶನಿವಾರಂ’ ಚಿತ್ರದ ಯಶಸ್ಸಿನ ಬಳಿಕ ವಿವೇಕ್ ಆತ್ರೇಯ ಅವರು ಬಾಲಕೃಷ್ಣ ಅವರಿಗಾಗಿ ಔಟ್ ಅಂಡ್ ಔಟ್ ಮಾಸ್ ಎಂಟರ್‌ಟೈನರ್ ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಕಥೆಯ ಮತ್ತೊಂದು ಪ್ರಮುಖ ಪಾತ್ರಕ್ಕೆ ಅಷ್ಟೇ ತೂಕವಿರುವ ಬೇರೆ ನಟರೊಬ್ಬರನ್ನು ಹಾಕಿಕೊಳ್ಳಲು ನಿರ್ದೇಶಕರು ನಿರ್ಧರಿಸಿದ್ದಾರೆ. ಆ ಪ್ರಭಾವಿ ಪಾತ್ರಕ್ಕಾಗಿ ಈಗ ಮೋಹನ್‌ಲಾಲ್ ಅವರ ಹೆಸರನ್ನು ಪರಿಗಣಿಸಲಾಗಿದ್ದು, ಸದ್ಯದಲ್ಲೇ ಅವರಿಗೆ ಕಥೆ ಹೇಳಲು ಚಿತ್ರತಂಡ ಸಜ್ಜಾಗಿದೆ.

ಮೋಹನ್‌ಲಾಲ್ ಅವರಿಗೆ ಈಗಾಗಲೇ ತೆಲುಗಿನಲ್ಲಿ ಭಾರಿ ಜನಪ್ರಿಯತೆ ಇದೆ. ಈ ಹಿಂದೆ ಜೂನಿಯರ್ ಎನ್‌ಟಿಆರ್ ಅಭಿನಯದ ‘ಜನತಾ ಗ್ಯಾರೇಜ್’ ಚಿತ್ರದಲ್ಲಿ ಅವರು ಅದ್ಭುತವಾಗಿ ನಟಿಸಿದ್ದರು. ಇನ್ನು ವಿಶೇಷವೆಂದರೆ, ಸುಮಾರು ಮೂರು ದಶಕಗಳ ಹಿಂದೆ ಮೂಡಿಬಂದಿದ್ದ ‘ಗಾಂಡೀವಂ’ ಚಿತ್ರದ ಹಾಡಿನಲ್ಲಿ ಬಾಲಕೃಷ್ಣ ಮತ್ತು ಮೋಹನ್‌ಲಾಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ವಿವೇಕ್ ಆತ್ರೇಯ ಚಿತ್ರದಲ್ಲಿ ಇವರಿಬ್ಬರಿಗೂ ಪೂರ್ಣ ಪ್ರಮಾಣದ ಸ್ಕ್ರೀನ್ ಸ್ಪೇಸ್ ಸಿಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್

ಪ್ರಸ್ತುತ ಬಾಲಕೃಷ್ಣ ಅವರು ಗೋಪಿಚಂದ್ ಮಲಿನೇನಿ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಬಳಿಕ ಕೊರಟಾಲ ಶಿವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇತ್ತ ನಿರ್ದೇಶಕ ವಿವೇಕ್, ರವಿತೇಜ ಅವರ ಜೊತೆ ಒಂದು ಸಿನಿಮಾ ಮುಗಿಸಿ ನಂತರ ಬಾಲಯ್ಯ ಪ್ರಾಜೆಕ್ಟ್‌ಗೆ ಕೈಹಾಕಲಿದ್ದಾರೆ. ಈ ಬಿಗ್ ಕಾಂಬಿನೇಷನ್ ಅಧಿಕೃತವಾಗಿ ಅನೌನ್ಸ್ ಆದಲ್ಲಿಅಭಿಮಾನಿಗಳಿಗೆ ಖುಷಿಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಇದ್ಯಾವ ರೀತಿಯ ಬೌಲಿಂಗ್..! ಕೃನಾಲ್ ಬೌಲಿಂಗ್‌ಗೆ ಕಾವ್ಯ ಮಾರನ್ ಗರಂ – Kannada News | IPL 2026: SRH Beats RCB; Kavya Maran’s Viral Reaction to Krunal Pandya’s Bowling

2026 ರ ಐಪಿಎಲ್‌ನ (IPL 2026) 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (SRH vs RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಹೈದರಾಬಾದ್ 55 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವೆ ನಡೆದಿದ್ದ ಮಾತಿನ ಚಕಮಕಿ ಇದೀಗ ಸಖತ್ ಸದ್ದು ಮಾಡಿದೆ. ಇದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಿಕಿ ಕಾವ್ಯ ಮಾರನ್ (Kavya Maran), ಆರ್​ಸಿಬಿ ಸ್ಪಿನ್ನರ್ ಕೃನಾಲ್ ಪಾಂಡ್ಯ (Krunal Pandya) ಬೌಲಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ಕೂಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಚ್ಚರಿಗೊಳಗಾದ ಕಾವ್ಯ ಮಾರನ್

ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಆಗಿರುವ ಕೃನಾಲ್ ಪಾಂಡ್ಯ, ಸಾಂದರ್ಭಿಕವಾಗಿ ವಿಚಿತ್ರವಾದ ಬೌಲಿಂಗ್ ಶೈಲಿಯಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೀಡು ಮಾಡುತ್ತಾರೆ. ಈ ಆವೃತ್ತಿಯಲ್ಲಿ ಅದನ್ನು ಸಮಯಕ್ಕೆ ಅನುಸಾರವಾಗಿ ಬಳಸುತ್ತಿರುವ ಕೃನಾಲ್ ಬ್ಯಾಟ್ಸ್‌ಮನ್​ಗಳನ್ನು ಕಟ್ಟಿಹಾಕುವುದರಲ್ಲೂ ಯಶಸ್ವಿಯಾಗುತ್ತಿದ್ದಾರೆ. ಅದರಂತೆ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲೂ ಪಾಂಡ್ಯ ಬೌನ್ಸರ್ ಅಸ್ತ್ರವನ್ನು ಬಳಸಿದರು. ಕೃನಾಲ್ ಈ ಹಿಂದೆ ಈ ರೀತಿಯಾಗಿ ಬೌಲರ್​ಗಳಂತೆ ವೇಗವಾಗಿ ಬೌಲಿಂಗ್ ಮಾಡುವುದನ್ನು ಗಮನಿಸಿರದ ಕಾವ್ಯ ಮಾರನ್ ಒಂದು ಕ್ಷಣ ಅಚ್ಚರಿಗೊಳಗಾದರು.

ಎಸ್​ಆರ್​ಎಚ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ ಎರಡು ಓವರ್‌ಗಳನ್ನು ಬೌಲ್ ಮಾಡಿದ ಕೃನಾಲ್, ತಾವು ಮಾಡಬೇಕಾಗಿದ್ದ ಸ್ಪಿನ್ ಬದಲಿಗೆ ನಾಲ್ಕರಿಂದ ಆರು ಬೌನ್ಸರ್‌ಗಳನ್ನು ಎಸೆದರು. ಈ ವಿಚಿತ್ರ ಬೌಲಿಂಗ್ ಶೈಲಿಯನ್ನು ಡಗೌಟ್​ನಲ್ಲಿ ಕುಳಿತು ನೋಡುತ್ತಿದ್ದ ಸನ್‌ರೈಸರ್ಸ್ ತಂಡದ ಮಾಲೀಕಿ ಕಾವ್ಯ ಮಾರನ್ ಅಚ್ಚರಿಗೊಳಗಾದರು. ಅವರು ಪಕ್ಕದಲ್ಲಿದ್ದ ಖ್ಯಾತ ತೆಲುಗು ನಟ ವಿಕ್ಟರಿ ವೆಂಕಟೇಶ್ ಕಡೆಗೆ ಕೈ ಬೀಸುತ್ತಾ, ‘ಈ ವ್ಯಕ್ತಿ ಏನು ಬೌಲಿಂಗ್ ಮಾಡುತ್ತಿದ್ದಾನೆ? ಇದು ನಿಯಮಗಳಿಗೆ ವಿರುದ್ಧವಲ್ಲವೇ?” ಎಂದು ಕೇಳುತ್ತ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕಾವ್ಯ ಅವರ ಈ ಅಸಮಾಧಾನ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

IPL 2026:ಕ್ವಾಲಿಫೈಯರ್ 1 ರಲ್ಲಿ ಆರ್​ಸಿಬಿ ಎದುರಾಳಿ ಯಾರು? ಪಂದ್ಯ ಯಾವಾಗ?

ಹೈದರಾಬಾದ್‌ಗೆ ಭರ್ಜರಿ ಗೆಲುವು

ಕೃನಾಲ್ ಪಾಂಡ್ಯ ತಮ್ಮ ವಿಚಿತ್ರ ಬೌಲಿಂಗ್ ಮೂಲಕ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನು ತಡೆಯಲು ಪ್ರಯತ್ನಿಸಿದರೂ, ತವರಿನಲ್ಲಿ ಎಸ್​ಆರ್​ಎಚ್ ಬ್ಯಾಟ್ಸ್‌ಮನ್‌ಗಳನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ತಂಡದ ಪರ ಮೂರು ಅರ್ಧಶತಕಗಳು ಸಿಡಿದವು. ಆರಂಭಿಕ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಹಾಗೂ ಹೆನ್ರಿಚ್ ಕ್ಲಾಸೆನ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇದರ ಪರಿಣಾಮವಾಗಿ ಹೈದರಾಬಾದ್‌ 20 ಓವರ್​ಗಳಲ್ಲಿ 255 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭವನ್ನು ಪಡೆಯಿತ್ತಾದರೂ ಆ ಬಳಿಕ ಸತತ ಮೂರು ವಿಕೆಟ್​ಗಳು ಒಂದರ ಹಿಂದೆ ಒಂದರಂತೆ ಬಿದ್ದ ಬಳಿಕ ತಾಳ್ಮೆಯ ಆಟಕ್ಕೆ ಮುಂದಾಯಿತು. ಅಂತಿಮವಾಗಿ ಅಗ್ರಸ್ಥಾನದಲ್ಲಿ ಉಳಿಯಲು ಎಷ್ಟು ರನ್​ಗಳು ಬೇಕಿತ್ತೋ ಅಷ್ಟು ರನ್​ಗಳ ಗಡಿ ದಾಟುವ ಮೂಲಕ ಆರ್​ಸಿಬಿ ಈ ಪಂದ್ಯವನ್ನು ಸೋತಿತ್ತಾದರೂ ಅಗ್ರಸ್ಥಾನದಲ್ಲಿ ಉಳಿಯುವಲ್ಲಿ ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:10 pm, Sat, 23 May 26

Source link

ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

Source link

Video: ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ

ಜನಸಂಚಾರ ಹೆಚ್ಚಿದ್ದ ರಸ್ತೆಯಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಬೈಕ್ ಸವಾರನೊಬ್ಬ ಸ್ಪೀಡ್ ಬ್ರೇಕರ್‌ನ್ನು ಗಮನಿಸದೇ ವೇಗದಲ್ಲೇ ದಾಟಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ಬೆನ್ನೆಲುಬಿಗೆ ಗಂಭೀರ ಪೆಟ್ಟಾಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸವಾರನ ನಿರ್ಲಕ್ಷ್ಯ ಮತ್ತು ಅತಿವೇಗವೇ ಈ ಅಪಘಾತಕ್ಕೆ ಕಾರಣವಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು – Kannada News | Bengaluru CNG Price Increased by Rs 2: Commuters and Drivers Worried

ಬೆಂಗಳೂರು, ಮೇ 23: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನೆಲ್ಲೇ ಸಿಎನ್​​ಜಿ ಬೆಲೆಯೂ ಏರಿಕೆಯಾಗಿದೆ. ಕಂಪನಿಗಳು 9 ದಿನದಲ್ಲಿ ಮೂರನೇ ಬಾರಿ ಸಿಎನ್‌ಜಿ ದರ ಏರಿಸಿವೆ. ಬೆಂಗಳೂರಿನಲ್ಲೂ CNG ದರ 2 ರೂಪಾಯಿ ಏರಿಕೆಯಾಗಿದ್ದು, ಕೆಜಿ ಸಿಎನ್​​ಜಿ 93 ರೂಪಾಯಿಯಿಂದ 95 ರೂಪಾಯಿಗೆ ಹೆಚ್ಚಳವಾಗಿದೆ. ಇದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಶಾಂತಿನಗರದ ಗಿಲ್ ಗ್ಯಾಸ್ ಮುಂಭಾಗದಲ್ಲಿ ಸಿಎನ್‌ಜಿಗಾಗಿ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಗಂಟೆಗಳ ಕಾಲ ಕಾದರೂ ಇಂಧನ ಸಿಗುವ ಯಾವುದೇ ಖಾತರಿಯಿಲ್ಲ. ಇದು ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಈ ನಿರಂತರ ಬೆಲೆ ಏರಿಕೆ ಮತ್ತು ಇಂಧನ ಪೂರೈಕೆ ಸಮಸ್ಯೆಯಿಂದ ಬೆಂಗಳೂರಿನಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ ಎಂದಿದ್ದಾರೆ.

ವರದಿ: ಅರುಣ್ ಕುಮಾರ್ ಮೆಟ್ರೋ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು – Kannada News | Sirsi Youth Brawl: After Bike Accident, Gang War Erupts; Police Take Action

ಶಿರಸಿ, ಮೇ.23: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣವಾದ ಶಿರಸಿಯಲ್ಲಿ ಕೇವಲ ಒಂದು ಬೈಕ್ ಅಪಘಾತದ ವಿಚಾರವಾಗಿ ಎರಡು ಗುಂಪುಗಳ ನಡುವೆ ಭೀಕರ ಗ್ಯಾಂಗ್‌ವಾರ್ ನಡೆದಿದೆ. ನಗರದ ಸಿಂಪಿಗಲ್ಲಿಯ ನಡುರಸ್ತೆಯಲ್ಲೇ ಯುವಕರ ಎರಡು ಗುಂಪುಗಳು ಪರಸ್ಪರ ಅಟ್ಟಾಡಿಸಿಕೊಂಡು ಮಾರಾಮಾರಿ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಟೌನ್ ಪೊಲೀಸ್ ಠಾಣೆಯಲ್ಲಿ 6 ಯುವಕರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೇ 21ರ ರಾತ್ರಿ ಶಿರಸಿಯ ದೇವಿಕೆರೆ ಬಳಿ ದ್ವಿಚಕ್ರ ವಾಹನಗಳ ನಡುವೆ ಸಣ್ಣದೊಂದು ಅಪಘಾತ ನಡೆದಿದೆ. ಈ ಅಪಘಾತದ ವಿಚಾರವಾಗಿ ಎರಡು ಕೋಮುಗಳ ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ವೈಷಮ್ಯ ಬೆಳೆದಿತ್ತು. ಇದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಯುವಕರ ಗುಂಪು, ಸಿಂಪಿಗಲ್ಲಿಯಲ್ಲಿ ಮುಖಾಮುಖಿಯಾದಾಗ ಏಕಾಏಕಿ ಬೀದಿಯಲ್ಲೇ ರಣರಂಗ ಸೃಷ್ಟಿಯಾಗಿದೆ.

ಇದನ್ನೂ ಓದಿ: ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!

ನಡುರಸ್ತೆಯಲ್ಲಿ ಯುವಕರು ಪರಸ್ಪರ ಗೂಸಾ ಮಾಡಿಕೊಳ್ಳುತ್ತಿದ್ದ ಭೀಕರ ದೃಶ್ಯಗಳು ಸ್ಥಳೀಯ ಸಿಸಿಕ್ಯಾಮರಾದಲ್ಲಿ (CCTV) ಸರೆಆಗಿವೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಿರುವ ಶಿರಸಿ ನಗರ ಠಾಣೆಯ ಪೊಲೀಸರು, ಗಲಾಟೆಯಲ್ಲಿ ಭಾಗಿಯಾಗಿದ್ದ ಅಯಾನ್ ಟಿನಮೇಕ‌ರ್, ಸರ್ಫರಾಜ್ ಟಿನಮೇಕ‌ರ್, ಆದಿಲ್​ ಸಕ್ಕರಖಾನ್, ಅಭಯ್ ಹುದಾರ್‌, ಸರ್ವೇಶ ಹಿರೇಮಠ ಮತ್ತು ಆಕಾಶ್ ಕುಂದನಗಾರ ಎಂಬ ಆರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:38 pm, Sat, 23 May 26

Source link

RCB ಆಟಗಾರ ಗಾಯಾಳು…  ಪ್ಲೇಆಫ್​ ಪಂದ್ಯಕ್ಕೆ ಅಲಭ್ಯ!

Source link

Travis Head: ನಾನು ಮುಂದೆ ಏನು ಮಾಡ್ತೇನೆ ಎಂಬುದು ಊಹಿಸಲು ಸಾಧ್ಯವಿಲ್ಲ! – Kannada News | Travis Head Reacts After Virat Kohli’s Handshake Refusal

IPL 2026: ಐಪಿಎಲ್ ಪಂದ್ಯವೊಂದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವೆ ನಡೆದ ಆನ್‌-ಫೀಲ್ಡ್ ಜಟಾಪಟಿ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

  • ವಿರಾಟ್ ಕೊಹ್ಲಿಯ ಸಂಭ್ರಮ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರಾಸಿಖ್ ಸಲಾಮ್  ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ.
  • ಹೆಡ್ ಸವಾಲು: 256 ರನ್​ಗಳ ಕಠಿಣ ಗುರಿ ಬೆನ್ನತ್ತಲು ಬಂದ ವಿರಾಟ್ ಕೊಹ್ಲಿಗೆ ಆಕ್ರಮಣಕಾರಿಯಾಗಿ ಆಡುವಂತೆ ಟ್ರಾವಿಸ್ ಹೆಡ್ ಸವಾಲು ಹಾಕಿದ್ದಾರೆ. ಅಂದರೆ ಈ ಪಂದ್ಯದಲ್ಲಿ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಈ ವೇಳೆ ಬಿಗ್ ಶಾಟ್ ಆಡು ನೋಡೋಣ ಎಂದು ಹೆಡ್ ಕೆಣಕಿದ್ದಾರೆ.
  • ಕೊಹ್ಲಿ ತಿರುಗೇಟು: ಟ್ರಾವಿಸ್ ಹೆಡ್ ಸವಾಲಿಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ, “ಈಗ ನೀನು ಇಂಪ್ಯಾಕ್ಟ್ ಸಬ್‌ ಆಟಗಾರ ಅಲ್ಲ, ಬಂದು ಎರಡು ಓವರ್ ಬೌಲಿಂಗ್ ಮಾಡು” ಎಂದು ವ್ಯಂಗ್ಯವಾಡಿದ್ದಾರೆ.
  • ಹೆಡ್ ಕಿಚಾಯಿಸುವಿಕೆ: ಈ ಮಾತಿನ ಚಕಮಕಿ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ(15) ಔಟ್ ಆಗಿದ್ದಾರೆ. ಇತ್ತ ಕೊಹ್ಲಿ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಹೆಡ್, “ಫ್ರೆಂಡ್, ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ನೀನು ಔಟ್ ಆಗಿ ಹೋದೆ!” ಎಂದು ಕಿಚಾಯಿಸಿದ್ದಾರೆ.
  • ಹಸ್ತಲಾಘವ ನಿರಾಕರಣೆ: ಈ ಜಟಾಪಟಿ ಮತ್ತು ಪಂದ್ಯದಲ್ಲಿ ತಂಡದ ಸೋಲಿನ ನಿರಾಸೆಯಿಂದ ಕೋಪಗೊಂಡ ಕೊಹ್ಲಿ, ಪಂದ್ಯ ಮುಗಿದ ನಂತರ ಸಾಂಪ್ರದಾಯಿಕ ಹಸ್ತಲಾಘವದ ವೇಳೆ ಟ್ರಾವಿಸ್ ಹೆಡ್‌ಗೆ ಶೇಕ್ ಹ್ಯಾಂಡ್ ನೀಡದೇ ಮೈದಾನದಿಂದ ಹೊರನಡೆದಿದ್ದರು.

ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಟ್ರಾವಿಸ್ ಹೆಡ್ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಅದು ಕೂಡ ತಾನು ಬೌಲಿಂಗ್ ಮಾಡಿದ ಫೋಟೋದೊಂದಿಗೆ ಎಂಬುದು ವಿಶೇಷ.

ಈ ಮ್ಯಾಚ್​ನಲ್ಲಿ ಟ್ರಾವಿಸ್ ಹೆಡ್ ಒಂದು ಓವರ್​ ಎಸೆದಿದ್ದರು. ಅಲ್ಲದೆ ಕೇವಲ 7 ರನ್ ನೀಡಿ ರಜತ್ ಪಾಟಿದಾರ್ ವಿಕೆಟ್ ಅನ್ನು ಪಡೆದಿದ್ದರು. ಇದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೆಡ್ “Keep the body guessing” ಎಂಬ ಕ್ಯಾಪ್ಷನ್ ಹಂಚಿಕೊಂಡಿದ್ದಾರೆ.

ಎದುರಾಳಿ ಆಟಗಾರ ಅಥವಾ ಬ್ಯಾಟರ್ ಮುಂದಿನ ನಡೆ ಏನು ಎಂಬುದನ್ನು ಊಹಿಸಲು ಸಾಧ್ಯವಾಗದಂತೆ ಗೊಂದಲದಲ್ಲಿ ಇಡುವುದನ್ನು ಈ ವಾಕ್ಯ ಸೂಚಿಸುತ್ತದೆ.

ವಿರಾಟ್ ಕೊಹ್ಲಿ ಅವರು ಹೆಡ್‌ಗೆ “ಬಂದು ಬೌಲಿಂಗ್ ಮಾಡು” ಎಂದು ಸವಾಲು ಹಾಕಿದ್ದರು. ಆದರೆ, ಬ್ಯಾಟರ್ ಆಗಿರುವ ಹೆಡ್ ಹಠಾತ್ ಆಗಿ ಬೌಲಿಂಗ್ ಮಾಡಿ ವಿಕೆಟ್ ಪಡೆದರು.

ಅಂದರೆ, “ನಾನು ಮುಂದೆ ಏನು ಮಾಡುತ್ತೇನೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ, ಎಲ್ಲರನ್ನೂ ನಾನು ಗೊಂದಲದಲ್ಲಿ ಇಡುತ್ತೇನೆ” ಎಂಬ ಮಾರ್ಮಿಕ ಅರ್ಥದಲ್ಲಿ ಟ್ರಾವಿಸ್ ಹೆಡ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಬೌಲಿಂಗ್ ಮಾಡಿ ತೋರಿಸು ಎಂದ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಗೆದ್ದು ಬೀಗಿದ ಎಸ್​ಆರ್​ಹೆಚ್​:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 200 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಸ್​ಆರ್​ಹೆಚ್​ 55 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Published On – 2:04 pm, Sat, 23 May 26

Source link