Category Archives: Blog

Your blog category

KSCCF Recruitment 2026: ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟದಲ್ಲಿ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಸಾಕು! – Kannada News | KSCCF Recruitment 2026: Clerk, Sales Asst, Pharmacist Jobs in Karnataka

ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ಉತ್ತಮ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ ಇದೆ. ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯ ಮೂಲಕ ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್ ಹಾಗೂ ಫಾರ್ಮಸಿಸ್ಟ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಬೆಂಗಳೂರು ಕೇಂದ್ರಿತವಾಗಿದ್ದು, ರಾಜ್ಯದ ಯುವಕರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಈ ನೇಮಕಾತಿಯಡಿ ಒಟ್ಟು 34 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,400 ರಿಂದ ರೂ.52,650 ವರೆಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ. ವಯೋಮಿತಿಯ ವಿಷಯದಲ್ಲಿ, ಅಭ್ಯರ್ಥಿಗಳು ಫೆಬ್ರವರಿ 07,2026ರ ವೇಳೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು. ಸರ್ಕಾರದ ನಿಯಮಗಳಂತೆ ವಿವಿಧ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯೂ ಇದೆ. ಕ್ಯಾಟ್–2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ, SC/ST ಹಾಗೂ ಪ್ರವರ್ಗ–1 ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಮತ್ತು ಪಿಡಬ್ಲ್ಯೂಡಿ ಹಾಗೂ ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. SC/ST/ಪ್ರವರ್ಗ–I ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 500 ರೂ. ಮತ್ತು ಇತರ ಎಲ್ಲಾ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು KSCCF ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ. ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಸರಿಯಾದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಜೊತೆಗೆ ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಮತ್ತು ಅನುಭವ ಪ್ರಮಾಣಪತ್ರಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಡಬೇಕು.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

KSCCF ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಅಧಿಕೃತ ಆನ್‌ಲೈನ್ ಲಿಂಕ್‌ಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಇತ್ತೀಚಿನ ಫೋಟೋ ಹಾಗೂ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ನಂತರ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, ಸಲ್ಲಿಸು (Submit) ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಮುಂದಿನ ಬಳಕೆಗೆ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 07ರೊಳಗೆ ಅರ್ಜಿ ಸಲ್ಲಿಸಿ, ಕರ್ನಾಟಕದಲ್ಲಿ ಸರ್ಕಾರಿ ಸಹಕಾರಿ ವಲಯದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ(KSCCF-Recruitment-2026)

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:57 pm, Sun, 18 January 26

Source link

‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್ 

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ರೇಸ್​​ನಲ್ಲಿ ಮುಂಚೂಣಿಯಲ್ಲಿರುವ ಸ್ಪರ್ಧಿಗೆ 37 ಕೋಟಿ ವೋಟ್ ಬಿದ್ದಿದೆ ಎಂದು ಸುದೀಪ್ ಘೋಷಣೆ ಮಾಡಿದ್ದರು. ಈ ಮತ ಗಿಲ್ಲಿ ನಟನಿಗೆ ಬಿದ್ದಿದೆ ಎಂಬುದು ಅನೇಕರ ಊಹೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ ಕೂಡ ಇದೇ ರೀತಿಯ ಊಹೆ ಮಾಡಿದ್ದಾರೆ. ‘ಗಿಲ್ಲಿನೇ ಗೆಲ್ಲೋದು. ಅವನಿಗೆ 37 ಕೋಟಿ ವೋಟ್ ಬಂದಿರುತ್ತದೆ’ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NZ: ಟೀಂ ಇಂಡಿಯಾ ವಿರುದ್ಧ ಸತತ 2ನೇ ಶತಕ ಬಾರಿಸಿದ ಡ್ಯಾರಿಲ್ ಮಿಚೆಲ್ – Kannada News | Daryl Mitchell’s ODI Masterclass: Second Consecutive Century vs India, Breaks Records

ಮೇಲೆ ಹೇಳಿದಂತೆ ಈ ಸರಣಿಯಲ್ಲಿ ಡ್ಯಾರಿಲ್ ಮಿಚೆಲ್ ಉತ್ತಮ ಫಾರ್ಮ್‌ನಲ್ಲಿದ್ದು, ಸರಣಿಯ ಮೊದಲ ಪಂದ್ಯದಲ್ಲಿ ಅವರು 84 ರನ್ ಬಾರಿಸಿದ್ದರು. ಎರಡನೇ ಪಂದ್ಯದಲ್ಲಿ ಅಜೇಯ 131 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈಗ, ಡ್ಯಾರಿಲ್ ಮಿಚೆಲ್ ಮತ್ತೊಮ್ಮೆ 100 ರನ್‌ಗಳ ಗಡಿ ದಾಟಿದ್ದಾರೆ.

Source link

IND vs NZ: ನ್ಯೂಜಿಲೆಂಡ್ ವಿರುದ್ಧ ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ – Kannada News | Rana Shines vs NZ: Young Pacer’s Unique Hat trick Halts Devon Conway Thrice

ಟೀಂ ಇಂಡಿಯಾದ ಯುವ ವೇಗಿ ಹರ್ಷಿತ್ ರಾಣಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಸರಣಿಯ ಮೂರು ಪಂದ್ಯಗಳಲ್ಲಿ ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಆಯ್ಕೆ ಸರಿಯಾಗಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ. ಇದರ ಜೊತೆಗೆ ಇಂದೋರ್‌ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ವಿಶೇಷ ಹ್ಯಾಟ್ರಿಕ್ ಸಹ ಪೂರ್ಣಗೊಳಿಸಿದ್ದಾರೆ. ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಕೊನೆಯ ಏಕದಿನ ಪಂದ್ಯದ ಎರಡನೇ ಓವರ್‌ನಲ್ಲಿ ಬೌಲಿಂಗ್ ಜವಾಬ್ದಾರಿ ವಹಿಸಿಕೊಂಡ ಹರ್ಷಿತ್, ಮೊದಲ ಎಸೆತದಲ್ಲೇ ಆರಂಭಿಕ ಡೆವೊನ್ ಕಾನ್ವೇ ಅವರ ವಿಕೆಟ್ ಪಡೆದರು.

ಈ ವಿಕೆಟ್ ಹರ್ಷಿತ್ ರಾಣಾಗೆ ವಿಶೇಷವಾಗಿತ್ತು ಏಕೆಂದರೆ ಅದರೊಂದಿಗೆ ಅವರು ಈ ಸರಣಿಯಲ್ಲಿ ವಿಶೇಷ ಹ್ಯಾಟ್ರಿಕ್ ಸಹ ಪೂರ್ಣಗೊಳಿಸಿದರು. ವಾಸ್ತವವಾಗಿ, ಸರಣಿಯ ಮೂರು ಪಂದ್ಯಗಳಲ್ಲಿ ಹರ್ಷಿತ್, ಡೆವೊನ್ ಕಾನ್ವೇ ಅವರನ್ನು ಮೂರು ಬಾರಿ ಔಟ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ 56 ರನ್‌ ಬಾರಿಸಿದ್ದ ಕಾನ್ವೇಗೆ ಪೆವಿಲಿಯನ್ ದಾರಿ ತೋರಿಸಿದ ಹರ್ಷಿತ್, ಎರಡನೇ ಪಂದ್ಯದಲ್ಲಿ ಕೇವಲ 5 ರನ್‌ಗಳಿಗೆ ಔಟ್ ಮಾಡಿದರು. ಇದೀಗ ಮೂರನೇ ಪಂದ್ಯದಲ್ಲೂ ಕೇವಲ ಐದು ರನ್​ಗಳಿಗೆ ಕಾನ್ವೇ ಇನ್ನಿಂಗ್ಸ್​ಗೆ ಅಂತ್ಯ ಹಾಡಿದ್ದಾರೆ.

Source link

IND vs NZ: ನ್ಯೂಜಿಲೆಂಡ್ ವಿರುದ್ಧ ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ – Kannada News | Rana Shines vs NZ: Young Pacer’s Unique Hat trick Halts Devon Conway Thrice

ಟೀಂ ಇಂಡಿಯಾದ ಯುವ ವೇಗಿ ಹರ್ಷಿತ್ ರಾಣಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಸರಣಿಯ ಮೂರು ಪಂದ್ಯಗಳಲ್ಲಿ ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಆಯ್ಕೆ ಸರಿಯಾಗಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ. ಇದರ ಜೊತೆಗೆ ಇಂದೋರ್‌ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ವಿಶೇಷ ಹ್ಯಾಟ್ರಿಕ್ ಸಹ ಪೂರ್ಣಗೊಳಿಸಿದ್ದಾರೆ. ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಕೊನೆಯ ಏಕದಿನ ಪಂದ್ಯದ ಎರಡನೇ ಓವರ್‌ನಲ್ಲಿ ಬೌಲಿಂಗ್ ಜವಾಬ್ದಾರಿ ವಹಿಸಿಕೊಂಡ ಹರ್ಷಿತ್, ಮೊದಲ ಎಸೆತದಲ್ಲೇ ಆರಂಭಿಕ ಡೆವೊನ್ ಕಾನ್ವೇ ಅವರ ವಿಕೆಟ್ ಪಡೆದರು.

ಈ ವಿಕೆಟ್ ಹರ್ಷಿತ್ ರಾಣಾಗೆ ವಿಶೇಷವಾಗಿತ್ತು ಏಕೆಂದರೆ ಅದರೊಂದಿಗೆ ಅವರು ಈ ಸರಣಿಯಲ್ಲಿ ವಿಶೇಷ ಹ್ಯಾಟ್ರಿಕ್ ಸಹ ಪೂರ್ಣಗೊಳಿಸಿದರು. ವಾಸ್ತವವಾಗಿ, ಸರಣಿಯ ಮೂರು ಪಂದ್ಯಗಳಲ್ಲಿ ಹರ್ಷಿತ್, ಡೆವೊನ್ ಕಾನ್ವೇ ಅವರನ್ನು ಮೂರು ಬಾರಿ ಔಟ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ 56 ರನ್‌ ಬಾರಿಸಿದ್ದ ಕಾನ್ವೇಗೆ ಪೆವಿಲಿಯನ್ ದಾರಿ ತೋರಿಸಿದ ಹರ್ಷಿತ್, ಎರಡನೇ ಪಂದ್ಯದಲ್ಲಿ ಕೇವಲ 5 ರನ್‌ಗಳಿಗೆ ಔಟ್ ಮಾಡಿದರು. ಇದೀಗ ಮೂರನೇ ಪಂದ್ಯದಲ್ಲೂ ಕೇವಲ ಐದು ರನ್​ಗಳಿಗೆ ಕಾನ್ವೇ ಇನ್ನಿಂಗ್ಸ್​ಗೆ ಅಂತ್ಯ ಹಾಡಿದ್ದಾರೆ.

Source link

ಅರೆಸ್ಟ್ ಆಗಿದ್ದ ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು – Kannada News | Excise Deputy Commissioner Sent to Judicial Custody in Liquor License Bribery Case; BJP Leaders Release Audio

ಬೆಂಗಳೂರು, ಜನವರಿ 18: ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ಲೋಕಾ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತ ಜಗದೀಶ್ ನಾಯಕ್, ಅಧೀಕ್ಷಕ ತಮ್ಮಣ್ಣ ಹಾಗೂ ಕಾನ್ಸ್‌ಟೇಬಲ್ ಲಕ್ಕಪ್ಪರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೈಯಪ್ಪನಹಳ್ಳಿಯ ಅಬಕಾರಿ ಕಚೇರಿಯಲ್ಲಿ ಮುಂಗಡವಾಗಿ 25 ಲಕ್ಷ ರೂ ಲಂಚ ಸ್ವೀಕರಿಸುವಾಗಲೇ ಜಗದೀಶ್ ನಾಯಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಮೈಕ್ರೋ ಬ್ರಿವೇರಿ ಸಿಎಲ್-7 ಪರವಾನಗಿಗಾಗಿ 75 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಇತ್ತ ನ್ಯಾಯಾಂಗ ಬಂಧನ ಬೆನ್ನಲ್ಲೇ ಬಿಜೆಪಿ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ, ಅಬಕಾರಿ ಡಿಸಿ ಮತ್ತು ಪರವಾನಗಿ ಕೋರಿದ್ದವರ ನಡುವಿನ ಎನ್ನಲಾದ ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿದ್ದಾರೆ. ಅಬಕಾರಿ ಲಂಚದಲ್ಲಿ ಸಚಿವರಿಗೂ ಪಾಲು ಹೋಗುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ – Kannada News | Bigg Boss Kannada 12: Gilli Fans already celebrating

ಬಿಗ್​​ಬಾಸ್ (Bigg Boss) ಫಿನಾಲೆ ಕೆಲವೇ ಗಂಟೆಗಳಲ್ಲಿ ಪ್ರಾರಂಭ ಆಗಲಿದೆ. ಫಿನಾಲೆ ಶೂಟಿಂಗ್ ಈಗಾಗಲೇ ಬಿಡದಿಯ ಜಾಲಿವುಡ್ ಸ್ಟುಡಿಯೋನಲ್ಲಿ ಪ್ರಾರಂಭ ಆಗಿದೆ. ಫಿನಾಲೆಯ ವಿನ್ನರ್ ಘೋಷಣೆಗೆ ಇನ್ನೂ ಸಾಕಷ್ಟು ಸಮಯ ಇರುವಾಗಲೇ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ ಗಿಲ್ಲಿಯ ಅಭಿಮಾನಿಗಳು ಗುಂಪು ಸೇರಿದ್ದು, ಗಿಲ್ಲಿ ಪರವಾಗಿ ಘೋಷಣೆ ಕೂಗಿದ್ದಾರೆ. ಗಿಲ್ಲಿಯನ್ನು ‘ಡೈಲಾಗ್ ಕಿಂಗ್’, ‘ಸಕಲಕಲಾವಲ್ಲಭ’, ‘ಬಡವರ ಮಗ’ ಎಂದೆಲ್ಲ ವಿಶೇಷಣಗಳಿಂದ ಕರೆದು ಜಕಾರಗಳನ್ನು ಕೂಗಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Economic Survey: ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ? – Kannada News | Economic Survey 2026, know its significance for common people and government

ನವದೆಹಲಿ, ಜನವರಿ 18: ಪ್ರಸಕ್ತ ಹಣಕಾಸು ವರ್ಷದ (2025-26) ಆರ್ಥಿಕ ಸಮೀಕ್ಷೆ ವರದಿಯನ್ನು (Economic Survey) ಇದೇ ಜನವರಿ 29, ಗುರುವಾರದಂದು ಬಹಿರಂಗಗೊಳ್ಳಲಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಿದ್ಧಪಡಿಸಲಾದ ಈ ಸಮೀಕ್ಷಾ ದಾಖಲೆ ಪುಸ್ತಕವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್​ನಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ತಂಡವು ಈ ವರದಿಯನ್ನು ಸಿದ್ಧಪಡಿಸಿ ಹಣಕಾಸು ಸಚಿವಾಲಯಕ್ಕೆ ಕೊಡುತ್ತದೆ.

ಈ ಬಾರಿಯ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 28ರಂದು ಆರಂಭವಾಗಿ ಫೆಬ್ರುವರಿ 13ರವರೆಗೂ ಇರುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಸಾಮಾನ್ಯವಾಗಿ ಬಜೆಟ್ ಮಂಡನೆಗೆ ಹಿಂದಿನ ದಿನ ಆರ್ಥಿಕ ಸಮೀಕ್ಷೆಯ ವರದಿ ಪ್ರಸ್ತುತಪಡಿಸಲಾಗುತ್ತದೆ. ಆದರೆ ಈ ಬಾರಿ ತುಸು ಬೇಗ ಪ್ರಸ್ತುತವಾಗುತ್ತಿದೆ.

ಇದನ್ನೂ ಓದಿ:

ಆರ್ಥಿಕ ಸಮೀಕ್ಷೆಯಲ್ಲಿ ಏನಿರುತ್ತೆ? ಏನದರ ಮಹತ್ವ?

ಮುಂದಿನ ಹಣಕಾಸು ವರ್ಷದ ಅಂದಾಜು ಆದಾಯ ಮತ್ತು ವ್ಯಯದ ಲೆಕ್ಕಪತ್ರವೇ ಬಜೆಟ್. ಸರ್ಕಾರದ ಬಳಿ ಎಷ್ಟು ಆದಾಯ ಇದೆ, ಎಷ್ಟು ಆದಾಯ ಬರುತ್ತದೆ, ಎಷ್ಟು ಸಾಲ ಮಾಡಲಾಗುತ್ತದೆ, ಯಾವ್ಯಾವ ಯೋಜನೆ, ಇಲಾಖೆಗಳಿಗೆ ಎಷ್ಟೆಷ್ಟು ಹಣ ಕೊಡಲಾಗುತ್ತದೆ ಎಂಬುದನ್ನು ಪೂರ್ವದಲ್ಲೇ ನಿರ್ಧರಿಸಿ, ಅಥವಾ ಅಂದಾಜಿಸಿ ಬಜೆಟ್ ಸಿದ್ಧಪಡಿಸಲಾಗುತ್ತದೆ.

ಆದರೆ, ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಪರಿಸ್ಥಿತಿಯನ್ನು ಅವಲೋಕಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಆರ್ಥಿಕ ಸಾಧನೆ ಹೇಗಿತ್ತು ಎಂದು ವಿಶ್ಲೇಷಿಸುತ್ತದೆ. ಕೃಷಿ, ಉದ್ಯಮ ಸೇರಿದಂತೆ ವಿವಿಧ ಸೆಕ್ಟರ್​ಗಳ ಸಾಧನೆಯನ್ನೂ ಪರಾಮರ್ಶಿಸಲಾಗುತ್ತದೆ.

ಇದನ್ನೂ ಓದಿ:

ಜಿಡಿಪಿ ಬೆಳವಣಿಗೆ, ಹಣದುಬ್ಬರ, ವಿತ್ತೀಯ ಕೊರತೆ ಇತ್ಯಾದಿ ಆರ್ಥಿಕ ಮಾನದಂಡಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಅಗರವೇ ಈ ಸಮೀಕ್ಷೆಯಲ್ಲಿ ಇರುತ್ತದೆ. ಹಾಗೆಯೇ, ಸರ್ಕಾರದ ಮುಂದಿನ ಆರ್ಥಿಕ ಮತ್ತು ಹಣಕಾಸು ನೀತಿ ಹೇಗಿರಬೇಕು ಎಂದು ಈ ವರದಿಯಲ್ಲಿ ಸಲಹೆಗಳನ್ನು ನೀಡಲಾಗುತ್ತದೆ. ಈ ಆರ್ಥಿಕ ಸಮೀಕ್ಷಾ ವರದಿಯಿಂದ ಸರ್ಕಾರಕ್ಕೆ ದೇಶದ ಸ್ಥೂಲ ಆರ್ಥಿಕತೆ ವಾಸ್ತವಿಕ ಪರಿಸ್ಥಿತಿಯ ದರ್ಶನವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

10 ಸಾವಿರಕ್ಕೆ ಅಬ್ಬಾ ಎಂದಿದ್ದ ಗಿಲ್ಲಿ ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ – Kannada News | Once 10 thousand was a big amount for Gilli Nata now he is winning 50 lakh rs

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಇಂದು (ಜನವರಿ 18) ನಡೆಯಲಿದೆ. ಗಿಲ್ಲಿ ನಟ ಬಿಗ್​​ಬಾಸ್​ ಫಿನಾಲೆಯ ವಿನ್ನರ್ ಆಗಲಿದ್ದಾರೆ ಎಂದು ಅವರು ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಪ್ರಾರಂಭ ಮಾಡಿದ್ದಾರೆ. ಗಿಲ್ಲಿಗೆ ರಾಜ್ಯದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಗಿಲ್ಲಿಯ ಫೋಟೊವನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಒಂದು ಸಣ್ಣ ಹಳ್ಳಿಯ, ತೀರಾ ಸಾಮಾನ್ಯ ಕುಟುಂಬದಿಂದ ಬಂದ ಗಿಲ್ಲಿ, ಬಿಗ್​​ಬಾಸ್ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಇದೀಗ ಬಿಗ್​​ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅಂದಹಾಗೆ ಗಿಲ್ಲಿ, ಜೀವನದ ಒಂದು ಹಂತದಲ್ಲಿ ಕೇವಲ 10 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿದ್ದಕ್ಕೆ ಅಬ್ಬಾ, ಎಷ್ಟು ದೊಡ್ಡ ಮೊತ್ತ ಎಂದುಕೊಂಡಿದ್ದರು, ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ನಿರೂಪಕಿ ಅನುಶ್ರೀ ಅವರ ಪಾಡ್​​ಕಾಸ್ಟ್​​ನಲ್ಲಿ ಗಿಲ್ಲಿ ನಟ ಭಾಗವಹಿಸಿದ್ದರು. ಪಾಡ್​​ಕಾಸ್ಟ್​​ನಲ್ಲಿ ವಿಷಯವೊಂದನ್ನು ಗಿಲ್ಲಿ ನಟ ಹಂಚಿಕೊಂಡಿದ್ದರು. ಯೂಟ್ಯೂಬ್ ವಿಡಿಯೋಗಳ ಬಳಿಕ ರಿಯಾಲಿಟಿ ಶೋಗಳಿಗೆ ಬಂದಿದ್ದ ಗಿಲ್ಲಿ ನಟ ತಕ್ಕಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದರು. ಆಗೆಲ್ಲ ತಬಲ ನಾಣಿ ಇನ್ನೂ ಕೆಲವು ಕಲಾವಿದರು ಫೋನ್ ಮಾಡಿ ಗಿಲ್ಲಿಯನ್ನು ಇವೆಂಟ್​​ಗಳಿಗೆ ಕರೆಯುತ್ತಿದ್ದರಂತೆ. ಆದರೆ ಗಿಲ್ಲಿಗೆ, ಆ ಇವೆಂಟ್​​ಗಳಿಗೆ ಹಣ ಕೊಡುತ್ತಾರೆ ಎಂಬುದು ಸಹ ಅವರಿಗೆ ಗೊತ್ತಿರಲಿಲ್ಲವಂತೆ.

ಈ ಬಗ್ಗೆ ಹೇಳಿರುವ ಗಿಲ್ಲಿ ನಟ, ಅವರು ಫೋನ್ ಮಾಡಿ ಕರೆಯುತ್ತಿದ್ದರು, ಪೆಟ್ರೋಲ್ ಹಾಕಿಕೊಂಡು ನಾನೇ ಹೋಗಬೇಕಲ್ಲ ಎಂದುಕೊಂಡು ನಾನು ಹೋಗುತ್ತಲೇ ಇರಲಿಲ್ಲ. ಹೀಗೆ ಸುಮಾರು ಎಂಟೊಂಬತ್ತು ಶೋಗಳು ಕೈಬಿಟ್ಟು ಹೋದವು. ಆದರೆ ಒಮ್ಮೆ ಮಿಮಿಕ್ರಿ ಮಾಡುವ ನನ್ನ ಗೆಳೆಯ ಕರೆ ಮಾಡಿ, ಹೀಗೊಂದು ಕಾರ್ಯಕ್ರಮ ಇದೆ ಒಂದು ಗಂಟೆ ಕಾರ್ಯಕ್ರಮ, ಹತ್ತು ಸಾವಿರ ಕೊಡುತ್ತಾರೆ ಎಂದರಂತೆ. ಆಗ ಗಿಲ್ಲಿಗೆ ‘ಅಬ್ಬಾ ಒಂದು ಗಂಟೆ ಶೋ ಮಾಡಿದರೆ ಹತ್ತು ಸಾವಿರ ಕೊಡುತ್ತಾರಾ’ ಎಂದು ಆಶ್ಚರ್ಯ ಆಯ್ತಂತೆ. ಬರೀ ಒಂದು ಗಂಟೆಗೆ ಹತ್ತು ಸಾವಿರ ರೂಪಾಯಿ ಯಾರಪ್ಪ ಕೊಡ್ತಾರೆ ಎಂದುಕೊಂಡೆ, ಆ ಮೇಲೆ ಯಾವ ಶೋ ಅನ್ನೂ ಮಿಸ್ ಮಾಡಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಕೇವಲ ಹತ್ತು ಸಾವಿರ ರೂಪಾಯಿ ಗಿಲ್ಲಿಗೆ ಒಂದು ಸಮಯದಲ್ಲಿ ಬಹಳ ದೊಡ್ಡ ಮೊತ್ತ ಆಗಿತ್ತು. ಹತ್ತು ಸಾವಿರ ರೂಪಾಯಿ ಗಳಿಸಲು ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಗಿಲ್ಲಿ, ಬಿಗ್​​ಬಾಸ್ ಸೀಸನ್ 12ರ ವಿನ್ನರ್ ಆಗುವ ಹೊಸ್ತಿಲಲ್ಲಿ ಇದ್ದಾರೆ. ಇದೀಗ ಗಿಲ್ಲಿಯ ಹಳೆಯ ದಿನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ‘ಬಡವರ ಮಕ್ಳು ಬೆಳೀಬೇಕು’ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಗಿಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೆಡ್ಡಿ, ಡಿಕೆಶಿ​ ಮಧ್ಯೆ ಕಾಳಗವಾಗಿ ಬದಲಾಯ್ತಾ ಬ್ಯಾನರ್ ಗಲಾಟೆ? ಭದ್ರತೆ ವಿಚಾರವಾಗಿ ಡಿಸಿಎಂ ವಿರುದ್ಧ ಟೀಕೆ – Kannada News | Ballari Banner Riots: Janardhana Reddy Dig at DK Shivakumar Sparks Congress Rage

ಶಾಸಕ ಜನಾರ್ದನ ರೆಡ್ಡಿ, ಡಿಕೆ ಶಿವಕುಮಾರ್​

ಬೆಂಗಳೂರು, ಜನವರಿ 18: ‘ನೀನು ಏನು ಕಿಸಿಯೋದಕ್ಕೆ ಇವತ್ತು ರಾಜ್ಯದ ಉಪಮುಖ್ಯಮಂತ್ರಿಯಾಗಿ ಇಲ್ಲಿದ್ದೀಯಾ? ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಶನಿವಾರ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ಮಾಡಿದ್ದರು. ಇದೇ ವಾಗ್ದಾಳಿ ಈಗ ಕಾಂಗ್ರೆಸ್ ನಾಯಕರನ್ನ ಕೆರಳಿಸಿದೆ. ರೆಡ್ಡಿ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬ್ಯಾನರ್ ಗಲಾಟೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಳ್ಳಾರಿ ಗಲಾಟೆ ವಿಚಾರಾಗಿಯೇ ಡಿಕೆ ಶಿವಕುಮಾರ್​​ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರ್​ಸ್ವಾಮಿ​ ಮಧ್ಯೆ ವಾಗ್ಯುದ್ಧ ನಡೆದಿತ್ತು. ಇದೀಗ ಇದೇ ಮಾತಿನ ಯುದ್ಧ ಡಿಕೆ ಶಿವಕುಮಾರ್​ ವರ್ಸಸ್ ಜನಾರ್ದನ ರೆಡ್ಡಿ ಕಡೆಗೆ ತಿರುಗಿದೆ.

ಇದನ್ನೂ ಓದಿ: ಡಿಕೆಶಿಗೆ ನಿಂದನೆ ಆರೋಪ: ‘ಕೈ’ ಕಾರ್ಯಕರ್ತರಿಂದ ಜನಾರ್ದನ ರೆಡ್ಡಿ ಮನೆಗೆ ಮುತ್ತಿಗೆ ಯತ್ನ

ಜನವರಿ 17ರಂದು ಬಳ್ಳಾರಿಯಲ್ಲಿ ಕೇಸರಿ ಪಡೆ ನಾಯಕರು ಗರ್ಜಿಸಿದ್ದರು. ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಸಮಾವೇಶದಲ್ಲಿ ಮಾತನಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಗುಡುಗಿದ್ದರು. ರೆಡ್ಡಿಗೆ ಭದ್ರತೆ ನೀಡೋ ವಿಚಾರವಾಗಿ ಮಾತನಾಡಿದ್ದ ಡಿಕೆ ಶಿವಕುಮಾರ್​​ ಅಮೆರಿಕದಿಂದ ಬೇಕಾದ್ರೂ ಭದ್ರತೆ ತೆಗೆದುಕೊಳ್ಳಲಿ ಎಂದಿದ್ದರು. ಇದಕ್ಕೆ ನಿನ್ನೆ ತಿರುಗೇಟು ಕೊಟ್ಟಿದ್ದ ಜನಾರ್ದನ ರೆಡ್ಡಿ, ನೀನು ಏನ್ ಕಿಸಿಯೋಕೆ ಇದ್ಯಾ ಅಂತಾ ಪ್ರಶ್ನಿಸಿದ್ದಾರೆ.

ಸದ್ಯ ಶಾಸಕ ಜನಾರ್ದನ ರೆಡ್ಡಿ ಆಡಿದ ಮಾತು ಕಾಂಗ್ರೆಸ್ ಕಾರ್ಯಕರ್ತರನ್ನ ಕೆರಳಿಸಿದೆ. ಬೆಂಗಳೂರಿನಲ್ಲಿರುವ ರೆಡ್ಡಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದು. ದೊಡ್ಡ ಹಂಗಾಮವೇ ನಡೆದಿದೆ. ಇನ್ನೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ ಮನೋಹರ್ ರೆಡ್ಡಿ ನನ್ನ ಮುಂದೆ ಬರಲಿ ಅಂತಾ ಸವಾಲ್ ಹಾಕಿದ್ದಾರೆ.

ರೆಡ್ಡಿ ವರ್ಸಸ್ ಸಿಎಂ ಮಧ್ಯೆ ‘ರಿಪಬ್ಲಿಕ್ ಆಫ್ ಬಳ್ಳಾರಿ’ ವಾರ್! 

ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ವಾಗ್ದಾಳಿ ನಡೆಸುತ್ತಿದ್ದ ಕೈ ನಾಯಕರಿಗೆ ತಿರುಗೇಟು ಕೊಟ್ಟಿರುವ ಜನಾರ್ದನ ರೆಡ್ಡಿ, ಇಡೀ ಕರ್ನಾಟಕವನ್ನೇ ಕಾಂಗ್ರೆಸ್ ರಿಪಬ್ಲಿಕ್ ಮಾಡಿದೆ ಅಂತಾ ಗುಡುಗಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಲೋಕಾಯುಕ್ತರೇ ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ಬರೆದಿದ್ದಾರೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ: ಸರ್ಕಾರದ ವಿರುದ್ಧ ಗುಡುಗಿದ ಕೇಸರಿ ಪಡೆ

ಬ್ಯಾನರ್ ಗಲಾಟೆ ವಿಚಾರವಾಗಿ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದ್ದರೆ, ಮತ್ತೊಂದ್ಕಡೆ ಮೂವರು ಗನ್‌ಮ್ಯಾನ್‌ಗಳನ್ನ ಬಂಧಿಸಿರುವ ಸಿಐಡಿ, ತನಿಖೆ ಚುರುಕುಗೊಳಿಸಿದೆ. ರಾಜಶೇಖರ್ ಗುರಿಯಾಗಿಸಿ ಫೈರಿಂಗ್ ಮಾಡಿಲ್ಲವೆಂದು ಬಂಧಿತರ ಹೇಳಿಕೆ ನೀಡಿದ್ದಾರೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link