Category Archives: Blog

Your blog category

ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್

ಮಂತ್ರಾಲಯ ಗುರು ರಾಯರ ಬಗ್ಗೆ ಅಜನೀಶ್ ಲೋಕನಾಥ್ ಆಲ್ಬಂ ಸಾಂಗ್ ಒಂದನ್ನು ಮಾಡಿದ್ದಾರೆ. ಈ ಹಾಡಿನ ಟೀಸರ್ ಬಿಡುಗಡೆ ಆಗಿದೆ. ‘ಕಾಂತರ ಚಾಪ್ಟರ್ 1’ ಚಿತ್ರದಲ್ಲಿ ‘ಬ್ರಹ್ಮ ಕಳಶ’ ಹಾಡು ಹಾಡಿರುವ ಅಬ್ಬಿ ಇದೀಗ ರಾಯರ ಹಾಡನ್ನ ಹಾಡಿದ್ದಾರೆ. ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ನಲ್ಲಿ ರಘು ಭಟ್ ನಿರ್ಮಾಣ ಮಾಡಿದ್ದಾರೆ. ಈ ಹಾಡನ್ನು ಮಾಡಲು ಕಾರಣ ಏನು ಎಂಬುದನ್ನು ಅಜನೀಶ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಯಸ್ಸಾಗಿದೆ ಅಂತಾ ಮನೇಲಿ ಕೂರಲ್ಲ ಎಂದ ದೇವೇಗೌಡ್ರು! ಮತ್ತೆ ರಾಜ್ಯಸಭೆ ರೇಸ್​ಗೆ ಎಂಟ್ರಿಯಾಗ್ತಾರಾ ಹೆಚ್​ಡಿಡಿ? – Kannada News | HD Deve Gowda Rajya Sabha Re election: JDS BJP Alliance Strategy in Karnataka

ಮತ್ತೆ ರಾಜ್ಯಸಭೆ ರೇಸ್​ಗೆ ಎಂಟ್ರಿಯಾಗ್ತಾರಾ ದೇವೇಗೌಡ್ರು?

ಬೆಂಗಳೂರು, ಮೇ 23: ಜೂನ್ 25ಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (H. D. Deve Gowda) ರಾಜ್ಯಸಭಾ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿದ್ದು, ಅವರನ್ನು ಮತ್ತೊಂದು ಅವಧಿಗೆ ಮರು ಆಯ್ಕೆ ಮಾಡಲು ಜೆಡಿಎಸ್ ನಾಯಕರು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ದೆಹಲಿ ಮಟ್ಟದಲ್ಲಿ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರೊಂದಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸಲು ಜೆಡಿಎಸ್ ನಾಯಕರು ಕಸರತ್ತು ನಡೆಸಿದ್ದಾರೆ.
  • ರಾಜ್ಯಸಭೆ ಮರು ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ಮೋದಿಗೆ ಬಿಡಲಾಗಿದೆ.
  • ಮೈತ್ರಿಕೂಟದ ಸಂಖ್ಯಾಬಲದ ಆಧಾರದ ಮೇಲೆ ಜೆಡಿಎಸ್ ಸುಲಭವಾಗಿ ಗೆಲ್ಲುವ ಅವಕಾಶ ಹೊಂದಿದೆ.

ಮೈತ್ರಿ ಅಭ್ಯರ್ಥಿಯಾಗಿ ಗೌಡ್ರ ಗೆಲುವು ಪಕ್ಕಾ!

ಕರ್ನಾಟಕದಿಂದ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ರಿಂದ 46 ಮತಗಳ ಅಗತ್ಯವಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಹೊಂದಿದ್ದು, ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಇನ್ನುಳಿದಂತೆ ಬಿಜೆಪಿ (63) ಮತ್ತು ಜೆಡಿಎಸ್ (18) ಮೈತ್ರಿಕೂಟದ ಬಳಿ ಒಟ್ಟು 81 ಮತಗಳಿದ್ದು, ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರನ್ನು ಕಣಕ್ಕಿಳಿಸಿದರೆ ಅವರ ಗೆಲುವು ನಿಶ್ಚಿತವಾಗಿದೆ. ಗೌಡರ ಹಿರಿತನ ಮತ್ತು ರಾಜಕೀಯ ಅನುಭವಕ್ಕೆ ಮನ್ನಣೆ ನೀಡಿ ಹೈಕಮಾಂಡ್ ಒಪ್ಪಿಗೆ ನೀಡುವ ವಿಶ್ವಾಸದಲ್ಲಿ ದಳಪತಿಗಳಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ, ನಾವು ಯಾವುದೇ ಷರತ್ತು ಅಥವಾ ಒತ್ತಡ ಹೇರಿಲ್ಲ, ಪ್ರಧಾನಿ ಮೋದಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

ವಯಸ್ಸಾಗಿದೆ ಅಂತಾ ಮನೆಯಲ್ಲಿ ಕೂರಲ್ಲ ಎಂದ ಹೆಚ್​ಡಿಡಿ

ತಮ್ಮ ಮರು ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದು ದೇಶದ ಪ್ರಧಾನಿ ಹುದ್ದೆಯವರೆಗೆ ನೋಡಿದ್ದೇನೆ. ರಾಜ್ಯಸಭೆಯ ಅವಧಿ ಮುಗಿಯುತ್ತಿದ್ದು, ಉಳಿದದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಬಿಟ್ಟದ್ದು. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಕೊನೆಯ ಉಸಿರಿರುವವರೆಗೂ ಜನಗಳ ಪರವಾಗಿ ಹೋರಾಟ ಮಾಡುತ್ತೇನೆ. ವಯಸ್ಸಾಗಿದೆ ಎಂದು ಮನೆಯಲ್ಲಿ ಕೂರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಮಾಂಗಲ್ಯ ಸರದಲ್ಲಿ ಮುತ್ತು, ಹವಳ ಇರಲೇಬೇಕು ಯಾಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Unlocking Strength: Traditional Benefits of Pearl and Coral in Jewellery

ಮಾಂಗಲ್ಯ ಸರದಲ್ಲಿ ಮುತ್ತು, ಹವಳImage Credit source: Pinterest

ಮಾಂಗಲ್ಯ ಸರದಲ್ಲಿ ಧರಿಸುವ ಮುತ್ತು ಮತ್ತು ಹವಳದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.ಪ್ರತಿಯೊಬ್ಬ ಗೃಹಿಣಿ, ತಾಯಿ ಅಥವಾ ವೃತ್ತಿಪರ ಮಹಿಳೆಗೆ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಈ ಗುಣಗಳನ್ನು ಹೆಚ್ಚಿಸಲು ನವರತ್ನಗಳು, ಅದರಲ್ಲೂ ನಿರ್ದಿಷ್ಟವಾಗಿ ಮುತ್ತು ಮತ್ತು ಹವಳಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.

ಮಹಿಳೆಯರು ಮುತ್ತು ಮತ್ತು ಹವಳವನ್ನು ಧರಿಸಿದಾಗ, ಅವರಲ್ಲಿನ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ, ಧೈರ್ಯ, ಶಕ್ತಿ ಮತ್ತು ಉತ್ತಮ ಮನಸ್ಸಿನ ಭಾವನೆಗಳು ಹೆಚ್ಚುತ್ತವೆ. ಇದು ಜೀವನದ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಮಾಂಗಲ್ಯ ಸರದಲ್ಲಿ ಈ ರತ್ನಗಳನ್ನು ಧರಿಸುವುದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಮಾಂಗಲ್ಯವು ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಹವಳವು ಕುಜ (ಮಂಗಳ) ಗ್ರಹದ ಪ್ರತೀಕವಾಗಿದ್ದರೆ, ಮುತ್ತು ಚಂದ್ರ ಗ್ರಹದ ಪ್ರತೀಕವಾಗಿದೆ. ಈ ರತ್ನಗಳು ಸ್ತ್ರೀಯರಿಗೆ ಶಕ್ತಿ, ಚೈತನ್ಯ ಮತ್ತು ತಾಳ್ಮೆಯನ್ನು ನೀಡುತ್ತವೆ. ಮಹಿಳೆ ತಾಳ್ಮೆ ಮತ್ತು ಪ್ರಶಾಂತತೆಯಿಂದ ಇದ್ದಾಗ, ಆ ಕುಟುಂಬವು ನೆಮ್ಮದಿಯಿಂದ ಇರುತ್ತದೆ. ಪತಿ, ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರಿಗೂ ಆ ಮಹಿಳೆ ಮಾರ್ಗದರ್ಶಕಿಯಾಗಿ, ಅನ್ನದಾತಳಾಗಿ, ಚೈತನ್ಯ ತುಂಬುವ ಶಕ್ತಿಯಾಗಿರುತ್ತಾಳೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಹವಳ ಧರಿಸುವುದರಿಂದ ಗರ್ಭಧಾರಣೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಕುಜನು ಯೋಧನಂತೆ ಸಂಸಾರವನ್ನು ನಿರ್ವಹಿಸಲು ಮಾನಸಿಕ ಶಕ್ತಿಯನ್ನು ನೀಡುತ್ತಾನೆ. ಮಾಂಗಲ್ಯದಲ್ಲಿ ಹವಳ ಧರಿಸುವುದರಿಂದ ಕುಜದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದು ವಿವಾಹ ಪೂರ್ವ ಮತ್ತು ವಿವಾಹ ನಂತರದ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ, ಗೃಹಿಣಿಯ ಆರೋಗ್ಯವನ್ನು ಸುಧಾರಿಸುತ್ತದೆ.

ಮುತ್ತು ಮತ್ತು ಹವಳವನ್ನು ಮಾಂಗಲ್ಯ ಸರದ ಎಡ ಮತ್ತು ಬಲ ಭಾಗದಲ್ಲಿ ಧರಿಸುವುದರಿಂದ ಮಹಿಳೆಯು ಹೆಚ್ಚು ಜಾಗೃತಳಾಗಿ, ಸಂಸಾರವನ್ನು ನಿರ್ವಹಿಸುವ ಅದ್ಭುತ ಶಕ್ತಿಯನ್ನು ಪಡೆಯುತ್ತಾಳೆ. ಆರೋಗ್ಯ ಸುಧಾರಣೆಯ ಜೊತೆಗೆ, ಶಸ್ತ್ರಚಿಕಿತ್ಸೆ ಇಲ್ಲದೆ ನೈಸರ್ಗಿಕ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯ ಮತ್ತು ಚಂದ್ರರ ಅನುಗ್ರಹವು ಈ ರತ್ನಗಳ ಮೇಲೆ ಇರುತ್ತದೆ. ಹವಳ ಧರಿಸಿದ ಜಾಗದಲ್ಲಿ ಸೂರ್ಯನ ಕಿರಣಗಳ ಪ್ರಭಾವವೂ ದೇಹದ ಮೇಲೆ ಹೆಚ್ಚಾಗಿ ಬೀಳುತ್ತದೆ.

ಒಟ್ಟಾರೆಯಾಗಿ, ಈ ರತ್ನಗಳು ಆರೋಗ್ಯ, ಸಂಸಾರ ನಿರ್ವಹಣೆ, ಸಾಂಪ್ರದಾಯಿಕ ಮೌಲ್ಯಗಳು, ತಾಳ್ಮೆ ಮತ್ತು ಸಹನೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮಹಿಳೆ ರಾಜಕೀಯದಲ್ಲಿರಲಿ, ವೈದ್ಯೆಯಾಗಿರಲಿ, ಶಿಕ್ಷಕಿಯಾಗಿರಲಿ ಅಥವಾ ಯಾವುದೇ ವೃತ್ತಿಯಲ್ಲಿದ್ದರೂ, ವೃತ್ತಿಪರವಾಗಿ ಧೈರ್ಯವನ್ನು ನೀಡುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟಿ ಸೌಂದರ್ಯಾ ಬಗ್ಗೆ ಓಪನ್ ಆಗಿ ಮಾತನಾಡಿದ ಪ್ರೇಮಾ – Kannada News | Actress Prema Recalls Soundarya’s Legacy, Career and The Biopic Dilemma

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ಪ್ರೇಮಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಜರ್ನಿ ಹಾಗೂ ದಿವಂಗತ ನಟಿ ಸೌಂದರ್ಯ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಅವರ ಮೊದಲ ಎರಡು ಚಿತ್ರಗಳು ಸೋತಾಗ ಅವರು ತೀವ್ರ ನಿರಾಶೆಗೊಂಡಿದ್ದರು. ಸಿನಿಮಾರಂಗವನ್ನೇ ತೊರೆದು ಬೇರೆ ವೃತ್ತಿ ಆರಿಸಿಕೊಳ್ಳುವ ಯೋಚನೆಯಲ್ಲಿದ್ದ ಅವರಿಗೆ ಡಾ. ರಾಜ್‌ಕುಮಾರ್ ಅವರು ‘ಓಂ’ ಚಿತ್ರಕ್ಕೆ ಆಯ್ಕೆ ಮಾಡಿದ್ದೇ ದೊಡ್ಡ ತಿರುವಾಯಿತು. ‘ಓಂ’ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆದ ನಂತರ ಪ್ರೇಮಾ ಅವರ ವೃತ್ತಿಜೀವನದಲ್ಲಿ ಅವರು ಹಿಂತಿರುಗಿ ನೋಡಲಿಲ್ಲ.

ಪ್ರೇಮಾ ಮತ್ತು ಸೌಂದರ್ಯ ಒಟ್ಟಿಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಸೌಂದರ್ಯ ಸಾಮಾನ್ಯವಾಗಿ ಕಡಿಮೆ ಮಾತನಾಡುತ್ತಿದ್ದರು, ಆದರೆ ‘ಆಪ್ತಮಿತ್ರ’ ಚಿತ್ರೀಕರಣದ ಸಮಯದಲ್ಲಿ ವಿಷ್ಣುವರ್ಧನ್ ಮತ್ತು ಪ್ರೇಮಾ ಅವರೊಂದಿಗೆ ತುಂಬಾ ಮುಕ್ತವಾಗಿ ಮಾತನಾಡಿ, ತಮಾಷೆ ಮಾಡುತ್ತಿದ್ದರು. ಸೌಂದರ್ಯ ಎಂದಿಗೂ ಮತ್ಸರ ಅಥವಾ ಸ್ಪರ್ಧಾತ್ಮಕ ಮನೋಭಾವ ಹೊಂದಿರಲಿಲ್ಲ. ಅವರು ಗ್ಲಾಮರ್ ಪ್ರದರ್ಶನವಿಲ್ಲದೆ, ಕೇವಲ ತಮ್ಮ ಮುಖಭಾವ ಮತ್ತು ಶಿಸ್ತಿನ ನಟನೆಯಿಂದಲೇ ಸ್ಟಾರ್ ನಾಯಕಿಯಾದವರು.

‘ಇಷ್ಟೊಂದು ಅದ್ಭುತ ಜೀವನ ನಡೆಸಿದ ಸೌಂದರ್ಯ ಅವರ ಬಯೋಪಿಕ್ (ಜೀವನ ಚರಿತ್ರೆ) ಮಾಡಲು ನಿರ್ದೇಶಕರು ಏಕೆ ಹೆದರುತ್ತಾರೋ ಗೊತ್ತಿಲ್ಲ. ಅವರನ್ನು ಹತ್ತಿರದಿಂದ ಬಲ್ಲವರು ಈ ಸಿನಿಮಾ ಮಾಡಿದರೆ ಖಂಡಿತ ದೊಡ್ಡ ಹಿಟ್ ಆಗುತ್ತದೆ’ ಎನ್ನುತ್ತಾರೆ ಪ್ರೇಮಾ. ಸೌಂದರ್ಯ ಅವರ ವಿಮಾನ ಅಪಘಾತದ ಸಾವು ಪ್ರೇಮಾ ಅವರಿಗೆ ತೀವ್ರ ಆಘಾತ ನೀಡಿತ್ತು. ಅವರ ಸಾವಿನ ಬಗ್ಗೆ ಪ್ರೇಮಾ ಕೆಲವು ಸತ್ಯಗಳನ್ನು ಹಂಚಿಕೊಂಡಿದ್ದಾರೆ:
ಪೆಟ್ಟಿಗೆಯಲ್ಲಿದ್ದ ಶವ ಮತ್ತು ಅವರ ತಾಯಿಯ ಆಕ್ರಂದನವನ್ನು ನೋಡಿದ ನಂತರ, ‘ಕಲಾವಿದರ ಜೀವನ ನಶ್ವರ. ಸಾವು ಬಂದಾಗ ಖ್ಯಾತಿ, ಅಂತಸ್ತು ಯಾವುದೂ ಬರಲ್ಲ; ನಾವು ಗಳಿಸುವ ಕರ್ಮ ಮತ್ತು ಗೌರವ ಮಾತ್ರ ನಮ್ಮ ಜೊತೆ ಉಳಿಯುತ್ತದೆ’ ಎಂಬ ಕಹಿ ಸತ್ಯ ಪ್ರೇಮಾಗೆ ಅರ್ಥವಾಯಿತು.

ಇದನ್ನೂ ಓದಿ: ರಾಗಿಣಿ ದ್ವಿವೇದಿ, ವರಲಕ್ಷ್ಮೀ ‘ಪೊಲೀಸ್ ಕಂಪ್ಲೈಂಟ್’: ಸಾಕ್ಷಿಯಾದ ಹಿರಿಯ ನಟಿ ಪ್ರೇಮಾ

ಸೌಂದರ್ಯ ಪತಿ ‘ರಘು’ ಅವರ ಪ್ರಸ್ತುತ ಜೀವನ

ಸೌಂದರ್ಯ ಅವರ ಪತಿ ರಘು ಅವರು ಅತ್ಯಂತ ಮೃದುಭಾಷಿ ಮತ್ತು ಸರಳ ವ್ಯಕ್ತಿ. ಪ್ರಸ್ತುತ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅವರು, ಸೌಂದರ್ಯ ನಿಧನದ ನಂತರ ಮರುಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಮಗಳನ್ನು ನೋಡಿದಾಗ ತಮಗೆ ಸೌಂದರ್ಯ ಅವರೇ ಮರುಜನ್ಮ ಪಡೆದು ಬಂದಂತೆ ಭಾಸವಾಗುತ್ತದೆ ಎಂದು ಪ್ರೇಮಾ ಭಾವುಕರಾಗಿ ಹೇಳಿದ್ದಾರೆ. ರಘು ಅವರು ಇಂದಿಗೂ ಪ್ರೇಮಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ, ಇಂದು ಪ್ರಧಾನಿ ಜತೆ ಮಾತುಕತೆ – Kannada News | Marco Rubio Lands in Kolkata Ahead of Key Meeting With Narendra Modi

ಕೋಲ್ಕತ್ತಾ, ಮೇ 23: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಶನಿವಾರ ಕೋಲ್ಕತ್ತಾಗೆ ಆಗಮಿಸುವ ಮೂಲಕ ತಮ್ಮ ನಾಲ್ಕು ದಿನಗಳ ಮೊದಲ ಅಧಿಕೃತ ಭಾರತ ಪ್ರವಾಸವನ್ನು ಆರಂಭಿಸಿದ್ದಾರೆ. ಮೇ 23 ರಿಂದ 26 ರವರೆಗೆ ನಡೆಯಲಿರುವ ಈ ಭೇಟಿಯು ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ, ರಕ್ಷಣೆ, ಇಂಧನ ಮತ್ತು ಇಂಡೋ-ಪೆಸಿಫಿಕ್ ಸಹಕಾರದ ಕುರಿತು ಕಾರ್ಯತಂತ್ರದ ಮಾತುಕತೆಗಳ ಮಧ್ಯೆ ಅತ್ಯಂತ ಮಹತ್ವ ಪಡೆದಿದೆ.

ವಿಶೇಷವೆಂದರೆ, ಬರೋಬ್ಬರಿ 14 ವರ್ಷಗಳ ದೀರ್ಘ ಅವಧಿಯ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ರುಬಿಯೊ ಅವರ ಆಗಮನವನ್ನು ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ‘X’ ಮಾಧ್ಯಮದಲ್ಲಿ ದೃಢೀಕರಿಸಿದ್ದಾರೆ. ಕೋಲ್ಕತ್ತಾ ಪ್ರವಾಸದ ನಂತರ ರುಬಿಯೊ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಮತ್ತು ಕ್ವಾಡ್ (QUAD) ಒಕ್ಕೂಟದ ಕುರಿತು ಪ್ರಮುಖ ಮಾತುಕತೆ ನಡೆಸಲಿದ್ದಾರೆ.

ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ರೂಬಿಯೊ ಅವರ ಕೋಲ್ಕತ್ತಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ, ಅವರು ಮದರ್ ತೆರೇಸಾ ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿಯ ಪ್ರಧಾನ ಕಚೇರಿಯಾದ ‘ಮದರ್ ಹೌಸ್’ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ, ಸುಮಾರು ಅಂಗಡಿಗಳು ಭಸ್ಮ

ನವದೆಹಲಿ, ಮೇ 23: ನವದೆಹಲಿಯ ಶಾಸ್ತ್ರಿ ಪಾರ್ಕ್ ಪೀಠೋಪಕರಣ ಮಾರುಕಟ್ಟೆಯಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಸುಮಾರು 300 ಅಂಗಡಿಗಳು ನಾಶವಾಗಿವೆ. ಈ ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಈ ಮಧ್ಯೆ, ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದ ಅಗ್ನಿಶಾಮಕ ದಳದವರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಬೆಂಕಿಯನ್ನು ನಂದಿಸುವಲ್ಲಿ ವಿಳಂಬ ತೋರಿದ್ದಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಶಾರುಖ್ ಸಹೋದರಿ ಯಾರು? ವಿವಾಹ ಆಗದೆ ಉಳಿಯಲು ಕಾರಣವಾಯ್ತು ಆ ಘಟನೆ – Kannada News | Shah Rukh Khan’s Pillar: Shahnaz Lalarukh Khan’s Untold Story and Private Life

ಸಹೋದರಿ ಹಾಗೂ ಕುಟುಂಬದ ಜೊತೆ ಶಾರುಖ್ ಖಾನ್

ಬಾಲಿವುಡ್‌ನ ನಟ ಶಾರುಖ್ ಖಾನ್ ಅವರ (Shah Rukh Khan) ಯಶಸ್ಸಿನ ಹಿಂದೆ ಅವರ ಕುಟುಂಬ ಇದೆ. ವಿಶೇಷವಾಗಿ ಅವರ ಅಕ್ಕ ಶಹನಾಜ್ ಖಾನ್, ಇಡೀ ಖಾನ್ ಕುಟುಂಬದ ಬಲವಾದ ಆಧಾರಸ್ತಂಭವಾಗಿದ್ದಾರೆ. ಆದರೆ, ಅವರು ಯಾವಾಗಲೂ ಮಾಧ್ಯಮದ ಬೆಳಕಿನಿಂದ ಮತ್ತು ಜನಮನದಿಂದ ದೂರವಿರಲು ಬಯಸುತ್ತಾರೆ. ಅವರು ಈವರೆಗೆ ಮದುವೆ ಆಗಿಲ್ಲ.

1960 ರಲ್ಲಿ ಜನಿಸಿದ ಶಹನಾಜ್, ಶಾರುಖ್ ಖಾನ್ ಅವರಿಗಿಂತ ಸುಮಾರು ಐದರಿಂದ ಆರು ವರ್ಷ ದೊಡ್ಡವರು. ಶಹನಾಜ್ ತುಂಬಾ ಬುದ್ಧಿವಂತೆ ಮತ್ತು ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರು ಎಲ್‌ಎಲ್‌ಬಿ ಮತ್ತು ಎಂಎ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶಾರುಖ್ ಖಾನ್ ಅವರೇ ತಮ್ಮ ಅನೇಕ ಸಂದರ್ಶನಗಳಲ್ಲಿ ‘ನನ್ನ ಅಕ್ಕ ನನಗಿಂತ ನೂರು ಪಟ್ಟು ಹೆಚ್ಚು ಬುದ್ಧಿವಂತೆ ಮತ್ತು ಜಾಣೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೂ ಅವರು ಎಂದಿಗೂ ಪ್ರಚಾರವನ್ನು ಬಯಸದೆ ಶಾಂತ ಮತ್ತು ಸರಳ ಜೀವನವನ್ನು ನಡೆಸುತ್ತಿದ್ದಾರೆ.

ಶಹನಾಜ್ ಅವರ ಜೀವನವು ತೀವ್ರ ಏರಿಳಿತಗಳಿಂದ ಕೂಡಿತ್ತು. 1981ರಲ್ಲಿ ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಅವರ ಹಠಾತ್ ನಿಧನವು ಅವರಿಗೆ ಭರಿಸಲಾಗದ ಮಾನಸಿಕ ಆಘಾತವನ್ನು ನೀಡಿತು. ತಂದೆಯ ದೇಹವನ್ನು ನೋಡಿ ಮೂರ್ಛೆ ಹೋಗಿದ್ದ ಅವರು, ಸುಮಾರು ಎರಡು ವರ್ಷಗಳ ಕಾಲ ಯಾರೊಂದಿಗೂ ಸರಿಯಾಗಿ ಮಾತನಾಡದೆ ತೀವ್ರ ಖಿನ್ನತೆಗೆ ಒಳಗಾಗಿದ್ದರು. ತದನಂತರ 1991 ರಲ್ಲಿ ತಾಯಿ ಲತೀಫ್ ಫಾತಿಮಾ ಅವರ ಮರಣವು ಅವರ ಮಾನಸಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು.

‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಶಹನಾಜ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ, ಶಾರುಖ್ ಖಾನ್ ಅವರು ತಮ್ಮ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಸಹೋದರಿಯ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಿದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೂ ಕರೆದೊಯ್ದಿದ್ದರು.

ಇದನ್ನೂ ಓದಿ: ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್

ಹೆತ್ತವರ ಅಗಲಿಕೆಯ ಆಘಾತದಿಂದಾಗಿ ಶಹನಾಜ್ ಅವರು ಜೀವನದಲ್ಲಿ ಮದುವೆಯಾಗದೆ ಉಳಿದುಬಿಟ್ಟರು. ಅವರು ತಮ್ಮ ಇಡೀ ಜೀವನವನ್ನು ಕುಟುಂಬಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಪ್ರಸ್ತುತ ಅವರು ಮುಂಬೈನಲ್ಲಿರುವ ಶಾರುಖ್ ಅವರ ಐಷಾರಾಮಿ ಬಂಗಲೆ ‘ಮನ್ನತ್’ ನಲ್ಲಿ ವಾಸಿಸುತ್ತಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್ ಮತ್ತು ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್‌ರಾಮ್ ಅವರೊಂದಿಗೆ ಅವರು ಅತ್ಯಂತ ಆಪ್ತ ಹಾಗೂ ಪ್ರೀತಿಯ ಸಂಬಂಧವನ್ನು ಹೊಂದಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಮಾಧ್ಯಮಗಳಿಂದ ಸದಾ ದೂರವೇ ಉಳಿಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Tv9 Kannada news live: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಅದ್ಧೂರಿ ಸ್ವಾಗತಕ್ಕೆ ಬ್ರೇಕ್​! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | Tv9 Kannada news live: Nitin Nabin Karnataka Visit, Fuel Price Hike and PM Modi’s Rozgar Mela Updates

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಅದ್ಧೂರಿ ಸ್ವಾಗತಕ್ಕೆ ಬ್ರೇಕ್​!

ಬೆಂಗಳೂರು, ಮೇ 23: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin nabin) ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಅವರ ಅದ್ಧೂರಿ ಸ್ವಾಗತಕ್ಕೆ ಬ್ರೇಕ್ ಹಾಕಲಾಗಿದೆ. ದೇಶಾದ್ಯಂತ ಇಂಧನ ದರಗಳ ಸತತ ಏರಿಕೆಯ ಬಿಸಿ ಹೆಚ್ಚಾಗಿದ್ದು, ಇಂದು ಸತತ ಮೂರನೇ ಬಾರಿಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಇಂದು ‘ರೋಜ್‌ಗಾರ್ ಮೇಳ’ದ ಮೂಲಕ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ. ಈ ಹೊತ್ತಿನ ಟಾಪ್ ಮೂರು ಸುದ್ದಿಗಳು ಇಲ್ಲಿವೆ.

ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಸರಳ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ನಿತಿನ್ ನಬಿನ್ ಅವರ ಅದ್ಧೂರಿ ಸ್ವಾಗತ ಮತ್ತು ರೋಡ್ ಶೋಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಪ್ರಧಾನಿ ಮೋದಿ ಅವರ ಪೆಟ್ರೋಲ್, ಡೀಸೆಲ್ ಮಿತಬಳಕೆಯ ಕರೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಏರ್ಪೋರ್ಟ್‌ನಿಂದ ಕೇವಲ 4 ಎಲೆಕ್ಟ್ರಿಕ್ ಕಾರುಗಳಲ್ಲಿ ಅವರು ಸಂಚರಿಸಲಿದ್ದಾರೆ. ನಾಳೆ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಉಪಹಾರ ಮುಗಿಸಿ, ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಅವರು, ಪಕ್ಷದ ಕಚೇರಿಗೆ ಯಾವುದೇ ಹಾರ-ತುರಾಯಿ, ಮೆರವಣಿಗೆಗಳಿಲ್ಲದೆ ಅತ್ಯಂತ ಸರಳವಾಗಿ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ Nitin Nabin: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ; ನಾಳೆಯೇ ಅಧಿಕಾರ ಸ್ವೀಕಾರ

ಮುಖ್ಯಾಂಶಗಳು

ದೇಶಾದ್ಯಂತ ಮತ್ತೆ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ತೈಲ ಮಾರುಕಟ್ಟೆ ಕಂಪನಿಗಳು ಸತತವಾಗಿ ಇಂಧನ ದರ ಹೆಚ್ಚಿಸುತ್ತಿದ್ದು, ಗ್ರಾಹಕರ ಮೇಲೆ ಭಾರಿ ಹೊರೆ ಬೀಳುತ್ತಿದೆ. ಇತ್ತೀಚಿನ ಪರಿಷ್ಕರಣೆಯಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ 87 ಪೈಸೆ ಏರಿಕೆಯಾಗಿ 99.51 ರೂ. ಹಾಗೂ ಡೀಸೆಲ್ 91 ಪೈಸೆ ಹೆಚ್ಚಿ 92.49 ರೂ. ತಲುಪಿದೆ. ಇನ್ನು ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾದಲ್ಲಿ ಪೆಟ್ರೋಲ್ 110.57 ರೂ., ಮುಂಬೈನಲ್ಲಿ 107.56 ರೂ. ಮತ್ತು ಚೆನ್ನೈನಲ್ಲಿ 104.54 ರೂ. ಗಳಾಗಿದೆ. ಒಮ್ಮೆಗೆ ಲೀಟರ್‌ಗೆ ಸುಮಾರು 3 ರೂ.ವರೆಗೂ ದರ ಹೆಚ್ಚಿಸುವ ಮೂಲಕ ಕಂಪನಿಗಳು ದೀರ್ಘಾವಧಿಯ ಬೆಲೆ ಸ್ಥಿರತೆಗೆ ಸಂಪೂರ್ಣ ಬ್ರೇಕ್ ಹಾಕಿವೆ.

ಇದನ್ನೂ ಓದಿ ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿಎಷ್ಟಿದೆ?

ರೋಜ್‌ಗಾರ್ ಮೇಳದಡಿ 51,000 ಯುವಕರಿಗೆ ನೇಮಕಾತಿ ಪತ್ರ

ದೇಶದ ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ರೋಜ್‌ಗಾರ್ ಮೇಳ’ದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 23ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೊಸದಾಗಿ ಆಯ್ಕೆಯಾದ 51,000 ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದುವರೆಗೆ ದೇಶಾದ್ಯಂತ ಆಯೋಜಿಸಲಾದ ಒಟ್ಟು 18 ರೋಜ್‌ಗಾರ್ ಮೇಳಗಳ ಮೂಲಕ ಸುಮಾರು 12 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ಯಶಸ್ವಿಯಾಗಿ ನೇಮಕಾತಿ ಪತ್ರಗಳನ್ನು ವಿತರಿಸಿ ಸಬಲೀಕರಣಗೊಳಿಸಲಾಗಿದೆ.

ಇದನ್ನೂ ಓದಿ ರೋಜ್​ಗಾರ್ ಮೇಳದಡಿ ನಾಳೆ ಪ್ರಧಾನಿ ಮೋದಿಯಿಂದ 51,000ಕ್ಕೂ ಅಧಿಕ ಯುವಕರಿಗೆ ನೇಮಕಾತಿ ದಾಖಲೆ ಹಸ್ತಾಂತರ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Kalaburagi Accident: ಕಲಬುರಗಿಯ ಚಿತ್ತಾಪುರದಲ್ಲಿ ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ ಐವರ ದುರ್ಮರಣ – Kannada News | Kalaburagi Fatal Accident: 5 Family Members Dead in Chittapur Car Lorry Collision

ಕಲಬುರಗಿ, ಮೇ 23: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತ(Accident)ದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ವೈಯಕ್ತಿಕ ಕೆಲಸದ ನಿಮಿತ್ತ ಯಾದಗಿರಿಗೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ ಕ್ರೂಸರ್ ವಾಹನದಲ್ಲಿ ತಮ್ಮ ಊರಾದ ಇಂಗಳಗಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಲಾಡ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿ ಹಾಗೂ ಇವರ ಕ್ರೂಸರ್ ವಾಹನದ ನಡುವೆ ಮುಖಾಮುಖಿ ಭೀಕರ ಡಿಕ್ಕಿಯಾಗಿದೆ.

ಸ್ಥಳದಲ್ಲೇ ಐವರ ಸಾವು, ನುಜ್ಜುಗುಜ್ಜಾದ ವಾಹನ
ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕ್ರೂಸರ್ ವಾಹನವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ವಾಹನದಲ್ಲಿದ್ದ ಇಂಗಳಗಿ ಗ್ರಾಮದ ನಿವಾಸಿಗಳಾದ ತೋಲುಸಾಬ್ ಕ್ಯಾಶ್ವಾರ್ (27), ಹುಸೇನ್ ಷಾ (48), ಮೈಬೂಬ್ ಅಲಿ (45), ರಸೂಲ್ ಬೀ (42) ಮತ್ತು ಫಾತೀಮಾ ಅಲಿ (38) ಅವರು ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮತ್ತಷ್ಟು ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ

ಪೊಲೀಸ್ ಅಧಿಕಾರಿಗಳ ಭೇಟಿ
ಮಧ್ಯರಾತ್ರಿ ಹೆದ್ದಾರಿಯಲ್ಲಿ ನಡೆದ ಈ ಭೀಕರ ದುರಂತದ ಮಾಹಿತಿ ಸಿಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತ ನಡೆದ ಜಾಗವನ್ನು ಪರಿಶೀಲನೆ ನಡೆಸಲಾಗಿದ್ದು, ನುಜ್ಜುಗುಜ್ಜಾದ ವಾಹನದಿಂದ ಮೃತದೇಹಗಳನ್ನು ಹೊರತೆಗೆದು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಒಂದೇ ಕುಟುಂಬದ ಐವರು ಜತೆಯಾಗಿಯೇ ಪ್ರಾಣ ಕಳೆದುಕೊಂಡಿರುವುದರಿಂದ ಇಂಗಳಗಿ ಗ್ರಾಮದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ.

ಕರ್ನಾಟಕದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೋಲ್ಡನ್ ಅವರ್ ಕಳೆದುಕೊಳ್ತಿದೆ ‘ಜನ ನಾಯಗನ್’ ಟೀಂ; ನಡೆಯಿತು ಮತ್ತೊಂದು ದೊಡ್ಡ ತಪ್ಪು – Kannada News | Jana Nayagan Release Nightmare: Vijay’s Last Film Faces Censorship, Piracy and Delay

ಕಾಲಿವುಡ್ ನಟ ದಳಪತಿ ವಿಜಯ್ ಅವರು (Thalapathy Vijay)  ತಮಿಳುನಾಡು ಸಿಎಂ ಆದ ಬೆನ್ನಲ್ಲೇ, ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ ಸಾಕಷ್ಟು ಕುತೂಹಲ ಮೂಡಿಸಿತ್ತು. ‘ಎರಡೇ ವಾರದಲ್ಲಿ ಸಿನಿಮಾ ಬರಲಿದೆ’ ಎಂದು ವಿಜಯ್ ಸಿಎಂ ಆದಾಗ ನಿರ್ಮಾಪಕ ಕೆ ವೆಂಕಟ್ ನಾರಾಯಣ್ ಘೋಷಣೆ ಮಾಡಿದ್ದರು. ಸಾಲು ಸಾಲು ವಿವಾದಗಳು ಮತ್ತು ಕಾನೂನು ಹೋರಾಟಗಳ ನಡುವೆಯೂ ಸಿನಿಮಾ ರಿಲೀಸ್ ದಿನಾಂಕ ಸ್ಪಷ್ಟವಾಗಿಲ್ಲ. ತಂಡ ಗೋಲ್ಡನ್ ಅವರ್​​ನ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಒಂದು ಕಾಲದಲ್ಲಿ ಬಾಕ್ಸ್ ಆಫೀಸ್ ಇತಿಹಾಸ ಬರೆಯಲಿದೆ ಎನ್ನಲಾಗುತ್ತಿದ್ದ ಈ ಚಿತ್ರದ ಹೈಪ್ ಈಗ ಕಮರುತ್ತಿದೆಯೇ ಎನ್ನುವ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.

‘ಜನ ನಾಯಗನ್’ ಸಿನಿಮಾ ವಿವಾದಗಳನ್ನು ಎದುರಿಸಿದೆ. ಚಿತ್ರವನ್ನು ಸಂಕ್ರಾಂತಿ ಹಬ್ಬದ (ಜನವರಿ) ಸಮಯದಲ್ಲೇ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ನಿರಾಕರಿಸಿ, ರಿವೈಸಿಂಗ್ ಕಮಿಟಿಗೆ ಕಳುಹಿಸಿದಾಗ ದೊಡ್ಡ ಕಾನೂನು ಹೋರಾಟವೇ ಶುರುವಾಯಿತು. ಮದ್ರಾಸ್ ಹೈಕೋರ್ಟ್‌ನಿಂದ ಹಿಡಿದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ.

ಇಷ್ಟರಲ್ಲೇ ಚಿತ್ರತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಸಿನಿಮಾ ಇನ್ನೂ ಥಿಯೇಟರ್‌ಗೆ ಬರುವ ಮುನ್ನವೇ ಸಿನಿಮಾದ ಎಚ್​ಡಿ ಪ್ರಿಂಟ್ ಆನ್‌ಲೈನ್ ಪೈರಸಿ ಸೈಟ್‌ಗಳಲ್ಲಿ ಲೀಕ್ ಆಯಿತು. ಎಡಿಟಿಂಗ್ ಸ್ಟುಡಿಯೋದಿಂದಲೇ ಡೇಟಾ ಕದ್ದು ಇಡೀ ಸಿನಿಮಾವನ್ನು ಲೀಕ್ ಮಾಡಿದ ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು, ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ಆರೋಪಿಗಳಿಗೆ ಬೇಲ್ ನೀಡಲು ಕೂಡ ನಿರಾಕರಿಸಿದೆ.

ಒಂದು ಹಂತದಲ್ಲಿ ಸಿನಿಮಾದ ಮೈಲೇಜ್ ಡ್ರಾಪ್ ಆಗಿತ್ತು. ಆದರೆ, ವಿಜಯ್ ಸಿಎಂ ಆದ ಬಳಿಕ ಸಿನಿಮಾ ಮತ್ತೆ ಹೈಪ್ ಪಡೆದುಕೊಂಡಿತ್ತು. ಆದರೆ, ಅದು ಕೂಡ ಈಗ ಹಂತಹಂತವಾಗಿ ತಣ್ಣಗಾಗುತ್ತಿದೆ. ತಮಿಳುನಾಡಿನ ರಾಜಕೀಯ ವಾತಾವರಣದ ಬಿಸಿ ಸ್ವಲ್ಪ ತಿಳಿಯಾಗುತ್ತಿದ್ದಂತೆ, ಸಿನಿಮಾದ ಮೇಲಿದ್ದ ಒಟ್ಟಾರೆ ಹೈಪ್ ಮತ್ತು ಬಝ್ ಕೂಡ ಸ್ಲೋ ಆಗುತ್ತಿದೆ. ಅಲ್ಲದೆ, ಬಿಡುಗಡೆಯ ದಿನಾಂಕದ ಬಗ್ಗೆ ನಿರ್ಮಾಪಕ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಇಲ್ಲದಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

ಇದನ್ನೂ ಓದಿ: ‘ಜನ ನಾಯಗನ್’ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ದಳಪತಿ ವಿಜಯ್

ಹೊಸ ವರದಿ ಪ್ರಕಾರ, ಚಿತ್ರತಂಡ ಈಗ ಜೂನ್ ಮೂರನೇ ವಾರದಲ್ಲಿ, ಅಂದರೆ ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮದ ವೇಳೆ ಚಿತ್ರವನ್ನು ರಿಲೀಸ್ ಮಾಡಲು ಟಾರ್ಗೆಟ್ ಮಾಡಿಕೊಂಡಿದೆ. ಹುಟ್ಟುಹಬ್ಬದ ದಿನಾಂಕ ಅಭಿಮಾನಿಗಳಿಗೆ ಎಮೋಷನಲ್ ಆಗಿ ಕನೆಕ್ಟ್ ಆದರೂ, ವಿವಾದಗಳಿಂದ ಈಗಾಗಲೇ ಹೈರಾಣಾಗಿರುವ ಈ ಚಿತ್ರ ಜೂನ್​ವರೆಗೂ ತನ್ನ ಹೈಪ್ ಉಳಿಸಿಕೊಂಡು ಅಂದುಕೊಂಡ ಮಟ್ಟದ ಯಶಸ್ಸು ಸಾಧಿಸುತ್ತಾ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link