Category Archives: Blog

Your blog category

ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹಿಂದಿ ಯಶಸ್ವಿ ಸಿನಿಮಾಗೆ ಲಿಂಕ್

‘ಸು ಫ್ರಮ್ ಸೋ’ ಸಿನಿಮಾ 2025ರ ಯಶಸ್ವಿ ಸಿನಿಮಾಗಳಲ್ಲಿ ಒಂದು. ಕೇವಲ 5 ಕೋಟಿ ರೂಪಾಯಿ ಬಜೆಟ್​​ನಲ್ಲಿ ತಯಾರಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿತು. ಈ ಚಿತ್ರ ಸದ್ದಿಲ್ಲದೆ ಮರಾಠಿಗೆ ರಿಮೇಕ್ ಆಗಿದೆ. ಮರಾಠಿಯಲ್ಲಿ ಈ ಚಿತ್ರಕ್ಕೆ ದೊಡ್ಡ ಹಿಂದಿ ಸಿನಿಮಾದ ಕನೆಕ್ಷನ್ ಕೊಡಲಾಗಿದೆ. ಈ ಟ್ರೇಲರ್​​ಗೆ ಮರಾಠಿ ಭಾಷೆಯಲ್ಲಿ ಮೆಚ್ಚುಗೆ ಸಿಗುತ್ತಿದೆ.

ಕನ್ನಡದಲ್ಲಿ ‘ಸುಲೋಚನ ಫ್ರಮ್ ಸೋಮೇಶ್ವರ’ ಎಂಬ ಟೈಟಲ್​​ನೊಂದಿಗೆ ಸಿನಿಮಾ ರಿಲೀಸ್ ಆಗಿತ್ತು. ಟೈಟಲ್ ಉದ್ದ ಆಗುತ್ತದೆ ಎಂಬ ಕಾರಣಕ್ಕೆ, ‘ಸು ಫ್ರಮ್ ಸೋ’ ಎಂದು ಇಡಲಾಗಿತ್ತು. ಇದನ್ನು ಮರಾಠಿಯಲ್ಲಿ ‘ತುಂಬಾಡ್ಚಿ ಮಂಜುಳಾ’ ಎಂದು ಇಡಲಾಗಿದೆ. ಅಂದರೆ ತುಂಬಾಡ್​ನ ಮಂಜುಳ ಎಂದರ್ಥ. ಈ ಟೈಟಲ್ ಇಡೋದಕ್ಕೂ ಒಂದು ಕಾರಣ ಇದೆ ಎನ್ನಲಾಗಿದೆ.

‘ತುಂಬಾಡ್’ ಹೆಸರಿನ ಸಿನಿಮಾ ಬಾಲಿವುಡ್​​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ತುಂಬಾಡ್ ಊರಿಗೆ ಕಾಲ್ಪನಿಕ ಕಥೆಯ ಹಿನ್ನೆಲೆ ಸೇರಿಸಲಾಗಿತ್ತು . ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಕಾರಣದಿಂದಲೇ ತುಂಬಾಡ್ ಹೆಸರನ್ನು ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಾ ಇದೆ.

ಇನ್ನು, ‘ತುಂಬಾಡ್ಚಿ ಮಂಜುಳಾ’ ಚಿತ್ರ ಬಹುತೇಕ ‘ಸು ಫ್ರಮ್ ಸೋ’ ಮಾದರಿಯಲ್ಲೇ ಇದೆ. ಹಳ್ಳಿ ಕಥೆ, ಕಾಮಿಡಿ ಮೊದಲಾದ ವಿಷಯಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ‘ಸು ಫ್ರಮ್ ಸೋ’ ಟ್ರೇಲರ್​​ನಲ್ಲಿ ಗುರೂಜಿಯ ದರ್ಶನ ಆಗಿರಲಿಲ್ಲ, ಆದರೆ, ಮರಾಠಿ ಟ್ರೇಲರ್​​ನಲ್ಲಿ ಇದನ್ನು ತೋರಿಸಲಾಗಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಸುಮೇಧ್ ಬತ್ತಳಿಕೆಯಿಂದ ಬಂತು ‘ತುಳಸಿ’; ಹಾಡು ಕಿವಿಗೆ ಇಂಪು

ಮರಾಠಿಯಲ್ಲಿ ಜಿತೇಂದ್ರ ಜೋಶಿ, ಓಂ ಭುಟ್ಕರ್,ಮಾರ್ಕಂಡ್ ಅನಸ್ಪುರೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ವಿವಿಧ್ ಕೊರಗಾಂವ್ಕರ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Source link

Chitradurga: ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ, ಗೊತ್ತಿದ್ರೂ ಈಜಾಟ

ಚಿತ್ರದುರ್ಗ, ಮೇ 23: ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಸಮೀಪದ ಹೊಂಡ ಯುವಕರ ನೆಚ್ಚಿನ ಈಜುವ ತಾಣವಾಗಿದೆ. ಆದರೆ, ಕಳೆದ ಒಂದು ವರ್ಷದಿಂದ ಈ ಹೊಂಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಆತಂಕ ಸೃಷ್ಟಿಸಿದೆ. ಮೊಸಳೆ ಅಪಾಯದ ಬಗ್ಗೆ ಎಚ್ಚರಿಕೆ ಫಲಕಗಳಿದ್ದರೂ ಯುವಕರು ಜೀವದ ಹಂಗು ತೊರೆದು ಈಜಾಡುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮೊಸಳೆ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.

ಈ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದಾರೆ. ಹೊಂಡದಲ್ಲಿ ಮೊಸಳೆ ಇರುವುದು ತಿಳಿದಿದ್ದರೂ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಂದಾಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಕೂಡಲೇ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ನಾಗರಿಕರು ಮತ್ತು ಹಿತರಕ್ಷಣಾ ವೇದಿಕೆಗಳು ಆಗ್ರಹಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಪ್ಪಳದಲ್ಲಿ ಭೀಕರ ಅಪಘಾತ: ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ – Kannada News | Koppal Road Accident: TT Vehicle Flips After Tyre Burst, 12 Injured Including Child

ಕೊಪ್ಪಳ, ಮೇ 23: ಜಿಲ್ಲೆಯ ಹೊರವಲಯದ ಚುಕ್ಕನಕಲ್ ಬಳಿ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಟಿಟಿ (ಟೆಂಪೋ ಟ್ರಾವೆಲರ್) ವಾಹನದ ಟೈರ್ ದಿಢೀರ್ ಬ್ಲಾಸ್ಟ್ ಆದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಈ ಭೀಕರ ಅಪಘಾತದಲ್ಲಿ ವಾಹನದಲ್ಲಿದ್ದ 12 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಇವರಲ್ಲಿ 2 ವರ್ಷದ ಮಗುವಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.  ಗಾಯಾಳುಗಳನ್ನು ತಕ್ಷಣವೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೊಳಗಾದ ವಾಹನವು ಹೈದರಾಬಾದ್‌ನಿಂದ ಗೋವಾ ಕಡೆಗೆ ಪ್ರವಾಸ ಹೊರಟಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Weather Update: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ: ತಂಪಾದ ಉದ್ಯಾನ ನಗರಿ! – Kannada News | Bengaluru Weather Update: May 23 Rain Cools City, Commuters Face Challenges

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆImage Credit source: Pinterest

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು (ಮೇ 23) ಬೆಳ್ಳಂಬೆಳಗ್ಗೆಯೇ ಜಿಟಿ ಜಿಟಿ ಮಳೆಯಾಗಿದೆ. ನಗರದ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದ್ದು, ವೀಕೆಂಡ್ ಮೂಡ್‌ನಲ್ಲಿದ್ದ ಬೆಂಗಳೂರಿಗರಿಗೆ ತಂಪಾದ ವಾತಾವರಣದ ಅನುಭವ ನೀಡಿದೆ.

ಕಳೆದ ಕೆಲವು ದಿನಗಳಿಂದ ಸಾಧಾರಣ ಬಿಸಿಲಿನಿಂದ ಕೂಡಿದ್ದ ರಾಜಧಾನಿಯಲ್ಲಿ, ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸದ್ಯ ನಗರದ ಪ್ರಮುಖ ಪ್ರದೇಶಗಳಾದ ಶಾಂತಿನಗರ, ರಿಚ್ಮಂಡ್ ಟೌನ್, ಮೆಜೆಸ್ಟಿಕ್, ಕಾರ್ಪೊರೇಷನ್ ಮತ್ತು ಸುತ್ತಮುತ್ತಲಿನ ಹತ್ತಿರದ ಜಾಗಗಳಲ್ಲಿ ಮಳೆಯ ಸಿಂಚನವಾಗುತ್ತಿದೆ.

ವಾಹನ ಸವಾರರ ಪರದಾಟ, ಹಿತಕರ ಹವಾಮಾನ:

ವೀಕೆಂಡ್ ಆರಂಭದ ದಿನವಾದ ಶನಿವಾರ ಮುಂಜಾನೆಯೇ ಮಳೆ ಶುರುವಾಗಿರುವುದರಿಂದ ಕಚೇರಿಗೆ ಹೋಗುವವರು ಮತ್ತು ಅಗತ್ಯ ಕೆಲಸಗಳಿಗಾಗಿ ಹೊರಟಿದ್ದ ವಾಹನ ಸವಾರರು ಕೊಂಚ ಪರದಾಡುವಂತಾಯಿತು. ಆದರೆ, ಸುಡುವ ಬಿಸಿಲಿಗೆ ಬಸವಳಿದಿದ್ದ ಜನರಿಗೆ ಈ ಜಿಟಿ ಜಿಟಿ ಮಳೆ ಸದ್ಯ ನೆಮ್ಮದಿ ತಂದಿದ್ದು, ನಗರದಾದ್ಯಂತ ಹಿತಕರ ಹಾಗೂ ತಂಪಾದ ಹವಾಮಾನ ನಿರ್ಮಾಣವಾಗಿದೆ.

ಮತ್ತಷ್ಟು ಓದಿ: Karnataka Weather Forecast: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ, ಎಲ್ಲೆಲ್ಲಿ?

ಮುಂದಿನ ಕೆಲವು ಗಂಟೆಗಳ ಕಾಲ ನಗರದ ಹಲವೆಡೆ ಇದೇ ರೀತಿಯ ಸಾಧಾರಣ ಅಥವಾ ಜಿಟಿ ಜಿಟಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:12 am, Sat, 23 May 26

Source link

Rajat Patidar: ಗೆಲ್ಲಬೇಕಿತ್ತು, ಆದರೆ ನಮ್ಮ ಸೋಲಿಗೆ ಇದುವೇ ಕಾರಣ! – Kannada News | Rajat patidar post match interview After RCB vs SRH Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​​ಹೆಚ್​ 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 200 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್​ಸಿಬಿ ತಂಡ 55 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಎದುರಾಳಿ ತಂಡದ ಬ್ಯಾಟಿಂಗ್ ಅಬ್ಬರ ಮತ್ತು ಶಿಸ್ತುಬದ್ಧ ಬೌಲಿಂಗ್ ದಾಳಿಯೇ ನಮ್ಮ ಸೋಲಿಗೆ ಮುಖ್ಯ ಕಾರಣ ಎಂದು  ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಪಂದ್ಯದ ಗತಿಯನ್ನು ಬದಲಿಸಿದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಬೃಹತ್ ಮೊತ್ತ: ಸ್ಲೋ ಬಾಲ್!

ಎದುರಾಳಿ ತಂಡದ ಮೊದಲ ಐದು ಜನ ಬ್ಯಾಟರ್‌ಗಳು ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಕಲೆಹಾಕಿದ 255 ರನ್‌ಗಳ ಬೃಹತ್ ಮೊತ್ತವೇ ಪಂದ್ಯದ ಫಲಿತಾಂಶವನ್ನು ಬಹುಪಾಲು ನಿರ್ಧರಿಸಿತು ಎಂದು ಪಾಟೀದಾರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ

ಹೈದರಾಬಾದ್ ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೂ, ಎದುರಾಳಿ ಬೌಲರ್‌ಗಳು ತಮ್ಮ ಯೋಜನೆಗಳನ್ನು ಅಚ್ಚುಕಟ್ಟಾಗಿ ಜಾರಿಗೆ ತಂದರು. ಪಿಚ್‌ನಲ್ಲಿ ಸ್ಲೋ ಬೌನ್ಸರ್‌ಗಳು ಕೊಂಚ ಗ್ರಿಪ್ ಆಗುತ್ತಿದ್ದವು. ಇದನ್ನು ಸರಿಯಾಗಿ ಬಳಸಿಕೊಂಡ ಎದುರಾಳಿ ಪಡೆಯ ಐದೂ ಜನ ಬೌಲರ್‌ಗಳು ನಿರಂತರವಾಗಿ ಸ್ಲೋ ಬೌನ್ಸರ್ ಮತ್ತು ಯಾರ್ಕರ್‌ಗಳನ್ನು ಎಸೆಯುವ ಮೂಲಕ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇಂತಹ ಎಸೆತಗಳು ಎಸ್​ಆರ್​ಹೆಚ್ ಪಾಲಿಗೆ ಪ್ಲಸ್ ಪಾಯಿಂಟ್ ಆಯಿತು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಗೆಲ್ಲಲು ಸಾಧ್ಯವಾಗಿಲ್ಲ!

ಸಾಮಾನ್ಯವಾಗಿ ಪಿಚ್ ಸಂಪೂರ್ಣವಾಗಿ ನಿಧಾನಗತಿಯಾಗಿ ಬದಲಾಗದಿದ್ದರೂ, ಬೌಲರ್‌ಗಳು ಪಿಚ್‌ನ ಮೇಲ್ಮೈಯನ್ನು ಬಳಸಿಕೊಂಡು ಸ್ಲೋ ಎಸೆತಗಳನ್ನು ಹಾಕಿದಾಗ ರನ್ ಗಳಿಸುವುದು ಬ್ಯಾಟರ್‌ಗಳಿಗೆ ತೀವ್ರ ಕಷ್ಟಕರವಾಗಿ ಪರಿಣಮಿಸಿತು.

ನಮ್ಮ ಮೊದಲ ಆದ್ಯತೆ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನದಲ್ಲೇ ಉಳಿಯುವುದಾಗಿತ್ತು. ಆದರೆ ಎದುರಾಳಿಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ನಮಗೆ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ರಜತ್ ಪಾಟೀದಾರ್ ಎಂದು ಹೇಳಿದ್ದಾರೆ.


ಈ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪ್ಲೇಆಫ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

Source link

Adhika Masa Vastu: ಮನೆಯಲ್ಲಿ ಈ ವಸ್ತುಗಳಿದ್ದರೆ ತಕ್ಷಣವೇ ತೆಗೆದುಹಾಕಿ, ಇಲ್ಲದಿದ್ದರೆ ದಾರಿದ್ರ್ಯ ಬೆನ್ನತ್ತಬಹುದು! – Kannada News | Adhika Masa Vastu: Remove These 4 Items for Positive Energy and Prosperity in Your Home

ಸನಾತನ ಧರ್ಮದಲ್ಲಿ ಅಧಿಕ ಮಾಸಕ್ಕೆ (ಪುರುಷೋತ್ತಮ ಮಾಸ) ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಈ ಪವಿತ್ರ ಮಾಸದ ಅಧಿಪತಿ ಶ್ರೀಮಹಾವಿಷ್ಣು. ಹಾಗಾಗಿಯೇ ಇದನ್ನು “ಪುರುಷೋತ್ತಮ ಮಾಸ” ಎಂದೂ ಕರೆಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ಅಧಿಕ ಮಾಸದಲ್ಲಿ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು, ಸಕಾರಾತ್ಮಕ ಶಕ್ತಿಯನ್ನು (Positive Energy) ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ.

ಈ ಅವಧಿಯಲ್ಲಿ ಮನೆಯಲ್ಲಿರುವ ಕೆಲವು ವಸ್ತುಗಳು ನಕಾರಾತ್ಮಕ ಪ್ರಭಾವವನ್ನು ಬೀರುತ್ತವೆ ಮತ್ತು ದುರಾದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಅಧಿಕ ಮಾಸ ಮುಗಿಯುವ ಮುನ್ನವೇ ಈ ಕೆಳಗಿನ ನಾಲ್ಕು ವಸ್ತುಗಳನ್ನು ಮನೆಯಿಂದ ಹೊರಹಾಕಲು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಆ ವಸ್ತುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಮುರಿದ ದೇವರ ವಿಗ್ರಹಗಳು:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮುರಿದ ದೇವತಾ ವಿಗ್ರಹಗಳು ಮತ್ತು ಹರಿದುಹೋಗಿರುವ ದೇವರ ಫೋಟೋ ಇಡುವುದು ಅಶುಭ. ಇವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ಅಧಿಕ ಮಾಸದ ಈ ಪವಿತ್ರ ಸಮಯದಲ್ಲಿ ಅಂತಹ ವಿಗ್ರಹಗಳನ್ನು ಗೌರವಪೂರ್ವಕವಾಗಿ ಯಾವುದೇ ನದಿ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡುವುದು ಉತ್ತಮ.

ಒಣಗಿಹೋದ ಗಿಡ-ಮರಗಳು:

ಮನೆಯ ಸುತ್ತಮುತ್ತ ಒಣಗಿದ ಗಿಡಗಳು ಇರುವುದು ನಿರಾಶೆ ಮತ್ತು ನಕಾರಾತ್ಮಕತೆಯ ಸಂಕೇತವಾಗಿದೆ. ಇವು ಕುಟುಂಬದ ಸದಸ್ಯರ ಮಾನಸಿಕ ಶಾಂತಿ ಮತ್ತು ಪ್ರಗತಿಯ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದ್ದರಿಂದ ತಕ್ಷಣವೇ ಒಣಗಿದ ಗಿಡಗಳನ್ನು ತೆಗೆದುಹಾಕಿ, ಅವುಗಳ ಜಾಗದಲ್ಲಿ ಹಸಿರಾದ ಹೊಸ ಗಿಡಗಳನ್ನು ನೆಡಿ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಒಡೆದ ಗಾಜಿನ ವಸ್ತುಗಳು:

ಮನೆಯಲ್ಲಿ ಒಡೆದ ಗಾಜು, ಬಿರುಕು ಬಿಟ್ಟ ಕನ್ನಡಿಗಳು ಅಥವಾ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ದೊಡ್ಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇವು ಕುಟುಂಬದಲ್ಲಿ ವಿನಾಕಾರಣ ಉದ್ವೇಗ, ಜಗಳ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಆದ್ದರಿಂದ ಇಂತಹ ವಸ್ತುಗಳನ್ನು ತಕ್ಷಣವೇ ಮನೆಯಿಂದ ಹೊರಹಾಕುವುದು ಶ್ರೇಯಸ್ಕರ.

ನಿಂತುಹೋದ ಅಥವಾ ಹಾಳಾದ ಗಡಿಯಾರಗಳು:

ಗಡಿಯಾರವನ್ನು ಸಮಯ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಂತುಹೋದ ಗಡಿಯಾರಗಳು ಮನೆಯಲ್ಲಿ ನಿಷ್ಕ್ರಿಯ ಶಕ್ತಿಯನ್ನು (Stagnant Energy) ಸೂಚಿಸುತ್ತವೆ. ಇವು ಕುಟುಂಬದ ಸದಸ್ಯರ ಉದ್ಯೋಗ, ವ್ಯಾಪಾರ ಮತ್ತು ಜೀವನದ ಬೆಳವಣಿಗೆಗೆ ಅಡ್ಡಿಪಡಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಕೆಟ್ಟುಹೋದ ಗಡಿಯಾರಗಳನ್ನು ತಕ್ಷಣವೇ ದುರಸ್ತಿ ಮಾಡಿ ಅಥವಾ ಮನೆಯಿಂದ ತೆಗೆದುಹಾಕಿ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ವಾಸ್ತು, ಜ್ಯೋತಿಷ್ಯ ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ – Kannada News | IPL 2026: virat kohli and travis head fight video

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯವು ಕೇವಲ ರನ್‌ಗಳ ಮಳೆಯಿಂದಷ್ಟೇ ಅಲ್ಲ, ಇಬ್ಬರು ಜಾಗತಿಕ ಕ್ರಿಕೆಟ್ ದಿಗ್ಗಜರ ವಾಕ್ಸಮರದಿಂದ ಇಡೀ ವಿಶ್ವದ ಗಮನ ಸೆಳೆದಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್​ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಹಾಗೂ ಪಂದ್ಯದ ಬಳಿಕ ಕೊಹ್ಲಿ ನಡೆದುಕೊಂಡು ರೀತಿ ಇದೀಗ ಚರ್ಚಾ ವಿಷಯವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

  • ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಆಕ್ರೋಶ: ಎಸ್‌ಆರ್‌ಎಚ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್  ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿ ಸಂಭ್ರಮಿಸಿದ್ದರು.

  • ಕೊಹ್ಲಿ ಸವಾಲು: ಆರ್‌ಸಿಬಿ ಬ್ಯಾಟಿಂಗ್ ಮಾಡುತ್ತಿದ್ದಾಗ ವೆಂಕಟೇಶ್ ಅಯ್ಯರ್ ಅವರು ಎಸ್‌ಆರ್‌ಎಚ್ ಸ್ಪಿನ್ನರ್ ಶಿವಾಂಗ್ ಕುಮಾರ್ ಓವರ್‌ನಲ್ಲಿ 23 ರನ್ ಚಚ್ಚಿದರು. ಈ ವೇಳೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕೊಹ್ಲಿ, ಮಿಡ್-ವಿಕೆಟ್‌ನಲ್ಲಿದ್ದ ಟ್ರಾವಿಸ್ ಹೆಡ್‌ರನ್ನು ಕೆಣಕಿದರು. “ಬಾ ಇಲ್ಲಿ, ಬಂದು ಸ್ವಲ್ಪ ಆಫ್-ಸ್ಪಿನ್ ಬೌಲಿಂಗ್ ಮಾಡು” ಎಂದು ಹೆಡ್‌ಗೆ ಸವಾಲು ಹಾಕುತ್ತಾ ತಮಾಷೆ ಮಾಡಿದರು.
  • ಹೆಡ್ ತಿರುಗೇಟು: ಕೊಹ್ಲಿ ಸವಾಲು ಹಾಕಿದ ಕೆಲವೇ ನಿಮಿಷಗಳಲ್ಲಿ ಸಾಕಿಬ್ ಹುಸೇನ್ ಎಸೆತದಲ್ಲಿ ಕೇವಲ 15 ರನ್ ಗಳಿಸಿ ಔಟಾದರು. ಕೊಹ್ಲಿ ಪೆವಿಲಿಯನ್‌ಗೆ ಮರಳುವಾಗ ಹೆಡ್ ಬಿಡಲಿಲ್ಲ. “ಗೆಳೆಯಾ, ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀನು ಔಟಾಗಿ ಹೋದೆ!” ಎಂದು ತಿರುಗೇಟು ನೀಡಿದರು. ಇದರಿಂದ ಕೊಹ್ಲಿ ತೀವ್ರ ಅಸಮಾಧಾನಗೊಂಡರು.

ಹಸ್ತಲಾಘವ ನಿರಾಕರಿಸಿದ ಕೊಹ್ಲಿ:

ಎಸ್‌ಆರ್‌ಎಚ್ ತಂಡ 55 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್  ಮಾಡುತ್ತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಕೊಹ್ಲಿ ಕಡೆಗೆ ಕೈ ಚಾಚಿದರು. ಆದರೆ ತೀವ್ರ ಕೋಪದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಅವರತ್ತ ಕಣ್ಣೆತ್ತಿಯೂ ನೋಡದೆ ನೇರವಾಗಿ ಮುಂದೆ ಸಾಗಿದರು!

ಆದರೆ, ಅವರ ಹಿಂದೆಯೇ ಇದ್ದ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಕೊಹ್ಲಿ ಅತ್ಯಂತ ಆತ್ಮೀಯವಾಗಿ ಹಸ್ತಲಾಘವ ಮಾಡಿ ಕೌತುಕ ಮೂಡಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕ್ರೀಡಾ ಸ್ಫೂರ್ತಿ ಮರೆತ ವಿರಾಟ್ ಕೊಹ್ಲಿ:

ಕ್ರಿಕೆಟ್‌ನಲ್ಲಿ “ಮೈದಾನದ ಜಗಳ ಪಂದ್ಯದೊಂದಿಗೆ ಮುಗಿಯಬೇಕು” ಎಂಬ ಅಲಿಖಿತ ನಿಯಮವಿದೆ. ಪಂದ್ಯ ಮುಗಿದ ಮೇಲೆ ಹಸ್ತಲಾಘವ ಮಾಡುವುದು ಪರಸ್ಪರ ಗೌರವದ ಸಂಕೇತ. ಅದನ್ನು ನಿರಾಕರಿಸುವುದು ಕ್ರೀಡಾ ಸಂಸ್ಕೃತಿಗೆ ವಿರುದ್ಧವಾಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಟ್ರಾವಿಸ್ ಹೆಡ್ ಶೇಕ್ ಹ್ಯಾಂಡ್ ನೀಡದೇ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ.

ಅದರಲ್ಲೂ 2023ರ ಐಪಿಎಲ್‌ನಲ್ಲಿ ಲಕ್ನೋ ವಿರುದ್ಧದ ರೋಚಕ ಪಂದ್ಯ ಮುಗಿದ ಬಳಿಕ ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಅವರೊಂದಿಗೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು. ಆ ಪಂದ್ಯ ಗೆದ್ದು ಡ್ರೆಸ್ಸಿಂಗ್ ರೂಮ್‌ಗೆ ಬಂದ ನಂತರ ಕೊಹ್ಲಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು, “ನೀವು ಬೇರೆಯವರಿಗೆ ಕೊಡಲು ಸಿದ್ಧರಿದ್ದರೆ, ಅದನ್ನು ಅವರಿಂದ ತಿರುಗಿಸಿ ಇಸ್ಕೊಳ್ಳುವುದಕ್ಕೂ ಸಿದ್ಧರಾಗಿರಬೇಕು. ಇಲ್ಲದಿದ್ದರೆ ಕೊಡಲು ಹೋಗಬೇಡಿ” ಎಂದಿದ್ದರು. ಇದೇ ಡೈಲಾಗ್ ವಿರಾಟ್ ಕೊಹ್ಲಿಗೂ ಅನ್ವಯಿಸುತ್ತದೆ ಎಂಬುದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯ.

ಗೆದ್ದು ಬೀಗಿದ ಎಸ್​ಆರ್​ಹೆಚ್:

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ 20 ಓವರ್​ಗಳಲ್ಲಿ 200 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡ 55 ರನ್​ಗಳ ಜಯ ಸಾಧಿಸಿದೆ.

Source link

ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್

ಮಂತ್ರಾಲಯ ಗುರು ರಾಯರ ಬಗ್ಗೆ ಅಜನೀಶ್ ಲೋಕನಾಥ್ ಆಲ್ಬಂ ಸಾಂಗ್ ಒಂದನ್ನು ಮಾಡಿದ್ದಾರೆ. ಈ ಹಾಡಿನ ಟೀಸರ್ ಬಿಡುಗಡೆ ಆಗಿದೆ. ‘ಕಾಂತರ ಚಾಪ್ಟರ್ 1’ ಚಿತ್ರದಲ್ಲಿ ‘ಬ್ರಹ್ಮ ಕಳಶ’ ಹಾಡು ಹಾಡಿರುವ ಅಬ್ಬಿ ಇದೀಗ ರಾಯರ ಹಾಡನ್ನ ಹಾಡಿದ್ದಾರೆ. ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ನಲ್ಲಿ ರಘು ಭಟ್ ನಿರ್ಮಾಣ ಮಾಡಿದ್ದಾರೆ. ಈ ಹಾಡನ್ನು ಮಾಡಲು ಕಾರಣ ಏನು ಎಂಬುದನ್ನು ಅಜನೀಶ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಯಸ್ಸಾಗಿದೆ ಅಂತಾ ಮನೇಲಿ ಕೂರಲ್ಲ ಎಂದ ದೇವೇಗೌಡ್ರು! ಮತ್ತೆ ರಾಜ್ಯಸಭೆ ರೇಸ್​ಗೆ ಎಂಟ್ರಿಯಾಗ್ತಾರಾ ಹೆಚ್​ಡಿಡಿ? – Kannada News | HD Deve Gowda Rajya Sabha Re election: JDS BJP Alliance Strategy in Karnataka

ಮತ್ತೆ ರಾಜ್ಯಸಭೆ ರೇಸ್​ಗೆ ಎಂಟ್ರಿಯಾಗ್ತಾರಾ ದೇವೇಗೌಡ್ರು?

ಬೆಂಗಳೂರು, ಮೇ 23: ಜೂನ್ 25ಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (H. D. Deve Gowda) ರಾಜ್ಯಸಭಾ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿದ್ದು, ಅವರನ್ನು ಮತ್ತೊಂದು ಅವಧಿಗೆ ಮರು ಆಯ್ಕೆ ಮಾಡಲು ಜೆಡಿಎಸ್ ನಾಯಕರು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ದೆಹಲಿ ಮಟ್ಟದಲ್ಲಿ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರೊಂದಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸಲು ಜೆಡಿಎಸ್ ನಾಯಕರು ಕಸರತ್ತು ನಡೆಸಿದ್ದಾರೆ.
  • ರಾಜ್ಯಸಭೆ ಮರು ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ಮೋದಿಗೆ ಬಿಡಲಾಗಿದೆ.
  • ಮೈತ್ರಿಕೂಟದ ಸಂಖ್ಯಾಬಲದ ಆಧಾರದ ಮೇಲೆ ಜೆಡಿಎಸ್ ಸುಲಭವಾಗಿ ಗೆಲ್ಲುವ ಅವಕಾಶ ಹೊಂದಿದೆ.

ಮೈತ್ರಿ ಅಭ್ಯರ್ಥಿಯಾಗಿ ಗೌಡ್ರ ಗೆಲುವು ಪಕ್ಕಾ!

ಕರ್ನಾಟಕದಿಂದ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ರಿಂದ 46 ಮತಗಳ ಅಗತ್ಯವಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಹೊಂದಿದ್ದು, ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಇನ್ನುಳಿದಂತೆ ಬಿಜೆಪಿ (63) ಮತ್ತು ಜೆಡಿಎಸ್ (18) ಮೈತ್ರಿಕೂಟದ ಬಳಿ ಒಟ್ಟು 81 ಮತಗಳಿದ್ದು, ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರನ್ನು ಕಣಕ್ಕಿಳಿಸಿದರೆ ಅವರ ಗೆಲುವು ನಿಶ್ಚಿತವಾಗಿದೆ. ಗೌಡರ ಹಿರಿತನ ಮತ್ತು ರಾಜಕೀಯ ಅನುಭವಕ್ಕೆ ಮನ್ನಣೆ ನೀಡಿ ಹೈಕಮಾಂಡ್ ಒಪ್ಪಿಗೆ ನೀಡುವ ವಿಶ್ವಾಸದಲ್ಲಿ ದಳಪತಿಗಳಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ, ನಾವು ಯಾವುದೇ ಷರತ್ತು ಅಥವಾ ಒತ್ತಡ ಹೇರಿಲ್ಲ, ಪ್ರಧಾನಿ ಮೋದಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

ವಯಸ್ಸಾಗಿದೆ ಅಂತಾ ಮನೆಯಲ್ಲಿ ಕೂರಲ್ಲ ಎಂದ ಹೆಚ್​ಡಿಡಿ

ತಮ್ಮ ಮರು ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದು ದೇಶದ ಪ್ರಧಾನಿ ಹುದ್ದೆಯವರೆಗೆ ನೋಡಿದ್ದೇನೆ. ರಾಜ್ಯಸಭೆಯ ಅವಧಿ ಮುಗಿಯುತ್ತಿದ್ದು, ಉಳಿದದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಬಿಟ್ಟದ್ದು. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಕೊನೆಯ ಉಸಿರಿರುವವರೆಗೂ ಜನಗಳ ಪರವಾಗಿ ಹೋರಾಟ ಮಾಡುತ್ತೇನೆ. ವಯಸ್ಸಾಗಿದೆ ಎಂದು ಮನೆಯಲ್ಲಿ ಕೂರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಮಾಂಗಲ್ಯ ಸರದಲ್ಲಿ ಮುತ್ತು, ಹವಳ ಇರಲೇಬೇಕು ಯಾಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Unlocking Strength: Traditional Benefits of Pearl and Coral in Jewellery

ಮಾಂಗಲ್ಯ ಸರದಲ್ಲಿ ಮುತ್ತು, ಹವಳImage Credit source: Pinterest

ಮಾಂಗಲ್ಯ ಸರದಲ್ಲಿ ಧರಿಸುವ ಮುತ್ತು ಮತ್ತು ಹವಳದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.ಪ್ರತಿಯೊಬ್ಬ ಗೃಹಿಣಿ, ತಾಯಿ ಅಥವಾ ವೃತ್ತಿಪರ ಮಹಿಳೆಗೆ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಈ ಗುಣಗಳನ್ನು ಹೆಚ್ಚಿಸಲು ನವರತ್ನಗಳು, ಅದರಲ್ಲೂ ನಿರ್ದಿಷ್ಟವಾಗಿ ಮುತ್ತು ಮತ್ತು ಹವಳಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.

ಮಹಿಳೆಯರು ಮುತ್ತು ಮತ್ತು ಹವಳವನ್ನು ಧರಿಸಿದಾಗ, ಅವರಲ್ಲಿನ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ, ಧೈರ್ಯ, ಶಕ್ತಿ ಮತ್ತು ಉತ್ತಮ ಮನಸ್ಸಿನ ಭಾವನೆಗಳು ಹೆಚ್ಚುತ್ತವೆ. ಇದು ಜೀವನದ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಮಾಂಗಲ್ಯ ಸರದಲ್ಲಿ ಈ ರತ್ನಗಳನ್ನು ಧರಿಸುವುದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಮಾಂಗಲ್ಯವು ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಹವಳವು ಕುಜ (ಮಂಗಳ) ಗ್ರಹದ ಪ್ರತೀಕವಾಗಿದ್ದರೆ, ಮುತ್ತು ಚಂದ್ರ ಗ್ರಹದ ಪ್ರತೀಕವಾಗಿದೆ. ಈ ರತ್ನಗಳು ಸ್ತ್ರೀಯರಿಗೆ ಶಕ್ತಿ, ಚೈತನ್ಯ ಮತ್ತು ತಾಳ್ಮೆಯನ್ನು ನೀಡುತ್ತವೆ. ಮಹಿಳೆ ತಾಳ್ಮೆ ಮತ್ತು ಪ್ರಶಾಂತತೆಯಿಂದ ಇದ್ದಾಗ, ಆ ಕುಟುಂಬವು ನೆಮ್ಮದಿಯಿಂದ ಇರುತ್ತದೆ. ಪತಿ, ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರಿಗೂ ಆ ಮಹಿಳೆ ಮಾರ್ಗದರ್ಶಕಿಯಾಗಿ, ಅನ್ನದಾತಳಾಗಿ, ಚೈತನ್ಯ ತುಂಬುವ ಶಕ್ತಿಯಾಗಿರುತ್ತಾಳೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಹವಳ ಧರಿಸುವುದರಿಂದ ಗರ್ಭಧಾರಣೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಕುಜನು ಯೋಧನಂತೆ ಸಂಸಾರವನ್ನು ನಿರ್ವಹಿಸಲು ಮಾನಸಿಕ ಶಕ್ತಿಯನ್ನು ನೀಡುತ್ತಾನೆ. ಮಾಂಗಲ್ಯದಲ್ಲಿ ಹವಳ ಧರಿಸುವುದರಿಂದ ಕುಜದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದು ವಿವಾಹ ಪೂರ್ವ ಮತ್ತು ವಿವಾಹ ನಂತರದ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ, ಗೃಹಿಣಿಯ ಆರೋಗ್ಯವನ್ನು ಸುಧಾರಿಸುತ್ತದೆ.

ಮುತ್ತು ಮತ್ತು ಹವಳವನ್ನು ಮಾಂಗಲ್ಯ ಸರದ ಎಡ ಮತ್ತು ಬಲ ಭಾಗದಲ್ಲಿ ಧರಿಸುವುದರಿಂದ ಮಹಿಳೆಯು ಹೆಚ್ಚು ಜಾಗೃತಳಾಗಿ, ಸಂಸಾರವನ್ನು ನಿರ್ವಹಿಸುವ ಅದ್ಭುತ ಶಕ್ತಿಯನ್ನು ಪಡೆಯುತ್ತಾಳೆ. ಆರೋಗ್ಯ ಸುಧಾರಣೆಯ ಜೊತೆಗೆ, ಶಸ್ತ್ರಚಿಕಿತ್ಸೆ ಇಲ್ಲದೆ ನೈಸರ್ಗಿಕ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯ ಮತ್ತು ಚಂದ್ರರ ಅನುಗ್ರಹವು ಈ ರತ್ನಗಳ ಮೇಲೆ ಇರುತ್ತದೆ. ಹವಳ ಧರಿಸಿದ ಜಾಗದಲ್ಲಿ ಸೂರ್ಯನ ಕಿರಣಗಳ ಪ್ರಭಾವವೂ ದೇಹದ ಮೇಲೆ ಹೆಚ್ಚಾಗಿ ಬೀಳುತ್ತದೆ.

ಒಟ್ಟಾರೆಯಾಗಿ, ಈ ರತ್ನಗಳು ಆರೋಗ್ಯ, ಸಂಸಾರ ನಿರ್ವಹಣೆ, ಸಾಂಪ್ರದಾಯಿಕ ಮೌಲ್ಯಗಳು, ತಾಳ್ಮೆ ಮತ್ತು ಸಹನೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮಹಿಳೆ ರಾಜಕೀಯದಲ್ಲಿರಲಿ, ವೈದ್ಯೆಯಾಗಿರಲಿ, ಶಿಕ್ಷಕಿಯಾಗಿರಲಿ ಅಥವಾ ಯಾವುದೇ ವೃತ್ತಿಯಲ್ಲಿದ್ದರೂ, ವೃತ್ತಿಪರವಾಗಿ ಧೈರ್ಯವನ್ನು ನೀಡುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link